ವಿಷಯಕ್ಕೆ ಹೋಗು

ಉತ್ತರಾಷಾಢ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಾಷಾಢ: ಜ್ಯೋತಿರ್ವಿದರಿಂದ ಪರಿಗಣಿತವಾದ ಇಪ್ಪತ್ತೇಳು ನಕ್ಷತ್ರಗಳಲ್ಲಿ ಎಂಟು ತಾರೆಗಳಿಂದ ಕೂಡಿ, ಆನೆತಲೆ ಆಕೃತಿಯಂತೆ ಕಾಣುವ ತಾರಾಪುಂಜ. ಆಶ್ವಿನೀ ನಕ್ಷತ್ರ ಮೊದಲು ಮಾಡಿ ಲೆಕ್ಕ ಮಾಡುವಾಗ ಇದು ೨೧ ನೆಯ ನಕ್ಷತ್ರವಾಗುತ್ತದೆ. ಇದರ ಧ್ರುವಕ ೨೬೦ ಅಂಶಗಳು. ಶರ ದಕ್ಷಿಣ ೫ ಅಂಶಗಳು. ಈ ಎರಡರ ಸಹಾಯದಿಂದ ಖಗೋಳದಲ್ಲಿ ಇದನ್ನು ಗುರುತಿಸಬಹುದು. ಪೌರಾಣಿಕವಾಗಿ, ದಕ್ಷಬ್ರಹ್ಮನ ಇಪ್ಪತ್ತೇಳು ಪುತ್ರಿಯರಲ್ಲಿ ಒಬ್ಬಾಕೆ, ಚಂದ್ರನ ಪತ್ನಿ. (ಎಸ್.ಎನ್.ಕೆ.) ಖಗೋಳಶಾಸ್ತ್ರದಲ್ಲಿ ಈ ನಕ್ಷತ್ರದ ಶಾಸ್ತ್ರೀಯ ನಾಮ ಸ್ಯಾಜಿಟೇರಿಯಸ್. ನುಂಕಿ ಎಂದೂ ಹೆಸರಿದೆ. ಧನುಸ್ರಾಶಿಯ ೧೧ ನೆಯ ನಕ್ಷತ್ರ. ಇದರ ಕಾಂತಿವರ್ಗ ೩.೦.