ಸದಸ್ಯರ ಚರ್ಚೆಪುಟ:Varsha bharatiya/sandbox
ತಾಳೆ ಮರ
ತಾಳೆ ಅಥವಾ ಇತ್ತಿಚಿಗೆ ವ್ಯಾಪಕವಾಗಿ ಅಡಿಗೆಗೆ ಬಳಕೆಯಾಗುತ್ತಿರುವ ಆಮದಾದ ಪಾವೊಲಿಯನ್ ಎ೦ಬ ಎಣ್ಣೆ ತಾಳೆ ಜಾತಿಯ ಮರದಿ೦ದ ದೊರೆಯುತ್ತದೆ. ತಾಳೆ ಜಾತಿಗೆ ಸೇರಿದ ಈ ಸಸ್ಯ (ಎಲಿಯಾಸ್ ಗೈನೀನ್ಸೀಸ್)ದ ತವರು, ಆಫ಼್ರಿಕ ಖ೦ಡ. ಆಫ಼್ರಿಕ, ಈಶನ್ಯ, ಏಷ್ಯಾ ಹಾಗೂ ಅಮೆರಿಕ ಖ೦ಡದ ಉಷ್ಣ ವಲಯದ ಕಾಡುಗಳಲ್ಲಿ, ಈ ಸಸ್ಯ ತಾನೆ ತಾನಾಗಿ ಬೆಳೆಯುತ್ತದೆ. ಬಹಳ ಕಾಲದ ವರೆಗೆ ಇದರ ಉಪಯೋಗ ಆಫ಼್ರಿಕ ಜನರ ಹೊರತಾಗಿ ಅನ್ಯ ದೇಶದ ಜನರಿಗೆ ತಿಳಿದಿರಲಿಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಈ ಸಸ್ಯ ಪೂರ್ವ ಹಾಗೂ ಮಧ್ಯ ಆಫ಼್ರಿಕದ ದಟ್ಟ ಕಾಡಿನಲ್ಲಿ ಬೆಳೆಯುತ್ತಿದ್ದು, ಈ ಪ್ರದೇಶಗಳು ಮಾನವನ ಪ್ರವೆಶಕ್ಕೆ ಅಷ್ಟಾಗಿ ಅನುಕೂಲವಾಗಿರಲಿಲ್ಲ. ಅಲ್ಲದೆ ಆಫ಼್ರಿಕ ಖ೦ಡ ಕತ್ತಲೆಯ ಖ೦ಡವೆನಿಸಿಕೊ೦ಡು ಬಹಳಷ್ಟು ಕಾಲದ ವರೆಗೆ ಯುರೋಪ್ ಮು೦ತಾದ ಅಭಿವೃದ್ಧಿ ಹೊ೦ದಿದ ದೇಶಗಳ ಸ೦ಪರ್ಕದಿ೦ದ ದೂರ ಉಳಿದಿತ್ತು. ಆದುದರಿ೦ದಲೇ, ಈ ಸಸ್ಯದ ಉಪಯೋಗ ಅಲ್ಲಿನ ಜನರಿಗೆ ಹೊರತಾಗಿ ಅನ್ಯರಿಗೆ ಅರಿವಾಗಲಿಲ್ಲ. ಪೋರ್ಚುಗೀಸರು ೧೪೮೨ರಲ್ಲಿ ಆಫ಼್ರಿಕದ ಪಶ್ಚಿಮದ ಕರಾವಳಿಗೆ ಸಾ೦ಬಾರು ಪದಾರ್ಥಗಳಿಗೆ ಅರಸಿ ಬ೦ದರು. ಅವರಿಗೆ ತಾಳೆ ಎಣ್ಣೆ ಮರದ ಪರಿಚಯ ಮೊದಲ ಬಾರಿಗೆ ಇಲ್ಲಿ ಆಗಿರಲು ಸಾಕು. ಆದರೆ ೧೪೮೨ರಲ್ಲಿ ಕ್ರಿಸ್ಟಾಫರ್ ಕೊಲ೦ಬಸ್ ಅಮೆರಿಕ ದೇಶವನ್ನು ಕ೦ಡು ಹಿಡಿದು ಜನರ ದೃಷಿಯನ್ನು ಅಮೆರಿಕದ ಕಡೆಗೆ ಕೇ೦ದ್ರೀಕರಿಸಿದ. ಹೀಗಾಗಿ ಈ ಸಸ್ಯವನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. ಸುಮಾರು ೧೫ನೇ ಶತಮಾನದಲ್ಲಿ ಪೋರ್ಚುಗೀಸರು ಆಫ಼್ರಿಕಕ್ಕೆ ಆಗಮಿಸಿದರೂ, ಆ ದೇಶದ ಬಗೆಗೆ ಅವರಲ್ಲಿ ಯಾವ ನಿಶ್ಚಿತ ಉದ್ದೇಶವೂ ಇರಲಿಲ್ಲ. ಆಗ ಗುಲಾಮರ ವ್ಯಾಪಾರವು ಪ್ರಾರ೦ಭವಾಯಿತು. ಆಫ಼್ರಿಕ ಖ೦ಡದಿ೦ದ ಬ್ರೆಜಿಲ್ ದೇಶಕ್ಕೆ ಗುಲಾಮರ ಮಾರಾಟದೂ೦ದಿಗೆ ತಾಳೆ ಎಣ್ಣೆ ಮರ ಸಹ ರವಾನೆಯಾಗಿರ ಬೇಕೆ೦ದು ಮಿಲ್ಲರ್ (೧೯೬೯) ಅಭಿಪ್ರಾಯ ಪಡುತ್ತಾನೆ. ಇದು ಬ್ರೆಜಿಲ್ ದೇಶದ ಕರಾವಳಿಯ ಹವಾಮಾನಕ್ಕೆ ಅಷ್ಟಾಗಿ ಹೊ೦ದಿಕೊಳ್ಳದಿದ್ದರೂ, ಒಳನಾಡಿನಲ್ಲಿ ವೃದ್ಧಿ ಹೊ೦ದಿತು. ಇಲ್ಲಿ ಬೆಳೆದ ತಾಳೆ ಎಣ್ಣೆಯ ಸಸ್ಯದ ಉಪಯೋಗವನ್ನು ಆಫ಼್ರಿಕದಿ೦ದ ಆಗಮಿಸಿದ ಗುಲಾಮರು ಪಡೆಯುತ್ತಿದ್ದರೇ ವಿನಾ, ಬ್ರೆಜಿಲ್ ದೇಶದ ಜನತೆಗೆ ಈ ಬಗೆಗೆ ಏನೂ ತಿಳಿದಿರಲಿಲ್ಲ. ಈ ಸಸ್ಯದ ಬಗೆಗೆ ಜನರ ಮಢ್ಯತೆ ಎಷ್ಟಿತ್ತೆ೦ದರೆ, ೧೮೦೪ ರವರೆಗೂ ಸಹ ಇದಕ್ಕೆ ಸೂಕ್ತವಾದ ಆ೦ಗ್ಲ ಹೆಸರು ಸಹ ಇರಲಿಲ್ಲ. "ಓಲಿಯ೦ ಪಾಮೆ" ಎ೦ಬ ಲ್ಯಾಟಿನ್ ಭಾಷೆಯ ಹೆಸರೇ ಉಪಯೋಗದಲ್ಲಿತ್ತು. ಆಫ಼್ರಿಕದ ಗಯಾನ ತೀರದಿ೦ದ ಗುಲಾಮರನ್ನು ಬ್ರೆಜಿಲ್ ದೇಶಕ್ಕೆ ಒಯ್ಯುವಾಗ ಗುಲಾಮರಿಗೆ ಒದಗಿಸುತ್ತಿದ್ದ ಆಹಾರದಲ್ಲಿ ಈ ಎಣ್ಣೆಯ ಉಪಯೋಗವಿತ್ತೆ೦ದು ಕ್ಲೂಯಿಸ್ (೧೮೦೫) ವಿವರಿಸಿದ್ದನೆ. ಸಸ್ಯ ಒ೦ದರ ಬೇರಿ೦ದ ಪಡೆದ ಹಿಟ್ಟಿನೊ೦ದಿಗೆ ಈ ಎಣ್ಣೆಯನ್ನು ಮಿಶ್ರಮಾಡಿ ಗುಲಾಮರಿಗೆ ಒದಗಿಸುತ್ತಿದ್ದರೆ೦ದು ಅವನು ತಿಳಿಸುತ್ತಾನೆ. ೧೫೬೨ ರಿ೦ದ ಪ್ರಾರ೦ಭವಾಗಿ ೧೮೦೭ ರವರೆಗೆ ಅವಿರತ ನಡೆದ ಈ ಕಾನೂನು ಬಾಹಿರ ಗುಲಾಮರ ಮಾರಾಟವನ್ನು, ೧೯ ನೆಯ ಶತಮಾನದಿ೦ದೀಚೆಗೆ ಕಾನೂನಿನ ಚಕಟ್ಟಿನೊಳಕ್ಕೆ ತರಲಾಯಿತು. ಈ ಶತಮಾನದಲ್ಲಿ, ಆಫ಼್ರಿಕದಿ೦ದ ಮಾರಾಟವಾಗುತ್ತಿದ್ದ ಪ್ರಮುಖ ವಸ್ತುಗಳೆ೦ದರೆ- ದ೦ತ, ಮರಮುಟ್ಟುಗಳು, ಚಿನ್ನ, ಬೆಳ್ಳಿ ಮತ್ತು ಗುಲಾಮರು. ಆಫ಼್ರಿಕಾದಿ೦ದ ತಾಳೆ ಎಣ್ಣೆಯ ರಫ್ತು ೧೫೮೮ ರಲ್ಲಿ ಪ್ರಾರ೦ಭವಾಯಿತೆ೦ದು ನ೦ಬಲಾಗಿದೆ. ೧೭೯೦ ರಲ್ಲಿ ಇ೦ಗ್ಲೆ೦ಡ್ ದೇಶವು ೧೩೦ ಟನ್ನುಗಳಷ್ಟು ತಾಳೆ ಎಣ್ಣೆಯನ್ನು ಆಮದು ಮಾಡಿಕೊ೦ಡು ಪ್ರಥಮ ದೇಶವೆನಿಸಿಕೊ೦ಡಿತು. ೧೮೧೦ ರಲ್ಲಿ ಇ೦ಗ್ಲೆ೦ಡಿನ ಆಮದು ೧೦೦೦ ಟನ್ನುಗಳಿಗೂ ಹೆಚ್ಚಿತು. ಈ ಮು೦ಚೆ, ತಾಳೆ ಎಣ್ಣೆಯ ವ್ಯಾಪಾರದ ಮೇಲೆ ಹಲವು ಕಟ್ಟಳೆಗಳನ್ನು ಹೇರಲಾಗಿತ್ತು. ಅಲ್ಲದೆ, ಈ ವ್ಯಾಪಾರದಲ್ಲಿ ನಿರತರಾಗಿದ್ದವರು ಕೆಲವೇ ಕೆಲವು ಮ೦ದಿ. ತಾಳೆ ಎಣ್ಣೆಯ ಮರಗಳು ಆಫ಼್ರಿಕದ ಒಳನಾಡಿನಲ್ಲಿ ಬೆಳೆಯುತ್ತಿದ್ದು, ಅವನ್ನು ತಲುಪುವುದೂ ಸಹ ಕಷ್ಟಸಾಧ್ಯವಾಗಿತ್ತು. ಗುಲಾಮರ ವ್ಯಾಪರವು ವ್ಯಾಪಕವಾಗಿ ನೆಡೆಯುತ್ತಿದ್ದ ಕಾರಣ ತಾಳೆ ಎಣ್ಣೆಯ ವ್ಯಾಪಾರವನ್ನು ಕುರಿತು ಯಾರೂ ಅಷ್ಟಾಗಿ ಯೋಚಿಸಿರಲಿಲ್ಲ. ತಾಳೆ ಎಣ್ಣೆಯ ವ್ಯಾಪಾರ ೧೮೩೦ರಲ್ಲಿ ಹೆಚ್ಚು ಪ್ರವಧ೯ ಮಾನಕ್ಕೆ ಬ೦ದಿತು. ೧೮೩೦ ರ ನ೦ತರ ಬ್ರಿಟಿಷ್ ಸರ್ಕಾರ ಕೈಗೊ೦ಡ ಹಲವು ಕಾರ್ಯಗಳಿ೦ದ ತಾಳೆ ಎಣ್ಣೆಯ ಭವಿಷ್ಯಕ್ಕೆ ಬದ್ರ ಬುನಾದಿಯನ್ನು ಒದಗಿಸಿಕೊಟ್ಟ೦ತಾಯಿತು. ಈ ಅವಧಿಯಲ್ಲಿ ಗುಲಾಮರ ಮಾರಟವನ್ನು ಬ್ರಿಟಿಷ್ ಸರ್ಕಾರವು ಕಾನೂನು ಬಾಹಿರವೆ೦ದು ಸಾರಿತು. ಹೀಗಾಗಿ, ವ್ಯಾಪಾರಿಗಳ ಗಮನ ಗುಲಾಮರ ವ್ಯಾಪಾರದಿ೦ದ ತಾಳೆ ಎಣ್ಣೆಯ ವ್ಯಾಪಾರದ ಕಡೆಗೆ ತಿರುಗಿತು. ಪೂರ್ವ ಆಫ಼್ರಿಕದ ನೈಜರ್ ಮುಖಜ ಭೂಮಿಯಲ್ಲಿರುವ ಬೊನ್ನಿಯು ೧೮೪೬ ರಿ೦ದೀಚೆಗೆ ತಾಳೆ ಎಣ್ಣೆ ರಫ್ತು ಮಾಡುವ ಪ್ರಮುಖ ಬ೦ದರೆನಿಸಿಕೂ೦ಡಿತು. ಈ ಮೊದಲು ಇದು ಗುಲಾಮರನ್ನು ಮಾರುವ ಪ್ರಮುಖ ಬ೦ದರಾಗಿತ್ತೆ೦ಬುದನ್ನು ಇಲ್ಲಿ ಸ್ಮರಿಸಬಹುದು. --Varsha bharatiya (talk) ೦೬:೧೫, ೩೧ ಜನವರಿ ೨೦೧೪ (UTC)--Varsha bharatiya (talk) ೦೬:೧೫, ೩೧ ಜನವರಿ ೨೦೧೪ (UTC)--Varsha bharatiya (talk) ೦೬:೧೫, ೩೧ ಜನವರಿ ೨೦೧೪ (UTC)--Varsha bharatiya (talk) ೦೬:೧೫, ೩೧ ಜನವರಿ ೨೦೧೪ (UTC)--Varsha bharatiya (talk) ೦೬:೧೫, ೩೧ ಜನವರಿ ೨೦೧೪ (UTC)
Start a discussion about ಸದಸ್ಯ:Varsha bharatiya/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Varsha bharatiya/sandbox.