ರಾಮ್ ಸಿಂಗ್ ಯಾದವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮ್ ಸಿಂಗ್
ಲಂಡನ್ ನಲ್ಲಿ ನಡೆದ ೨೦೧೨ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್‍ನಲ್ಲಿ ರಾಮ್ ಸಿಂಗ್ ಯಾದವ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ಜನನ (1984-11-07) ೭ ನವೆಂಬರ್ ೧೯೮೪ (ವಯಸ್ಸು ೩೯)
ನಿವಾಸವಿರಾರ್, ಠಾಣೆ
ಉದ್ಯೋಗಹವಿಲ್ದಾರ್ (ಭಾರತೀಯ ಭೂಸೇನೆ)
Sport
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
ಸ್ಪರ್ಧೆಗಳು(ಗಳು)ಮ್ಯಾರಥಾನ್

ರಾಮ್ ಸಿಂಗ್ ಯಾದವ್ (ಜನನ ೭ ನವೆಂಬರ್ ೧೯೮೪) ಒಬ್ಬ ಭಾರತೀಯ ಮ್ಯಾರಥಾನ್ ರನ್ನರ್. ಲಂಡನ್ ೨೦೧೨ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ರಾಮ್ ಭಾರತವನ್ನು ಪ್ರತಿನಿಧಿಸಿದ್ದರು. ಅವರು ೨೦೧೨ ರ ಮುಂಬೈ ಮ್ಯಾರಥಾನ್‍ನಲ್ಲಿ ೨:೧೬:೫೯ ಸಮಯವನ್ನು ಗಳಿಸುವ ಮೂಲಕ ಬಿ ಅರ್ಹತಾ ಮಾನದಂಡವನ್ನು (೨:೧೮:೦೦) ಸಾಧಿಸಿದರು, ಇದು ಈ ಸ್ಪರ್ಧೆಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇವರು ಒಲಿಂಪಿಕ್ಸ್‌ನ ಮ್ಯಾರಥಾನ್ ಪಂದ್ಯಕ್ಕಾಗಿ ಅರ್ಹತೆ ಪಡೆದ ಎರಡನೇ ಭಾರತೀಯ ಕ್ರೀಡಾಪಟು. ಯಾದವ್ ಅವರಿಗಿಂತ ಮೊದಲು, ಶಿವನಾಥ್ ಸಿಂಗ್ ೧೯೭೬ ರಲ್ಲಿ ಮಾಂಟ್ರಿಯಲ್‍ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುವಾಗಿದ್ದರು. ರಾಮ್ ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ರಾಮ್ ಉತ್ತರ ಪ್ರದೇಶದ ವಾರಣಾಸಿಯ ಬಾಬಿಯನ್ ಗ್ರಾಮದವರು. ಅವರ ತಂದೆ ಮುಂಬೈನಲ್ಲಿ ಹಣ್ಣು ಮಾರಾಟಗಾರರಾಗಿದ್ದರು. ರಾಮ್ ಉರ್ಮಿಲಾ ಯಾದವ್ ಅವರನ್ನು ೨೦೦೧ ರಲ್ಲಿ ವಿವಾಹವಾದರು ಮತ್ತು ಅವರಿಗೆ ಅಮಿತ್, ಅಂಕಿತ್‍ ಮತ್ತು ಅಲೋಕ್ ಎಂಬ ಮೂವರು ಮಕ್ಕಳಿದ್ದಾರೆ. ಅವರು ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿದ್ದು, ಪ್ರಸ್ತುತ ಹೈದರಾಬಾದ್‍ನ ಫಿರಂಗಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.[೧] ಅವರು ಪುಣೆ ಮೂಲದ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್‍ನಲ್ಲಿ ತರಬೇತಿ ನೀಡುತ್ತಾರೆ.

ಒಲಂಪಿಕ್ ಅರ್ಹತೆ[ಬದಲಾಯಿಸಿ]

೨೦೦೮ ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನ ಮ್ಯಾರಥಾನ್ ಸ್ಪರ್ಧೆಗಾಗಿ ನಡೆದ ಮುಂಬೈ ಮ್ಯಾರಥಾನ್‍ನಲ್ಲಿ ರಾಮ್ ೨:೧೮:೦೦ ರ ಬಿ ಅರ್ಹತಾ ಮಾನದಂಡವನ್ನು ಕೆಲವು ಸೆಕೆಂಡುಗಳಿಂದ ತಪ್ಪಿಸಿಕೊಂಡರು, ಹೀಗಾಗಿ ಅವರು ಅರ್ಹತೆ ಪಡೆಯಲಿಲ್ಲ.[೨] ಅವರು ತಮ್ಮ ಓಟವನ್ನು ೨:೧೮:೨೩ ನಲ್ಲಿ ಪೂರ್ಣಗೊಳಿಸಿದರು ಮತ್ತು ಅಂತಿಮ ಸ್ಥಾನಗಳಲ್ಲಿ ೧೦ ನೇ ಸ್ಥಾನವನ್ನು ಪಡೆದರು.[೩] ಆದರೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‍ನ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರು ರಾಮ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ತಪ್ಪಾಗಿ ಘೋಷಿಸಿದರು, ನಂತರ ಸಂಘಟಕರು ಅದನ್ನು ಸರಿಪಡಿಸಿದರು.[೪][೫]

೨೦೧೨ ರ ಬೇಸಿಗೆ ಒಲಿಂಪಿಕ್ಸ್‌ಗಾಗಿ, ರಾಮ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಪಟ್ಟಣದ ಒಂದು ತರಬೇತಿ ಕೇಂದ್ರದಲ್ಲಿ ೪೫ ದಿನಗಳ ತರಬೇತಿ ಪಡೆದರು.[೬] ೨೦೧೨ ರ ಮುಂಬೈ ಮ್ಯಾರಥಾನ್ ಅವರು ತರಬೇತಿಯ ನಂತರ ಭಾಗವಹಿಸಿದ ಮೊದಲ ಸ್ಪರ್ಧೆಯಾಗಿದೆ, ಅದೇ ಸ್ಪರ್ಧೆಯಲ್ಲಿ ಅವರು ನಾಲ್ಕು ವರ್ಷಗಳ ಹಿಂದೆ ಒಲಿಂಪಿಕ್ ಸ್ಥಾನವನ್ನು ಪಡೆಯಲು ವಿಫಲರಾಗಿದ್ದರು. ಆದರೆ ೨೦೧೨ ರಲ್ಲಿ ಬಿ ಅರ್ಹತಾ ಮಾನದಂಡವಾದ ೨:೧೮:೦೦ ರ ಅಡಿಯಲ್ಲಿ ರಾಮ್ ೨:೧೬:೫೯ ರಲ್ಲಿ ಓಟವನ್ನು ಮುಗಿಸಿದರು. ಅವರು ಅಂತಿಮ ಮಾನ್ಯತೆಗಳಲ್ಲಿ ಒಟ್ಟಾರೆ ೧೨ ನೇ ಸ್ಥಾನವನ್ನು ಗಳಿಸಿದರು.[೭] ೨:೧೬:೫೯ ರಾಮ್‍ನ ಅತ್ಯುತ್ತಮ ಸಾಧನೆಯಾಗಿದೆ.[೮] ಒಲಿಂಪಿಕ್ಸ್‌ನ ಮ್ಯಾರಥಾನ್ ಸ್ಪರ್ಧೆಗೆ ಅರ್ಹತೆ ಪಡೆದ ಎರಡನೇ ಭಾರತೀಯ ಕ್ರೀಡಾಪಟು ರಾಮ್ ಆಗಿದ್ದಾರೆ. ಬಿಹಾರದ ಶಿವನಾಥ್ ಸಿಂಗ್ ಒಲಿಂಪಿಕ್ಸ್ ಮ್ಯಾರಥಾನ್‍ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಕ್ರೀಡಾಪಟು. ಅವರು ೧೯೭೬ ಮತ್ತು ೧೯೮೦ ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಬಾರಿ ಭಾಗವಹಿಸಿದ್ದರು.[೯][೧೦]

ಒಲಂಪಿಕ್ ಗೇಮ್ಸ್[ಬದಲಾಯಿಸಿ]

೨೦೧೨ ರ ಒಲಿಂಪಿಕ್ಸ್‌ನಲ್ಲಿ ರಾಮ್ ಸಿಂಗ್ ಯಾದವ್

ಲಂಡನ್ ೨೦೧೨ ರ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಅವರು ಮ್ಯಾರಥಾನ್ ಅನ್ನು ೨:೩೦:೦೬ ಸಮಯದೊಂದಿಗೆ ಪೂರ್ಣಗೊಳಿಸಿದರು, ಇದು ಅಂತಿಮ ಶ್ರೇಯಾಂಕದಲ್ಲಿ ಅವರನ್ನು ೭೮ ನೇ ಸ್ಥಾನದಲ್ಲಿರಿಸಿತು. ೧೦೫ ಆರಂಭಿಕ ಆಟಗಾರರಿಂದ ೨೦ ಕ್ಕೂ ಹೆಚ್ಚು ಓಟಗಾರರು ಮ್ಯಾರಥಾನ್ ಫೈನಲ್ ಅನ್ನು ಪೂರ್ಣಗೊಳಿಸಲು ವಿಫಲರಾದರು, ಹಾಗೂ ಇದನ್ನು ಉಗಾಂಡಾದ ಸ್ಟೀಫನ್ ಕಿಪ್ರೊಟಿಚ್ ೨:೦೮:೦೧ ಸಮಯದಲ್ಲಿ ಗೆದ್ದರು.[೧೧]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Naik, Shivani (16 July 2012). "'Unko bhaag-daud pasand hai. Woh kisi ki nahi sunenge". the Indian Express. New Delhi. Retrieved 21 July 2012.
  2. Naik, Shivani (21 January 2008). "Dream Run din drowns Ram Singh Yadav's effort". The Indian Express. Retrieved 21 July 2012.
  3. "Kenyan help for Ram Singh". The Hindu. 19 January 2009. Archived from the original on 22 January 2009. Retrieved 21 July 2012.
  4. Vasavda, Mihir (5 December 2008). "One last time". Daily News and Analysis. Retrieved 21 July 2012. Ram Singh Yadav hopes to qualify for the 2012 London Olympics
  5. Vasavda, Mihir (16 January 2012). "Army's Ram Singh Yadav takes giant strides towards Olympic". Daily News and Analysis. Mumbai. Retrieved 21 July 2012.
  6. https://www.sportskeeda.com/player/ram-singh-yadav
  7. "Ram Singh Yadav qualifies for London 2012". The Hindu. 15 January 2012. Retrieved 21 July 2012.
  8. "Athletes biographies – Yadav Ram Singh". iaaf.org. International Association of Athletics Federations. Retrieved 21 July 2012.
  9. "Shivnath Singh was a brave runner with a heart of gold". The Times of India. New Delhi. 7 June 2003. Retrieved 21 July 2012.
  10. "Ram Singh Yadav: Profiles 2012 London Olympics". Zee News. 16 July 2012. Retrieved 21 July 2012.
  11. ram-singh-yadav-finishes-78th-in-marathon