ವಿಷಯಕ್ಕೆ ಹೋಗು

ಸದಸ್ಯ:Sufaid07/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಂಬಾಕು ಸೇವನೆ ಹಾಗೂ ಚಿಕಿತ್ಸೆ 20ನೇ ಶತಮಾನದಲ್ಲಿ ಜಗತ್ತಿನಾದ್ಯಂತ ಸುಮಾರು 10 ಕೋಟಿ ಜನ ತಂಬಾಕು ಸೇವನೆಯಿಂದ ಬರುವ ರೋಗಗಳಿಂದ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣವಾಗಿರುವ ಮುಂಚೂಣಿಯಲ್ಲಿರುವ ಎಂಟು ಕಾರಣಗಳಲ್ಲಿ, ಆರು ಕಾರಣಗಳು ತಂಬಾಕು ಸೇವನೆಯಿಂದ ಉಂಟಾಗುವಂತಹವುಗಳು. ಭಾರತದಲ್ಲಿ ಪ್ರತೀ ವರ್ಷ 8 ರಿಂದ 9 ಲಕ್ಷ ಜನ ತಂಬಾಕು ಸೇವನೆಗೆ ಸಂಬಂಧಪಟ್ಟ ಕಾಯಿಲೆಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

2010ರ ಭಾರತದ ಯುವಕ/ಯುವತಿಯರ ಜಾಗತಿಕ ತಂಬಾಕು ಸೇವನೆ ಸಮೀಕ್ಷೆಯಲ್ಲಿ ಕಂಡುಬಂದ ಅಂಶವೆಂದರೆ , ಪ್ರತೀ ಮೂವರಲ್ಲಿ ಒಬ್ಬರು, ಅಂದರೆ ನೂರರಲ್ಲಿ ಶೇಕಡಾ ಮೂವತ್ತು ಭಾಗ ಜನ, ಯಾವುದೋ ಒಂದು ವಿಧದಲ್ಲಿ ತಂಬಾಕನ್ನು ಬಳಸುತ್ತಿದ್ದಾರೆ. ಅವರಲ್ಲಿ ಶೇಕಡಾ 21ರಷ್ಟು ಜನ ಕೇವಲ ಹೊಗೆರಹಿತ ತಂಬಾಕು ಬಳಸಿದರೆ, ಶೇಕಡಾ 9ರಷ್ಟು ಜನ ಹೊಗೆಸಹಿತ ತಂಬಾಕು ಬಳಸುತ್ತಿದ್ದಾರೆ ಮತ್ತು ಶೇಕಡಾ 5ರಷ್ಟು ಜನ ಎರಡೂ ರೀತಿಯ ತಂಬಾಕನ್ನು ಬಳಸುತ್ತಿದ್ದಾರೆ. ಒಟ್ಟಿನಲ್ಲಿ, ತಂಬಾಕು ಉಪಯೋಗ ಪುರುಷರಲ್ಲಿ ಹೆಚ್ಚಾಗಿದ್ದು, ಇವರಲ್ಲಿ ಶೇಕಡಾ 48ರಷ್ಟು ಪ್ರಚಲಿತವಾಗಿದ್ದರೆ, ಮಹಿಳೆಯರಲ್ಲಿ ಶೇಕಡಾ 20ರಷ್ಟು ಬಳಕೆಯಲ್ಲಿದ್ದು, ಗಂಭೀರವಾಗಿ ಪರಿಗಣಿಸುವ ವಿಷಯವಾಗಿದೆ.

2009ರಲ್ಲಿ, ಭಾರತದ ಹದಿಹರೆಯದವರ ಜಾಗತಿಕ ತಂಬಾಕು ಸೇವನೆ ಸರ್ವೇಕ್ಷಣೆಯಲ್ಲಿ ಕಂಡುಬಂದ ಘಾತಕ ಅಂಶವೆಂದರೆ, 13ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಶೇ.15-16ರಷ್ಟು ವಿದ್ಯಾರ್ಥಿಗಳು ತಂಬಾಕು ಬಳಸಿದ್ದರು. ಇವರಲ್ಲಿ 4ಪ್ರತಿಶತ ವಿದ್ಯಾರ್ಥಿಗಳು ಸಿಗರೇಟ್‌ ಸೇದಿದ್ದರೆ, ಶೇ.12ರಷ್ಟು ವಿದ್ಯಾರ್ಥಿಗಳು ಇತರ ತರಹದ ತಂಬಾಕು ಬಳಸಿದ್ದರು.