ಸದಸ್ಯ:Prajwala Manjunath Shiralikar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುರ್ಡೇಶ್ವರ[ಬದಲಾಯಿಸಿ]

ಮುರ್ಡೇಶ್ವರ ಭಟ್ಕಳ[೧] ತಾಲೂಕಿನಲ್ಲಿ ನೆಲೆಸಿರುವ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಇದು ಭಟ್ಕಳದಿಂದ ಸರಿಸುಮಾರು ೨೨ ಕಿಲೋ ಮಿಟರ್ ದೂರದಲ್ಲಿದೆ. ಕರ್ನಾಟಕದಲ್ಲಿ ಸ್ಥಿತಿಸಿರುವ ಈ ಸ್ಥಳ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕರಾವಳಿಯ ಅಂಚಿನಲ್ಲಿರುವ ಈ ಸ್ಥಳದ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು.

ಐತಿಹಾಸಿಕ ಹಿನ್ನೆಲೆ:[ಬದಲಾಯಿಸಿ]

ರಾವಣನ ತಪಸ್ಸಿಗೆ ಮೆಚ್ಚಿದ ಶಿವನು ಆತನಿಗೆ ಆತ್ಮಲಿಂಗವನ್ನು ನೀಡುತ್ತಾನೆ. ಆತ್ಮಲಿಂಗವನ್ನು ತರುತ್ತಾ ಸಂಧ್ಯಾಕಾಲವಾದೊಡೆ ಆತ ಮಜ್ಜನವನ್ನು ಮಾಡಬಯಸುತ್ತಾನೆ. ಆದರೆ ಶಿವನು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಆತ ಆತ್ಮಲಿಂಗವನ್ನು ಕೆಳಗೆ ಇಡದೆ ಸುತ್ತಲು ನೋಡಲಾರಂಭಿಸುತ್ತಾನೆ. ಆಗ ಆತನಿಗೆ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನ ರೂಪದಲ್ಲಿದ್ದ ಗಣೇಶನು ಕಣ್ಣಿಗೆ ಕಾಣಿಸುತ್ತದೆ. ಆ ಬಾಲಕನನ್ನು ಕರೆದು ಆತನಿಗೆ ಆ ಆತ್ಮಲಿಂಗವನ್ನು ಹಿಡಿದುಕೊಂಡು ನಿಲ್ಲುವಂತೆ ಹೇಳಿದಾಗ ಆತ ಮೂರು ಬಾರಿ ಆತನನ್ನು ಕರೆಯುವುದಾಗಿ, ರಾವಣನು ಬರದಿದ್ದಲ್ಲಿ ಆತ್ಮಲಿಂಗವನ್ನು ಕೆಳಗೆ ಇಡುವುದಾಗಿ ಹೇಳುತ್ತಾನೆ. ಇದಕ್ಕೆ ಒಪ್ಪಿದ ರಾವಣನು ಸಮುದ್ರದಲ್ಲಿ ಮಜ್ಜನಕ್ಕೆ ತೆರಳುತ್ತಾನೆ. ಆಗ ಬಾಲಕನಾದ ಗಣೇಶನು ಆತನಿಗೆ ಮೂರು ಬಾರಿ ಕೂಗಿ ಆ ಆತ್ಮಲಿಂಗವನ್ನು ಕೆಳಗಿಟ್ಟನು. ಆಗ ಓಡಿ ಬಂದ ರಾವಣನು ಆಕ್ರೋಶದಿಂದ ಆ ಬಾಲಕನ ತಲೆಯನ್ನು ಗುದ್ದಿ, ಆತನನ್ನು ಮಣ್ಣಿಗೆ ಸಮ ಮಾಡುತ್ತಾನೆ. ನಂತರ ಆತ್ಮಲಿಂಗವನ್ನು ಎತ್ತಲು ನೋಡುತ್ತಾನೆ, ಆದರೆ ಅದು ಸಾಧ್ಯವಾಗುವುದಿಲ್ಲ. ಬದಲಾಗಿ ಆ ಆತ್ಮಲಿಂಗ ಐದು ಚೂರಾಗಿ ,ಆತ ಸಿಟ್ಟಿನಿಂದ ಅದನ್ನು ಐದು ದಿಕ್ಕಿಗೆ ಎಸೆಯುತ್ತಾನೆ. ಆ ಐದು ಚೂರುಗಳು ಇಂದು ಐದು ಪ್ರಸಿದ್ಧ ದೇವಾಲಯಗಳಾಗಿ ಮಾರ್ಪಾಡಾಗಿವೆ. ಅವುಗಳೆಂದರೆ,

  • ಮುರ್ಡೇಶ್ವರ,
  • ರಾಮೇಶ್ವರ,
  • ಸಜ್ಜೇಶ್ವರ,
  • ಗುಣವಂತೇಶ್ವರ,
  • ಗೋಕರ್ಣಗಳಾಗಿವೆ.

ಮುಂದೆ ಶಿವನು ಪ್ರತ್ಯಕ್ಷನಾಗಿ, ಬಾಲಕನನ್ನು ಕೊಂದಕ್ಕಾಗಿ ಆತನಿಗೆ ಬಾಲಕನಿಗೆ ಮರುಜನ್ಮ ನೀಡುವಂತೆ ಹೇಳುತ್ತಾನೆ. ಆಗ ರಾವಣನು ಅದೇ ಮಣ್ಣಿನಿಂದ ಮೂರ್ತಿಯನ್ನು ರಚಿಸುತ್ತಾನೆ. ಇಂದಿಗೂ ಆ ಮೂರ್ತಿಯೂ ಇಡುಗುಂಜಿ ಗಣಪನಾಗಿ ಪೂಜಿಸ್ಪಡುತ್ತದೆ.

ವಿಶೇಷತೆ:[ಬದಲಾಯಿಸಿ]

ಹದಿನೆಂಟು ಮಹಡಿಯನ್ನು ಹೊಂದಿರುವ ಮುರ್ಡೇಶ್ವರ ದೇವಾಲಯದ ಮಹಾಗೋಪುರವು ದೆಹಲಿಯ ಕುತುಬ್ ಮೀನಾರನ್ನು ಮೀರಿಸಿದ ಎತ್ತರವನ್ನು ಹೊಂದಿದೆ. ಹದಿನೆಂಟನೇ ಮಹಡಿಯ ಮೇಲಿನಿಂದ ಸುತ್ತಲೂ ಹಬ್ಬಿರುವ ಅರಬ್ಬಿ ಸಮುದ್ರವನ್ನು ನೋಡಿ ಕಣ್ತುಂಬಿಕೊಳ್ಳುವುದು ಎಲ್ಲರ ಸೌಭಾಗ್ಯವೇ ಸರಿ. ಇನ್ನು ಅಲ್ಲಿನ ಸಂಸ್ಕೃತಿ ತನ್ನದೆ ಮಹತ್ವವನ್ನು ಹೊಂದಿದೆ. ಪಾರಂಪರಿಕವಾಗಿ ನಡೆದು ಬರುವ ಮೀನುಗಾರಿಕೆ ಇಲ್ಲಿನ ಜನರ ಕುಲಕಸುಬಾಗಿದೆ. ವಿವಿಧ ಬಗೆಯ ಮೀನುಗಳನ್ನು ಹೊಂದಿರುವ ಇಲ್ಲಿನ ಬಂದರುಗಳಿಂದ ಮೀನುಗಳನ್ನು ರಫ್ತು ಮಾಡಲಾಗುತ್ತದೆ. ಇದು ಮುರ್ಡೇಶ್ವರದ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಗೊಳಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://kn.wikipedia.org/s/8aq