ಅಕ್ಯಾಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಕ್ಯಾಬ್ ಮಯನ್ಮಾರ್ ನ ಅರಕಾನ್ ಪ್ರಾಂತ್ಯದ ಪಶ್ಚಿಮ ತೀರದಲ್ಲಿ ಮಾಯುಕಲಾಡನ್ ಮತ್ತು ಲೆಮ್ರೊ ನದಿಗಳ ಸಂಗಮದಲ್ಲಿರುವ ಮುಖ್ಯ ರೇವುಪಟ್ಟಣ ಹಿಂದೆ ಮೀನುಗಾರಿಕೆಯ ಒಂದು ಹಳ್ಳಿಯಾಗಿದ್ದು ಇಂದು ಮಯನ್ಮಾರಿನ ಒಂದು ಪ್ರಮುಖ ರೇವುಪಟ್ಟಣವಾಗಿ ಬೆಳೆದಿದೆ. ಬೌದ್ಧರೇ 1/3 ಭಾಗದಷ್ಟಿದ್ದಾರೆ. ಅಕ್ಕಿಯನ್ನು ಹೆಚ್ಚಾಗಿ ರಫ್ತು ಮಾಡುತ್ತಾರೆ. ಇಲ್ಲಿ ಅನೇಕ ಸಾರ್ವಜನಿಕ ಕಟ್ಟಡಗಳ ಜೊತೆಗೆ ದೊಡ್ಡ ಅಕ್ಕಿ ಗಿರಣಿಗಳೂ ಇವೆ. ಸಿಟ್ವೆ ಪಟ್ಟಣವು ಹಿಂದೆ ಅಕ್ಯಾಬ್ ಎಂದು ಕರೆಯುಲಾಗುತ್ತಿತ್ತು. ಅಕ್ಯಾಬ್ ಮ್ಯಾನ್ಮಾರ್‍ನ ರಾಖಿನೆ ರಾಜ್ಯದ ರಾಜಧಾನಿ. ಸಿಟ್ವೆ, ಸೈಟ್‍ವೇ ಎಂದು ರಾಖಿನೆ ಭಾಷೆಯಲ್ಲಿ ಉಚ್ಚರಿಸಲಾಗುತ್ತದೆ. ಈ ತಾಣವು ಬಂಗಾಳ ಕೊಲ್ಲಿಯಲ್ಲಿ ಕೊನೆಗೊಳ್ಳುವ ಕಲದನ್, ಮಯು, ಮತ್ತು ಲೇ ಮ್ರೊ ನದಿಗಳ ರಚಿಸುವ ಸಣ್ಣ ದ್ವೀಪದಲ್ಲಿ ಇದೆ. ನಗರ ೧೮೧,000 ನಿವಾಸಿಗಳನ್ನು (೨೦೦೬) ಹೊಂದಿದೆ. ಇದು ಸಿಟ್ವೆ ಉಪಜಿಲ್ಲೆ ಮತ್ತು ಸಿಟ್ವೆ ಜಿಲ್ಲೆಯ ಆಡಳಿತ ಕ್ಷೇತ್ರವಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಕ್ಯಾಬ್&oldid=1008048" ಇಂದ ಪಡೆಯಲ್ಪಟ್ಟಿದೆ