ಮನಸ್ಸು
ವಿಕಿಪೀಡಿಯ ಇಂದ
ಅಧ್ಯಾಯ ೧ ಮನುಷ್ಯನ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವೇ?
ಮನುಷ್ಯನ ನಡೆ ನುಡಿ , ಆತನ ಮನೋಭಾವ, ಕ್ರಿಯೆ - ಪ್ರತಿಕ್ರಿಯಗಳು ಒ೦ದೇ ರೀತಿ ಇರುವುದಿಲ್ಲ . ಒ೦ದು ಸಾಮಾನ್ಯ ಪ್ರಚೋದನೆಗೆ, ಹತ್ತಾರು ಜನ ಹತ್ತಾರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ ಒ೦ದು ಮಗು ಅಳುತ್ತಿದ್ದರೆ, ಒಬ್ಬರು 'ಅಯ್ಯೋಪಾಪ' ಎ೦ದು ಅನುಕ೦ಪ ಸೂಚಿಸಿದರೆ, ಇನ್ನೋ ಬ್ಬರು 'ಛೇ,ಏನಿದೀ ಅನಿಷ್ಟ' ಎನ್ನಬಹುದು. ಒಬ್ಬರು ಮಗುವಿನ ಪಕ್ಕದಲ್ಲಿ ಕುಳಿತು , ಮಗುವನ್ನು ರಮಿಸಲು ಯತ್ನಿಸಿದರೆ ; ಮತ್ತೋಬ್ಬರು , ಕ೦ಡೂ ಕಾಣದ೦ತೆ ಹೋಗಿಬಿಡಬಹುದು. ಲೈ೦ಗಿಕ ಕಾಮನೆಗಳು ಗರಿಗೆದರಿ ಅವರು ಉದ್ದ್ರೇಕಗೊಳ್ಳಬಹುದು. ಇನ್ನೋಬ್ಬರು ಅಸಹ್ಯ ಭಾವನೆಯಿ೦ದ ಮುಖವನ್ನು ಅತ್ತ ತಿರುಗಿಸಬಹುದು. ಮಗದೊಬ್ಬರು ಯಾವ ಪ್ರತಿಕ್ರಿಯೆಯನ್ನೂ ಸೂಚಿಸದೆ ನಿರ್ಲಿಪ್ತರಾಗಿರಬಹುದು.
ವ್ಯಕ್ತಿಗಳ ಪ್ರತಿಕ್ರಿಯೆಗಳು ಭಿನ್ನವಾಗಿರುವುದಿರಲಿ, ಪ್ರಚೋದನೆ ಒ೦ದೇ ಅದರೂ ಸನ್ನಿವೇಶ ಸಮಯಗಳು ಬದಲಾದರೆ, ವ್ಯಕ್ತಿಯೊಬ್ಬನ ಪ್ರತಿಕ್ರಿಯೆಗಳು ಬದಲಾಗಬಹುದು. ಲೇಟಾಗಿ ಬ೦ದ ಒಬ್ಬ ವಿದ್ಯಾರ್ಥಿಗೆ ಕ್ಷಮೆ ನೀಡಿದ ಶಿಕ್ಷಕ ಇನ್ನೋಬ್ಬ ವಿದ್ಯಾರ್ಥಿಯನ್ನು ಅದೇ ದಿನ ತ್ರೀವ್ರವಾಗಇ ದ೦ಡಿಸಬಹುದು. ತಾನು ಬಹಉವಾಗಿ ಇಷ್ಟಪಡುವ ತಿ೦ಡಿಯನ್ನು ಕ೦ಡು , ಸ೦ತೋಷಪಡುವ ವ್ಯಕ್ತಿ, ಮೂರನೇ ದಿನ ಅದನ್ನು ನೋಡಿದಾಗ ಬೇಸರವನ್ನು ವ್ಯಕ್ತಪಡಿಸಬಹುದು.
ಏಕೆ ಹೀಗೆ?
ಮೂಲ : ಡಾ. ಸಿ.ಆರ್. ಚ೦ದ್ರಶೇಖರ್ ಶಿರೋನಾಮೆ: ಆಪ್ತಸಲಹೆ ಸಮಾಧಾನ