ವಿಷಯಕ್ಕೆ ಹೋಗು

ತಳಂಗರೆ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಳಂಗರೆ ಶಿಲಾಶಾಸನ

ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ. []

ಚರಿತ್ರೆ

[ಬದಲಾಯಿಸಿ]

ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ ಇಚ್ಛೆಯೇನೆಂದು ಜಯಸಿಂಹ ರಾಜ ಕೇಳಿದಾಗ ಅವಳು ನಿರ್ಜನವಾದ ಕಲ್ಲು ಮುಳ್ಳುಗಳಿಂದ ಕೂಡಿದ ಬರಪೀಡಿತ ಪ್ರದೇಶವೊಂದಕ್ಕಾಗಿ ಬೇಡಿದಳು. ಮಾತಿಗೆ ತಪ್ಪದ ಜಯಸಿಂಹ ರಾಜ ಅವಳು ಬಯಸಿದಂತೆ ರಾಜಧಾನಿಯಿಂದ ಬಲು ದೂರದಲ್ಲಿದ್ದ ನಿರ್ಜನ ಪ್ರದೇಶವೊಂದನ್ನು ಅವಳಿಗೆ ಉಡುಗೊರೆಯಾಗಿ ನೀಡಿದನು.

ಮೋಚಿಕಬ್ಬೆ ಆ ಭೂಮಿಯನ್ನು ಸ್ವಚ್ಛವಾಗಿಸಿ ನೀರಾವರಿಗಾಗಿ ಕಾಲುವೆಯೊಂದನ್ನು ಅಲ್ಲಿಗೆ ಹರಿಯುವಂತೆ ಮಾಡಿದಳು. ನೀರಿನ ಉಳಿತಾಯಕ್ಕಾಗಿ ಯೋಜನೆಗಳನ್ನು ಹಾಕಿ ಬರಪೀಡಿತ ಭೂಮಿಯನ್ನು ಜನವಾಸಕ್ಕೂ ಕೃಷಿಗೂ ಯೋಗ್ಯವಾಗುವಂತೆ ಪರಿವರ್ತಿಸಿದಳು. ಉದ್ಯಾನಗಳನ್ನೂ ಹಂಚಿನ ಮನೆಗಳನ್ನೂ ನಿರ್ಮಿಸಿ ಅದನ್ನು ಜನರ ಉಪಯೋಗಕ್ಕಾಗಿ ಮೋಚಿಕಬ್ಬೆ ದಾನ ಕೊಟ್ಟಳು.

ಮೇಲ್ಕಂಡ ಶಿಲಾಶಾಸನದಿಂದಲೇ ತಿಳಿದುಬರುವಂತೆ ಆ ಭೂಮಿ ಕಳ್ಳಕಾಕರ ಆಡುಂಬೊಲವಾಯಿತು. ರಾಣಿ ಮೋಚಿಕಬ್ಬೆ ಕೊಲೆ ಕಳ್ಳತನದಂಥ ಅಪರಾಧಗಳನ್ನು ಎಸಗಿದವರಿಗೆ ತಾತ್ಕಾಲಿಕ ಕ್ಷಮಾದಾನವನ್ನೂ ನೀಡಿದ್ದಳು. ರಾಣಿ ಮನುಷ್ಯರ ಮನಸ್ಸನ್ನು ಬಲ್ಲವಳಾಗಿದ್ದಳು. ಅಪರಾಧಗಳನ್ನು ಎಸಗಲು ಪ್ರೇರಣೆಯೊದಗಿಸುವ ವಿಚಾರಗಳನ್ನು ಅರಿತುಕೊಂಡು ಅಪರಾಧಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅನುವಾಗುವ ತಾಣವೊದನ್ನು ರಾಣಿ ಮೋಚಿಕಬ್ಬೆ ಒದಗಿಸಿದಳು. ಶಿಲಾಶಾಸನ ಮುಂದುವರಿದು ಅಪರಾಧಿಗಳು ಅಧಿಕಾರಿಗಳಿಗೆ ಶರಣಾದರೆಂದೂ ರಾಣಿ ಮೋಚಿಕಬ್ಬೆಯಿಂದಲಾಗಿ ರಾಜ್ಯದಲ್ಲಿ ಶಾಂತಿ ನೆಲಸುವಂತಾಯಿತೆಂದೂ ಸಾರುತ್ತದೆ. []

ಆದರೆ ಜಯಸಿಂಹನ ಕಾಲದ ಕುರಿತೋ ಕುಲದ ಕುರಿತೋ ಸ್ಪಷ್ಟವಾದ ಮಾಹಿತಿಯಿಲ್ಲ. ಈ ಸ್ಥಳದ ಅಧಿಕಾರ ಸ್ತ್ರೀ ಸಂತಾನಕ್ಕೆ ಮೀಸಲೆಂಬ ಮಾಹಿತಿ ಶಾಸನದಲ್ಲಿದೆ. ಪ್ರಾಯಶಃ ಅಳಿಯಕಟ್ಟಿನ ಕುರಿತ ಮೊದಲ ಶಾಸನ ಇದೇ ಆಗಿರಬಹುದು.[]

ಹೆಚ್ಚಿಗೆ ಓದಲು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ಕಾಸರಗೋಡಿನ ರಾಣಿ ಮೋಚಿಕಬ್ಬೆ".
  2. ಪಿ. ಗುರುರಾಜ ಭಟ್ (1975). Studies in Tuluva History and Culture.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]