ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Vaishnavi venkatesh/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--Vaishnavi venkatesh (talk) ೧೧:೦೩, ೩೦ ಜನವರಿ ೨೦೧೪ (UTC)ವಿಶ್ವ ಸಂಸ್ಥೆಯ ಅಂಗಗಳು : ೧) ಸಾಮಾನ್ಯ ಸಭೆ : ಇದರಲ್ಲಿ ಸದಸ್ಯರಾಷ್ಟ್ರಗಳಿಗೆಲ್ಲಾ ಪ್ರಾತಿನಿಧ್ಯವಿದ್ದು, ಇದು ಸರ್ವಸದಸ್ಯ ಸಭೆಯಾಗಿರುತ್ತದೆ ರ್ರ್ ಸಭೆ ಭದ್ರತೆಗೆ ಸಂಬಂಧ ಪಟ್ಟ ವಿಷಯಗಳನ್ನು ಚರ್ಚಿಸುತ್ತದೆ.

೨) ಭದ್ರತಾ ಸಮಿತಿ : ಇವುಗಳಲ್ಲಿ ೫ ಚಿರ ಸದಸ್ಯರಾಷ್ಟ್ರಗಳು . ಬ್ರಿಟನ್, ಫ಼್ರಾನ್ಸ್, ರಷ್ಯಾ, ಅಮೇರಿಕ ಮತ್ತು ಚಿನಾ. ವಿಶ್ವಶಾಂತಿಯನ್ನು ಕಾಪಾಡುವುದೇ ಇವರ ಕರ್ತವ್ಯವಾಗಿದೆ.

೩)ಅಂತರರಾಷ್ಟೀಯ ನ್ಯಾಯಾಲಯ  : ಇದು ವಿಶ್ವಸಂಸ್ಥೆಯ ನ್ಯಾಯಾಂಗವಾಗಿದೆ. ಇದರ ಕೇಂದ್ರ ಕಛೇರಿಯು ನೆದರ್ಲ್ಯಾಂಡಿನ ದಿ ಹೇಗ್ ಪಟ್ಟಣದಲ್ಲಿದೆ. ಇದರಲ್ಲಿ ೧೫ ಮಂದಿ ನ್ಯಾಯಾಧೀಶರಿದ್ದಾರೆ . ಅವರನ್ನು ಭದ್ರತಾ ಸಮಿತಿ ಮತ್ತು ಸಾಮಾನ್ಯ ಸಭೆ ಚುನಾಯಿಸುತ್ತದೆ. ಅವರು ೯ ವರ್ಷಗಳ ಕಾಲ ಅಧಿಕಾರದಲ್ಲಿರಬಹುದು. ಅಂತರರಾಷ್ಟ್ರೀಯ ವಲಯದಲ್ಲಿ ಉಂಟಾಗುವ ನ್ಯಾಯಕ್ಕೆ ಸಂಬಂಧ ಪಟ್ಟ ವಿವಾದಗಳನ್ನು ತೀರ್ಮಾನಿಸುವ ಮತ್ತು ವಿಶ್ವಸಂಸ್ಥೆಯ ಅಂಗಗಳಿಗೆ ನ್ಯಾಯ ವಿಷಯಗಳಲ್ಲಿ ಅಭಿಪ್ರಾಯ ನೀಡುವ ಹಕ್ಕು ಅಂತರರಾಷ್ಟ್ರೀಯ ನ್ಯಾಯಲಯಕ್ಕಿದೆ.

೪) ಆರ್ಥಿಕ ಸಾಮಾಜಿಕ ಸಮಿತಿ : ಇದು ವಿಶ್ವಸಂಸ್ಥೆಯ ಅಂಗಗಳಲ್ಲಿ ಮುಖ್ಯವಾದುದು . ವಿಶ್ವಸಂಸ್ಥೆಯ ಪ್ರಣಾಳಿಕೆಯಲ್ಲಿ ವಿವರಿಸಲ್ಪಟ್ಟಿರುವ ಧ್ಯೇಯಗಳಲ್ಲಿ ಒಂದಾದ ಸಾಮಾಜಿಕ, ಆರ್ಥಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಬಗೆಹರಿಸಲು ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಯು ರೂಪುಗೊಂಡಿದೆ .ಇದರಲ್ಲಿ ೨೭ ಸದಸ್ಯ ರಾಷ್ಟ್ರಗಳಿವೆ . ಸಾಮನ್ಯ ಸಭೆ ಇದರ ಸದಸ್ಯ ರಾಷ್ಟ್ರಗಳನ್ನು ಚುನಾಯಿಸುತ್ತದೆ. ವಿಶ್ವದಲ್ಲಿ ಕಂಡುಬರುವ ಬಡತನ , ನಿರುದ್ಯೋಗ , ಹಸಿವು , ನಿರಕ್ಷರತೆ . ಮೌಢ್ಯ , ರೋಗರುಜನಾದಿಗಳು ಇನ್ನು ಮುಂತಾದ ಸಮಸ್ಯೆಗಳನ್ನು ನಿವಾರಿಸಲು ದ್ರುಢ ಪ್ರಯತ್ನಗಳನ್ನು ಕೈಗೊಳ್ಳುವುದು ಈ ಸಮಿತಿಯ ಉದ್ದೇಶವಾಗಿದೆ . ಈ ಉದ್ದೇಶವನ್ನು ಈಡೇಇಸುವ ಸಲುವಾಗಿ ಇದರ ಕೈಕೆಳಗೆ ಹಲವಾರು ವಿಶಿಷ್ಟ ಅಂಗಗಳಿವೆ . ಅವುಗಳಲ್ಲಿ "ವಿಶ್ವ ಆರೋಗ್ಯ ಸಂಸ್ಥೆ", ಅಂತರಾಷ್ರೀಯ ಕಾರ್ಮಿಕ ಸಂಸ್ಥೆ ,ಅಂತರಾಷ್ರೀಯ ನಿರಾಶ್ರಿತರ ಸಂಸ್ಥೆ, ಮುಖ್ಯವಾದುವು ಈ ವಿಶಿಷ್ಟ ಅಂಗಗಳೆಲ್ಲವೂ ವಿಶ್ವದ ಜನತೆಯ ಸುಖ, ಶಾಂತಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿವೆ .

೫) ಕಾರ್ಯಾಲಯ : ಇದು ವಿಶ್ವಸಂಸ್ಥೆಯ ದಿನನಿತ್ಯದ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಇದರ ಮೇಲ್ವಿಚಾರಣೆಯ ಜವಾಬ್ದಾರಿ ಮಹಾ ಕಾರ್ಯದರ್ಶಿಗೆ ಸೇರಿರುತ್ತದೆ. ಮಹಾ ಕಾರ್ಯದರ್ಶಿಯ ಕೈಕೆಳಗೆ ವಿವಿಧ ವರ್ಗದ ಅವಧಿಗೆ ಚುನಾಯಿಸಲಾಗಿತ್ತದೆ. ವಿಶ್ವದ ಘಟನೆಗಳನ್ನು ಪರಾಮರ್ಶಿಸಿ ಭದ್ರತಾ ಸಮಿತಿಗೆ ಮತ್ತು ಸಾಮಾನ್ಯ ಸಭೆಗೆ ವರದಿಮಾಡುವುದು ಮಹಾಕಾರ್ಯದರ್ಶಿಯ ಕರ್ತವ್ಯವಾಗಿರುತ್ತದೆ.ವಿಶ್ವಸಂಸ್ಥೆಯ ನಿರ್ಣಯಗಳನ್ನು ಜಾರಿಗೆ ತರುವುದು ಕಾರ್ಯಾಲಯದ ಹೊಣೆಗಾರಿಕೆಯಾಗಿದೆ. ಆದರೆ ಕಾರ್ಯಾಲಯದ ಅಧಿಕಾರವರ್ಗವು ವಿಪರೀತವಾಗಿದ್ದು, ಅದರ ಅಧಿಕಾರಿಗಳು ಅಧಿಕ ವೀತನವನ್ನು, ಪಡೆಯುತ್ತಿದ್ದು, ಅದರ ಅಧಿಕಾರಿಗಳು ಅಧಿಕ ವೇತನವನ್ನು ಪಡೆಯುತ್ತಿದ್ದು, ಒಂದು ವಿಧದಲ್ಲಿ ಅವರು ವಿಶ್ವಸಂಸ್ಥೆಗೆ ಹೊರೆಯಾಗಿದ್ದಾರೆ.

   ವಿಶ್ವಸಂಸ್ಥೆಯ  ಸಾಧನೆಗಳು : ೪೦ ವರ್ಷಕ್ಕೂ ಹೆಚ್ಚು ಜನ್ಮದಿನವನ್ನು ಆಚರಿಸಿ ಪ್ರಗತಿಪಥದಲ್ಲಿ ಸಾಗುತ್ತಿರುವ ವಿಶ್ವಸಂಸ್ಥೆ ತನ್ನ ಅಸ್ತಿತ್ವದ ಈ ಅವಧಿಯಲ್ಲಿ ಅನೇಕ ಮಹತ್ತರದ ಸಾಧನೆಗಳನ್ನು ಸಾಧಿಸಿದೆ . ಈ ಅವ್ಧಿಯಲ್ಲಿ ವಿಶ್ವವನ್ನು ಮತ್ತೊಂದು ಮಹಾಯುಧ್ದದ ವಿನಾಶದಿಂದ ರಕ್ಷಿಸುವುದು ನಿಜವಾಗಿಯೂ ವಿಶ್ವಸಂಸ್ಥೆಯ  ಮಹಾತ್ಸಾಧನೆಯಾಗಿದೆ. ಅದರ ನ್ಯೂನತೆಗಳು ಎಷ್ಟೇ ಕಂಡರೂ ಕೂಡ ವಿಶ್ವಶಾಂತಿಯನ್ನು ರಕ್ಷಿಸುವುದರಲ್ಲಿ ವಿಶ್ವಸಂಸ್ಥೆ ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ದ್ವಿತೀಯ ಮಹಾಯುಧ್ದವು ಬಿಟ್ಟುಹೋದ ಹಲವಾರು ರಾಜಕೀಯ ಸಮಸ್ಯೆಗಳನ್ನು ಅದು ಶಾಂತಿಯುತವಾಗಿ ಬಗೆಹರಿಸಿತು. ವಿಶ್ವದಲ್ಲಿ ಆಗಿಂದಾಗ್ಗೆ ತಲೆದೋರಿದ ಹಲವಾರು ಸಮಸ್ಯೆಗಳನ್ನು ಶಾಂತಿಯುತವಾಗಿ ಸಮ್ಧಾನದ ಮುಖಾಂತರವಾಗಿ ಬಗೆಹರಿಸುವುದರಲ್ಲಿಯೂ ಅದು ಯಶಸ್ವಿಯಾಗಿದೆ. ಉದಾಹರಣೆಗೆ ಕೊರಿಯಾ, ಸುಯೆಜ್ ಕಾಲುವೆ, ಕಾಂಗೋ, ಮುಂತಾದ ಸಮಸ್ಯೆಗಳನ್ನು ದೃಢವಾಗಿ ಎದುರಿಸಿ ಅವುಗಳಿಂದ ಉದಯಿಸಿದ ಹಾಲಾಹಲವನ್ನು ಶಾಂತಗೊಳಿಸುವುದರಲ್ಲಿ ವಿಶ್ವಸಂಸ್ಥೆ ಪ್ರಮುಖ ಪಾತ್ರವಹಿಸಿದುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಕೆಲವು ರಾಜಕೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ಶಕ್ತಿಬಣಗಳ ವಿತಂಡವಾದದಿಂದಾಗಿ ನಿರೀಕ್ಷಿಸಿದಷ್ಟು ಸಫಲತೆಯನ್ನು ಗಳಿಸಿಲ್ಲವೆಂಬುದೂ ನೈಜ ಸತ್ಯವಾಗಿದೆ. ಉದಾಹರಣೆಗೆ ಕಾಶ್ಮೀರ, ವಿಯೆಟ್ನಾಂ, ಮತ್ತು ಅರಬ್ ಮತ್ತು ಇಸ್ರೇಲಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆ ಹೆಚ್ಚು ಯಶಸ್ವಿಯಾಗಿಲ್ಲ. ಒಂದು ವಿಧದಲ್ಲಿ ನೋಡಿದರೆ ವಿಶ್ವಸಂಸ್ಥೆಯು ಅಮೆರಿಕ ಮತ್ತು ರಷ್ಯಾಗಳಲ್ಲಿ ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಶೀತಲ ಯುಧ್ದದ ಕಣವಾಗಿ ಮಾರ್ಪಟ್ಟಿದೆ. ಭದ್ರತಾ ಸಮಿತಿಯಲ್ಲಿ ಚಿರಸದಸ್ಯರಾಷ್ಟ್ರಗಳಿಗೆ ಕೊಟ್ಟಿರುವ "ವೀಟೊ" ಅಧಿಕಾರದ ವಿಶ್ವಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅಡಚಣೆಯನ್ನುಂಟುಮಾಡುತ್ತಿದೆ ಎಂಬ ಸಂದೇಹಮೂಡಿದೆ. ವಿಶ್ವಸಂಸ್ಥೆಯ ಆದೇಶಗಳನ್ನು ಮುರಿದು ತಮ್ಮ ಇಛ್ಚಾನುಸಾರವಾಗಿ ವರ್ತಿಸುವುದು ರಾಷ್ಟಗಳಲ್ಲಿ ಕಂಡುಬರುತ್ತಿದೆ. ಇಂತಹ ಪ್ರವೃತ್ತಿಯನ್ನು ತಡೆಗಟ್ಟಲು ಶಕ್ತರಾಷ್ತ್ರಗಳು ಪಣತೊಟ್ಟಲ್ಲಿ ವಿಶ್ವಸಂಸ್ಥೆ ಮತ್ತಷ್ಟು ಶಕ್ತಿಯುತವಾಗಿ ತನ್ನ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. " ಸಂಯುಕ್ತ ರಾಷ್ಟ್ರಸಂಸ್ಥೆ ಇಂದು ಅನೈಕ್ಯ ರಾಷ್ಟ್ರಸಂಸ್ಥೆಯಾಗಿ, ಭದ್ರತಾಸಮಿತಿ ಅಭದ್ರತಾ ಸಮಿತಿಯಾಗಿ ಕಾಣುತ್ತಿರಬಹುದು. ಆದರೆ ಈ ಸಂಸ್ಥೆಯಿಲ್ಲದೇ ಹೋಗಿದ್ದಲ್ಲಿ ವಿಶ್ವದ ಇತಿಹಾಸದ ಗತಿಯೇ ಬದಲಾಯಿಸುತ್ತಿತ್ತು ಎಂಬ ಹೇಳಿಕೆಯಲ್ಲಿ ಸತ್ಯವಿದೆ. 
   ರಾಜಕೀಯ ವೇಯಕ್ಕಿಂತಲೂ ಮಾನವ ಜನಾಂಗಕ್ಕೆ ಸುಖ ಸೌಲಭ್ಯಗಳನ್ನೂ ದೊರೆಸಿಕೊಡುವುದರಲ್ಲಿ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯು ಮಹಾತ್ಸಾಧನೆಗಳನ್ನು ಸಾಧಿಸಿದೆ. ವಿಶ್ವಸಂಸ್ಥೆಯು ತನ್ನ ವಿಶಿಷ್ಟ ಅಂಗಗಳ ಮುಖಾಂತರವಾಗಿ ಮಾನವ ಜನಾಂಗದ ಮಹಾ ಶತೃಗಳಾದ ಬಡತನ, ಹಸಿವು, ನಿರಕ್ಷರತೆ, ರೋಗಗಳ ವಿರುದ್ಧವಾಗಿ ಮಹತ್ತರವಾದ ಹೋರಾಟವನ್ನೇಜರುಗಿಸುತ್ತಿದೆ. ವಿಶ್ವಸಂಸ್ಥೆಯ  ಮಾನವ ಕಲ್ಯಾಣ ಕಾರ್ಯಕ್ರಮದಗಳು ವಿಶ್ವದ  ಬಹುಸಂಖ್ಯಾತ ಜನರಿಗೆ ವರವಾಗಿ ಪರಿಣಮೆಸುತ್ತಿದೆ. ವಿಶ್ವದ ಜನತೆಯ ಸರ್ವತೋಮುಖ ಅಭಿವೃದ್ಧಿಯಿಂದ ಮಾತ್ರವೇ ವಿಶ್ವಶಾಂತಿಯನ್ನು ಭದ್ರಬುನಾದಿಯ ಮೇಲೆ ಕಟ್ಟಬಹುದೆಂಬುದು ಇದರ ಆಶೊತ್ತರಗಳಾಗಿವೆ ಇದನ್ನು ಈಡೇರಿಸಲು ಅದು ಅವಿರತವಾಗಿ ಶ್ರಮಿಸುತ್ತಿದೆ. ಇಂದಿನ ವಿಶ್ವದ ಮುಂದಿರುವ ಸಮಸ್ಯೆಗಳು ಅಸಂಖ್ಯಾತವಾದುವು. ಅವುಗಳಲ್ಲಿ ಪ್ರಮುಖವಾದವು ಶಾಂತಿ ಮತ್ತು ಸುಭದ್ರತೆ. ವಿಜ್ನಾನದ ನಾಗಾಲೋಟದಿಂದಾಗಿ ವಿಶ್ವದ ಜನತೆ ಇಂದು ಅಳಿವು ಮತ್ತು ಉಳಿವಿನ ಮಹಾ ಸಮಸ್ಯೆಯನ್ನು ಎದುರಿಸಬೇಕಾಗಿದೆ . ಮೂರನೆಯ ಮಹಾ ಯುದ್ಧವಾದಲ್ಲಿ ಮಾನವಜನಾಂನ್ ಮತ್ತು ಅದರ ಭವ್ಯವಾದ ನಾಗರಿಕತೆಯ ಮಹಾ ಸಾಧನೆಗಳು ನಿರ್ನಾಮವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಸಂದಿಗ್ಧ ಸಮಯದಲ್ಲಿ ವಿಶ್ವದ ಜನತೆಗೆ ಶಾಂತಿ ಮತ್ತು ಸುಭದ್ರತೆಯ ಅಭಯದ ಆಶಾಕಿರಣವಾಗಿರುವ ಏಕಮಾತ್ರ ಸಂಸ್ಥೆ ವಿಶ್ವಸಂಸ್ಥೆಯಾಗಿದೆ. ವಿಶ್ವಸಂಸ್ಥೆಯು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ವಿಶ್ವದ ಎಲ್ಲಾ ನಾಯಕರ ಮತ್ತು ರಾಷ್ಟ್ರಗಳ ಸಹಕಾರ ಮತ್ತು ಬೆಂಬಲ ಅತ್ಯಾವಶ್ಯಕವಾಗಿದೆ.

Start a discussion about ಸದಸ್ಯ:Vaishnavi venkatesh/sandbox

Start a discussion