ಭಾರತೀಯ ರೂಪಾಯಿಗೆ ಚಿಹ್ನೆ ಧಾರಣೆ
ದೇವನಾಗರೀ ಲಿಪಿಯ 'र' ಮತ್ತು ರೋಮನ್ ಲಿಪಿಯ 'R' ಅಕ್ಷರಗಳನ್ನು ಸಮ್ಮಿಳನಗೊಳಿಸಿ, ವಿಶಿಷ್ಟ ಚಿಹ್ನೆ ಪಡೆದ ವಿಶ್ವದ ೫ ಚಲಾವಣೆಗಳ ಸಾಲಿಗೆ ಭಾರತೀಯ ಚಲಾವಣೆಯು ಸೇರ್ಪಡೆಯಾಗಿದೆ. ನೋಟಿನ ಮೇಲಾಗಲೀ ನಾಣ್ಯಗಳ ಮೇಲಾಗಲೀ ಈ ಚಿಹ್ನೆ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಇದನ್ನು 'ಯೂನಿಕೋಡ್ ಸ್ಟಾಂಡರ್ಡ್' ಗಳ ಪಟ್ಟಿಗೆ ಸೇರಿಸಬಹುದಾಗಿದೆ.
ರಚನೆಯ ಇತಿಹಾಸ
[ಬದಲಾಯಿಸಿ]ಮುಂಬಯಿ ಐಐಟಿಯ ಸ್ನಾತಕೋತ್ತರ ವಿದ್ಯಾರ್ಥಿ ಡಿ.ಉದಯಕುಮಾರ್, ರಚಿಸಿದ ಹೊಸ ಸಂಕೇತ ಚಿಹ್ನೆ ಯನ್ನು ಕೆಂದ್ರ ಸಂಪುಟ ಗುರುವಾರ ಅಂಗೀಕರಿಸುವ ಮೂಲಕ ಭಾರತೀಯ ರೂಪಾಯಿಗೆ ಕೊನೆಗೂ 'ಚಿಹ್ನೆಧಾರಣೆ'ಯಾಗಿದೆ. ಭಾರತೀಯ ರೂಪಾಯಿಗೆ ಚಿಹ್ನೆ ಹೊಂದಿಸುವ ಪ್ರಕ್ರಿಯೆ ವರ್ಷದ ಹಿಂದೆಯೇ ಪ್ರಾರಂಭವಾಗಿತ್ತು.
ಮಧ್ಯೆ ಭಾರತೀಯ ರೂಪಾಯಿಯು ಹೊಸ-ಚಿಹ್ನೆಯೊಂದಿಗೆ ರಾರಾಜಿಸಲಿದೆ. ವಾರ್ತಾಸಚಿವೆ ಅಂಬಿಕಾ ಸೋನಿಯವರು, ಸಂಪುಟ ಸಭೆಗೆ ಮಾಹಿತಿ ನೀಡಿದರು.ಚಿತ್ರ:Ru-2.jpg
'ಭಾರತೀಯ ಕೆಂದ್ರ ಸಂಪುಟ','ರೂಪಾಯಿಚಿಹ್ನೆ' ರೂಪಿಸಲು,'ಸ್ಪರ್ಧೆ,'ಆಯೋಜಿಸಿತ್ತು
[ಬದಲಾಯಿಸಿ]ಒಟ್ಟು ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳ ಸಂಖ್ಯೆ, ೩,೦೦೦. ಅವುಗಳಲ್ಲಿ ಅಂತಿಮಸುತ್ತಿನಲ್ಲಿ ೫ ಚಿಹ್ನೆಗಳನ್ನು ಆಯ್ಕೆಮಾಡಲಾಯಿತು. ಈ ಚಿಹ್ನೆಗಳ ವಿನ್ಯಾಸಕಾರರನ್ನು 'ಭಾರತೀಯ ರಿಸರ್ವ್ ಬ್ಯಾಂಕ್', ೨೦೦೯ರ ಡಿಸೆಂಬರಿನಲ್ಲಿ ಅಹ್ವಾನಿಸಲಾಗಿತ್ತು ತಮ್ಮ-ತಮ್ಮ ಚಿಹ್ನೆಗಳ ಬಗ್ಗೆ ವಿಸ್ತೃತ ಮಾಹಿತಿಗಳನ್ನು ಒದಗಿಸಲು, ಪ್ರಾತ್ಯಕ್ಷಿಕೆಗಳನ್ನು ತೋರಿಸುವಂತೆ ಕೋರಿತ್ತು. ಹೊಸ ಚಿಹ್ನೆ ರಚೇತ ಪ್ರೊ. ಉದಯಕುಮಾರ್ ರವರು ೨.೫ ಲಕ್ಷ ರೂಪಾಯಿಗಳ ಗೌರವಧನವನ್ನು ಪಡೆಯುತ್ತಾರೆ. ಆದರೆ ಅವರಿಗೆ ವೈಯಕ್ತಿಕ ಹಕ್ಕುಸ್ವಾಮ್ಯ ದೊರೆಯುವುದಿಲ್ಲ. ಮುದ್ರಣಕ್ಕೆ ಅನುಕೂಲವಾಗುವಂತೆ, ಗಣಕಯಂತ್ರದ ಕೀಲಿಮಣೆಗಳಲ್ಲಿ ಮತ್ತು ಇತರೆ ತಂತ್ರಾಂಶಗಳಲ್ಲಿ ಈ ಚಿಹ್ನೆ ಅತಿಶೀಘ್ರವಾಗಿ ಕಾಣಿಸಿಕೊಳ್ಳಲಿದೆ. ಹೊಸಚಿಹ್ನೆಯ ಬಳಕೆಯನ್ನು ಭಾರತದಲ್ಲಿ ಮುಂದಿನ ೬ ತಿಂಗಳಿನಲ್ಲಿ ವ್ಯವಹಾರದಲ್ಲಿ ಜಾರಿಗೆ ತರಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ೧೮-೨೪ ತಿಂಗಳು ಹಿಡಿಯುತ್ತದೆ. ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಇಂಡೊನೇಷ್ಯಾ, ರಾಷ್ಟ್ರಗಳ ರುಪೀ ಅಥವಾ ರುಪಯ್ಯಾ ದಿಂದ ಭಾರತೀಯ-ರೂಪಾಯಿ ಇನ್ನುಮುಂದೆ ಪ್ರತ್ಯೇಕವಾಗಿ ಗುರುತಿಸಿಕೊಳ್ಳಬಹುದಾಗಿದೆ.
ಪ್ರೊ. ಉದಯಕುಮಾರ್, 'ರುಪಾಯಿ ಲಾಂಛನ ತಯಾರಿಕೆ'ಯ ಜೊತೆಗೆ,'ಭಾರತೀಯ ಮೌಲ್ಯಗಳನ್ನು' ಸಹ, ಹೆಣೆದಿದ್ದರು
[ಬದಲಾಯಿಸಿ]'ಭಾರತೀಯ ಮೌಲ್ಯಗಳನ್ನು ಎತ್ತಿಹಿಡಿಯುವ ರಚನೆ'ಯನ್ನು ಕೈಗೊಳ್ಳಲಾಗಿತ್ತು. ಐಐಟಿ ಸಹಾಯಕ ಪ್ರಾಧ್ಯಾಪಕ ತಮ್ಮ ಆಶಯಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಿದ್ದಾರೆ. ಅಕ್ಷರಗಳಮೇಲೆ 'ಗೆರೆ' ಇರುವುದು ದೇವನಾಗರಿಯಲ್ಲಿ. ತ್ರಿವರ್ಣಗಳಿಗೆ ಅವಕಾಶಕಲ್ಪಿಸಲು ಸ್ವಲ್ಪ ಜಾಗವನ್ನು ಹೊಂದಿಸಿ, ಸಮಾನಾಂತರ ಗೆರೆಯನ್ನು ಮೂಡಿಸಿದ್ದಾರೆ. ಈಗ ಗೌಹಾಟಿಯ ಐಐಟಿ ವಿಭಾಗದಲ್ಲಿ ಕೆಲಸಕ್ಕೆ ಹಾಜರಾಗಲಿರುವ ಪ್ರೊಫೆಸರ್. ಉದಯಕುಮಾರ್, ಅಲ್ಲಿನ ವಿನ್ಯಾಸ ವಿಭಾಗದಲ್ಲಿ ಸಹಾಯಕ-ಪ್ರಾಧ್ಯಾಪಕರಾಗಿ ಸೇರ್ಪಡೆಗೊಳ್ಳಲಿದ್ದಾರೆ.