ಮಿರಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Flacourtia indica
Conservation status
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮ್ಯಾಲ್ಪಿಘಿಯಾಲೆಸ್
ಕುಟುಂಬ: ಸ್ಯಾಲಿಕೇಸೀ
ಕುಲ: ಫ್ಲಕೂರ್ಶಿಯಾ
ಪ್ರಜಾತಿ:
F. indica
Binomial name
Flacourtia indica
Synonyms

Flacourtia ramontchi

ಮಿರಡಿ ಫ್ಲಕೂರ್ಶಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಪೊದೆ ಸಸ್ಯ. ಗೊರಜಿ, ಹಣ್ಣುಸಂಪಿಗೆ, ಉಬ್ಬು, ಹತ್ತರಿ ಮುಳ್ಳು ಮುಂತಾದವುಗಳಿಗೆ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಖಾದ್ಯಯೋಗ್ಯ ಹಣ್ಣುಗಳನ್ನು ನೀಡುತ್ತದೆ. ಆದರೆ ಇದರ ಹಣ್ಣು ಅವುಗಳ ಹಣ್ಣಿನಷ್ಟು ರುಚಿಕರವಲ್ಲ. ಫ್ಲಕೂರ್ಶಿಯ ಸೆಪಿಯೇರಿಯ ಇದರ ಸಸ್ಯವೈಜ್ಞಾನಿಕ ಹೆಸರು. ಕುಮಾಂವ್, ಬಂಗಾಲ, ಬಿಹಾರ, ಒರಿಸ್ಸ ಹಾಗೂ ದಕ್ಷಿಣ ಭಾರತದ ಒಣಕಾಡುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ.

ಸಸ್ಯದ ವಿವರಣೆ[ಬದಲಾಯಿಸಿ]

ಇದು ಹೆಚ್ಚು ಎತ್ತರಕ್ಕೆ ಬೆಳೆಯದ ದೃಢಕಾಯದ ಪೊದೆ. ಕಾಂಡದ ಮೇಲೆಲ್ಲ ಚೂಪಾದ ಬಿರುಸಾದ ಮುಳ್ಳುಗಳುಂಟು. ಮುಳ್ಳುಗಳು ಕೂಡ ಮಾರ್ಪಾಟುಗೊಂಡ ರೆಂಬೆಗಳಾಗಿದ್ದು ಇವುಗಳ ಮೇಲೆ ಎಲೆಗಳೂ ಹೂಗಳೂ ಗೊಂಚಲು ಗೊಂಚಲಾಗಿ ರೂಪುಗೊಳ್ಳುವುವು. ಹಣ್ಣುಗಳು ಗುಂಡಗೆ ಬಟಾಣಿಕಾಳಿನ ಗಾತ್ರಕ್ಕಿವೆ. ಇವು ಮಾಗಿದಾಗ ಕೆಂಪುಬಣ್ಣಕ್ಕೆ ತಿರುಗುವುವು.

ಉಪಯೋಗಗಳು[ಬದಲಾಯಿಸಿ]

ಮಿರಡಿ ಹಣ್ಣನ್ನು ತಿನ್ನುವುದಲ್ಲದೆ, ಸೊಪ್ಪನ್ನು ದನಕರುಗಳ ಮೇವಾಗಿ ಬಳಸುವುದಿದೆ. ಬೇಲಿಗಿಡವಾಗಿ ಕೂಡ ಬೆಳೆಸಲಾಗುತ್ತದೆ. ಇದರ ಚೌಬೀನೆ ಗಟ್ಟಿಯಾದುದೂ ಒತ್ತುಕಟ್ಟಾದ ರಚನೆಯುಳ್ಳದ್ದೂ ಆಗಿರುವುದರಿಂದ ಕೃಷಿ ಉಪಕರಣ, ತೊಲೆಗಳು, ಆಧಾರಕಂಬಗಳು, ಇದ್ದಿಲು ಮುಂತಾದ ಸಾಮಗ್ರಿಗಳ ತಯಾರಿಕೆಗೆ ಉಪಯುಕ್ತವೆನಿಸಿದೆ.[೨] ಇದರ ತೊಗಟೆಯನ್ನು ಎಳ್ಳೆಣ್ಣೆಯೊಂದಿಗೆ ಅರೆದು ಮಿಶ್ರಿಸಿ ತಯಾರಿಸಿದ ಲೇಪ ಸಂಧಿವಾತ ಮತ್ತು ಗಂಡಮಾಲೆಗೆ ಒಳ್ಳೆಯ ಔಷಧಿ ಎನ್ನಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Botanic Gardens Conservation International (BGCI) & IUCN SSC Global Tree Specialist Group (2019). "Flacourtia indica". IUCN Red List of Threatened Species. 2019: e.T146188176A146223268. doi:10.2305/IUCN.UK.2019-2.RLTS.T146188176A146223268.en. Retrieved 6 November 2022.
  2. World Agroforestry

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಿರಡಿ&oldid=1170568" ಇಂದ ಪಡೆಯಲ್ಪಟ್ಟಿದೆ