ಟಿಪ್ಪು ಸುಲ್ತಾನನು ಮತ್ತು ಮೈಸೂರಿನ ಕ್ರೈಸ್ತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಪ್ಪು ವಿನ ಕಿರುಪರಿಚಯ[ಬದಲಾಯಿಸಿ]

ಹೈದರಾಲಿಯ ಮಗನಾದ ಟಿಪ್ಪು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ. ದಿನಾಂಕ ೧೦.೧೧.೧೭೫೦ರಂದು. ಅಪ್ಪ ಅನಕ್ಷರಸ್ತನಾಗಿದ್ದರೂ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದ. ಹದಿನೈದನೆಯ ವಯಸ್ಸಿನಿಂದಲೇ ಮಗ ತಂದೆಯೊಂದಿಗೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ. ಟಿಪ್ಪುವಿನ ಹೆಸರು ಬೆಳಕಿಗೆ ಬಂದುದು ತಿರುಚನಾಪಳ್ಳಿಯಲ್ಲಿ; ದಿನಾಂಕ ೨೫.೮.೧೭೬೭ರಲ್ಲಿ ನಡೆದ ಯುದ್ಧದಲ್ಲಿ. ಇಂಗ್ಷೀಷರೊಡನೆ ನಡೆದ ಒಂದನೆಯ ಮೈಸೂರು ಯುದ್ಧದಲ್ಲೂ(೧೭೬೭-೧೭೬೯), ಮರಾಠರೊಡನೆ ನಡೆದ ಯುದ್ಧದಲ್ಲೂ (೧೭೬೯ -೧೭೭೨), ಭಾಗವಹಿಸಿ ಟಿಪ್ಪು ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರಕಟ ಪಡಿಸಿದ್ದ. ೧೭೮೦ರಲ್ಲಿ ಆರಂಭವಾದ ಎರಡನೆ ಆಂಗ್ಲೊ - ಮೈಸೂರು ಯುದ್ಧದಲ್ಲೂ ಪ್ರಧಾನ ಪಾತ್ರ ವಹಿಸಿದ್ದ. ಕರ್ನಲ್ ಬೆಯಿಲಿ, ಕರ್ನಲ್ ಬ್ರೈತ್ , ಕರ್ನಲ್ ವೈಟ್ ಮುಂತಾದ ಯುದ್ದ ವೀರರೊಡನೆ ಹೋರಾಡಿದ್ದ.

ಕ್ರೈಸ್ತ ಜನಾಂಗ ಮತ್ತು ಟಿಪ್ಪು ಸುಲ್ತಾನ್[ಬದಲಾಯಿಸಿ]

ಕ್ರೈಸ್ತ ಜನಾಂಗದ ಮೇಲೆ ಟಿಪ್ಪು ಸುಲ್ತಾನ್ನರ ಧೋರಣೆ ಅಸಹನೀಯವಾದ್ದು. ಕೆಲವು ಕ್ರಿಶ್ಚಿಯನ್ ಇತಿಹಾಸಜ್ಞರು ಟಿಪ್ಪು ಸುಲ್ತಾನ್ ರವರನ್ನು ವಿರೋಧಿಯೆಂದು ಪರಿಗಣಿಸಿದ್ದಾರೆ. ಟಿಪ್ಪು ಸುಲ್ತಾನ್ ರವರು ಮಂಗಳೂರಿನ ಕ್ಯಾಥೊಲಿಕ್ ಜನಾಂಗವನ್ನು ಸೆರೆ ಹಿಡಿಯುವ ಪದ್ದತಿ, ೨೪ ಫೆಬ್ರವರಿ ೧೭೮೪ರಂದು ಪ್ರಾರಂಭವಾಗಿ ಮೇ ೪ ೧೭೯೯ರಲ್ಲಿ ಅಂತಿಮವಾಯಿತು. ೧೭೮೪ರ ಮಂಗಳೂರು ಒಪ್ಪಂದದ ನಂತರ, ಟಿಪ್ಪು ಸುಲ್ತಾನ್ ಕೆನರಾ ಭೂಮಿಯನ್ನು ಆಳುವ ಅಧಿಕಾರವನ್ನು ಪಡೆದನು. ಆನಂತರ, ಅಲ್ಲಿ ಕ್ರಿಶ್ಚಿಯನ್ ಮತಕ್ಕೆ ಸೇರಿದ ಎಲ್ಲಾ ಜನರ ಆಸ್ತಿಗಳನ್ನು ಕಸಿದುಕೊಂಡು, ತನ್ನ ಸಾಮ್ರಾಜ್ಯ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ಲಕ್ಷಾಂತರ ಕ್ರಿಶ್ಚಿಯನ್ನರನ್ನು ಗಡಿಪಾರು ಮಾಡಿಲು ಆತನ ಸೈನಿಕರಿಗೆ ಆದೇಶವನ್ನು ಹೊರಡಿಸಿದ. ಹಾಗೆ ಸೆರೆ ಹಿಡಿದ ಆಳುಗಳ ನಡುವೆ ಯಾವುದೇ ಪುರೋಹಿತರು ಇರಲಿಲ್ಲ. ಪ್ರಾ. ಮಿರಾಂಡಾ, ಅವರ ಜೊತೆಗೆ ೨೧ ಪುರೋಹಿತರನ್ನು ಒಟ್ಟಿಗೆ ಬಂಧಿಸಿ, ೨ ಲಕ್ಷಾವರೆಗೆ ದಂಡವನ್ನು ಹಾಕಿದಲ್ಲದೆ ಯಾರಾದರು ಸೆರೆ ಮನೆಯಿಂದ ತಮ್ಮ ನಾಡಿಗೆ ಹಿಂದಿರುಗಿದರೆ ಅಥವ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದರೆ ಅವರನ್ನು ನೇಣು ಹಾಕುವುದಾಗಿ ಹೆದರಿಸಿದ. ೨೭ ಕ್ಯಾಥೊಲಿಕ್ ಚರ್ಚುಗಳಲ್ಲಿ, ವಿವಿಧ ಸಂತರ ವಿವರವನ್ನು ವರ್ಣಿಣಿಸುವಂತೆ ಸುಂದರವಾಗಿ ಕೆತ್ತಿದ ಮೂರ್ತಿಗಳನ್ನು ವಿನಾಶ ಮಾಡುವಂತೆ, ಟಿಪ್ಪು ಸುಲ್ತಾನ್ ಆತನ ಸೈನಿಕರಿಗೆ ಆದೇಶವನ್ನು ಹೊರಡಿ ಸಿದನು. ಕ್ಯಾಥೊಲಿಕ್ ಚರ್ಚುಗಳ ಜೊತೆಗೆ ಇನ್ನೂ ಹಲವಾರು ಚರ್ಚಗಳನ್ನೂ ಸಹ ವಿರೂಪಗೊಳಿಸಲಾಯಿತು.

ಥಾಮಸ್ ಮುನ್ರೋ, ಒಬ್ಬ ಸ್ಕಾಟಿಷ್ ಸೈನಿಕ ಮತ್ತು ಕೆನರಾ ದೇಶದ ಮೊದಲ ಸಂಗ್ರಾಹಕರ ಪ್ರಕಾರ, ಸುಮಾರು ೬೦೦೦ ಜನರು ಮತ್ತು ಶೇಖಡ ೯೨ ಮಂಗಳೂರಿನ ಕ್ಯಾಥೊಲಿಕ್ ಸಮುದಾಯವನ್ನು ಟಿಪ್ಪು ಸುಲ್ತಾನ್ ಸೆರೆ ಹಿಡಿದನು. ಹಾಗೆ ಸೆರೆ ಹಿಡಿದವರಲ್ಲಿ ಸುಮಾರು ೭,೦೦೦ ಕ್ರಿಶ್ಚಿಯನ್ನರು ತಪ್ಪಿಸಿಕೊಂಡರು. ಆದರೆ ಫ್ರಾನ್ಸಿಸ್ ಪ್ರಕಾರ ೮೦,೦೦೦ ಕ್ರಿಶ್ಚಿಯನ್ ಜನ ಸಂಖ್ಯೆಯಲ್ಲಿ ೭೦,೦೦೦ ಜನರನ್ನು ಟಿಪ್ಪು ಸುಲ್ತಾನ್ ಸೆರೆ ಹಿಡಿದನು, ಅವರಲ್ಲಿ ೧೦,೦೦೦ ಕ್ರಿಸ್ಚಿಯನ್ನವರು ತಪ್ಪಿಸಿಕೊಂಡರು. ಹೀಗೆ ಸೆರೆ ಹಿಡಿದವರನ್ನು, ಟಿಪ್ಪು ಸುಲ್ತಾನ್ ಪಶ್ಚಿಮ ಘಟ್ಟದ ಪರ್ವತ ಕಾಡುಗಳ ಮೂಲಕ ಸುಮಾರು ೪,೦೦೦ ಅಡಿಯ(೧೨೦೦ ಮೀ) ಎತ್ತರದ ಶಿಖರವನ್ನು ಬಲವಂತವಾಗಿ ಏರಿಸಿದನು. ಇದು ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ೨೧೦ ಮೈಲಿ ದೂರವಿದೆ. ಖೈದಿಗಳೆಲ್ಲರು ಶ್ರೀರಂಗಪಟ್ಟಣವನ್ನು ತಲುಪಲು ೬ ವಾರಗಳು ಹಿಡಿದವು. ಬ್ರಿಟಿಷ್ ಸರ್ಕಾರದ ದಾಖಲೆಗಳ ಪ್ರಕಾರ, ಶ್ರೀರಂಗಪಟ್ಟಣ ತಲುಪಲು ಶಿಖರ ಏರಿದ ಖೈದಿಗಳಲ್ಲಿ ಸುಮಾರು ೨೦,೦೦೦ ಖೈದಿಗಳು ದಾರಿಯಲ್ಲೇ ನಿಧನರಾದರು.

ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕಾರ್ರಿಯವರ ಪ್ರಕಾರ, ಸೆರೆ ಹಿಡಿದ ೩೦,೦೦೦ ಮಂಗಳೂರು ಕ್ರಿಶ್ಚಿಯನ್ನವರನ್ನ, ಟಿಪ್ಪು ಸುಲ್ತಾನ್ ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಮಾಡಿದ ನು. ಕ್ರಿಶ್ಛಿಯನ್ ಧರ್ಮದ ಯುವ ಮಹಿಳೆಯರು ಮತ್ತು ಹುಡುಗಿಯರನ್ನು ಬಲವಂತವಾಗಿ ಅಲ್ಲಿ ವಾಸಿಸುತ್ತಿದ್ದ ಮುಸ್ಲಿಂಮರಿಗೆ ಪತ್ನಿಯರನ್ನಾಗಿ ಮಾಡಲಾಯಿತು. ಇದಕ್ಕೆ ವಿರೋಧ ವನ್ನು ತೋರುತ್ತಿದ್ದ ಕ್ರಿಶ್ಛಿಯನ್ ಯುವಕರಿಗೆ ಮತ್ತು ಗಂಡಸರಿಗೆ ತಮ್ಮ ಮೂಗುಗಳನ್ನು, ಮೇಲ್ ತುಟಿಗಳನ್ನು ಮತ್ತು ಕಿವಿಗಳನ್ನು ಕತ್ತರಿಸಿ ಬಿಡಲು ಆದೇಶ ಮಾಡಿ, ಅವರು ಏನನ್ನು ಮಾತನಾಡಲು ಬಿಡದೆ ಕ್ರೂರ ಹಿಂಸೆಗೆ ಟಿಪ್ಪು ಸುಲ್ತಾನ್ ಒಳಪಡಿಸುತ್ತಿದ್ದನು.

ಟಿಪ್ಪು ಸುಲ್ತಾನ್ ೩೦,೦೦೦ ವೆಸ್ಟ್ ಕೋಸ್ಟ್ ಕ್ರಿಶ್ಚಿಯನ್ನರನ್ನು ಬಲವಂತಾಗಿ ಮೈಸೂರಿಗೆ ಪಾವನಗೊಳಿಸಿದನು ಎಂದು ದಕ್ಷಿಣ ಭಾರತದ ಗೆಜೆಟಿಯರ್ ವಿವರಿಸಿದ್ದಾರೆ. ಗೋವಾ ಅರ್ಚ್ಬಿಷ್ಷ್ರವರು ಬರೆದಿರುವುದರ ಪ್ರಕಾರ, ಪೂರ್ತಿ ಏಷ್ಯಾ ಹಾಗು ಲೋಕದ ಇತರ ಭಾಗಗಳಿಗೆ ತಿಳಿದಂತೆ, ಕೆನರ ಭೂಮಿಯ ರಾಜನಾದ ಟಿಪ್ಪು ಸುಲ್ತಾನನ ಕಾಲ ಕೆಳಗೆ ಕ್ರಿಶ್ಛಿಯನ್ ಜನಾಂಗ ಸಾಕಷ್ಟ್ಟು ತೊಂದರೆಗಳನ್ನು ಹಾಗು ಅತಿ ಕ್ರೂರವಾದ ಹಿಂಸೆಗಳನ್ನು ಅನುಭವಿಸಿದ್ದಾರೆ ಮತ್ತು ಟಿಪ್ಪು ಸುಲ್ತಾನ್ ಆಳುತ್ತಿದ್ದ ಮಲಬಾರ್ ನಲ್ಲಿರುವ ಸಂತ ಥಾಮಸ್ ಕ್ರಿಶ್ಚಿಯನ್ ಸಮುದಾಯದ ಮೇಲೆ ಆತನಿಂದ ಕೆಟ್ಟ ಪರಿಣಾಮವಾಗಿದೆ. ಮಲಬಾರ್ ಮತ್ತು ಕೋಚ್ಚಿನ್ನ್ ನಲ್ಲಿ ಇದ್ದ ಹಲವು ಚರ್ಚಗಳು ಹಾನಿಯಾದುವು. ಅನೇಕ ಶತಮಾನಗಳಿಂದ ಈಸ್ಟ್ಣ್ ಶಿಕ್ಷಣ ಕೇಂದ್ರಕ್ಕೆ ಮೂಲವಾಗಿದ್ದ ಆಂಗ್ಲಮಲಿಯಲ್ಲಿ ಇರುವ ಸಿರ್ಯ್ಯನ್ ನಸ್ರಾನಿ ಸೆಮಿನಾರಿ ಕೂಡಟಿಪ್ಪುವಿನ ಸೈನಿಕರಿಂದ ನೆಲ ಸಮಗೊಳಿಸಲ್ಪಟ್ಟವು. ಹಲವು ಶತಮಾನಗಳಿಂದ ಇದ್ದ ಕ್ರಿಸ್ಚಿಯ ನ್ನವರ ಹಳೆಯ ಧಾರ್ಮಿಕದ ಬಹಳಷ್ಟು ಹಸ್ತಪ್ರತಿಗಳು ಶಾಶ್ವತವಾಗಿ ಕಣ್ಮರೆಯಾಗಿವೆ. ಇಂದೂ ಕೊಟ್ಟಾಯಂ ಎನ್ನುವ ಸ್ಥಳಕ್ಕೆ ಸ್ಥಳಾಂತರವಾಗಿದೆ ಅಲ್ಲಿಯೆ ಉಳಿದಿದೆ. ಅಕಾಪ ರಂಬುನಲ್ಲಿ ಇದ್ದ ಮೊರ್ ಸಾಬೂರ್ ಚರ್ಚ್ ಕೂಡ ನಾಶ ಪಡಿಸಲಾಯಿತು. ಟಿಪ್ಪುವಿನ ಸೇನೆ, ಪಲಯೂರ್ ಚರ್ಚ್ ಮತ್ತು ಸೆಮಿನರೀಗೆ ಗಿತ್ತಿಸಲಾದ ಮಾರ್ಥಾ ಮರಿಯಮ್ ಚರ್ಚನ್ನು ಕೂಡ ನಾಶ ಪಡಿಸಿತು.

ಟಿಪ್ಪುವಿನ ಸೇನೆ ಪಲಯೂರ್ ಚರ್ಚ್ಗೆ ಬೆಂಕಿ ಹಾಕಿ ೧೭೯೦ರಲ್ಲಿ ಉಲ್ಲುರ್ ಚರ್ಚನ್ನು ದಾಳಿ ಮಾಡಿದರು. ಅದರೊಂದಿಗೆ ಅರ್ತ ಎನ್ನುವ ಚರ್ಚ್ ಮತ್ತು ಅಮ್ಬಜಕ್ಕಡ್ ಸೆಮಿನರಿಯನ್ನು ಸಹ ನಾಶವಾಯಿತು. ಈ ಆಕ್ರಮಣದ ಅವಧಿಯಲ್ಲಿ, ಅನೇಕ ಸೇಂಟ್ ಥಾಮಸ್ ಕ್ರಿಶ್ಚಿಯನ್ನರನ್ನು ಕೊಂದರು ಹಾಕಿದರು ಇಲ್ಲದಿದ್ದರೆ ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಮಾಡುತ್ತಿದ್ದರು. ಅದಲ್ಲದೆ ಕ್ರಿಶ್ಚಿಯನ್ ರೈತರು ಬೆಳಸಿದ ನೆಡು ತೋಪುಗಳಾದ ತೆಂಗು, ಅಡಿಕೆ, ಮೆಣಸು ಇವೆಲ್ಲಾವನ್ನು ನಾಶ ಮಾಡಿದರು. ಟಿಪ್ಪು ಸುಲ್ತಾನ್ ಸೇನೆ ಗುರುವಾಯೂರ್ ಮತ್ತು ಪಕ್ಕದ ಪ್ರದೇಶಗಳನ್ನು ಸಹ ಆಕ್ರಮಿಸಿದರು.

ಟಿಪ್ಪು ಸುಲ್ತಾನ್ ಮಲಬಾರನ್ನು ಮತ್ತು ಇತರ ಭಾಗಗಳನ್ನು ಆಕ್ರಮಣ ಮಾಡಿದಾಗ ಸಿರ್ಯ್ಯನ್ ಕ್ರಿಶ್ಛಿಯನ್ ಸೆಮಿನಾರಿ ಜನರು ಕ್ಯಾಲಿಕಟ್ ತಪ್ಪಿಸಿಕೊಂಡು ಅಲ್ಲಿ ಸಣ್ಣ ಪುಟ್ಟ ಪಟ್ಟಣ ಗಳಾದ ಆರ್ತದಿಂದ ಮತ್ತು ಹೊಸ ಕೇಂದ್ರಗಳಿಗೆ ಕನ್ನಮ್ಕುಂ ಚಲಡಿ, ಎನ್ನಾಖಡು ಮುಂತಾದ ಜಾಗಗಳಲ್ಲಿ ಇದ್ದರು. ಅಲ್ಲಿ ಕ್ರೈಸ್ತರು ಮೊದಲೇ ವಾಸವಾಗಿದ್ದರು. ನಂತರ ಸಕ್ತಾನ್ ತಬುರನ್, ಕೊಚ್ಚಿನ್ ಆಡಳಿತಗಾರ ಮತ್ತು ಕಾರ್ತಿಕ ತಿರುನಾಳ್ ತಿರುವಾರಿಕೂರಿನ ಆಡಳಿತಗಾರರು ಇವರಿಬ್ಬರು ಅವರಿಗೆ ಆಶ್ರಯ ನೀಡಿ ಅವರ ಬದುಕಿಗೆ ಭುಮಿಯನ್ನು, ನೆಡು ತೋಪೂಗಳನ್ನು ನೀಡಿದರು ಮತ್ತು ಅವರ ವ್ಯವಹಾರಗಳನ್ನು ಇನ್ನು ಹೆಚ್ಚಾಗಿ ಪ್ರೊತ್ಸಾಹಿಸಿದರು. ತಿರುವಾಂಕೂರಿನ ಬ್ರಿಟಿಷ್ ನಿವಾಸದ ಕರ್ನಲ್ ಮೆಕುಲೆ ಸಹ ಅವರಿಗೆ ಸಹಾಯ ಮಾಡಿದರು. ಟಿಪ್ಪು ಸುಲ್ತಾನ್ ಕ್ರಿಶ್ಚಿಯನ್ನರಿಗೆ ಮಾಡುತ್ತಿದ್ದ ಶೋಷಣೆಯನ್ನು, ಸೆರೆ ಹಿಡಿದ ಬ್ರಿಟಿಷ್ ಸೈನಿಕರಿಗೂ ಶೋಷಣೆ ಮಾಡಲು ಆರಂಭಿಸಿದ. ಉದಾಹರಣೆಗೆ: ೧೭೮೦ ಮತ್ತು ೧೭೮೪ಯ ಅವಧಿಯಲ್ಲಿ ಬ್ರಿಟಿಷ್ ಖೈದಿಗಳನ್ನು ಬಲವಂತ್ತಾಗಿ ಧರ್ಮ ಪರಿವರ್ತಣೆ ಮಾಡಿದ ಸಂಖ್ಯೆ ತುಂಬಾ ಇದ್ದವು. ಪೊಲ್ಲಿಪುರ್ ಆಫ್ ೧೭೮೦ ಸಮರದಲ್ಲಿ ಹೀನಾಯ ಸೋಲಿನ ನಂತರ, ಸುಮಾರು ೭,೦೦೦ ಬ್ರಿಟಿಷ್ ಪುರುಷರ ಜೊತೆಗೆ ಅಪರಿಚಿತ ಸಂಖ್ಯೆಯ ಮಹಿಳೆಯರನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಬಂಧಿಗಳಾಗಿ ಮಾಡಿದನು ಟಿಪ್ಪು ಸುಲ್ತಾನ್. ಅವರಲ್ಲಿ ಸುಮಾರು ೩೦೦ ಜನರನ್ನು ಹಿಡಿದು ಅವರಿಗೆ ಮುಸಲ್ಮಾನ್ ಹೆಸರುಗಳನ್ನು ಇಟ್ಟು, ಅವರಿಗೆ ಬಟ್ಟೆಗಳನ್ನು ಧರಿಸಿ ಮತ್ತು ಬ್ರಿಟಿಷ್ ರೆಜಿಮೆಂಟ್ಟಿನ ಡ್ರಮ್ಮರ್ ಹುಡುಗರಿಗೆ ಮುಸ ಲ್ಮಾನ್ ವರ್ಗದವರು ಧರಿಸುವ ಉಡುಪುಗಳನ್ನು ಧರಿಸಿ ಅವರನ್ನು ನಾಚ್ ಹುಡುಗಿಯರಾಗಿ ಅಥವಾ ನೃತ್ಯ ಹುಡುಗಿಯರಂತೆ ನ್ಯಾಯಾಲಯದಲ್ಲಿ ಮನರಂಜನೆ ಮಾಡಿಸಲಾಯಿತು.

ಒಮ್ಮೆ, ಹತ್ತು ವರ್ಷಗಳ ಕಾಲ ಸೆರೆಯಲ್ಲಿ ಕೈದಿಯಾಗಿದ್ದ ಜೇಮ್ಸ್ ಸೌರ್ರಿ ಎಂಬ ವ್ಯಕ್ತಿಯನ್ನು, ಒಂದು ಕುರ್ಚಿಯಲ್ಲಿ ಕುಳಿತು ಚಾಕು ಮತ್ತು ಫಂಕೋರ್ಕನ್ನು ಅವರ ಕೈಗೆ ಕೊಟ್ಟಾಗ ಅವರಿಗೆ ಅದನ್ನು ಸರಿಯಾಗಿ ಹಿಡಿದು ಬಳಸಲು ಮರೆತ್ತಿರುವುದ್ದನ್ನು ವಿಶಾಲವಾಗಿ ವಿವರಿಸಿದ್ದಾರೆ. ಅವರು ಮಾತನಾಡುವಾಗ ಅವರ ಇಂಗ್ಲೀಷ್ ಭಾಷೆ ಮುರಿದು ಹೋಯಿತು ಮತ್ತು ಅವರು ಅಸಹಜವಾಗಿ ದೇಶಿಯ ನುಡಿಗಟ್ಟುಗಳನ್ನು ಕಳೆದು ಕೊಂಡರು. ಅದರೊಂದಿಗೆ ಅವರು ಸೆರೆಯಿಂದ ಹೊರಬಿದ್ದಾಗ ಅವರ ಬಿಳಿ ಚರ್ಮ ನೀಗ್ರೋಗಳಂತೆ ಬದಲಾಗಿತ್ತು. ಇದಲ್ಲದೆ ಅವರು ಯೂರೋಪಿಯನ್ ಬಟ್ಟೆಗಳನ್ನು ಧರಿಸಿ ಒಂದು ನಿವಾರಣೆ ಅಭಿವೃದ್ದಿ ಪಡಿಸಿದರು.

ಟಿಪ್ಪು ಮತ್ತು ಪಶ್ಚಿಮ ಕರಾವಳಿಯ ಕ್ರೈಸ್ತರು[ಬದಲಾಯಿಸಿ]

ಕ್ರೈಸ್ತ ಧರ್ಮದ ಬಗ್ಗೆ ಟಿಪ್ಪುವಿನ ಧೋರಣೆ ಏನಾಗಿತ್ತು ಎಂಬುದರ ವಿಷಯದಲ್ಲೂ ಒಮ್ಮತವಿಲ್ಲವೆಂದರೆ ಆಶ್ಚರ್ಯವೆನಿಸ ಬಹುದು. ೧೭೮೪ರಲ್ಲಿ ಆತ ಕರಾವಳಿಯ ಸಾವಿರಾರು ಕ್ರೈಸ್ತರ ನ್ನು ಬಂಧಿಸಿ ಶ್ರೀ ರಂಗಪಟ್ಟಣಕ್ಕೆ ಹತ್ತಿರವಿರುವ ಗಂಜಾಮಿಗೆ ನಡೆಸಿ ತಂದು ಅಪಾರ ಹಿಂಸೆಗೆ ಒಳಪಡಿಸಿದ್ದನ್ನೂ ಅವರ ಹತ್ತಿಪ್ಪತ್ತು ದೇವಸ್ಥಾನಗಳನ್ನು ಕೆಡವಿದ್ದನ್ನೂ ಅವರ ಗುರುಗಳನ್ನು ಗಡಿಪಾರು ಮಾಡಿದ್ದನ್ನೂ ವಿವರಿಸುವ ಕ್ರೈಸ್ತ ಸಾಹಿತ್ಯ ಸಾಕಷ್ಟಿದೆ ಆಂಗ್ಲ ಭಾಷೆಯಲ್ಲಿ. ಬೇಕಾದಷ್ಟು ವಿಷಪ್ರಾಶಗಳಾಗಿವೆ. ಆತ, "ತನ್ನ ಎಲ್ಲ ಪತ್ರಗಳಲ್ಲಿ ತಾನು ತನ್ನ ಧರ್ಮದ ಮೇಲಿನ ಅಭಿಮಾನದಿಂದಲೇ, ಕೆನಡಾದ ನಸ್ರಾನಿಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾಗಿ ಹೇಳಿದ್ದಾನೆ" ಎಂಬುದು ಇತ್ತೀಚಿನ ಒಂದು ಅಭಿಪ್ರಾಯ.

ಹಿಂದು ಧರ್ಮೀಯರು ಮತ್ತು ಟಿಪ್ಪು[ಬದಲಾಯಿಸಿ]

'ತಂದೆಯಂತೆ ಮಗ' ಎಂಬ ನಾಣ್ನುಡಿಗೆ ಇಲ್ಲೊಂದು ವಿನಾಯಿತಿ. ಹೈದರ್ ಧಾರ್ಮಿಕ ವಿಷಯಗಳಲ್ಲಿ ನಿರಾಸಕ್ತನಾಗಿದ್ದರೆ ಟಿಪ್ಪು, ಇಸ್ಲಾಂ ಧರ್ಮದ ಬಗ್ಗೆ ಅಪಾರ ಶ್ರದ್ಧೆಯುಳ್ಳವನಾಗಿದ್ದ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ತಾನೊಬ್ಬ 'ಪೈಗಂಬರ್' ಎನಿಸಿಕೊಂಡಿದ್ದ; ತನ್ನ ರಾಜ್ಯ್ 'ದೈವದತ್ತ' ಎಂದು ಪ್ರಕಟಿಸಿದ್ದ. ಆದರೆ ಪರರ ಧರ್ಮಗಳ ಕುರಿತು ಅವನ ಧೋರಣೆ ಏನಾಗಿತ್ತು? "ಹಿಂದೂ ಜನತೆಯ ಬಗೆಗೂ ಅವರ ಗುಡಿ, ಮಠಗಳ ಬಗೆಗೂ ಅವನಿಗೆ ಅಪಾರ ಗೌರವವಿತ್ತು . ಇದಕ್ಕೆ ಶೃಂಗೇರಿ ಗುರುಪೀಠದ ಬಗ್ಗೆ ಇವನು ನಡೆದುಕೊಂಡ ರೀತಿ ಮತ್ತು ಹಿಂದೂ ದೇವಾಲಯಗಳಿಗೆ ಬಿಟ್ಟ ದತ್ತಿಗಳು ಸಾಕ್ಷಿಗಳಿವೆ" ಎಂದಿದ್ದಾರೆ ಶ್ರೀನಿವಾಸ್ ರಾವ್ ಕೊರಟ್ಟಿ. ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಅರಮನೆಯ ಪಕ್ಕದಲ್ಲೆ ನಿಂತಿರುವ ರಂಗನಾಥ ಸ್ವಾಮಿಯ ದೇವಸ್ಥಾನ ಮತ್ತು ಬೆಂಗಳೂರಲ್ಲಿ ಅವನ ಕೋಟೆಯ ಹತ್ತಿರದಲ್ಲೇ ಇರುವ ವೆಂಕಟ್ರಮಣಸ್ವಾಮಿಯ ದೇವಸ್ಥಾನ ಅವನ ಧಾರ್ಮಿಕ ಸಹಿಷ್ಣುತೆಗೆ ಜೀವಂತ ಸಾಕ್ಷಿಗಳಾಗಿವೆ ಎಂದಿದ್ದಾರೆ ಶ್ರೀಮನ್ ಎಮ್. ಫಸುಲ್ಲಾ ಹಸನ್. ಮಲಬಾರಿನ ಮುಸ್ಲಿಮೇತರರ ಬಗ್ಗೆ ಟಿಪ್ಪು ಕ್ರೂರವಾಗಿ ನಡೆದುಕೊಂಡನಾದರೂ ಅದು ಮತ ಕಾರಣದಿಂದಲ್ಲ ಎನ್ನಲಾಗಿದೆ.

[೧]

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Tipu_Sultan