ಮಂಗೇಶ್ ಕೇಶವ ಪಡ್ನಾಂವ್ಕರ್
ಮಂಗೇಶ್ ಕೇಶವ ಪಡ್ನಾಂವ್ಕರ್ | |
---|---|
मंगेश पाडगावकर | |
Born | ವೆಂಗುರ್ಲಾ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ | ೧೦ ಮಾರ್ಚ್ ೧೯೨೯
Died | 30 December 2015 ಮುಂಬಯಿ, ಮಹಾರಾಷ್ಟ್ರ, ಭಾರತ | (aged 86)
Cause of death | ಕಾರ್ಡಿಯಾಕ್ ಅರೆಸ್ಟ್(ಸ್ಟ್ರೋಕ್) |
Nationality | ಭಾರತೀಯ |
Occupation(s) | ಮರಾಠಿ ಕವಿತೆಗಳು, ಲೇಖಕ |
Awards | ಪದ್ಮ ಭೂಷಣ – ೨೦೧೩, ಮಹಾರಾಷ್ಟ್ರ ಭೂಷಣ – ೨೦೦೮, ಸಾಹಿತ್ಯ ಅಕಾಡೆಮಿ ಪ್ರಶಸ್ತಿ– ೧೯೮೦, ಎಂ.ಪಿ ಸಾಹಿತ್ಯ ಪ್ರಶಸ್ತಿ – ೧೯೫೬, ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ – '೫೩/'೫೫ |
ಮಂಗೇಶ್ ಕೇಶವ ಪಡ್ನಾಂವ್ಕರ್ [೧](ದೇವನಾಗರಿ: मंगेश केशव पाडगांवकर; ೧೦ ಮಾರ್ಚ್ ೧೯೨೯ – ೩೦ ಡಿಸೆಂಬರ್ ೨೦೧೫) ಮಹಾರಾಷ್ಟ್ರ ಮರಾಠಿ ಲೇಖಕರಾಗಿದ್ದರು.[೨]
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ಮಂಗೇಶ್ ಪಡ್ನಾಂವ್ಕರ್ ೧೯೨೯ ಮಾರ್ಚ್ ೧೦ ರಂದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾದಲ್ಲಿ ಜನಿಸಿದ್ದರು. ಕಾಲೇಜಿನ ವಿದ್ಯಾಭ್ಯಾಸದ ಸಮಯದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಂಗೇಶ್, ಮುಂಬಯಿ ವಿಶ್ವವಿದ್ಯಾಲಯದಿಂದ ಮರಾಠಿ ಹಾಗೂ ಸಂಸ್ಕೃತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.
- ಸ್ವಲ್ಪ ಸಮಯ, ಮುಂಬಯಿನಗರದ ಮಾಟುಂಗಾ ಜಿಲ್ಲೆಯ ರುಯಾಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿದರು.
- ಪುಣೆನಗರದ ಸಾಧನ ಎಂಬ ವಾರ ಪತ್ರಿಕೆಯ ಜಂಟಿ ಸಂಪಾದಕರಾಗಿ ೧೯೫೩-೧೯೫೫ ರವರೆಗೆ,
- ಮುಂಬಯಿ ಆಕಾಶವಾಣಿ ನಿಲಯದಲ್ಲಿ ೧೯೬೪-೭೦ ಕಾರ್ಯಕ್ರಮ ನಿರ್ಮಾಪಕರಾಗಿ,
- ೧೯೮೯ ರಲ್ಲಿ ಸೇವಾನಿವೃತ್ತರಾಗುವವರೆಗೆ ಭಾರತದಲ್ಲಿ ಅಮೆರಿಕ ದೇಶದ ಮಾಹಿತಿ ಸೇವೆಯಲ್ಲಿ(USIS)ಕಲಸಮಾಡಿದರು.
ಪಡ್ಗಾಂಕರ್ ಪ್ರೇಮಗೀತೆಗಳ ರಚನೆಗೆ ಪ್ರಸಿದ್ಧರು. ೧೯೬೦-೭೦ ರಲ್ಲಿ ವಿಂದಾ ಕರಂಡೀಕರ್, ವಸಂತ್ ಬಾಪಟ್ ರೊಂದಿಗೆ ಸೇರಿ, ಮರಾಠಿ ಭಾಷೆಯಲ್ಲಿ ಕವನಗಳನ್ನು ಪ್ರಸಿದ್ಧಿಪಡಿಸಲು ಮರಾಠಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಒಟ್ಟಾರೆ, ಮಂಗೇಶ್ ರವರ ೪೦ ಕೃತಿಗಳು ಪ್ರಕಟವಾಗಿವೆ. ಅದರಲ್ಲಿ ಅಮೆರಿಕದ ಲೈಬ್ರೆರಿ ಆಫ್ ಕಾಂಗ್ರೆಸ್, ೩೧ ಪ್ರಕಟಣೆಗಳನ್ನು ವಹಿಸಿಕೊಂಡಿದೆ.
ಕೃತಿ ರಚನೆ
[ಬದಲಾಯಿಸಿ]ಮಂಗೇಶ್, ಶೋಧ್ ಕವಿತೇಚಾ ಮೊದಲಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಸಾಹಿತ್ಯ ಮತ್ತು ಕೃತಿಗಳು ಹಲವಾರು ಯುವ ಲೇಖಕರಿಗೆ ಪ್ರಭಾವ ಬೀರಿತ್ತು. ೨೦೦೮ ರಲ್ಲಿ 'ದ ನ್ಯೂ ಟೆಸ್ಟಮೆಂಟ್' ಎಂಬ ಬೈಬಲ್ ಅನುವಾದ ಕೃತಿರಚನೆ ಮಾಡಿದ್ದಾರೆ.
- ಧರನೃತ್ಯ (೧೯೫೦)
- ಷರ್ಮಿಷ್ಟ (೧೯೬೦)
- ಕಾವ್ಯ ಸದರ್ಶನ್ (೧೯೬೨)
- ಜಿಪ್ಸಿ (೧೯೯೪)
- ಚೋರಿ,
- ಉತ್ಸವ್, (೧೯೬೨)
- ಸಲಾಂ (೧೯೮೦)
- ತುಝ ಗೀತ ಗಾನ್ಯಾಸಾಠಿ (೧೯೮೯)
- ನವ ದಿವಸ್ (೧೯೯೩)
- ಸುತ್ತಿ ಏಕಾ ಸುತ್ತಿ (೧೯೯೩)
- ತ್ರಿವೇಣಿ (೧೯೯೫)
- ವಿದೂಶಕ್ (೧೯೯೯)
- ಸಲಾಮ್,
- ಗಝಾಲ (೧೯೮೧,
- ಭಟ್ಕೆ ಪಕ್ಷಿ (೧೯೮೪)
- ಬೋಲ್ ಗಾನಿ,(೧೯೯೦)[೩]
”’ಮರಾಠಿಭಾಷೆಗ ತರ್ಜುಮೆ ಕೆಲಸ,’
- ಮೀರಾ, (೧೯೯೫)
- ಉದಾಸಬೋಧ್ (೧೯೯೬)
- ಕಬೀರ (೧೯೯೭)
- ಸೂರ್ದಾಸ್ (೧೯೯೯)
- ತುಳಸಿದಾಸ್
- ಬೈಬಲ್
- ಕವಿತ ಮನಸಾಂಚ್ಯ, ಮನಸಾಸಾಠಿ (೧೯೯೯)
- ಮೋರು (೧೯೯೯)
- ವತ್ರತಿಕ (೧೯೯೯)
- ರಾಧ (೨೦೦೦)
ಮಕ್ಕಳಿಗಾಗಿ ಬರೆದ ಪದ್ಯದ ಪುಸ್ತಕಗಳು
[ಬದಲಾಯಿಸಿ]- ಭೋಲಾನಾಥ್,
- ಬಬಲ್ ಗಮ್,
- ಚಂದೋಮಾಮ
ಶೇಕ್ಸ್ ಪಿಯರ್ ಮಹಾಕವಿಯ ಇಂಗ್ಲೀಷ್ ನಾಟಕಗಳನ್ನು ಮರಾಠಿಭಾಷೆಗೆ
[ಬದಲಾಯಿಸಿ]- ದ ಟೆಂಪೆಸ್ಟ್,
- ಜೂಲಿಯಸ್ ಸೀಸರ್,
- ರೋಮಿಯೋ ಅಂಡ್ ಜ್ಯೂಲಿಯೆಟ್
ಮರಾಠಿ ಚಲನಚಿತ್ರಗಳಿಗೆ ಚಿತ್ರಗೀತೆಗಳನ್ನು ಬರೆದಿದ್ದಾರೆ
[ಬದಲಾಯಿಸಿ]- ಅರುಣ್ ದಾತೆ ಹಾಡಿದ 'ಯಾಜನ್ಮಾವಾರ್ ಯಾಜಗನ್ಯಾವರ್ ಪ್ರೇಮ್ ಕರಾವೆ',
- 'ಭಾತುಕಲೀಛ್ಯಾ ಖೇಳಾ ಮಧ್ ಲೇ ರಾಜಾ ಆಣಿ ರಾಣಿ',
- 'ಶುಕ್ರ ತಾರಾ ಮಂದ್ ವಾರಾ', ಮೊದಲಾದ ಜನಪ್ರಿಯ ಗೀತೆ ರಚಿಸಿದ್ದರು.
ಪುಣೆ ವಿಶ್ವವಿದ್ಯಾಲಯದ ಧ್ಯೇಯ ಗೀತೆ
[ಬದಲಾಯಿಸಿ]- ೧೯೮೩-೮೪ ರಲ್ಲಿ ಪುಣೆ ವಿಶ್ವವಿದ್ಯಾಲಯದ ಧ್ಯೇಯಗೀತೆ,'ಪುಣ್ಯಮಯೀ ದೇ ಅಮ್ಹಾಳಾ ಅಕ್ಷರ್ ವರದಾನ್', ಭಾಸ್ಕರ್ ಚಂದಾವರ್ಕರ್ ಸಂಗೀತ ನಿರ್ದೇಶದೊಂದಿಗೆ ದ್ವನಿಮುದ್ರಿಸಲಾಯಿತು.
ಪ್ರಶಸ್ತಿ, ಪುರಸ್ಕಾರಗಳು
[ಬದಲಾಯಿಸಿ]- ೧೯೫೩ ಮತ್ತು ೧೯೫೫ ರಲ್ಲಿ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ.
- ೧೯೫೬ ರಲ್ಲಿ ಮಧ್ಯಪ್ರದೇಶ್ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ
- ೧೯೬೫ ರಲ್ಲಿ ಮೀರಾಬಾಯಿಯವರ ಗೀತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ; ಮತ್ತು ಸಂತ ಕಬೀರ್, ಹಾಗೂ ಸಂತ ಸೂರ್ದಾಸರ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ.
- ೧೯೮೦ ರಲ್ಲಿ, ಸಲಾಮ್ ಎಂಬ ಕವಿತಾ ಸಂಕಲನಕ್ಕೆ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ
- ೨೦೦೮ ರಲ್ಲಿ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ವಿಜೇತರು.
- ೨೦೧೦ ರಲ್ಲಿ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಲವು ದುಬಾಯ್ ನಲ್ಲಿ ಆಯೋಜಿಸಿದ್ದ ನೇ ವಿಶ್ವಮರಾಠಿ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
- ೨೦೧೨ ರಲ್ಲಿ ಪಡ್ನಾಂವ್ಕರ್ ರಿಗೆ ಪುಣೆ ವಿಶ್ವವಿದ್ಯಾಲಯ ಜೀವನ್ ಸಾಧನಾ ಪುರಸ್ಕಾರ ನೀಡಿ ಗೌರವಿಸಿತ್ತು.[೪]
- ಪದ್ಮ ಭೂಷಣ ಪುರಸ್ಕೃತರು.[೫]
ಪರಿವಾರ
[ಬದಲಾಯಿಸಿ]ಮಂಗೇಶ್ ಕೇಶವ ಪಡ್ನಾಂವ್ಕರ್, ರು, ಯಶೋದ ಪಡ್ಗಾಂವ್ಕರ್ ರನ್ನು ಲಗ್ನವಾದರು. ಈ ದಂಪತಿಗಳಿಗೆ ೩ ಜನ ಮಕ್ಕಳು. ಡಾ.ಅಜಿತ್ ಪಡ್ನಾಂವ್ಕರ್, ಅಭಯ್ ಪಡ್ನಾಂವ್ಕರ್, ಹಾಗೂ ಅಂಜಲಿ ಕುಲಕರ್ಣಿ.
ನಿಧನ
[ಬದಲಾಯಿಸಿ]೮೬ ವರ್ಷ ವಯಸ್ಸಿನ ಮಂಗೇಶ್ ಪಂಡ್ನಾಂವ್ಕರ್ [೬] ೨೦೧೫ ರ, ೩೦, ಡಿಸೆಂಬರ್, ಬುಧವಾರ, ಮುಂಬಯಿನಲ್ಲಿ ನಿಧನರಾಗಿದ್ದಾರೆ. ಆವರು ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ Biography of Mangesh Padgaonkar Poem Hunter.com
- ↑ "Veteran Marathi poet and Padma award recipient Mangesh Padgaonkar passes away". The Indian Express. Retrieved 31 ಡಿಸೆಂಬರ್ 2015.
- ↑ http://lcweb2.loc.gov/mbrs/master/salrp/00813.mp3 ಮಂಗೇಶ್ ಪಡ್ಗಾಂವ್ಕರ್ ಸ್ವತಃ ಹಾಡಿದ ಧ್ವನಿಮುದ್ರಿತ ಗೀತೆ.
- ↑ http://www.loksatta.com/pune-news/senior-poet-mangesh-padgaonkar-honoured-by-ma-sa-pa-reward-119987/
- ↑ "Padma Awards Directory (1954–2013)" (PDF). Ministry of Home Affairs (India). Archived from [http://mha.nic.in/sites/upload_files/mha/files/LST-PDAWD-2013.pdf the original (PDF) on 2015-10-15. Retrieved 2015-12-31.
2013: 14: Shri Mangesh Padgaonkar
{{cite web}}
: External link in
(help); Text "Ministry of Home Affairs]" ignored (help)|publisher=
- ↑ Marathi poet Mangesh Padgaonkar passes away, The Hindu news paper, December 30, 2015