ಅರಿವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಅರಿವು (ಚಲನಚಿತ್ರ) ಪುಟವನ್ನು ನೋಡಿ.
೧೭ನೇ ಶತಮಾನದಲ್ಲಿ ಪ್ರಜ್ಞೆಯ ಪಾಶ್ಚಿಮಾತ್ಯ ಚಿತ್ರಣ

ಅರಿವು ಮನೋಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಮನಸ್ಸಿನ ಒಂದು ಸ್ಥಿತಿ ಅಥವ ಗುಣ ಎಂದು ಪರಿಗಣಿಸಲಾಗುತ್ತದೆ. ಸ್ವಜ್ಞಾನ, ಬಾಹ್ಯ ಪರಿಸರದ ಗುಣಗಳ ಅನುಭವ ಮುಂತಾದವುಗಳು ಮನಸ್ಸಿನಲ್ಲಿ ಉತ್ಪನ್ನವಾಗುವ ಪ್ರಕ್ರಿಯೆಯು ಪ್ರಜ್ಞೆ. ಅರಿವು: ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ ಪ್ರಕಾರ ಅರಿವು (ಕಾಗ್ನಿಷನ್); ಸಂವೇದನೆ, ಭಾವನೆ, ಅನುಭೂತಿ (ಫೀಲಿಂಗ್); ಮತ್ತು ಸಂಕಲ್ಪ, ಇಚ್ಛಾಶಕ್ತಿ, ಪ್ರೇರಣೆ (ಕೊನೇಷನ್) - ಇವು ಪ್ರಜ್ಞೆಯ (ಕಾನ್ಷಸ್‍ನೆಸ್) ಮೂರು ಅಂತಿಮಕ್ರಿಯೆಗಳು. ಜೀವನದಲ್ಲಿ ಇವನ್ನು ಪ್ರತ್ಯೇಕವಾಗಿ ಕಾಣುವುದು ಕಷ್ಟ. ಎಲ್ಲ ಕಡೆಯೂ ಇವು ಮೂರು ಒಟ್ಟಿಗೇ ಕೆಲಸ ಮಾಡುತ್ತವೆ. ಒಂದೊಂದು ಕಡೆ ಒಂದೊಂದರ ಪ್ರಭಾವ ಹೆಚ್ಚಿರುವುದರಿಂದ ಅವನ್ನು ಗುರುತಿಸಲು ಸಾಧ್ಯ . ಅನುಭೂತಿ ಮತ್ತು ಇಚ್ಛಾಶಕ್ತಿಗಳಿಲ್ಲದೆ ಉಂಟಾಗುವ ಪ್ರಜ್ಞೆಯನ್ನು ಅರಿವು ಎನ್ನಬಹುದು. ಎಲ್ಲ ಪ್ರಾಣಿಗಳ ಮೂಲ ಪ್ರವೃತ್ತಿ ಹೊರಗಿನ ಜಗತ್ತನ್ನು ಅರಿಯುವುದು, ಪರಿಸರ ಮತ್ತು ಜೀವಗಳ ನಡುವೆ ಇರುವ ಅನಿವಾರ್ಯ ಸಂಬಂಧದ ಒಂದು ಸಾಧನವಾಗಿ ಅರಿವು ಅಥವಾ ಬೋಧೆ ಜೀವಿಯ ಪ್ರಗತಿಪಥದಲ್ಲಿ ಕಾಣಿಸಿಕೊಳುತ್ತದೆ. ಅಮೀಬದಂಥ ಏಕಾಣುಜೀವಿಯೂ ಬಾಹ್ಯ ಜಗತ್ತನ್ನು ಅರಿಯಬಲ್ಲದು. ಈ ಅರಿವಿನ ಅಗತ್ಯ ಬರಬರುತ್ತ ಹೆಚ್ಚಿದಂತೆಲ್ಲ ಅಯನ್ನು ಸಮರ್ಪಕವಾಗಿ ಸಿದ್ಧಿಸಿಕೊಳುವ ಸಾಧನೆಗಳು ಕಾಣಿಸಿಕೊಂಡುವು. ಇಂದ್ರಿಯಗಳು ಈ ಅರಿವಿನ ಸಾಧನೆಯಲ್ಲಿ ಒಂದು ವಿಧಾನ. ವಿಲಿಯಂ ಜೇಮ್ಸ್ ಹೇಳಿದಂತೆ ಅರಿವಿನ ದಾರಿಯಲ್ಲಿ ಮೊದಲ ಹೆಜ್ಜೆ ಈ ಇಂದ್ರಿಯಾನುಭವ(ಸೆನ್ಸೇಷನ್). ಆದ್ದರಿಂದ ಇಂದ್ರಿಯಗಳನ್ನು ಜ್ಞಾನದ್ವಾರಗಳು ಎಂದೂ ಕರೆಯುತ್ತಾರೆ. ಇಂದ್ರಿಯಾನುಭವಗಳು ಮೂಲಭೂತವಾದ ಮಾನಸಿಕ ಪ್ರಕಾರಗಳು ಎಂದು ಟಿಚ್ನರ್ ಬಣ್ಣಿಸಿದ; ಅರಿವಿನ ರಚನೆ ಇಂದ್ರಿಯಾನುಭವಗಳ ಮೂಲಕ ಆಗುತ್ತದೆಂಬುದು ಅವನ ವಾದ. ಮನಸ್ಸಿನ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇಂದ್ರಿಯಗಳನ್ನು ಅರ್ಥಮಾಡಿಕೊಳ್ಳಬೇಕೆಂಬುದು ಅವನ ಅಭಿಪ್ರಾಯ. ಅಂತೂ ಇಂದ್ರಿಯಗಳನ್ನು ದಾಟಿದರೆ ಆಂತರಿಕ, ದೈಹಿಕ ರಚನೆಯಲ್ಲಿ ಗ್ರಾಹಕಾಂಗಗಳು (ರಿಸೆಪ್ಟರ್) ಇಂದ್ರಿಯಸಂಭೃತವಾದ ವಿವರಗಳನ್ನು ಸ್ವೀಕರಿಸಿ ಮನಸ್ಸಿನ ಮುಂದಿಟ್ಟು ಜ್ಞಾನಕ್ಕೆ ವಿಷಯವನ್ನಾಗಿ ಮಾಡುತ್ತವೆ. ಜೀವಂತವಾಗಿರುವ ಪ್ರಾಣಿ ಹೊರಗಣ ಜಗತ್ತಿನಿಂದ ಬರುವ ಪ್ರಚೋದಕವಿವರಗಳಿಗೆ ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆಯಷ್ಟೆ. ಜೀವಿಯಿಂದ ಜಗತ್ತಿಗೆ ಹರಿಯುವ ಪ್ರವಾಹಗಳಿಗೆ ಪ್ರವೃತ್ತಿಕ್ರಿಯೆ, ಪ್ರತಿಕ್ರಿಯೆ (ರೆಸ್ಪಾನ್ಸ್) ಎಂದರೆ ಜಗತ್ತಿನಿಂದ ಜೀವಿಗೆ ಹರಿಯುವ ಪ್ರವಾಹಗಳಿಗೆ ಅರಿವು , ಬೋಧೆ ಯೆನ್ನುತ್ತಾರೆ. ಪ್ರತಿಕ್ರಿಯೆ ಸಮರ್ಪಕವಾಗಿ ಇರಬೇಕಾದರೆ ಅರಿವು ಪ್ರೌಢವಾಗಿರಬೇಕು. ಹಾಗೆಂದೇ ಪ್ರಾಣಿಗಳು ವಿಕಾಸ ಹೊಂದುವಾಗ ಸನ್ನಿವೇಶ ಜಟಿಲಗೊಂಡು ಪ್ರತಿಕ್ರಿಯೆ ಕ್ಲಿಷ್ಟವಾಗಲು ಅರಿವಿನ ಪ್ರಕಾರಗಳೂ ಪ್ರೌಢವಾಗುತ್ತವೆ. ಅಮೀಬದ ಅರಿವಿಗೂ ಮನುಷ್ಯನ ಅರಿವಿಗೂ ಮೂಲಭೂತವಾದ ಪ್ರಯೋಜನ ಒಂದೇ ಇದ್ದರೂ ಅವುಗಳ ರೀತಿ ರಿವಾಜು ವಿಭಿನ್ನ . ಮಾನವನಲ್ಲಿ ಇಂದ್ರಿಯದ್ವಾರಗಳು ಹೆಚ್ಚಾಗಿರುವುದು ಮಾತ್ರವಲ್ಲ ಅವುಗಳ ಸಾಮರ್ಥ್ಯವೂ ಹೆಚ್ಚಾಗಿದೆ. ಮನಸಿನ ಕೌಶಲ ಹೆಚ್ಚಿದೆ. ಸಂವೇದನೆಗಳ ಇಂಗಿತಯನ್ನು ಪರಿಷ್ಕಾರವಾಗಿ ಅರಿಯುವ ವ್ಯವಧಾನ ಮನುಷ್ಯನ ವೈಶಿಷ್ಟ್ಯ ಎಂದರೆ ಉತ್ಪ್ರೇಕ್ಷೆಯಲ್ಲ. ಈ ಕಾರಣದಿಂದಲೇ ಮನುಷ್ಯ ಪ್ರಕೃತಿಯ ಮೇಲೆ ತನ್ನ ಪ್ರಭುತ್ವಯನ್ನು ಸ್ಥಾಪಿಸಲು ಶಕ್ತನಾಗಿರುವುದು. ಅರಿವಿನ ಮೇರೆಯ ವಿಸ್ತರಣದೊಂದಿಗೆ ಪ್ರಗಲ್ಭತೆಯೂ ಸೇರಿದೆ. ಜಗತ್ತಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ಕೈಗೊಳಲು ಮನುಷ್ಯನಿಗೆ ಇಂದ್ರಿಯಸ್ಥಾನ ಗಳು, ನರಮಂಡಲ ವ್ಯವಸ್ಥೆ, ಕ್ರಿಯಾಸಮರ್ಥವಾದ ಸ್ನಾಯು, ಮಾಂಸಖಂಡ-ಮುಂತಾದವು ನೆರವು ನೀಡುತ್ತವೆ. ಮನುಷ್ಯ ಜಾಗೃತನಾಗಿರುವಾಗೆಲ್ಲ ಬಾಹ್ಯವಸ್ತುಗಳಿಂದ ಅವಿರತವಾದ ಪ್ರಚೋದನೆಗಳಿಗೆ ಈಡಾಗುತ್ತಾನೆ. ಈ ಪ್ರಚೋದನೆಯೆಂಬುದು ಕ್ರಿಯಾಶಕ್ತಿಯ (ಎನರ್ಜಿ) ಹಲವು ಪ್ರಕಾರಗಳಂತೆ ಇಂದ್ರಿಯಗಳನ್ನು ಮುಟ್ಟಿ ಸಂವೇದನೆಗಳನ್ನು ಉದ್ಬೋಧನೆಗೂಳಿಸುತ್ತವೆ. ಒಂದೊಂದು ಇಂದ್ರಿಯ ಒಂದೊಂದು ಬಗೆಯ ಪ್ರಚೋದನೆಯನ್ನು ಗ್ರಹಣ ಮಾಡಲು ಸಮರ್ಥವಾಗಿರುತ್ತದೆ. ಕಣ್ಣು ಬೆಳಕಯನ್ನು, ಕಿವಿ ಶಬ್ದವನ್ನು , ಚರ್ಮ ಸ್ಪರ್ಷವನ್ನು, ಮೂಗು ವಾಸನೆಯನ್ನು ಗ್ರಹಿಸುತ್ತವೆ. ಹೀಗೆ ಇಂದ್ರಿಯಗಳಿಗೆ ನಿಯತವ್ಯಾಪಾರವಿದೆ. ಇವೆಲ್ಲ ಅರಿವಿನ ಪ್ರಕಾರಗಳೇ. ಸಾಮಾನ್ಯವಾಗಿ ನಾವು ಯಾವುದಾದರೊಂದು ವಸ್ತುವನ್ನು ಗ್ರಹಿಸುವಾಗ ಹಲವಾರು ಇಂದ್ರಿಯಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಪ್ರತ್ಯಭಿಜ್ಞೆಯಲ್ಲಂತೂ (ರೆಕಾಗ್ನಿಷನ್) ನಾನಾ ಇಂದ್ರಿಯಾರ್ಥಗಳ ಸಮಷ್ಟಿವ್ಯಾಪಾರವಿರುತ್ತದೆ. ಇಂದ್ರಿಯಗಳು ಮಾತ್ರ ಕೆಲಸ ಮಾಡಿದರೆ ಅರಿವು ಮೂಡುವುದಿಲ್ಲ. ಇಂದ್ರಿಯಗಳಿಂದ ಸಿದ್ಧವಾದ ಅನುಭವಗಳಿಗೆ ಅರ್ಥವನ್ನು ಸೇರಿಸಿ ಪ್ರತ್ಯಕ್ಷಾನುಭವ (ಪರ್ಸೆಪ್ಷನ್) ಆದಾಗಲೇ ಅರಿವು ಪೂರ್ಣವಾಗುವುದು (ನೋಡಿ- ಪ್ರತ್ಯಕ್ಷಾನುಭವ). ಆದರೆ ಈ ಇಂದ್ರಿಯಾನುಭವ ಎಲ್ಲಿ ಯಾವಾಗ, ಬೋಧನೆಯ ಸ್ಥಿತಿಯನ್ನು ಮುಟ್ಟುತ್ತದೆ ಎಂಬುದು ಶಾಸ್ತ್ರಕ್ಕೂ ಮನಶ್ಶಾಸ್ತ್ರಕ್ಕೂ ಸಮನಾದ ಸಮಸ್ಯೆ. ಇದು ಇನ್ನೂ ಸಮರ್ಪಕವಾಗಿ ಪರಿಹಾರವಾಗಿಲ್ಲ. ಅರಿವಿನ ಸಮಸ್ಯೆ ತತ್ತ್ವಶಾಸ್ತ್ರದಿಂದಲೇ ಮನಶ್ಯಾಸ್ತ್ರಕ್ಕೆ ಬಂದ ದತ್ತಿ. ಕಾಗ್ನಿಷನ್ ಎಂಬ ಇಂಗ್ಲಿಷಿನ ಪದ ಗ್ನಾಸಿಸ್ ಎಂಬ ಧಾತುವಿನಿಂದ ಬಂದುದು. ಇದಕ್ಕೆ ಸಂಸ್ಕೃತದ ಜ್ಞಾ ಧಾತು ಸಮಾನ; ಜ್ಞಾ ಎಂದರೆ ತಿಳಿಯುವುದು ಎಂದರ್ಥ. ಆದರೆ ಇಂಗ್ಲಿಷಿನ ಕಾಗ್ನಿಷನ್ ಪದದಲ್ಲಿ ಸಹಕಾರದಿಂದ, ಒಡನೆ ಎಂಬರ್ಥದ ಕೊ ಎಂಬ ಉಪಸರ್ಗಕ್ಕೂ ಪ್ರಾದಾನ್ಯವಿದೆ. ಒಟ್ಟಾರೆ. ವಸ್ತುವಿನ ಸಹಕಾರದಿಂದ ತಿಳಿಯುವುದು ಬೋಧೆ; ಯಾವುದಾದರೂ ಒಂದು ವಸ್ತು ಇಂದ್ರಿಯಗೋಚರವಾಗಿ ಎದುರಿಗೆ ಇದ್ದರೇನೆ ಬೋಧೆಯಾಗುವುದು. ಪ್ರತ್ಯಕ್ಷಕಲ್ಪನೆ, ಪ್ರತ್ಯಯ (ಕಾನ್ಸೆಪ್ಟ್), ಸ್ಮೃತಿ, ನಿರೀಕ್ಷೆ, ಪ್ರತ್ಯಭಿಜ್ಞೆ ಮುಂತಾದ ಕ್ರಿಯೆಗಳೆಲ್ಲವನ್ನೂ ಬೋಧೆಯಲ್ಲಿ ಸೇರಿಸುತ್ತಾರೆ. ವಸ್ತು ಎದುರಿಗೆ ಇದ್ದು ಅದು ಇಂದ್ರಿಯ ವಿವರಗಳನ್ನು ಹೊಕ್ಕು ಆ ವಸ್ತುವಿನ ಅರಿವುಂಟಾದರೆ ಅದು ಪ್ರತ್ಯಕ್ಷ. ವಸ್ತು ದೂರವಿದ್ದು ಇಂದ್ರಿಯಗಳಿಗೆ ನೇರವಾದ ಸಂಬಂಧ ಇಲ್ಲವಾದರೂ ಅದರ ಅರಿವು ಉಂಟಾದರೆ ಅದು ಕಲ್ಪನೆ. ಪ್ರತ್ಯಕ್ಷ ದಿಂದ ಉಂಟಾದ ಚಿತ್ತದೊಳಗಿನ ಚಿತ್ತವೇ ಪ್ರತ್ಯಯ. ದೂರದ ವಸ್ತು ಕಾಲದ ದೃಷ್ಞಿಯಿಂದ ಭೂತವಾಗಿದ್ದರೆ ಸ್ಮೃತಿ. ಭವಿಷ್ಯತ್ತಾದರೆ ನಿರೀಕ್ಷೆ. ಅಂತೂ ವಸ್ತುವಿನ ಸಾಕ್ಷಾತ್ ಅಥವಾ ಪರೋಕ್ಷ ಸಂಪರ್ಕವಿದ್ದಾಗ ನಮ್ಮ ಚಿತ್ತವೃತ್ತಿಗಳು ಉದ್ಭೂತವಾಗಿ ವಸ್ತುವಿನ ವಿವರಗಳನ್ನು ಗ್ರಹಿಸುವುದು ನೈಜವಾದ ವ್ಯವಹಾರ. ಪ್ರತ್ಯಕ್ಷ ಅರಿವಿನ ಮುಖ್ಯ ಪ್ರಕಾರವಾದುದರಿಂದ ಹಲವೊಮ್ಮೆ ಅರಿವನ್ನೂ ಪ್ರತ್ಯಕ್ಷಾನುಭವವನ್ನೂ ಸಮಾನಾರ್ಥಕ ಪದಗಳಂತೆ ಉಪಯೋಗಿಸುವ ವಾಡಿಕೆ ಇದೆ. ಆದರೆ ಆಧುನಿಕ ಮನಶ್ಶಾಸ್ತ್ರದ ಪ್ರಕ್ರಿಯೆಯಲ್ಲಿ ಅರಿವನ್ನು ಹೆಚ್ಚಾಗಿ ಬಳಸುವ ಪದ್ಧತಿ ಯಿಲ್ಲ. 1854ರಲ್ಲಿ ಜೆ.ಎಫ್.ಫರಿಯರ್ ಎಂಬ ತತ್ವಜ್ಞಾನಿ ಜ್ಞಾನದ ವಿಶ್ಲೇಷಣೆ, ಅಧ್ಯಯನಗಳನ್ನೇ ತತ್ವಶಾಸ್ರ್ತದ ಪ್ರಮುಖವಿಷಯವನ್ನಾಗಿ ಗ್ರಹಿಸಿ ಜ್ಞಾನಮೀಮಾಂಸೆ (ಎಪಿಸ್ಟಮಾಲಜಿ) ಎಂಬ ತತ್ತ್ವಶಾಸ್ತ್ರಶಾಖೆಯನ್ನು ಆರಂಭಿಸಿದ. ವಸ್ತುತಃ ಇದು ಮನಶ್ಶಾಸ್ತ್ರಪರವಾದ ಅಧ್ಯಯನವೇ ಆಗಿದ್ದುದರಿಂದ ಪ್ರಾಯೋಗಿಕ ವಿಭಾಗವನ್ನಷ್ಟೇ ಮನಶ್ಶಾಸ್ತ್ರದ ಪಾಲಿಗೆ ಬಿಟ್ಟರು. ಬರಬರುತ್ತ ಆತ್ಮ ಅಥವಾ ಚೈತನ್ಯ (ಕಾನ್ಷಸ್‍ನೆಸ್) ಎಂಬ ಕಲ್ಪನೆಗಳು ಸಡಿಲವಾಗಿ ವರ್ತನೆ, ಕ್ರಿಯೆ (ಬಿಹೇವಿಯರ್) ಪ್ರಮುಖವಾದಾಗ ಅರಿವಿನ ಬಳಕೆಯೂ ಹಿಂದೆ ಬಿತ್ತು. ಈ ಕಾರಣದಿಂದ ಬಹುಮಟ್ಟಿಗೆ ಅರಿವು ಎಂಬುಯನ್ನು ಇಂದ್ರಿಯಾನುಭವ, ಪ್ರತ್ಯಾಕ್ಷಾನುಭವಗಳಲ್ಲಿ ಮುಗಿಸಿಬಿಡುತ್ತಾರೆ. ಆದರೆ. ಐತಿಹಾಸಿಕ ದೃಷ್ಟಿಯಿಂದ ಇದರಷ್ಟು ಪ್ರಭಾವಶಾಲಿಯಾದ ಕಲ್ಪನೆ ಮತ್ತೊಂದಿಲ್ಲ. ಪ್ರಾಚೀನಕಾಲದಿಂದ ಮನಶ್ಯಾಸ್ತ್ರದ ಮುಖ್ಯ ವಸ್ತುಗಳಲ್ಲಿ ಒಂದಾದ ಅರಿವು ವಿಲಿಯಂ ಜೇಮ್ಸ್, ವಿಲ್ಹೆಲ್ಮ್ ಉಂಟ್, ಸ್ಟೌಟ್, ಸ್ಟರ್ನ್, ಸ್ಪಿಯರ್‍ಮನ್ ಮುಂತಾದವರ ಸಂಶೋಧನೆಗೆ ಒಳಪಟ್ಟ ವಿಷಯವಾಗಿತ್ತು. ಚಾರಲ್ಸ್ ಸ್ಪಿಯರ್‍ಮನ್ ಈ ವಿಚಾರವಾಗಿ ಅಮೂಲ್ಯವಾದ ಪ್ರಯೋಗಗಳನ್ನು ನಡೆಸಿ ಮೂರು ನಿಯಮಗಳನ್ನು ನಿರೂಪಿಸಿದ. ಅನುಭವಗಳನ್ನು ಅರಿಯುವವಸ್ತು ಎಂದರೆ, ಮೊದಲನೆಯದಾಗಿ, ನಾವು ಹೊರಜಗತ್ತನ್ನು ತಿಳಿಯುವುದು ಮಾತ್ತವಲ್ಲ , ಇಂದ್ರಿಯಾನುಭವವನ್ನು ಪಡೆಯುವುದು ಮಾತ್ರವಲ್ಲ, ಪ್ರಯತ್ನ ಪಡುವುದು ಮಾತ್ತವಲ್ಲ , ಉದ್ವಿಗ್ನರಾಗುವುದು ಮಾತ್ರವಲ್ಲ, ಈ ತಿಳುವಳಿಕೆ. ಇಂದ್ರಿಯಾನುಭವ. ಪ್ರಯತ್ನ, ಉದ್ವೇಗ-ಇವು ನಮ್ಮಲ್ಲಿ ಉಂಟಾಗುವುದನ್ನು ಅರಿಯುವುದೂ ಸಾಧ್ಯ. ಎರಡನೆಯ ನಿಯಮ ಕಲ್ಪನೆಗಳ ನಡುವೆ ಸಂಬಂಧದ ಪ್ರಸಾರಗಳನ್ನು ಸ್ಪಷ್ಟಪಡಿಸುವುದು, ಎಳೆಯುವುದು ಸಹಜವಾದ ಪ್ರವೃತ್ತಿ ಎಂಬುದು ಈ ಮೂರು ನಿಯಮಗಳು ಪ್ರತೀತ್ವಸಂಬೋಧಿ (ನಿಯೋಜೆನೆಸಿಸ್) ಎನಿಸಿಕೊಡುತ್ತದೆ. ಅರಿವು ಉತನ್ನ ವಾಗಲು ಅವಶ್ಯವಾದ ಉಪಾಧಿಗಳನ್ನು, ಅನುಭವದ ಪ್ರಕಾರಗಳನ್ನು, ಈ ನಿಯಮತ್ರಯ ವಿವರಿಸುತ್ತದೆ. ಈ ನಿಯಮಗಳನ್ನು ಮಂಡಿಸಿದ ಸ್ಪಿಯರ್‍ಮನ್ ಅವಿಶ್ರಾಂತವಾಗಿ ಪ್ರಯೋಗಗಳನ್ನು ನಡೆಸಿ ಬುದ್ಧಿಶಕ್ತಿ , ಸ್ಮೃತಿಶಕ್ತಿ, ಕಲಿಕೆ ಮುಂತಾದ ಮಾನಸಿಕಪ್ರವೃತ್ತಿಗಳಲ್ಲಿ ಅರಿವಿನ ಪಾತ್ರವನ್ನು ವಿಶದೀಕರಿಸಿದ. ಮನಶ್ಯಾಸ್ತ್ರದ ವಿಶ್ವದಲ್ಲಿ ಅರಿವಿಗೆ ಪ್ರಯೋಗಸಿದ್ಧವಾದ ಸ್ಥಾನವನ್ನು ಒದಗಿಸಿದವ ಸ್ಪಿಯರ್‍ಮನ್. ಸಮಷ್ಟಿಮನಶ್ಶಾಸ್ತ್ರದ (ಗೆಸ್ಟಾಲ್ಟ್ ಮನಶ್ಶಾಸ್ತ್ರತ) ಬೆಳವಣಿಗೆಗೆ ಅರಿವಿನ ಸ್ಥಾನವನ್ನು ಮತ್ತೆ ಸ್ಥಾಪಿಸಿತು. ಈ ಪಂಥದವರು ಪ್ರತ್ಯಕ್ಷಾನುಭವದ ವಿಚಾರವಾಗಿ ನಡೆಸಿದ ಅಧ್ಯಯನ ಅರಿವಿನ ಪ್ರಕಾರಗಳನ್ನು ಸ್ಫುಟಪಡಿಸಿತು. ಕರ್ಟ್ ಲೆವಿನ್ ಎಂಬ ಪ್ರಖ್ಯಾತ ಮನಶ್ಯಾಸ್ತ್ರಜ್ಞ ನಿರೂಪಿಸಿದ ಚಿತ್ತಕ್ಷೇತ್ರವಾದ ಅರಿವಿನ ನೆಲೆಯನ್ನು ಚಿತ್ತವೃತ್ತಿಗಳ ವ್ಯವಹಾರದ ಹಿನ್ನೆಲೆಯಲ್ಲಿ ನಿರ್ದೇಶಿಸಿತು. ಪ್ರಸಂಗವಾದದ (ಫೆನಾಮಿನಾಲಜಿ) ದೃಷ್ಟಿಯಿಂದ ಮನುಷ್ಯನ ಇಡೀ ವ್ಯಕ್ತಿತ್ವವನ್ನು ವ್ಯವಹಾರಕ್ಷೇತ್ರವೆಂದು ಪರಿಗಣಿಸಿದರೆ ಯಾವೊಂದು ವರ್ತನೆಯೂ ಈ ಕ್ಷೇತ್ರದ ವಿವರಗಳಿಂದ ನಿರ್ದಿಷ್ಟವಾಗುವುದು. ಈ ಕೇತ್ರ ಸಂದರ್ಭಶುದ್ಧವಾಗಿ ವ್ಯವಸ್ಥೆಗೊಳ್ಳಲು ಅರಿವು ಮುಖ್ಯವಾದ ಸಾಧನೆ. ಅರಿವು ಕೂಡ ಒಂದು ಕ್ರಿಯೆಯೆನ್ನುವ ವಾದ ಮನಶ್ಯಾಸ್ತ್ರದ ಇತಿಹಾಸದ ಮಧ್ಯ ಯುಗದಲ್ಲಿ ಪ್ರಚಲಿತವಾಗಿತ್ತು. ಈ ವಾದ ಚಿತ್ತಕ್ಷೇತ್ರವಾದಿಗಳಿಂದ ಮತ್ತೆ ಪ್ರಚಾರಕ್ಕೆ ಬಂದಿತು. ಅರಿವು ಬೇರೆ, ವ್ಯವಸ್ಥೆ ಬೇರೆ, ಅಗತ್ಯ ಬಿದ್ದರೆ ಕ್ಷೇತ್ರದ ಪುನರ್ವ್ಯವಸ್ಥೆ ಆಗಬೇಕು; ಇದಕ್ಕೆ ಕೂಡ ಅರಿವು ಪ್ರಮುಖವಾದ ಸಾಧನೆ ಎಂಬ ನಿಲುವು ಸ್ಪಷ್ಟವಾಯಿತು. ಅರಿವಿನ ಪ್ರಕಾರವೇ ವ್ಯವಸ್ಥೆ. ಅರಿವೆಂದರೆ ವ್ಯವಸ್ಥೆಯ ಒಂದು ಮುಖ-ಎಂದು ಸಮಷ್ಟಿವಾದಿ ಗಳು ನಿರೂಪಿಸಿದ್ದರು. ಲೆವಿನ್ನನಂತೆ ಅರಿವಿಗೆ ವ್ಯವಸ್ಥೆಗಿಂತ ಭಿನ್ನವಾದ ಅಸ್ತಿತ್ವವನ್ನು ಹೇಳಬೇಕಾಗುತ್ತದೆ. ಪ್ರತ್ಯಕ್ಷಾನುಭವ ಎನ್ನುವುದು ಈ ವಾದದವರ ಪ್ರಕಾರ ಬೋಧನೆಯ ಕೇತ್ರ ಇದ್ದಕ್ಕಿದ್ದಂತೆ ಪುನರ್ವ್ಯವಸ್ಥಿತವಾಗುವುದು. ಸಂಕೇತಸಮಷ್ಟಿ ನಿರೀಕ್ಷೆಯ (ಸೈನ್ ಗೆಸ್ಟಾಲ್ಟ್ ಎಕ್ಸ್ಪೆಕ್ಟೆನ್ಸಿ) ವಾದವನ್ನು ಮಂಡಿಸಿದ ಇ.ಸಿ.ಟೋಲ್‍ಮನ್ ಅರಿವಿನ ಸಮಸ್ಯೆಯನ್ನು ಮತ್ತೊಂದು ದೃಷ್ಟಿಯಿಂದ ಅಧ್ಯಯನ ಮಾಡಿದ, ಜೀವಿ ನಿರ್ದಿಷ್ಟ ಗುರಿ ಮುಟ್ಟಲು ವ್ಯವಸ್ಥಿತವಾದ ಸಾಧನೆಗಳನ್ನೂ ಸಂಕೇತಗಳನ್ನೂ ಬಳಸಿಕೊಳ್ಳುವಾಗ ಅರಿವು ಉಪಯೋಗಕ್ಕೆ ಬರುತ್ತದೆ. ಇಲ್ಲಿ ಅರಿವು ಎಂದರೆ ಸಾಧನ- ಸಾಧ್ಯಗಳ ಮಧ್ಯೆ ಇರುವ ಸಂಬಂಧ; ವಸ್ತುವನ್ನು ಪ್ರತ್ಯಕ್ಷದಿಂದ ಗ್ರಹಿಸುವುದು, ಅರಿಯುವುದು. ಅಂದರೆ ಅದರ ಆಕಾರ, ಸ್ವಬಾವ, ಮೌಲ್ಯ, ಪ್ರಯೋಜನ, ಇಂಗಿತಗಳನ್ನು ಗ್ರಹಿಸುವುದು. ಸ್ಮೃತಿಯಲ್ಲಿ ಧರಿಸಿಕೊಳ್ಳುವುದು. ಈ ಮೂರೂ ಅರಿವಿನ ಅಂಗಗಳು. ಹೀಗೆ ಯಾವುದಾದ ರೊಂದು ಪ್ರಾಣಿ ಹೊರಗಿನ ವಸ್ತುವನ್ನು ನೋಡುವಾಗ ಆ ವಸ್ತುವಿನ ಸಂಕೇತವನ್ನೂ ಇಂಗಿತವನ್ನೂ ಗ್ರಹಿಸಿ ವಸ್ತುಗಳಿಗೂ ತನಗೂ ಇರುವ ಸಂಬಂಧವನ್ನೂ ನಿರೀಕ್ಷೆಯಿಂದ ಕ್ರಿಯೋನ್ಮುಖವಾಗಿ ಮಾಡುವುದರಿಂದ ಇದಕ್ಕೆ ಸಂಕೇತಸಮಷ್ಟಿವಾದ ಎಂಬ ಹೆಸರು ಬಂದಿದೆ. ಈ ಸಂಧರ್ಭದಲ್ಲಿ ಟೋಲ್ಮನ್ ಮೂರುಬಗೆಯ ಅರಿವನ್ನು ಹೇಳುತ್ತಾನೆ: 1. ಮೂಲಭೂತವಾದ ಗುರಿಗಳಿಗೆ ಸಂಬಂಧಪಟ್ಟಂತೆ ತೃಪ್ತಿಪಡೆದುಕೊಳ್ಳಲು ಸಿದ್ಧವಾದ ಅರಿವು ಕ್ಯಾಥೆಕ್ಸಿಸ್, 2. ಮೂಲಭೂತವಾದ ಗುರಿಗಳಿಗೂ ಸನ್ನಿವೇಶದ ವಸ್ತುಗಳಿಗೂ ಸಂಬಂಧವನ್ನು ಕಲ್ಪಿಸಿ ಉಪಗುರಿಗಳನ್ನು ಏರ್ಪಡಿಸುವ ಅರಿವು ಈಕ್ವಿವೆಲೆಂಟ್ ಬಿಲೀಫ್ಸ್ . 3. ಹೊರಗಿನ ಸನ್ನಿವೇಶದ ಪ್ರಸಂಗಗಳಲ್ಲಿ ಅನುಕ್ರಮವನ್ನು ಉಂಟುಮಾಡಿ ಅದರ ಮೂಲಕ ಮುಂದೆ ಬರಬಹುದಾದ ಫಲರೂಪಿ ವಸ್ತುಗಳನ್ನು ನಿರೀಕ್ಷಿಸುವ ಅರಿವು ಫೀಲ್ಡ್ ಎಕ್ಸ್ಪೆಕ್ಟೆನ್ಸೀಸ್. ಈ ವಿಭಾಗದ ಇಂಗಿತವಾಗಿ ಟೋಲ್ಮನ್ ವಾದಿಗಳು ಅರಿವಿನ ಭೂಪಟಗಳನ್ನು ಸಿದ್ಧಪಡಿಸಿದ್ದಾರೆ. ಮೂಲಭೂತ ಪ್ರವೃತ್ತಿಗಳಿಗೂ ಮೋಟಿವೇಷನ್ ಅರಿವಿಗೂ ಇರುವ ಸಂಬಂಧವನ್ನು ಆಧುನಿಕ ಮನಶ್ಶಾಸ್ತ್ರ ಸ್ಪಷ್ಟಪಡಿಸಿದೆ. ಪ್ರವೃತ್ತಿಗಳಿಂದ ವ್ಯಕ್ತಿಯಲ್ಲಿ ಉಂಟಾದ ಒತ್ತಡವನ್ನು ಕಡಿಮೆಮಾಡಲು ಅರಿವು ಬಲವಾಗುತ್ತದೆ. ಇದರಿಂದಾಗಿ ಗೌಣವಾದ ಪ್ರವೃತ್ತಿಗಳು ಅರಿವಿನ ಫಲದಂತೆ ಕಾಣಿಸಿಕೊಳ್ಳುತ್ತವೆ. ಅರಿವು ಹೀಗೆ ಫಲಕಾರಿಯಾಗಬೇಕಾದರೆ ಪೂರ್ವಾನುಭವ ಅಥವಾ ಕಲಿತ ಕೌಶಲ ಅಗತ್ಯ . ಹೊರಗಿನ ಸನ್ನಿವೇಶವನ್ನು ಯಥಾರ್ಥವಾಗಿ ಗ್ರಹಿಸಲು ಮೌಲಿಕ ವೈವಿಧ್ಯವನ್ನು ಆಶ್ರಯಿಸಿ ವಿಭಿನ್ನ ಕ್ರಿಯೆಗಳನ್ನು ವ್ಯವಸ್ಥೆಗೊಳಿಸಲೂ ಅರಿವು ಅಗತ್ಯವಾಗುತ್ತದೆ. ಸಾಮಾಜಿಕ ಮನಶ್ಶಾಸ್ತ್ರದ ಇಂದಿನ ಸ್ಥಿತಿಯಲ್ಲಿ ಸಾಮಾಜಿಕ ಸಂಬಂಧಗಳನ್ನು ಮತ್ತು ಸಾಮಾಜಿಕ ಮೌಲ್ಯಗಳನ್ನು ಅರಿಯುವ ಪ್ರಕಾರಕ್ಕೆ ಸಾಮಾಜಿಕಬೋಧೆ ಎಂದು ಹೆಸರು. ಡೇವಿಡ್ ಕೆಚ್ ಮುಂತಾದ ಸಾಮಾಜಿಕ ಮನಶ್ಶಾಸ್ತ್ರಜ್ಞರು ಪೂರ್ವಗ್ರಹ ಜನಾಂಗಗಳಲ್ಲಿನ ವೈವಿಧ್ಯ , ಪಂಗಡಗಳ ವೈಷಮ್ಯ ಮುಂತಾದ ವಿವರಗಳನ್ನು ಇದೇ ದೃಷ್ಟಿಯಿಂದ ಅಧ್ಯಯನ ಮಾಡಿದ್ದಾರೆ. ಈ ಪ್ರವೃತ್ತಿU¼ಲವೂ ಪ್ರಸಂಗವಾದದ ನೆ¯ಯಲ್ಲಿ ಅರಿವಿನ ಪ್ರಕಾರಗಳೇ. ಇನ್ನೊಬ್ಬ ವ್ಯಕ್ತಿಯ ಸ್ವಬಾವವನ್ನು ಅರಿಯುವುದು ನಮ್ಮ ನಿತ್ಯ ಜೀವನದಲ್ಲಿ ಅತ್ಯಾವಶ್ಯಕ; ನಮ್ಮ ಅನುಭವದ ಆಧಾರದ ಮೇಲೆಯೇ ಇವನ್ನು ಸಾಧನೆಗಳ ಸಮಷ್ಟಿಜ್ಞಾನ ಸಾಮಾಜಿಕ ಬೋಧೆಯೆನಿಸಿಕೊಳ್ಳುತ್ತದೆ. ವ್ಯಕ್ತಿಯ ರೂಪ ಗ್ರಹಣ ಪ್ರತ್ಯಕ್ಷದಲ್ಲಿ ಆಗುತ್ತದೆ. ಆದರೆ ಅವನ ಮನೋಧರ್ಮ, ಪ್ರವೃತ್ತಿಗಳು, ಅವದಾನಗಳು, ಸಹಿಷ್ಣುತೆ ಮುಂತಾದ ಆಂತರಿಕ ವಿವರಗಳನ್ನು ಸಾಮಾಜಿಕ ಬೋಧೆಯಿಂದ ಅರಿಯದೆ ವ್ಯಕ್ತಿಯ ಸಂಪೂರ್ಣ, ಅರ್ಥಕ್ರಿಯಾಕಾರಿಜ್ಞಾನ ಸಾಧ್ಯವಾಗಲಾರದು. ಹಾಗೆಯೇ ಸಮಾಜವೊಂದರಲ್ಲಿ ವ್ಯವಸ್ಥಿತವಾದ ಪದ್ಧತಿಗಳು, ಸಂಪ್ರದಾಯ, ಆರ್ಥಿಕ ಧಾರ್ಮಿಕ ನೀತಿ, ಸಮಾಜರಚನೆ ಮುಂತಾದವನ್ನು ಅರಿಯಲೂ ಈ ಬಗೆಯ ಬೋಧೆ ಅಗತ್ಯ . ಇದಿಲ್ಲದೆ ಸಮಾಜದಲ್ಲಿ ಪಾಲುಗೊಳ್ಳಲು ಸಾಧ್ಯ ವಿಲ್ಲ. ಈ ಜ್ಞಾನ ಸಂಪನ್ನವಾಗಲು ನೆರವಾಗುವ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಬೇಕೆಂಬ ಶ್ರದ್ಧೆ ಪ್ರಗತಿಪರರಾಷ್ಟ್ರಗಳಲ್ಲಿ ಕಾಣಬರುತ್ತಿದೆ. ಮನಶ್ಶಾಸ್ತ್ರದ ಇತಿಹಾಸದಲ್ಲಿ ಬೆಂಟಾನೊ ಬೇನ್, ವಾರ್ಡ್, ಜೇಮ್ಸ್ ಮುಂತಾದವರು ಅರಿವು ಮನಶ್ಶಾಸ್ತ್ರ ದ ಮುಖ್ಯ ಅಧ್ಯ ಯನವಸ್ತುವೆಂದು ಗ್ರಹಿಸಿ ಅದರ ಅನುಸಂಧಾನದ ಕಡೆ ತಮ್ಮ ಲಕ್ಷ್ಯವನ್ನು ಹರಿಸಿದರು. ಜೇಮ್ಸ್ ವಾರ್ಡ್ ಅನುಭವಕ್ಕೆ ಅನಿವಾರ್ಯವಾಗಿ ವಿಷಯ (ಸೆಲ್ಫ್, ಈಗೊ) ಇದ್ದೇ ಇರಬೇಕೆಂದು ವಾದಿಸಿ ಅರಿವು ಮುಂತಾದ ಎಲ್ಲ ಕ್ರಿಯೆಗಳೂ ಅದರ ಪ್ರಸಾರಗಳೆಂದೇ ನಿಶ್ಚಯಿಸಿದ. ಚಂದ್ರನಿಗೂ ಅವನ ಕಲೆಗಳಿಗೂ ತಾದಾತ್ಮ್ಯ ಇರುವಂತೆ ವಿಷಯಿಗೂ ಅರಿವಿಗೂ ತಾದಾತ್ಮ್ಯ ಸಂಬಂಧ ಇದೆ. ಹೊರಗಿನ ವಸ್ತು ದತ್ತವಾಗಿ ಪ್ರಾತಿಭಾಸಿಕವಾಗಿ ಇಂದ್ರಿಯಾನುಭವಗಳ ಮೂಲಕ ವಿಷಯಿಯನ್ನು ಮುಟ್ಟುವುದು. ಈ ಪ್ರಾತಿಭಾಸಿಕಪ್ರವೃತ್ತಿಗಳು ವ್ಯಕ್ತಿಯ ಗಮನವನ್ನು ಸೆಳೆಯುತ್ತವೆ ಮತ್ತು ಪ್ರಾತಿಭಾಸಿಕಪ್ರವೃತ್ತಿಗಳ ಹಿಂದಿರುವ ವಸ್ತುವಿನ ವಿಚಾರವಾಗಿ ವಿಷಯಿಯ ಸಂಬಂಧವನ್ನು ರೂಪಿಸುತ್ತವೆ. ಬೇನ್ ಪ್ರಾಣಶಾಸ್ರ್ತದ ನಿಲುವನ್ನು ಹಿಡಿದು ನರಪ್ರವಾಹಗಳು ಅನುಭವದಲ್ಲಿ ಏಕತಾನವನ್ನುಂಟುಮಾಡಬಲ್ಲುವೆಂದು ಹೇಳಿದೆ. ಅವನ ಪ್ರಕಾರ-ನರಪ್ರವಾಹವಿಲ್ಲದಿದ್ದರೆ ಮನಸ್ಸೂ ಇಲ್ಲ. ಮಿದುಳಿನ ರಚನೆ, ಅಲ್ಲಿ ನಡೆಯುವ ವೃತ್ತಿ-ಇವುಗಳಿಂದಲೇ ಅರಿವು ಮುಂತಾದ ಮಾನಸಿಕಕ್ರಿಯೆಗಳು ಉಂಟಾಗುವುವೆಂಬುದು ಅವನ ವಾದ. ಇಂದ್ರಿಯಾನುಭವ ಗಳಲ್ಲಿ ಅರಿವಿಗೂ ನಿಕಟಸಂಬಂಧವಿದೆ ಎಂದು ತೋರಿಸುವುದು ಈ ಎಲ್ಲ ಸಂಶೋಧಕರ ಉದ್ದೇಶವಾಗಿತ್ತು. ಮೊದಲಿನಿಂದ ಅರಿವಿಗೂ ಪ್ರತ್ಯಕ್ಷಾನುಭವಕ್ಕೂ ಇರುವ ವ್ಯತಾಸವನ್ನು ಗಮನಿಸಿದ್ದಾರೆ. ಬಾಹ್ಯವಸ್ತುಗಳನ್ನು ಅವಲಂಬಿಸಿ ರೂಪತಳೆದ ಇಂದ್ರಿಯಾನುಭವಗಳು ಪ್ರತ್ಯಕ್ಷಾನುಭವಕ್ಕೆ ಅತ್ಯಾವಶ್ಯಕ; ಇವನ್ನು ಮೀರಿ ಪತ್ಯಕ್ಷ ಆಗಲಾರದು. ಆದರೆ ಅರಿವು ಈ ಮೇರೆಯನ್ನು ಮೀರಿ ಇಂದ್ರಿಯಾನುಭವಗಳಲ್ಲಿ ಬಾರದ ವಿವರಗಳನ್ನು ಗ್ರಹಿಸುತ್ತ್ತದೆ. ಪ್ರತ್ಯಕ್ಷ ಒಮ್ಮೊಮ್ಮೆ ತಪ್ಪಾಗಿ ಗ್ರಹಿಸುವುದುಂಟು. ಮರಳುಗಾಡಿನಲ್ಲಿ ನಡೆಯುವಾಗ ನೀರಿನ ಭಾಸ ಆಗುವಂತೆ, ಆದರೆ ಇದರ ಪರಿಚಯ ಇದ್ದವನು, ಅನುಭವ ಇದ್ದವನು ಅದನ್ನು ನೀರೆಂದು ಗ್ರಹಿಸುವುದಿಲ್ಲ. ಇಂದ್ರಿಯಾನುಭವದ ವಿವರವನ್ನೂ ಅವನು ಅರಿವಿನಲ್ಲಿ ಮಾರ್ಪಡಿಸಿಕೊಳ್ಳುತ್ತಾನೆ. ಪ್ರತ್ಯಕ್ಷ ದಲ್ಲಿ ಯುಕ್ತಿ, ತರ್ಕ, ನಿರ್ಣಯ ಇವಕ್ಕೆ ಸ್ಥಾನವಿರದು; ಹೆಚ್ಚು ಕಡಿಮೆ ವಸ್ತುತಂತ್ರವಾದದ್ದೇ ಇದು. ಆದರೆ ಅರಿವಿನಲ್ಲಿ ಈ ಮಾನಸಿಕಕ್ರಿಯೆಗಳು ಅವಶ್ಯ ವಾಗಿ ಒದಗಿಬರುತ್ತವೆ. ಪ್ರತ್ಯಕ್ಷ ದಲ್ಲಿ ದೃಕ್‍ ಪ್ರತ್ಯಯವೇ (ಪರ್ಸೆಪ್ಟ್) ಆಧಾರವಾದರೆ. ಅರಿವಿನಲ್ಲಿ ಮಾನಸಪ್ರತ್ಯಯ (ಕಾನ್ಸೆಪ್ಟ್) ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಪ್ರತ್ಯಕ್ಷ ತಾತ್ಕಾಲಿಕವಾದ ಅನುಭವ, ಕ್ಷಣಭಂಗುರವಾದ ಪ್ರಸಂಗ. ಅರಿವಾದರೋ ಚಿತ್ತಬಿತಿಯಲ್ಲಿ ಉಳಿದಿರಬಲ್ಲುದು. ಅಷ್ಟು ಮಾತ್ತವಲ್ಲ ಹಲವಾರು ಮಾನಸಪ್ರತ್ಯಯಗಳು ಕಲೆತು ವ್ಯವಸ್ಥಿತವಾಗಿ ಜ್ಞಾನವನ್ನು ಉಂಟುಮಾಡಬಲ್ಲವು. ಜ್ಞಾನ (ನಾಲೆಡ್ಜ್) ಎಂಬುದು ವ್ಯವಸ್ಥಿತವಾದ ಚಿತ್ತಪರವೃತ್ತಿ. ಅರಿವು ಅನಿರ್ದಿಷ್ಟ ಗ್ರಹಣವಾದರೆ, ಜ್ಞಾನವೆಂಬುದು ನಿರ್ದಿಷ್ಟ ಸಾಕಾರಗ್ರಹಣ. ಅದರಿಂದಲೇ ಕ್ರಿಯೆ ಹೊರಬರಲು ಸಾಧ್ಯ . ಇವನ್ನು ಭಾರತೀಯರು ವ್ಯವಹಾರಯೋಗ್ಯ ಎಂದು ವಿವರಿಸುತ್ತಾರೆ. ಕರ್ಟ್ ಲೆವಿನ್ ಎರಡು ವಿಭಿನ್ನ ಭಾಷೆಗಳನ್ನು ಉಲ್ಲೇಖಿಸುತ್ತಾನೆ. ವಸ್ತುತಂತ್ರವಾಗಿರುವ (ಫೆನೊಟಿಪಿಕಲ್) ಭಾಷೆ, ಮಾನಸಪ್ರತ್ಯಯಗಳನ್ನು ಅವಲಂಬಿಸಿರುವ (ಜೆನೊಟಿಪಿಕಲ್)ಭಾಷೆ. ಮೊದಲನೆಯದಕ್ಕೆ ಆಧಾರ ದತ್ತಾಂಶಗಳು, ಇಂದ್ರಿಯ ಗ್ರಾಹ್ಯವಾದ ವಿವರಗಳು. ಇದು ಪ್ರತ್ಯಕ್ಷ ಎರಡನೆಯದಕ್ಕೆ ಆಧಾರ ಕಲ್ಪನೆಗಳು (ಕಾನ್ಸ್ ಟ್ರಕ್ಟ್ಸ್). ಇದು ಜ್ಞಾನ, ಎರಡರಲ್ಲೂ ಅರಿವು ಇದ್ದರೂ ಎರಡನೆಯದರಲ್ಲಿಅರಿವಿನ ಪಾತ್ರ ಹೆಚ್ಚು. ಅರಿವು ಕೇವಲ ವ್ಯಕ್ತಿನಿಷ್ಠ. ಇಂದ್ರಿಯ ದತ್ತಾಂಶಗತಿಗೆ ಅತೀತವಾದದ್ದು (ಟ್ರ್ಯಾನಂಡೆಂಟಲ್). ಆದರೆ ಇದು ತತ್ವಶಾಸ್ರದಲ್ಲಿ ಹೇಳುವಂತೆ ಸತ್ತಾಮಾತ್ರವಾದುದಲ್ಲ. ಬೆಂಟಾನೊ ಹೇಳುವಂತೆ ಕ್ರಿಯೆ. ಈ ಕ್ರಿಯೆಯಿಂದ ವಸ್ತು ಸೂಚ್ಯವಾಗುತ್ತದೆ. ಆದರೆ ಪ್ರತ್ಯಕ್ಷ ದಲ್ಲಿದ್ದಂತೆ ಬಾಹ್ಯವಸ್ತುವೇ ಆಗಿರಬೇಕೆಂಬ ನಿಯಮ ಇಲ್ಲ. ಆಂತರಿಕವಸ್ತು ಅಥವಾ ಭಾವನೆಯೂ ಅರಿವಿಗೆ ವಸ್ತುವೇ. ಮೈನಾಂಗ್‍ನ ಶಿಷ್ಯ ಬೆನುಸ್ಸಿ ಅತೀಂದ್ರಿಯ ಕ್ರಿಯೆಗಳಿಂದ ಉತನ್ನ ವಾದ ಸಮಷ್ಟಿ ಸ್ವರೂಪವೇ ಅರಿವು ಎಂದು ಹೇಳಿ ಬಾಹ್ಯ ವಸ್ತುಗಳು ವಾಸ್ತವಿಕವಾದುದರಿಂದ ಉಚ್ಚ ಶ್ರೇಣಿಯದು ಎಂದೂ ಮಾನಸ ವಸ್ತುಗಳು, ಇವುಗಳನ್ನು ಆಶ್ರಯಿಸಿ ಕಲ್ಪಿತವಾದುದರಿಂದ ನೀಚ ಶ್ರೇಣಿಯದು ಎಂದೂ ವಾದಿಸಿದ್ದಾನೆ. ಈ ವಾದವನ್ನು ಸಮಷ್ಟಿವಾದಿಗಳು ನಿರಾಕರಿಸಿ ಸಮಷ್ಟಿ¸ರೂಪದ ಅರಿವು ಉಚ್ಚಶ್ರೇಣಿಯ ಕ್ರಿಯೆಯೇ ಎಂದು ಸಮರ್ಥಿಸುತ್ತಾರೆ. ಇಂದ್ರಿಯಜನ್ಯಸಂವೇದನೆಗಳು ಕೂಡ ಆಂತರಿಕ ವಿವರಗಳನ್ನು ಆಶ್ರಯಿಸಿರುತ್ತವೆ ಎಂದೂ ಕಾಫ್ಕಾ ಸ್ಪಷ್ಟಪಡಿಸಿ ಸಮಷ್ಟಿ¸ರೂಪ ಗಳು ವಾಸ್ತವವಾಗಿ ಹೊರಗಿನ ಭೌತಪ್ರಪಂಚದಲ್ಲಿ ಇರುವುವೆಂದೂ ಸಂವೇದನೆಗಳಂತೆ ಆಧುನಿಕ ಮನಶ್ಶಾಸ್ತ್ರದಲ್ಲಿ ಅರಿವು ಎಂಬ ಕಲ್ಪನೆ ವಿಶೇಷವಾಗಿ ಕಲಿಕೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಬರುತ್ತದೆ. ಒಂದು ಪ್ರಾಣಿಯ ಮುಂದೆ ಸಮಸ್ಯೆಯನ್ನು ಒಡ್ಡಿದಾಗ ಅದು ಸಮಸ್ಯೆಯನ್ನು ಹೇಗೆ ಪರಿಹಾರ ಮಾಡುತ್ತದೆ ಎಂಬುಯನ್ನು ನಿರ್ಧರಿಸಲು ಕೊಯ್ಲರ್, ಟೋಲ್ಮನ್, ಕ್ರೆಷೆವ್ಸ್ಕಿ, ಜೆನಿಂಗ್ಸ್ ಮುಂತಾದವರು ಪ್ರಯತ್ನಪಟ್ಟಿದ್ದಾರೆ. ಬಹುಮಟ್ಟಿಗೆ ಸಮ್ಮತವಾದ ಅಭಿಪ್ರಾಯವೆಂದರೆ ಸಮಸ್ಯೆಯ ಸನ್ನಿವೇಶವನ್ನು ಪ್ರಾಣಿ ಅರಿಯುವಾಗಲೇ ಅದರ ಪರಿಹಾರದ ಸೂಚನೆಯೂ ಕಂಡುಬರುತ್ತದೆ ಎಂಬುದು. ಸಮಸ್ಯೆಯ ಸನ್ನಿವೇಶವನ್ನು ಪ್ರಾಣಿ ವಿಶಿಷ್ಟವಾಗಿ ಗ್ರಹಿಸುತ್ತದೆ. ಆ ಅನುಭವಗಳೊಂದಿಗೆ ಸಂದರ್ಭದ ಅಗತ್ಯ ದಿಂದಾದ ಅಂತಃಪ್ರವೃತ್ತಿಗಳು ದೃಶ್ಯವನ್ನು ಪರಿಷ್ಕರಿಸಿ ಅರ್ಥವತ್ತಾಗಿ ಮಾರ್ಪಡಿಸುತ್ತವೆ. ಇದಕ್ಕೆ ಅರಿವಿನ ಪುನಾರಚನೆ ಎಂದು ಹೆಸರು. ಇದರಲ್ಲಿ ಪ್ರತ್ಯಕ್ಷಾನುಭವವೂ ಅಗತ್ಯವೂ ಅವಧಾನವೂ ಬುದ್ಧಿಶಕ್ತಿಯೂ ಪಾತ್ತವಹಿಸುತ್ತವೆ. ಅರಿವು ಮನೋದೇಹಸಂಘಾತದ ಒಂದು ಪ್ರಕಾರವೆಂದು ಪರಿಗಣಿಸಿ ಅದೂ ಇತರ ದೈಹಿಕ ಮತ್ತು ಮಾನಸಿಕ ಕ್ರಿಯೆಗಳಂತೆ ಅನುಕ್ರಮವಾಗಿ ವಿಕಾಸಗೊಳ್ಳುವುದೆಂದು ಈಚೆಗೆ ನಿರ್ಧರಿಸಿದ್ದಾರೆ. ಅಲ್ಲಿ ಅರಿವು ಎಂಬ ಪ್ರತ್ಯಕ್ಷದಲ್ಲಿ ಇಂದ್ರಿಯಾನುಭವ, ಪ್ರತ್ಯಕ್ಷಕ್ಷಾನುಭವ, ವಿವೇಕ, ಚಿಂತನೆಗಳನ್ನು ಸೇರಿಸುತ್ತಾರೆ. ಹುಟ್ಟಿದ ಮಗುವಿನಲ್ಲಿ ಅರಿವು ಮೂಡುವುದಕ್ಕೆ ಮುನ್ನವೇ ಹತ್ತಾರು ದೈಹಿಕವ್ಯಾಪಾರಗಳು ಸಿದ್ಧವಾಗಿರುತ್ತವೆ. ಸಹಜವಾಗಿ ಒದಗಿಬಂದ ನರಮಂಡಲದ ವ್ಯವಸ್ಥೆ ಯಿಂದ ಹೊರಗಿನ ಪ್ರೇರಕಗಳಿಗೆ ಸಮರ್ಪಕವಾದ ಪ್ರತಿಕ್ರಿಯೆಯನ್ನು ಮಾಡುವ ಸೌಲಭ್ಯ ಮಗುವಿಗೆ ಇರುತ್ತದೆ. ಮಗು ದೊಡ್ಡದಾದ ಮೇಲೂ ಉತ್ಕ್ಷೇಪಕ್ರಿಯೆ (ರಿಫ್ಲೆಕ್ಸ್ ಆಕ್ಷನ್) ಇದ್ದೇ ಇರುತ್ತದೆ. ಉತ್ಕ್ಷೇಪಕ್ರಿಯೆಗೂ ಅರಿವಿಗೂ ಸಂಬಂಧ ಏನು ಎಂಬುದು ಮನಶ್ಶಾಸ್ತ್ರದಲ್ಲಿ ಜಿಜ್ಞಾಸೆಗೆ ಬಂದಿದೆ. ಹಲವು ಮನಶ್ಶಾಸ್ತ್ರಜ್ಞರು ಅರಿವು ಮೂಲಭೂತವಾಗಿ, ಪ್ರಾಣಿಯ ಜೀವನದ ದೃಷ್ಟಿಯಿಂದ ಸಹಜವಾದುದಲ್ಲವೆಂದೂ ಉತ್ಕ್ಷೇಪಕ್ರಿಯೆಗಳಿಂದಲೇ ಉತ್ಪನ್ನ ವಾದುದೆಂದೂ ಹೇಳುತ್ತಾರೆ. ಜೀಗರ್, ಲೋಎಚ್, ನುವೆಲ್ ಮುಂತಾದ ಪ್ರಾಣಿಶಾಸ್ರ್ತಜರು ತಮ್ಮ ನಿರೂಪಣೆಯಲ್ಲಿ ಅರಿವನ್ನು ಪಸ್ತಾಪಿಸುವುದೇ ಇಲ್ಲ. ಅವರ ಪಾಲಿಗೆ ಅರಿವು ಉಚ್ಚಪ್ರಾಣಿಗಳಲ್ಲಿ ಎಂದರೆ ವಾನರ, ಮನುಷ್ಯ ಇವರಲ್ಲಿ ಆಗಾಗ ಕಾಣಿಸುವ ವ್ಯಾಪಾರವಿಶೇಷ. ಇದೂ ಮಿದುಳು, ನರಮಂಡಲಗಳ ಒಂದು ವ್ಯವಸ್ಥೆ ಯ ಅಭಿವ್ಯಕ್ತಿ ಅಷ್ಟೆ. ಆದರೆ ಈ ವಾದಕ್ಕಿಂತ ಹೆಚ್ಚು ಪ್ರಚಲಿತವಾದ ವಾದವೆಂದರೆ ಮಗು ಹುಟ್ಟಿದಾಗಲೇ ಅರಿವು ಮೂಡುವುದೆಂದೂ ಅರಿವಿನಿಂದಲೇ ಎಲ್ಲ ಕ್ರಿಯೆಗಳೂ (ದೈಹಿಕ, ಮಾನಸಿಕ) ವ್ಯವಸ್ಥಿತವಾಗುವುದೆಂದೂ ಹೇಳುವುದು. ಪ್ರಾಣಿಗಳ ಸಂತತಿಯಲ್ಲಿ ಮೊದಲ ಸ್ಥಿತಿಗಳಲ್ಲಿ ಉತ್ಕ್ಷೇಪಕ್ರಿಯೆಗಳಾಗುತವೆ ಎಂಬ ನಿಲುವನ್ನು ತಳೆದಿದ್ದಾರೆ. ಪ್ರಯತ್ನದ ಮಿತವ್ಯಯ ಎಂಬ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಯೂ ಮತ್ತೆ ಮತ್ತೆ ಪುನರಾವರ್ತಿತವಾದಾಗ ಅರಿವಿನ ಒತ್ತಾಸೆ ಕಮ್ಮಿಯಾಗುತ್ತ ಬಂದು ಕಡೆಗೆ ಆ ಕ್ರಿಯೆ ಸ್ವಚ್ಛಂದವಾಗಿಬಿಡುತ್ತದೆ. (ಸ್ಪಾನ್ಟೇನಿಯಸ್). ಇದು ಅರಿವು ಉತ್ಕ್ಷೇಪಕ್ರಿಯೆ ಆಗುವ ಬಗೆ. ಯಾವುದಾದರೂ ಕಾರಣದಿಂದ ಆ ಕ್ರಿಯೆಗೆ ಅಡಚಣೆ ಬಂದಾಗ ಮಾತ್ರ ಅರಿವು ಒಡನೆಯೇ ಉಂಟಾಗುತ್ತದೆ. ಕೋಣೆಯಲ್ಲಿ ದಿನಂಪ್ರತಿ ಕಾಣುವ ವಸ್ತುಗಳು ನಮ್ಮ ಅರಿವಿಗೆ ಮೀರಿ ಇರುತ್ತವೆ; ಆದರೆ ಆ ವಸ್ತುಗಳಲ್ಲಿ ಒಂದು ಕಾಣದಾದಾಗ ಅಥವಾ ಹೊಸದೊಂದು ವಸ್ತು ಸೇರಿದಾಗ, ಅಥವಾ ಇದ್ದ ಭಂಗಿ ಬದಲಾದಾಗ ತಟ್ಟನೆ ಅರಿವು ಮೂಡುತ್ತದೆ; ಪ್ರತ್ಯಕ್ಷದ ಪ್ರಕಾರಗಳಲ್ಲಿ ಇದೂ ಒಂದು. ಹೀಗೆ ಒಂದೇ ಪ್ರೇರಕನೆಲೆಗೆ ಸಮನ್ವಯ ಮಾಡಿಕೊಂಡಾಗ ಅರಿವು ಜಾರುವುದನ್ನು ಇಂದ್ರಿಯಾನುಭವದ ಮಟ್ಟಕ್ಕೆ ಹೊಂದಿಸುವುದು ಎಂದು ವ್ಯವಹರಿಸುತ್ತಾರೆ. ಇಲ್ಲಿ ಅರಿವು ಇಲ್ಲವೆಂದಲ್ಲ; ಅರಿವಿನೊಂದಿಗೆ ಇರಬೇಕಾದ ಅವದಾನ ಇಲ್ಲವೆಂದು. ಪ್ರಾಣಿಯ ಬಾಳಿನಲ್ಲಿ ಅರಿವು ಬೆಳೆಯುವ ನೆಲೆ ಎನ್ನುವ ಕಲ್ಪನೆ ಇದೆ. ಇದಕ್ಕೆ ಸಂಬಂಧಿಸಿದಂತೆ ನರಮಂಡಲದ ವ್ಯವಸ್ಥೆ ಹೆಚ್ಚು ಹೆಚ್ಚಾಗಿ ಕ್ರಿಯಾಶೀಲವಾಗಿ ಸಮರ್ಥವಾಗು ವುದು. ದೈಹಿಕ ವ್ಯವಸ್ಥೆ ಅಚ್ಚುಕಟ್ಟಾಗುವುದು. ಮಾನಸಿಕ ಪ್ರವೃತ್ತಿಗಳು ಅಭಿವ್ಯಕ್ತವಾಗುವುವು. ಅರಿವಿನ ಪ್ರಕಾರಗಳನ್ನು ದೈಹಿಕ ಉತ್ಕ್ಷೇಪಕ್ರಿಯೆಗಳು, ಇಂದ್ರಿಯಾನುಭವಗಳು, ಪ್ರತ್ಯಕ್ಷಾನುಭವ, ಅನಧಾನ, ಸಹಜ ಪ್ರವೃತಿಗಳು (ಇನ್‍ಸ್ಟಿಂಕ್ಟ್ಸ್), ಭಾವಪ್ರವೃತಿಗಳು, ಸಂಕಲ್ಪಸ್ಮೃತಿ, ಕಲ್ಪನೆ (ಇಮೇಜರಿ), ಭಾಷೆ ಮತ್ತು ಚಿಂತನೆ ಎಂದು ವಿಭಾಗ ಮಾಡುವ ಪದ್ಧತಿ ಇದೆ. ಉತ್ಕ್ಷೇಪಕ್ರಿಯೆಗಳನ್ನು ಅನಭಿವ್ಯಕ್ತ ಅರಿವು ಎಂದು ವ್ಯಹರಿಸುತ್ತಾರೆ. ಜೆ.ಎ.ಗಿಲ್ಬರ್ಟ್ ಎಂಬ ಮನಶ್ಶಾಸ್ತ್ರಜ್ಞ ಯೇಲ್ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ಮಕ್ಕಳ ಇಂದ್ರಿಯಾನುಭವಗಳಿಗೆ ಸಂಬಂಧಪಟ್ಟಂತೆ ಸ್ವಾರಸ್ಯವಾದ ಸಂಶೋಧನೆಗಳನ್ನು ನಡೆಸಿ ಮೊದ ಮೊದಲು ಇಂದ್ರಿಯಾನುಭವಗಳಿಗೆ ವಿಮುಖವಾದ ಮಗು ಬರುಬರುತ್ತ ವಿವೇಕವನ್ನು ಬೆಳೆಸಿಕೊಂಡು ಬರುವ ಬಗೆಯನ್ನು ಈ ಪ್ರಯೋಗಗಳ ಆಧಾರದ ಮೇಲೆ ನಿರೂಪಿಸಿದ್ದಾನೆ. ವಿವೇಕದ ಆವಿಷ್ಕರಣ ಅರಿವಿನ ಪ್ರಭಾವದಿಂದ ಎಂಬುದು ಅವನ ವಾದ. ಪ್ರತ್ಯಕ್ಷಾನುಭವದಲ್ಲೂ ಆರಂಭದಿಶೆಯಲ್ಲಿ ಐಂದ್ರಿಯ ಉತ್ಕ್ಷೇಪಗಳ ಪಾತ್ರವೇ ಹೆಚ್ಚಾಗಿದ್ದು ಅಭ್ಯಾಸಬಲದಿಂದ, ವಿವೇಚನಾಶಕ್ತಿ ಬರುಬರುತ್ತಾ ಮೂಡುವುದೆಂದು ಪೆಯರ್ ಲಾಯ್ಡ್ ಮೋರ್ಗನ್, ಮೆಗ್‍ಡೂಗಲ್, ಮುಂತಾದ ಪ್ರಯೋಗಶೀಲ ಮನಶ್ಶಾಸ್ತ್ರ ಜ್ಞರು ಸ್ಪಷ್ಟಪಡಿಸಿದ್ದಾರೆ. ಇಂದ್ರಿಯಾನುಭವಗಳಲ್ಲಿ ಮೂಲಭೂತವಾದ ವರಣಪ್ರವೃತ್ತಿ (ಸೆಲೆಕ್ಟಿವಿಟಿ) ಇದ್ದೇ ಇರುವುದೆಂದು ಹಲವಾರು ಸಂಶೋಧನೆಗಳು ತೋರಿಸಿವೆ. ಇದರ ಆಧಾರದ ಮೇಲೆ ಸಂಕಲ್ಪವೂ ಅವದಾನವೂ ಕಾಣಿಸಿಕೊಳುವಸ್ತು. ಈ ಕ್ರಿಯೆಗಳಿಗೆ ಅರಿವಿನ ಒತ್ತಡ ಎನ್ನುತ್ತಾರೆ. ಸಮಾವಸ್ಥಾನದ (ಹೋಮೋಸ್ಟ್ಯಾಟಿಸ್) ಪ್ರತಿಪಾದಕರು ಅರಿವನ್ನು ಈ ದೃಷ್ಟಿಯಿಂದಲೇ ವಿಮರ್ಶೆ ಮಾಡಿದ್ದಾರೆ. ಅರಿವು ಅವದಾನದೂಂದಿಗೆ ಸೇರಿದಾಗ ಜ್ಞಾನಕ್ಕೆ ನೆರವಾಗುತ್ತದೆ. (ಎಸ್.ಕೆ.ಆರ್.) ಅರಿವು : ಅರಿವುಗಳು ನಮ್ಮೆ ಮೈಯ ಹೊರಗಣ ಪ್ರಪಂಚದ ತಿಳುವಳಿಕೆಯನ್ನೇ ಅಲ್ಲದೆ, ಮೈ ಒಳಗೂ ಆಗುತ್ತಿರುವುದನ್ನೂ ತಿಳಿಸಿಕೊಡುವವು. ನಮ್ಮೆ ಮೈ ಸರಿಯಾಗಿದೆಯೋ ಇಲ್ಲವೋ ಗೊತ್ತಾಗುವುದೂ ಇವುಗಳಿಂದಲೇ. ಅಚ್ಚ ಅರಿವು ಕೇವಲ ಮನಸ್ಸಿನ ಕಲ್ಪನೆ, ಎಳೆಗೂಸಿನ ಅನುಭವವದು. ಆದರೆ ಬರಬರುತ್ತ ಅನುಭವಗಳೊಂದಿಗೆ ಸೇರಿಕೊಂಡು ಅರಿವುಗಳಿಗೆ ಬೇರೆ ಬೇರೆ ಅರ್ಥಗಳು ಬರುತ್ತವೆ. ಅಂಥ ಅನುಭವಗಳನ್ನು ಕಣ್ಣರಿಕೆಗಳು (ಪರ್ಸೆಪ್ಶನ್ಸ್) ಎನ್ನಬಹುದು. ಕಣ್ಣಿಗೆ ಕಂಡಿದ್ದರಿಂದ ನಾವು ಅರಿವನ್ನು ಜೋಡಿಸುವುದು ಸಾಮಾನ್ಯ. ಆದರೆ ನಮಗೆ ತೋರಿಬರುವ ಅರಿವುಗಳು ಕೆಲವು ಸಮಯಗಳಲ್ಲಿ ನಮ್ಮನ್ನು ತಪ್ಪು ದಾರಿಗೆ ಎಳೆಯಬಹುದು. ಎಲ್ಲ ಪ್ರಾಣಿಗಳೂ ಅರಿವಿಗೆ ಈಡಾಗುವಂತಿದ್ದರೂ ಅವುಗಳ ಬೇಡಿಕೆಗಳಿಗೆ ತಕ್ಕಂತೆ ಅರಿವಿನ ಆಳವು. ಹೆಚ್ಚು ಕಡಿಮೆ ಆಗುವುದು. ನೋಟದ, ಆಲಿಸುವ ಅರಿವುಗಳು ಕೆಲವು ಪ್ರಾಣಿಗಳಲ್ಲಿ ಇರುವಷ್ಟು ಮಾನವನಲ್ಲೂ ಇರವು. ಕ್ರಿಮಿಕೀಟಗಳಲ್ಲಿ ಮುಟ್ಟುವ ಅರಿವು ಎಲ್ಲಕ್ಕೂ ಮುಖ್ಯ. ಒಟ್ಟಿನಲ್ಲಿ, ಬುದ್ಧಿವಂತಿಕೆಯ ಹೆಚ್ಚಳಿಕೆಗೆ ನೋಡುವುದೂ ಕೇಳುವುದೂ ಬಲಗೊಂಡು, ಉಳಿದವು ಅಷ್ಟಾಗಿ ಮುಖ್ಯವಾಗಿರವು. ಹೀಗೆ, ಮೂಡುವುದರಲ್ಲಿ ನಾಗರಿಕ ಮಾನವ ತೀರ ಹಿಂದುಳಿದಿದ್ದಾನೆ. ಅರಿವಿನ ಲಕ್ಷಣಗಳು: ಗುಣ, ತೀವ್ರತೆ, ಅವಧಿ, ಹರವು-ಇವು ಅರಿವಿನ ಮುಖ್ಯ ಲಕಣಗಳು. ಬಗೆಬಗೆಯ ಅರಿವುಗಳನ್ನೆಲ್ಲ್ಲ ಮೈಯಲ್ಲಿರುವ ವಿಶೇಷೀಕೃತ ಅಂಗಾಂಶಗಳಾದ (ಎಂಡಾರ್ಗನ್ಸ್) ಪಡೆಕಗಳು (ರಿಸೆಪ್ಟರ್ಸ್) ಗುರುತಿಸುತ್ತವೆ. ಬೇರೆ ಬೇರೆ ಅರಿವುಗಳಿಗೆ ಬೇರೆ ಬೇರೆ ಪಡೆಕಗಳಿವೆ. ಚೋದನೆಯಾದಾಗ ಪಡೆಕಗಳು ಅರಿವಿನ ನರಗಳ ಮೂಲಕ ನರದ ಆವೇಗಗಳನ್ನು (ಇಂಪಲ್ಸಸ್)ಕಳುಹಿಸುತ್ತವೆ. ಮಿದುಳಲಿರುವ ಅರಿವಿನ ವಿಭಾಗಕ್ಕೆ ಆವೇಗಗಳು ತಲುಪಿದಾಗ ಮಾತ್ರ ಆ ಒಂದು ಅರಿವಿನ ಅನುಭವ ಆಗುತ್ತದೆ. ಬೇರೆ ಬೇರೆ ಬಗೆಗಳ ಚೋದನೆಗಳನ್ನು ಪಡೆವ ಬಗೆಬಗೆಯ ಪಡೆಕಗಳು ಎಲ್ಲ ಬಗೆಯ ಚೋದನೆಗಳಿಗೂ ಈಡಾಗುತ್ತವೆ. ಹೀಗಿದ್ದರೂ ಒಂದೊಂದು ಪಡೆಕ ವಿಶೇಷವಾಗಿ ಯಾವುದಾದರೂ ಒಂದು ಬಗೆಯ ಚೋದನೆಯನ್ನು ಪಡೆಯುವುದು. ಆಯಾ ಇಂದ್ರಿಯ ಮತ್ತದರ ನರಗಳಂತೆ ಅರಿವಿನ ಗುಣ ಇರುತ್ತದೆ. ಕಣ್ಣೊಳಗಿರುವ ನೋಟದ ಪಡೆಕಗಳಾದ ಸರಳುಗಳು, ಸಂಕಗಳು (ರಾಡ್ಸ್, ಕೋನ್ಸ್)ಇದರ ಉದಾಹರಣೆ. ಬೆಳಕಿನ ಕಿರಣಗಳು ಇವುಗಳ ಮೇಲೆ ಬಿದ್ದಾಗ ಚೋದಿಸುತ್ತವೆ. ಕಣ್ಣು ಮುಚ್ಚಿ, ಕಣ್ಣುಗುಡ್ಡೆಯನ್ನು ಒತ್ತಿದಾಗ ನೋಟದ ಅರಿವು ಗೊತ್ತಾಗು ವಂತೆ ಈ ಪಡೆಕಗಳನ್ನು ಯಾಂತ್ರಿಕವಾಗೂ ಚೋದಿಸಬಹುದು,. ಒತ್ತಡದ ಶಕ್ತಿಗಿಂತಲೂ ಬೆಳಕಿನ ಕಿರಣಗಳ ಶಕ್ತಿ ಅತೀ ಕಿರಿದು. ಇವನ್ನು ಸಾಕಷ್ಟು ಚೋದನೆ ಎನ್ನಬಹುದು. ಒಂದು ಗೊತ್ತಾದ ಪಡೇಕಯನ್ನು ಯಂತ್ರ ಕಾವು, ವಿದ್ಯುತ್ತ್ ಇತ್ಯಾದಿ ಯಾವ ವಿಧಾನದಿಂದಲೇ ಚೋದಿಸಲಿ, ಅದರ ಪರಿಣಾಮ ಯಾವಾಗಲೂ ಒಂದೇ. ನೋಟದ ಪಡೆಕಗಳಾದ ಸರಳು, ಸಂಕಗಳು ಚೋದನೆ ಆದಾಗಲೆಲ್ಲ ನೋಟದ ಅರಿವನ್ನೇ ಕೊಡುತ್ತವೆ. ಕಣ್ಣಿನ ನರಯನ್ನು ಚೋದಿಸಿದರೆ ಬೆಳಕಿನ ಅರಿವು ಮೂಡುವುದೇ ಹೊರತು.ಬೇರೇನೂ ಆಗದು. ಕಿವಿಯ ನರದಿಂದ ಆಲಿಸಬಹುದು. ಇವನ್ನು ವಿಶಿಷ್ಟ ನರದ ಶಕ್ತಿಗಳ ಸಿದ್ಧಾಂತ ಯನ್ನುವುದುಂಟು. ಒಂದೊಂದು ಬಗೆಯ ಅರಿವಿನಲ್ಲೂ ಹಲವಾರು ಕಿರಿಯ ಬಗೆಗಳನ್ನು ಗುರುತಿಸಬಹುದು. ಎಚ್ಚರದಿಂದ ನಯವಾಗಿ ಚರ್ಮಯನ್ನು ಚೋದಿಸಿದರೆ, ಚೋದಿಸಿದ ಗೊತ್ತಾದ ತಾವಿನಂತೆ ಒತ್ತಡ, ನೋವು, ಕಾವು, ತಂಪುಗಳ ಅರಿವುಗಳು ಏಳುತ್ತವೆ. ಭೇದಗಾಣಿಕೆಯ ನಿಯಮದಂತೆ (ಲಾ ಆಫ್ ಕಾಂಟ್ರಾಸ್ಟ್) ನಮ್ಮ ಅರಿವುಗಳಲ್ಲಿ ಹೆಚ್ಚು ಕಡಿಮೆ ಆಗುವುದು. ಒಂದು ವಸ್ತುವಿನ ಹೊಳಪು, ಬಣ್ಣಗಳು ಅದೇ ಹೊತ್ತಿನಲ್ಲೋ ಆಮೇಲೊ ಕಣ್ಣಿಗೆ ಬೀಳುವ ಇನ್ನೊಂದರ ಹೊಳಪು, ಬಣ್ಣಗಳ ಅರಿವಿಗೆ ಅಡ್ಡಬರುತ್ತದೆ. ಕಣ್ಣು ಕೋರೈಸುವ ಏನನ್ನಾದರೂ ನೋಡಿ, ಬೇರೆಡೆ ಕಣ್ಣು ತಿರುಗಿಸಿದರೆ ಅದರ ಪೂರಕ (ಕಾಂಪ್ಲಿಮಂಟರಿ) ಬಣ್ಣವೂ ಹೊಳಪಿನ ಎದುರು ಮಟ್ಟವೂ ಎರಡನೆಯ ವಸ್ತುವಿನ ಬಣ್ಣ, ಹೊಳಪುಗಳೂಂದಿಗೆ ಬೆರೆಯುತ್ತವೆ. ಸುತ್ತಣದು ಕಪ್ಪಾಗಿದ್ದರೆ ನಡುವೆ ಇರುವ ಹೊಳೆವ ವಸ್ತು ಇನ್ನಷ್ಟು ಹೊಳೆವಂತೆ ತೋರುವುದು; ಪರಿಸರ ಹೊಳೆಯುತ್ತಿದ್ದರೆ ಕಪ್ಪು ವಸ್ತು ಇನ್ನೂ ಕಪ್ಪಾಗಿ ಕಾಣುವುದು. ಅಕ್ಕಪಕ್ಕಗಳಲ್ಲಿ ಇರಿಸಿದ ಬಣ್ಣಗಳೂ ಬೆರೆತಂತೆ ತೋರುವವು. ಹೀಗೆ ತೋರಿಕೆಯಲ್ಲಿ ಅರಿವು ಬೇರೆಯಾಗಿ ಕಾಣಬಹುದು. ಅರಿವಿನ ತೀವ್ರತೆಯನ್ನು ಗಮನಿಸಬಹುದು. ಒಂದು ನಾದ ಜೋರಾಗೋ ಮೆತ್ತಗೋ ಇರಬಹುದು. ತೀವ್ರತೆ ಹೆಚ್ಚಿದಷ್ಟೂ ಅರಿವಿನ ನರದಲ್ಲಿ ಸಾಗುವ ಆವೇಗಗಳೂ ಹೆಚ್ಚಿರುವುದ ರಿಂದ ಇದು ಗೊತ್ತಾಗುತ್ತದೆ. ಬಹಳ ಆವೇಗಗಳು ಮಿದುಳಿಗೆ ಹೋದಾಗ, ತೀವ್ರತೆ ತಿಳಿವುದು. ತೀವ್ರತೆ ಹೆಚ್ಚಿದಂತೆಲ್ಲ ಇನ್ನಷ್ಟು ಪಡೆಕಗಳ ಚೋದನೆ ಆಗುವುದು ಇನ್ನೊಂದು ರೀತಿ. ಅರಿವಿನ ತೀವ್ರತೆ ಬಲು ಕಡಿಮೆಯಾಗಿದ್ದರೆ ಗಮನ ಸೆಳೆಯದಿರಬಹುದು. ಬಲು ಬಲವಾದರೆ ಅರಿವೇ ಬದಲಾಗಿ ನೋವಾಗಬಹುದು. ಕಣ್ಣು ಕುಕ್ಕುವ ಬೆಳಕಿನಿಂದ ಕಣ್ಣಿಗೆ ನೋವು ಆಗುವಂತೆ, ಗುಯ್ಗುಡಿಕೆ, ಕಚಗುಳಿಗಳಂತೆ ಅರಿವುಗಳು ತೀರ ದುರ್ಬಲವಾಗಿದ್ದರೆ ಬೇಡವೆನಿಸುತ್ತವೆ. ಅರಿವಿಗೆ ಬರಬೇಕಾದರೆ. ಒಂದೊಂದು ಚೋದನೆಯೂ (ಸ್ಟಿಮ್ಯುಲಸ್) ಗೊತ್ತಾದ ಅವಧಿ ಉಳಿಯಬೇಕು. ಒಂದೇ ಚೋದನೆಯನ್ನು ಎಡೆಬಿಡದೆ ಮಾಡುತ್ತಿದ್ದರೆ, ಬರಬರುತ್ತ ಅರಿವಿನ ತೀವ್ರತೆ ತಗ್ಗುತ್ತ ಹೋಗಿ ಕೊನೆಗೆ ನಿಂತೇ ಬಿಡಬಹುದು. ಒಂದೇ ಬಣ್ಣವನ್ನು ನೋಡುತ್ತಲೇ ಇದ್ದರೆ, ಆ ಬಣ್ಣ ಕುಂದುವಂತೆ ತೋರುತ್ತದೆ. ಬಟ್ಟೆಗಳನ್ನು ತೊಟ್ಟುಕೊಳ್ಳುವಾಗ ನಮಗೆ ತಾಕುವ ಅರಿವು ಇದ್ದರೂ ಆಮೇಲೆ ಅದು ನಮ್ಮ ಗಮನಕ್ಕೆ ಬರದಾಗುತ್ತದೆ. ಇದಕ್ಕೆ ಹೊಂದಾಣಿಕೆ (ಅಡಾಪ್ಟೇಷನ್) ಎಂದಿದೆ. ಪಡೆಕಗಳನ್ನು ಒಂದೇ ಸಮನಾಗಿ ಚೋದಿಸುತ್ತಿದ್ದ ರೆ ಅರಿವಿನ ನರದಲ್ಲಿ ಆವೇಗಗಳು ಹುಟ್ಟದಾಗಿ ಅಣಗುತ್ತವೆ. ಆದರೆ ಸದ್ದಿನ ಕೆಲವು ಅರಿವುಗಳು ಏರುವಂತೆ ತೋರುತ್ತ ನೋವಿಡುತ್ತವೆ. ಇವೆಲ್ಲ ಲಕ್ಷಣಗಳಲ್ಲೂ ಬಲು ಮುಖ್ಯವಾದುದು ಗುಣ. ಇವುಗಳ ಹೆಚ್ಚಿನ ನಿಜಗೆಲಸ ವೆಂದರೆ, ಅರಿವಿನ ಮರುವರ್ತನೆಯಾಗುವ ಚಲನೆ. ಈ ಚಲನೆ ತಂತಾನಾಗಿ ಹಿಮ್ಮುರಿವ (ರಿಫ್ಲೆಕ್ಸ್) ಇಲ್ಲವೇ ಬೇಕಾಗಿ ಮಾಡಿದ್ದಾಗಿರಬಹುದು. ಏನಾದರೂ ಸದ್ದಾದರೆ ಸರಕ್ಕನೆ ಹಾರಿ ಮುಂದಿನ ಕೆಲಸ ಕೈಗೊಳ್ಳಬಹುದು. ಇಂಥ ಬೇರೆ ಬೇರೆ ಚೋದನೆಗಳಿಂದ ಪರಿಸರದೊಂದಿಗೆ ನಾವು ಹೊಂದಿಕೊಂಡು ಮೇಲೆ ಬೀಳುವ, ಕಾಪಾಡಿಕೊಳ್ಳುವ ಇಲ್ಲವೆ. ಓಡಿಹೋಗುವ ವರ್ತನೆ ತೋರಲು ಅರಿವುಗಳು ನಮಗೆ ನೆರವಾಗುತ್ತ್ತವೆ. ಇಂದ್ರಿಯಗಳ ಚೋದನೆಯಾದರೆ ಒಂದು ವಸ್ತುವಿನ ಗುಣಕ್ಕಿಂತಲೂ ಹೆಚ್ಚಾಗಿ ವಸ್ತುವೇ ನಮ್ಮ ಗಮನಕ್ಕೆ ಬರುವುದು. ಇದರಿಂದಲೇ ಬಹುಪಾಲು ಅರಿವುಗಳು ತಿಳಿಸಿ ಕೊಡುತ್ತವೆ. ನಮ್ಮ ಅನುಭವದಂತೆ ಅರಿವುಗಳಿಗೆ ನಾವು ಅರ್ಥಕೊಟ್ಟು ಬರುಬರುತ್ತ ನಮ್ಮೆ ಚಿಂತನೆ, ಬುದ್ಧಿಗೆ ತಳಹದಿ ಹಾಕುವುದರಿಂದ, ಅರಿವುಗಳ ಮೂಲಕವೇ ಹೊರಗಣ ಪ್ರಪಂಚ ತಿಳುವಳಿಕೆ ಬೆಳೆವುದು. ಪಡೆಕಗಳನ್ನು ಒಂದು ಚೋದನೆ ಚೋದಿಸಿದಾಗ ಎದ್ದ ಆವೇಗಗಳು ಆ ಪಡೆಕಗಳಿಗೆ ಸಂಬಂಧಿಸಿದ ಅರಿವಿನ ನರಗಳ ಮೂಲಕ ಸಾಗಿ ಕೊನೆಗೆ ಮಿದುಳಲ್ಲಿನ ಅರಿವಿನ ಪ್ರದೇಶವನ್ನು ಸೇರುತ್ತದೆ. ಈ ನರಗಳ ದಾರಿಯಲ್ಲಿ ಎಲ್ಲಿ ಚೋದಿಸಿ ದರೂ ಸರಿಯೆ ಅದರ ಅರಿವನ್ನು ಯಾವಾಗಲೂ ಆ ನರಗಳ ಪಡೆಕಗಳ ತಾವಿಗೇ ಸೂಚಿಸುತ್ತದೆ. ಇವನ್ನು ಚಾಚಿಕೆಯ ನಿಯಮ (ಲಾ ಆಫ್ ಪ್ರೊಜೆಕ್ಷನ್) ಎನ್ನುವುದುಂಟು. ಉದಾಹರಣೆಯಾಗಿ, ನೋವಿನ ಅರಿಯನ್ನು ಹೊತ್ತು ಕೈಗಳಿಂದ ಮಿದುಳಿಗೆ ಹೋಗುತ್ತಿರುವ ಅರಿವಿನ ನರಗಳನ್ನು ಬೆನ್ನುಹುರಿಯಲ್ಲಿ ಚೋದಿಸಿದರೂ ಕೈಯಲ್ಲಿ ನೋವಿಡುವ ಅರಿವಾಗುತ್ತದೆ. ಅರಿವಿನ ಮೂಲಗಳು : ಅರಿವುಗಳನ್ನು ಸಾಮಾನ್ಯವಾಗಿ ವಿಶೇಷ ಇಂದ್ರಿಯಗಳವು (ಸ್ಪೆಷಲ್ ಸೆನ್ಸಸ್), ಒಳಾಂಗಗಳವು (ವಿಸರಲ್) ಎಂದು ವಿಂಗಡಿಸಬಹುದು. ವಿಶೇಷದ ವರ್ಗದಲ್ಲಿ ಹೊಳಪು, ಬಣ್ಣಗಳ ನೋಟದವೂ; ದನಿ ನಾದಗಳ ಆಲಿಕೆಯವೂ; ವಾಸನೆ, ರುಚಿಗಳವೂ; ಮುಟ್ಟುವೆ, ಒತ್ತಡ, ಕಾವು, ತಂಪು ನೋವುಗಳ ಚರ್ಮದವೂ ಸೇರಿವೆ. ಒಳಾಂಗಗಳಲ್ಲಿ ಸ್ನಾಯು, ಕಂಡರ, ಕೀಲುಗಳಿಂದೇಳುವ (ಚರಿಕರಿವಿನವು. ಕೈನೀಸ್ತೆಟಿಕ್) ಅರಿವುಗಳೊಂದಿಗೆ ಬೇರೆ ಬೇರೆ ಒಳಗಣ ಅಂಗಗಳು ಎಚ್ಚರದ ತಿಳಿವಿಗೆ ಕಳುಹುವ ಸುದ್ದಿಗಳೂ ಇವೆ. ದಣಿವು. ಉತ್ಸಾಹ, ಬಾಯಾರಿಕೆ, ಹಸಿವು, ಲಿಂಗಚಿಂತನೆ, ಯಾರಿಗೂ ಬೇಕೆನಿಸದ ಓಕರಿಕೆ, ಶೂಲೆಗಳು ಇವೆಲ್ಲ ಒಳಾಂಗದ ಅರಿವುಗಳು. ಒಂದು ಅಂಗದಿಂದ ಏಳುವ ನೋವು ಹಲವೇಳೆ ಮೈಯಲ್ಲಿ ಇನ್ನೆಲ್ಲೊ ತೋರುವುದು. ಗುಂಡಿಗೆಯಲ್ಲಿನ ನೋವು ಎಡತೋಳಿನಲ್ಲಿ ಕಾಣಬಹುದು; ವಪೆಯದು ಬಲ ಹೆಗಲಲ್ಲಿ ತೋರುವುದು. ಚರ್ಮದಲ್ಲಿ ಒಂದೊಂದು ಬಗೆಯ ಚೋದನೆಯೂ ಚರ್ಮದ ಹಲವಾರು ಅರಿವುಗಳಿಗೆ ಕಾರಣವಾಗುವುದು. ಯಾವ ನರದ ಅಂಗಾಂತ ಚೋದನೆಯಾಗಿದೆ ಎಂಬಂತೆ ಕೆಲವೆಡೆ ತಂಪು, ಕಾವು, ನೋವು ಇಲ್ಲವೆ ಒತ್ತಡ ತಿಳಿಯುತ್ತದೆ. ಆದರೆ ನಿಜವಾಗಿ ಏನನ್ನಾದರೂ ಮುಟ್ಟಿದರೆ, ಹೆಚ್ಚು ಭಾಗ ತಾಕುವುದರಿಂದ ಹಲತೆರನ ಅರಿವುಗಳೆದ್ದು ಕಾವು, ಗಡುಸು, ಮೆತುವು, ಒರಟುತನ, ನುಣುಪು, ತೇವ ಇತ್ಯಾದಿ ಒಂದೇ ಬಾರಿಗೆ ಗೊತ್ತಾಗುತ್ತವೆ. ಈ ಶತಮಾನದ ಮೊದಲಲ್ಲಿ ಚರ್ಮದ ಅರಿವುಗಳೆಲ್ಲ ಮುಟ್ಟುವ ಅರಿವಿನ ಬಗೆಗಳೆಂಬ ತಪ್ಪು ಕಲ್ಪನೆಯಿತ್ತು. ಕೆರೆತ, ಕಚಗುಳಿ ಇತ್ಯಾದಿ ಅರಿವುಗಳು ಚರ್ಮದಲ್ಲಿನ ನರಗಳ ಅಂಗಾಂತಗಳಲ್ಲಿ ಆಗುವ ರಕ್ತ ಹರಿವಿನ ವ್ಯತ್ಯಾಸಗಳಿಂದ ಆಗುತ್ತವೆ. ಚರ್ಮದ ಎಲ್ಲೆಡೆಗಳಲ್ಲೂ ಅರಿವುಗಳ ತಿಳುವಳಿಕೆ ಒಂದೇ ಸಮನಾಗಿರದು. ಹಿಂಗೈಗಿಂತಲೂ ಬೆರಳ ತುದಿಗಳು ಚುರುಕಾಗಿರುತ್ತವೆ. ಎದೆಗಿಂತಲೂ ಬೆನ್ನು ಚರ್ಮ ಮಂದ. ನಾಲಗೆಯಲ್ಲಂತೂ ವ್ಯತ್ಯಾಸಗಳು ಬಲು ಚುರುಕಾಗಿ ಗೊತ್ತಾಗುತ್ತವೆ. ಜೀವಿಯನ್ನು ಕಾಪಿಡುವುದಕ್ಕಾಗಿ ಬಹುವಾಗಿ ಬೇಕಿರುವೆಡೆ ಅರಿವು ಬಲು ಚುರುಕು. ಮುಟ್ಟುವ ಅರಿವಿನಲ್ಲಿ ತಾಕಿದ ಜಾಗಳನ್ನು ಖಚಿತವಾಗಿ ಗುರುತಿಸಬಹುದು (ನೋಡಿ - ಚರ್ಮದ ಅರಿವಿನ ನಿಜಗೆಲಸಗಳು). ರುಚಿಯ ಮೂಲ ಅರಿವುಗಳು ನಾಲ್ಕು : ಹುಳಿ, ಉಪ್ಪು, ಕಹಿ ಮತ್ತು ಸಿಹಿ. ಉಳಿದ ರುಚಿಗಳು ಸಾಮಾನ್ಯವಾಗಿ ಇವುಗಳ ಬೆರಕೆ; ಕೆಲವೇಳೆ ಇವು ವಾಸನೆಯೊಂದಿಗೂ ಒಂದಿಷ್ಟು ಕೂಡಿರಬಹುದು. ಹುಟ್ಟಿದಾಗ ವಾಸನೆಯ ಅರಿವು ಬಲವಾಗಿರುತ್ತದೆ. ಮೂಗನ್ನು ಮುಚ್ಚಿ ಕೊಂಡರೆ, ನೆಗಡಿಯಿಂದ ಮೂಗು ಕಟ್ಟಿದರೆ ವಾಸನೆ ಕೆಟ್ಟು ರುಚಿಯೇ ಬೇರೆಯಾಗುತ್ತದೆ. ಆರೋಗ್ಯದಲ್ಲಾಗಲೀ ಬೇನೆಯಲ್ಲಾಗಲಿ ಮೂಸುವ ಅರಿವು ಮಾನವನಲ್ಲಿ ಅಷ್ಟು ಮುಖ್ಯವಲ್ಲ. ವಾಸನೆಗಳನ್ನು ಗುರುತಿಸಲು ಯಾವುದರಿಂದ ಬಂದಿತೆಂದು ಹೇಳುತ್ತೇವೆ. ಒಳೆಯದು ಕೆಟ್ಟದ್ದೆಂದು ಮಾತ್ರ ವಿವರಿಸುವೆವು. ಸುಮಾರು ಏಳನೆಯ ವರುಷದ ತನಕ ವಾಸನೆಯ ಅರಿವುಗಳ ವ್ಯತ್ಯಾಸಗಳು ಅಷ್ಟಾಗಿ ಗೊತ್ತಾಗವು (ನೋಡಿ- ವಾಸನೆ ಮತ್ತು ರುಚಿ). ಹುಟ್ಟಿದ ಕೂಡಲೇ ಆಲಿಸುವ ಅರಿವುಗಳು ತೋರುತ್ತವೆ. ಎತ್ತರದ ಮಟ್ಟದ ಸದ್ದುಗಳು ಮೊದಲು ಗೊತ್ತಾಗುತ್ತ್ತವೆ. ಅಂಥ ಅರಿವುಗಳು ಕ್ರಮವಾದ ಅಲೆಗಳಲ್ಲಿ ಕಿವಿಯ ಮೇಲೆ ಬಿದ್ದರೆ ಗೊತ್ತಾದ ನಾದವಾಗಿರುವುದು. ಕ್ರಮಗೆಟ್ಟಿದ್ದರೆ ಸದ್ದು ಎನಿಸುವುದು. ಆಲಿಕೆಯಲ್ಲಿ ಬೇರೆ ಬೇರೆ ಸ್ವರಗಳನ್ನು ಗುರುತಿಸುವುದಲ್ಲದೆ ಯಾವ ದಿಕ್ಕಿಂದ ಬಂದಿದೆ ಎಂದೂ ತಿಳಿಯಬಹುದು(ನೋಡಿ- ಕೇಳುವಿಕೆ). ಒಳಗಿವಿಯಲ್ಲಿನ ಅರೆಸುತ್ತಿನ ಸಾಗಾಲುವೆಗಳೂ (ಸೆಮಿಸರ್ಕ್ರ್ಯುಲರ್ ಕೆನಾಲ್ಸ್) ಒಂದಿಷ್ಟು ಎಡೆಬಲದ (ಸ್ಟ್ಯಾಟಿಕ್) ಅರಿವುಗಳಿಗೆ ಮೂಲವಾಗು ತ್ತವೆ. ಇದೆ ಆಳದರಿವು (ಪ್ರೋಪ್ರಿಯೋಸೆಪ್ಷನ್), ಮೈ ಇರವು, ಸಮತೋಲಗಳ ಈ ತಿಳಿವನ್ನು ಕೊಡಲು ಕಣ್ಣೂ ಕಿರ್ಮಿದುಳೂ (ಸೆರಿಬೆಲಂ) ನೆರವಾಗುತ್ತವೆ. ಗಾಡಿಯಲ್ಲೋ ಎತ್ತುಗೆಯಲ್ಲೋ (ಲಿಫ್ಟ್) ಹೋಗುವಾಗ ಆಗುವಂತೆ ಮೈ ಅಲುಗಾಡುವಾಗ ಇಂಥ ಅರಿವು ತಿಳಿಯುತ್ತ್ತದೆ. ಉಯ್ಯಾಲೆ, ಮೋಟಾರು, ವಿಮಾನ, ಹಡಗುಗಳಲ್ಲಿ ಸುತ್ತಿದಂತೆ, ಆಗಾಗ ತಲೆ ತಿರುಗಿದಂತಾಗಿ ಮೈ ಸಮತೋಲ ತಪ್ಪುವುದೂ ಇದರಿಂದಲೇ; ಓಕರಿಕೆ, ನರಳಿಕೆ, ವಾಂತಿ ಆಗುತ್ತ್ತದೆ. ನೋಟದಲ್ಲಿ ಬೆಳಕು, ಕತ್ತಲೆಗಳೇ ಅಲ್ಲದೆ ಬಗೆಬಗೆಯ ಬಣ್ಣಗಳನ್ನೂ ಗುರುತಿಸ ಬಹುದು. ಬಹುಮಟ್ಟಿಗೆ ಇವೆರಡೂ ಬೆರೆತಿರುತ್ತವೆ. ಕೆಂಪು, ಹಳದಿ, ಹಸುರು, ನೀಲಿ ಮೂಲಬಣ್ಣಗಳು. ಉಳಿದವೆಲ್ಲ ಇವುಗಳ ಬೆರಕೆಗಳು, ಕೆಲವರಿಗೆ ಕೆಲವು ಬಣ್ಣಗಳು ಅರಿವಿಗೆ ಬಾರದೆ ಬಣ್ಣಗುರುಡಾಗಿರುವರು (ನೋಡಿ- ನೋಟ). ಪೂರ್ತಿ ಬಣ್ಣಗುರುಡಾಗಿ ದ್ದರೆ, ಎಲ್ಲ ಬಣ್ಣಗಳೂ ಬಿಳಿ, ಬೂದು ಕಪ್ಪುಗಳಾಗಿತೋರುತ್ತವೆ. ನೋಟದ ಅರಿವಿನಲ್ಲಿ ತರುವಾಯದ ಬಿಂಬಗಳು (ಆಫರ್ ಇಮೇಜಸ್) ತೋರುವುದು ವಿಶೇಷ. ಕೋರೈಸುವ ಬೆಳಕನ್ನು ನೋಡಿ ಕಣ್ಣು ಮುಚ್ಚಿಕೊಂಡರೂ ತುಸು ಹೊತ್ತು ಬೆಳಕಿನ ಅರಿವು ಉಳಿವುದು. ಹಾಗೇ ಒಂದು ಬಣ್ಣವನ್ನೇ ನೋಡುತ್ತಿದ್ದರೆ ತರುವಾಯದ ಬಿಂಬ ಪೂರಕ-ಬಣ್ಣದಲ್ಲಿ ಇರುತ್ತದೆ; ನೀಲಿ ಬಣ್ಣ ಕಂಡಿದ್ದರೆ ಹಳದಿ ಉಳಿವುದು. ಕೈಕಾಲುಗಳೂ ಮೈಯೂ ಯಾವ ಭಂಗಿ ಇರವುಗಳಲ್ಲಿವೆ ಎಂದು ತಿಳಿಸಿಕೊಡಲು, ಚರ್ಮದಾಳದಲ್ಲಿ ಸ್ನಾಯು, ಕಂದರಗಳಿಂದ ಎಲುಬುಗಳ ರಚಗಟ್ಟುಗಳಿಂದ ಏಳುವ ಸ್ನಾಯುಸಂವೇದಿ (ಕೈನೀಸಟಿಕ್) ಅರಿವುಗಳಿವೆ. ಕಣ್ಣಿಂದ ನೋಡದಿದ್ದರೂ ಕೈಯಲ್ಲಿಟ್ಟ ವಸ್ತುಗಳ ವಿಚಾರವಾಗಿ ತಿಳುವಳಿಕೆಗೂ (ಘನದರಿವು-ಸ್ಟೀರಿಯೊಗ್ನೋಸಿಸ್) ಇವೇ ಕಾರಣ. ಒಂದಕ್ಕೂ ಹೆಚ್ಚು ಬಗೆಗಳ ಅರಿವುಗಳು ಒಂದುಗೂಡಿ ಘನದರಿವು ಆಗುತ್ತದೆ. ಇದೊಂದು ಕೃತಕ (ಸಿಂತೆಟಿಕ್) ಅರಿವು. ಕಚಗುಳಿ, ತುರಿಕೆ, ಸೀನು, ಆಕಳಿಕೆ ಇಂಥವೇ. ಮೈಯೊಳಗಣ ಸ್ಥಿತಿಯನ್ನು ತಿಳಿಸಿಕೊಡುವ ಒಳಾಂಗಗಳ ಅರಿವುಗಳು ಭಾವ, ಉದ್ವೇಗಗಳಿಗೆ ನಿಕಟವಾಗಿ ಸಂಬಂಧಿಸಿರಬಹುದು. ಕೋಪ, ಮುನಿಸು, ಚಿಂತೆ, ಕಳವಳಗಳಲ್ಲಿ ಮೈಗೆ ಕಸಿವಿಸಿ ಆಗುವುದರ ಕಾರಣ ಇವೇ. ಅದುರಿದ ಅರಿವೂ ಒಂದಿದೆ. ಮೂಳೆಯ ಮೇಲೆ ಇರಿಸಿದ ಅದುರುತ್ತಿರುವ ಶ್ರುತಿ ಕವೆಯಿಂದ(ಟ್ಯೂನಿಂಗ್ ಫೋರ್ಕ್) ಇದು ಗೊತ್ತಾಗುವುದು. ಒತ್ತಡ ಬಿಟ್ಟು ಬಿಟ್ಟು ಬೀಳುವುದರಿಂದ ಹೀಗಾಗುತ್ತದೆ. ಕೆಲವರಲ್ಲಿ ಹಲವಾರು ಅರಿವುಗಳು ಸೋಜಿಗವಾಗಿ ಬೆರೆಯುತ್ತವೆ. ಒಂದು ಅರಿವಿನ ಚೋದನೆಯಾದರೆ. ತಿಳಿವಿಗೆ ಬರುವುದು ಇನ್ನೊಂದು. ಇದಕ್ಕೆ ಕೂಡರಿವು (ಸೈನೀಸ್ತೀಸಿಯ) ಎಂದಿದೆ. ಸಂಗೀತ ಕೇಳುತ್ತಿದ್ದರೆ ಕೆಲವರಿಗೆ ಬಣ್ಣಗಳ ಅರಿವಾಗುವುದು.

"https://kn.wikipedia.org/w/index.php?title=ಅರಿವು&oldid=850653" ಇಂದ ಪಡೆಯಲ್ಪಟ್ಟಿದೆ