ಸದಸ್ಯ:1840455Mrunal

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪರಿಚಯ[ಬದಲಾಯಿಸಿ]

ನಮಸ್ಕಾರ. ನನ್ನ ಹೆಸರು ಡಿ ವಿ ಮೃಣಾಲ್.ನನ್ನ ಬಾಲ್ಯದ ಬಗ್ಗೆ ಹೇಳಬೇಕಾದರೆ ನಾನು ನಮ್ಮ ಊರು, ಮ೦ಡ್ಯದಲ್ಲಿ ಮರ್ಕೊತಿ ಆಟ,ಕಣ್ಣಾಮುಚ್ಚೆ, ಲಗೋರಿ ಮುಂತಾದ ಹಲವಾರು ಆಟಗಳನ್ನು ಆಡಿ ಬೆಳೆದಿದ್ದೇನೆ. ನಾನು ಹುಟ್ಟಿದ್ದು ಮತ್ತು ಬೆಳದದ್ದು ಎರಡು ಬೆಂಗಳೂರಿನಲ್ಲಿಯೇ, ಹಾಗು ನನ್ನ ವಿದ್ಯಾಭ್ಯಾಸ ಕೂಡ ಇಲ್ಲಿಯೇ ನಡೆಯುತಿದೆ.

ಸದಾ ಸಂತೋಷದಿಂದ ಜೀವನವನ್ನು ನಡೆಸಿಕೊಂಡು ಇರುವ ನಾನು ಸ್ನೇಹಿತರೊಂದಿಗೆ ಖುಷಿಯಾಗಿ ಇರಲು ಬಯಸುತ್ತೇನೆ ಹಾಗು ಎಲ್ಲರೊ೦ದಿಗೆ ಗೌರವದಿ೦ದ ಮತ್ತು ಪ್ರೀತಿಯಿ೦ದ ಇರಲು ಇಷ್ಟಪಡುತ್ತೇನೆ.

ಕುಟು೦ಬ[ಬದಲಾಯಿಸಿ]

ನಮ್ಮ ಕುಟು೦ಬ ಬಗ್ಗೆ ಹೇಳಬೇಕೆ೦ದರೆ ನನ್ನ ತಂದೆಯ ಹೆಸರು ದಯಾನಂದ್, ತಾಯಿ ವೀಣಾ. ನನಗೆ ಒಬ್ಬ ಅಣ್ಣ ಇದ್ದಾನೆ. ಅವನ ಹೆಸರು ಮನೀಷ್.ನಮ್ಮ ಊರು ಮಂಡ್ಯ ಆಗಿದ್ದು ನನ್ನ ಬಾಲ್ಯದ ದಿನಗಳನ್ನು ಅಲ್ಲಿಯೇ ನನ್ನ ಅಣ್ಣ-ತಮ್ಮoದಿರೊಂದಿಗೆ ಆಯಿತು.

ತಂದೆ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ-ಅಸ್ಸಿಸ್ಟಂಟ್ ಸೋಷಿಯಲ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತಿದ್ದಾರೆ. ತಾಯಿ ಒರಕಲ್ ಸಾಫ್ಟ್ವೇರ್ ಸಂಸ್ಥೆ ಅಲ್ಲಿ ಕೆಲಸ ನಿರ್ವಹಿಸುತಿದ್ದಾರೆ. ಅಣ್ಣ ಬೆಂಗಳೂರಿನಲ್ಲಿ ಎಂಜಿನೆರರಿಂಗ್ ಮುಗಿಸಿ ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದಾನೆ.

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ವಿದ್ಯಾಭ್ಯಾಸದ ಬಗ್ಗೆ ಬಂದರೆ ನಾನು ನನ್ನ  ಶಾಲೆ ವ್ಯಾಸಂಗವನ್ನು ಜೆ ಎಸ್ ಎಸ್ ಪಬ್ಲಿಕ್ ಶಾಲೆ, ಎಚ್ ಎಸ್ ಅರ್ ಲೇಔಟ್ನಲ್ಲಿಯೇ ಪೂರೈಸಿದ್ದೇನೆ. ನಂತರ ನನ್ನ ಪಿಯು ವ್ಯಾಸಂಗವನ್ನು  ವಿ.ವಿ.ಪುರಂ ಅಲ್ಲಿ ಇರುವ ಜೈನ್ ಕಾಲೇಜ್ ನಲ್ಲಿ ಪಿ.ಸಿ.ಎಂ.ಸಿ ವಿಭಾಗದಲ್ಲಿ ಮಾಡಿರುವೆ. ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ ಸಿ(ಪಿ.ಸಿ.ಎಂ) ಓದುತ್ತಿದ್ದೇನೆ.

ನಾನು ಶಾಲೆಯಲ್ಲಿ ಇರುವಾಗ ವೇಗವಾಗಿ ಓಡುವ ಆಟದಲ್ಲಿ ಅನೇಕ ಪ್ರಶಸ್ತಿಗಳನ್ನು ನನ್ನದಾಗಿಸಿಕೊಂಡಿದ್ದೇನೆ. ಅದಲ್ಲದೆ ೭ನೇ ತರಗತಿಯಲ್ಲಿ ಇರುವಾಗ ರಾಜ್ಯ ಮಟ್ಟದಲ್ಲಿ ಅಯೊಜಿಸಲಾಗಿದ್ದ ಕಲೆ ಮತ್ತು ಪೇಂಟಿಂಗ್ ಸ್ಪರ್ದೆಯಲ್ಲಿ ೩ನೇ ಪ್ರಶಸ್ತಿಯನ್ನು ಪಡೆದ್ದಿದೆ.ಹಾಗು ಸೆಲ್ಫ್ ಡಿಫೆನ್ಸ್ ಆ‌ಫ್ ಇಂಡಿಯನ್ ಕರಾಟೆ ಹಾಗು ಕೆಂಪೂ ಕರಾಟೆ ಸಂಸ್ಥೆಗಳಿಂದ ಬಿಳಿ ಬಣ್ಣದ ಬೆಲ್ಟ್ನಿಂದ ಕೇಸರಿ ಬಣ್ಣದ ಕರಾಟೆ ಬೆಲ್ಟ್ ವರೆಗೂ ಅಭ್ಯಾಸ ನಡೆಸಿ ಉತ್ತೀರ್ಣನಾಗಿದ್ದೇನೆ. ಹಾಗು ಕೆ.ವೈ.ಸಿ.ಎ(ಕರ್ನಾಟಕ ಯುವ ಕ್ರಿಕೆಟ್ ಅಕಾಡೆಮಿ)ಅಲ್ಲಿ ೨ ವರ್ಷ ಕ್ರಿಕೆಟ್ ತರಬೇತಿ ಪಡೆದು ೩-೪ ಪಂದ್ಯಗಳನ್ನು ಭಾಗವಹಿಸಿದ್ದೇನೆ.

ಇದರ ಜೊತೆಗೆ ವಿದ್ಯಾಭ್ಯಾಸದಲ್ಲು ಆಸಕ್ತಿ ಇದ್ದು ೧೦ನೇ ತರಗತಿಯಲ್ಲಿ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ   ೯.೬/೧೦  ಸಿಜಿಪಿಎ ಪಡೆಯುವ ಮೂಲಕ ೧೦ನೇ ತರಗತಿಯನ್ನು  ಮುಗಿಸಿದ್ದೇನೆ.ಇದರ ನಂತರ ಬಂದ ಪಿಯು ಪರೀಕ್ಷೆಯಲ್ಲೂ ಶೇಕಡ ೮೯.೯% ಪಡೆದು ನನ್ನ ಪಿಯು ವ್ಯಾಸಂಗವನ್ನು ಮುಗಿಸಿದ್ದು ಇವಾಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ ಸಿ ಮಾಡುತಿದ್ದೇನೆ.

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸದ ಬಗ್ಗೆ ಹೇಳಬೇಕು ಅಂದರೆ ನನಗೆ ಒಳಾಂಗಣ ಆಟಗಳಾದ ಚದುರಂಗ,ಕ್ಯಾರಮ್ ಎಂದರೆ ಇಷ್ಟ.ಹೊರಾಂಗಣ ಆಟಗಳಲ್ಲಿ ಕ್ರಿಕೆಟ್,ಬ್ಯಾಡ್ಮಿಂಟನ್,ಬಾಸ್ಕೆಟ್ ಬಾಲ್ ಅಡುತೇನೆ.ಅದರೊಂದಿಗೆ ನನಗೆ ಪುಸ್ತಕಗಳನ್ನು ಓದಲು ಹೆಚ್ಚು ಆಸಕ್ತಿ ಇದ್ದು ನಾನು ಹೆಚು ಆಂಗ್ಲ ಭಾಷೆಯ ಲೇಖಕರ ಪುಸ್ತಕಗಳನ್ನು  ಓದುತ್ತೇನೆ.

ಇದರೊ೦ದಿಗೆ ನನ್ನ ಉಚಿತ ಸಮಯದಲ್ಲಿ ನಾನು ಸೈಕ್ಲಿಂಗ್ ಮಡುತ್ತೇನೆ. ಇದರ ಮೂಲಕ ಅರೋಗ್ಯದ ವಿಷಯದಲ್ಲಿಯೂ ನನಗೆ ಗಮನವಿದೆ.

ಜೀವನದ ಗುರಿ[ಬದಲಾಯಿಸಿ]

ನನಗೆ ಎ.ಪಿ.ಜೆ.ಅಬ್ದುಲ್ ಕಲಾಂ ರವರ ಮೇಲೆ ತು೦ಬ ಗೌರವವಿದ್ದು ಅವರೆ ನನ್ನ ಸ್ಫೂರ್ತಿ ಕೂಡ. ಅವರು ಯುವ ಮಕ್ಕಳ್ಳಲ್ಲಿ ತು೦ಬ ನ೦ಬಿಕೆ ಇದ್ದು ನಮ್ಮ ದೇಶವನ್ನು ಬದಲಾಯಿಸುವ ಶಕ್ತಿ ಯುವ ಮಕ್ಕಳ್ಳಲ್ಲಿ ಇದೆ ಎ೦ದು ಅವರು ನ೦ಬಿದ್ದರು.

ನನಗೆ ಅವರ೦ತೆಯೆ ವಿಜ್ಞಾನಿ ಆಗುವ ಆಸೆ ಇದ್ದು ಮು೦ದೆ ನಾನು ಯಾವುದಾದರೊ೦ದು ಪ್ರಸಿದ್ದ ಸಂಶೋಧನೆ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬುದು ಇಚ್ಚೆಯಿಸುತ್ತೇನೆ.