ವಿ. ಕೆ. ಮೂರ್ತಿ
| ವಿ. ಕೆ. ಮೂರ್ತಿ | |
|---|---|
೨೦೧೦ರಲ್ಲಿ ಮೂರ್ತಿ |
|
| ಜನನ | ನವೆಂಬರ್ ೨೬, ೧೯೨೩ ಮೈಸೂರು, ಮೈಸೂರು ರಾಜ್ಯ |
| ರಾಷ್ಟ್ರೀಯತೆ | ಭಾರತೀಯ |
| ವೃತ್ತಿ | ಛಾಯಾಗ್ರಾಹಕ |
ವಿ. ಕೆ. ಮೂರ್ತಿ (ವೆಂಕಟರಾಮಾ ಪಂಡಿತ್ ಕೃಷ್ಣಮೂರ್ತಿ ಜನನ: ೧೯೨೩) ಒಬ್ಬ ಭಾರತೀಯ ಹಿಂದಿ ಚಲನಚಿತ್ರರಂಗದ ಛಾಯಾಗ್ರಾಹಕರು. (Cinematographer)"ಗುರುದತ್ತರ ಕಣ್ಣು” ಎಂದೇ ಖ್ಯಾತರಾದ ಛಾಯಾಗ್ರಾಹಕ ಶ್ರೀ ವಿ. ಕೆ. ಮೂರ್ತಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಐವತ್ತು, ಅರವತ್ತರ ದಶಕದಲ್ಲಿ ಗುರುದತ್ತರ ಎಲ್ಲಾ ಸಿನೆಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ ಮೂರ್ತಿ ಸೃಷ್ಟಿಸಿರುವ ಅದ್ಭುತ ದೃಶ್ಯಗಳು ಅವರನ್ನು ಕೀರ್ತಿಯ ಉತ್ತುಂಗಕ್ಕೇರಿಸಿತು. ಗುರುದತ್ತರ ನಂತರ ಹಿಂದಿ ಚಿತ್ರರಂಗದ ಹಲವಾರು ಪ್ರಖ್ಯಾತ ನಿರ್ದೇಶಕರೊಂದಿಗೆ ಕೆಲಸಮಾಡಿದ ಮೂರ್ತಿಯವರು ಎಂಬತ್ತರ ದಶಕದಲ್ಲಿ ’ಶ್ಯಾಮ ಬೆನೆಗಲ್ ”, ’ಗೋವಿಂದ ನಿಹಲಾಣಿ ’ಯಂತಹ ಕಲಾತ್ಮಕ ಚಿತ್ರ ನಿರ್ದೇಶಕರೊಂದಿಗೆ ಮಾಡಿದ”ಡಿಸ್ಕವರಿ ಆಫ್ ಇಂಡಿಯಾ’,”ತಮಸ್’ ನಂತಹ ಚಿತ್ರಗಳು ಆವರನ್ನು ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಛಾಯಾಗ್ರಾಹಕರಲ್ಲೊಬ್ಬರನ್ನಾಗಿ ಮಾಡಿತು. ವಿಶ್ವಖ್ಯಾತಿಯ ಈ ಕನ್ನಡಿಗ ಕನ್ನಡದಲ್ಲಿ ಕೇವಲ ಒಂದು ಚಿತ್ರ(ಹೂವು ಹಣ್ಣು)ದಲ್ಲಿ ಕೆಲಸಮಾಡಿದ್ದಾರೆ. ಮೂರ್ತಿ ಇದೀಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ’ಹಾಲಿವುಡ್” ನ ಅತ್ಯಂತ ಪ್ರಖ್ಯಾತ ಚಲನಚಿತ್ರ, ’ಗನ್ಸ್ ಆಫ್ ನವರೋನ್, ’ ಚಿತ್ರೀಕರಣದ ಸಮಯದಲ್ಲಿ ಮೂರ್ತಿ, ಆ ಸೆಟ್ ನ ಬಳಿಯಲ್ಲೇ ಇದ್ದು,ವೀಕ್ಷಿಸಿದರಂತೆ. ಅದು ಅವರಿಗೆ ಅತ್ಯಂತ ಸಂಭ್ರಮ ತಂದಿತ್ತು. ಭಾರತಕ್ಕೆ ವಾಪಸ್ಸಾದ ಮೇಲೆ, ಕನ್ನಡ ಪತ್ರಿಕೆಯೊಂದರಲ್ಲಿ ಆ ರಸಸನ್ನಿವೇಶಗಳನ್ನು ಸ್ವಾರಸ್ಯವಾಗಿ ಧಾಖಲಿಸಿದ್ದಾರೆ. " ಕೆಲವು ದೃಶ್ಯಗಳಂತೂ ಅತ್ಯಂತ ನೈಜವಾಗಿದ್ದವು ", ಎನ್ನುವ ಅಭಿಪ್ರಾಯ,ಅವರದು.
ಪರಿವಿಡಿ |
ಜನನ,ಬಾಲ್ಯ[ಬದಲಾಯಿಸಿ]
ಮೈಸೂರುನಗರದ 'ಲಕ್ಷ್ಮೀಪುರಂ' ನ 'ಹೊಸಕೇರಿ'ಯಲ್ಲಿ ಮನೆಯಲ್ಲಿ ನವೆಂಬರ್, ೨೬, ೧೯೨೨ ರಲ್ಲಿ, ಜನಿಸಿದರು. ಮನೆಯ ಅಂಗಳದಲ್ಲೇ ಎರಡು ಸಂಪಿಗೆ ಮರಗಳಿದ್ದವು. ತಂದೆ ಆಯುರ್ವೇದಪಂಡಿತರು. ಮೈಸೂರಿನ ಅರಮನೆಯಲ್ಲೂ ಅವರು ಆಯುರ್ವೇದ ಪಂಡಿತರೆಂದು ಗುರುತಿಸಲ್ಪಟ್ಟು, ಸ್ವಲ್ಪ ನಿವೃತ್ತಿವೇತನ ಗಳಿಸುತ್ತಿದ್ದರು. ಅವರ ೬೦ ರೂ ವೇತನದಲ್ಲಿ ಸಂಸಾರ ನಡೆಯಬೇಕಾಗಿತ್ತು. ತಮ್ಮ ದೊಡ್ಡ ಮನೆಯ ಔಟ್ ಹೌಸ್ ನಲ್ಲಿ ಅವರು ವಾಸವಾಗಿದ್ದರು. ಮುಂದಿನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ತಾಯಿಯವರ ಹೆಸರು, ನಾಗಮ್ಮ. ಈ ದಂಪತಿಗಳಿಗೆ ೫ ಜನ ಮಕ್ಕಳು. ಸತ್ಯನಾರಾಯಣ, ಅಮ್ಮಯ್ಯ, ಕೃಷ್ಣಮೂರ್ತಿ, ಕೌಸಲ್ಯ, ಮತ್ತು ಅನಸೂಯ. ವಿ. ಕೃಷ್ಣ ಮೂರ್ತಿಯವರು, ೮-೯ ವರ್ಷದವರಿದ್ದಾಗಲೇ ತಾಯಿಯವರು ಗತಿಸಿದರು. ೧೯೪೩-೪೬ ರಲ್ಲಿ ಬೆಂಗಳೂರಿನ ಶ್ರೀ.ಜಯಚಾಮರಾಜೆಂದ್ರ ಪಾಲಿಟೆಕ್ನಿಕ್ ನಲ್ಲಿ ಸಿನಿಮಾಟೋಗ್ರಫಿ ಡಿಪ್ಲೊಮ ಪಡೆದರು. ಸಿನಿಫೋಟೋಗ್ರಪಿಯಲ್ಲಿ ಶಿಕ್ಷಣಕೊಡಲು ಪ್ರಾರಂಭಿಸಿದ ಭಾರತದ ಮೊಟ್ಟಮೊದಲ ಏಕೈಕ ಇನ್ಸ್ಟಿ ಟ್ಯೂಟ್ ಅದಾಗಿತ್ತು. ಬೆಂಗಳೂರಿನಲ್ಲಿ ಈ ಕೋರ್ಸ್ ಪ್ರಥಮವಾಗಿ ಶುರುವಾಗಿತ್ತು. ಅದು ಪ್ರಥಮ ಬ್ಯಾಚ್ ಸಹಿತ. ಪ್ರಸ್ತುತದಲ್ಲಿ ಮೂರ್ತಿಯವರು ಬೆಂಗಳೂರಿನ 'ಶಂಕರಪುರ'ದ ’ಪಂಡಿತ್ ಹೌಸ್’ ಕೆಂಪು ಸಿಮೆಂಟ್ ನ 'ಸಂಪಿಗೆ ಮರದ ಮನೆ'ಯಲ್ಲಿ ವಾಸವಾಗಿದ್ದಾರೆ. ದೊಡ್ಡ ಸೋಫಾಗಳು, ಬೆಲೆಬಾಳುವ ರತ್ನಗಂಬಳಿ ಕಪಾಟಿನತುಂಬ ಪ್ರಶಸ್ತಿಗಳು, 'ಶ್ಯಾಂಡ್ಲಿಯರ್' ಬೆತ್ತದ ಕುರ್ಚಿಮೇಜು, ಮೈಸೂರಿನ ಸರಳ ಸಜ್ಜನಿಕೆ, ಸ್ಟೀಲ್ ಲೋಟದಲ್ಲಿ ಬಿಸಿ-ಬಿಸಿ ಕಾಫಿ ಅವರನ್ನು ನೋಡಲು ಹೋದವರಿಗೆ ಸಿಗುವ ಮೊದಲ ಸತ್ಕಾರ.
ಮೈಸೂರಿನಿಂದ ಮುಂಬೈಗೆ[ಬದಲಾಯಿಸಿ]
ಸ್ವತಃ ಮೈಸೂರಿನವರಾದ ಮೂರ್ತಿಯವರಿಗೆ, ಬೊಂಬಯಿನ 'ಮೈಸೂರ್ ಅಸೋಸಿಯೇಷನ್' ಬಹಳ ಪ್ರಿಯವಾಯಿತು. ಮನೆಯ ಊಟದ ಸವಿಯನ್ನು ದೊರಕಿಸುವುದಲ್ಲದೆ, ಮೈಸೂರಿನ ಕಲೆ, ಸಂಗೀತ, ನಾಟಕ ಮುಂತಾದ ಕ್ಷೇತ್ರಗಳಲ್ಲೂ ಅಸೋಸಿಯೇಷನ್ ಅಗ್ರಮಾನ್ಯಸ್ಥಾನಗಳಿಸಿದ್ದು ವಿ. ಕೆ. ಮೂರ್ತಿಯವರ ನಾಟಕಕಲೆ ವಿಕಸಿತಗೊಂಡು ಮೂರ್ತರೂಪುಗೊಂಡಿದ್ದು ಅಲ್ಲೇ.
ಗುರುದತ್ ಭೇಟಿ[ಬದಲಾಯಿಸಿ]
ಗುರುದತ್ ನಂತರ[ಬದಲಾಯಿಸಿ]
ಪ್ರಮುಖ ಚಿತ್ರಗಳು[ಬದಲಾಯಿಸಿ]
ಗುರುದತ್ತರೊಂದಿಗೆ[ಬದಲಾಯಿಸಿ]
- ಸಾಹಿಬ್ ಬೀವಿ ಔರ್ ಗುಲಾಮ್ (೧೯೬೨)
- ಚೌದ್ವೀ ಕಾ ಚಾಂದ್ (೧೯೬೦)
- ಕಾಗಝ್ ಕೇ ಫೂಲ್ (೧೯೫೯)
- ೧೨'ಓ ಕ್ಲಾಕ್ (೧೯೫೮)
- ಪ್ಯಾಸಾ (೧೯೫೭)
- ಸಿ.ಐ.ಡಿ (೧೯೫೬)
- ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
- ಆರ್ ಪಾರ್ (೧೯೫೪)
- ಬಾಝ್ (೧೯೫೩)
- ಜಾಲ್ (೧೯೫೨)
ಇತರ ನಿರ್ದೇಶಕರೊಂದಿಗೆ[ಬದಲಾಯಿಸಿ]
- ಅಂತರ್ನಾದ್ (೧೯೯೧)
- ಡಿಸ್ಕವರಿ ಆಫ್ ಇಂಡಿಯಾ / ಭಾರತ್ ಏಕ್ ಖೋಜ್ (೧೯೮೮)
- ತಮಸ್ (೧೯೮೬)
- ನಾಸ್ತಿಕ್ (೧೯೮೩)
- ನಯಾ ಜಮಾನಾ (೧೯೭೧)
- ಲವ್ ಇನ್ ಟೋಕಿಯೋ (೧೯೬೬)
ಪ್ರಶಸ್ತಿಗಳು[ಬದಲಾಯಿಸಿ]
'ಭಾರತದ ಪ್ರಥಮ ಸಿನಿಮಾಸ್ಕೋಪ್ ಚಿತ್ರ ಕಾಗಜ್ ಕೆ ಫೂಲ್', ಚಿತ್ರೀಕರಿಸಿದ ಖ್ಯಾತ ನಿನಿಮಾ ಛಾಯಾಗ್ರಾಹಕ, ವಿ. ಕೆ. ಮೂರ್ತಿಯವರನ್ನು ಮುಂಬೈನ ಜನತೆ ಹಾಗೂ ಸಮಸ್ತ ಭಾರತದ ಜನತೆ ಅಭಿನಂದಿಸುತ್ತಿದೆ. ೧೯೬೯ ರಲ್ಲಿ ಫಾಲ್ಕೆ ಪ್ರಶಸ್ತಿ ಸ್ಥಾಪನೆಯಾದ ಬಳಿಕ 'ಸಿನಿಮಾ ಛಾಯಾಗ್ರಾಹಕ'ರೊಬ್ಬರು ಈ ಗೌರವಕ್ಕೆ ಪಾತ್ರರಾಗುತ್ತಿರುವುದು ಇದೇ ಮೊದಲು. ೧೦ ಲಕ್ಷರೂಪಾಪಾಯಿ ನಗದುಹಣ, ಸ್ವರ್ಣ ಕಮಲ, ಮತ್ತು ಶಾಲನ್ನು ಭಾರತದ ರಾಷ್ಟ್ರಪತಿಯವರಿಂದ ಪಡೆಯುವ ಗೌರವ, ಅತ್ಯಂತ ಮಹತ್ವದ್ದು. ಹೊಸ ಪ್ರಯೋಗಗಳು ಮತ್ತು ನವೀನ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಇವು ವಿ. ಕೆ ಮೂರ್ತಿಯವರಲ್ಲಿ ಮನೆಮಾಡಿದ್ದ ವಿಶೇಷ ಗುಣಗಳು. ಮೂರ್ತಿಯವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ೧೯೪೩ ರಲ್ಲಿ ಸೆರೆಮನೆವಾಸ ಕಂಡಿದ್ದರು. ಇವರೊಬ್ಬ 'ಉತ್ತಮ ಪಿಟೀಲು ವಾದಕರು,' ಸಹಿತ.'ಶ್ಯಾಮ್ ಬೆನೆಗಲ್', ತಯಾರಿಸಿದ ಬೃಹತ್ ಧಾರಾವಾಹಿ, 'ಭಾರತ್ ಏಕ್ ಖೋಜ್' ಮತ್ತು ೧೯೯೩ ರಲ್ಲಿ ತಯಾರಾದ ಕನ್ನಡ ಚಿತ್ರ, 'ಹೂವು ಹಣ್ಣು', ತನಕ ೪ ದಶಕಗಳ ಕಾಲ ದೀರ್ಘಾವಧಿ ಕಾರ್ಯ ನಿರ್ವಹಿಸಿ, ಈಗ ಬೆಂಗಳೂರಿನಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಅವರೊಬ್ಬ 'ಅತ್ಯಂತ ಕುಶಲ ರಂಗಕರ್ಮಿ', 'ನಿರ್ದೇಶಕ', 'ನಟ', ಮತ್ತು 'ದಿಗ್ದರ್ಶಕ.' 'ಬೊಂಬಾಯಿನ ಮೈಸೂರು ಅಸೋಸಿಯೇಷನ್' ನಲ್ಲಿ ಒಂದು ನಾಟಕಕಾರರ ಗುಂಪನ್ನು ಕಟ್ಟಿ, ಅಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿ, ರಂಗಪ್ರದರ್ಶನಮಾಡಿದ್ದರು.
- ಫಿಲ್ಮ್ಫೇರ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ - ಕಾಗಜ್ ಕೇ ಫೂಲ್ (೧೯೫೯)
- ಫಿಲ್ಮ್ಫೇರ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ - ಸಾಹಿಬ್ ಬೀಬಿ ಔರ್ ಘುಲಾಂ (೧೯೬೨)
- IIFA Lifetime Achievement Award - ಆಂಸ್ಟರ್ಡ್ಯಾಮ್, ೨೦೦೫.
- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ೨೦೦೮
ಉಲ್ಲೇಖಗಳು[ಬದಲಾಯಿಸಿ]
- ಬಿಸಿಲುಕೋಲು, ಉಮಾ ರಾವ್, ಪ್ರಿಸಂ ಪುಸ್ತಕ, ೨೦೦೫
- http://www.kendasampige.com/article.php?id=2978