ಆಲ್ಕಮೀಯನ್
ಗೋಚರ
ಆಲ್ಕಮೀಯನ್ಗ್ರೀಕ್ ಪೌರಾಣಿಕ ಕಥೆಗಳಲ್ಲಿ ಕಂಡುಬರುವ ಆರ್ಗಾಸ್ನ ವೀರ ಮತ್ತು ದಿವ್ಯಜ್ಞಾನಿ. ತಂದೆ ಆಂಫಿಯರೌಸ್, ತಾಯಿ ಎರಿಪೈಲೆ. ಥೀಬ್ಸ್ ವಿರುದ್ಧ 7 ಮಂದಿ ವೀರರು ನಡೆಸಿದ ದಾಳಿಯಲ್ಲಿ ಈತನ ತಂದೆ ಮೃತಪಟ್ಟ. ಮೊದಲಿನ 7ಮಂದಿ ವೀರರ ವಂಶಜರೊಡಗೂಡಿ ಈತನು ಥೀಬ್ಸ್ ವಿರುದ್ಧ ಎಪಿಗೊನಿಯರ ದಾಳಿಯಲ್ಲಿ ಭಾಗವಹಿಸಿದನೆಂದೂ ಪಟ್ಟಣಕ್ಕೆ ಹಿಂತಿರುಗಿ ಬಂದ ಅನಂತರ ತಂದೆಯ ಆಜ್ಞೆಯಂತೆ ತನ್ನ ತಾಯಿಯನ್ನು ಕೊಂದನೆಂದೂ ರೌದ್ರಿಯರು (ದಿ ಫೂ಼್ಯರೀಸ್) ಒರಿಸ್ಟೀಜ್ನನ್ನು ಬೆನ್ನಟ್ಟಿದಂತೆ ಇವನನ್ನು ಬೆನ್ನಟ್ಟಿ ಕಾಡಿದರೆಂದೂ ಕಥೆಯಿದೆ. ವೈದ್ಯಶಾಸ್ತ್ರದ ನಾಲ್ಕು ದೈಹಿಕ ಪ್ರವೃತ್ತಿಗಳ (ಹ್ಯೂಮರ್) ಸಿದ್ಧಾಂತವನ್ನು ಈತ ರೂಪಿಸಿದನೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಇವನ ಪ್ರಕಾರ ಉಷ್ಣ, ತೇವ, ಶೀತ ಮತ್ತು ಶುಷ್ಕತೆಗಳ ಸಾಮರಸ್ಯ ದೇಹಸ್ವಾಸ್ಥ್ಯಕ್ಕೆ ಅಗತ್ಯ.