ಅಗ್ನಿ ಉದರದ ನೆಲಗಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Fire-bellied toad
European fire-bellied toad (Bombina bombina)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
Bombina

Oken, 1816
Species

See text.

ಅಗ್ನಿ ಉದರದ ನೆಲಗಪ್ಪೆದ್ವಿಚರವರ್ಗದ ಒಂದು ಜಾತಿ ಕಪ್ಪೆ (ಫೈರ್ ಬೆಲ್ಲೀಡ್ ಟೋಡ್). ಇದರ ಇನ್ನೊಂದು ಹೆಸರು ಬಾಂಬಿನ. ಇದು ಕೊಳಗಳಲ್ಲಿ ವಾಸಿಸುವ ಮಂದಬುದ್ಧಿಯ, ಬೂದುಬಣ್ಣದ ಪ್ರಾಣಿ. ತನ್ನ ಸುತ್ತಣ ಸನ್ನಿವೇಶದ ನೀರವತೆ ಭಂಗವಾದಾಗ, ಇದು ದೇಹದ ತಳಭಾಗವನ್ನು ಮೇಲೆ ಮಾಡಿ ನೀರಿನಲ್ಲಿ ನಿಶ್ಚೇಷ್ಟಿತವಾಗಿ ಮಲಗುತ್ತದೆ. ಆಗ ಇದರ ಹೊಟ್ಟೆಯ ಭಾಗದಲ್ಲಿನ ಕಿತ್ತಳೆ ಬಣ್ಣವುಳ್ಳ ಮಚ್ಚೆಗಳು ಬೆಂಕಿಯಂತೆ ಕಾಣುತ್ತವೆ. ಈ ಜಾತಿಯ ಸಣ್ಣ ಕಪ್ಪೆಗಳು ಕೆಲವೊಮ್ಮೆ ತಮ್ಮ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಲುಗಾಡದೆ ಸುಮ್ಮನೆ ಬಿದ್ದಿರುತ್ತವೆ. ಶತ್ರುಗಳ ದೃಷ್ಟಿಗೆ ಬೀಳದಿರಲು ಸುಳಿವು ಗೊತ್ತಾದೊಡನೆ ಬೆನ್ನಿನ ಭಾಗವನ್ನು ತೋರಿಸದೆ, ಬೆಂಕಿಯಂತೆ ಹೊಳೆಯುವ ಹೊಟ್ಟೆಯ ಭಾಗವನ್ನು ಮೇಲೆ ಮಾಡಿ ಸುಲಭವಾಗಿ ಆಪತ್ತಿನಿಂದ ಪಾರಾಗುತ್ತವೆ. ಆದರೆ ಇದು ಕೇವಲ ಬೆದರಿಸುವ ನಾಟಕವಲ್ಲ. ನಿಜಕ್ಕೂ ಉದರದ ಚರ್ಮ ಒಂದು ಬಗೆಯ ವಿಷ ಪದಾರ್ಥವನ್ನು ಸ್ರವಿಸುತ್ತದೆ. ಇದು ಬಹಳ ಖಾರವೆಂದು ಅನುಭವದಿಂದ ತಿಳಿದಿರುವ ಶತ್ರು ಪ್ರಾಣಿಗಳು ಕಪ್ಪೆಯ ಹತ್ತಿರ ಸುಳಿಯುವುದಿಲ್ಲ. ರಾತ್ರಿವೇಳೆಯಲ್ಲಿ ಈ ಕಪ್ಪೆ ಬಹಳ ಚುರುಕಾಗಿರುತ್ತದೆ. ಹುಳಹುಪ್ಪಟೆಗಳನ್ನು ತಿನ್ನಲು ಆಗಾಗ್ಗೆ ನೀರನ್ನು ಬಿಟ್ಟು ದಡದ ಮೇಲೆ ಬರುವುದಲ್ಲದೆ ಮಳೆಗಾಲದಲ್ಲಿ ಇದು ಹತ್ತಿರದ ಮೆದುಮಣ್ಣಿನಲ್ಲಿ ಗೂಡು ಮಾಡಿಕೊಂಡು ವಾಸಿಸುತ್ತದೆ. ಏಷ್ಯದ ಈ ಜಾತಿಯ ಕಪ್ಪೆ 7.5 ಸೆಂಮೀ ಉದ್ದವಿದ್ದು ಹೊಟ್ಟೆಯ ತಳಭಾಗದಲ್ಲಿ ಕಿತ್ತಳೆ ಬಣ್ಣವನ್ನು ಹೊಂದಿದೆ. ಸಂತಾನೋತ್ಪತ್ತಿ ಕಾಲದಲ್ಲಿ ಇದರ ಮುಂಗಾಲುಗಳ ಒಳ ಭಾಗಗಳಲ್ಲಿ ಕಪ್ಪನೆಯ ಒರಟು ಸಿಂಬಿಗಳು ಕಾಣಿಸಿಕೊಳ್ಳುತ್ತದೆ. ಗಂಡು ಕಪ್ಪೆ ಹೆಣ್ಣು ಕಪ್ಪೆಯನ್ನು ಎಡೆಬಿಡದೆ ಕರೆಯುತ್ತಿರುತ್ತವೆ. ವಸಂತ ಮತ್ತು ಗ್ರೀಷ್ಮಋತುಗಳು ಸಂತಾನೋತ್ಪತ್ತಿಯ ಕಾಲ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]