ಬ್ರಿಟೀಷ್ ಸಾಮ್ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೮೯೭ರಲ್ಲಿ ಬ್ರಿಟೀಷ್ ಸಾಮ್ರಾಜ್ಯ. ಬ್ರಿಟೀಷ್ ಸಾರ್ವಭೌಮತ್ವದಲ್ಲಿದ್ದ ಪ್ರಾಂತ್ಯಗಳನ್ನು ಈ ಭೂಪಟದಲ್ಲಿ ಗುಲಾಬಿಬಣ್ಣದಲ್ಲಿ ಗುರುತು ಮಾಡಲಾಗಿದೆ.

ಬ್ರಿಟೀಷ್ ಸಾಮ್ರಾಜ್ಯವು ಜಗತ್ತಿನ ಇತಿಹಾಸದಲ್ಲಿ ಅತಿ ವಿಶಾಲ ಸಾಮ್ರಾಜ್ಯವಾಗಿತ್ತು . ಬಹುಕಾಲ ಅದು ಮುಂಚೂಣಿಯಲ್ಲಿದ್ದ ಜಾಗತಿಕ ಶಕ್ತಿಯಾಗಿತ್ತು . ಅದು ೧೫ನೇ ಶತಮಾನದ ಅಂತ್ಯದಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ದೇಶಗಳ ಸಮುದ್ರಾನ್ವೇಷಣೆಗಳೊಂದಿಗೆ ಪ್ರಾರಂಭವಾದ ಯುರೋಪಿಯನ್ ಅನ್ವೇಷಣಾಯುಗದ ಫಲಸ್ವರೂಪವಾಗಿತ್ತು .

೧೯೨೧ ರ ಹೊತ್ತಿಗೆ ಬ್ರಿಟಿಷ್ ಸಾಮ್ರಾಜ್ಯವು ಜಗತ್ತಿನ ಜನಸಂಖ್ಯೆಯ ಸುಮಾರು ಕಾಲುಭಾಗ ಅಂದರೆ ೪೭ ಕೋಟಿಯಿಂದ ೫೭ ಕೋಟಿಯ ನಡುವಿನಷ್ಟು ಸಂಖ್ಯೆಯ ಜನರ ಮೇಲೆ ಅಧಿಪತ್ಯ ಹೊಂದಿತ್ತು. ಜಗತ್ತಿನ ಒಟ್ಟು ಭೂಪ್ರದೇಶದ ಕಾಲುಭಾಗ ಅಂದರೆ ಸುಮಾರು ೧೪.೩ ದಶಲಕ್ಷ ಚದರ ಮೈಲಿ ( ೩೭ ದಶಲಕ್ಷ ಚದರ ಕಿ.ಮೀ.) ಯಷ್ಟು ಪ್ರದೇಶವನ್ನು ಆವರಿಸಿತ್ತು . ಈಗ ಅದು ಕಾಮನ್ವೆಲ್ಥ ಒಕ್ಕೂಟವಾಗಿ ಬದಲಾಗಿರುವುದಾದರೂ , ಬ್ರಿಟಿಷ ಪ್ರಭಾವವು ಜಗತ್ತಿನಾದ್ಯಂತ ಬಲವಾಗಿ ಉಳಿದಿದೆ. ಉದಾ: ಆರ್ಥಿಕ ವ್ಯವಸ್ಥೆ, ನ್ಯಾಯಾಂಗ/ಕಾನೂನು ವ್ಯವಸ್ಥೆ, ಸರಕಾರಿ ವ್ಯವಸ್ಥೆ], ಕ್ರೀಡೆ (ಕ್ರಿಕೆಟ್, ಫುಟ್‌ಬಾಲ್) ಮತ್ತು ಸ್ವತಃ ಆಂಗ್ಲ ಭಾಷೆಯಲ್ಲೇ ಉಳಿದಿದೆ.

ಒಂದು ಕಾಲಕ್ಕೆ ಬ್ರಿಟಿಷ್ ಸಾಮ್ರಾಜ್ಯವು "ಸೂರ್ಯನೆಂದೂ ಮುಳುಗದ ಸಾಮ್ರಾಜ್ಯ" ಎಂದು ಕರೆಯಲ್ಪಡುತ್ತಿತ್ತು . ಆ ಸಾಮ್ರಾಜ್ಯದ ಒಂದಲ್ಲ ಒಂದು ವಸಾಹತಿನ ಮೇಲೆ ಸೂರ್ಯನು ಪ್ರಕಾಶಿಸುತ್ತಿರುವಷ್ಟು ಅದು ವಿಶಾಲವಾಗಿದ್ದುದು ಇದಕ್ಕೆ ಕಾರಣ .

ಎರಡನೆಯ ಮಹಾಯುದ್ಧದ ನಂತರದ ಐದು ದಶಕಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಸಾಹತಿನಲ್ಲಿದ್ದ ಬಹುತೇಕ ಪ್ರದೇಶಗಳು ಸ್ವತಂತ್ರವಾದವು. ಅನೇಕ ದೇಶಗಳು 'ಕಾಮನ್ ವೆಲ್ತ್ ಆಫ್ ನೇಷನ್ಸ್' ಎಂಬ ಸ್ವತಂತ್ರ ದೇಶಗಳ ಮುಕ್ತ ಒಕ್ಕೂಟವನ್ನು ಸೇರಿಕೊಂಡವು.

ಶಬ್ದ ವುತ್ಪತ್ತಿಯಾದ ದಾರಿ.[ಬದಲಾಯಿಸಿ]

"ಬ್ರಿಟಿಷ್ ಸಾಮ್ರಾಜ್ಯ" ಎಂಬ ಪದವನ್ನು ೧೮೬೫ ರ ನಂತರ ಬಹಳಷ್ಟು ಉಪಯೋಗಿಸಲಾಯಿತು. ಉದಾಹರಣೆಗೆ, John Oldmixon, The British Empire in America, Containing the History of the Discovery, Settlement, Progress and Present State of All the British Colonies, on the Continent and Islands of America (London, 1708) [೧]

ಸಾಗರದಾಚೆಯ ಸಾಮ್ರಾಜ್ಯ[ಬದಲಾಯಿಸಿ]

ಆದಿ[ಬದಲಾಯಿಸಿ]

Statue of John Cabot in Newfoundland, England's first overseas colony [೨].

ಸಾಗರದಾಚೆಯ ಬ್ರಿಟಿಷ್ ಸಾಮ್ರಾಜ್ಯ ಐರೋಪ್ಯದ(ಬ್ರಿಟಿಷ್ ದ್ವೀಪಗಳನ್ನೂ ಒಡಗೂಡಿ) ಹೊರಗಿನ ಪ್ರದೇಶಕ್ಕೆ ಸಂಬಂಧ ಪಡುತ್ತದೆ. ಅಲ್ಲಿನ ಅನ್ವೇಷಣೆ ಮತ್ತು ವಸಾಹತು ಇಂಗ್ಲೆಂಡಿನ ರಾಜ೭ನೇ ಹೆನ್ರಿ ರೂಪಿಸಿದ ನಾವಿಕ ಕಾರ್ಯನೀತಿಯ ಮೂಲಕ ರೂಪಗೊಂಡಿತು. ತನ್ನ ಪೂರ್ವಾಧಿಕಾರಿ ಮುಮ್ಮಡಿ ರಿಚರ್ಡ್ ಕಾಲದಲ್ಲೇ ಬೆಳೆದಿದ್ದಂತಹ ಉಣ್ಣೆ ವ್ಯಾಪಾರದ ವಾಣಿಜ್ಯ ಸಂಬಂಧಗಳನ್ನು ಬುಡವಾಗಿಟ್ಟುಕೊಂಡು ತನ್ನ ನೀತಿಗಳನ್ನು ಕಾರ್ಯರೂಪಕ್ಕೆ ತಂದ. ಮುಖ್ಯವಾಗಿ ನವೀಕರಿಸಿದ ವರ್ತಕ ನೌಕಾಪಡೆಯನ್ನು ಸ್ಥಾಪಿಸಿದ. ಈ ನೌಕಾಪಡೆ ಪ್ರಾರಂಭದಲ್ಲಿ ವಾಣಿಜ್ಯ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತು ಮುಂದೆ ಮ್ಯಾಸಚುಸೆಟ್ಸ್ ಬೇ ಕಂಪನಿ ಮತ್ತು ಈಸ್ಟ್ ಇಂಡಿಯ ಕಂಪನಿಗಳ ಅನ್ವೇಷಣೆ ಕಾರ್ಯಗಳಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿತು. ಹೆನ್ರಿಯ ಹಣಕಾಸು ವ್ಯವಸ್ಥೆಯ ನೀತಿಗಳು ರಾಜ ಖಜಾನೆಯನ್ನು ದೃಢಗೊಳಿಸಿತಲ್ಲದೆ ಜೊತೆಗೆ ತಾನು ಸ್ಥಾಪಿಸಿದ ವರ್ತಕ ನೌಕಾಪಡೆಯ ಬೆಳವಣಿಗೆಗೆ ಮೂಲ ಕಾರಣವಾಯಿತು. ಇಂಗ್ಲೆಂಡ್‌ನ ಮೊದಲ ಒಣ ಹಡಗುಕಟ್ಟೆಯನ್ನು ಪೋರ್ಟ್ಸ್‌ಮೌಥ್‌ನಲ್ಲಿ ಕಟ್ಟಿಸಿದ ಹಾಗೂ ತನ್ನ ಘನ ನೌಕಾಪಡೆಯನ್ನೂ ಉತ್ತಮಗೊಳಿಸಿದ. ಇದರ ಜೊತೆಗೆ ೧೪೯೬ ಮತ್ತು ೧೪೯೭ರಲ್ಲಿ ಇಟಲಿಯ ನಾವಿಕ ಜಾನ್ ಕಾಬೊಟ್ನ ಸಮುದ್ರಯಾನಕ್ಕೆ ಅನುಕೂಲ ಮಾಡಿಕೊಟ್ಟ. ಇದರಿಂದಾಗಿ ಇಂಗ್ಲೆಂಡಿನ ಸಾಗರದಾಚೆಯ ಮೊದಲ ವಸಾಹತು ಸ್ಥಾಪನೆಯ ಹೆಸರಿನಲ್ಲಿ ವಶಪಡಿಸಿಕೊಂಡ.

೮ ನೇ ಹೆನ್ರಿ ಮತ್ತು ಘನ ನೌಕಾಪಡೆಯ ಅಭ್ಯುದಯ[ಬದಲಾಯಿಸಿ]

೭ನೇ ಹೆನ್ರಿಯ ಆಳ್ವಿಕೆಯಲ್ಲಿ ಸ್ಥಾಪಿಸಲಾಗಿದ್ದ ನೌಕಾಪಡೆಯನ್ನು ಕ್ರಮೇಣವಾಗಿ ವ್ಯಾಪಾರದ ಸಂರಕ್ಷಣೆಗೂ ವಿಸ್ತರಿಸಲಾಯಿತು. ಇದರಿಂದಾಗಿ ಹೊಸ ಮಾರ್ಗಗಳನ್ನು ತೆರೆಯುವುದು ಸುಲಭವಾಯಿತು. ೭ನೇ ಹೆನ್ರಿ ನಂತರ ಬಂದ ಅವನ ಮಗ ೮ನೇ ಹೆನ್ರಿ ಘನ ನೌಕಾಪಡೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿದ. ತನ್ನ ತಂದೆಯ ಆಳ್ವಿಕೆಯಲ್ಲೇ ಇದರ ಬಗ್ಗೆ ಅನುಸಂಧಾನವಾಗಿತ್ತು. ಯುದ್ಧನೌಕೆಗಳನ್ನು ಮೂರು ಪಟ್ಟು ಹೆಚ್ಚಿಸುವುದರ ಜೊತೆಗೆ, ಭಾರವಾದ, ದೊಡ್ಡ ಗಾತ್ರದ, ದೂರಗಾಮಿ ತೋಪುಗಳುಳ್ಳ ಬೃಹತ್ ಹಡಗುಗಳನ್ನು ನಿರ್ಮಿಸಿದ. ೮ನೇ ಹೆನ್ರಿ ನೌಕಾಪಡೆಗೆ ಕೇಂದ್ರಿತವಾದ ಶಾಸನವನ್ನು ಉಪಕ್ರಮಿಸುವುದರ ಜೊತೆಗೆ ಹೊಸ ಹಡಗುಕಟ್ಟೆಗಳನ್ನೂ ಕಟ್ಟಿಸಿದ. ಇದಲ್ಲದೆಯೇ ಅವನು ದೀಪದಮನೆ ಮತ್ತು ಮಾರ್ಗದರ್ಶಕಗಳ ಒಂದು ಅತ್ಯುತ್ತಮ ಜಾಲಬಂಧವನ್ನು ಸೃಷ್ಟಿಸಿದ. ಇದರಿಂದಾಗಿ ಇಂಗ್ಲೆಂಡ್ ಅಲ್ಲದೇ ಬೇರೆ ದೇಶದ ನಾವಿಕರಿಗೂ ಸುಗಮವಾಗಿ ಸಂಚರಿಸುವುದಕ್ಕೆ ಬಹಳ ಸಹಾಯವಾಯಿತು. ಹೆನ್ರಿ ಈ ರೀತಿಯಾಗಿ ಶಸ್ತ್ರಾಸ್ತ್ರ ಸಂಗ್ರಹದ ನವ್ಯ ಘನ ನೌಕಾಪಡೆಯನ್ನು ರೂಪಿಸಿದ - ಇದು ೧೫೮೮ರಲ್ಲಿ ಸ್ಪೇನಿನ ನೌಕಾಪಡೆಯನ್ನು ತಡೆಗಟ್ಟುವುದರಲ್ಲಿ ಅತ್ಯಂತ ಯಶಸ್ವಿಯಾಯಿತು.

ಎಲಿಜಬೆತ್ ಕಾಲ[ಬದಲಾಯಿಸಿ]

ಚಿತ್ರ:Loutherbourg, Spanish Armada.jpg
Defeat of the Spanish Armada, by Philippe-Jacques de Loutherbourg, painted 1796.

ಟ್ಯೂಡರ್ರಾಣಿ ೧ನೇ ಎಲಿಜಬೆತ್ ಆಳ್ವಿಕೆಯಲ್ಲಿ ಫ್ರಾನ್ಸಿಸ್ ಡ್ರೇಕ್ ಎಂಬುವನು ೧೫೭೭ರಿಂದ ೧೫೮೦ರ ಮಧ್ಯೆ ಭೂಮಿಯನ್ನು ಸುತ್ತು ಹೊಡೆದು ಫರ್ಡಿನೆಂಡ್ ಮಗೆಲ್ಲನ್ ನ ನಂತರ ಈ ಸಾಹಸ ಮಾಡಿದ ಎರಡನೇ ಸಾಹಸಿಗನಾದನು. ೧೫೭೯ ರಲ್ಲಿ ಡ್ರೇಕನು ಉತ್ತರ ಕ್ಯಾಲಿಫೋರ್ನಿಯಾ ದಲ್ಲಿ ಇಳಿದು claimed for the English Crown what he named Nova Albion ("New Albion", Albion being an ancient name for England or Britain), though the claim was not followed by settlement. Subsequent maps spell out Nova Albion to the north of all New Spain. ಇದರ ನಂತರ ಇಂಗ್ಲೆಂಡಿನ ಹಿತಾಸಕ್ತಿಗಳು ಯುರೋಪ್ ನ ಹೊರಗೆ ಬೆಳೆಯಲಾರಂಭಿಸಿದವು. ಜಾನ್ ಡೀ ಎಂಬುವನು " ಬ್ರಿಟಿಷ್ ಸಾಮ್ರಾಜ್ಯ " ಎಂಬ ಪದವನ್ನು ಹುಟ್ಟುಹಾಕಿದನು. ಅನುಭವೀ ನಾವಿಕನಾಗಿದ್ದ ಈತನನ್ನು ಬಹಲಷ್ಟು ಆಂಗ್ಲ ನಾವಿಕರು ಭೇಟಿ ಮಾಡಿದರು. ಈತನ ಸಾಮ್ರಾಜ್ಯದ ಕಲ್ಪನೆಯು ಡಾಂಟೆ ಕ್ರ್‍ತಿಯಾದ "ಮೊನಾರ್ಕಿಯಾ"ದಿಂದ ಸ್ಫೂರ್ತಿಗೊಂಡಿತ್ತಾದರೂ ಈತನು ವೇಲ್ಸ್ ದೇಶದವನಾಗಿದ್ದು, ಇವನ " ಬ್ರಿಟಿಷ್ " ಎಂಬ ಪದವು ಎಲಿಜಬೆತಳ ಟ್ಯೂಡರ್ ವಂಶದ ವೇಲ್ಸ್ ಮೂಲಕ್ಕೆ ಸರಿ ಹೊಂದಿತು.

ಎಲಿಜಬೆತ್ ಯುಗವು 19ನೇ ಶತಮಾನದ 8ನೇ ಹೆನ್ರಿಯ ಪ್ರತಿಷ್ಟಿತ ನೌಕಾಬಲದ ತಳಹದಿಯ ಮೇಲೆ ನಿರ್ಮಾಣವಾದದ್ದು. ಇದು ಮುಖ್ಯವಾಗಿ ಬ್ರಿಟೀಷ್ ನಾವಿಕರ ಅಟ್ಲಾಂಟಿಕ್ ಮಹಾಸಾಗರದ ಅನ್ವೇಷಣೆಯಿಂದ ಪ್ರಾರಂಭವಾಗಿ, ನೆದರ್ಲ್ಯಾಂಡ್ ಮತ್ತು ಹ್ಯಾನ್ಸಿಯಾಟಿಕ್ ಒಕ್ಕೂಟಗಳ ಸಾಗರ ಸಂಬಧೀ ವ್ಯಾಪಾರ ವ್ಯವಹಾರಗಳಿಂದ ಉತ್ತೇಜಿಸಲ್ಪಟ್ಟಿತು.ಅಟ್ಲಾಂಟಿಕ್ ಸಾಗರ ಮಾರ್ಗದ ಮೇಲೆ ಹಿಡಿತ ಸಾಧಿಸಲು ಸುಮಾರು 20 ವರ್ಷಗಳ ಕಾಲ ನಡೆದ ಆಂಗ್ಲೋ-ಸ್ಪ್ಯಾನಿಶ್ಯುದ್ಧದಲ್ಲಿ ಇಂಗ್ಲೆಂಡ್ ಕಾಡಿಜ್ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಶುಭಾರಂಭ ಮಾಡಿತಾದರೂ, ನಂತರ ಸ್ಪ್ಯೇನ್ನಿಂದ ಸರಣಿ ಸೊಲು ಅನುಭವಿಸಿತು. ಇದರಿಂದ ಪ್ರತಿಷ್ಟಿತ ಇಂಗ್ಲಿಷ್ ನೌಕಾಪಡೆಗೆ ಉತ್ತರ ಅಮೇರಿಕದಲ್ಲಿ ತನ್ನ ವಸಾಹತು ಸ್ಥಾಪಿಸಲು ಸಾಧ್ಯವಾಗದಿದ್ದರೂ, ಇಂಗ್ಲಿಷ್ ನಾವಿಕರಿಗೆ ಮತ್ತು ನೌಕಾ ನಿರ್ಮಾಣಕಾರರಿಗೆ ಉತ್ತಮ ಅನುಭವ ದೊರೆಯಿತು.

ಸ್ಟುಅರ್ಟ್ ಯುಗ[ಬದಲಾಯಿಸಿ]

1604 ನೇ ಇಸವಿಯಲ್ಲಿ ಇಂಗ್ಲೆಂಡ್ ನ 1ನೇ ಜೇಮ್ಸ್ ಸ್ಪೇನ್ ದೇಶದೊಂದಿಗೆ ಲಂಡನ್ ಒಪ್ಪಂದ ಮಾಡಿಕೊಂಡ ನಂತರ ಸ್ಪೇನ್ ದೇಶದೊಡನೆ ನಡೆಯುತ್ತಿದ್ದ ಕದನಕ್ಕೆ ವಿರಾಮ ದೊರೆಯಿತು. ಇದರೊಂದಿಗೆ ಇಂಗ್ಲೆಡ್ ಅಮೇರಿಕದಲ್ಲಿ ತನ್ನ ಮೊದಲ ವಸಾಹತನ್ನು 1607ರಲ್ಲಿ ಜೇಮ್ಸ್ ಟೌನ್, ವರ್ಜೀನಿಯದಲ್ಲಿ ಸ್ಥಾಪಿಸಿತು. ಮುಂದಿನ ಮೂರು ವರ್ಷಗಳಲ್ಲಿ ಇಂಗ್ಲೆಂಡ್ ಸಾಗರದಾಚೆ ತನ್ನ ಪ್ರಭಾವವನ್ನು ಹೆಚ್ಚಿಸಿತಲ್ಲದೆ, ತನ್ನ ಆಂತರಿಕ ರಾಜಕೀಯ ಸ್ಥಿತಿಯನ್ನು ಸುಭದ್ರಗೊಳಿಸಿತು. 1707ನೇ ಇಸವಿಯಲ್ಲಿ ಹೊರಡಿಸಿದ ಆಕ್ಟ್ಸ್ ಆಫ್ ಯುನಿಯನ್ನಿಂದಾಗಿ ಪಾರ್ಲಿಮೆಂಟ್ ಆಪ್ ಇಂಗ್ಲೆಂಡ್ ಮತ್ತು ಪಾರ್ಲಿಮೆಂಟ್ ಆಪ್ ಸ್ಕಾಟ್ಲ್ಯಾಂಡ್ಗಳು ವೆಸ್ಟ್ ಮಿನಿಸ್ಟರ್,ಲಂಡನ್ ನಲ್ಲಿ ವಿಲೀನವಾಗಿ ಪಾರ್ಲಿಮೆಂಟ್ ಅಫ್ ಗ್ರೇಟ್ ಬ್ರಿಟನ್ಆಯಿತು.

ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ[ಬದಲಾಯಿಸಿ]

ಬ್ರಿಟೀಷ್ ಸಾಮ್ರಾಜ್ಯದ ಇತಿಹಾಸದಲ್ಲಿಯೇ ಬಹುಶ: ಅತಿ ಯಶಸ್ವೀ ಅಧ್ಯಾಯವೆಂದರೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ. ಈ ಕಂಪನಿಯು, ಬ್ರಿಟೀಷ್ ಸಾಮ್ರಾಜ್ಯಕ್ಕೆ ಅತಿ ಹೆಚ್ಚು ಆದಾಯದ ಮೂಲವಾಗಿದ್ದ,ಭಾರತದ ಉಪಖಂಡವನ್ನು ಸ್ವಾಧೀನ ಮಾಡಿಕೊಂಡದ್ದಷ್ಟೇ ಅಲ್ಲದೇ, ಹಾಂಗ್ ಕಾಂಗ್ , ಸಿಂಗಪುರ, ಸಿಲೋನ್ ಮತ್ತು ಮಲಯಾ ಸೇರಿದಂತೆ ಸುತ್ತಮುತ್ತಲಿನ ಭಾಗಗಳನ್ನು ವಶಪಡಿಸಿಕೊಂಡು , ಬ್ರಿಟೀಷ್ ಸಾಮ್ರಾಜ್ಯದ ಮುಕುಟಮಣಿಯಾದ ಏಶಿಯಾ ಸಾಮ್ರಾಜ್ಯವನ್ನು ಸ್ಥಾಪಿಸಿತು.

ಲಂಡನ್ ನಗರದ ಲೀಡನ್ ಹಾಲ್ ರಸ್ತೆ ಯಲ್ಲಿ, ವ್ಯಾಪಾರಿ ಮತ್ತು ಬಂಡವಾಳದಾರರ ಪಾಲುಗಾರಿಕೆಯಲ್ಲಿ ಪ್ರಾರಂಭವಾದ ಈಸ್ಟ್ ಇಂಡಿಯಾ ಕಂಪನಿಗೆ, 1600 ರಲ್ಲಿ ಒಂದನೆಯ ಎಲಿಜಬೆತ್ ರಾಣಿಯು, ರಾಜಸನ್ನದಿನ ಮೂಲಕ,ಭಾರತದಲ್ಲಿ ವ್ಯಾಪಾರ ವಹಿವಾಟು ನಡೆಸುವುದಕ್ಕೆ ವಿಶೇಷ ಸವಲತ್ತನ್ನು ಮಂಜೂರು ಮಾಡಿದಳು. ಈ ಸನ್ನದು ಈಸ್ಟ್ ಇಂಡಿಯಾ ಕಂಪನಿಗೆ ಭಾರತದೊಂದಿಗಿನ ವ್ಯಾಪಾರ ವ್ಯವಹಾರಗಳಲ್ಲಿ ಏಕಸ್ವಾಮ್ಯ ಗಳಿಸಿಕೊಳ್ಳಲು ನೆರವಾಯಿತು. ಇದರಿಂದಾಗಿ, ವಾಣಿಜ್ಯ ಸಂಸ್ಥೆಯಾಗಿದ್ದ ಕಂಪನಿಯು, ರಾಜಕೀಯ ಹಾಗೂ ಸೇನಾ ಶಕ್ತಿಗಳನ್ನು ಪಡೆದು ಭಾರತದಲ್ಲಿ ರಾಜ್ಯಭಾರವನ್ನು ಮಾಡಲು ಅನುವಾಯಿತು. ಕಂಪನಿಯ ಬೃಹತ್ ಖಾಸಗಿ ಸೇನೆಯಲ್ಲಿ ಅನೇಕ ಮೂಲ ಭಾರತೀಯ ಸಿಪಾಯಿಗಳು ಇದ್ದು, ತಮ್ಮ ಬ್ರಿಟಿಷ್ ಅಧಿಕಾರಿಗಳಿಗೆ ನಿಷ್ಠರಾಗಿದ್ದುಕೊಂಡು, ಬ್ರಿಟನ್ನಿನ ಏಷಿಯಾ ಖಂಡದ ದಿಗ್ವಿಜಯಕ್ಕೆ ನೆರವಾದರು. ಹೀಗಾಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯನ್ನು, ಜಗತ್ತಿನ ಮೊದಲ ಬಹುರಾಷ್ಟ್ರೀಯ ಕಂಪನಿಯೆಂದು ಅನೇಕರು ಗುರುತಿಸುತ್ತಾರೆ. ಸಿಪಾಯಿ ದಂಗೆಯ ನಂತರದ ಘಟನಾವಳಿಗಳಿಂದಾಗಿ 1858ನೇ ಇಸ್ವಿಯಲ್ಲಿ, ಬ್ರಿಟೀಷ್ ರಾಜಾಧಿಪತ್ಯವು ಕಂಪನಿಯ ಭೌಗೋಳಿಕ ಸ್ವಾಯತ್ತತೆಯನ್ನು ನಿಯಮಗಳಿಗೆ ಬದ್ಧವಾಗಿಸಿತು.

ಆ ಸಮಯದಲ್ಲಿ ಭಾರತ ಉಪಖಂಡವು ಅನೇಕ ರಾಜ್ಯಗಳಿಂದ ಕೂಡಿತ್ತು . ಯುರೋಪಿನಲ್ಲಿಯಂತೆ , ಈ ವಿಶಾಲ ಭೂಪ್ರದೇಶದಲ್ಲಿ ಎಲ್ಲಿಯೂ ರಾಜಕೀಯ ಸಂಸ್ಥೆಯಾಗಿ ರಾಜ್ಯವೆಂಬ ಕಲ್ಪನೆ ಇರಲಿಲ್ಲ . 1615 ನೇ ಇಸ್ವಿಯಲ್ಲಿ, ಇಂಗ್ಲೆಂಡಿನ ಮೊದಲನೇ ಜೇಮ್ಸ್ ದೊರೆಯು, ಸರ್ ಥಾಮಸ್ ರೋ ಎಂಬ ಅಧಿಕಾರಿಗೆ, ಅಫ್ಘಾನಿಸ್ತಾನದ ಜೊತೆಗೆ ಭಾರತದ ಬಹು ಭಾಗವನ್ನು ಆಳುತ್ತಿದ್ದ ಮೊಘಲ್ ಸಾಮ್ರಾಜ್ಯದ ಜಹಾಂಗೀರನನ್ನು ಭೇಟಿಯಾಗಲು ಆದೇಶಿಸಿದನು. ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ನೆಲೆಸಿ, ಉದ್ದಿಮೆಗಳನ್ನು ಸ್ಥಾಪಿಸಲು ಅನುವಾಗುವಂತೆ ವಿಶೇಷ ಹಕ್ಕುಗಳನ್ನು ಪಡೆಯುವ ವಾಣಿಜ್ಯ ಒಪ್ಪಂದವೊಂದರ ವ್ಯವಸ್ಥೆಯೇ ಈ ಭೇಟಿಯ ಉದ್ದೇಶವಾಗಿದ್ದಿತು. ಇದಕ್ಕೆ ಬದಲಾಗಿ ಕಂಪನಿಯು ಬಾದಷಾಹನಿಗೆ, ಯೂರೋಪಿನ ವಿಶೇಷ ವಸ್ತುಗಳನ್ನು ಒದಗಿಸುವುದಕ್ಕೆ ಮುಂದಾಯಿತು. ಈ ಭೇಟಿಯು ಅತ್ಯಂತ ಫಲಪ್ರದವಾಗಿ, ಜಹಾಂಗೀರನು ಸರ್ ಥಾಮಸನ ಮೂಲಕವಾಗಿ ಇಂಗ್ಲೆಂಡಿನ ದೊರೆಗೆ ಪತ್ರವೊಂದನ್ನು ಬರೆದನು.

ವಿಸ್ತರಣೆ[ಬದಲಾಯಿಸಿ]

Robert Clive's victory at the Battle of Plassey established the Company as a military as well as a commercial power.

ಮುಘಲ್ ಸಾಮ್ರಾಜ್ಯ ದ ಪತನವು ಕಂಪನಿಯ ಕಾರ್ಯವಿಸ್ತರಣೆಗೆ ಅನುವು ಮಾಡಿಕೊಟ್ಟಿತು. ಈ ಸಾಮ್ರಾಜ್ಯವು ಹತ್ತು ಹಲವು ಸಣ್ಣ ಪ್ರಾಂತ್ಯಗಳಿಗೆ ಹಂಚಿಹೋಗಿ ತಮ್ಮತಮ್ಮಲ್ಲೇ ಹೋರಾಡುತ್ತಿದ್ದುದು ಇದಕ್ಕೆ ಸಹಾಯಕವಾಗಿದ್ದಿತು. ೧೭೫೭ರಲ್ಲಿ ಕಂಪನಿಯು ಬಂಗಾಳನವಾಬ್ ಸಿರಾಜ್ ಉದ್ ದೌಲಾ ನ ವಿರುದ್ಧ ಯುದ್ಧ ಸಾರಿತು. ರಾಬರ್ಟ್ ಕ್ಲೈವ್ ನಾಯಕತ್ವದಲ್ಲಿ ಕಂಪನಿಯ ಸೇನೆಯು ಭಾರತೀಯ ಮಿತ್ರಸೇನೆಗಳೊಂದಿಗೆ ಕೂಡಿ ಪ್ಲಾಸಿ ಕದನ ದಲ್ಲಿ ೨೩ ಜೂನ್ ೧೭೫೭ ರಂದು ನವಾಬನ ಪೂರ್ವ ಸೇನಾಪತಿ ಮೀರ್ ಜಾಫರ್ ನ ದ್ರೋಹದಿಂದ ಬಂಗಾಳದ ನವಾಬನನ್ನು ಸೋಲಿಸಿತು. ಈ ಜಯದಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ವಾಣಿಜ್ಯವಾಗಿ ಅಲ್ಲದೇ ಸೈನ್ಯಶಕ್ತಿಯಾಗಿ ಹೊರಹೊಮ್ಮಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ಆರಂಭ ಮಾಡಿತು. ಬಂಗಾಳದ ಖಜಾನೆಯಿಂದ ದೊರೆತ ಐಶ್ವರ್ಯದಿಂದ ಕಂಪನಿಯು ತನ್ನ ಸೇನಾ ಶಕ್ತಿಯನ್ನು ಬಹಳಷ್ಟು ಬೆಳೆಸಿಕೊಂಡು ತನ್ನ ಸಂಸ್ಥಾನವನ್ನು ಹಿಗ್ಗಿಸಿಕೊಂಡಿತು. ಹೀಗೆ ಸಂಪಾದಿಸಿದ ಬಲಿಷ್ಠ ಸೇನೆಯ ಬಲದಿಂದ ಭಾರತದ ಬಹಳಷ್ಟು ಪ್ರದೇಶವನ್ನು ಆಕ್ರಮಿಸಿತು.

ಕಂಪನಿಯು ಪ್ರಾದೇಶಿಕ ಪಾಳೇಗಾರರ (?) ವಿರುದ್ಧ ಬಹಳಷ್ಟು ಯುದ್ಧಗಳನ್ನು ಸಾರಿತು. ಇವುಗಳಲ್ಲಿ ಅತಿ ಕಷ್ಟಕರವಾಗಿದ್ದು ನಾಲ್ಕು ಆಂಗ್ಲ-ಮೈಸೂರು ಕದನಗಳು . ೧೭೬೬ ಮತ್ತು ೧೭೯೯ ರ ನಡುವೆ ದಕ್ಷಿಣ ಭಾರತಮೈಸೂರು ಸಂಸ್ಥಾನಹೈದರಾಲಿ ತದನಂತರ ಅವನ ಮಗ ಟಿಪ್ಪು ಸುಲ್ತಾನ್ ("ಮೈಸೂರಿನ ಹುಲಿ") ವಿರುದ್ಧ ಈ ಕದನಗಳು ನಡೆದವು. ಟಿಪ್ಪು ಸುಲ್ತಾನನು ಕಾಳಗದಲ್ಲಿ ಕ್ಷಿಪಣಿಗಳನ್ನು ಪ್ರಯೋಗ ಮಾಡಿದನು. ನಾಲ್ಕನೇ ಮೈಸೂರು ಯುದ್ಧ ದಲ್ಲಿ ಬ್ರಿಟಿಷ್ ಮತ್ತು ಮೈಸೂರಿನ ವಿರೋಧಿಗಳ ಜಂಟಿ ಪಡೆಗಳಿಂದಷ್ಟೇ ಮೈಸೂರನ್ನು ಸೋಲಿಸಲಾಯಿತು. ಈ ಕಾರಣದಿಂದಾಗಿ ಹೈದರಾಲಿ ಮತ್ತು ವಿಶೇಷತಃ ಟಿಪ್ಪು ಸುಲ್ತಾನ ರನ್ನು ವೀರ ಹೋರಾಟಗಾರರೆಂದು ನೆನಪಿಸಿಕೊಳ್ಳಲಾಗುತ್ತದೆ. ಮೈಸೂರಿನ ಕ್ಷಿಪಣಿ ತಂತ್ರಜ್ನಾನವನ್ನು ಉಪಯೋಗಿಸಿ ಬ್ರಿಟಿಷರು ನಂತರ ಬಹಳಷ್ಟು ಯುದ್ಧಗಳಲ್ಲಿ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿ ಉಪಯೋಗಿಸಿದರು.

ಉತ್ತರ ಭಾರತದಲ್ಲಿ ಬಹಳಷ್ಟು ರಾಜ್ಯಗಳನ್ನು ಬ್ರಿಟಿಷರು ತಮ್ಮ ಸೇನಾ ಸಾಮರ್ಥ್ಯಗಳ ಹೊರತಾಗಿಯೂ ವಶಪಡಿಸಿಕೊಳ್ಳಲಾಗಲಿಲ್ಲ. ಈ ರಾಜ್ಯಗಳ ಆಂತರಿಕ ಕಲಹಗಳ ಉಪಯೋಗ ಪಡೆದುಕೊಂಡು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಈ ಪ್ರಾಂತ್ಯಗಳು ತನ್ನ ವಿರುದ್ಧ ಒಗ್ಗಟ್ಟಾಗಿರದಂತೆ ಕಂಪನಿ ನೋಡಿಕೊಂಡಿತು.

೧೮೫೦ರ ದಶಕದ ಕಾಲದಲ್ಲಿ ಕಂಪನಿಯು ಭಾರತ ಉಪಖಂಡದ ಮೇಲೆ ಪ್ರಭುತ್ವ ಸಾರಿತು. ಹೀಗೆ ವಾಣಿಜ್ಯ ಕಾರಣಗಳಿಗೆ ಕಾಲಿಟ್ಟ ಕಂಪನಿಯು ಅದಕ್ಕೂ ಮಿಗಿಲಾಗಿ ಒಂದು ರಾಷ್ಟ್ರದಂತೆ ಕಾರ್ಯ ನಿರ್ವಹಿಸಲು ಆರಂಭಿಸಿತು.

ಕಂಪನಿಯು ಚೀನಾದೊಂದಿಗೆ ಅಫೀಮಿನ ಅಕ್ರಮ ಮಾರಾಟದಲ್ಲಿ ತೊಡಗಿಸಿಕೊಂಡಿತ್ತು. ಇದರಿಂದಾಗಿ ಚೀನಾದ ಕಿಂಗ್ ದೊರೆಯ ಕೆಂಗಣ್ಣಿಗೆ ಗುರಿಯಾದ ಕಂಪನಿಯು, ಮುಂದೆ 1834-1860 ರ ನಡುವೆ ಎರಡು ಅಫೀಮು ಕದನಗಳನ್ನು ಎದುರಿಸಬೇಕಾಯಿತು. ಮೊದಲನೆಯ ಕದನದಲ್ಲಿನ ಕಂಪನಿಯ ವಿಜಯದ ಪರಿಣಾಮವಾಗಿ ಅದು ಹಾಂಗ್ ಕಾಂಗ್ನಲ್ಲಿ ಭದ್ರ ನೆಲೆ ಕಂಡುಕೊಂಡಿತು. ಇದೇ ಸಮಯದಲ್ಲಿ ಕಂಪನಿಯು ಏಷ್ಯಾ ಖಂಡದ ಇತರ ಅನೇಕ ರಾಷ್ಟ್ರಗಳೊಡನೆ ಸಂಘರ್ಷಕ್ಕಿಳಿಯಬೇಕಾಯಿತು. ಇವುಗಳಲ್ಲಿ ಮುಖ್ಯವಾದವೆಂದರೆ, 1839-1919ರ ನಡುವೆ ಅಫ್ಘಾನಿಸ್ತಾನದೊಂದಿಗೆ ನಡೆದ ಮೂರು ಅಂಗ್ಲೋ-ಆಫ್ಘಾನ್ ಯುದ್ಧಗಳು.

ಪತನ[ಬದಲಾಯಿಸಿ]

ಪ್ಲಾಸಿ ಕದನದಲ್ಲಿ ಕಂಪನಿಯ ಗೆಲುವಿನ ಒಂದು ಶತಮಾನದ ನಂತರ ೧೮೫೭ ರಲ್ಲಿ ಭಾರತೀಯ ಬಂಡಾಯ ಸಂಭವಿಸಿ, ಕಂಪನಿಯ ಆಳ್ವಿಕೆಯು ಮುಕ್ತಾಯ ಕಂಡಿತು. ಆ ಘಟನೆಯಲ್ಲಿ, ಅನೇಕ ರಾಜಕೀಯ ಸಂದರ್ಭಗಳಿಂದ ಉಂಟಾದ ರಾಜಕೀಯ ಅಶಾಂತಿಯ ನಂತರ , ಕಂಪನಿಯ ಭಾರತೀಯ ಸಿಪಾಯಿಗಳು ತಮ್ಮ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಸಶಸ್ತ್ರ ಬಂಡಾಯವನ್ನು ಆರಂಭಿಸಿದರು. ಈ ದಂಗೆಗೆ ಪ್ರಮುಖ ಕಾರಣಗಳಲ್ಲೊಂದೆಂದರೆ, ಕಂಪನಿಯು ಸೈನ್ಯದಲ್ಲಿ ಪರಿಚಯಿಸಿದ Pattern 1853 Enfield ರೈಫಲ್ ಗಳು. ಸಿಡಿಮದ್ದಿನ ಪುಡಿ ಹೊಂದಿದ ಕಾಗದದ ಕಾರತೂಸುಗಳು, ಪ್ರಾಣಿಗಳ ಕೊಬ್ಬಿನಿಂದ ಲೇಪಿತವಾಗಿದ್ದು, ಇವುಗಳನ್ನು ಉಪಯೋಗಿಸಲು ಬಾಯಿಯಿಂದ ಕಚ್ಚಿ ತೆಗೆಯಬೇಕಾಗಿದ್ದಿತು. ಆಕಳ ಕೊಬ್ಬನ್ನು ಸೇವಿಸುವದು ಹಿಂದು ಸೈನಿಕರಿಗೆ ನಿಷಿದ್ಧವಾಗಿದ್ದರೆ ಹಂದಿಯ ಕೊಬ್ಬು ಮುಸ್ಲಿಂ ಸೈನಿಕರಿಗೆ ನಿಷಿದ್ಧವಾಗಿತ್ತು. ಆಕಳ ಅಥವಾ ಹಂದಿಯ ಕೊಬ್ಬನ್ನು ಬಳಸುತ್ತಿಲ್ಲ ಎಂದು ಕಂಪನಿಯು ಸಾಧಿಸಿತಾದರೂ ,ವದಂತಿಯು ಹರಡಿ ಅವರ ಆದೇಶಗಳನ್ನು ಸ್ವೀಕರಿಸಲು ಮತ್ತು ಶಸ್ತ್ರಗಳನ್ನು ಬಳಸಲು ಅನೇಕ ಸಿಪಾಯಿಗಳು ನಿರಾಕರಿಸದರು. ದಂಗೆಯ ಮತ್ತೊಂದು ಪ್ರಮುಖ ಕಾರಣವೆಂದರೆ, ಮಂಗಳ ಪಾಂಡೆ ಎಂಬ ಭಾರತೀಯ ಸಿಪಾಯಿಯು, ಬ್ರಿಟಿಷ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದನೆಂಬ ಆರೋಪದ ಮೇಲೆ ಆತನನ್ನು ಗಲ್ಲಿಗೇರಿಸಿದುದು. ಸಿಪಾಯಿಗಳ ಮತೀಯ ಭಾವನೆಗಳನ್ನು ಕೆರಳಿಸಿದ ಈ ಹೊಸ ಕಾರತೂಸುಗಳಿಂದುಂಟಾದ ಅವಮಾನವೇ ಮಂಗಳ ಪಾಂಡೆಯ ದ್ವೇಷಕ್ಕೆ, ಹಲ್ಲೆಗೆ ಕಾರಣವಾಗಿರಬಹುದು. ಈ ಎಲ್ಲ ಅಂಶಗಳೂ ಭಾರತದ ಅನೇಕ ಪ್ರಾಂತ್ಯಗಳಲ್ಲಿ ಕಂಪನಿಯ ವಿರುದ್ಧ ಬಂಡಾಯಕ್ಕೆ ಎಡೆ ಮಾಡಿಕೊಟ್ಟಿತು. 1857ರ ಈ ಭಾರತೀಯ ಬಂಡಾಯವನ್ನೇ 'ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಗುರುತಿಸಲಾಗುತ್ತದೆ. ಇದರಿಂದಾಗಿ, ಭಾರತದಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯ ಕಾರ್ಯಭಾರವು ವಸ್ತುಶಃ ಕೊನೆಗೊಂಡಿತು. ಇದರ ನಂತರದ ಸುಮಾರು 90 ವರ್ಷಗಳಷ್ಟು ಕಾಲ, ಭಾರತವು ಬ್ರಿಟಿಷ್ ರಾಜಾಧಿಪತ್ಯದ ನೇರ ಆಳ್ವಿಕೆಯಡಿಯಲ್ಲಿದ್ದಿತು. ಭಾರತದಲ್ಲಿ ಬ್ರಿಟಿಷರ ನೇರ ಆಳಿಕೆಯ ಕಾಲಾವಧಿಯು ಬ್ರಿಟಿಷ್ ರಾಜ್ ಎಂದು ಹೆಸರಾಗಿದ್ದು , ಈಗ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮಯನ್ಮಾರ್ ಎಂದು ಹೆಸರಾಗಿರುವ ಪ್ರದೇಶಗಳನ್ನು ಬ್ರಿಟಿಷ್ ಭಾರತ ಎಂದು ಕರೆಯಲಾಗುತ್ತದೆ.

ಬ್ರಿಟಾನಿಯ ಶಾಂತಿ ಒಪ್ಪಂದದ ಕುಕ್ಕರಿಕೆ[ಬದಲಾಯಿಸಿ]

ಕೈಗಾರಿಕೀಕರಣದ ಮೊದಲ ರಾಷ್ಡ್ರ ವಾಗಿ, ಬ್ರಿಟನ್, ಜಗತ್ತಿನ ಬಹು ಅಂಶದ ಮೂಲ ಪದಾರ್ಥ ಹಾಗೂ ಅನೇಕ ಜಾಗತಿಕ ಮಾರುಕಟ್ಟೆಗಳಿಗೆ ತನ್ನ ಕಬಂಧ ಬಾಹುಗಳನ್ನು ಚಾಚಿದ್ದಿತು. ಆದರೆ 19ನೇ ಶತಮಾನದಲ್ಲಿ, ಇತರ ಅನೇಕ ರಾಷ್ಟ್ರಗಳಲ್ಲಿ ಕೈಗಾರಿಕೆಗಳು ಪ್ರವರ್ಧಮಾನಗೊಂಡು, ಬ್ರಿಟನ್ನಿನ ಸ್ವಾಮ್ಯ ಸ್ಥಿತಿಯು ಕ್ಷೀಣಿಸತೊಡಗಿತು. 1870ರ ಸುಮಾರಿಗೆ ಬ್ರಿಟನ್ನಿನಲ್ಲಿನ ಉತ್ಪಾದಕರು ಇತರ ರಾಷ್ಟ್ರಗಳ ಕೈಗಾರಿಕೆಗಳಿಂದ ವಿದೇಶದಲ್ಲಿ ಪೈಪೋಟಿ ಎದುರಿಸಬೇಕಾದ ಸಂದರ್ಭ ಒದಗಿಬಂದಿತು.

ಬ್ರಿಟಾನಿಯ, ಬ್ರಿಟನ್ನಿನ ಸಾಮ್ರಾಜ್ಯಶಾಹಿ ಶಕ್ತಿಯ ಪ್ರತೀಕವಾಗಿದ್ದಿತು.

ಜರ್ಮನಿ ಹಾಗೂ ಅಮೇರಿಕಾ ಸಂಯುಕ್ತ ರಾಷ್ಟ್ರಗಳಲ್ಲಿ ಕೈಗಾರಿಕೀಕರಣವು ಅತ್ಯಂತ ವೇಗವಾಗಿ ಪ್ರಗತಿಗೊಂಡು, ಬ್ರಿಟನ್ ಹಾಗೂ ಫ್ರಾನ್ಸಿನ ಪುರಾತನ ಅರ್ಥವ್ಯವಸ್ಥೆಗಳನ್ನು ಹಿಂದಿಕ್ಕಿದವು. 1870ರ ಸುಮಾರಿಗೆ, ಜರ್ಮನಿಯ ಜವಳಿ ಮತ್ತು ಲೋಹದ ಕಾರ್ಖಾನೆಗಳು, ತಮ್ಮ ನಿರ್ವಹಣೆಯಲ್ಲಿ ಹಾಗೂ ಉತ್ಪಾದನಾ ಗುಣಮಟ್ಟದಲ್ಲಿ, ಬ್ರಿಟನ್ನಿನ ಉದ್ದಿಮೆಗಳ ಮೇಲೆ ತಮ್ಮ ಮೇಲುಗೈ ಸಾಧಿಸಿದ್ದವು. ಆ ಶತಮಾನದ ಅಂಚಿಗೆ, ಜರ್ಮನಿಯ ಲೋಹ ಹಾಗೂ ತಂತ್ರಜ್ಞಾನದ ಕಾರ್ಖಾನೆಗಳು ಎಷ್ಟು ಮುಂದುವರೆದಿದ್ದವು ಎಂದರೆ, ಅವು "ಜಗತ್ತಿನ ಹಳೆಯ ಕೈಸಾಲೆ"ಯ ಮುಕ್ತ ಮಾರುಕಟ್ಟೆಗೆ ಸಹ ಉತ್ಪನ್ನಗಳನ್ನು ತಯಾರಿಸತೊಡಗಿದವು.

ವಿತ್ತೀಯ, ವಿಮೆ ಹಾಗೂ ನೌಕಾ ಸೇವೆಗಳ ಅದೃಶ್ಯ ರಫ್ತಿನಿಂದಾಗಿ ಬ್ರಿಟನ್ನಿನ ವಾಣಿಜ್ಯವು ಪೂರ್ತಿ ಕುಸಿಯದಿದ್ದರೂ, 1880ರಲ್ಲಿ ಅದು ಹೊಂದಿದ್ದ ವಿಶ್ವ ವಾಣಿಜ್ಯದ ಕಾಲು ಪಾಲು, 1913ರ ಸುಮಾರಿಗೆ ಆರನೆಯ ಒಂದು ಭಾಗಕ್ಕೆ ಇಳಿಮುಖವಾಗಿದ್ದಿತು. ಹೊಸದಾಗಿ ಕೈಗಾರಿಕೀಕರಣ ಹೊಂದುತ್ತಿದ್ದ ರಾಷ್ಟ್ರಗಳಿಂದ ಮಾತ್ರವಲ್ಲದೆ, ಅಲ್ಪ ವಿಕಸಿತ ರಾಷ್ಟ್ರಗಳಿಂದಲೂ ಸಹ ಬ್ರಿಟನ್ ಪೈಪೋಟಿ ಎದುರಿಸಬೇಕಾಯಿತು. ಭಾರತ, ಚೀನಾ, ದಕ್ಷಿಣ ಅಮೇರಿಕ ಹಾಗೂ ಆಫ್ರಿಕಾದ ಕರಾವಳಿಗಲ್ಲಿನ ವಾಣಿಜ್ಯದ ಮೇಲಿನ ತನ್ನ ಬಹುಕಾಲದ ಏಕಸ್ವಾಮ್ಯವನ್ನೂ ಸಹ ಕಳೆದುಕೊಳ್ಳಬೇಕಾಯಿತು.

ನಿರ್ವಸಾಹತಿ ಮತ್ತು ಪತನ[ಬದಲಾಯಿಸಿ]

ಬ್ರಿಟಿಷ್ ವಸಾಹತುಗಳಲ್ಲಿ ಬ್ರಿಟಿಷರ ವಿರುದ್ದ ಸಂಗ್ರಾಮ ಹಾಗೂ ಇಪ್ಪತ್ತನೆಯ ಶತಮಾನದ ಬದಲಾದ ಆರ್ಥಿಕ ಪರಿಸ್ತಿತಿಗಳಿಂದ, ಬ್ರಿಟಿಷರಿಗೆ ತಮ್ಮ ಸಾಮ್ರಾಜ್ಯವನ್ನು ನಿಭಾಯಿಸಲು ಕಷ್ಟವಾಗತೊಡಗಿತು. ಬ್ರಿಟೀಷ್ ಸಾಮ್ರಾಜ್ಯದ ಅವಸಾನ ಎರಡನೆಯ ಮಹಾಯುದ್ಧದ ಮೊದಲಾಗುವುದರಲ್ಲಿ ಆರಂಭವಾಯಿತು. ಬ್ರಿಟಿಷರು ಭಾರತದ ಸ್ವಾತಂತ್ರ ಸಂಗ್ರಾಮದ ಹೋರಾಟಗಾರರೊಂದಿಗೆ ಮಾಡಿಕೊಂಡ ಒಪ್ಪಂದ ಇದರ ಅವಸಾನದ ಮೊದಲ ಮೈಲಿಗಲ್ಲು.ಎರಡನೆಯ ಮಹಾ ಯುದ್ಧದ ನಂತರ ಭಾರತ ಸ್ವತಂತ್ರವಾಯಿತು. ಭಾರತದ ಮಾದರಿಯಲ್ಲಿ ಮುಂದಿನ ಎರಡು ದಶಕಗಳಲ್ಲಿ ಬ್ರಿಟಿಷರ ಉಳಿದ ವಸಾಹತುಗಳು ಸಹ ಸ್ವತಂತ್ರವಾಗುತ್ತವೆ.

೧೯೪೭ರ ಸ್ವಾತಂತ್ರ್ಯ ಭಾರತೀಯರ ನೂರಾರು ವರುಷಗಳ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸುಖಾಂತ್ಯ ನೀಡಿತು. ಆದರೆ ಭಾರತದ ವಿಭಜನೆ ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಯಿತು. ೧೯೫೦ರಲ್ಲಿ ಭಾರತ ಗಣರಾಜ್ಯ ವಾಯಿತು , ಬ್ರಿಟನ್ ಹಾಗೂ ಉಳಿದ ರಾಷ್ಟ್ರಗಳು ಭಾರತಕ್ಕೆ ಮಾನ್ಯತೆ ನೀಡಿ ಕಾಮನ್ವೆಲ್ತ್ ಸದಸ್ಯ ರಾಷ್ಟ್ರವನ್ನಾಗಿ ಗೌರವಿಸಿದವು

ಉಲ್ಲೇಖಗಳು[ಬದಲಾಯಿಸಿ]

  1. James Truslow Adams, "'On the Term 'British Empire,'" American Historical Review, 22 (1927), 485–9; Armitage pp 174-5
  2. Here: A Biography of the New American Continent Anthony DePalma, Page 196

ಬಾಹ್ಯಪುಟಗಳು[ಬದಲಾಯಿಸಿ]