ಗಣಕಯಂತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಣಕಯಂತ್ರ

ಗಣಕಯಂತ್ರವು ಒಂದು ವಿದ್ಯುನ್ಮಾನ ಯಂತ್ರ.ಇದನ್ನು ಇಂಗ್ಲೀಷ್ ಬಾಷೆಯಲ್ಲಿ ಕಂಪ್ಯೂಟರ್ ಎಂದು ಕರೆಯುತ್ತಾರೆ. ಗಣಕಯಂತ್ರ ಇದು ಒಳರವಾನೆ ಸಂಸ್ಕರಣೆ ಹಾಗೂ ಹೊರರವಾನೆ ಸಾಧನಗಳನ್ನು ಹೊಂದಿದ್ದು ಒಳರವಾನೆ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳಮೂಲಕ ಉಪಯೋಗಿ(ಯೂಜರ್)ಗೆ ನೀಡುವುದಲ್ಲದೇ ಮಾಹಿತಿ ಮತ್ತು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಸಾಧನವಾಗಿರುತ್ತದೆ. ಅಲ್ಲದೇ ಶೇಖರಿಸಿಟ್ಟ ಅಥವಾ ನಾವು ನೀಡಿದಂತಹಾ ಮಾಹಿತಿಯನ್ನು ಒಂದು ಗಣಕಯಂತ್ರ ದಿಂದ ಮತ್ತೊಂದು ಗಣಕಯಂತ್ರಕ್ಕೆ ಸಂಪರ್ಕಜಾಲದ ಮೂಲಕ ನಮ್ಮ ಆದೇಶದ ಮೇರೆಗೆ ರವಾನಿಸುತ್ತದೆ. ಗಣಕಯಂತ್ರದ ಮೂಲಭೂತ ನಿಯಮವು. ಈ ಚಕ್ರಕ್ಕೆ ಹೂಡುವಳಿ-ಸಂಸ್ಕರಣೆ-ಹುಟ್ಟುವಳಿ (input-processing-output cycle) ಎಂದು ಕರೆಯಲಾಗುತ್ತದೆ.

ಗಣಕಯಂತ್ರದ ಸಿದ್ದಾಂತ, ವಿನ್ಯಾಸ ಮತ್ತು ಉಪಯೋಗಗಳ ಅದ್ಯಯನಕ್ಕೆ ಗಣಕಯಂತ್ರ ವಿಜ್ಞಾನ(Computer Science) ವೆಂದು ಕರೆಯಲಾಗುತ್ತದೆ. ಚಾರ್ಲ್ಸ್ ಬಾಬೇಜ್‍ರವರು ೧೮೨೨ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶಿಸಿದ ಅಂತರ ಯಂತ್ರವು (Difference_Engine) ವಿಕಾಸಗೊಂಡು ಆಧುನಿಕ ಗಣಕಯಂತ್ರಗಳ ಶೋಧನೆಗೆ ದಾರಿದೀಪವಾಯಿತು. ಗಣಕಯಂತ್ರದ ಎಲ್ಲಾ ಕಾರ್ಯಗಳು ಗಣಿತ ಶಾಸ್ತ್ರಕ್ಕೆ ಸಂಬಂಧಿತವಾದುವು ಎಂಬ ಮೂಲಭೂತ ಅಭಿಪ್ರಾಯವನ್ನು ಶೋಧಿಸಿದವರು ಕ್ಲಾಡ್ ಇ ಶನ್ನನ್ (Claude E Shannon). ಗಣಕಯಂತ್ರವು ಪ್ರತಿಯೊಂದು ಗಣಿತ ಸಮಸ್ಯೆಯನ್ನು ಬಿಡಿಸಲು ಸಾಧ್ಯವಿಲ್ಲವೆಂಬ ನೀತಿಯನ್ನು ಶೋಧಿಸುತ್ತ ಅಲೆನ್ ಟ್ಯೂರಿಂಗ್Alan Turing ರವರು ಗಣಕಯಂತ್ರ ವಿಜ್ಞಾನ ಸಿದ್ದಾಂತ ಶಾಸ್ತ್ರವನ್ನು (Theoretical Computer Science) ಕಂಡುಹಿಡಿದರು. ಗಣಕಯಂತ್ರದ ಹೃದಯವಾದ ಸಂಸ್ಕರಣ (processor) ವೇಗವು ಪ್ರತಿ ೧೮-೨೪ ತಿಂಗಳಲ್ಲಿ ದ್ವಿಗುಣವಾಗುತ್ತದೆಂದು ಪ್ರತಿಪಾದಿಸಿದ ಗೊರ್ಡನ್ ಮೂರ್‌ರ ಅಡಕವು ವಿಶ್ವ ವಿಖ್ಯಾತ ತತ್ತ್ವವಾಗಿದೆ (Moore's Law).

ಗಣಕಯಂತ್ರದ ಘಟಕಗಳು.jpg

ಶಬ್ದದ ಉತ್ಪತ್ತಿ[ಬದಲಾಯಿಸಿ]

ಇಂಗ್ಲೀಷ್ ಬರೆಹಗಾರನಾದ ರಿಚರ್ಡ ಬ್ರೈತ್ವೇಟ್ನು ತನ್ನ ಪುಸ್ತಕ "ದಿ ಯಂಗ್ ಮ್ಯಾನ್ಸ ಗ್ಲೀನಿಂಗ್ಸ"ನಲ್ಲಿ 'ಕಂಪ್ಯೂಟರ್' ಎಂಬ ವನ್ನು ಬಳಸಿರುವುದು ಕ್ರಿ.ಶ.೧೬೧೩ರಲ್ಲಿ ದಾಖಲಾಗಿರುತ್ತದೆ. ಇದರ ಪ್ರಕಾರ ಕಂಪ್ಯೂಟರ್ ಎಂದರೆ 'ಗಣನೆ ಮಾಡುವವ' ಅಥವಾ 'ಲೆಕ್ಕಿಗ'. ೨೦ನೇ ಶತಮಾನದ ಮಧ್ಯಬಾಗದವರೆಗೂ ಇದೇ ಅರ್ಥದ ರೀತಿಯಲ್ಲಿಯೆ ಉಪಯೋಗಿಸಲಾಗುತ್ತಿತ್ತು. ಇತ್ತೀಚಿಗೆ, ಗಣನೆ ಮಾಡುವ ಯಂತ್ರಕ್ಕೆ 'ಕಂಪ್ಯೂಟರ್' ಎಂದು ಕರೆಯಲಾಗುತ್ತದೆ.

ಗಣಕಯಂತ್ರದ ಘಟಕಗಳು:[ಬದಲಾಯಿಸಿ]

  1. ಹೂಡುವಳಿ ಘಟಕ
  2. ಕೇಂದ್ರ ಸಂಸ್ಕರಣ ಘಟಕ
  3. ಸಂಗ್ರಹಣ ಘಟಕ
  4. ಹುಟ್ಟುವಳಿ ಘಟಕ

ಈ ಘಟಕಗಳ ಸಂವಾಹನವನ್ನು ಚಿತ್ರ:೨ ರಲ್ಲಿ ಸಂಕ್ಷಿಪ್ತವಾಗಿ ತೋರಿಸಲಾಗಿದೆ.

ಉಲ್ಲೇಖ[ಬದಲಾಯಿಸಿ]

"http://kn.wikipedia.org/w/index.php?title=ಗಣಕಯಂತ್ರ&oldid=425308" ಇಂದ ಪಡೆಯಲ್ಪಟ್ಟಿದೆ