ಕರ್ನಾಟಕ ಜಾನಪದ ಪರಿಷತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕರ್ನಾಟಕ ಜಾನಪದ ಪರಿಷತ್ತು : ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನಲ್ಲಿ ಸ್ಥಾಪಿತಗೊಂಡಿತು (೧೩-೧-೧೯೬೮). ಕರ್ನಾಟಕದ ನಾನಾ ಮೂಲೆಗಳಲ್ಲಿ ಅಡಗಿ ಹೋಗಿರುವ ಜನಪದ ಸಾಹಿತ್ಯ, ಕಲೆಗಳನ್ನೂ ಅದರ ಪರಿಚಯವುಳ್ಳ ಕಲಾವಿದರನ್ನೂ ಗುರುತಿಸಿ ಬೆಳಕಿಗೆ ತರುವುದು; ಆಧುನಿಕ ನಾಗರಿಕತೆಯ ಬೆಳೆವಣಿಗೆಯ ಭರದಲ್ಲಿ ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆಯನ್ನು ಇಂದಿನ ನಾಗರಿಕ ಜನತೆಗೆ ಪರಿಚಯ ಮಾಡಿಕೊಡುವುದು; ಅವುಗಳಿಗೆ ಒಂದು ಸ್ಥಾಯೀಸ್ಥಾನ ಒದಗುವಂತೆ ಮಾಡುವುದು- ಇವು ಪರಿಷತ್ತಿನ ಮುಖ್ಯ ಉದ್ದೇಶ. ಪರಿಷತ್ತಿನ ಅಂಗವಾಗಿ ಜಾನಪದ ಎಂಬ ಒಂದು ದ್ವೈವಾರ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಜಾನಪದ ಸಂಗ್ರಹ, ಶಾಸ್ತ್ರೀಯ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಮೀಸಲಾದ ಹೊತ್ತಿಗೆ ಇದು ಈಗ ಪ್ರಕಟಣೆ ಸ್ಥಗಿತಗೊಂಡಿದೆ.