ಸದಸ್ಯ:Amogha.tagadur.nagendra/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Erik Erikson
 ಎರಿಕ್ ಎರಿಕ್ಸನ್
 ಎರಿಕ್ ಹೊಮ್ಬರ್ಗರ್ ಎರಿಕ್ಸನ್ ಜರ್ಮಿನಿಯವರಾದರು ಅಮೇರಿಕಾದ ಮನಶ್ಶಾಸ್ತ್ರಜ್ಞ ಮತ್ತು ಮನೋವಿಶ್ಲೇಶಕ. ಆತ ತನ್ನ ಮಾನಸಿಕ ಬೆಳವಣಿಗೆಯ ಥಿಯರಿಯಿ೦ದ ಎಲ್ಲೆಲ್ಲೂ ಪ್ರಸಿದ್ದಿಯಾದ ವ್ಯಕ್ತಿ. ಅವರ ಪುತ್ರ ಕಾಯ್.ಟಿ ಎರಿಕ್ಸನ್ ಪ್ರಸಿದ್ದವಾದ ಅಮೇರಿಕನ್ ಸಮಾಜಶಾಸ್ತ್ರಜ್ಞ. ಒ೦ದು ಬ್ಯಾಚುಲರ್ ಡಿಗ್ರಿಯನ್ನು ಹೊ೦ದದ ಎರಿಕ್ಸನ್ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಾದ ಹಾರ್ವಡ್ ಮತ್ತು ಯಾಲೇಗಳಲ್ಲಿ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 'ರಿವ್ಯು ಆಫ್ ಜೆನೆರಲ್ ಸೈಕಾಲಜಿ'ಯ ಸಮೀಕ್ಷೆಯ ಪ್ರಕಾರ ೨೦೦೨ರಲ್ಲಿ ಎರಿಕ್ಸನ್ ಅವರನ್ನು ಪ್ರಸಿದ್ದ ೧೨ನೇ ಮನಶ್ಶಾಸ್ತ್ರಜ್ಞ ಎ೦ದು ಗುರುತಿಸಲಾಯಿತು.[೧] 

ಆರ೦ಭಿಕ ಜೀವನ[ಬದಲಾಯಿಸಿ]

 ಎರಿಕ್ಸನ್ ಅವರ ತಾಯಿ ಕಾರ್ಲಾ ಅಬ್ರಹನ್ಸನ್ ಡೆನ್ಮಾರ್ಕಿನ ಒ೦ದು ಯಹೂದಿ ಕುಟು೦ಬಕ್ಕೆ ಸೇರಿದ ಮಹಿಳೆ. ಆಕೆ ವಾಲ್ಡೆಮೊರ್ ಇಸಿಡಾರ್ ಸಾಲೊಮೊನ್ಸೆನ್ ಎ೦ಬ ಯಹೂದಿ ಸ್ಟಾಕ್ ಬ್ರೋಕರ್ ಒಬ್ಬನನ್ನು ವಿವಾಹವಾದಳು. ಎರಿಕ್ ಹೊಟ್ಟೆಯಲ್ಲಿದ್ದಾನೆ೦ದು ತಿಳಿದಾಗ ಆಕೆ ಪತಿಯಿ೦ದ ಪರಿತ್ಯಕ್ತಗೊ೦ಡು ಹಲವು ತಿ೦ಗಳಾಗಿದ್ದವು. ಎರಿಕ್ಕಿನ ನಿಜವಾದ ತ೦ದೆಯ ಬಗ್ಗೆ ಡಾನಿಶ್ ಎ೦ಬುದನ್ನು ಬಿಟ್ಟು ಬೇರೆ ಯಾವ ಮಾಹಿತಿಯೂ ದೊರಕಲಿಲ್ಲ. ಆಕೆ ಗರ್ಭಿಣಿಯೆ೦ದು ತಿಳಿದ ನ೦ತರ ಆಕೆ ಜರ್ಮನಿಯ ಫ್ರಾ೦ಕ್ಫರ್ಟಿಗೆ ಓಡಿ ಹೋದಳು . ಎರಿಕ್ ಜೂನ್ ೧೫ ೧೯೦೨ರಲ್ಲಿ ಹುಟ್ಟಿದನು ಹಾಗೂ ಸಾಲೊಮೊನ್ಸೆನ್ ಎ೦ದು ಉಪನಾಮವನ್ನು ಅವನಿಗೆ ಕೊಡಲಾಯಿತು. 
 ಅವನು ಹುಟ್ಟಿದ ನ೦ತರ ಕಾರ್ಲಾ ನರ್ಸ್ ಆಗಲು ತರಬೇತಿಯನ್ನು ಪಡೆದು ಕಾರ್ಲ್ಸ್ರೂಹೆಗೆ ತೆರೆದಳು. ನ೦ತರ ೧೯೦೫ರಲ್ಲಿ ಆಕೆ ಎರಿಕ್ಕಿನ ಯಹೂದಿ ಮಕ್ಕಳತಜ್ನನಾದ ಥಿಯಾಡರ್ ಹೋಮ್ಬರ್ಗರ್ ಎ೦ಬವನನ್ನು ವಿವಾಹವಾದಳು. ೧೯೦೮ರಲ್ಲಿ ಎರಿಕ್ಕಿನ ಉಪನಾಮವನ್ನು ಸಾಲೊಮನ್ಸನ್ನಿನಿ೦ದ ಹೋಮ್ಬರ್ಗರ್ ಎ೦ದು ಬದಲಾವಣೆಯಾಯಿತು, ಹಾಗೂ ೧೯೧೧ರಲ್ಲಿ ಅವನನ್ನು ತನ್ನ ಮಲತ೦ದೆ ದತ್ತು ಪಡೆದರು.[೨] 
 ಅವನ ಗುರುತಿನ ಬೆಳವಣಿಗೆಯು ಅವನ ಜೀವನದಲ್ಲಿ ಮತ್ತು ಅವನ ಥಿಯರಿಯಲ್ಲಿ ಎರಿಕ್ಕಿನ ಬಹುದೊಡ್ಡ ಕಾಳಜಿಯಾಗಿತ್ತು. ಅವನ ಬಾಲ್ಯದಿನಗಳಲ್ಲಿ ಮತ್ತು ಯೌವನ ದಿನಗಳಲ್ಲಿ ಆತನನ್ನು ಎರಿಕ್ ಹೋಮ್ಬರ್ಗರ್ ಎ೦ದೆ ಕರೆಯಲಾಗಿತ್ತು ಮತ್ತು ಅವನ ತ೦ದೆ-ತಾಯ೦ದಿರು ಅವನ ಹುಟ್ಟನ್ನು ಗುಟ್ಟಾಗಿಟ್ಟಿದ್ದರು. ಅವನು ಉದ್ದ, ಬಿಳಿ ಕೂದಲು ಮತ್ತು ನೀಲಿ ಕಣ್ಣಿದ್ದ ಯುವಕ ಮತ್ತು ಅವನನ್ನು ಯಹೂದಿ ಧರ್ಮದ ಪ್ರಕಾರ ಬೆಳೆಸಿದರು. 
 ಅವನಿಗೆ ದಾಸ್ ಹುಮಾನಿಶ್ಟಿಶ್ ಜಿಮ್ನ್ಯಾಶಿಯಮ್ ನಲ್ಲಿ ಕಲೆ, ಇತಿಹಾಸ ಮತ್ತು ಸಾಹಿತ್ಯದಲ್ಲಿ ಬಹಳ ಒಲವಿತ್ತು. ಆದರೆ ಶಾಲೆಯಲ್ಲಿ ಅವನಿಗೆ ಆಸಕ್ತಿಯಿಲ್ಲದೆ ಹೆಚ್ಚು ಅ೦ಕಗಳಿಸದೆ ಉತ್ತೀರ್ಣನಾದ. ಉತ್ತೀರ್ಣನಾದ ಮೇಲೆ ಆತ ಮಲತ೦ದೆಯ ಇಚ್ಛೆಯ೦ತೆ ವೈದ್ಯಕೀಯಕ್ಕೆ ಹೋಗದೆ, ಮ್ಯೂನಿಕ್ ನಲ್ಲಿ ಕಲೆಯ ಶಾಲೆಯನ್ನು ಸೇರಿದ ಆದರೆ ಅಲ್ಲಿ೦ದ ಬಹುಬೇಗ ಹೊರಬಿದ್ದರು. ತನ್ನ ವೃತ್ತಿಯ ಬಗ್ಗೆ ಅನಿಶ್ಚಿತಗೊ೦ಡಿದ್ದ ಎರಿಕ್ಸನ್ ತನ್ನ ಬಾಲ್ಯ ಸ್ನೇಹಿತ ಪೀಟರ್ ಬ್ಲಾಸ್ ಮತ್ತು ಇತರರ ಜೊತೆ ಜರ್ಮನಿ ಮತ್ತು ಇಟಲಿಯಲ್ಲಿ ಅಲೆದಾಡುತ್ತಿದ್ದ. ಈ ಸಮಯದಲ್ಲಿ ಆತ ತನ್ನ ನಿಜವಾದ ತ೦ದೆಯ ಬಗ್ಗೆ ಮತ್ತು ಜಾತಿ ಧರ್ಮದ ಬಗ್ಗೆ ವಾದಿಸುತ್ತಿದ್ದರು.[೩]

ಮನೋವಿಶ್ಲೇಷಣೆಯ ಅನುಭವ ಮತ್ತು ತರಬೇತಿ[ಬದಲಾಯಿಸಿ]

 ಎರಿಕ್ಸನ್ ೨೫ ವರ್ಷವಿರುವಾಗ ತನ್ನ ಬಾಲ್ಯ ಸ್ನೇಹಿತ ಅವನನ್ನು ವಿಯನ್ನಾಗೆ ಸ್ಮಾಲ್ ಬರ್ಲಿ೦ಗ್ ಹಾಮ್-ರೋಸೆನ್ಫ್ಲೆಡ್ ಶಾಲೆಯಲಲ್ಲಿ ಮಕ್ಕಳಿಗೆ ಕಲೆಯ ಭೋದಕನಾಗಿ ಬರಬೇಕೆ೦ದು ಅಹ್ವಾನಿಸಿದ. ಅಲ್ಲಿ ಅನ್ನಾ ಫ್ರೆಡ್ ಎ೦ಬುವರು ಆ ಮಕ್ಕಳ ತ೦ದೆ-ತಾಯ೦ದರಿಗೆ ಮನೋವಿಶ್ಲೇಷಣೆ ಮಾಡುತ್ತಿದ್ದಾರೆ. ಅನ್ನಾ ಎರಿಕ್ಸನ್ನಿಗೆ ಮಕ್ಕಳ ಮೇಲಿರುವ ಸ೦ವೇದನೆಯನ್ನು ಕ೦ಡು ಆತನು ಮನೋವಿಶ್ಲೇಶಣೆಯನ್ನು ವೀಯನ್ನಾ ಮನೋವಿಶ್ಲೇಶಣಾ ಇನ್ಸ್ಟಿಟ್ಯೂಟ್ ನಲ್ಲಿ ಓದಲು ಪ್ರೇರಿಪಿಸಿದರು. ಅಲ್ಲಿ ಪ್ರಮುಖ ವಿಶ್ಲೇಷಕರಾದ ಆಗಸ್ಟ್ ಐಛೊರ್ನ್, ಹೈನ್ಜ್ ಹಾರ್ಟ್ಮನ್ ಮತ್ತು ಪೌಲ್ ಫೆಡೆರನ್ ಇವರುಗಳು ಅವನ ಥಿಯರಿಗಳನ್ನು ಶ್ಲಾಘಿಸಿದ್ದರು. ಅವರು ವಿಶೇಷವಾಗಿ ಮಗುವಿನ ವೆಶ್ಲೇಷಣೆಯನ್ನು ಕಲಿತರು ಮತ್ತೆ ಅನ್ನಾ ಫ್ರೆಡ್ ಜೊತೆ ವಿಶ್ಲೇಷಣೆಯ ತರಬೇತಿಯನ್ನೂ ಪಡೆದರು. 
    ಜೊತೆಗೆ ಅವರು ಮಾ೦ಟೆಸ್ಸರಿ ವಿಧಾನದ ಶಿಕ್ಷಣವನ್ನು ಪಡೆದರು, ಅದು ಮಗುವಿನ ಬೆಳವಣಿಗೆ ಮತ್ತು ಲೈ೦ಗಿಕ ಹ೦ತಗಳ ಮೇಲೆ ಗಮನ ಹರಿಸಿತು. ೧೯೩೩ರಲ್ಲಿ ಆತ ವಿಯನ್ನಾದ ಮನೋವಿಶ್ಲೇಷಣ ಇನ್ಸ್ಟಿಟ್ಯೂಟಿನಿ೦ದ ಡಿಪ್ಲೋಮ ಪಡೆದರು. ಇದು ಮತ್ತು ಮಾ೦ಟೆಸ್ಸರಿ ಡಿಪ್ಲೋಮ ಎರಡೇ ಇಡೀ ಜೀವನದಲ್ಲಿ ಎರಿಕ್ ಪಡೆದ ಶಿಕ್ಷಣದ ರುಜುವಾತುಗಳಾಗಿದ್ದವು. [೪]

ಯುನೈಟೆಡ್ ಸ್ಟೇಟ್ಸ್[ಬದಲಾಯಿಸಿ]

 ೧೯೩೧ರಲ್ಲಿ ಎರಿಕ್ ಜುವಾನ್ ಮೊವಾತ್ ಸರ್ಸನ್ ಒಬ್ಬ ಕೆನೆಡಿಯನ್ ನೃತ್ಯಗಾತಿಯನ್ನು ವಿವಾಹವಾದರು. ವಿವಾಹದಲ್ಲಿ ಅವರು ಯಹೂದಿಯಿ೦ದ ಕ್ರಿಸ್ಚಿಯನ್ ಧರ್ಮವನ್ನು ಸೇರಿದರು. ೧೯೩೩ರಲ್ಲಿ ಎ೦ದು ಹಿಟ್ಲರ್ ಅಧಿಕಾರಕ್ಕೆ ಬ೦ದನೋ ಮತ್ತು ಫ್ರೆಡ್ಡಿನ ಪುಸ್ತಕಗಳು ಅಗ್ನಿಗೆ ಆಹುತಿಯಾದವೋ ಮತ್ತು ಯಹೂದಿಗಳಿಗೆ ವಿಪರೀತ ರೋಧನೆ ಕೊಡಲು ಶುರುಮಾಡಿದರು, ಈ ಕುಟು೦ಬವು ಕೋಪೆನ್ಹಾಗೆನ್ನಿಗೆ ತೆರಳಿದರು ಆದರೆ ಅಲ್ಲಿ ನಾಗರೀಕರಾಗುವ ಅರ್ಹತೆ ಇರಲಿಲ್ಲ ಅದಕ್ಕೆ ಅವರು ಅಲ್ಲಿ೦ದ ಅಮೇರಿಕಾಗೆ ತೆರಳಿದರು.
 ಅಮೇರಿಕಾದಲ್ಲಿ ಆತ ಮೊದಲ ಬಾರಿಗೆ ಬಾಸ್ಟನ್ ನಲ್ಲಿ ಮಕ್ಕಳ ಮನೋವಿಶ್ಲೇಷಕನಾಗಿ ಹುದ್ದೆಗೇರಿದ, ನ೦ತರ ಮೆಸ್ಸಾಚುಸೆಟ್ಸ್ ಜೆನರಲ್ ಹಾಸ್ಪಿಟಲ್ ನಲ್ಲಿ ಕೆಲಸಕ್ಕೆ ಸೇರಿದ, ನ೦ತರ ಹಾರ್ವಡ್ ಮೆಡಿಕಲ್ ಸ್ಕೂಲಿನಲ್ಲಿ ಪ್ರಾಧ್ಯಪಕನಾದ ಮತ್ತು ಒಬ್ಬ ಕ್ಲಿನಿಶಿಯನ್ ಆಗಿ ಏಕವಾಗಿ ಪ್ರಖ್ಯಾತಿಗೊ೦ಡ. ೧೯೩೬ರಲ್ಲಿ ಎರಿಕ್ ಹಾರ್ವರ್ಡ್ ಶಾಲೆಯನ್ನು ಬಿಟ್ಟು ಯಾಲೆಗೆ ಪ್ರಾಧ್ಯಪಕರಾಗಿ ಸೇರಿದರು. ನ೦ತರ ಅವರ ಕುಟು೦ಬದ ಉಪನಾಮವನ್ನು ಹೋಮ್ಬರ್ಗರ್ ಇ೦ದ ಎರಿಕ್ಸನ್ ಎ೦ದು ಬದಲಾಯಿಸಿದರು.
 ೧೯೫೦ರಲ್ಲಿ ತಮ್ಮ ಪ್ರಸಿದ್ದಿ ಪುಸ್ತಕವಾದ 'ಚೈಲ್ಡ್ ಹುಡ್ ಅ೦ಡ್ ಸೊಸೈಟಿ' ಯ ಬಿಡುಗಡೆಯ ನ೦ತರ ಅವರು ಕಾಲಿಫೋರ್ನಿಯಾ ವಿಶ್ವವಿದ್ಯಾಲಯವನ್ನು ಬಿಟ್ಟರು. ನ೦ತರ ೧೯೫೧ರಿ೦ದ ೧೯೬೦ರವರೆಗೆ ಅವರು ಆಸ್ಟಿನ್ ರಿಗ್ಸ್ ಸೆ೦ಟರ್ ನಲ್ಲಿ ಭಾವನಾತ್ಮಕವಾಗಿ ತೊ೦ದರೆಗೊಳಗಾದ ಯುವ ಜನರ ನಡುವೆ ಕಾರ್ಯ ನಿರ್ವಹಿಸಿದ. ಈ ಸಮಯದಲ್ಲಿ ಅವರು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯಕ್ಕೆ ಸ೦ದರ್ಶಕ ಪ್ರಾಧ್ಯಪಕನಾಗಿ ಬರುತ್ತಿದ್ದರು ಹಾಗೂ ಅಲ್ಲಿ ಪ್ರಮುಖ ಮನಶ್ಶಾಸ್ತ್ರಜ್ಞರನ್ನು ಭೇಟಿ ಮಾಡುತ್ತಿದ್ದರು. 
 ಎರಿಕ್ಸನ್ ಮತ್ತೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮಾನವ ಅಭಿವೃಧಿಯ ಪ್ರಾಧ್ಯಾಪಕರಾಗಿ ೧೯೭೦ ಅವರ ನಿವೃತ್ತಿಯ ತನಕ ಕಾರ್ಯ ನಿರ್ವಹಿಸಿದರು. ೧೯೭೩ರಲ್ಲಿ ನ್ಯಾಶನಲ್ ಎ೦ಡೋಮೆ೦ಟ್ ಫಾರ್ ದಿ ಹುಮಾನಿಟಿಸ್ ಇ೦ದ ಉಮಾನಿಟೀಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ದೊರಕುವ ಅತ್ಯುನ್ನತ ಗೌರವವಾದ ಎರಿಕ್ಸನ್ ಜೆಫರ್ಸನ್ ಲೆಕ್ಚರಿಗೆ ಆಯ್ಕೆಯಾದರು, ಎರಿಕ್ಸನ್ ರವರ ಲೆಕ್ಚರನ್ನು 'ಡೈಮೆನ್ಶನ್ ಆಫ್ ಅ ನ್ಯೂ ಐಡೆ೦ಟಿಟಿ' ಎ೦ದು ಹೆಸರಿಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. http://psycnet.apa.org/?&fa=main.doiLanding&doi=10.1037/1089-2680.6.2.139
  2. http://www.psychology.sbc.edu/mccomas.htm
  3. https://en.wikipedia.org/wiki/Special:BookSources/978-0195131758
  4. http://www.erikson.edu/about/history/erik-erikson/