ಸದಸ್ಯ:Rajath Balaji 2211175/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ರಜತ್ ಬಾಲಾಜಿ ಎಸ್. ನಾನು ಪ್ರಸ್ತುತ ಪ್ರಥಮ ವರ್ಷ ಬಿಕಾಂ ಹಾನರ್ಸ್ ಪದವಿಯನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ನಾನು ಜುಲೈ ತಿಂಗಳ ೨ ತಾರೀಕಿನಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜನಿಸಿದೆ. ಆದರೆ ಬೆಳೆದದ್ದು ಬೆಂಗಳೂರಿನ ಬನಶಂಕರಿ ಯಲ್ಲಿ . ನನ್ನ ಮನೆಯಲ್ಲಿ ನಾನು,ನನ್ನ ಅಜ್ಜಿ, ನನ್ನ ಅಮ್ಮ ಮತ್ತು ನನ್ನ ತಮ್ಮ ವಾಸವಿದ್ದೇವೆ. ಮನೆಯಲ್ಲಿ ನನ್ನನ್ನು ಬಾಲಿ ಎಂದು ಕರೆಯುತ್ತಾರೆ. ಹಾಗೆಯೇ ಕಾಲೇಜಿನಲ್ಲಿ ರಜತ್ ಎಂದು ಕರೆಯುತ್ತಾರೆ. ಈ ಕೆಳಗಿನ ಪ್ರಬಂಧ ದಲ್ಲಿ ನಾನು ನನ್ನ ಜೀವನದಲ್ಲಿ ಪಡೆದ ಮೊದಲ ಹಾಗೂ ಕೊನೆಯ ಎಷ್ಟೋ ಅನುಭವಗಳನ್ನು ಹಂಚಿಕೊಂಡಿದ್ದೇನೆ. ನನ್ನ ಬಾಲ್ಯವನ್ನು ನಾನು ವ್ಯಕ್ತಪಡಿಸುವಾದರೆ ಶಿಶುವಿನಿಂದ ಬಾಲಕನಾಗುವ ವರೆಗೂ ನಾನು ಎಲ್ಲರಂತೆ ಆಡಿ , ಓಡಿ, ಬಿದ್ದು, ಎದ್ದು ಅತ್ಯಂತ ಸಂತಸದಿಂದ ಕಳೆದಿದ್ದೆ. ಸ್ನೇಹಿತರ ಜೊತೆ ಮಾಡಿದ ಮೋಜು ಮಸ್ತಿ ಇನ್ನು ನನಗೆ ನೆನಪಿದೆ. ಆಗ ಅ ವಯಸಿನಲ್ಲಿ ಏನು ಮಾಡಿದರು ಚಿಕ್ಕ ಮಗು ಎಂದು ಬಿಡುತಿದ್ದರೂ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪ್ರಾರ್ಥನ ಶಾಲೆಯಲ್ಲಿ ಉತ್ತೀರ್ಣ ನಾಗಿ ಮುಗಿಸಿ ಹಿರಿಯ ಶಿಕ್ಷಣವನ್ನು ಸಂತ ಜೋಸೆಫರ ಶಾಲೆಯಲ್ಲಿ ಮುಗಿಸಿ ನಂತರ ಪದವಿಪೂರ್ವ ಅಂದರೆ ನನ್ನ ಪಿ. ಯು. ಸಿ ಯನ್ನು ಕ್ರೈಸ್ಟ್ ಪಿ.ಯು ಕಾಲೇಜ್ ನಲ್ಲಿ ನಿರ್ವಹಿಸಿ ಈಗಾ ಅದೇ ಕಾಲೇಜಿನ ಪದವಿ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯ (ಯುನಿವರ್ಸಿಟಿ) ಯಲ್ಲಿ ಮೊದಲನೇ ವರುಷದ ಬಿಕಾಂ ಹಾನರ್ಸ್ ಅನ್ನು ಅನುಸರಿಸುತ್ತಿದ್ದೇನೆ.

ನನ್ನ ಶಾಲೆಯ ಶಿಕ್ಷಣ[ಬದಲಾಯಿಸಿ]

ನಾನು ಬೆಂಗಳೂರಿನಲ್ಲಿ ಮೊದಲನೇ ಹಾಗೂ ಎರಡನೇ ತರಗತಿ ಯನ್ನು ಮಾರ್ಟಿನ್ ಲೂಥರ್ ಶಾಲೆ ಯಲ್ಲಿ ಮುಗಿಸಿ ,ಆದದ ಮೇಲೆ ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರು ಕೆಲಸಕ್ಕೆ ಹೋಗುತ್ತಿದ ಕಾರಣ ನಾನು  ಮತ್ತು   ನನ್ನ  ತಮ್ಮ ನನ್ನು ಕೊಪ್ಪಳದ ಒಂದು ವಸತಿ ಶಾಲೆಯಲ್ಲಿ ಸೇರಿಸಿದರು. ಆ ಶಾಲೆಯ ಹೆಸರೇ 'ಭಾರತ್ ಮಾತಾ'.ಅಲ್ಲಿ ನಾನು ಮಾಡಿದ ಚೇಷ್ಟೆ, ಮಸ್ತಿ, ಅಲ್ಲಿನ ಸ್ನೇಹಿತರು, ಶಿಕ್ಷಕರು, ಮತ್ತು ಆ ವಾತಾವರಣ ಬಹು ಸೊಗಸಾಗಿತ್ತು. ಅಲ್ಲಿ ನನಗೆ ಮೊದಲು ಪರಿಚಯ ವಾದ ಗೆಳೆಯನೇ ರೋಷನ್ ಕ್ರಿಸ್ಟೋಫರ್ ಅವನೊಡನೆ ಕಳೆದ ಹಾಸ್ಟೇಲ್ ದಿನಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಹಾಸ್ಟೆಲ್ ನಲ್ಲಿ ಸಮಯಕ್ಕೆ ಅತಿದೊಡ್ಡ ಮಹತ್ವ ವಿತ್ತು ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯುತ್ತಿತು ಬೆಳ್ಳಗಿನ ತಿಂಡಿಯೇ ಆಗಲಿ, ಮಧ್ಯನದ ಊಟವೇ ಆಗಲಿ ಅಥವಾ ರಾತ್ರಿಯ ಊಟವೇ ಆಗಲಿ ಎಲ್ಲಾದಕ್ಕೂ ಸಮಯ ಪಾಲನೆ ಮಾಡಲೇಬೇಕಿತ್ತು ಇಲ್ಲದಿದ್ದರೆ ತಿನ್ನಲೂ ಸಿಗು ತಿರಲಿಲ್ಲ ಅಲ್ಲಿ ನಾನು ಕಳೆದ ಎರಡು ವರ್ಷ ನನಗೆ ನನ್ನ ಜೀವನದಲ್ಲಿ ಅತೀ ಹೆಚ್ಚು ಪರಿಣಾಮ ಕಾರಿಯಾಗಿದೆ. ಅಲ್ಲದೆ ಶಾಲೆಯ ನಂತರ ಪ್ರತಿ ದಿನವು ಆಟದ ಅವಧಿ ವಿರುತ್ತಿತು. ಅದೇ ನಮಗೆ ನಮ್ಮ ದಿನದ ಅತ್ಯಂತ ಹೆಚ್ಚು ಸಂತಸದ ಅವಧಿ. ಸ್ನೇಹಿತರೆಲ್ಲ ಒಂದಾಗಿ ಸೇರಿ ಗಿಲ್ಲಿ ದಾಂಡು, ಕಬ್ಬಡಿ, ಮರಕೋತಿ ಆಟ, ಬುಗುರಿ ಆಟ, ಕ್ರಿಕೆಟ್, ವಾಲಿಬಾಲ್, ಹೀಗೆ ಹಲವಾರು ಆಟಗಳನ್ನು ಆಡುತ್ತಿದೆವು. ಅಲ್ಲಿನ ಸ್ನೇಹಿತರು ಈಗ ಸಂಪರ್ಕ ದಲಿಲದಿದ್ದರೂ. ಅವರ ಜೊತೆಯ ವಡನಾಟ ಈಗಲೂ ನೆನಪಿದೆ. ಅವರನ್ನು ಎಂದು ಮರೆಯಲಾಗುವುದಿಲ್ಲ. ಆದರೆ ಅವರೆಲ್ಲರಲ್ಲಿ ಇನ್ನೂ ಸಂಪರ್ಕ ದಲಿರುವುದು ರೋಷನ್ ಮಾತ್ರ. ಅದೇ ಮೊದಲ ಪರಿಚಯ ವೆಂದೆನಲ್ಲ ಅವನೇ. ಹೀಗೆ ಎರಡು ವರುಷ ಹಾಸ್ಟೆಲ್ನಲ್ಲಿ ಕಳೆದ ನಂತರ ಮನೆಗೆ ಬಂದೆವು. 

ಶಾಲೆಯಲ್ಲಿ ಭಾಗವಹಿಸಿದ ಚಟುವಟಿಕೆಗಳು[ಬದಲಾಯಿಸಿ]

ಐದನೇ ತರಗತಿಯಿಂದ ನಾನು ಪ್ರಾರ್ಥನ ಶಾಲೆಯಲ್ಲಿ ಸೇರಿದೆ. ಪ್ರಾರ್ಥನ ಶಾಲೆಯು ಕೂಡ ಒಂದು ಒಳ್ಳೆಯ ಅನುಭವ ,ಅಲ್ಲಿನ ಸ್ನೇಹಿತರು ಮತ್ತು ಶಿಕ್ಷಕರು ಬಹು ಪ್ರಿಯರು. ರವಿ ಬೆಳಗೆರೆ ಯವರ ಶಾಲೆಯಾಗಿದ್ದ ಪ್ರಾರ್ಥನ, ವರ್ಷಕ್ಕೆ ಒಮ್ಮೆ ನಡೆಯುವ ಸ್ಕೂಲ್ ಡೇ ಯಲ್ಲಿ ಅವರು ಬರುತ್ತಿದರು. ರವಿ ಬೆಳಗೆರೆ ಯವರನ್ನು ಸಾಕಷ್ಟು ಬಾರಿ ನೋಡಲು ಶಾಲೆಯಿಂದ ಉಪಯೋಗವಾಯಿತು. ಅಲ್ಲದೆ ಅದೇ ಶಾಲೆಯಲ್ಲಿ ನಾನು ಪ್ರ ಪ್ರಥಮ ಬಾರಿಗೆ ನಾಯಕ ನಾಗುವ ಅವಕಾಶ ದೊರೆಯಿತು. ನಾನು ನನ್ನ ಕ್ಲಾಸ್ ಗೆ ಲೀಡರ್ ಆಗಿದ್ದೇ. ಅಲ್ಲಿ ನನಗೆ ನನ್ನ ಬಳಿ ಇರುವ ನಾಯಕತ್ವದ ಗುಣ ತಿಳಿಯಿತು. ಇದೇ ಹುಮ್ಮಸ್ ಅಲ್ಲಿ ನಾನು ನಮ್ಮ ಶಾಲೆಯ ಅವಿಭಾಜ್ಯ ಅಂಗ ವಾಗಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಗೆ ಸೇರಲು ಹೋದೆ ಆದರೆ ಅಲ್ಲಿ ನನನ್ನು ತಿರಸ್ಕರಿಸಿದರು. ನನಗೆ ಈ ತರಹದ ಸಂಘಂಟನೆ ಒಂದರಲ್ಲಿ ಸೇರ ಬೇಕೆಂದು ಬಹು ಆಸೆ ಇತ್ತು. ಅದರೆ ಅದು ಈ ಶಾಲೆಯಲ್ಲಿ ನೆರವೇರಲಿಲ್ಲ. ಹೀಗೆ ನಾನು ಪ್ರಾರ್ಥನ ಶಾಲೆಯಲ್ಲಿ ನಡೆಯುತ್ತಿದ ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ಕಂಸಾಳೆ ಮತ್ತು ಡೊಳ್ಳು ಕುಣಿತದಲ್ಲಿ ಪಾಲ್ಗೊಂಡಿದೆ. ಅದರ ಪರಿಣಾಮ ನಾನು ನಮ್ಮ ತರಗತಿಯ ವಿದ್ಯಾರ್ಥಿ ಪ್ರತಿನಿಧಿ ಯಾಗಿ ಆಯ್ಕೆ ಯದೆ. ಹಾಗೆ ୭೦ ನೇ ಸ್ವಾತಂತ್ರ್ಯ ರಾಜ್ಯೋತ್ಸವ ದಂದು ನಾನು ನಮ್ಮ ಶಾಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೇಷ ಧರಿಸಿ ಅಭಿನಯ ಮಾಡಿದ್ದೆ ಆ ದಿನದ ಆ ಚಪ್ಪಾಳೆ ಈಗಳು ನೆನಸಿಕೊಂಡರೆ ಮೈ ಜುಮ್ಮನ್ನುವುದು. ಇದಕ್ಕೆಲ್ಲಾ ಕಾರಣ ನನ್ನ ಶಿಕ್ಷಕರು. ಮತ್ತೆ ಕನ್ನಡ ರಾಜ್ಯೋತ್ಸವದಂದು ಸಣ್ಣ ನಾಟಕದಲ್ಲಿ ಅಭಿನಯ ಮಾಡಿದ್ದೆ ನಂತರ ಅದಕ್ಕೂ ಶಭಾಸ್ ಗಿರಿ ಸಿಕ್ಕಿತ್ತು. ಡ್ರಾಯಿಂಗ್ ಕಾಂಪಿಟೇಶನ್ ನಲ್ಲಿ ಅಂದರೆ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನನಗೆ ಎರಡನೇ ಬಹುಮಾನ ಸಿಕ್ಕಿತ್ತು ಹಾಗೆ ವರ್ಷಕ್ಕೊಮ್ಮೆ ನಡೆಯುವ ಎಕ್ಸಿಬಿಷನ್ ಡೇ ಅಂದು ನಮ್ಮ ಶಾಲೆಯ ಪ್ರೋಟೋ ಟೈಪ್ ಮಾಡೆಲ್ ಅಂದರೆ ಮಾದರಿ ಚಿತ್ರ ದ ಮೂಲಕ ಮೊದಲನೇ ಬಹುಮಾನ ಪಡೆದ ನಮಗೆ ೩೦೦ ರೂಪಾಯಿ ದೊರೆಯಿತು ಅದೇ ನನ್ನ ಮೊದಲ ದುಡಿಮೆ ಎಂದು ಹೇಳಬಹುದು ಇವೆಲ್ಲ ಆದ ನಂತರ ನಾನು ೮ನೇ ತರಗತಿಯ ಪರೀಕ್ಷೆಯನ್ನು ಚೆನ್ನಾಗಿ ಬರೆದು ಮೊದಲನೇ ಕ್ಲಾಸ್ ನಲ್ಲಿ ಪಾಸಾದೆ. ನಂತರ ಬಂದಿದ್ದೆ ನನ್ನ ಜೀವನದ ಬಹುದೊಡ್ಡ ತಿರುವಿಗೆ ಅದೇ ನಾನು ಸೇರಿದ್ದ ಸಂತ ಜೋಸಫರ ಶಾಲೆ  ಇಲ್ಲಿ ನಾನು ಶಿಕ್ಷಣಕ್ಕಿಂತ ಹೆಚ್ಚು ಜಗತ್ತಿನ ಬಗ್ಗೆ ತಿಳಿದೆ ಸ್ನೇಹಿತರ ಬಗ್ಗೆ ತಿಳಿದೆ ನನ್ನ ಹೊರಗಿನ ಮತ್ತು ಒಳಗಿನ ಆರೈಕೆ ಇಲ್ಲಿ ನಡೆಯಿತು. ಈ ಶಾಲೆಯಲ್ಲಿ ನಾನು ಕಬ್ಬಡ್ಡಿ ಆಟಕ್ಕೆ ಸೇರಿ ಎಸ್ಎಐ (SAI) ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಇದು ಅತ್ಯಂತ ಪ್ರಮುಖವಾದ ಕ್ರೀಡಾ ಸಂಘಟನೆ ಭಾರತದಲ್ಲಿ ಇದನ್ನು ಬಹು ಮುಖ್ಯ ವೆಂದು ಭಾವಿಸುತ್ತಾರೆ ಇದರ ಕಡೆಯಿಂದ ವರ್ಷಕ್ಕೊಮ್ಮೆ ಆಯೋಜಿಸುವ ಸ್ಪೋರ್ಟ್ಸ್ ಕಾಂಪಿಟೇಶನ್ ನಲ್ಲಿ ನಮ್ಮ ಶಾಲೆಯ ಕಬ್ಬಡ್ಡಿ ತಂಡವು ರನ್ನರ್ಸ್ ಆಗಿದ್ದೆವು ಅಂದರೆ ಎರಡನೇ ಬಹುಮಾನ ಪಡೆದಿದ್ದೆವು. ಈ ನಮ್ಮ ಶಾಲೆಯ ಕಬ್ಬಡಿ ತಂಡವು ನನಗೆ ಬಹಳ ಹತ್ತಿರವಾದದ್ದು. ಹಾಗೆ ನನಗೆ ಸಂಘಟನೆ ಒಂದರಲ್ಲಿ ಸೇರಬೇಕೆಂಬ ಆಸೆಯು ಇಲ್ಲಿ ತೀರಿತು ಹೇಗಂದರೆ ನಾನು ಈ ಶಾಲೆಯಲ್ಲಿ ಎನ್ ಸಿ ಸಿ (ನ್ಯಾಷನಲ್) ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನಲ್ಲಿ ಸೇರಿಕೊಂಡೆ ಶಾಲೆಯಲ್ಲಿ ಏನ್ ಸಿಸಿ ಸೇರಿಕೊಂಡರೆ ಅಂತಹ ವಿದ್ಯಾರ್ಥಿ ಗಳನ್ನು ಜೂನಿಯರ್ ಡಿವಿಜನ್ ಅಂದರೆ ಜೆಡಿ ಎಂದು ಕರೆಯುತ್ತಾರೆ . ಅಲ್ಲಿಯು ಸಹ ಸಾಕಷ್ಟು ಕಲಿಯೋದಿತ್ತು . ಬೇರೆಯವರು ೮ನೇ ತರಗತಿಯಲ್ಲಿ ಎನ್ ಸಿ ಸಿ ಸೇರಿಕೊಂಡರೆ ನಾನು ಮಾತ್ರ ೯ನೇ ತರಗತಿಯಲ್ಲಿ ಸೇರಿಕೊಂಡೆ ನಾನು ವರಷಕೊಮ್ಮೆ ನಡೆಯುವ ಕಂಬೈನ್ಡ್ ಅನುಯಲ್ ಟ್ರೈನಿಂಗ್ ಕ್ಕ್ಯಾಂಪ್ ನಲ್ಲಿ ಭಾಗವಹಿಸಿ ನನ್ನ ಎ ಸರ್ಟಿಫಿಕೇಟ್ ಎಕ್ಸಾಮ್ ಅನ್ನು ಬರೆದು ಉತ್ತೀರ್ಣ ನಾಗಿ ಪಾಸು ಅದೆ. ನಾನು ಶಾಲೆಯಲ್ಲಿ ಎನ್ ಸಿ ಸಿ ಸೇರಿದ್ದು ನನ್ನ ಅತಿ ದೊಡ್ಡ ತಿರುವು, ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಅಂದರೆ ಭಾರತ ಸೈನ್ಯದ ಎರಡನೇ  ಅವಿಭಾಜ್ಯ ಅಂಗ ವಾಗಿರುವ ಎನ್ ಸಿ ಸಿ ನಮ್ಮ ದೇಶದಲ್ಲಿ ಬಹು ಮುಖ್ಯವಾದ ಯುವಕರ ಸಂಘಟನೆ ಇಂತಹ ಗುಂಪಿಗೆ ಸೇರಿದ್ದು ನನ್ನ ಹೆಮ್ಮೆ. ನಂತರ ಹಾಗೆ ನನ್ನ ಹತ್ತನೇ ತರಗತಿಯ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್ ನಲ್ಲಿ ಪಾಸಾದೆ ,ಹತ್ತನೇ ತರಗತಿಯ ಪರೀಕ್ಷೆಗೆ ಈಗಲೂ- ಆಗಲು- ಯವಾಗಳು ಬಹು ಪ್ರಾಮುಖ್ಯತೆ ನೀಡುತ್ತಾರೆ. ಅದ್ದಾಕೆ ಅದ್ದನು ನಿರ್ಲಕ್ಷ ಮಾಡದೆ ಪರೀಕ್ಷೆಯನ್ನು ಚೆನ್ನಾಗಿ ಬರೆದೆ .ಇಲ್ಲಿಗೆ ನನ್ನ ಶಾಲೆಯ ಪಯಣ ಮುಗಿದು ಕಾಲೇಜಿನ ಇನ್ನೊಂದು ಪಯಣ ಶುರುವಾಯಿತು.

ನನ್ನ ಪದವಿ ಪೂರ್ವ ಶಿಕ್ಷಣ ಹಾಗು ಎನ್ ಸಿ ಸಿ ಅನುಭವಗಳು[ಬದಲಾಯಿಸಿ]

ಮೊದಲಿನಿಂದಲೂ ನನಗೆ ವ್ಯಾಪಾರದಲ್ಲಿ ಆಸಕ್ತಿ ಇತ್ತು ಅದಕ್ಕೆ ನಾನು ಕಾಮರ್ಸ್ ಆಯ್ಕೆ ಮಾಡಿದೆ ನಾನು ೧೧ನೇ ತರಗತಿಯಲ್ಲಿ ಕಾಲೇಜಿನ ಮೆಟ್ಟಿಲು ಹತ್ತಲೇ ಇಲ್ಲ ಏಕೆಂದರೆ ಕರೋನಾ ಎಂಬ ಸಾಂಕ್ರಾಮಿಕ ರೋಗ ಹಬ್ಬಿತು ಈ ಕೊರೊನಾ ಇಂದ ಎಲ್ಲೆಡೆ ಲಾಕ್ ಡೌನ್ ಆಗಿತ್ತು ಅದಕ್ಕೆ ಅವರು ಕಾಲೇಜನ್ನು ಆನ್ಲೈನ್ ನಲ್ಲೆ ಮುಗಿಸಿದರು ಆದರು ನಾನು ಹೇಗೋ ಪ್ರಯತ್ನಪಟ್ಟು ನಮ್ಮ ಕಾಲೇಜಿನ ಎನ್ ಸಿ ಸಿ ಯಲ್ಲಿ ಸೇರಿದ್ದೆ. ಇಲ್ಲಿ ಸೇರಿದ ನಂತರ ಎನ್ ಸಿ ಸಿ ಎಂದರೆ ಏನೆಂದು ಸರಿಯಾಗಿ ತಿಳಿಯುತು ಏಕೆಂದರೆ ಇಲ್ಲಿನ ಟ್ರೈನಿಂಗ್ ಬಹು ಕಠಿಣವಾದದ್ದು ಹಾಗೆ ಶಿಸ್ತು ಕಲಿಸುವ ದೊಡ್ಡ ಸಂಘಟನೆಯಾಗಿತ್ತು ಕ್ರೈಸ್ಟ್ ಎನ್ ಸಿಸಿ ಎಲ್ಲಿ ಸೇರಿದ್ದು ನನ್ನ ಪುಣ್ಯ. ಕೋವಿಡ್ ನಿಂದ ಕಾಲೇಜ್ ಮುಖ ನೋಡಲಾಗದಿದ್ದ ನಾನು, ಇದರಿಂದ ಗಣರಾಜ್ಯೋತ್ಸವದ ದಿನದಂದು ನಡೆಯುವ ಧ್ವಜಾರೋಹಣಕ್ಕೆ ಎನ್‌ ಸಿ  ಸಿ ಕಡೆಯಿಂದ ವಿಶೇಷ ಗಾರ್ಡ್ ಆಫ್ ಹಾನರ್ ಇರುವುದು, ಇದರಲ್ಲಿ ನಾನು ಇದ್ದೆ ಎಂದು ಹೇಳಲು ನನಗೆ ಹೆಮ್ಮೆ ಇದೆ ಹಾಗೆ ಎನ್ ಸಿಸಿ ಇಂದ ನಡೆಯುವ ಬಿ ಸರ್ಟಿಫಿಕೇಟ್ ಕ್ಯಾಂಪ್ ಅಲ್ಲಿ ಅತ್ಯಂತ ಸಂತಸದಿಂದ ಕಳೆದಿದ್ದೆವು ಕ್ಯಾಂಪಿನ ನಂತರ ಬಿ ಸರ್ಟಿಫಿಕೇಟ್ ಎಕ್ಸಾಮ್ ಅನ್ನು ಬರೆದು ಪ್ರಥಮ ಅಂಕದಲ್ಲಿ ಪಾಸಾ ದೆ ನಂತರ ಕಾಲೇಜಿನಲ್ಲಿ 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣನಾಗಿ ಮುಗಿಸಿದೆ . ಆದರೂ ಕೋವಿಡ್ ನಿಂದಾಗಿ ಎಲ್ಲವೂ ಆನ್ಲೈನ್ ನಲ್ಲಿ ನಡೆದು ಗೆಳೆಯರ ಜೊತೆ ಒಡನಾಟ ಮಾಡಲು ಹೆಚ್ಚಿನ ಪ್ರಮಾಣದ ಮಟ್ಟಿಗೆ ಸಾಧ್ಯವಾಗಿರಲಿಲ್ಲ. ಕೋವಿಡ್ ನನ್ನ ಜೀವನದಲ್ಲಿ ಒಂದು ರೀತಿಯ ಕೆಟ್ಟ ಹಾಗೂ ಒಳ್ಳೆಯ ಪರಿಣಾಮ ಬೀರಿದೆ. ಕೆಟ್ಟ ಪರಿಣಾಮ - ಗೆಳೆಯರ ಜೊತೆ ಒಡನಾಟ ಸಿಗಲಿಲ್ಲ, ಆನ್ಲೈನ್ ಶಿಕ್ಷಣದಿಂದ ನಮ್ಮ ಹಳೆಯ ಕ್ಲಾಸ್ರೂಮ್ ಕೊಠಡಿಯ ಶಿಕ್ಷಣ ಮರೆತೇ ಹೋಯಿತು, ಹೆಚ್ಚು ಜನರ ಸಂಪರ್ಕ. ಒಳ್ಳೆಯ ಪರಿಣಾಮ - ಮನೆಯಲ್ಲಿ ಕುಟುಂಬದ ಜೊತೆ ಮಾತನಾಡಿ ಸಂಬಂಧ ಇನ್ನೂ ಗಟ್ಟಿಯಾಗಿರಳು ಸಾಧ್ಯವಾಯಿತು, ಆನ್ಲೈನ್ ಶಿಕ್ಷಣ ವಿದುದ್ದರಿಂದ ಟೆಕ್ನಾಲಜಿಗೆ ಹೊಂದಿಕೊಳ್ಳಲು ನೆರವಾಯಿತು. ಇಂತಹ ಪರಿಸ್ಥಿತಿಯಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ಹೇಗೋ ಮುಗಿಸಿದೆ.

ನನ್ನ ಪದವಿ ಶಿಕ್ಷಣ[ಬದಲಾಯಿಸಿ]

ಆದರೆ, ಇದೀಗ ಅದೇ ಕಾಲೇಜಿನ ಪದವಿ ಶಿಕ್ಷಣದಲ್ಲಿ ಹಿಂದೆ ತಿಳಿಸಿದ ಹಾಗೆ ಬಿಕಾಂ ಹಾನರ್ಸ್ ಕೋರ್ಸ್ ಅನುಸರಿಸುತ್ತಿದ್ದೇನೆ . ಕ್ರೈಸ್ಟ್ ವಿಶ್ವವಿದ್ಯಾನಿಲಯ  ಯುನಿವರ್ಸಿಟಿ ಯನ್ನು ಸೇರಲು ನಾನು ಬಹಳ ಕಷ್ಟಪಟ್ಟೆ ಮೂರು ಬಾರಿ ಅಪ್ಲಿಕೇಶನ್ ಹಾಕಿದ ನಂತರ ಸೀಟ್ ಸಿಕ್ಕಿತು ,ಇಲ್ಲದೆ ಇದ್ದರೆ ನಾನು ಇಲ್ಲಿ ಓದಲು ಸಾಧ್ಯವಾಗು ತೀರಲಿಲ್ಲ. ಅದಕ್ಕೆ ನಾವು ಎಂದಿಗೂ ಪ್ರಯತ್ನವನ್ನು ಬಿಡಬಾರದು ಸೋತರು ಮರಳಿ ಮರಳಿ ಯತ್ನಿಸಬೇಕು. 
ಇದರ ಜೊತೆಗೆ ನನ್ನ ಏನ್ ಸಿಸಿ ಪಯಣದ ಮೂರನೇ ವರ್ಷವೂ ನಡೆಯುತ್ತಿದೆ. ಹಾಗೆಯೇ ನಾನು ಕ್ರೈಸ್ಟ್ ಯೂನಿವರ್ಸಿಟಿ ಸೇರಿದ ಮೇಲೆ ಬಹಳ ವಿಷಯವನ್ನು ಕಲಿತಿದ್ದೇನೆ ಇಲ್ಲಿನ ಕ್ಯಾಂಪಸ್ ತುಂಬಾ ಚೆನ್ನಾಗಿದೆ ಜೊತೆಯಲ್ಲಿ ಈ ಕ್ಯಾಂಪಸ್ ಆವರಣದಲ್ಲಿ ಪ್ರತಿದಿನವೂ ಯಾವುದಾದರೂ ಒಂದು ಕಾರ್ಯಕ್ರಮವು ನಡೆಯುತ್ತಿರುತ್ತದೆ. ಎನ್ ಸಿ ಸಿ ಕಡೆಯಿಂದ ನಾನು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಎಮ್ ಇ ಜಿ ರೆಜಿಮೆಂಟ್ ಜೊತೆ ಆರ್ಮಿ ಅಟ್ಯಾಚ್ಮೆಂಟ್ ಕ್ಯಾಂಪ್ ಹೋಗಿದ್ದೆ. ಈ ಕ್ಯಾಂಪಿನಲ್ಲಿ ನಮ್ಮ ಸೈನಿಕರು ನಮ್ಮಂತಹ ಎನ್ ಸಿ ಸಿ ಕೆಡೆಟ್ಸ್ ಗಳಿಗೆ ಅವರ ಟ್ರೈನಿಂಗ್ ಮತ್ತು ಅನುಭವಗಳನ್ನು ನೀಡುತ್ತಾರೆ ಅಲ್ಲಿಯೂ ಸಹ ಮೋಜು ಮಸ್ತಿ ಇದ್ದಿದ್ದೆ ಆದರೆ ಅಲ್ಲಿ ಕಲಿತ ಹಲವಾರು ವಿಷಯಗಳು ಮತ್ತು ಸೈನಿಕರ ಮಾತುಗಳು ತುಂಬಾ ತುಂಬಾ ಉಪಯುಕ್ತ. ಇಂತಹ ಅನುಭವ ಎಲ್ಲರಿಗೂ ಸಿಗದು ಯುನಿವರ್ಸಿಟಿಗಳಲ್ಲಿ ಆಯ್ದ ಕ್ಯಾಡೆಟ್ ಗಳಿಗೆ ಮಾತ್ರ ಅವಕಾಶ ನೀಡುವರು, ನಮ್ಮ ಕಾಲೇಜಿನಿಂದ ಮೂವರು  ವಿದ್ಯಾರ್ಥಿಗಳು ಅಥವಾ ಕ್ಯಾಡೆಡ್ ಗಳು ಆಯ್ಕೆ ಯಾಗಿದ್ದು ಅದರಲ್ಲಿ ನಾನು ಒಬ್ಬ ಎಂದು ಹೇಳಲು ಹೆಮ್ಮೆ ಪಡುವ ವಿಷಯ.ಈಗ ಕಾಲೇಜಿನ ಮೊದಲನೇ  ಶಿಕ್ಷಣ ಅವಧಿ ಅಂದರೆ ಮೊದಲನೆಯ ಸೆಮಿಸ್ಟರ್ ನ ಅಂತಿಮ ಪರೀಕ್ಷೆ ಯನ್ನು ಬರೆದು ಎರಡನೇ ಸೆಮಿಸ್ಟರ್ ಗೆ  ಕಾಲಿಟ್ಟಿದ್ದೇನೆ ಇನ್ನೂ ಜೀವನದ ಹಲವಾರು ಸನ್ನಿವೇಶ ಬಾಕಿ ಇದೆ. ಮುಂದೆ ಹೇಗೆ ನಡೆಯುತ್ತೊ ನೋಡೋಣ.

ಧನ್ಯವಾದ[ಬದಲಾಯಿಸಿ]

ಈವರಗೆ ನಾನು ಬರೆದ ಈ ಎಲ್ಲಾ ಅನುಭವವನ್ನು ಲಭಿಸುವಂತೆ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೂ, ಸಹಪಾಠಿ ಗಳಿಗೂ ಹಾಗೂ ನನ್ನ ಗೆಳೆಯರಿಗೂ ಅತ್ಯಂತ ಮನಃಪೂರ್ವಕ ಧನ್ಯವಾದಗಳು. ಈವರೆಗೆ ಹೇಳಿದ್ದು ನನ್ನ ಈವರೆಗೂ ನಡೆದ ನನ್ನ ಜೀವನದ ಶೈಕ್ಷಣಿಕ ಹಾಗೂ ಸಹಪಠ್ಯ ಕ್ರಮ ಚಟುವಟಿಕೆಗಳ ಪಯಣದ ಕುರಿತು ಇದನ್ನು ಒಂದು ಪ್ರಬಂಧದ ಮೂಲಕ ಹೇಳುವ ಅಥವಾ ಬರೆಯುವ ಒಂದು ಸಣ್ಣ ಪ್ರಯತ್ನ ಇದನ್ನು ಮಾಡಲು ಸಹಾಯ ಮಾಡಿಕೊಟ್ಟ ನಮ್ಮ ಕನ್ನಡದ ಉಪನ್ಯಾಸಕರಾದ ರತಿ ಮಾಡಂ ಗೆ ಅತ್ಯಂತ ಧನ್ಯವಾದಗಳು.

ನೀನು ಕಲಿತ ವಿಧ್ಯೆ ಸಂಪಾದಿಸಿದ ಜ್ಞಾನ ನಿನ್ನ ದೇಶ ಸೇವೆಗೆ ಸಮರ್ಪಣೆಯಾಗದಿದ್ದಲ್ಲಿ ಅವು ತೃಣಕ್ಕೆ ಸಮಾನ.

ಸೋಲದೆ ಗೆದ್ದರೆ ಮಂದಹಾಸ. ಸೋತು ಗೆದ್ದರೆ ಇತಿಹಾಸ.

ಜೈ ಹಿಂದ್, ಜೈ ಕರ್ನಾಟಕ ಮಾತೇ.

ಶುಭದಿನ

ಇಂತಿ ನಿಮ್ಮ ಪ್ರೀತಿಯ,

ರಜತ್ ಬಾಲಾಜಿ .ಎಸ್