ಬೇವು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೇವು
ಬೇವಿನ ಮರ
ಬೇವಿನ ಮರ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ಗಣ: ಸಪಿಂಡೆಲ್ಸ್
ಕುಟುಂಬ: ಮೆಲಿಯೆಸಿ
ಜಾತಿ: ಅಜಡಿರಕ್ಟ (Azadirachta)
ಪ್ರಜಾತಿ: A. indica
ದ್ವಿಪದಿ ನಾಮ
ಅಜಡಿರಕ್ಟ ಇಂಡಿಕ (Azadirachta indica)

ಬೇವು(ಒಳ್ಳೆ ಬೇವು) ಭಾರತ ಉಪಖಂಡದ ಮೂಲವಾಸಿ.ಇದು ಭಾರತದ ಜನಜೀವನದಲ್ಲಿ ಹಾಸುಹೊಕ್ಕಾದ ಮರಗಳಲ್ಲಿ ಒಂದು.ತೀವ್ರ ತರದ ಬರಗಾಲದಲ್ಲಿಯೂ ಬದುಕಿ,ಜನೋಪಯೋಗಿ ಎನಿಸಿದ ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ (Azadirachta Indica)ಎಂಬುದು ಸಸ್ಯಶಾಸ್ತ್ರೀಯ ಹೆಸರು.'ವೆಪ್ಪಮ್' ಎಂದು ತಮಿಳುಭಾಷೆಯಲ್ಲಿ,'ವೇಪ' ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ.ಆಂಗ್ಲ ಭಾಷೆಯಲ್ಲಿ 'ನೀಮ್'ಎಂದ ಹೆಸರಿದೆ.

ಚಿತ್ರ:Neemleaf.JPG
ಹೂವು ಮತ್ತು ಹಣ್ಣು (ಹಂಗರಕಿ,ಧಾರವಾಡ).


ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ.ದಟ್ಟವಾದ ಹಂದರ.ತೊಗಟೆ ಸಾದಾರಣ ಮಂದ,ಕರಿಬೂದು ಬಣ್ಣವಿರುತ್ತದೆ.ದಾರುವು ಕೆಂಪು ಕಂದು ಬಣ್ಣವಿದ್ದು,ಸೀಳಿಕೆಗಳಿರುತ್ತವೆ.

ಉಪಯೋಗಗಳು[ಬದಲಾಯಿಸಿ]

ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ.ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ.ಇದರ ದಾರುವು ಬಹು ಉಪಯೋಗಿ.ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ.ಗೃಹ ನಿರ್ಮಾಣ,ಪಿಠೋಪಕರಣ ಮುಂತಾದ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ.ತೊಗಟೆಯಿಂದ ಬರುವ ಅಂಟು,ಹೂವು,ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ.ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ.ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.

ಅಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"http://kn.wikipedia.org/w/index.php?title=ಬೇವು&oldid=318450" ಇಂದ ಪಡೆಯಲ್ಪಟ್ಟಿದೆ