ಸದಸ್ಯ:Sagarkotebangalore/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಸ್ಲಾಮಿಕ್ ಸ್ಟೇಟ್ ಅಥವ ಐಸಿಸ್ ( ISIS ) ಎಂದು ಕರೆಯಲ್ಪಡುವಂತಹ ಸಂಘಟನೆಯು ಒಂದು ಜಾಗತಿಕ ಉಗ್ರವಾದಿ ಸಂಘಟನೆ. ಈ ಸಂಘಟನೆಯನ್ನು ಐಸಿಲ್ ( ISIL ) ಎಂದು ಕೂಡ ಜನರು ಕರೆಯುತ್ತಾರೆ. ಈ ಸಂಘಟನೆಯು ಜಗತ್ತಿನ ಅತ್ಯಂತ ಕ್ರೂರ ಸಂಘಟನೆಗಳಲ್ಲಿ ಒಂದು. ಈ ಸಂಘಟನೆಯು ಇರಾಕ್ ಮತ್ತು ಸಿರಿಯಾ ದೇಶಗಳ ಹಲವು ಪ್ರದೇಶಗಳನ್ನು ನಿಯಂತ್ರಿಸುತ್ತದೆ ಮತ್ತು ಪೂರ್ವ ಲಿಬಿಯಾದ ಈಜಿಪ್ಟ್ನ ಸಿನಾಯ್ ಪರ್ಯಾಯದ್ವೀಪ ಮತ್ತು ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಇತರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಈ ಸಂಘಟನೆಯ ಚರ್ಚೆಯು ಜಗತ್ತಿನ ಹಲವಾರು ದೇಶಗಳಲ್ಲಿ ಆಗುತ್ತಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಯುದ್ಧ ಸಂಬಂಧಿತ ಅಪರಾಧಗಳಿಗಾಗಿ ಈ ಸಂಘಟನೆಯನ್ನು ಹೊಣೆಗಾರರನ್ನಾಗಿ ಮಾಡಿದೆ , ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಒಂದು ಐತಿಹಾಸಿಕ ಪ್ರಮಾಣದಲ್ಲಿ ಗುಂಪು ಜನಾಂಗೀಯ ಶುದ್ಧೀಕರಣ ವರದಿ ಮಾಡಿದೆ. ಯುನೈಟೆಡ್ ನೇಶನ್ಸ್, ಯುರೋಪಿಯನ್ ಯೂನಿಯನ್ , ಯುನೈಟೆಡ್ ಕಿಂಗ್ಡಮ್ , ಯುನೈಟೆಡ್ ಸ್ಟೇಟ್ಸ್ , ಆಸ್ಟ್ರೇಲಿಯಾ, ಕೆನಡಾ , ಇಂಡೋನೇಷ್ಯಾ, ಮಲೇಷ್ಯಾ, ಟರ್ಕಿ , ಸೌದಿ ಅರೆಬಿಯ, ಯುಎಇ , ಈಜಿಪ್ಟ್, ಭಾರತ , ಮತ್ತು ರಶಿಯಾ ಈ ಸಂಘಟನೆಯನ್ನು ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಶಿಸಿವೆ. ಸುಮಾರು 60 ದೇಶಗಳು ನೇರವಾಗಿ ಅಥವಾ ಪರೋಕ್ಷವಾಗಿ ISIL ವಿರುದ್ಧ ಯುಧ್ಧ ಮಾಡುತ್ತಿವೆ.

ಆರಂಭದ ದಿನಗಳು[ಬದಲಾಯಿಸಿ]

ಈ ಸಂಘಟನೆಯು ೨೦೦೨ರಲ್ಲಿ ತನ್ನ ಆರಂಭವನ್ನು ಕಂಡಿತು. ಅಬು ಮುಸಬ್ ಅಲ್ ಜಾರ್ಕ್ವಾವಿ ಎನ್ನುವವನು ೨೦೦೨ರಲ್ಲಿ ತವಹಿದ್ ವಲ್ ಜಿಹಾದ್ ಎಂಬ ಸಂಘಟನೆಯನ್ನು ಪ್ರಾರಂಭಿಸಿದನು. ಈ ವ್ಯಕ್ತಿಯು ಜಾರ್ಡನ್ ದೇಶದ ನಾಗರಿಕನಾಗಿದ್ದ. ಈ ತವಹಿದ್ ವಲ್ ಜಿಹಾದ್ ಸಂಘಟನೆಯನ್ನು ಇರಾಖಿನ ಉತ್ತರ ಭಾಗದಲ್ಲಿ ಪ್ರಾರಂಭಿಸಲಾಯಿತು. ಅಲ್-ಜಾರ್ಕ್ವಾವಿಯ ಗುಂಪು ಶಕ್ತಿಶಾಲಿಯಾಗಿ ಬೆಳೆದು ಹೆಚ್ಚಿನ ಜಿಹಾದಿಗಳನ್ನು ಆಕರ್ಷಿಸಿತು ಮತ್ತು ಅಕ್ಟೋಬರ್ 2004 ರಲ್ಲಿ ಅಧಿಕೃತವಾಗಿ ತನಜಿಮ್ ಖೈದತ್ ಅಲ್ ಜಿಹಾದ್ ಫಿ ಬಿಲಾದ್ ಅಲ್ ರಫದಿಯಾ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ಒಸಾಮಾ ಬಿನ್ ಲಾಡೆನ್ನಿನ ಅಲ್ ಖೈದಾ ಸಂಘಟನೆಗೆ ತನ್ನ ಸಹಾಯವನ್ನು ಮತ್ತು ಸಹಕಾರವನ್ನು ಘೋಶಿಸಿತು. ಜುಲೈ 2005 ರಲ್ಲಿ ಅಲ್-ಜಾರ್ಕ್ವಾವಗೆ ಪತ್ರವೊಂದರಲ್ಲಿ ಅಲ್ ಖೈದಾ ಉಪ ನಾಯಕ ಅಯ್ ಮನ್ ಅಲ್ ಜವಾಹರಿಯು ಕಾಲೀಫಗಿರಿಯನ್ನು ಹರಡಿಸಲು ಇರಾಕಿನಿಂದ ಅಮೇರಿಕಾದ ಪಡೆಗಳು ಹೊರದೂಡಿ ಇಸ್ಲಾಮಿಕ್ ಅಧಿಪತ್ಯವನ್ನು ಸ್ಥಾಪಿಸಬೇಕೆಂದು ಕೇಳಿಕೊಂಡಿದ್ದನು. ಇರಾಕ್ ಯುದ್ಧವನ್ನು ವಿಸ್ತರಿಸಲು ಒಂದು ನಾಲ್ಕು ಹಂತದ ಯೋಜನೆಯನ್ನು ರೂಪಿಸಲಾಯಿತು. ಇಸ್ರೇಲ್ ದೇಶವನ್ನು ಧ್ವಂಸ ಮಾಡುವುದು ಕೂಡ ಹಲವಾರು ಇಸ್ಲಾಮಿ ಸಂಘಟನೆಗಳ ಉದ್ದೇಶವಾಗಿತ್ತು. ೨೦೦೨ರಲ್ಲಿ ಪ್ರಾರಂಭವಾದ ತವಹಿದ್ ವಲ್ ಜಿಹಾದ್ ಮುಂದೆ ಇಸ್ಲಾಮಿಕ್ ಸ್ಟೇಟಾಗಿ ಹೊರಹೊಮ್ಮಿತು. ಕೆಲವು ಸದಸ್ಯರನ್ನು ಹೊಂದಿದ್ದ ಸಂಘಟನೆಯು ಒಂದು ದೊಡ್ಡ ಸಂಘಟನೆಯಾಗಿ ಮೂಡಿಬಂದಿತು.

ಗುರಿಗಳು[ಬದಲಾಯಿಸಿ]

ಈ ಸಂಘಟನೆಯ ಮುಖ್ಯ ಉದ್ಡೇಶವು ಜಾಗತಿಕ ಇಸ್ಲಾಮಿ ರಾಜ್ಯದ ಸ್ಥಾಪನೆ. ಜಗತ್ತಿನನ್ನು ಒಂದು ಕ್ಯಾಲಿಫೇಟಾಗಿ ಪರಿವರ್ತಿಸುವುದು ಈ ಸಂಘಟನೆಯ ಮುಖ್ಯವಾದ ಗುರಿ. ಮೊದಲಿಗೆ ಇರಾಕ್ ಮತ್ತು ಸಿರಿಯಾ ದೇಶಗಳ ಮೇಲೆ ಅಧಿಪತ್ಯವನ್ನು ಸಾಧಿಸಿ ನಂತರ ಜಗತ್ತಿನ ಇತರೆ ದೇಶಗಳ ಮೇಲೆ ಹಲ್ಲೆಯನ್ನು ಮಾಡುವುದು ಈ ಸಂಘಟನೆಯ ಮುಖ್ಯವಾದ ತಂತ್ರ. ಇಸ್ಲಾಮಿನ ಸುನ್ನಿ ಜನಾಂಗದ ರಕ್ಷಣೆಯನ್ನು ಮಾಡುವುದಾಗಿ ಐಸಿಸ್ ಹೇಳಿದೆ. ಈ ಸಂಘಟನೆಯು ಶಿಯಾ ಜನಾಂಗದ ಮತ್ತು ಉಳಿದ ಧರ್ಮಗಳ ವಿರುದ್ಧ ಹೇಳಿಕೆಗಳನ್ನು ಕೊಡುತ್ತಾ ಬಂದಿದೆ. ಐಸಿಸ್ ಒಂದು ಕಾಲೀಫಗಿರಿಯನ್ನು ಒಂದು ಸರ್ವೋಚ್ಛ ನಾಯಕ - ಕಲೀಫ್ - ಮುಹಮ್ಮದ್ ಎಂಬ ಉತ್ತರಾಧಿಕಾರಿಯ ನೇತೃತ್ವದಲ್ಲಿ ಸ್ಥಾಪಿಸಬೇಕು ಎಂದು ಬಯಸಿದೆ. ಜೂನ್ ೨೦೧೪ರಲ್ಲಿ, ಐಸಿಸ್ ಒಂದು ದಾಖಲೆಯನ್ನು ಪ್ರಕಟಿಸಿತು, ಇದರಲ್ಲಿ ಇದು ಮತ್ತೆ ಮುಹಮ್ಮದರನ್ನು ಅದರ ನಾಯಕನಾಗಿ ಮತ್ತು ಅಬು ಬಕ್ರ್ ಅಲ್ ಬಾಗ್ದಾದಿಯ ವಂಶಾವಳಿಯನ್ನು ತನ್ನ ಸೇನಾಪತಿಯಾಗಿ ಗುರುತಿಸಿದ್ದನ್ನು ನಾವು ನೋಡಬಹುದು. ಜೂನ್ ೨೯ರಂದು ಹೊಸ ಕ್ಯಾಲಿಫೇಟ್ ಘೋಷಿಸಿದ ಮೇಲೆ , ಗುಂಪು ತನ್ನ ಕಲೀಫ್ ಎಂದು ಅಲ್ ಬಾಗ್ದಾದಿಯನ್ನು ನೇಮಕ ಮಾಡಿತು. ಕಲೀಫರು ಎಲ್ಲಾ ಧರ್ಮನಿಷ್ಠ ಇಸ್ಲಾಂ ಧರ್ಮದವರು ವಿಶ್ವಾದ್ಯಂತ ಇಸ್ಲಾಮಿಕ್ ತತ್ವದ (ಶರಿಯಾ) ಪ್ರಕಾರ ಬದುಕಬೇಕೆಂದು ಕೋರುತ್ತಾರೆ. ೨೦೧೪ರಲ್ಲಿ ಐಸಿಸ್ ಸಂಘಟನೆಯು ಸಿರಿಯಾ ಮತ್ತು ಅಮೇರಿಕಾದ ಸೈನಿಕರನ್ನು ಮುಸಲ್ಮಾನರ ನೆಲದಲ್ಲಿ ಅವಮಾನಿಸುವುದಾಗಿ ಮತ್ತು ವೈಟ್ ಹೌಸ್ ಮೇಲೆ "ಅಲ್ಲನ ಧ್ವಜ" ಹಾರಿಸುವುದಾಗಿ ಹೇಳಿಕೆಯನ್ನು ಕೊಟ್ಟಿತು. ಈ ಸಂಘಟನೆಯು ಟರ್ಕಿಯಲ್ಲಿ ಹರಿಯುವ ಒಂದು ಅಣೆಕಟ್ಟನ್ನು ತೆರೆಯದಿದ್ದರೆ ಮತ್ತು ಸಿರಿಯಾ ಮತ್ತು ಇರಾಕ್ ದೇಷಗಳಿಗೆ ನೀರು ಸಿಗದಿದ್ದರೆ ಇಸ್ತಾಂಬುಲ್ "ಬಿಡುಗಡೆ" ಬೆದರಿಕೆಯನ್ನು ಹರಡಿಸಿತು. ಅಲ್ಲನ ಹೋರಾಟಕ್ಕಾಗಿ ಹೊಸ ಜಿಹಾದಿಗಳನ್ನು ಈ ಸಂಘಟನೆಯು ತಯಾರು ಮಾಡುತ್ತಲೇ ಇದೆ. ಅನೇಕ ಅಮಾಯಕ ಯುವಕರನ್ನು ಈ ಸಂಘಟನೆಯು ಭಯೋತ್ಪಾದನೆಯ ಕಡೆಗೆ ಕರೆದೊಯ್ಯುತ್ತಿದೆ. ದೂರದರ್ಶನದ ಮೂಲಕ ಈ ಸಂಘಟನೆಯು ತನ್ನ ಗುರಿಗಳನ್ನು ಜಗತ್ತಿಗೆ ತಿಳಿಸುತ್ತಾ ಬಂದಿದೆ. ಟ್ವಿಟರ್, ಯೂ ಟ್ಯೂಬ್ ಮತ್ತು ಫೇಸ್ಬುಕ್ ಮುಂತಾದ ಸಾಮಾಜಿಕ ತಂಗುದಾಣಗಳ ಮೂಲಕ ಐಸಿಸ್ ತನ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತಿದೆ.

ಪ್ರಾದೇಶಿಕ ನಿಯಂತ್ರಣ[ಬದಲಾಯಿಸಿ]

ಇರಾಕ್ ಮತ್ತು ಸಿರಿಯಾದಲ್ಲಿ, ಐಸಿಸ್ ತನ್ನ ಹಕ್ಕಿನ ಪ್ರದೇಶಗಳನ್ನು ಉಪವಿಂಗಡಿಸಿ ಆಳುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಗವರ್ನರೇಟ್ ಅಡಿಯಲ್ಲಿರುವ ಅನೇಕ ಪ್ರದೇಶಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟು ಕೊಂಡಿದೆ. ಇದು , ವಿಸ್ತರಣೆಗಳನ ಒಂದು ಸರಣಿಯ ನಂತರ ಈ ವಿಭಾಗಗಳನ್ನು ವಿಲಾಯಾ ಎಂದು ಕರೆಯಲು ಪ್ರಾರಂಭಿಸಿತು. ಇದು ಇರಾಕ್, ಸಿರಿಯಾ , ಸಿನೈ , ಮತ್ತು ಪೂರ್ವ ಲಿಬಿಯಾದ ಪ್ರಾಂತಗಳನ್ನು ಮತ್ತು ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಒಟ್ಟಾಗಿ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದೆ. ಐಸಿಸ್ ಸಂಘಟನೆಯು ತನ್ನ ಸಹ ಪ್ರಾಂತ್ಯಗಳಾಗಿ ಆಲ್ಜೀರಿಯಾ , ಲೆಬನಾನ್ , ಜೋರ್ಡಾನ್ , ಸೌದಿ ಅರೇಬಿಯಾ, ಯೆಮೆನ್ ಮತ್ತು ಟರ್ಕಿ ಮುಂತಾದ ದೇಷಗಳನ್ನು ಗುರುತಿಸಿದೆ. ಆದರೆ ಇದು ಈ ಪ್ರದೇಶಗಳಲ್ಲಿ ಯಾವ ಶಕ್ತಿಯನ್ನೂ ಹೊಂದಿಲ್ಲ. ಒಟ್ಟಾಗಿ ನೋಡುವುದಾದರೆ ಐಸಿಸ್ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಪ್ರದೇಷಗಳು ಇಂಗ್ಲೆಂಡಿಗಿಂತಲೂ ಹೆಚ್ಚು ವಿಸ್ತಾರವನ್ನು ಹೊಂದಿದೆ.

ಭಾರತದಲ್ಲಿ ಐಸಿಸ್ ಉಪಸ್ಥಿತಿ[ಬದಲಾಯಿಸಿ]

ಭಾರತದ ಕೆಲವು ಯುವಕರನ್ನು ಐಸಿಸ್ ತನ್ನ ಕುತಂತ್ರಗಳ ಮೂಲಕ ತನ್ನ ಸೇವೆಗಾಗಿ ಬಳಿಸುತ್ತಿದೆ. ಬಡ ಯುವಕರನ್ನು ಧರ್ಮದ ಹೆಸರಲ್ಲಿ ಹೋರಾಡುವಂತೆ ಹುರಿದುಂಬಿಸುತ್ತಿದೆ. ಭಾರತದ ಕೆಲವು ರಾಜ್ಯಗಳ ಯುವಕರನ್ನು ಐಸಿಸ್ ಸಾಮಾಜಿಕ ತಂಗುದಾಣಗಳ ಮೂಲಕ ತನ್ನೆಡೆ ಸೆಳೆಯುತ್ತಿದೆ. ಪಾಕಿಸ್ತಾನಿನಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಭಾರತ ವಿರೋಧಿ ಧೋರಣೆ ಹೊಂದಿದ್ದ ಹಾಗೂ ಐಸಿಸ್ ಉಗ್ರರ ಪರ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಸುಮಾರು 32 ವೆಬ್ ಸೈಟ್ ಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಂದ್ ಮಾಡಿದೆ. ಭಯೋತ್ಪಾದನಾ ನಿಗ್ರಹ ತಂಡದ ಸಲಹೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. 32 ವೆಬ್ ಸೈಟ್ ಗಳ ಯುಆರ್ಎಲ್ಸ್, ಫೈಲ್ಸ್, ವಿಡಿಯೋ, ವೆಬ್ ಸೈಟ್ ಶೇರಿಂಗ್ ಸೋರ್ಸ್ ಕೋಡ್ ಗಳನ್ನು ಬಂದ್ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೯ರ ಅನ್ವಯ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2009ರ ಅಡಿಯಲ್ಲಿ ನಿಷೇಧಿಸಿರುವುದಾಗಿ ಟೆಲಿಕಾಂ ಇಲಾಖೆ ಹೇಳಿಕೆಯಲ್ಲಿ ವಿವರಿಸಿದೆ. ದೇಶದ ಸಮಗ್ರತೆ ಮತ್ತು ಏಕತೆಯ ದೃಷ್ಟಿಯಿಂದ ಇಂತಹ ದೇಶ ವಿರೋಧಿ ನಿಲುವಿನ ಮಾಹಿತಿಯನ್ನು ಬಂದ್ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಕೊಟ್ಟಿತ್ತು. ಗಣರಾಜ್ಯೋತ್ಸವದಂದು ದೇಶದಲ್ಲಿ ಲಷ್ಕರ್ ಸಂಘಟನೆ ದಾಳಿ ನಡೆಸಲಿದೆ ಎನ್ನುವ ಮಾಹಿತಿ ಇರುವಾಗಲೇ ಐಸಿಸ್ ಸಂಘಟನೆ ಸಹ ದಾಳಿ ಮಾಡುವುದಾಗಿ ಹೇಳಿಕೆ ನೀಡಿತ್ತು. ಗಣರಾಜ್ಯೋತ್ಸವ ದಿನದಂದು ಭಯೋತ್ಪಾದಕ ದಾಳಿ ಮಾಡಲಾಗುವುದೆಂಬ ಐಸಿಸ್ ಎಚ್ಚರಿಕೆಯ ಬರಹವನ್ಮುಂನುಬೈ ವಿಮಾನ ನಿಲ್ದಾಣದ ಪುರುಷರ ಶೌಚಾಲಯ ಒಂದರ ಗೋಡೆಯಲ್ಲಿ ಬರೆಯಲಾಗಿತ್ತು. ಗೋಡೆಯಲ್ಲಿ "26/01/2015" ಈಸ್ ಬಾಮ್ ಓಕೆ? ಎನ್ನುವ ಬರಹ ಕಂಡು ಬಂದಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಶೌಚಾಲಯದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದರು. ಬೆಂಗಳೂರು ಪೊಲೀಸರಿಂದ ಬಂಧಿತನಾಗಿದ್ದ ಐಸಿಸ್ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ಬೆಂಗಳೂರು ಹಾಗೂ ಕೋಲ್ಕತ್ತಾದ ವಿವಿಧ ಬ್ಯಾಂಕುಗಳಲ್ಲಿ ಒಟ್ಟು 18 ಖಾತೆಗಳನ್ನು ಹೊಂದಿದ್ದು ಇವುಗಳ ಮೂಲಕ ಕೋಟ್ಯಾಂತರ ರೂ. ವ್ಯವಹಾರ ನಡೆಸಿರುವ ಅಂಶ ಬೆಳಕಿಗೆ ಬಂದಿತ್ತು. ಬಂಧಿತ ಉಗ್ರನಿಂದ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಪೊಲೀಸರಿಗೆ ಆನೇಕ ಮಹತ್ವದ ಅಂಶಗಳು ತಿಳಿದುಬಂದಿತ್ತು ಮತ್ತು ಮೆಹದಿ ಹೊಂದಿದ್ದ ಬ್ಯಾಂಕ್ ಖಾತೆಗಳಿಗೆ ವಿದೇಶಗಳಿಂದ ಅದರಲ್ಲೂ ದುಬೈನಿಂದ ಭಾರೀ ಮೊತ್ತದ ಹಣ ಜಮಾವಣೆಯಾಗಿರುವುದು ತಿಳಿದುಬಂದಿತ್ತು. ಮತ್ತೊಂದು ಪ್ರಮುಖ ಅಂಶವೆಂದರೆ ಈತ ಲಂಡನ್ ಮೂಲದ ನ್ಯೂಸ್ ಚಾನೆಲ್ ಗೆ ಸಂದರ್ಶನ ನೀಡುವ ಕೆಲವೇ ದಿನಗಳಿಗೆ ಮುಂಚೆ ಈ ಎಲ್ಲಾ ಬ್ಯಾಂಕುಗಳಲ್ಲಿದ್ದ ಹಣವನ್ನು ಪೂರ್ಣವಾಗಿ ಖಾಲಿ ಮಾಡಿದ್ದು, ಆ ಖಾತೆಗಳಲ್ಲಿ ಝೀರೋ ಬ್ಯಾಲೆನ್ಸ್ ತೋರಿಸುತ್ತಿ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಕೋಲ್ಕತ್ತಾ ಮೂಲಕ ಮೆಹದಿ ಪೀಣ್ಯದಲ್ಲಿರುವ ಖಾಸಗಿ ಬ್ಯಾಂಕ್ ಒಂದರಲ್ಲಿ ಅಧಿಕೃತ ಆಕೌಂಟ್ ಹೊಂದಿದ್ದ, ಈ ಖಾತೆಯಲ್ಲಿ ಆತನ ಸಂಬಳದ ಹಣ ಮಾತ್ರ ಜಮಾವಣೆಯಾಗಿದೆಯೇ ಹೊರತು ಈ ಖಾತೆಯನ್ನು ತನ್ನ ಉಗ್ರ ಸಂಘಟನೆಯ ವ್ಯವಹಾರಕ್ಕೆ ಬಳಕೆಯಾಗದಂತೆ ಆತ ಎಚ್ಚರಿಕೆ ವಹಿಸಿದ್ದ.

ಬೇರೆ ದೇಶಗಳಲ್ಲಿ ಐಸಿಸ್ ಉಪಸ್ಥಿತಿ[ಬದಲಾಯಿಸಿ]

ಕೈರೊದಲ್ಲಿ ಸಿರಿಯಾ ಮತ್ತು ಇರಾಕ್ನಲ್ಲಿ ಪ್ರಬಲವಾಗಿರುವ ಐಸಿಸ್ ಜಿಹಾದಿಗಳು ನಾಲ್ಕು ಬಾರಿ ಬಲಿ ಪಡೆದರು. ನಿರಾಶ್ರಿತರಿಗೆ ನೆರವಾಗಲು ಬ್ರಿಟನ್ನಿಂದ ಸಿರಿಯಾಗೆ ತೆರಳಿ ಜಿಹಾದಿಗಳಿಗೆ ಸೆರೆ ಸಿಕ್ಕಿದ್ದ ಅಲನ್ ಹೆನ್ನಿಂಗ್ ಎಂಬಾತನ ತಲೆ ಕಡಿದಿರುವ ದೃಶ್ಯಾವಳಿ ಶುಕ್ರವಾರ ಬಿಡುಗಡೆಯಾಗಿದೆ. 'ಅಮೆರಿಕ ಮತ್ತು ಅದರ ಮಿತ್ರರಿಗೆ ಮತ್ತೊಂದು ಸಂದೇಶ' ಎಂಬ ಶೀರ್ಷಿಕೆಯ ಈ ವಿಡಿಯೊ ಉಗ್ರರ ಖಾಸಗಿ ವೆಬ್ಸೈಟ್ನಲ್ಲಿ ಲಭ್ಯವಿದೆ. ಮುಖಮುಚ್ಚಿಕೊಂಡಿರುವ ಉಗ್ರನೊಬ್ಬ ಹೆನ್ನಿಂಗ್ ಅವರನ್ನು ಪರಿಚಯಿಸಿದ ನಂತರ ಶಿರಚ್ಛೇದ ಮಾಡುವ ದೃಶ್ಯ ಇದರಲ್ಲಿ ಸೆರೆಯಾಗಿದೆ. ಈ ಉಗ್ರನ ಭಾಷೆಯ ಶೈಲಿ ಬ್ರಿಟನ್ದ್ದಾಗಿದೆ. ಅಮೆರಿಕದ ಮತ್ತೊಬ್ಬ ಒತ್ತೆಯಾಳು ಪೀಟರ್ ಕೆಸಿಂಗ್ರನ್ನು ಪರಿಚಯಿಸುತ್ತಿರುವ ದೃಶ್ಯವೂ ಈ ವಿಡಿಯೊದಲ್ಲಿದೆ. ಸಿರಿಯಾ ಮತ್ತು ಇರಾಕ್ ಮೇಲೆ ಬ್ರಿಟನ್ ಹಾಗೂ ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ಕೂಡಲೇ ನಿಲ್ಲಿಸದೆ ಹೋದರೆ ಈತನ ತಲೆಯನ್ನೂ ಕಡಿಯುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ದೃಶ್ಯಾವಳಿಯ ಅಸಲಿಯತ್ತನ್ನು ಪರೀಕ್ಷಿಸುತ್ತಿರುವುದಾಗಿ ಬ್ರಿಟನ್ ಮತ್ತು ಅಮೆರಿಕ ಹೇಳಿವೆ. ಸುನ್ನಿ ಜಿಹಾದಿಗಳ ಮೇಲೆ ಅಮೆರಿಕ ಈಗಾಗಲೇ ವಾಯು ದಾಳಿ ಆರಂಭಿಸಿದೆ. ಅಮೆರಿಕದ ಜತೆ ಕೈ ಜೋಡಿಸಲು ಬ್ರಿಟನ್ ಸಂಸತ್ತು ಕೂಡ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು. ಇದನ್ನು ಖಂಡಿಸಿರುವ ಉಗ್ರರು, ವಾರದ ಹಿಂದೆ ಬ್ರಿಟನ್ ಮೂಲದ ಡೇವಿಡ್ ಹೇನ್ಸ್ ಎಂಬ ನಿರಾಶ್ರಿತರ ಸಹಾಯಕನ ತಲೆ ಕಡಿದಿದ್ದರು. ಅಮೆರಿಕದ ಪತ್ರಕರ್ತರಾದ ಜೇಮ್ಸ್ ಪೊಲೆ ಮತ್ತು ಸ್ಟೀವನ್ ಸೊಟ್ಲಾಫ್ರ ಶಿರಚ್ಛೇದ ಮಾಡಿದ್ದರು. ಡೇವಿಡ್ ಹೇನ್ಸ್ನ ರಕ್ತ ನಿಮ್ಮ ಕೈಗೆ ಇನ್ನೂ ಅಂಟಿಕೊಂಡಿದೆ ಕ್ಯಾಮೆರಾನ್ (ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್). ಅಲನ್ ಹೆನ್ನಿಂಗ್ನನ್ನೂ ಈಗ ಕತ್ತರಿಸಲಾಗುತ್ತದೆ. ಆದರೆ ಈತನ ರಕ್ತ ಬ್ರಿಟನ್ ಸಂಸತ್ತಿನ ಕೈಗಳಿಗೆ ಅಂಟಿಕೊಳ್ಳಲಿದೆ, ಎಂದು ಹೆನ್ನಿಂಗ್ ಅವರ ತಲೆ ಕಡಿಯುವ ಮುಂಚೆ ಕೊಲೆಗಾರ ಹೇಳಿದ್ದನು. ಹೆನ್ನಿಂಗ್ ಅವರು ಬ್ರಿಟನ್ನಲ್ಲಿ ಟಾಕ್ಸಿ ಚಾಲಕರಾಗಿದ್ದರು. ಬಳಿಕ ಇವರು ಸಿರಿಯಾದ ನಿರಾಶ್ರಿತರ ಪುನರ್ವಸತಿ ಕಾರ್ಯದಲ್ಲಿ ಕೈ ಜೋಡಿಸಿದ್ದರು. 2013ರಲ್ಲಿ ಐಸಿಸ್ ಉಗ್ರರ ಒತ್ತೆಯಾಳಾಗಿದ್ದರು. ತನ್ನ ಪತಿಯನ್ನು ಬಿಡುವಂತೆ ಹೆನ್ನಿಂಗ್ ಪತ್ನಿ ಬಾರ್ಬರಾ ಅವರು ಬಹಳ ಬೇಸರದಿಂದ ಮತ್ತು ಭಯದಿಂದ ಉಗ್ರರಿಗೆ ಮನವಿ ಮಾಡಿದ್ದರು.

ಟಿಪ್ಪಣಿಗಳು[ಬದಲಾಯಿಸಿ]

1.) http://tonyblairfaithfoundation.org/religion-geopolitics/commentaries/backgrounder/what-isis

2.) https://en.wikipedia.org/wiki/Islamic_State_of_Iraq_and_the_Levant#As_Islamic_State_of_Iraq_.282006.E2.80.932013.29

3.)http://www.udayavani.com/kannada/news/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF/17732/%E0%B2%AD%E0%B2%BE%E0%B2%B0%E0%B2%A4-%E0%B2%B5%E0%B2%BF%E0%B2%B0%E0%B3%8B%E0%B2%A7%E0%B2%BF-%E0%B2%90%E0%B2%B8%E0%B2%BF%E0%B2%B8%E0%B3%8D-%E0%B2%AA%E0%B2%B0-%E0%B2%A8%E0%B2%BF%E0%B2%B2%E0%B3%81%E0%B2%B5%E0%B2%BF%E0%B2%A8-32%E0%B2%B5%E0%B3%86%E0%B2%AC%E0%B3%8D-%E0%B2%B8%E0%B3%88%E0%B2%9F%E0%B3%8D-%E0%B2%AC%E0%B2%82%E0%B2%A6%E0%B3%8D

4.) http://www.kannadadunia.com/php/NewsList/FullNewsKarnataka.php?news_id=1652

5.) http://vijaykarnataka.indiatimes.com/articleshow/44342411.cms

6.) http://publictv.in/kannada/news/national/archives/16443/another-isis-terror-message-found-scribbled-in-washroom-of-mumbai-airport