ವಿಷಯಕ್ಕೆ ಹೋಗು

ರವಿ ಬೆಳಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರವಿ ಬೆಳಗೆರೆ
ಜನನ(೧೯೫೮-೦೩-೧೫)೧೫ ಮಾರ್ಚ್ ೧೯೫೮
ಬಳ್ಳಾರಿ
ಮರಣ13 November 2020(2020-11-13) (aged 62)
ಬೆಂಗಳೂರು, ಕರ್ನಾಟಕ
ವೃತ್ತಿಪತ್ರಿಕೋದ್ಯಮಿ, ಬರಹಗಾರ, ಕಾದಂಬರಿಕಾರ, ಪತ್ರಿಕೆ ಸಂಪಾದಕ, ನಟ ಮತ್ತು ಟಿವಿ ಕಾರ್ಯಕ್ರಮ ನಿರೂಪಕ.
ಪ್ರಕಾರ/ಶೈಲಿFiction, Non Fiction
ಪ್ರಮುಖ ಕೆಲಸ(ಗಳು)ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬ್ಯಾಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾ ವಿಲಾಸ

www.ravibelagere.com

ರವಿ ಬೆಳಗೆರೆ (೧೫ ಮಾರ್ಚ್ ೧೯೫೮ - ೧೩ ನವೆಂಬರ್ ೨೦೨೦) ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.[]

ಜನನ–ಶಿಕ್ಷಣ–ವೃತ್ತಿಜೀವನ

[ಬದಲಾಯಿಸಿ]

ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು. ಅವರು 1995ರಲ್ಲಿ ಜನಪ್ರಿಯ ಹಾಯ್ ಬೆಂಗಳೂರ್! ಟ್ಯಾಬ್ಲಾಯ್ಡ್‌ನ್ನು ಆರಂಭಿಸಿದ್ದರು.

ಕೃತಿಗಳು

[ಬದಲಾಯಿಸಿ]

ಕಥಾ ಸಂಕಲನ

[ಬದಲಾಯಿಸಿ]
  • ದಾರಿ, 1980
  • ಪಾ.ವೆಂ. ಹೇಳಿದ ಕಥೆ, 1995
  • ಒಟ್ಟಾರೆ ಕಥೆಗಳು, 2001

ಕಾದಂಬರಿ

[ಬದಲಾಯಿಸಿ]
  • ಗೋಲಿಬಾರ್, 1983
  • ಅರ್ತಿ, 1990
  • ಮಾಂಡೋವಿ, ಸೆಪ್ಟಂಬರ್ 1996
  • ಮಾಟಗಾತಿ, 1998
  • ಒಮರ್ಟಾ, ಜನವರಿ 1999
  • ಸರ್ಪ ಸಂಬಂಧ, ಜೂನ್ 2000
  • ಹೇಳಿ ಹೋಗು ಕಾರಣ, ಸೆಪ್ಟಂಬರ್ 2003
  • ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003
  • ಗಾಡ್‌ಫಾದರ್ , ಮಾರ್ಚ್ 2005
  • ಕಾಮರಾಜ ಮಾರ್ಗ, ನವೆಂಬರ್ 2010
  • ಹಿಮಾಗ್ನಿ, ೨೦೧೨

ಅನುವಾದ

[ಬದಲಾಯಿಸಿ]
  • ವಿವಾಹ, 1983
  • ನಕ್ಷತ್ರ ಜಾರಿದಾಗ, 1984
  • ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999
  • ಕಂಪನಿ ಆಫ್ ವಿಮೆನ್, ಜನವರಿ 2000
  • ಟೈಂಪಾಸ್, ಜನವರಿ 2001
  • ರಾಜ ರಹಸ್ಯ, ನವೆಂಬರ್ 2002
  • ಹಂತಕಿ ಐ ಲವ್ ಯೂ, ಜನವರಿ 2007
  • ದಂಗೆಯ ದಿನಗಳು, ಮಾರ್ಚ್ 2008

ದೇಶ-ಇತಿಹಾಸ-ಯುದ್ಧ

[ಬದಲಾಯಿಸಿ]
  • ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999
  • ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
  • ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
  • ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002
  • ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003
  • ಡಯಾನಾ, ಜನವರಿ 2007
  • ನೀನಾ ಪಾಕಿಸ್ತಾನ
  • ಅವನೊಬ್ಬನಿದ್ದ ಗೋಡ್ಸೆ
  • ಮೇಜರ್ ಸಂದೀಪ್ ಹತ್ಯೆ
  • ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
  • ಮುಸ್ಲಿಂ

ಜೀವನ ಕಥನ

[ಬದಲಾಯಿಸಿ]
  • ಪ್ಯಾಸಾ, 1991
  • ಪಾಪದ ಹೂವು ಫೂಲನ್, ಆಗಸ್ಟ್2001
  • ಸಂಜಯ, 2000
  • ಚಲಂ (ಅನುವಾದ) ಮಾರ್ಚ್ 2008

ಕ್ರೈಂ

[ಬದಲಾಯಿಸಿ]

ಹತ್ಯಾಕಥನ

[ಬದಲಾಯಿಸಿ]
  • ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
  • ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998
  • ರಂಗವಿಲಾಸ್ ಬಂಗಲೆಯ ಕೊಲೆಗಳು
  • ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
  • ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012

ಭೂಗತ ಇತಿಹಾಸ

[ಬದಲಾಯಿಸಿ]
  • ಪಾಪಿಗಳ ಲೋಕದಲ್ಲಿ ಭಾಗ -1, 1995
  • ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997
  • ಭೀಮಾ ತೀರದ ಹಂತಕರು, ಮೇ 2001
  • ಪಾಪಿಗಳ ಲೋಕದಲ್ಲಿ, 2005
  • ಡಿ ಕಂಪನಿ, 2008

ಬದುಕು

[ಬದಲಾಯಿಸಿ]
  • ಖಾಸ್‌ಬಾತ್ 96, 1997
  • ಖಾಸ್‌ಬಾತ್ 97, ಸೆಪ್ಟಂಬರ್ 1997
  • ಖಾಸ್‌ಬಾತ್ 98, ಸೆಪ್ಟಂಬರ್ 1998
  • ಖಾಸ್‌ಬಾತ್ 99, ಅಕ್ಟೋಬರ್ 2003
  • ಖಾಸ್‌ಬಾತ್ 2000, ಅಕ್ಟೋಬರ್ 2003
  • ಖಾಸ್‌ಬಾತ್ 2001, ಜನವರಿ 2007
  • ಖಾಸ್‌ಬಾತ್ 2002, ಜನವರಿ 2008
  • ಖಾಸ್‌ಬಾತ್ 2003

ಅಂಕಣ ಬರೆಹಗಳ ಸಂಗ್ರಹ

[ಬದಲಾಯಿಸಿ]

ಜೀವನ ಪಾಠ

[ಬದಲಾಯಿಸಿ]
  • ಬಾಟಮ್ ಐಟಮ್ ಭಾಗ 1, ಫೆಬ್ರವರಿ2002
  • ಬಾಟಮ್ ಐಟಮ್ 2, ಅಕ್ಟೋಬರ್2003
  • ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006
  • ಬಾಟಂ ಐಟಮ್ 4
  • ಬಾಟಂ ಐಟಮ್ 5

ಪ್ರೀತಿ ಪತ್ರಗಳು

[ಬದಲಾಯಿಸಿ]
  • ಲವಲವಿಕೆ -1, ಡಿಸೆಂಬರ್ 1998
  • ಲವಲವಿಕೆ -2, ಸೆಪ್ಟಂಬರ್ 2004
  • ಲವಲವಿಕೆ -3
  • ಲವಲವಿಕೆ -4

ಕವನ ಸಂಕಲನ

[ಬದಲಾಯಿಸಿ]
  • ಅಗ್ನಿಕಾವ್ಯ, 1983
  • ಕೇಳಿ, ಜೂನ್ 2001
  • ಮನಸೇ ಆಡಿಯೋ ಸಿಡಿ ಜನವರಿ 2007
  • ಫಸ್ಟ್ ಹಾಫ್
  • ಅಮ್ಮ ಸಿಕ್ಕಿದ್ಲು, ೨೦೧೨
  • ಇದು ಜೀವ: ಇದುವೇ ಜೀವನ, ೨೦೧೨
  • ಏನಾಯ್ತು ಮಗಳೇ, ಡಿಸೆಂಬರ್ 2013
  • ಕಾಫಿ ಡೇ ಸಿದ್ಧಾರ್ಥ, ನವಂಬರ್ 2019
  • ಪುಲ್ವಾಮ, ಡಿಸೆಂಬರ್ 2019

ಸಿನೆಮಾ ನಟನೆ ಮತ್ತು ನಿರ್ಮಾಣ

[ಬದಲಾಯಿಸಿ]
  • 'ವಾರಸುದಾರ', 'ಗಂಡಹೆಂಡತಿ ಮತ್ತು ಬಾಯ್ ಫ್ರೆಂಡ್' ಎಂಬ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.
  • 'ಮುಖ್ಯಮಂತ್ರಿ ಐ ಲವ್ ಯೂ' ಎಂಬ ಚಿತ್ರ ನಿರ್ಮಾಣ ಶುರುಮಾಡಿ ಅದನ್ನು ಕಾನೂನು ತೊಡಕಿನಿಂದ ನಿಲ್ಲಿಸಿದರು.

ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ಕೃತಿ ಟಿಪ್ಪಣಿ
1984 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವಾಹ (ಸೃಜನೇತರ)
1990 ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಂಧ್ಯ (ಕತೆ)
1997 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಾ.ವೆಂ. ಹೇಳಿದ ಕತೆ (ಸಣ್ಣ ಕತೆ)
2004 ಶಿವರಾಮ ಕಾರಂತ ಪುರಸ್ಕಾರ ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ)
2005 ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ಪ್ರಾರ್ಥನಾ ಶಾಲೆ (ಕೇಂದ್ರ ಸರ್ಕಾರ)
2008 ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ[] ಜೀವಮಾನದ ಸಾಧನೆ
2011 ರಾಜ್ಯೋತ್ಸವ ಪ್ರಶಸ್ತಿ[] ಕರ್ನಾಟಕ ಸರ್ಕಾರ

ಬೆಳಗೆರೆ ಅವರು ಬೆಂಗಳೂರಿನಲ್ಲಿ, ೧೩ ನವೆಂಬರ್ ೨೦೨೦ರ ಬೆಳಗಿನ ಜಾವ ೨:೩೦ರಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ೬೨ ವರ್ಷ ವಯಸ್ಸಾಗಿತ್ತು.[][]

ಬಾಹ್ಯ ಸಂಪರ್ಕ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಪತ್ರಕರ್ತ ರವಿ ಬೆಳಗೆರೆ ನಿಧನ". www.prajavani.net. Retrieved 13 November 2020.
  2. ವೆಬ್ ದುನಿಯಾ ಸುದ್ದಿ
  3. ರಾಜ್ಯೋತ್ಸವ ಪ್ರಶಸ್ತಿ ಘೋಷಣೆ, ಒನ್ ಇಂಡಿಯಾ ಕನ್ನಡ
  4. Avinash Kadesivalya (13 Nov 2020). "ಅಸಂಖ್ಯಾತ ಕನ್ನಡಿಗರಿಗೆ ಬರಹಗಳ ಹುಚ್ಚು ಹತ್ತಿಸಿದ 'ಅಕ್ಷರ ರಾಕ್ಷಸ' ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ..!" [Ravi Belagere no more]. Vijaya Karnataka (in Kannada). Retrieved 13 Nov 2020.{{cite news}}: CS1 maint: unrecognized language (link)
  5. "Ravi Belagere Dies of Heart Attack In Bengaluru, Kannada Writers And Journalists Shocked". Sakshi Post. 13 Nov 2020. Retrieved 13 Nov 2020.