ಭಾರತೀಯ ಜನತಾ ಪಕ್ಷ

ವಿಕಿಪೀಡಿಯ ಇಂದ
(ಭಾರತೀಯ ಜನತಾ ಪಾರ್ಟಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತೀಯ ಜನತಾ ಪಕ್ಷದ ಬಾವುಟ

ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು


ಪರಿವಿಡಿ

ರಾಜಕೀಯ ಮೌಲ್ಯಗಳು [ಬದಲಾಯಿಸಿ]

ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.

ಇತಿಹಾಸ [ಬದಲಾಯಿಸಿ]

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.

ಪದಾಧಿಕಾರಿಗಳು [ಬದಲಾಯಿಸಿ]

ಅಟಲ್ ಬಿಹಾರಿ ವಾಜಪೇಯಿ
ಲಾಲಕೃಷ್ಣ ಅಡ್ವಾಣಿ
ನರೇಂದ್ರ ಮೋದಿ


ಅಧ್ಯಕ್ಷರು [ಬದಲಾಯಿಸಿ]

ಹೆಸರು ‌ ಆರಂಭ ‌ ಅಂತ್ಯ
ನಿತಿನ್ ಗಡ್ಕರಿ ೨೦೦೯, ಡಿಸೆಂಬರ್ ೧೯ ಇಂದಿನವರೆಗು
ರಾಜನಾಥ್ ಸಿಂಗ್ ೨೦೦೫ ೨೦೦೯
ಎಲ್. ಕೆ. ಅಡ್ವಾಣಿ ೨೦೦೪ ೨೦೦೫
ವೆಂಕಯ್ಯ ನಾಯ್ಡು ೨೦೦೨ ೨೦೦೪
ಜನಾ ಕೃಷ್ಣಮೂರ್ತಿ ೨೦೦೧ ೨೦೦೨
ಬಂಗಾರು ಲಕ್ಷ್ಮಣ್ ೨೦೦೦ ೨೦೦೧
ಕುಶಾಭಾವು ಠಾಕರೆ ೧೯೯೮ ೨೦೦೦
ಲಾಲಕೃಷ್ಣ ಅಡ್ವಾಣಿ ೧೯೯೩ ೧೯೯೮
ಮುರಳಿ ಮನೋಹರ ಜೋಷಿ ೧೯೯೧ ೧೯೯೩
ಲಾಲಕೃಷ್ಣ ಅಡ್ವಾಣಿ ೧೯೮೬ ೧೯೯೧
ಅಟಲ್ ಬಿಹಾರಿ ವಾಜಪೇಯಿ ೧೯೮೦ ೧೯೮೬

ಮುಖ್ಯ ಕಾರ್ಯದರ್ಶಿಗಳು [ಬದಲಾಯಿಸಿ]

ಖಜಾಂಚಿ [ಬದಲಾಯಿಸಿ]

ಹೊರ ಪುಟಗಳು [ಬದಲಾಯಿಸಿ]