ವಿಷಯಕ್ಕೆ ಹೋಗು

ಸಿತಾರಾ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sitara Devi
2009 ರಲ್ಲಿ ಸಿತಾರ
Born
ಧನಲಕ್ಷ್ಮಿ

8 ನವೆಂಬರ್ 192
ಕಲ್ಕತ್ತಾ, ಬ್ರಿಟೀಷ್ ಇಂಡಿಯಾ
Died25 November 2014(2014-11-25) (aged 94)
ಮುಂಬೈ, ಭಾರತ
Nationalityಭಾರತೀಯ
Occupationಕಥಕ್ ನರ್ತಕಿ
Spouse(s)ನಝೀರ್ ಅಹ್ಮದ್ ಖಾನ್ (1 ನೇ), ಕೆ. ಆಸಿಫ್ (2 ನೇ), ಪ್ರತಾಪ್ ಬಾರೊಟ್ (3 ನೇಯ)
Childrenರಂಜಿತ್ ಬರೋಟ್, ಜಯಂತಿ ಮಾಲಾ

ಸಿತಾರಾ ದೇವಿ (8 ನವೆಂಬರ್ 1920 - 25 ನವೆಂಬರ್ 2014) ಶಾಸ್ತ್ರೀಯ ಕಥಕ್ ಶೈಲಿಯ ನೃತ್ಯದ ಪ್ರಸಿದ್ಧ ಭಾರತೀಯ ನೃತ್ಯಗಾರ್ತಿಯಾಗಿದ್ದರು.

ಕಥಕ್ ನೃತ್ಯ

[ಬದಲಾಯಿಸಿ]
  • ಕಥಕ್ ನೃತ್ಯ ಕಲಾವಿದೆ ಸಿತಾರಾದೇವಿ(ನ.೮, ೧೯೨೦- ನ. ೨೫, ೨೦೧೪). ಸಿತಾರಾ ಹುಟ್ಟಿದ್ದು ಲಕ್ಷ್ಮೀಪೂಜೆಯ ದೀಪಾವಳಿ ಹಬ್ಬದ ಆಸುಪಾಸಿನಲ್ಲಿ. ಬೆಳಕಿನ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯಂತೆ ಹುಟ್ಟಿದ ಮಗಳನ್ನು ಹೆತ್ತವರು ಧನಲಕ್ಷ್ಮಿ ಎಂದು ಕರೆದರು. ಧನಲಕ್ಷ್ಮಿ ಮನೆಯವರ ಪಾಲಿಗೆ ಮುದ್ದಿನ ‘ಧನೂ’ ಆದಳು. ಅಂದಹಾಗೆ, ಧನೂ ಅವರ ತಂದೆ ಸುಖದೇವ್ ಮಹಾರಾಜ್, ಸಂಸ್ಕೃತ ವಿದ್ವಾಂಸರು. ಕಥಕ್ ಅವರ ವಿದ್ವತ್ತಿನ ಮತ್ತೊಂದು ಕ್ಷೇತ್ರ. ಅವರಿಗೆ ಭರತನ ನಾಟ್ಯಶಾಸ್ತ್ರದಲ್ಲಿ ವಿಶೇಷ ಪ್ರೀತಿಯಿತ್ತು. ಅವರ ಪತ್ನಿ ಮತ್ಸ್ಯಕುಮಾರಿ ನೇಪಾಳದ ರಾಜಕುಟುಂಬದೊಂದಿಗೆ ನಂಟಸ್ತಿಕೆ ಹೊಂದಿದವರು.
  • ರವೀಂದ್ರರೊಮ್ಮೆ ತಮ್ಮನ್ನು ಭೇಟಿ ಮಾಡಿದ ಸುಖದೇವ್ ಮಹಾರಾಜ್ ಅವರೊಂದಿಗೆ, ಮಸುಕಾಗಿರುವ ಭಾರತೀಯ ಕಲಾಪ್ರಕಾರಗಳನ್ನು ಪುನರುದ್ದೀಪಿಸುವ ಅಗತ್ಯದ ಕುರಿತು ಚರ್ಚಿಸಿದ್ದರು. ಆ ಸಮಯದಲ್ಲಿ ಕಥಕ್ ಕುಲೀನ ಮನೆತನ ಎಂದು ಕರೆದುಕೊಳ್ಳುವವರ ಕಡೆಗಣ್ಣಿಗೆ ಒಳಗಾದ ಕಲೆಯಾ ಗಿತ್ತು. ಗುರುದೇವರೊಂದಿಗಿನ ಮಾತುಕತೆಯ ನಂತರ ಕಥಕ್‌ಗೆ ಘನತೆ ದೊರಕಿಸಿಕೊಡುವ ಗುರಿ ಸುಖದೇವ್ ಅವರದಾಯಿತು.
  • ರವೀಂದ್ರರ ಸೂಚನೆಯ ಮೇರೆಗೆ ವಾರಾಣಸಿಯಲ್ಲಿ ಕಥಕ್ ಪರಿಸರ ರೂಪಿಸುವ ಸುಖದೇವ್‌ರ ಕೆಲಸ ಸುಲಭದ್ದಾಗಿರಲಿಲ್ಲ. ಸುಖದೇವ್‌ರ ಪ್ರಯತ್ನ ಅವರ ಸಮುದಾಯದಿಂದಲೇ (ಬ್ರಾಹ್ಮಣ) ಮೂದಲಿಕೆಗೆ ಒಳಗಾಯಿತು. ಅವರ ಹೆಣ್ಣುಮಕ್ಕಳ ಚಾರಿತ್ರ್ಯಹರಣದ ಮಾತುಗಳೂ ಕೇಳಿಸಿದವು. ಆದರೆ, ಇದಾವುದಕ್ಕೂ ಸುಖದೇವ್ ಧೃತಿಗೆಡಲಿಲ್ಲ. ಮಕ್ಕಳ ಬಗ್ಗೆ ಕೆಟ್ಟ ಮಾತನಾಡಿದವರ ವಿರುದ್ಧ ಕೋಲು ಹಿಡಿಯುವಷ್ಟು ಗಡುಸಾದರು. ಕೊನೆಗೆ, ವಾರಾಣಸಿಯಲ್ಲಿ ವಾಸಸ್ಥಾನವನ್ನು ಬದಲಿಸಿದ ಅವರು, ಕಥಕ್ ಶಾಲೆ ಆರಂಭಿಸಿದರು. ನಿಧಾನವಾಗಿ ಶಾಲೆಯಲ್ಲಿ ನೃತ್ಯದ ಹೆಜ್ಜೆಗಳು ಹೆಚ್ಚಾದವು. ವಾರಾಂಗನೆಯರ ಮಕ್ಕಳಿಗೆ ಕೂಡ ಶಾಲೆಯಲ್ಲಿ ಪ್ರವೇಶ ದೊರೆಯಿತು.

ವಿವಾಹ

[ಬದಲಾಯಿಸಿ]
  • ಅಂದಿನ ಸಂಪ್ರದಾಯದಂತೆ ಧನೂಗೆ ಎಳೆಯ ವಯಸ್ಸಿನಲ್ಲೇ ಮದುವೆಯಾಯಿತು. ಗಂಡನ ಮನೆಯವರಿಗೆ ನವವಧು ಶಾಲೆಗೆ ಹೋಗುವುದು ಇಷ್ಟವಿರಲಿಲ್ಲ. ಆದರೆ, ಎಂಟರ ಹುಡುಗಿ ಶಾಲೆ ಬಿಡಲೊಲ್ಲಳು. ಈ ಜಗ್ಗಾಟದಲ್ಲಿ ಮದುವೆ ಊರ್ಜಿತವಾಗಲಿಲ್ಲ. (ಅದಾದ ನಂತರವೂ ಮತ್ತೆರಡು ಸಲ ಸಿತಾರಾದೇವಿ ಮದುವೆಯಾದರು. ಮೂರನೇ ಸಂಬಂಧದಲ್ಲಿ ಓರ್ವ ಪುತ್ರನನ್ನೂ ಪಡೆದರು. ಕೊನೆಗೆ ಕಥಕ್ ನೃತ್ಯವಷ್ಟೇ ಅವರ ಶಾಶ್ವತ ಸಂಗಾತಿಯಾಯಿತು).

ಸಿತಾರಾ ಅವರು ನಜೀರ್ ಅಹ್ಮದ್ ಖಾನ್, K. ಆಸಿಫ್ರ ಮದುವೆಯಾದರು, ಮತ್ತು ನಂತರ ಪ್ರತಾಪ್ ಬಾರೋತ್(Barot) ವಿವಾಹವಾಗಿ ಅವರಿಗೆ ಮಗುವಿಗೆ ಜನ್ಮವಿತ್ತರು, ರಂಜಿತ್ Barot ಅವರೊಂದಿಗೆ ಅವರ ವೈವಾಹಿಕ ಜೀವನ ಸುಖ ಆಗಲಿಲ್ಲ, ಮತ್ತು ಎಲ್ಲಾ ಅವರ ಮದುವೆ ಕೊನೆಗೊಂಡು ಈ ತನ್ನ ನೃತ್ಯದ ಕಡೆ ಹೆಚ್ಚಿನ ಗಮನಕೊಟ್ಟರು.

ನೃತ್ಯ ಸಾಮ್ರಾಜ್ಞಿ

[ಬದಲಾಯಿಸಿ]
  • ಧನೂಳ ಪ್ರತಿಭೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಅನಾವರಣಗೊಂಡಿದ್ದು ಆಕೆ ಹೈಸ್ಕೂಲಿನಲ್ಲಿದ್ದಾಗ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಸತ್ಯವಾನನ ನೃತ್ಯರೂಪಕಕ್ಕೆ ಪಾತ್ರಗಳ ತಲಾಷಿನಲ್ಲಿದ್ದ ಶಿಕ್ಷಕರು ಧನೂಳ ನೃತ್ಯಪ್ರತಿಭೆಯಿಂದ ಪ್ರಭಾವಿತರಾದರು. ಪಾತ್ರ ನಿರ್ವಹಣೆಯ ಜೊತೆಗೆ ಸಹಪಾಠಿಗಳಿಗೆ ನೃತ್ಯ ಹೇಳಿಕೊಡಬೇಕಾದ ಹೊಣೆಗಾರಿಕೆಯೂ ಆಕೆಯ ಪಾಲಿಗೆ ಬಂತು. ಈ ಪ್ರದರ್ಶನದಲ್ಲಿ ಧನೂಳ ನಿರ್ವಹಣೆಯ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ಮೆಚ್ಚಿ ಬರೆಯಿತು. ಈ ವರದಿ ಸುಖದೇವ್ ಅವರ ಮಗಳ ಬಗೆಗಿನ ನೋಟವನ್ನೇ ಬದಲಿಸಿತು. ತಮ್ಮ ಮಗಳಲ್ಲಿ ನಾಳಿನ ಶ್ರೇಷ್ಠ ಕಲಾವಿದೆಯೊಬ್ಬಳನ್ನು ಕಂಡ ಅವರು ‘ಸಿತಾರಾ’ ಎಂದು ಮಗಳನ್ನು ಕರೆದರು. ಮುಂದಿನದು ತಾರೆ ಬೆಳಗಿದ ದಾರಿ.
  • ಸಿತಾರಾ ಹನ್ನೊಂದು ವರ್ಷದವಳಿದ್ದಾಗ ಸುಖದೇವ್‌ರ ಕುಟುಂಬದ ನೆಲೆ ಮುಂಬೈಗೆ ಬದಲಾಯಿತು. ಮುಂಬೈಗೆ ಬಂದ ಆರಂಭದ ದಿನಗಳಲ್ಲೇ ಆಯ್ದ ಸಹೃದಯರ ಎದುರು ಅರಮನೆಯಲ್ಲಿ ನರ್ತಿಸುವ ಅವಕಾಶ ಸಿತಾರಾಗೆ ದೊರೆಯಿತು. ರವೀಂದ್ರನಾಥ ಟ್ಯಾಗೋರ್, ಸರೋಜಿನಿ ನಾಯ್ಡು ಅವರಂಥ ಘಟಾನುಘಟಿಗಳು ಸಹೃದಯರ ಪಂಕ್ತಿಯಲ್ಲಿದ್ದರು. ಬಾಲಕಿಯ ನೃತ್ಯ ಮೆಚ್ಚಿಕೊಂಡ ಟ್ಯಾಗೋರರು ಮತ್ತೊಂದು ವಿಶೇಷ ಪ್ರದರ್ಶನಕ್ಕೆ ಏರ್ಪಾಡು ಮಾಡಿದರು. ಮೂರು ತಾಸುಗಳ ಆ ಕಥಕ್ ಪ್ರದರ್ಶನವನ್ನು ಮೆಚ್ಚಿಕೊಂಡೇ ಅವರು ‘ನೃತ್ಯ ಸಾಮ್ರಾಜ್ಞಿ’ ಎಂದು ಪ್ರಶಂಸಿಸಿದ್ದು. ಅಲ್ಲಿಂದ ಮುಂದೆಲ್ಲ ಕಥಕ್ ಸುವರ್ಣ ಪರ್ವ.

ಸಿನಿಮಾಗಳಲ್ಲಿ ನೃತ್ಯ ಮತ್ತು ಕಥಕ್ ನೃತ್ಯವನ್ನು ಹೊಸ ಎತ್ತರಕ್ಕೆ

[ಬದಲಾಯಿಸಿ]
ಕಥಕ್ ಶೈಲಿ//ಕಥಕ್ ನಲ್ಲಿ ಸಿತಾರಾ ವಾದನ ಮತ್ತು ತಬಲ ಸಾಮಾನ್ಯ


  • ಉದ್ಯೋಗದ ರೂಪದಲ್ಲಿ ಸಿತಾರಾ ಚಿತ್ರರಂಗ ಪ್ರವೇಶಿಸಿದ್ದು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ. ನಿರಂಜನ್ ಶರ್ಮ ಎನ್ನುವ ಚಿತ್ರ ನಿರ್ಮಾತೃ ಸಿತಾರಾ ಅವರಿಗೆ ಸಿನಿಮಾಗಳಲ್ಲಿ ನೃತ್ಯ ಪ್ರಸಂಗಗಳಲ್ಲಿ ತೊಡಗಿಕೊಳ್ಳುವ ಅವಕಾಶ ಕಲ್ಪಿಸಿದರು. ‘ಉಷಾ ಹರಣ್’ (೧೯೪೦) ಮೂಲಕ ಆರಂಭವಾದ ಈ ನಂಟು ‘ರೋಟಿ, ‘ವತನ್’, ‘ಅಂಜಲಿ’ ಸೇರಿದಂತೆ ೧೯೫೭ರ ‘ಮದರ್ ಇಂಡಿಯಾ’ವರೆಗೆ ಮುಂದುವರೆಯಿತು.
  • ಸಾಹಿತ್ಯ ಮತ್ತು ನೃತ್ಯಕ್ಷೇತ್ರದಲ್ಲಿನ ಅಪ್ಪನ ವಿದ್ವತ್‌ಗೆ ವಾರಸುದಾರಳಾದ ಸಿತಾರಾದೇವಿ, ಕಥಕ್ ನೃತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ದಣಿವರಿಯದ ದೈಹಿಕ ಶಕ್ತಿ, ಕಲ್ಪನಾವಿಲಾಸ ಹಾಗೂ ಲಾಲಿತ್ಯಕ್ಕೆ ಅವರ ನೃತ್ಯ ಹೆಸರುವಾಸಿಯಾಗಿತ್ತು. ಲಾಲಿತ್ಯದ ಜೊತೆಗೆ ತಾಂಡವದ ಬಿರುಸು ಕೂಡ ಅವರ ನೃತ್ಯದಲ್ಲಿ ಅದ್ಭುತವಾಗಿ ಅಭಿವ್ಯಕ್ತಗೊಳ್ಳುತ್ತಿತ್ತು. ಕಥಕ್ ಜೊತೆಗೆ ಭರತನಾಟ್ಯ ಹಾಗೂ ಭಾರತೀಯ ಜಾನಪದ ನೃತ್ಯಗಳ ಪರಿಚಯವೂ ಅವರಿಗಿತ್ತು.
  • ದೇಶವಿದೇಶಗಳಲ್ಲಿ ಕಥಕ್ ಪ್ರದರ್ಶನ ನೀಡಿರುವ ಸಿತಾರಾದೇವಿ ಅವರಿಗೆ- ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ ಸಮ್ಮಾನ್, ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು ಸಂದಿವೆ. ಪದ್ಮಭೂಷಣ ಪ್ರಶಸ್ತಿ ಪ್ರಕಟಗೊಂಡಾಗ, ‘ಭಾರತರತ್ನ ಕ್ಕಿಂಥ ಕಡಿಮೆ ಪುರಸ್ಕಾರವನ್ನು ನಾನು ಒಪ್ಪುವುದಿಲ್ಲ’ ಎಂದು ನಿರಾಕರಿಸಿದ್ದರು. ಆ ನಿರಾಕರಣೆಯಲ್ಲಿ ಸರ್ಕಾರ, ದೇಶ ತನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ವಿಷಾದ ಇದ್ದಂತಿತ್ತು.
  • prajavani.30 ನವೆಂಬರ್, 2014.