ವರ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರ್ಯನ ಸುತ್ತಲಿನ ಭೂಮಿಯ ಪ್ರದಕ್ಷಿಣೆಯ ಕಾಲವನ್ನು ವರ್ಷವನ್ನಾಗಿ ಗಣಿಸಲಾಗುತ್ತದೆ. ಇದೇ ರೀತಿ ಬೇರೆ ಗ್ರಹಗಳಿಗೂ ವರ್ಷವನ್ನು ಗಣಿಸಬಹುದು. ಇದೇ ಕಲ್ಪನೆ(concept)ಯ ಆಧಾರದ ಮೇಲೆ ಯಾವುದೇ ಅಂತರಿಕ್ಷ ವಸ್ತು ಬೇರೊಂದು ಅಂತರಿಕ್ಷ ವಸ್ತುವಿನ ಸುತ್ತ ಪ್ರದಕ್ಷಿಣೆ ಹಾಕುವ ಕಾಲವನ್ನೂ ವರ್ಷವೆಂದು ಲೆಕ್ಕಿಸಬಹುದು. ಭೂಮಿ ಸೂರ್ಯನ ಸುತ್ತ ಒಂದು ಸಾರಿ ಸುತ್ತಲು ೩೬೫ ಅಥವ ೩೬೬ ದಿನಗಳಾಗುತ್ತದೆ. ಭೂಮಿಗೆ ೧ ವಷವೆಂದರೆ ೩೬೫ ಅಥವ ೩೬೬ ದಿನಗಳು.

ಭೂಮಿಯಲ್ಲಿ ಪಂಚಾಂಗ ವರ್ಷ[ಬದಲಾಯಿಸಿ]

ಮುಖ್ಯವಾಗಿ ಮಾನವರು ಭೂಪ್ರದಕ್ಷಿಣೆಯ ಮೇಲೆ ಅವಲಂಬಿತವಾದ ಋತುಗಳ ಬರುವಿಕೆಯನ್ನು ಅಳೆಯಲು ಪಂಚಾಂಗವನ್ನು ಸೃಷ್ಟಿಸಿದರು. ಇದರಂತೆ, ಒಂದು ಋತುವಿನ ಪುನರಾಗಮನದ ಮಧ್ಯೆಯ ಕಾಲವನ್ನು ವರ್ಷವೆಂದು ಪರಿಗಣಿಸಿದರು. ಆದರೆ ಋತುಗಳ ಮಧ್ಯದ ಕಾಲವು ಸ್ಥಾಯಿಯಾಗಿಲ್ಲದಿದ್ದರಿಂದ ಸೂರ್ಯನ ಪಥಚಲನೆಯ ವೀಕ್ಷಣೆಯ ಮೇಲೆ ವರ್ಷವನ್ನು ಗಣಿಸತೊಡಗಿದರು. ಇದನ್ನು ಸೂರ್ಯಮಾನ ಪಂಚಾಂಗ ಎನ್ನುತ್ತಾರೆ. ಇದಕ್ಕೆ ಸದೃಶವಾಗಿ ಚಂದ್ರನ ಹಂತಗಳನ್ನು ಅಳೆದು ವರ್ಷವನ್ನು ಲೆಕ್ಕಿಸುವುದನ್ನು ಚಂದ್ರಮಾನ ಪಂಚಾಂಗದಲ್ಲಿ ಉಪಯೋಗಿಸುತ್ತಾರೆ.

"https://kn.wikipedia.org/w/index.php?title=ವರ್ಷ&oldid=719254" ಇಂದ ಪಡೆಯಲ್ಪಟ್ಟಿದೆ