ಬೆಲಾರೂಸ್‌ನ ಭಾಷೆ
ವಿಕಿಪೀಡಿಯ ಇಂದ
| ಬೆಲಾರೂಸಿನ ಭಾಷೆ беларуская мова ಬ್ಯೆಲರುಸ್ಕಾಯ ಮೊವ
|
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಬೆಲಾರೂಸ್, ಪೊಲೆಂಡ್, in 14 other countries | |
| ಒಟ್ಟು ಮಾತನಾಡುವವರು: |
೪-೯ ಮಿಲಿಯನ್ | |
| ಶ್ರೇಯಾಂಕ: | 79 | |
| ಭಾಷಾ ಕುಟುಂಬ: | Indo-European ಬಾಲ್ಟೊ-ಸ್ಲಾವ್ ಸ್ಲಾವ್ ಪೂರ್ವ ಸ್ಲಾವ್ ಬೆಲಾರೂಸಿನ ಭಾಷೆ |
|
| ಬರವಣಿಗೆ: | ಸಿರಿಲಿಕ್, ಲಾಟಿನ್ | |
| ಅಧಿಕೃತ ಸ್ಥಾನಮಾನ | ||
| ಅಧಿಕೃತ ಭಾಷೆ: | ಯಾವುದೂ ಇಲ್ಲ | |
| ನಿಯಂತ್ರಿಸುವ ಪ್ರಾಧಿಕಾರ: |
National Academy of Sciences of Belarus | |
| ಭಾಷೆಯ ಸಂಕೇತಗಳು | ||
| ISO 639-1: | be | |
| ISO 639-2: | bel | |
| ISO/FDIS 639-3: | bel | |
|
|
||
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ಬೆಲಾರೂಸ್ನ ಭಾಷೆಯು (беларуская мова) ಬೆಲಾರೂಸ್‌ನ ಜನರ ಭಾಷೆ ಮತ್ತು ಬೆಲಾರೂಸ್ ಹಾಗೂ ವಿದೇಶದಲ್ಲಿ, ಮುಖ್ಯವಾಗಿ ರಷ್ಯಾ, ಯುಕ್ರೇನ್ ಹಾಗೂ ಪೋಲಂಡ್‌ಗಳಲ್ಲಿ ಬಳಸಲ್ಪಡುತ್ತದೆ. ಬೆಲಾರೂಸ್ ೧೯೯೨ರಲ್ಲಿ ಸೋವಿಯಟ್ ಒಕ್ಕೂಟದಿಂದ ಸ್ವಾತಂತ್ರ್ಯವನ್ನು ಗಳಿಸುವುದಕ್ಕಿಂತ ಮುಂಚೆ, ಈ ಭಾಷೆಯು (ಜನಾಂಗೀಯತೆ ಮತ್ತು ದೇಶದ ಹೆಸರುಗಳಿಗೆ ಅನುಗುಣವಾಗಿ) "ಬಾಯಲೋರಷ್ಯನ್" ಅಥವಾ "ಬೆಲೋರಷ್ಯನ್" ಎಂದು ಕರೆಯಲ್ಪಡುತ್ತಿತ್ತು. ಅದು ಪೂರ್ವ ಸ್ಲಾವ್ ಭಾಷೆಗಳ ಗುಂಪಿಗೆ ಸೇರಿದೆ ಮತ್ತು ಆ ಗುಂಪಿನ ಇತರ ಅಂಗಗಳೊಂದಿಗೆ ಹಲವು ವ್ಯಾಕರಣ ಹಾಗೂ ಶಬ್ದ ಸಂಬಂಧಿತ ಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.