ವಿಷಯಕ್ಕೆ ಹೋಗು

ಚರ್ಚೆಪುಟ:ಹೆಗ್ಗಡದೇವನಕೋಟೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್‌.ಡಿ. ಕೋಟೆ

[ಬದಲಾಯಿಸಿ]

ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಆದಿವಾಸಿಗಳಿಗೆ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿ ತರಬೇಕೆಂಬ ಸದುದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇವರಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯತಂತ್ರ ಹೆಣೆಯುತ್ತಿದ್ದರೂ ಆದಿವಾಸಿಗಳು ಶಿಕ್ಷಣದಿಂದ ದೂರ ದೂರ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ತಾಲ್ಲೂಕಿನಲ್ಲಿ ಜೇನುಕುರುಬ, ಬೆಟ್ಟಕುರುಬ, ಸೋಲಿಗ ಸಮುದಾಯಕ್ಕೆ ಸೇರಿದ 120 ಕ್ಕೂ ಹೆಚ್ಚು ಹಾಡಿಗಳಿದ್ದು ಇತ್ತೀಚ್ಚೀನ ವರ್ಷಗಳಲ್ಲಿ ಬಂದಂತ ಸರ್ಕಾರಗಳು ಗಿರಿಜನರ ಶಿಕ್ಷಣಕ್ಕಾಗಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ, ಆಶ್ರಮ ಶಾಲೆಗಳನ್ನು ತೆರದು ಎಲ್ಲಾ ರೀತಿಯ ಸೌಲಭ್ಯ ಒದಗಿಸಿ ಇದರ ಉಪಯೋಗ ನೀಡಿದ್ದು ಇದರಿಂದ ಶಿಕ್ಷಿತರಾದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಸ್ವತಂತ್ರ ನಂತರಕ್ಕೂ ಮತ್ತು ಗಿರಿಜನರ ಈಗಿನ ಸ್ಥಿತಿಗೂ ಹೋಲಿಕೆ ಮಾಡಿದರೆ ಅಂತಹ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಂತೆಯೇ ಆದಿವಾಸಿಗಳನ್ನು ಶಿಕ್ಷಣ ಸೌಲಭ್ಯ ನೀಡಿ ಮುಖ್ಯ ವಾಹಿನಿಗೆ ತರಲು ಮುಂದೆ ಬಂದಂತಹ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸ್ವಯಂ ಸೇವಾ ಸಂಸ್ಥೆ 1987 ರಿಂದ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಿ ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಸಬಲೀಕರಣ ಹಾಗೂ ಸಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿದಂತಹ ಗಿರಿಜನ ಯುವಕರು ವೃತ್ತಿ ಶಿಕ್ಷಣ ತರಬೇತಿ ಪಡೆದು ವಿವಿಧ ಉದ್ಯೋಗಗಳಲ್ಲಿರುವುದು ಮಾದರಿಯೆನಿಸಿದೆ. ಇದನ್ನು ಮನಗಂಡ ಗಿರಿಜನ ಯುವಕನೋರ್ವ ನಮ್ಮ ಆದಿವಾಸಿಗಳು ಬದುಕು ಹಸನಾಗಲೂ ಶಿಕ್ಷಣವೇ ದಾರಿ ಎಂಬಂತೆ ಭರವಸೆಯಿಂದ ಮನೆಯಲ್ಲಿ ಪೋಷಕರು ಕೂಲಿ ಕೆಲಸಕ್ಕೆ ಹೋಗಿದ್ದು ಮನೆಗೆ ಬೀಗ ಹಾಕಿದ್ದರೂ ಯಾರ ಒತ್ತಡವಿಲ್ಲದೆ ಸ್ವಯಂ ಪ್ರೇರಣೆಯಿಂದ ಓದಿನಲ್ಲಿ ಮಗ್ನನಾಗಿರುವುದನ್ನು ಕಾಣಬಹುದು. ಇಂತಹ ಗಿರಿಜನ ಮಕ್ಕಳಿಗೆ ಸರ್ಕಾರ ಮತ್ತು ಸಂಸ್ಥೆಗಳು ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಗಿರಿಜನರಲ್ಲೂ ಬದಲಾವಣೆ ಕಾಣಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.