ಸದಸ್ಯ:Nishmithajames1910467/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಂತೋಣಿಯವರ ಪುಣ್ಯ ಕ್ಷೇತ್ರ, ಡೋರನಹಳ್ಳಿ[ಬದಲಾಯಿಸಿ]

ಈ ಪುಣ್ಯ ಕ್ಷೇತ್ರವು ಕರ್ನಾಟಕ ರಾಜ್ಯದ ಮೈಸೂರು ಪ್ರಾಂತ್ಯದಲ್ಲಿ ಇರುವ ಒಂದು ಪುಟ್ಟ ಗ್ರಾಮ. ಇಲ್ಲಿಗೆ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದಲೂ ಇಲ್ಲಿಗೆ ಬರುತ್ತಾರೆ ತಮ್ಮ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಎಂದು ಭಕ್ತಿಯಿಂದ ದಿವ್ಯ ಬಲಿ ಪೂಜೆಗಳಲ್ಲಿ ಭಾಗವಹಿಸಿ ತಮ್ಮ ಕುಟುಂಬದವರಿಗಾಗಿ ರಾಜ್ಯದ ಪ್ರಜೆಗಳಿಗಾಗಿ ಹಾಗೂ ರೋಗದಿಂದ ಬಳಲುತ್ತಿರುವವರಿಗಾಗಿ ಪ್ರಾರ್ಥಿಸಲು ಇಲ್ಲಿಗೆ ಜನರು ಬರುವರು.

ಸಂತ ಅಂತೋಣಿಯವರ ಪುಣ್ಯ ಕ್ಷೇತ್ರ, ಡೋರನಹಳ್ಳಿ

ವಾರ್ಷಿಕೋತ್ಸವ[ಬದಲಾಯಿಸಿ]

ಪ್ರತಿ ವರ್ಷ ಜೂನ್ ತಿಂಗಳ ೧೩ ರಂದು ಸಂತ ಅಂತೋಣಿಯವರ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಸಂತ ಅಂತೋಣಿಯವರ ಮರಣ ಹೊಂದಿದ ದಿನವಾಗಿರುತ್ತದೆ.  ಈ ಸಂತರು ಇಟಲಿ ದೇಶದ ಪಾದುವ ಎಂಬ ಊರಿನವರು.

ಆದ ಕಾರಣ ಇವರನ್ನು ಪಾದುವ ಸಂತ ಅಂತೋಣಿ ಎಂದು ಕರೆಯುತ್ತಾರೆ.

ಸಂತ ಅಂತೋಣಿಯವರ ಪ್ರತಿಮೆ

ಸುಮಾರು ೩೦೦ ವರ್ಷಗಳ ಹಿಂದೆ, ಒಬ್ಬ ರೈತ ಈ ಡೋರನಹಳ್ಳಿಯ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ಆಶ್ಚರ್ಯಕವಾಗಿ ನೇಗಿಲಿನಿಂದ ಒಂದು ಶಬ್ದ ಕೇಳಿಸುತ್ತದೆ. ಆಗ ಅವನು ತನ್ನ ನೇಗಿಲನ್ನು ನೋಡಿದಾಗ ಅಲ್ಲಿ ಒಂದು ಮನುಷ್ಯನ ಮುಖವನ್ನು ಹೋಲುವ ಒಂದು ಮರದ ಗೊಂಬೆ ಕಾಣಿಕೊಳ್ಳುತ್ತದೆ. ರೈತ ಅದನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಜೋಪಾನವಾಗಿ ಪರಿಶೀಲಿಸಿದ. ಅವನ ಆಶ್ಚರ್ಯಕ್ಕೆ ಹಲವಾರು ವರ್ಷಗಳಿಂದ ಮಣ್ಣಿನಲ್ಲಿರುವ ಗೆದ್ದಲುಗಳು ಈ ಗೊಂಬೆಯನ್ನು ತಿನ್ನಲಿಲ್ಲ. ರೈತ ಅದನ್ನು ಒಂದು ಅಧ್ಭುತ ಎಂದು ಭಾವಿಸಿದ. ಅದನ್ನು ತನ್ನ ಮಕ್ಕಳಿಗೆ ಆಟವಾಡಲು ಒಂದು ಉತ್ತಮ ಆಟಿಕೆ ಎಂದು ಯೋಚಿಸಿ ಅದನ್ನು ಒಂದು ಪಕ್ಕಕೆ ಇಟ್ಟು ತನ್ನ ಕೆಲಸವನ್ನು ಮುಂದುವರಿಸಿದನು. ಹಾಗೂ ಆ ಗೊಂಬೆಯನ್ನು ಮನೆಗೆ ತಂದು ತನ್ನ ಮುದ್ದಿನ ಮಕ್ಕಳಿಗೆ ಆಟವಾಡಲು ನೀಡುತ್ತಾನೆ.

ಆ ರಾತ್ರಿ ರೈತ ಮಲಗಿರುವಾಗ ತನ್ನ ಕನಸಿನಲ್ಲಿ ಈ ಗೊಂಬೆ ಅವನಿಗೆ ಒಬ್ಬ ಸನ್ಯಾಸಿಯಂತೆ ಕಾಣಿಸಿ ಕೊಂಡಿತು. ಈ ಸನ್ಯಾಸಿಯ ನಿಲುವಂಗಿಯಲ್ಲಿರುವ ಋಷಿ ಗೊಂಬೆಯನ್ನು ಅವಮಾನಿಸ ಬಾರದೆಂದು ಹೇಳಿತು. ರೈತನು ಬಯಸುವ ಎಲ್ಲಾ ಒಳ್ಳೆಯ ಭರವಸೆಗಳನ್ನು ಈಡೇರಿಸುವಂತೆ ನಂಬಿಕೆ ನೀಡಿದರು. ಆದರೆ ಈ ರೈತನು ಅದನ್ನು ನಿರ್ಲಕ್ಷಿಸಿ ಎಂದಿನಂತೆ ತನ್ನ ಸಾಮಾನ್ಯ ಕೆಲಸದಲ್ಲಿ ಮಗ್ನನದನು. ಆದ ಕಾರಣ ತನ್ನ ಎತ್ತುಗಳನ್ನು ಕಳೆದು ಕೊಂಡನು. ತನ್ನ ಬಂಧುಗಳು ಮರಣ ಹೊಂದಿದರು. ನಂತರ ತನ್ನ ಮುದ್ದಿನ ಮಕ್ಕಳು ಅನಾರೋಗ್ಯಕ್ಕೆ ತುತ್ತಾದರು. ಆಗ ಅವರಿಗೆ ಕನಸಿನ ಅರಿತು ಮೂಡಿತು. ಅವರು ಮಾಡಿದು ತಪ್ಪೆಂದು  ತಿಳಿದುಕೊಂಡರು.

ಪಶ್ಚಾತಾಪ ಪಟ್ಟು ತನ್ನ ಹೊಲದಲ್ಲಿ ಕಂಡು ಕೊಂಡ ಸ್ಥಳದಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿ, ಅದನ್ನು ಪೂಜಿಸಲು ಪ್ರಾರಂಭಿಸಿದನು. ಹೀಗೆ ಮಾಡಿದಾಗ ಅವನ ಎಲ್ಲಾ ಮಕ್ಕಳ ಕಾಯಿಲೆಗಳು ಗುಣವಾದವು, ಅವನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದನು.

ಹಲವಾರು ವರ್ಷಗಳ ನಂತರ ಅವನು, ಮೈಸೂರಿನ ಒಬ್ಬ ಕ್ರೈಸ್ತ ಸನ್ಯಾಸಿಯನ್ನು (ಗುರುಗಳನ್ನು) ಭೇಟಿಯಾದನು. ಅವರು ಗೊಂಬೆಯನ್ನು ಹೋಲುವ  ಉಡುಪನ್ನು ಧರಿಸಿದ್ದರು. ಈ ಗೊಂಬೆಯ ಬಗ್ಗೆ ವಿವರಿಸಿದರು. ಕ್ರೈಸ್ತ ಗುರುಗಳು ಆ ರೈತನೊಂದಿಗೆ, ಆ ಹಳ್ಳಿಗೆ ಹೋದರು, ಮತ್ತು ಕೈಗಳಿಲ್ಲದ ಸಣ್ಣ ೧೩ ಇಂಚಿನ ಮರದ ಗೊಂಬೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸಿದರು. ಆಗ ಅವರಿಗೆ ತಕ್ಷಣ ಇದು ಸಂತ ಅಂತೋಣಿಯವರ ಪ್ರತಿಮೆ ಎಂದು ಗುರುತಿಸಿದರು.

ನಂತರ ಈ ಸ್ಥಳದಲ್ಲಿ ಒಂದು ದೊಡ್ಡ ದೇವಾಲಯವನ್ನು ನಿರ್ಮಿಸಿದರು. ೧೩ ಜೂನ್ ೧೯೯೯ ಅಂದಿನ ಮೈಸೂರಿನ ಧರ್ಮ ಅಧ್ಯಕ್ಷರು ಪವಿತ್ರ ಗೊಳಿಸಿದರು. ಪ್ರತಿ ಮಂಗಳವಾರ ವಿಶೇಷ ಆರಾಧನೆ, ಜಪಸರ, ದಿವ್ಯ ಬಳಿ ಪೂಜೆಗಳನ್ನು ಭಕ್ತಿಯಿಂದ ನೆರವೇರಿಸಲಾಗುತ್ತದೆ. ಈ ಸಂತರು ಅನೇಕ ಅದ್ಭುತಗಳನ್ನು ಮಾಡುತ್ತಾರೆ. ಮುಖ್ಯವಾಗಿ ಕಳೆದು ಹೋದ ವಸ್ತುಗಳನ್ನು ಮರಳಿ, ಸಿಗುವಂತೆ ಮಾಡುತ್ತಾರೆ. ಇವರು ಪವಾಡ ಪುರುಷರು. ಅದ್ಭುತ ತಾರೆ ಎಂದು ಕರೆಯುತ್ತಾರೆ.

ಯೇಸು ಸ್ವಾಮಿಯನ್ನು ತನ್ನ ಕರಗಳಲ್ಲಿ ಪಡೆದಿರುತ್ತಾರೆ. ಅವರು ಸತ್ಯದ ಮಾರ್ಗದಲ್ಲಿ ನಡೆದವರು.

ಸಂತ ಅಂತೋಣಿ

ಸಂತ ಅಂತೋಣಿಯವರ ನಾಲಿಗೆ ಮತ್ತು ದವಡೆ ಮೂಳೆಯನ್ನು ಇಟಲಿಯ ಸಂತ ಅಂತೋಣಿಯವರ ದೇವಾಲಯದಲ್ಲಿ ಇನ್ನು ಪ್ರದರ್ಶಿಸಲಾಗುತ್ತದೆ.

ಪವಿತ್ರ ಮತ್ತು ಪ್ರಾರ್ಥನೆ[ಬದಲಾಯಿಸಿ]

ಸಂತ ಅಂತೋಣಿಯವರ ಅವಶೇಷಗಳ ನೋಟವು ಕಥೋಲಿಕ ಕ್ರೈಸ್ತರಿಗೆ ನಂಬಿಕೆ, ಕುಟುಂಬ, ಸಾಮರಸ್ಯ, ಆರೋಗ್ಯ ಮನಸಿನ ಶಾಂತಿ ಮತ್ತು ಭೌತಿಕ ವಸ್ತುಗಳ ನಷ್ಟವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಈ ಪ್ರತಿಮೆ ಇನ್ನು ಸುರಕ್ಷಿತವಾಗಿ ಗಾಜಿನಿಂದ ಆವೃತ್ತವಾದ ಬಲಿಪೀಠದಲ್ಲಿ ಇಡಲಾಗಿದೆ. ವಿಶೇಷ ದಿನಗಳಲ್ಲಿ ಸಂತ ಅಂತೋಣಿಯವರ ಪ್ರತಿಮೆಯನ್ನು ಭಕ್ತರ ತಲೆ ಮೇಲೆ ಇಟ್ಟು ಪ್ರಾರ್ಥಿಸಿ ಆಶೀರ್ವದಿಸುತ್ತಾರೆ.

ರೋಮ್ ಇಂದ ಪೋಪ್ ಗುರುಗಳು ಸಂತ ಅಂತೋಣಿಯವರ ಪುಣ್ಯಕ್ಷೇತ್ರವನ್ನು ಅಧಿಕೃತವಾಗಿ ಕಿರಿಯ ಬೆಸಿಲಿಕಾ ಎಂದು ಪರಿವರ್ತಿಸಿರುತ್ತಾರೆ. ಆದಕಾರಣ ಇಲ್ಲಿಗೆ ಜನ ಸಾಗರವೇ ಹರಿದು ಬರುತ್ತಿದೆ. ಹಬ್ಬದ ದಿನದಂದು ಈ ಪುಟ್ಟ ಹಳ್ಳಿಯನ್ನು ದೀಪಗಳಿಂದ ಅಲಂಕರಿಸುತ್ತಾರೆ. ಹಾಗೂ ತೇರು ಮೆರವಣಿಗೆಯನ್ನು ಇಡೀ ಹಳ್ಳಿಯಲ್ಲಿ ಮಾಡುತ್ತಾರೆ. ಹರಕೆಗಳನ್ನು ಭಕ್ತರು ಹೊತ್ತು ಬರುತ್ತಾರೆ. ನಂತರ ನೆಮ್ಮದಿಯಿಂದ ಸಂತೋಷವಾಗಿ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ.

ಮೈಸೂರು / ರೋಮ್:[ಬದಲಾಯಿಸಿ]

ಭಾರತೀಯ ಕಥೋಲಿಕ ದೇವಾಲಯದ ಇತಿಹಾಸದಲ್ಲಿ ಒಂದು ಹೆಗ್ಗುರುತು ಬೆಳವಣಿಗೆಯಲ್ಲಿ, ವ್ಯಾಟಿಕನ್ ಮೂಲದ ದೈವಿಕ ಆರಾಧನೆ ಮತ್ತು ಸಂಸ್ಕಾರಗಳ ಶಿಸ್ತು, ಮೈಸೂರು ಬಿಷಪ್ಅತಿ ಪೂಜ್ಯ ಧರ್ಮ ಅಧ್ಯಕ್ಷರು ಕನ್ನಿಕದಾಸ್ ಅಂತೋಣಿ ವಿಲ್ಲಿಯಂಗೆ ಅಧಿಕೃತವಾಗಿ ಸಂವಹನ ನಡೆಸಿದ್ದು, ಡೋರನಹಳ್ಳಿಯ ಸಂತ ಅಂತೋಣಿಯ ದೇಗುಲ ಮೈನರ್ ಬೆಸಿಲಿಕಾ ಎಂಬ ಬಿರುದನ್ನು ನೀಡಲಾಗಿದೆ. ದಕ್ಷಿಣ ರಾಜ್ಯ ಕರ್ನಾಟಕದ ಮೈಸೂರು ಡಯಾಸಿಸ್ ಅಡಿಯಲ್ಲಿ ಡೋರನಹಳ್ಳಿ ಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

<ɾ>https://www.deccanherald.com/spectrum/spectrum-statescan/a-place-that-has-a-special-meaning-724715.html</ɾ>

<ɾ>https://indiancatholicmatters.org/karnataka-st-antonys-shrine-dornahalli-gets-minor-basilica-tag/</ɾ>

<ɾ>https://en.wikipedia.org/wiki/St._Anthony%27s_Basilica,_Dornahalli</ɾ>