ಆಕಾಶನಗರ ಚರ್ಚುಗಳು
ಬೆಂಗಳೂರಿನ ಕೃಷ್ಣರಾಜಪುರ ರೈಲುನಿಲ್ದಾಣಕ್ಕೆ ಸಮೀಪವಿರುವ ಉದಯನಗರದ ಫಾತಿಮಾ ಶಾಲೆಯ ಸಭಾಂಗಣದಲ್ಲಿ ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ ರಾಮಮೂರ್ತಿನಗರದ ಪವಿತ್ರ ಕುಟುಂಬ ದೇವಾಲಯದಿಂದ ಗುರುಗಳು ಬಂದು ಬಲಿಪೂಜೆಗಳನ್ನು ಅರ್ಪಿಸುತ್ತಿದ್ದರು. ಆಗ ಇದನ್ನು ನಿತ್ಯ ಸಹಾಯ ಮಾತೆ ಉಪ ಧರ್ಮಕೇಂದ್ರವೆಂದು ಕರೆಯುತ್ತಿದ್ದರು. ಫಾದರ್ ಚಿನ್ನಪ್ಪನ್ ಅವರು ಬಿ ನಾರಾಯಣಪುರದ ಆಕಾಶನಗರದಲ್ಲಿ ಜಮೀನನ್ನು ಖರೀದಿಸಿದ ಮೇಲೆ ೨೦೦೩ರಲ್ಲಿ ಮಹಾಧರ್ಮಾಧ್ಯಕ್ಷ ಇಗ್ನೇಷಿಯಸ್ ಪಿಂಟೋ ಅವರು ಹೊಸ ದೇವಾಲಯದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ೨೦೦೫ರಲ್ಲಿ ನಿತ್ಯ ಸಹಾಯಮಾತೆಯಾಲಯದ ಕೆಲಸ ಪೂರ್ಣ ವಾಗಿ ಮಹಾಧರ್ಮಾಧ್ಯಕ್ಷ ಬೆರ್ನಾಡ್ ಮೊರಾಸ್ ಅವರು ಉದ್ಘಾಟಿಸಿ ಪವಿತ್ರೀಕರಿಸಿ ಸ್ವತಂತ್ರ ಧರ್ಮಕೇಂದ್ರವನ್ನಾಗಿ ಘೋಷಿಸಿದರು.
ಪೂಜಾಸಮಯ
[ಬದಲಾಯಿಸಿ]ವಾರದ ದಿನಗಳು | ಭಾನುವಾರ |
---|---|
07:00 ಸೋಮ- ಕನ್ನಡ |
06:45 ಕನ್ನಡ |