ಸದಸ್ಯ:Kohli ramesh/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨][೩]

ಆಲೂ ಬ್ರೆಡ್ ರೂಲ್
ಬ್ರೆಡ್

"ಪರಿಚಯ"[ಬದಲಾಯಿಸಿ]

ರೋಲ್ (ಸಾದಾ ಅಥವಾ ಬೆಣ್ಣೆಯ ಜೊತೆಗೆ ತಿನ್ನಲಾಗುವ) ಉಟದ ಜೊತೆಖಾದ್ಯವಾಗಿ ಬಡಿಸಲಾಗುವ ಒಂದು ಚಿಕ್ಕ, ಅನೇಕವೇಳೆ ದುಂಡನೆಯ ಬ್ರೆಡ್‍ನ ತುಂಡು. ರೋಲ್ಅನ್ನು ಇಡಿಯಾಗಿ ಅಥವಾ ಅಡ್ಡಡ್ಡವಾಗಿ ಕತ್ತರಿಸಿ ಎರಡೂ ಅರ್ಧಬಾಗಗಳ ನಡುವೆ ಹೂರಣವನ್ನು ತುಂಬಿ ಬಡಿಸಬಹುದು ಮತ್ತು ತಿನ್ನಬಹುದು. ರೋಲ್‍ಗಳನ್ನು ಸಾಮಾನ್ಯವಾಗಿ ಬ್ರೆಡ್‍ನ ಹೋಳುಗಳನ್ನು ಬಳಸಿ ತಯಾರಿಸಲಾಗುವ ಖಾದ್ಯವನ್ನು ಹೋಲುವ ಸ್ಯಾಂಡ್‍ವಿಚ್‍ಗಳನ್ನು ತಯಾರಿಸಲೂ ಬಳಸಲಾಗುತದೆ.

"ಇತಿಹಾಸ"[ಬದಲಾಯಿಸಿ]

ಬ್ರೆಡ್ ರೋಲ್ ವಿಶೇಷವಾಗಿ ಯುರೋಪ್, ಜರ್ಮನಿ, ಇಟಲಿ ಮತ್ತು ಆಸ್ಟ್ರೇಲಿಯಾಗಳಲ್ಲಿ ಜನಜನಿತವಾಗಿದೆ.  ಆ ದೇಶಗಳಲ್ಲಿ ಬ್ರೆಡ್ ರೋಲ್ ಗೆ ಪಾನಿನೋ ಅಥವಾ ಪಾಣಿನಿ ಎಂದು ಕರೆಯುತ್ತಾರೆ.   ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್  ದೇಶಗಳಲ್ಲಿ ಬ್ರೆಡ್ ರೋಲ್ ನ್ನು ಸುತ್ತಮುತ್ತ  ಸ್ವಕ್ ಮುಂತಾದ ಸ್ಥಳೀಯ ಶಬ್ಡಗಳಿಂದ ಕರೆಯುತ್ತಾರೆ.   ಹೆಚ್ಚಾಗಿ, ಜನರು ಚಳಿಗಾಲದಲ್ಲಿ ಸಂಜೆ ಸಮಯದಲ್ಲಿ ಅಥವಾ ಮಳೆಗಾಲದಲ್ಲಿ  ಬ್ರೆಡ್ ರೋಲ್ ನ್ನು  ತಿನ್ನಲು ಬಯಸುತ್ತಾರೆ.  ಚಹಾ ಕುಡಿಯುವಾಗ, ಬ್ರೆಡ್ ರೋಲ್ ನ್ನು ತಿನ್ನವುದು ಸಾಮಾನ್ಯವಾಗಿದೆ. 
ಬ್ರೆಡ್ ರೋಲ್ ನ್ನು ಮಾಡುವ ವಿಧಾನ ಎಂದರೆ, ಮೊದಲು ಆಲೂಗಡ್ದೆಯನ್ನು ಬೇಯಿಸಬೇಕು, ನಂತರ ಸಿಪ್ಪೆಯನ್ನು ತೆಗೆಯಬೇಕು, ನಂತರ ಹೂರಣವನ್ನು ತಯಾರಿಸಲು ಒಣ ಪದಾರ್ಥ ಗಳಾದ ಖಾರ ಪುಡಿ, ದನಿಯ ಪುಡಿ, ಅರಿಶಿನ ಪುಡಿ, ಕೊತ್ತುಂಬರಿ ಸೊಪ್ಪು, ಉಪ್ಪುಗಳನ್ನು ಮಿಶ್ರಮಾಡಬೇಕು. ಹೂರಣವು ಸಿದ್ಧವಾದ ನಂತರ  ಬ್ರೆಡ್ ಗಳ ನಾಲ್ಕು ಮೂಲೆಗಳನ್ನು ಕತ್ತರಿಸಬೇಕು, ನಂತರ ಆ ನಾಲ್ಕು ಬ್ರೆಡ್ ಮೂಲೆಗಳನ್ನು ನೀರಿನಲ್ಲಿ ಹಾಕಬೇಕು. ನಂತರ ಅವುಗಳನ್ನು ಒತ್ತುವ ಮೂಲಕ ಹಿಂಡಬೇಕು,  ನಂತರ ಸಂಪೂರ್ಣವಾಗಿ ಒಣಗಿದ ಬ್ರೆಡ್ ಗಳನ್ನು ಬೇಯಿಸಬೇಕು.    ಬ್ರೆಡ್ ರೋಲ್ ನ್ನು ಬಹಳ ಸುಂದರವಾದ ಪದಾರ್ಥ ಎಂದು ಕರೆಯಬಹುದು ಏಕೆಂದರೆ ಅದು ಹೊರಗಿನ ಭಾಗ ಕುರುಕುಲಾದ  ಮತ್ತು ಒಳಗೆ ಮೃದುವಾಗಿರುತ್ತದೆ.   ಬ್ರೆಡ್ ರೋಲ್ ನ್ನು ವಿಧವಿಧವಾದ ಹೂರಣಗಳಿಂದ ತುಂಬಲಾಗಿರುತ್ತದೆ. ಬೇಯಿಸಿದ ಆಲೂಗಡ್ಡೆ, ಮೊಟ್ಟೆ, ಪನ್ನೀರ್ ಮತ್ತು ಆನೇಕ ತರಕಾರಿಗಳಿಂದ ತುಂಬಲಾಗುತ್ತದೆ.  ಜನರನ್ನು ಆಕರ್ಷಿಸಲು ಬ್ರೆಡ್ ರೋಲ್ ನ್ನು  ಬಂದೂಕಿನ ಗುಂಡುಗಳ ಆಕಾರದಲ್ಲಿ ಮಾಡುತ್ತಾರೆ.
   ಬ್ರೆಡ್ ರೋಲ್ ನಲ್ಲಿ  ಅನೇಕ ವಿಧಗಳಿವೆ, ಅವುಗಳಲ್ಲಿ ಕೆಲವು  ಸೀಮಿತ ರೋಲ್ ಗಳು ಬಾರ್ಬೊಕ್ಯೂ ಹಂದಿ ಸ್ಯಾಂಡ್ವಿಚ್,  ಕೈಸರ್ ರೋಲ್ ಗಳು,  ಸ್ಟೊಟೈ ಕೇಕ್  ಮುಂತಾದ  ಬ್ರೆಡ್ ರೋಲ್ ಗಳಿವೆ. 
 ೧)ಸೀಮಿತ ರೋಲ್ ಗಳು:  ಸೀಮಿತ ರೋಲ್ ಗಳನ್ನು ಸೀಮಿತ ಪೂಬ್ಲಣ ಎಂದೂ ಸಹ ಕರೆಯಲಾಗುತ್ತದೆ. ಸೀಮಿತ ರೋಲ್ ಗಳು ಸ್ಯಾಂಡ್ವಿಚ್ ಜೊತೆಗೆ ರೋಲನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಸೀಸೆಮ್ ಬೀಜಗಳನ್ನು ಒಳಗೊಂಡಿರುತ್ತದೆ.
 ೨)ಬಾರ್ಬೊಕ್ಯೂ ಹಂದಿ ಸ್ಯಾಂಡ್ವಿಚ್: ಬಾರ್ಬೊಕ್ಯೂ ಹಂದಿ ಸ್ಯಾಂಡ್ವಿಚ್ ಹಗುರ ಮತ್ತು ಆರೋಗ್ಯಕರವಾದುದು. ಅದು ಕೊಬ್ಬು ಮತ್ತು ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ.
 ೩)ಕೈಸರ್ ರೋಲ್ ಗಳು:  ಕೈಸರ್ ರೋಲ್ ಗಳನ್ನು  ವೀರ ರೋಲ್ ಗಳು ಅಥವಾ ಕಠಿಣ ರೋಲ್ ಗಳು ಎಂದು ಕರೆಯಬಹುದು.  ಕೈಸರ್ ರೋಲ್ ಗಳನ್ನು  ಸಾಮಾನ್ಯವಾಗಿ ಕುರುಕಲು ದುಂಡಗಿನ ಬ್ರೆಡ್ ರೋಲ್ ಅದರ  ಮೂಲತಃ ಆಸ್ಟ್ರೇಲಿಯಾ.  ಕೈಸರ್ ರೋಲ್ ಗಳು ಬಿಳಿ ಹಿಟ್ಟು, ಈಸ್ಟ್ ಮಾಲ್ಟ್, ನೀರು ಮತ್ತು ಉಪ್ಪುನಿಂದ ತಯಾರಿಸಲಾಗಿದೆ. 
 ೪)ಸ್ಟೊಟಿಕ್ ಕೇಕ್: ಸ್ಟೊಟಿಕ್ ಕೇಕ್ ಒಂದು ರೀತಿಯ ಬ್ರೆಡ್  ಅದರ ಮೂಲತಃ ಈಶಾನ್ಯ ಇಂಗ್ಲೆಂಡ್.  ಸ್ಟೊಟಿಕ್ ಕೇಕ್  ಚಪ್ಪಟೆ ಮತ್ತು ಸುತ್ತಿನಂತೆ ಆಕಾರ.
     

"ಬ್ರೆಡ್ ರೋಲ್ ವಿಧಗಳು"[ಬದಲಾಯಿಸಿ]

ವಿಶೇಷವಾಗಿ ಸ್ಥಳೀಯ ಬ್ರಿಟಿಷ್ ಭಾಷೆಯಲ್ಲಿ ಬ್ರೆಡ್ ರೋಲ್ ಗೆ ಆನೇಕ ಹೆಸರುಗಳಿವೆ.  ಬೇಕರ್ ಬ್ರೆಡ್ ರೋಲ್ ಗೆ ವಿವಿಧವಾದ ಹೆಸರನ್ನು ಇಟ್ಟಿರುತ್ತಾರೆ. ಅದರಲ್ಲಿ ಕೆಲವು ಹೆಸರುಗಳು ಅಂದರೆ ಬನ್, ಬ್ರೆಡ್ ಕೇಕ್, ಬಪ್,ಡಿನ್ನರ್ ರೋಲ್, ಡಾಲರ್ ರೋಲ್,ಆನಿಯನ್ ರೋಲ್ ಮುಂತಾದ ಹೆಸರುಗಳಿವೆ. 
೧)ಬನ್: ಉತ್ತರ ಇಂಗ್ಲೆಡ್ ನಲ್ಲಿ ಬ್ರೆಡ್ ರೋಲ್ ಗೆ ಬಳಸುವ ಪದ.
೨)ಬ್ರೆಡ್ ಕೇಕ್:  ಯಾರ್ಕ್ಪೈರ್ ಲ್ಲಿ ಬ್ರೆಡ್ ರೋಲ್ ಗೆ ಬಳುಸುವ ಪದ.
೩)ಬಪ್: ಸ್ಕಾಟ್ ಲ್ಯಾಂಡ್ ನಲ್ಲಿ ಸಿಹಿ ಇಲ್ಲದ ರೋಲ್ ಗೆ ಬಳುಸುವ ಪದ.
೪)ಡಿನ್ನರ್ ರೋಲ್:ಇದು ಸಣ್ಣ ರೋಲ್ ಸಾಮಾನ್ಯವಾಗಿ ಕುರುಕಲು.
೫)ಡಾಲರ್ ರೋಲ್:ಇದು ಸಣ್ಣ ಗಾತ್ರದ ರೋಲ್ ಸ್ಯಾಂಡ್ವಿಚ್ ಗಲ್ಲಿಗೆ ಬಳಸುತ್ತಾರೆ. 
೬)ಆನಿಯನ್ ರೋಲ್: ಈ ರೋಲ್ ನ್ನು ಈರುಳ್ಳಿಯಿಂದ ಮಾಡುತ್ತಾರೆ. ಕೆಲವೊಮ್ಮೆ ಸುವಾಸನೆಗೆ ಗಸಗಸೆ ಬೀಜಗಳನ್ನು ಉಪಯೋಗಿಸುತ್ತಾರೆ.
   ಪನ್ನೀರ್ ಬ್ರೆಡ್ ರೋಲ್ ಇದೊಂದು ಪ್ರಸಿದ್ಧವಾದ ಬ್ರೆಡ್ ರೋಲ್ ಆಗಿದೆ. ಇದೊಂದು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಬ್ರೆಡ್ ರೋಲ್ ಆಗಿದೆ. ಇದನ್ನು ತಯಾರಿಸಲು ಕೆಲವು ಬ್ರೆಡ್ ತುಂಡುಗಳು ಮತ್ತು ಪನ್ನೀರ್ ಹೂರಣವಿದ್ದರೆ ಸಾಕು. ಇದನ್ನು ತಯಾರಿಸುವುದು ಸಾಧಾರಣ ಬ್ರೆಡ್ ರೋಲ್ ನಂತೆ ತುಂಬಾ ಸರಳ. ಮೊದಲು ಬ್ರೆಡ್ ಅನ್ನು ರೋಸ್ಟ್ ಮಾಡಬೇಕು. ನಂತರ ಹೂರಣವನ್ನು ತಯಾರಿಸಲು ಖಾರದ ಪುಡಿ, ಗರಮ್ ಮಸಾಲ,ಉಪ್ಪು, ಹೆಚ್ಚಿದ ಕೊತುಂಬರಿ ಸೊಪ್ಪು, ಹೆಚ್ಚಿದ ಈರುಳ್ಳಿ ಎಲ್ಲವನ್ನು ಪನ್ನೀರ್ ಜೊತೆ ಮಿಶ್ರಮಾಡಿ ಅದಕ್ಕೆ ಟಮೋಟೋ ಸಾಸ್, ತುಂಠಿ ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನು ಮಿಶ್ರಮಾಡಿ ಅದನ್ನು ಬ್ರೆಡ್ ತುಂಡುಗಳ ಮಧ್ಯದಲ್ಲಿ ಇಟ್ಟರೆ ರುಚಿರುಚಿಯಾದ ಬ್ರೆಡ್ ರೋಲ್ ಸವಿಯಲು ಸಿದ್ಧ.