ಚರ್ಚೆಪುಟ:ಹಿಂದೂ ತತ್ತ್ವಶಾಸ್ತ್ರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ-ಈ ಪದಕ್ಕೆ ಅನೇಕ ಆಯಾಮಗಳಿವೆ.ಕೆಲವರಿಗೆ ಇದೊಂದು ಧರ್ಮ,ಕೆಲವರಿಗೆ ಜೀವನ,ಕೆಲವರಿಗೆ ಆರಾಧನಾ ಪದ್ದತಿ.ಆದರೆ ಇಡೀ ಜಗತ್ತಿನ ಎಲ್ಲಾ ಧರ್ಮಗಳ ಪೈಕಿ ಅತ್ಯಂತ ಹಳೆಯ ಧರ್ಮವಾದ ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಇದುವರೆಗೆ ಯಾರಿಂದಲೂ ಸಧ್ಯವಾಗಿಲ್ಲ.ಇದಕ್ಕೆ ಅನೇಕ ಕಾರಣಗಳಿವೆ.ಧರ್ಮದ ವಿಸ್ತಾರ ಒಂದು ಕಾರಣವಾದರೆ,ಸ್ಥಾಪಕನಿಲ್ಲದಿರುವುದು ಇನ್ನೊಂದು ಮುಖ್ಯ ಕಾರಣ,ಸನಾತನ ಧರ್ಮದ ಸ್ಥಾಪನೆಯ ಕಾಲವನ್ನು ಊಹಿಸಲು ಮಾನವ ಜನಾಂಗಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹಿಂದೂ ಎನ್ನುವ ಪದ ಪ್ರಯೋಗವೇ ತಪ್ಪು ಎನ್ನುವ ವಾದಗಳಿವೆ.ಸಿಂಧೂ ನದಿಯ ದಡದಲ್ಲಿ ವಾಸವಾಗಿದ್ದ ಜನರನ್ನೇ ಉಳಿದ ಜಗತ್ತು ಹಿಂದೂಗಳೆಂದು ಕರೆಯಿತು ಎನ್ನುವುದು ಈ ವಾದದ ಸಮರ್ಥನೆ.ಮೇಲ್ನೋಟಕ್ಕೆ ಈ ವಾದ ಸರಿಯೆಂದು ಕಂಡು ಬರುತ್ತದೆ.ಯಾಕೆಂದರೆ ಧರ್ಮದ ಮೂಲ ಗ್ರಂಥವಾದ ವೇದಗಳಲ್ಲಿ ಹಿಂದೂ ಎಂಬ ಪದದ ಬಳಕೆಗಳು ಬಹಳ ಕಡಿಮೆ.ಬದಲಿಗೆ ವೇದಗಳು ಸನಾತನ ಧರ್ಮವೆಂಬ ಪದವನ್ನು ಬಳಸುತ್ತವೆ.'ಸನಾತನ' ಎಂದರೆ ಹುಟ್ಟಿಲ್ಲದ್ದು ಎಂಬುದಾಗಿ ಸರಳವಾಗಿ ತೆಗೆದುಕೊಳ್ಳಬಹುದು.ಈ ಪದ ಪ್ರಯೋಗವೇ ಹೆಚ್ಚು ಸಮಂಜಸವಾಗಿ ಕಾಣುತ್ತದೆ. ಹಿಂದೂ ಧರ್ಮವೆಂದಾಗ ಪಾಶ್ಚಾತ್ಯ ಜಗತ್ತಿನಲ್ಲಿ ಬರುವ ಕಲ್ಪನೆ ವಿಗ್ರಹಾರಾಧನೆ.ವಿರೋಧಾಭಾಸವೆಂದರೆ ದೇವರನ್ನು ಅಪೌರುಷೇಯ ಎಂದು ಬಿಂಬಿಸುವ ಮೂಲಕ ದೇವರಿಗೆ ರೂಪವಿಲ್ಲ ಎಂದು ಸಾರಿದ್ದೆ ಈ ಸನಾತನ ಧರ್ಮ.ಪಶ್ಚಿಮ ಜಗತ್ತಿನಲ್ಲಿ ಮನುಷ್ಯರು ಕಾಡಿನಲ್ಲಿ ವಾಸಿಸುತ್ತಿದ್ದ ಸಂಧರ್ಭದಲ್ಲಿ ವೇದಗಳು ರಚಿತವಾಗಿದ್ದವು.ಹಾಗಾದರೆ ಆ ಜನಾಂಗ ಎಷ್ಟು ಪ್ರಬುದ್ಧವಾಗಿತ್ತೆಂದು ಯೋಚಿಸವಬಹುದು.ಆದರೆ ಸನಾತನ ಧರ್ಮ ತನ್ನನ್ನು ಪಾಲಿಸುವವರಿಗೆ ಯಾವುದೇ ನಿರ್ಭಂದಗಳನ್ನು ವಿಧಿಸಲಿಲ್ಲ.ಮೂರ್ತಿ ಪೂಜೆ ತನ್ನ ಮೂಲ ತತ್ವವಲ್ಲದಿದ್ದರೂ ಅದನ್ನು ವಿರೋಧಿಸಿ ನಿರ್ಭಂಧಿಸದೆ ಅದಕ್ಕೂ ಅವಕಾಶ ಮಾಡಿಕೊಟ್ಟಿತು. ಮನುಷ್ಯ ತನ್ನ ಜೀವನದಲ್ಲಿ ಅನೇಕ ಕ್ಲಿಷ್ಟಕರವಾದ ಸಂಧರ್ಭಗಳನ್ನು ಅನುಭವಿಸುತ್ತಾನೆ.ಅಂತಹ ಸಂಧರ್ಭಗಳಲ್ಲಿ ಆತನಿಗೆ ಬೇಕಾಗಿರುವುದು ಸಾಂತ್ವಾನ.ತನ್ನನ್ನು ಕಾಯುವ ಶಕ್ತಿಯೊಂದಿದೆ ಎಂಬುವ ಕಲ್ಪನೆಯೇ ಆತನಿಗೆ ಆ ಸಾಂತ್ವಾನವನ್ನು ನೀಡುತ್ತದೆ.ಈ ಮನುಜ ಸಹಜವಾದ ಗುಣವೇ ದೇವರೆಂಬ ಕಲ್ಪನೆಯ ಉಗಮ ಸ್ಥಾನ.ಹಾಗೆಂದು ದೇವರೆಂಬುದು ಕಲ್ಪನೆಯೇ ಎಂದು ಹೇಳಲು ಸಾಧ್ಯವಿಲ್ಲ.ಯಾಕೆಂದರೆ ಅಂತಹ ಒಂದು ಶಕ್ತಿಯನ್ನು ಅನುಭವಿಸಿದವರು ಅದೆಷ್ಟೋ ಜನರ ಉದಾಹರಣೆಯನ್ನು ಇತಿಹಾಸ ನಮಗೆ ನೀಡುತ್ತದೆ,.ಸನಾತನ ಧರ್ಮವು ಆ ಶಕ್ತಿಯನ್ನು ಅವಲಂಬಿಸಿದೆ.ಹಾಗಾದರೆ ವಿಗ್ರಹಾರಾಧನೆ ಸನಾತನ ಧರ್ಮದಲ್ಲಿ ಹೇಗೆ ಉಗಮವಾಯಿತು ಎಂಬುದು ಕುತೂಹಲಕರ. ವೇದಗಳಲ್ಲಿರುವ ವಿಷಯ ಆ ಕಾಲದ ಜನರಿಗೆ ಕಬ್ಬಿಣದ ಕಡಲೆಯಾಗಿತ್ತು ಎಂಬುದಾಗಿ ನಾವು ಊಹಿಸಿಕೊಳ್ಳಬಹುದು,ಆದರೆ ದೇವರ ಅಗತ್ಯವಿದ್ದುದು ಪಂಡಿತರಿಗಿಂತ ಸಾಮಾನ್ಯ ಜನರಿಗೆ.ದಿನ ನಿತ್ಯದ ಜೀವನದಲ್ಲಿ ನೆಮ್ಮದಿಗಾಗಿ ಅವರಿಗೆ ದೇವರ ಅಗತ್ಯವಿತ್ತು.ರೂಪವೇ ಇಲ್ಲದ ದೇವರನ್ನು ಆರಾಧಿಸಲಾರದ ಅವರು ದೇವರಿಗೆ ತಮ್ಮ ಕಲ್ಪನೆಯ ರೂಪವೊಂದನ್ನು ಕೊಟ್ಟರು.ಆ ರೂಪವನ್ನು ಆರಾಧಿಸತೊಡಗಿದರು. ಇದೆಲ್ಲ ನಮ್ಮ ಊಹೆಯೆ ಹೊರತು ಇದೇ ಸತ್ಯವೆಂದು ಹೇಳಲು ನಮ್ಮ ಬಳಿ ಯಾವ ಆಧಾರವೂ ಇಲ್ಲ.ಆದರೆ ಸನಾತನ ಧರ್ಮದ ಉಗಮವೆಂಬುದು ಈ ಜಗತ್ತಿನ ಅತ್ಯಂತ ಕುತೂಹಲಕರ ವಿಚಾರ.ಸ್ಥಾಪಕನಿಲ್ಲದ ಈ ಧರ್ಮ ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಹೊಂದಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು,ಉಳಿದ ಜಗತ್ತಿನ ಜೊತೆ ಕನಿಷ್ಟ ಸಂಭಂಧವನ್ನು ಹೊಂದಿಯೂ ಅಪಾರವಾದ ಬೌದ್ಧಿಕ ಸಂಪತ್ತನ್ನು ತನ್ನೊಳಗೆ ಬೆಳೆಸಿಕೊಂಡದ್ದು ಒಂದು ವಿಸ್ಮಯ.ಆದರೆ ಅದೇ ಹಿಂದೂ ಸಮಾಜವನ್ನು ಪಶ್ಚಿಮ ಜಗತ್ತು ಮೂಢ ನಂಬಿಕೆಗಳ ಸಮಾಜವೆಂದು ನೋಡುತ್ತಿರುವುದು ವಿರೋಧಾಭಾಸ. ನಿಜ,ಹಿಂದೂ ಜನಾಂಗಕ್ಕೆ ನಿಖರವಾದ ನಿರ್ಭಂಧಗಳಿಲ್ಲದ ಕಾರಣ ಅನೇಕ ಮೂಢ ನಂಬಿಕೆಗಳು ಹುಟ್ಟಿಕೊಂಡವು.ಅದನ್ನು ಆಗಿನ ಸಮಾಜ ಒಪ್ಪಿಕೊಂಡಿತು ಕೂಡ.ಆದರೆ ಆಗಿನ ಸಾಮಾಜಿಕ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ.ಅನೇಕ ಮೂಢ ನಂಬಿಕೆಗಳು ಹಿಂದು ಸಮಾಜದಿಂದ ಮರೆಯಾಗಿವೆ.ಹಾಗೆಂದು ನಂಬಿಕೆಗೂ ಮೂಢ ನಂಬಿಕೆಗೂ ವ್ಯತ್ಯಾಸವಿದೆ.ಅನೇಕ ಹಿಂದೂ ನಂಬಿಕೆಗಳು ವೈಜ್ನ್ಯಾನಿಕವಾಗಿ ಸತ್ಯವೆಂದು ಧೃಢೀಕರಿಸಲ್ಪಟ್ಟಿದೆ.ಆದರೆ ಇಂದಿನ ಕೆಲ ಯುವಕರು ಎಲ್ಲಾ ಹಿಂದೂ ನಂಬಿಕೆಗಳನ್ನು ಮೂಢ ನಂಬಿಕೆಯೆಂದು ಪ್ರಚಾರ ಮಾಡುತ್ತಿರುವುದು ಅವರ ಮೂರ್ಖತನವೋ,ಹಿಂದೂ ಧರ್ಮದ ದುರಾದೃಷ್ಟವೋ ಗೊತ್ತಾಗುತ್ತಿಲ್ಲ Gaurav shetty (talk) ೧೮:೦೨, ೨೩ ಆಗಸ್ಟ್ ೨೦೧೪ (UTC).