ಅರ್ಚಾವತಾರ
ಗೋಚರ
ಅರ್ಚಾವತಾರ: ಪಾಂಚರಾತ್ರಾಗಮಗಳಂತೆ ಆರಾಧಕನಾದವ ಪೂಜೆ ಮಾಡುವ ವಿಗ್ರಹ. ಅವನ ದೃಷ್ಟಿಯಲ್ಲಿ ಪೂಜೆಗೆ ಅರ್ಹವಾದ ವಿಗ್ರಹವೂ ದೇವರ ಅವತಾರವೇ. ಪಾಂಚರಾತ್ರಾಗಮಗಳಿಗೆ ವಿಶಿಷ್ಟವಾದ ಜ್ಞಾನವನ್ನು ವ್ಯೂಹಸಿದ್ದಾಂತವೆಂದು ಕರೆದಿದೆ. ಪರಮಾತ್ಮನ ಅತೀಂದ್ರಿಯವೂ ಮಾತು ಮನಸುಗಳಿಗೆ ಅಗೋಚರವೂ ಆದ ಪರಸ್ಪರ ರೂಪ ಅತಿ ಸೂಕ್ಶ್ಮವಾದದ್ದು, ಅಚಿಂತ್ಯವೂ ಆದದ್ದು. ಇಂಥ ಪರಮಾತ್ಮ ಭಕ್ತನಿಗೆ ಅತಿ ಸಮೀಪನೂ ಸುಲಭನೂ ಇಂದ್ರಿಯಗೋಚರನೂ ಆಗಬೇಕಾದರೆ ಅರ್ಚಾವತಾರದಿಂದ ಮಾತ್ರ ಸಾಧ್ಯವೆಂದು ಆಗಮಗಳು ಹೇಳುತ್ತವೆ. ವಿಗ್ರಹ (ಅರ್ಚಿ) ಮರ, ಲೋಹ ಅಥವಾ ಬೇಕು. ಶಿಷ್ಟಪರಿಗ್ರಹ ಶಕ್ತಿಯನ್ನು ಹೊಂದಿರಬೇಕು. ಅರ್ಚೆಗೆ ಜೀವಕೊಡತಕ್ಕದು ಪ್ರಾಣಪ್ರತಿಷ್ಠೆ ಎಂಬ ಮಂತ್ರವತ್ತಾದ ಶಾಸ್ತ್ರವಿಧಿ. ಇದು ಎಲ್ಲ ದೇವಸ್ಥಾನಗಳಲ್ಲಿ ವಿಗ್ರಹ ಪ್ರತಿಷ್ಠಾಪನ ಸಮಯದಲ್ಲಿ ನಡೆಯುವ ವಿಧಿಯಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: