ಸದಸ್ಯ:ಕಾವ್ಯ ಎಲ್ ಪೂಜಾರಿ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                 ಅಜೀವಿಕರು

ಕರ್ಣಾಟಕದಲ್ಲಿ ಅಜೀವಿಕ ಪಂಥ ಜನರು ಇದ್ದರೆಂಬುವುದಕ್ಕೆ ದೊರೆಯುವ ಪುರಾವೆಗಳು ಅತ್ಯಲ್ಪ. ಕೋಲಾರ ಜಿಲ್ಲೆಯಲ್ಲಿ ದೊರೆಯುವ ಕೆಲವು ತಮಿಳು ಶಾಸನಗಳನ್ನು ಬಿಟ್ಟರೆ ಕನ್ನಡ ಶಾಸನಗಳಲ್ಲಿ ಎಲ್ಲಿಯೂ ಇದರ ಬಗ್ಗೆ ಉಲ್ಲೇಖವಿರುವಂತೆ ಕಂಡು ಬರುವುದಿಲ್ಲ. ಸೋನುದೇವನ 'ಯಶಸ್ತಿಲಕ ಚಂಪುವಿನಲ್ಲಿ ಇವರನ್ನ ಹೆಸರಿಸಿದೆಯೇ ಹೊರತು ಅವರ ತತ್ವದ ಬಗ್ಗೆಯಾಗಲಿ, ಆಚಾರದ ಬಗ್ಗೆಯಾಗಲಿ ಯಾವ ಮಾಹಿತಿಯನ್ನೂ ಕೊಟ್ಟಿಲ್ಲ. ಆದರೆ ಕರ್ಣಾಟಕದ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಗಳಲ್ಲಿ ಇವರು ಇದ್ದರೆಂಬುವುದಕ್ಕೆ ಸಾಕಷ್ಱು ಆಧಾರಗಳಿವೆ. 'ಮಣಿಮೆ ಖಲೈ' 'ಶಿಲಸ್ಸದಿಕಾರಂ' ಎಂಬ ತಮಿಳು ಪ್ರಾಚೀನ ಕಾವ್ಯಗಳಲ್ಲಿ ಈ ಪಂಥದ ತತ್ವಗಳನ್ನು ಉಲ್ಲೇಖಿಸಿದೆ.

ಕೋಲಾರ ಜಿಲ್ಲೆಯ ಅವನಿ ಶಾಸನ, ಕಲ್ಲು ಹಳ್ಳಿ ಶಾಸನ ಮತ್ತು ಮಡಿವಾಳ ಶಾಸನಗಳಲ್ಲಿ ಆಚುನಿಮಕ್ಕಳ್, ಆಚುವಠ್ಠಲಮೈ ಎಂಬ ತಮಿಳು ಪದಗಳಿಂದ 'ಅಚುವ' ಎಂಬುದು ಅಜೀವಿಕ ಪಂಥವನ್ನು ಸೂಚಿಸುತ್ತವೆ ಎಂದು ಹೇಳಿದ್ರೂ ಸಮಕಾಲೀನ ಕನ್ನಡ ಶಾಸನಗಳಲ್ಲಿ ಎಲ್ಲಿಯೂ 'ಆಚುವ' ಪದದ ಬಳಕೆ ಕಂಡುಬರುವುದಿಲ್ಲ. ಆದರೆ ಕನ್ನಡಿಗರಿಗೆ ಈ ಪಂಥದ ಇರುವಿಕೆಯ ಅರಿವಿತ್ತೆಂಬುದಕ್ಕೆ ಕೆಲವು ಮಾಹಿತಿಗಳಿವೆ. ಹಲಾಯುಧನ 'ಅಭಿದಾನ ರತ್ನಮಾಲೆ'ಯಲ್ಲಿ 'ಆಜೀವಿಕ' ಮತ್ತು ಮಂಗರಾಜನ ನಿಘಂಟಿನಲ್ಲಿ 'ದಂಡಾಜೀವಿಕ' ಎಂಬ ಪದಕ್ಕೆ 'ಬೌದ್ಧಭೇದವುಸ್ಸ ಕಾಂಜಿ ಭಿಕ್ಷು' ಎಂದು ವ್ಯಾಖ್ಯಾನಿಸಿದ್ದಾನೆ. ನೇಮಿಚಂದ್ರನ 'ತ್ರಿಲೋಕಸಾರ'ದ ಕನ್ನಡ ವ್ಯಾಖ್ಯಾನದಲ್ಲೂ ಇವರ ಹೆಸರಿವೆ. ಕನ್ನಡ ಸಾಹಿತ್ಯದಲ್ಲಾಗಲಿ ಶಾಸನಗಳಲ್ಲಾಗಲಿ ಹೆಚ್ಚು ಉಲ್ಲೇಖವಿಲ್ಲದೇ ಇರುವುದರಿಂದ ಕರ್ಣಾಟಕದಲ್ಲಿ ಅಜೀವಿಕರು ಅತ್ಯಲ್ಪ ಸಂಖ್ಯಾತಾರಾಗಿದ್ದಿರಬಹುದೆಂಬ ಅಭಿಪ್ರಾಯವಿದೆ.