ಪಾಂಡ್ಯ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಂಡ್ಯ ರಾಜವಂಶವು ಒಂದು ಪ್ರಾಚೀನ ತಮಿಳು ರಾಜವಂಶವಾಗಿತ್ತು, ಮೂರು ತಮಿಳು ರಾಜವಂಶಗಳಲ್ಲೊಂದು, ಉಳಿದೆರಡು ಚೋಳ ಹಾಗೂ ಚೇರ ವಂಶಗಳು. ಚೇರ ರಾಜ ಮತ್ತು ಚೋಳ ರಾಜರ ಜೊತೆಗೆ ಪಾಂಡ್ಯ ರಾಜರು ತಮಿಳಕಮ್‍ನ ಮೂರು ಪಟ್ಟಾಭಿಷಿಕ್ತ ರಾಜರು ಎಂದು ಕರೆಯಲ್ಪಡುತ್ತಿದ್ದರು. ಈ ರಾಜವಂಶವು ಸುಮಾರು ಕ್ರಿ.ಪೂ. ೬೦೦ರಿಂದ ಕ್ರಿ.ಶ. ೧೭೦೦ರ ಮೊದಲಾರ್ಧದವರೆಗೆ ದಕ್ಷಿಣ ಭಾರತದ ಭಾಗಗಳನ್ನು ಆಳುತ್ತಿತ್ತು.