ಲ್ಯುಟೇಶಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಲ್ಯೂಟೇಶಿಯಮ್ ಒಂದು ಲೋಹ ಮೂಲಧಾತು. ಆವರ್ತ ಕೋಷ್ಟಕದಲ್ಲಿ ಇದು ಸಂಕ್ರಮಣ ಧಾತುಗಳ ಜೊತೆಗೆ ಇದ್ದರೂ, ಇದರ ರಾಸಾಯನಿಕ ಗುಣಗಳಿಂದ ಇದನ್ನು ಲ್ಯಾಂಥನೈಡ್ ಗುಂಪಿಗೆ ಸೇರಿಸಲಾಗುತ್ತದೆ. ಇದು ವಿರಳ ಭಸ್ಮ ಲೋಹಗಳಲ್ಲಿ ಅತ್ಯಂತ ಭಾರವಾದುದು ಮತ್ತು ಗಟ್ಟಿಯಾದುದಾಗಿದೆ.

ಇದು ೧೯೦೭ರಲ್ಲಿ ಮೂರು ವಿಜ್ಞಾನಿಗಳಿಂದ ಸ್ವತಂತ್ರವಾಗಿ ಕಂಡುಹಿಡಿಯಲ್ಪಟ್ಟಿತು. ಇದರ ಹೆಸರು ಲ್ಯಾಟಿನ್ ಭಾಷೆಯಲ್ಲಿ ಪ್ಯಾರಿಸ್ ನಗರದ ಹೆಸರಾದ "ಲ್ಯುಟೇಶಿಯ" ಇಂದ ಬಂದಿದೆ. ಇದು ಅತೀ ದುಬಾರಿಯಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ.