ಸದಸ್ಯ:2240777chethanramm/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರುಳಿನ ಸೂಕ್ಷ್ಮಜೀವಿಗಳು[ಬದಲಾಯಿಸಿ]

ಗಟ್ ಮೈಕ್ರೋ ಬಯೋಮ್ ಇದು ನಮ್ಮ ಕರುಳಿನ ಸೂಕ್ಷ್ಮಜೀವಿಗಳ ಸಂಪತ್ತು. ಇದು ವಿವಿಧ ರೀತಿಯ ಸೂಕ್ಷ್ಮ ಜೀವಿಗಳಾದ: ಬ್ಯಾಕ್ಟೀರಿಯಾ, ಆರ್ಕಿಯಾ, ಶಿಲೀಂಧ್ರಗಳು ಮತ್ತು ವೈರಸ್ ಗಳನ್ನು ಹೊಂದಿರುತ್ತದೆ. ನಮ್ಮ ಕರುಳು ಸೂಕ್ಷ್ಮಜೀವಿಗಳ ಕೇಂದ್ರ ನಿವಾಸಸ್ಥಳ. ನಮ್ಮ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಸಂಖ್ಯೆ ೧೦೦ ಲಕ್ಷ ಕೋಟಿಗೂ ಮೀರಿದ್ದು. ಹೀಗಾಗಿ ನಮ್ಮ ದೇಹದಲ್ಲಿ ಇರುವ ಜೀವಕೋಶಗಲ್ಲಿ ಶೇಕಡಾ ತೊಂಬತ್ತು ಪ್ರತಿ-ಶತ ಕರುಳಿನ ಸೂಕ್ಷ್ಮಜೀವಿಗಳೇ ಇರುತ್ತವೆ. ಇಷ್ಟು ವಿಶಾಲವಾದ ಸೂಕ್ಷ್ಮಜೀವಿಗಳ ಸೈನ್ಯ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಕರುಳಿನ ಮೇಲಿನ ಪದರವನ್ನು ಕಾಪಾಡುವುದು, ಆಹಾರ ಮತ್ತು ಔಷಧೀಯ ಪದಾರ್ಥಗಳನ್ನು ವಿಚ್ಛೇದ ಮಾಡುವುದು ಹಾಗು ನಮ್ಮ ನಡವಳಿಕೆ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತದೆ.

"ಈ. ಕೋಲೈ" ಕರುಳಿನಲ್ಲಿ ವಾಸಿಸುವ ಬಸಿಟೇರಿಯಾದ ಪ್ರಕಾರ

ಮಾನವರಲ್ಲಿ ಕರುಳಿನ ಸೂಕ್ಷ್ಮ ಜೀವಿ ಘಟಕವು ಜನನದ ನಂತರ ಒಂದೆರಡು ವರ್ಷಗಳಲ್ಲಿ ವಿಕಸಿತವಾಗುತ್ತದೆ. ಆ ಹೊತ್ತಿಗೆ ಕರುಳಿನ ಹೊರಪದರ ಮತ್ತು ಕರುಳಿನ ಲೋಳೆಯ ತಡೆಗೋಡೆ ಸ್ಥಾಪಿತವಾಗುತ್ತದೆ. ಕರುಳಿನ ಹೊರಪದರ ಮತ್ತು ಲೋಳೆ ಈ ಸೂಕ್ಷ್ಮಜೀವಿಗಳ ಅಭಿವೃದ್ಧಿಯಲ್ಲಿ ಸಹಕಾರಿಯಾಗುತ್ತದೆ. ಈ ಸೂಕ್ಷ್ಮಜೀವಿಗಳ ಮತ್ತು ಕರುಳಿನ ಒಕ್ಕೂಟ ರೋಗಕಾರಕ ಜೀವಿಗಳ ವಿರುದ್ಧ ತಡೆಗೋಡೆಯಾಗಿ ನಿಲ್ಲುತ್ತದೆ.

ಸಂಯೋಜನೆ[ಬದಲಾಯಿಸಿ]

ಕರುಳಿನ ಸೂಕ್ಷ್ಮಜೀವಿಗಳ ಸಂಯೋಜನೆ ಜೀರ್ಣಾಂಗದ ಉದ್ದಕು ಬದಲಾಗುತ್ತದೆ. ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿ, ತುಲನಾತ್ಮಕವಾಗಿ ಕೆಲವು ಜಾತಿಯ ಬ್ಯಾಕ್ಟೀರಿಯಾಗಳು ಕಾಣಲು ಸಿಗುತ್ತವೆ. ಇದಕ್ಕೆ ವಿರುದ್ಧವಾಗಿ, ದೊಡ್ಡ ಕರುಳಿನ ಭಾಗವಾದ ಕೋಲನ್ ನಲ್ಲಿ, ಇದುವರೆಗೆ ಅಧ್ಯಯನ ಮಾಡಲಾದ ಮಾನವ-ಸಂಬಂಧಿತ ಸೂಕ್ಷ್ಮಜೀವಿಗಳಲ್ಲಿ ಅತಿ ಹೆಚ್ಚು ಸೂಕ್ಷ್ಮಜೀವಿಗಳ ಸಾಂದ್ರತೆ ಕಾಣಲು ಸಿಗುತ್ತದೆ. ಇದಕೆ ಮುಖ್ಯ ಕಾರಣವೆಂದರೆ ಹೊಟ್ಟೆಯಲ್ಲಿ ಇರುವ ಹೈಡ್ರೊ-ಕ್ಲೋರಿಕ್ ಆಮ್ಲವು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುವುದಿಲ್ಲ. ಮಾನವನ "ಕೋಲನ್ನ" ನ 1 ಗ್ರಾಂ ಅಂಗಾಂಶಕೆ  1010 ಅಥವಾ 1011 ಸಂಖ್ಯೆಯಷ್ಟು ಸೂಕ್ಷ್ಮಜೀವಿಗಳ ಸಾಂದ್ರತೆ ಕಾಣಲು ಸಿಗುತ್ತದೆ.

ಕರುಳಿನ ಸೂಕ್ಷ್ಮಜೀವಿಗಳ ಪ್ರಕಾರಗಳು:[ಬದಲಾಯಿಸಿ]

ಬ್ಯಾಕ್ಟೀರಿಯಾ[ಬದಲಾಯಿಸಿ]

ಕರುಳಿನ ಸೂಕ್ಷ್ಮಜೀವಿಗಳಲ್ಲಿ ಹೆಚ್ಚಿನ ಭಾಗವನ್ನು ಬ್ಯಾಕ್ಟೀರಿಯಾ ರೂಪಿಸುತ್ತವೆ. ಇಲ್ಲಿ ಕಾಣಲು ಸಿಗುವ ಬ್ಯಾಕ್ಟೀರಿಯಾ ಗಳು ಸುಮಾರು 300 - 1000 ವಿವಿಧ ಜಾತಿಗಳನ್ನು ಪ್ರತಿನಿಧಿಸುತ್ತವೆ. ಆದರೂ 99 ಪ್ರತಿ-ಶತ ಬ್ಯಾಕ್ಟೀರಿಯಾ ಗಳು 30 ಅಥವಾ 40 ಜಾತಿಗಳಿಂದ ಬರುತ್ತವೆ. ಕರುಳಿನಲ್ಲಿ 'ಬ್ಯಾಕ್ಟೀರಿಯಾ'ಗಳ ಸಮೃದ್ಧಿಯ ಪರಿಣಾಮವಾಗಿ, ಮಲದ ಒಣ ದೃವ್ಯದ ತೂಕದ 60 ಪ್ರತಿ-ಶತ ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ. ಕರುಳಿನಲ್ಲಿರುವ 99 ಪ್ರತಿ-ಶತ ಬ್ಯಾಕ್ಟೀರಿಯಾಗಳು ಆಮ್ಲಜನಕಕ್ಕೆ ಅನಿರ್ಬಂಧವಾಗಿವೆ. ಆದರೆ ದೊಡ್ಡ ಕರುಳಿನ "ಸಿಕುಮ್" ಎಂಬ ಭಾಗದಲ್ಲಿ ಆಮ್ಲಜನಕ ನಿರ್ಬಂಧಿತ ಬ್ಯಾಕ್ಟೀರಿಯಾ ಗಳು ಕಾಣಲು ಸಿಗುತ್ತವೆ. ಮಾನವನ ಕರುಳಿನಲ್ಲಿರುವ ಐದು ಪ್ರಕಾರದ ಪ್ರಬಲ ಬ್ಯಾಕ್ಟೀರಿಯಾ ಗಳ 'ಫೈಲಮ್ಗ'ಳಾದ (ಬ್ಯಾಕ್ಟೀರಿಯಾದ ಕುಲಗಳು): ಬ್ಯಾಸಿಲೋಟಾ (ಫರ್ಮಿಕ್ಯೂಟ್ಸ್), ಬ್ಯಾಕ್ಟೀರಾಯ್ಡೋಟಾ, ಆಕ್ಟಿನೊಮೈಸೆಟೋಟಾ, ವೇರುಕಾಮೈಕ್ರೋಬೈಯೋಟ ಮತ್ತು ಸ್ಯೂಡೋಮೊನಾಡೋಟಾ ಇವುಗಳ ಪ್ರಬೇಧಗಳು ಕಾಣಲು ಸಿಗುತ್ತವೆ. ಎಸ್ಚೆರಿಚಿಯಾ ಮತ್ತು ಲ್ಯಾಕ್ಟೋಬಾಸಿಲಸ್‌ ನಂತಹ ಇತರ ಕುಲಗಳಿಂದಲೂ ಬ್ಯಾಕ್ಟೀರಿಯಾಗಳು ಕಾಣಲು ಸಿಗುತ್ತವೆ. ಬ್ಯಾಕ್ಟೀರಾಯ್ಡೋಟಾ ಕುಲದ ಬ್ಯಾಕ್ಟೀರಾಯ್ಡ್ಸ್ ಮತ್ತು ಬೈಫಿಡೋಬ್ಯಾಕ್ಟೀರಿಯ ಎಂಬ ಪ್ರಬೇಧಗಳು ಕರುಳಿನ ಸೂಕ್ಷ್ಮಜೀವಿಗಳ ಸಂಖ್ಯೆಯಲ್ಲಿ 90 ಪ್ರತಿ-ಶತ ರೂಪಿಸುತ್ತವೆ. ಈ ಮಾಹಿತಿಯಿಂದ ಬ್ಯಾಕ್ಟೀರಾಯ್ಡೋಟಾ ಎಂಬ ಕುಲ ಮಾನವನ ಅಸ್ತಿತ್ವಕ್ಕೆ ಪ್ರಮುಖವಾದದ್ದು ಎಂದು ತಿಳಿಯಬಹುದು.

ಹೊಟ್ಟೆಯಲ್ಲಿ ಕಾಣಲು ಸಿಗುವ ಕೆಲವು ಬ್ಯಾಕ್ಟೀರಿಯಾ ಗಳಲ್ಲಿ "ಹೆಲಿಕೋಬ್ಯಾಸಿಟರ್ ಪೈಲೊರಿ"  ಎಂಬ ತಳಿ ಒಂದು. ಇದು ಹೊಟ್ಟೆಯ ಲೋಳೆಪೊರೆಯ ಮೇಲೆ ಬೆಳೆಯುತ್ತದೆ. ಇದು ಹೊಟ್ಟೆ ಹುಣ್ಣು ರೋಗವನ್ನು ಉಂಟುಮಾಡುತ್ತದೆ. ಹಾಗೆಯೆ ತೀವ್ರ ಪರಿಸ್ಥಿತಿಯಲ್ಲಿ ಹೊಟ್ಟೆಯ  'ಕ್ಯಾನ್ಸರ್'ಗೆ ಕಾರಣವಾಗಿದೆ.

ಆರ್ಕಿಯಾ[ಬದಲಾಯಿಸಿ]

ಆರ್ಕಿಯಾ ಕರುಳಿನ ಸೂಕ್ಷ್ಮಜೀವಿಗಳಲ್ಲಿ ಕೇವಲ 1-2 ಪ್ರತಿಶತ ಸೂಕ್ಷ್ಮಜೀವಿಗಳನ್ನು ಪ್ರತಿನಿಧಿಸುತ್ತದೆ .ಆದರೂ ಇವು ಬ್ಯಾಕ್ಟೀರಿಯಾದ ಹುದುಗುವಿಕೆಯ (ಫರ್ಮೆಂಟೇಶನ್) ಉತ್ಪನ್ನಗಳ್ಳನು ವಿಚೇದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೆ ಮೀಥೇನ್ ಅನಿಲವನ್ನು ಉತ್ಪಾದಿಸುವಲ್ಲಿ ಇವು ಅತ್ಯಗತ್ಯ.

ಶಿಲೀಂಧ್ರಗಳು (ಫಂಗಸ್)[ಬದಲಾಯಿಸಿ]

ಕರುಳಿನಲ್ಲಿ ಪತ್ತೆಯಾಗಿರುವ ಶಿಲೀಂಧ್ರಗಳ ತಳಿಗಳು: ಕ್ಯಾಂಡಿಡಾ, ಸಕ್ರೋಮೈಸಿಸ್, ಆಸ್ಪರ್ಜಿಲ್ಲಸ್, ಪೆನಿಸಿಲಿಯಮ್, ರೋಡೋಟೊರುಲಾ, ಬುಲ್ಲೆರಾ, ಗ್ಯಾಲಕ್ಟೊಮೈಸಸ್, ಇತರ ಹಲವು ಸೇರಿವೆ. ರೋಡೋಟೊರುಲಾ ಎಂಬ ತಳಿ, ಹೆಚ್ಚಾಗಿ "ಇಂಪ್ಲಾಮೆಟೋರಿ ಬೋವೆಲ್ ಕಾಯಿಲೆ" ಇರುವ ರೋಗಿಗಳಲ್ಲಿ ಕಾಣಲು ಸಿಗುತ್ತದೆ. ಹಾಗೆಯೆ, ದೀರ್ಘಕಾಲದಿಂದ ಹೆಪಟೈಟಿಸ್ ಬಿ ಮತ್ತು ಸಿರೋಸಿಸ್ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಕ್ಯಾಂಡಿಡಾ ಎಂಬ ತಳಿ ಹೆಚ್ಚಾಗಿ ಕಂಡುಬರುತ್ತದೆ.

ಮಾನವ ಸಮೃದ್ಧಿಯ ಜೊತೆಗೆ ಪರಿಸರದಲ್ಲಿ ಶುಚಿ ಮತ್ತು ಕ್ರಿಮಿನಾಶನ ಹೆಚ್ಚಾಗುತ್ತಾ ಬರುತ್ತಿದೆ. ಇದರಿಂದ ಅನೇಕ ಪ್ರಯೋಜನಕಾರಿ ಕರುಳಿನ ಸೂಕ್ಷ್ಮಜೀವಿಗಳ ತಳಿಗಳು ಶಾಶ್ವತವಾಗಿ ನಾಶವಾದವು.

ಕಾರ್ಯಗಳು[ಬದಲಾಯಿಸಿ]

ರೋಗಕಾರಕ ಜೀವಿಗಳ ನೇರ ಪ್ರತಿಬಂಧ[ಬದಲಾಯಿಸಿ]

ಕರುಳಿನ ಸೂಕ್ಷ್ಮಜೀವಿಗಳು ಕರುಳನ್ನು ಪೂರ್ತಿಯಾಗಿ ಆಕ್ರಮಿಸಿಕೊಳ್ಳುತ್ತವೆ. ಅನಂತರ ಹೊರಗಿನ ರೋಗಕಾರಕ ಜೀವಿಗಳಿಗೆ ಸ್ಥಳ ಮತ್ತು ಆಹಾರ ನೀಡದೆ ಅವುಗಳ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ. ಹಾಗೆಯೆ ಕರುಳಿನ ಸೂಕ್ಷ್ಮಜೀವಿಗಳು "ಸೈಟೊಕೈನ್ಸ್" ಎಂಬ ರಸನಿಕಗಳ್ಳನು ಬಿಡುಗಡೆ ಮಾಡಿ ತನ್ನ ಜೊತೆ ಸ್ಪರ್ಧೆ ಮಾಡುವ ರೋಗ ಕಾರಕ ಜೀವಿಗಳನ್ನು ಪ್ರತಿಬಂಧಿಸುತ್ತದೆ. ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹೊರಗಿನ ರೋಗಕಾರಕಗಳ್ಳನು ಕೊಂದು ಹಾಕಲು "ಸೈಟೊಕೈನ್ಸ್" ಎಂಬ ರಸನಿಕಗಳ್ಳನು  ಉತ್ಪಾದಿಸುತ್ತದೆ. ಕರುಳಿನ ಸೂಕ್ಷ್ಮಜೀವಗಳಿಗೆ ತೊಂದರೆ ಆದರೆ, ಸಾಮಾನ್ಯವಾಗಿ ನಿಯಂತ್ರಣದಲ್ಲಿರುವ "ಕ್ಲೊಸ್ಟ್ರೀಡಿಯಂ  ಡಿಫೆಸೆಲ್" ನಂತಹ ರೋಗಕಾರಕಗಳು ಕರುಳಲ್ಲಿ ಸ್ಥಾಪನೆಯಾಗುತ್ತವೆ.

ಪ್ರತಿರಕ್ಷಣಾ ವ್ಯವಸ್ಥೆಯ (ಇಮ್ಯೂನ್ ಸಿಸ್ಟಮ್) ಅಭಿವೃದ್ಧಿ [ಬದಲಾಯಿಸಿ]

ಕರುಳಿನ ಹೊರಪದರೆ, ಲೋಳೆಯ ತಡೆಗೋಡೆ (ಮ್ಯೂಕಸ್) ಮತ್ತು ಗೋಬ್ಲೆಟ್ ಜೀವಕೋಶಗಳ್ಳನು  ವರ್ಣಿಸುವ ಚಿತ್ರ

ಮಾನವನಲ್ಲಿ ಕರುಳಿನ ಸೂಕ್ಷ್ಮಜೀವಿ ಘಟಕವು ಹುಟ್ಟಿದ ಮೇಲೆ ಒಂದೆರಡು ವರ್ಷಗಳ್ಲಲಿ ಸಂಪೂರ್ಣವಾಗಿ ಸ್ಥಾಪನೆ ಆಗುತ್ತದೆ. ಈ ಘಟಕದ ಜೊತೆಯಲ್ಲೇ ಕರುಳಿನ ಹೊರಪದರ ಮತ್ತು ಕರುಳಿನ ಲೋಳೆಯ ತಡೆಗೋಡೆ ಸ್ಥಾಪಿತವಾಗುತ್ತದೆ. ಇದಕೆ ಒಂದು ನಿರ್ದಿಷ್ಟವಾದ ಕಾರಣವೆಂದರೆ, ಕರುಳಿನ ಪದರದಲ್ಲಿ ಸಹಾಯಕ ಸೂಕ್ಷ್ಮಜೀವಿಗಳಾದ ಗೋಬ್ಲೆಟ್  ಜೀವಕೋಶಗಳು ನೆಲೆಸಿರುತ್ತವೆ. ಇವುಗಳು ರಾಸಾಯನಿಕಗಳನ್ನು ಉತ್ಪಾದಿಸಿ ಕರುಳಿನ ಹೊರಪದರವನ್ನು ಪಸರಿಸುವಲ್ಲಿ ಸಹಾಯಮಾಡುತ್ತವೆ ಮತ್ತು ಕರುಳಿನ ಲೋಳೆಪದರವನ್ನು ದಪ್ಪಮಾಡುತ್ತವೆ. ಇದು ಕರುಳಿನ ಸೂಕ್ಷ್ಮಜೀವಿಗಳಿಗೆ ಬೆಂಬಲದ ವಾತಾವರಣ ಸೃಷ್ಟಿ ಮಾಡಿ, ಅಭಿವೃದ್ಧಿಯಾಗಲು ಸ್ಥಳ ಮತ್ತು ಆಹಾರ ನೀಡುತ್ತದೆ. ಆದರೆ ಹೊರಗಿನ ಸೂಷ್ಮಜೀವಿಗಳು ಕರುಳಿನಲ್ಲಿ ಬೆಳೆಯುವುದನ್ನು ತಡೆಗಟ್ಟುತ್ತದೆ.

ಕರುಳಿನ ಹೊರಪದರದ ಭಾಗವಾದ ಕರುಳು-ಸಂಬಂದಿತ-ಲಿಂಫೋಯ್ಡ್-ಅಂಗಾಂಶವು (GALT) ಸೂಕ್ಷ್ಮಜೀವಿಗಳ ಜೊತೆಯೇ ಹುಟ್ಟಿನ ಮೊದಲೆರಡು ವರ್ಷಗಳಲ್ಲಿ ಬೆಳವಣಿಗೆ ಆಗುತ್ತದೆ. ಹೀಗೆ "ಗೋಬ್ಲೆಟ್  ಜೀವಕೋಶಗಳು", ಕರುಳಿನ ಲೋಳೆಪದರ ಮತ್ತು ಕರುಳು-ಸಂಬಂದಿತ-ಲಿಂಫೋಯ್ಡ್-ಅಂಗಾಂಶವು, ಕರುಳಿನ ಸೂಕ್ಷ್ಮಜೀವಿಗಳ ಜೊತೆಗೆ ಹೊರಗಿನ ರೋಗಕಾರಕಗಳ್ಳನು ತಡೆಯಲು ಒಂದು ತಂಡವಾಗಿ ಕೆಲಸ ಮಾಡುತ್ತವೆ.

ಕರುಳಿನ ಸೂಕ್ಷ್ಮಜೀವಿಗಳು "ಆಂಟಿಬಾಡೀಸ್" ನಂತಹ ಪ್ರತಿಕಾಯಗಳ ಉತ್ಪನ್ನದಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಈ ನಿಯಂತ್ರಣದ ಒಂದು ಉದಾಹರಣೆ ಎಂದರೆ, ಪ್ರತಿರಕ್ಷಣಾ ವ್ಯವಸ್ಥೆಯ "ಬಿ ಜೀವಕೋಶಗಳ್ಳನು" "ಇಮ್ಯುನೋ ಗ್ಲೋಬಿನ್ ಎ" ಎಂಬ ಪ್ರತಿಕಾಯಗಳು (ಆಂಟಿಬಾಡೀಸ್) ಹೊಂದಿರುವ ಜೀವಕೋಶಗಳಾಗಿ ಬದಲಾಯಿಸುವುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಪರಿವರ್ತನೆಗೆ ಟಿ ಜೀವಕೋಶಗಳ ಬೆಂಬಲ ಬೇಕಾಗಿರುತ್ತದೆ. ಆದರೆ ಕೆಲವು ಬಾರಿ ಕರುಳಿನ ಜೀವಕೋಶಗಳು ಕರುಳಿನ ಹೊರಪದರದಲ್ಲಿ ಇರುವ ಜೀವಕೋಶಗಳ ಮೇಲೆ ಪ್ರಭಾವ ಬೀರಿ ಅವುಗಳಿಂದ NF-kB ಎಂಬ ರಾಸಾಯಿನಿಕ ಸಂಕೇತಗಳ್ಳನು ಉತ್ಪಾದಿಸುತ್ತವೆ. ಈ ಸಂಕೇತಗಳು ಬಿ ಜೀವಕೋಶಗಳನ್ನು ಇಮ್ಯುನೋ ಗ್ಲೋಬಿನ್ ಎ ಪ್ರತಿಕಾಯ ಹೊಂದಿರುವ ಜೀವಕೋಶಗಳಾಗಿ ಬದಲಾಯಿಸುತ್ತವೆ. "ಇಮ್ಯುನೋ ಗ್ಲೋಬಿನ್ ಎ" ಹೊಂದಿರುವ ಪ್ರತಿರಕ್ಷಣಾ ವ್ಯವಸ್ಥೆಯ ಜೀವಕೋಶಗಳು ಹೊರಗಿನ ರೋಗಕಾರಕಗಳನ್ನು ನಾಶ ನಾಶಮಾಡುತ್ತವೆ. ಹಾಗೆಯೆ ದೇಹ ಮತ್ತು ಕರುಳಿನ ಜೀವಕೋಶಗಳ ನಡುವೆ ಆರೋಗ್ಯಕರ ಸಂಬಂಧ ಕಾಪಾಡಲು ಸಹಾಯ ಮಾಡುತ್ತದೆ. ಈ ಪ್ರತಿಕಾಯಗಳು ಕೇವಲ ಕರುಳನ್ನು ಮಾತ್ರವಲ್ಲದೆ ಶ್ವಾಸ ಕೋಶಗಳಂತಹ ಇತರ ಅಂಗಗಳನ್ನು ರಕ್ಷಿಸುತ್ತವೆ.

ಚಯಾಪಚಕಾ (ಮೆಟಬೋಲಿಸಂ) ಕ್ರಿಯೆಗಳು[ಬದಲಾಯಿಸಿ]

ಕರುಳಿನ ಸೂಕ್ಷ್ಮಜೀವಿಗಳು ಇಲ್ಲದಿದ್ದರೆ ಮಾನವ ಸೇವಿಸುವ ಹಲವಾರು "ಕಾರ್ಬೊಹೈಡ್ರಾಟ್" ಗಳನು ಬಳಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಮಾನವ ಜೀವಕೋಶಗಳಲ್ಲಿ ಕಾಣಿಸದ ಕೆಲವು ಕಿಣ್ವಗಳು ಕೆಲವು ಕರುಳಿನ ಸೂಕ್ಷ್ಮಜೀವಿಗಳಲಿ ಕಾಣಲು ಸಿಗುತ್ತದೆ. ಈ ಕಿಣ್ವಗಳು   ರಾಸಾಯಿನಿಕ ಸಕ್ಕರೆಯ ಉದ್ದ ಸರಪಳಿಗಳನ್ನು ತುಂಡು ಮಾಡಿ ಒಂದೊಂದು ಸಕ್ಕರೆಯ ಅಣುತಂಡವಾಗಿ ಕರುಳಿನಲ್ಲಿ ವಿಭಾಗಿಸುತ್ತದೆ. ಮಾನವರಲ್ಲಿ ಕೆಲವರಿಗೆ "ಲ್ಯಾಕ್ಟೋಸ್ ಅಸಹಿಷ್ಣುತೆ" (ಹಾಲಿನ ಅಜೀರ್ಣ) ಆಗಲು ದುರ್ಬಲ ಕರುಳಿನ ಸೂಕ್ಷ್ಮಜೀವಿ ಘಟಕವೇ ಕರಣ. ಏಕೆಂದರೆ ಕರುಳಿನ ಜೀವಿಗಳು ಹಾಲಿನಲ್ಲಿ ಇರುವ "ಲ್ಯಾಕ್ಟೋಸ್" ಎಂಬ ರಾಸಾಯನಿಕವನ್ನು ಒಂದೊಂದು ಸಕರೆಯ ಅಣುತಂಡವಾಗಿ ಬೇರ್ಪಡಿಸುತ್ತವೆ. ಈ ಸರಳವಾದ ಸಕರೆಯ ಅಣುತಂಡವನ್ನು ನಮ್ಮ ಕರುಳು ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತದೆ.

ಕರುಳಿನ ಸೂಕ್ಷ್ಮಜೀವಿಗಳು ದೇಹಕ್ಕೆ ಅತ್ಯಾವಶಕವದ "ವಿಟಮಿನ್" ಗಳ್ಳನ್ನು ಉತ್ಪಾದಿಸುತ್ತವೆ. ಇವುಗಳ್ಲಲಿ ಕೆಲವು ಉದಾಹರಣೆಗಳು ವಿಟಮಿನ್ ಬಿ 9, ವಿಟಮಿನ್ ಬಿ 12, ವಿಟಮಿನ್ K ಮತ್ತು ವಿಟಮಿನ್ ಬಿ 7 ಗಳು. ಹಾಗೆಯೆ ದೇಹಕ್ಕೆ ಅಗತ್ಯವಾದ  ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ದಂತಹ ಖನಿಜಗಳನ್ನು ವಿಲೀನ ಮಾಡಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ.

ಔಷಧ ಚಯಾಪಚಯ[ಬದಲಾಯಿಸಿ]

ಕರುಳಿನ ಸೂಕ್ಷ್ಮಜೀವಿಗಳು ಸಮೃದ್ಧವಾದ ಸಮುದಾಯವಾಗಿರುತ್ತವೆ. ಇದರಿಂದ ಇವುಗಳು ಔಷಧಗಳನ್ನು ಮಾರ್ಪಡಿಸಲು ಬೃಹತ್ ಜೀವರಾಸಾಯನಿಕ ಸಾಮರ್ಥ್ಯಗಳನ್ನು ಹೊಂದಿರುವ ವೈವಿಧ್ಯಮಯ "ವಂಶವಾಹಿಗ"ಳನ್ನು (ಅನುವಂಶಿಕ ಸೂಚನೆಗಳ್ಳನು ಹೊಂದಿರುವ ರಾಸಾಯನಿಕಗಳು) ಒಳಗೊಂಡಿರುತ್ತದೆ. ವಿಶೇಷವಾಗಿ ಬಾಯಿಯ ಮೂಲಕ ತೆಗೆದುಕೊಳ್ಳುವ ಔಷದಗಳ್ಳನು ನೇರ ಮತ್ತು ಪರೋಕ್ಷ ಕಾರ್ಯವಿಧಾನಗಳಿಂದ ಬದಲಾಯಿಸುತ್ತದೆ. ನೇರ ಕಾರ್ಯವಿಧಾನವು ಸೂಕ್ಷ್ಮಜೀವಿಯ ಕಿಣ್ವಗಳಿಂದ ಮಧ್ಯಸ್ಥಿಕೆ ವಹಿಸುವುದರ ಮೂಲಕ ಔಷಧಿಗಳ ರಾಸಾಯನಿಕ ರಚನೆಯನ್ನು ಮಾರ್ಪಡಿಸುತ್ತದೆ. ಪರೋಕ್ಷ ಮಾರ್ಗದಲ್ಲಿ ಸೂಷ್ಮಜೀವಿಗಳು "ಮೆಟಬೊಲೈಟ್ಸ್" ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಈ ಮೆಟಬೊಲೈಟ್ಸ್ ಗಳು ಸೈಟೋಕ್ರೋಮ್ P450 ನಂತಹ ಮನುಷ್ಯನ ಕಿಣ್ವಗಳ್ಳನು ಪ್ರಭಾವಿಸುತ್ತವೆ. ನಂತರ ಈ ಕಿಣ್ವಗಳು  ಔಷಧಿಗಳ್ಳನು ಸಕ್ರಿಯಗೊಳಿಸಲು ಸಮರ್ಥವಾಗುತ್ತವೆ.

ಹೆಚ್ಚಿನ ಅಧ್ಯನಗಳು, ಈ  ಸೂಕ್ಷ್ಮಜೀವಿಗಳು ಸುಮಾರು ೫೦ ಔಷದಗಳ್ಳನು ಕ್ರಿಯಾಶೀಲಗೊಳಿಸಲು ಸಹಾಯಮಾಡುತ್ತವೆ ಎಂದು ಸೂಚಿಸುತ್ತವೆ. ಉದಾಹರಣೆಗೆ "ಲೊವಾಸ್ಟಾಟಿನ್" ಎಂಬ ದೇಹದ ಕೊಬ್ಬು (ಕೊಲೆಸ್ಟರಾಲ್) ಕಡಿಮೆ ಮಾಡುವ ಔಷದ. ಈ ಔಷದವನ್ನು ಕರುಳಿನ ಸೂಕ್ಷ್ಮಜೀವಿಗಳು ಸಕ್ರಿಯ "ಹೈಡ್ರಾಕ್ಸಿಲೇಟೆಡ್ ಆಮ್ಲ"ಗಳಾಗಿ ಪರಿವರ್ತನೆ ಮಾಡುತ್ತವೆ. ಇದಕ್ಕೆ ವಿರುದ್ಧವಾಗಿ ಕರುಳಿನ ಸೂಕ್ಷ್ಮಜೀವಿಗಳು ಕೆಲವು ಔಷಧಿಗಳ್ಳನು ನಿಷ್ಕ್ರಿಯಗೊಳಿಸುತ್ತವೆ. ಉದಾಹರಣೆಗೆ, ಡೆಗೊಕ್ಸಿನ್ ಎಂಬ ಹೃದಯ ವೈಫಲ್ಯದ ಚಿಕಿತ್ಸೆಯ ಔಷದ.

ಕರುಳು-ಮೆದುಳಿನ ಅಕ್ಷ[ಬದಲಾಯಿಸಿ]

ಕರುಳು-ಮೆದುಳಿನ ಅಕ್ಷ ಮತ್ತು ಅದರ ಕಾರ್ಯಗಳನ್ನು ವರ್ಣಿಸುವ ಚಿತ್ರ

ಕರುಳು-ಮೆದುಳಿನ ಅಕ್ಷವು ಜಠರಗರುಳಿನ ಪ್ರದೇಶ ಮತ್ತು ಕೇಂದ್ರ ನರಮಂಡಲದ ನಡುವೆ ನಡೆಯುವ ಜೀವರಾಸಾಯನಿಕ ಸಂವಹನದ ಸಂಕೇತವಾಗಿದೆ. ಇತ್ತೀಚಿನ ಸಂಶೋಧನಾ ಪತ್ರಿಕೆಗಳು ಈ ಪರಸ್ಪರ ಸಂವಹನದ  ಮೇಲೆ ಪ್ರಭಾವ ಬೀರುವಲ್ಲಿ ಕರುಳಿನ ಸೂಕ್ಷ್ಮಜೀವಿಗಳ ಪ್ರಾಮುಖ್ಯತೆಯನ್ನು ವಿವರಿಸಿದೆ. ಕರುಳನ್ನು ಕೆರಳಿಸುವ ಕಾಯಿಲೆ (ಇರಿಟೇಬಲ್ ಬೋವೆಲ್ ಸಿಂಡ್ರೋಮ್) ಎಂಬ ಒಂದು ಕಾಯಿಲೆ ನೇರವಾಗಿ ಕರುಳಿನ ಸೂಕ್ಷ್ಮಜೀವಿಗಳಿಂದ ಪ್ರಭಾವಿತವಾಗಿದೆ ಎಂದು ಸಾಭೀತಾಗಿದೆ. ಆದರೂ ಇತೀಚಿನ ಸಂಶೋಧನೆ ಕರುಳಿನ ಸೂಕ್ಷ್ಮಜೀವಿಗಳು ಅಂಗಾಂಶದಲ್ಲಿನ ಕೊಬ್ಬಿನ ಅಂಶ, ರಕ್ತದಲ್ಲಿ ಸಕರೆಯ ಅಣುತಂಡಗಳ ಸಮತೋಲನ, ಒಕ್ಸಿಡೇಟಿವ್ ಒತ್ತಡ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಸೂಚಿಸುತ್ತದೆ.

ಕರುಳಿನ ಸೂಕ್ಷ್ಮಜೀವಿ ಘಟಕದ ಸಮತೋಲನ[ಬದಲಾಯಿಸಿ]

ಪ್ರತಿಜೀವಕಗಳ ಬಳಕೆಯ ಪರಿಣಾಮ[ಬದಲಾಯಿಸಿ]

"ಬ್ರಾಡ್ ಸ್ಪೆಕ್ಟ್ರಮ್ ಅಂಟಿಬೈಯೋಟಿಕ್ಸ್"ನ  (ಹಲವಾರು ಸೂಕ್ಷ್ಮಜೀವಿ ಗುಂಪುಗಳ ಮೇಲೆ ಪ್ರಭಾವ ಬೀರುವ ಪ್ರತಿಜೀವಕಗಳು) ಬಳಕೆಯಿಂದ ಸೂಕ್ಷ್ಮಜೀವಿಗಳ ಸಮತೋಲನ ತೀವ್ರವಾಗಿ ನಾಶವಾಗುತ್ತದೆ. ಕರುಳಿನ ಸೂಕ್ಷ್ಮಜೀವಗಳ ಸಮತೋಲನ ಕೆಟ್ಟರೆ, ಮಾನವ ತಾನು ಸ್ವೀಕರಿಸುವ ಆಹಾರವನ್ನು ಪೂರ್ತಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಕೆಲವು ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾದರೆ ಮಾನವ ಸಕ್ಕರೆ ರಾಸಾಯನಿಕಗಳನ್ನು ತುಂಡುಮಾಡುವುದರಲ್ಲಿ ವಿಫಲನಾಗುತ್ತಾನೆ. ಹಾಗೆಯೆ ಪಿತ್ತರಸ ಆಮ್ಲಗಳನ್ನು (ಬೈಲ್ ಜ್ಯೂಸ್) ಚಯಾಪಚಕಗೊಳಿಸುವುದರಲ್ಲಿ ತೊಂದರೆ ಆಗುತ್ತದೆ. ಈ ಕಾರಣಗಳಿಂದ ಭೇದಿ ಕಾಯಿಲೆ ಉಂಟಾಗಬಹುದು.

ಹಾಗೆಯೆ ಇದು ಹೊರಗಿನ ರೋಗಕಾರಕ ಸೂಕ್ಷ್ಮಜೀವಿಗಳಿಗೆ ಕರುಳಿನಲ್ಲಿ ಬೆಳೆಯಲು ಅವಕಾಶ ನೀಡಬಹುದು. ಉದಾಹರಣೆಗೆ ಕ್ಲೋಸ್ಟ್ರಿಡಿಯಮ್ ಡಿಫಿಸಿಲ್ ಸೂಕ್ಷ್ಮಜೀವಿಯು ಸೋಂಕನ್ನು ಉಂಟುಮಾಡಿ, ತೀವ್ರ ಹೊಟ್ಟೆ ನೋವಿಗೆ ಕಾರಣವಾಗುತ್ತದೆ.

ಗರ್ಭಾವಸ್ಥೆ[ಬದಲಾಯಿಸಿ]

ಗರ್ಭಾವಸ್ಥೆಯ ಬೆಳವಣಿಗೆಯೊಂದಿಗೆ ಮಹಿಳೆಯ ಕರುಳಿನ ಸೂಕ್ಷ್ಮಜೀವಿಗಳ ಸಂತುಲನ ಬದಲಾಗುತ್ತದೆ. ಈ ಬದಲಾವಣೆಗಳು ಮಧುಮೇಹದಂತ ರೋಗವಿದ್ದಲ್ಲಿ ಆಗುವ ಬದಲಾವಣೆಗಳಂತೆ ಕಂಡರೂ, ಇದರಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ನವಜಾತ ಶಿಶುವಿನ ಕರುಳಿನ ಸೂಕ್ಷ್ಮಜೀವಿಗಳು ತಾಯಿಯ ಮೊದಲ ತ್ರೈಮಾಸಿಕದ ಸೂಕ್ಷ್ಮಜೀವಿಗಳ ಸಂಯೋಜನೆಯನ್ನು ಹೋಲುತ್ತದೆ.

ವ್ಯಾಯಾಮದ ಪರಿಣಾಮಗಳು[ಬದಲಾಯಿಸಿ]

ಕರುಳಿನ ಸೂಕ್ಷ್ಮಜೀವಿಗಳು ಮತ್ತು ವ್ಯಾಯಾಮವು ಪರಸ್ಪರ ಸಂಬಂಧ ಹೊಂದಿದೆ ಎಂದು ಇತೀಚಿನ ಸಂಶೋದನ ಲೇಖನಗಲ್ಲಿ ತಿಳಿಸಲಾಗಿದೆ . ಈ ಲೇಖನಗಳ ಪ್ರಕಾರ ನಿಯಮಿತ ವ್ಯಾಯಾಮ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಸೂಕ್ಷ್ಮಜೀವಿಗಳ ಘಟಕದ ವೈವಿದ್ಯತೆ ಹೆಚ್ಚಿಸುತ್ತದೆ.

[೧]

[೨]

[೩]

[೪]

        ಉಲ್ಲೇಖಗಳು:[ಬದಲಾಯಿಸಿ]

  1. https://en.wikipedia.org/wiki/Gut_microbiota
  2. https://www.medicalnewstoday.com/articles/307998#importance
  3. https://www.nature.com/articles/s41392-022-00974-4
  4. https://www.ncbi.nlm.nih.gov/pmc/articles/PMC4566439/