ಬರ್ಲಿನ್ ಗೋಡೆ
ಬರ್ಲಿನ್ ಗೋಡೆ (German: [Berliner Mauer] Error: {{Lang}}: text has italic markup (help)) ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ (GDR, ಪೂರ್ವ ಜರ್ಮನಿ)ಯು ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯಾಗಿದ್ದು, ಇದು ಪಶ್ಚಿಮ ಬರ್ಲಿನ್ ನಗರವನ್ನು ಸಂಪೂರ್ಣವಾಗಿ ಸುತ್ತುವರೆದು, ಅದನ್ನು ಪಶ್ಚಿಮ ಜರ್ಮನಿಯಿಂದ ಬೇರಾಗಿಸಿತ್ತು ಮತ್ತು ಪೂರ್ವ ಬರ್ಲಿನ್ ಅನ್ನು ಒಳಗೊಂಡ ನಂತರ ಇದನ್ನು ಕೆಡವಲಾಯಿತು. ಈ ಗೋಡೆಯು ಬೃಹತ್ ಕಾಂಕ್ರೀಟ್ ಗೋಡೆಗಳುದ್ದಕ್ಕೂ ಹಲವಾರು ಕಾವಲುಗೋಪುರಗಳನ್ನು ಹೊಂದಿದ್ದು ಒಂದು ದೊಡ್ಡ ಕ್ಷೇತ್ರವನ್ನು ಸುತ್ತುವರೆದಿತ್ತು (ನಂತರ ಇದನ್ನು "ಡೆತ್ ಸ್ಟ್ರಿಪ್" ಎಂದು ಕರೆಯಲಾಯಿತು) ಮತ್ತು ಇದು ವಾಹನಗಳನ್ನು ಪ್ರತಿಬಂಧಿಸುವ ಕಂದಕಗಳು, "ಫಕೀರನ ಹಾಸಿಗೆಗಳು" ಮತ್ತು ಇನ್ನಿತರ ಭದ್ರತಾವ್ಯವಸ್ಥೆಗಳನ್ನೊಳಗೊಂಡಿತ್ತು.
ಇತಿವೃತ್ತ
[ಬದಲಾಯಿಸಿ]- ಪ್ರತ್ಯೇಕವೂ ಹೆಚ್ಚು ಉದ್ದವೂ ಆಗಿದ್ದ ಜರ್ಮನ್ ಒಳ ಗಡಿಯು (the IGB) ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ನಡುವಿನ ಗಡಿಯನ್ನು ಬೇರ್ಪಡಿಸುತ್ತಿತ್ತು. ಎರಡೂ ಗಡಿಗಳುಪಾಶ್ಚಿಮಾತ್ಯ ಯುರೋಪ್ ಮತ್ತು ಪೌರ್ವಾತ್ಯ ಬಣಗಳ ನಡುವಿನ ಕಬ್ಬಿಣದ ತೆರೆಯ ಸಂಕೇತವಾದವು. ಗೋಡೆಯ ನಿರ್ಮಾಣಕ್ಕೂ ಮೊದಲು, 3.5 ಮಿಲಿಯನ್ ಪೂರ್ವ ಜರ್ಮನರು ಪೌರ್ವಾತ್ಯ ಬಣ ವಲಸೆ ಪ್ರತಿಬಂಧದಿಂದ ತಪ್ಪಿಸಿಕೊಂಡು GDRನಿಂದ ಪಲಾಯನ ಮಾಡಿದ್ದರು, ಇವರಲ್ಲಿ ಬಹಳಷ್ಟು ಜನರು ಪೂರ್ವ ಜರ್ಮನಿಯ ಗಡಿಯನ್ನು ದಾಟಿ ಪಶ್ಚಿಮ ಜರ್ಮನಿಗೆ ಹೋಗಿದ್ದರು.
- ಪಶ್ಚಿಮ ಬರ್ಲಿನ್‌ನಿಂದ ವಲಸೆ ಬಂದವರು ಪಶ್ಚಿಮ ಜರ್ಮನಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಇತರ ಯುರೋಪಿಯನ್ ದೇಶಗಳಿಗೆ ತೆರಳಬಹುದಾಗಿತ್ತು. 1961ರಿಂದ 1989ರವರೆಗೆ ಅಸ್ತಿತ್ವದಲ್ಲಿದ್ದ ಈ ಗೋಡೆಯು ಈ ರೀತಿಯ ಎಲ್ಲ ವಲಸೆಯನ್ನೂ ನಿಲ್ಲಿಸಿದ್ದಲ್ಲದೆ, ಕಾಲು ಶತಮಾನಕ್ಕೂ ಹೆಚ್ಚಿನ ಕಾಲದವರೆಗೆ GDR ಅನ್ನು ಪಶ್ಚಿಮ ಜರ್ಮನಿಯಿಂದ ಪ್ರತ್ಯೇಕವಾಗಿರಿಸಿತ್ತು.[೧]
- ಅದರ ನಿರ್ಮಾಣದ ನಂತರ ಸುಮಾರು 5,000 ಜನರು ಗೋಡೆಯನ್ನು ದಾಟಲು ಪ್ರಯತ್ನಿಸಿದರು ಮತ್ತು ಇಂತಹ ಪ್ರಯತ್ನಗಳ ಸಂದರ್ಭಗಳಲ್ಲಿ ಸತ್ತವರ ಸಂಖ್ಯೆಯನ್ನು 100ರಿಂದ 200 ಎಂದು ಊಹೆ ಮಾಡಲಾಗಿದೆ. ಬರ್ಲಿನ್ ಗೋಡೆಯನ್ನು ಅಧಿಕೃತವಾಗಿ "ಫ್ಯಾಸಿಸ್ಟ್-ವಿರೋಧಿ ಸುರಕ್ಷಾ ಗೋಡೆ" (German: [Antifaschistischer Schutzwall] Error: {{Lang}}: text has italic markup (help)) ಎಂದು ಕಮ್ಯುನಿಸ್ಟ್ GDR ಅಧಿಕಾರಿಗಳು ಕರೆದರು, ಮತ್ತು ಇದು ನೆರೆಯ ಪಶ್ಚಿಮ ಜರ್ಮನಿಯು ಸಂಪೂರ್ಣವಾಗಿ ನಾಜೀ-ಮುಕ್ತವಾಗಿಲ್ಲವೆಂಬುದನ್ನು ಸೂಚಿಸುವ ಸಲುವಾಗಿತ್ತು.
- ಪಶ್ಚಿಮ ಬರ್ಲಿನ್ ನಗರದ ಸರ್ಕಾರವು ಅದನ್ನು ಕೆಲವೊಮ್ಮೆ "ವಾಲ್ ಆಫ್ ಶೇಮ್(ಲಜ್ಜಾಸ್ಪದ ಗೋಡೆ)"– ಎಂದು ಕರೆಯುತ್ತಿದ್ದರು. ಈ ಪದವನ್ನು ಮೇಯರ್ ವಿಲ್ಲೀ ಬ್ರ್ಯಾಂಡ್‌ಟ್– ಗೋಡೆಯು ಚಲನೆಯ ಸ್ವಾತಂತ್ರ್ಯವನ್ನು ಪ್ರತಿಬಂಧಿಸಿರುವುದನ್ನು ವಿರೋಧಿಸಿ ಮಾಡಿದ ಭಾಷಣದಲ್ಲಿ ಪ್ರಥಮ ಬಾರಿಗೆ ಬಳಸಿದರು.
- 1989ರಲ್ಲಿ, ಬ್ಲಾಕ್‌ನ ನಿರಂಕುಶ ವ್ಯವಸ್ಥೆಯ ಉದಾರೀಕರಣಕ್ಕೆ ಸಂಬಂಧಿಸಿದಂತೆ ಪೌರ್ವಾತ್ಯ ಬಣದ ರಾಜಕೀಯ ಪರಿಸ್ಥಿತಿಯಲ್ಲಿ ಹಲವಾರು ಸರಣಿರೂಪದ ತೀವ್ರಗಾಮಿ ಬದಲಾವಣೆಗಳು ಉಂಟಾದವು. ನೆರೆಯ ಪೋಲಂಡ್ ಮತ್ತು ಹಂಗರಿಗಳಲ್ಲಿ ಸೋವಿಯೆತ್-ಪರ ರಾಜಕೀಯ ಸರ್ಕಾರಗಳ ಕುಸಿತದ ನಂತರ ಉಂತಾದ ಹಲವಾರು ವಾರಗಳವರೆಗಿನ ಸ್ಥಳೀಯ ಪೌರ ಅಶಾಂತಿಯ ನಂತರ, ಪೂರ್ವ ಜರ್ಮನ್ ಸರ್ಕಾರವು ನವೆಂಬರ್ 9, 1989ರಂದು ಎಲ್ಲಾ GDR ನಾಗರಿಕರೂ ಕೂಡ ಪಶ್ಚಿಮ ಜರ್ಮನಿ ಮತ್ತು ಪಶ್ಚಿಮ ಬರ್ಲಿನ್‌ಗೆ ಭೇಟಿ ನೀಡಬಹುದೆಂದು ಘೋಷಿಸಿತು.
- ಉತ್ಸವದ ವಾತಾವರಣದಲ್ಲಿ ಪೂರ್ವ ಜರ್ಮನರ ಹಲವಾರು ಗುಂಪುಗಳು ಗಡಿಯನ್ನು ದಾಟಿ, ಗೋಡೆಯನ್ನು ಹತ್ತಿ ಪಶ್ಚಿಮ ಜರ್ಮನಿಗೆ ಧಾವಿಸಿ ಅಲ್ಲಿನ ಸಡಗರದ ಆಚರಣೆಗಳಲ್ಲಿ ಪಾಲ್ಗೊಂಡರು. ಮುಂದಿನ ಹಲವು ವಾರಗಳವರೆಗೆ ಆನಂದಾತಿಶಯದಲ್ಲಿ ಸಾರ್ವಜನಿಕರು ಮತ್ತು ಸ್ಮರಣೆಯ ವಸ್ತುಗಳ ಅನ್ವೇಷಕರು ಗೋಡೆಯ ಭಾಗಗಳನ್ನು ಕೆತ್ತಿಕೊಂಡು ಹೋದರು;
- ನಂತರದ ದಿನಗಳಲ್ಲಿ ಸರ್ಕಾರಗಳು ಔದ್ಯಮಿಕ ಸಲಕರಣೆಗಳನ್ನು ಬಳಸಿಕೊಮ್ಡು ಗೋಡೆಯ ಉಳಿದ ಭಾಗಗಳನ್ನು ತೆಗೆದುಹಾಕಲು ಬಳಸಿಕೊಂದವು. ಬರ್ಲಿನ್ ಗೋಡೆಯ ಪತನವು ಜರ್ಮನ್ ಮರು-ಏಕೀಕರಣಕ್ಕೆ ಕಾರಣವಾಯಿತು. ಇದು ಅಕ್ಟೋಬರ್ 3, 1990ರಂದು ಅಧಿಕೃತವಾಯಿತು.
ಹಿನ್ನೆಲೆ
[ಬದಲಾಯಿಸಿ]ಯುದ್ಧಾನಂತರದ ಜರ್ಮನಿ
[ಬದಲಾಯಿಸಿ]- ಯುರೋಪಿನಲ್ಲಿ ಎರಡನೇ ವಿಶ್ವಯುದ್ಧದ ಸಮಾಪ್ತಿಯಾದ ನಂತರ, ಓಡರ್-ನೀಸ್ ರೇಖೆಯ ಪಶ್ಚಿಮಭಾಗಕ್ಕಿದ್ದ ಬಾಕಿ ಉಳಿದಿದ್ದ ನಾಜೀ ಜರ್ಮನಿಯನ್ನು (ಪಾಟ್ಸ್‌ಡ್ಯಾಮ್ ಒಪ್ಪಂದದ ಪ್ರಕಾರ)ನಾಲ್ಕು ವಿವಿಧ ಸುಪರ್ದುಗಳಿಗೊಳಪಟ್ಟ ವಲಯಗಳನ್ನಾಗಿ ವಿಭಾಗಿಸಲಾಯಿತು, ಮತ್ತು ಪ್ರತಿಯೊಂದು ಭಾಗವೂ ನಾಲ್ಕು ವಿವಿಧ ಮಿತ್ರಪಕ್ಷ ಬಲಗಳ ಅಧೀನದಲ್ಲಿದ್ದವು:
- ಇವು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಫ್ರ್ಯಾನ್ಸ್ ಮತ್ತು ಸೋವಿಯೆತ್ ಒಕ್ಕೂಟ. ಸೋವಿಯೆತ್ ವಲಯದ ಒಳಭಾಗದಲ್ಲಿದ್ದರೂ ಕೂಡ, ರಾಜಧಾನಿ ಬರ್ಲಿನ್ ಅನ್ನು ಅಲೈಡ್ ಕಂಟ್ರೋಲ್ ಕೌನ್ಸಿಲ್ನ ಪೀಠವಾಗಿದ್ದ ಕಾರಣದಿಂದ ಇದೇ ರೀತಿ ನಾಲ್ಕು ಕ್ಷೇತ್ರಗಳನ್ನಾಗಿ ವಿಭಜಿಸಲಾಯಿತು.[೨]
- ಎರಡು ವರ್ಷಗಳೊಳಗೇ ಸೋವಿಯೆತ್ ಮತ್ತು ಇತರ ಬಲಗಳ ನಡುವೆ ರಾಜಕೀಯ ಬಿರುಕುಗಳು ಹೆಚ್ಚಿದವು. ಇವುಗಳಲ್ಲಿ ಯುದ್ಧಾನಂತರದ ಜರ್ಮನಿಯನ್ನು ಪುರ್ನಿರ್ಮಾಣ ಮಾಡುವುದರ ಮೂಲಕ ಸ್ವಾವಲಂಬಿಯನ್ನಾಗಿ ಮಾಡಬೇಕೆಂಬುದರ ಬಗ್ಗೆ, ಮತ್ತು ಸೋವಿಯೆತ್‌ರು ಈಗಾಗಲೆ ನಿರ್ಮೂಲನ ಮಾಡಿದ ಉದ್ಯಮಗಳು, ಸರಕುಗಳು ಮತ್ತು ಸೌಕರ್ಯಗಳ ಸವಿಸ್ತಾರ ವಿವರಗಳನ್ನು ನೀಡಬೇಕೆಂಬುದರ ಬಗ್ಗೆ ಸೋವಿಯೆತ್‌ನವರು ಒಪ್ಪದಿದ್ದುದು ಕೂಡಾ ಶಾಮೀಲಾಗಿದ್ದವು.[೩]
- ಬ್ರಿಟನ್, ಫ್ರ್ಯಾನ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಬೆನೆಲಕ್ಸ್ ರಾಷ್ಟ್ರಗಳು ನಂತರದಲ್ಲಿ ರಾಷ್ಟ್ರದ ಸೋವಿಯೆತ್‌ನದಲ್ಲದ ವಿವಿಧ ವಲಯಗಳನ್ನು ಒಗ್ಗೂಡಿಸಿ ಒಂದು ವಲಯವನ್ನಾಗಿ ಮಾಡಿ ಪುನರ್ನಿರ್ಮಾಣ ಮಾಡುವ ಸಲುವಾಗಿ ಮತ್ತು ಮಾರ್ಷಲ್ ಪ್ಲ್ಯಾನ್ ಅನ್ನು ವಿಸ್ತರಿಸಲು ಅನುಮೋದನೆ ನೀಡುವ ಸಲುವಾಗಿ ಭೇಟಿಯಾದವು.
ಪೌರ್ವಾತ್ಯ ಬಣ ಮತ್ತು ಬರ್ಲಿನ್ ಏರ್‌ಲಿಫ್ಟ್
[ಬದಲಾಯಿಸಿ]- ಎರಡನೇ ವಿಶ್ವಯುದ್ಧದ ನಂತರ, ಸೋವಿಯೆತ್ ನಾಯಕ ಜೋಸೆಫ್ ಸ್ಟಾಲಿನ್ ತನ್ನ ಪಾಶ್ಚಿಮಾತ್ಯ ಗಡಿಯಲ್ಲಿ ಸೋವಿಯೆತ್‌ಗೆ ಅಧೀನವಾಗಿದ್ದ ದೇಶಗಳ ಸುರಕ್ಷಾ ಪಟ್ಟಿಯಾದ ಈಸ್ಟರ್ನ್ ಬ್ಲಾಕ್(ಪೌರ್ವಾತ್ಯ ಬಣ)ವನ್ನು ರೂಪಿಸಿದನು, ಇದು ಪೋಲಂಡ್, ಹಂಗರಿ ಮತ್ತು ಜೆಕೋಸ್ಲೊವಾಕಿಯಾವನ್ನು ಒಳಗೊಂಡಿದ್ದು, ಆತನು ನಿಶ್ಯಕ್ತವಾದ ಸೋವಿಯೆತ್ ಹತೋಟಿಯಲ್ಲಿದ್ದ ಜರ್ಮನಿಯ ಜತೆಗೇ ನಿರ್ವಹಿಸಬೇಕೆಂದು ಬಯಸುತ್ತಿದ್ದನು.[೪] 1945ರಷ್ಟು ಹಿಂದೆಯೇ ಸ್ಟಾಲಿನ್ನನು ಜರ್ಮನ್ ಕಮ್ಯುನಿಸ್ಟ್ ನಾಯಕರಿಗೆ ತಾನು ಬ್ರಿಟಿಷ್ ಆಕ್ರಮಿತ ವಲಯದ ಬ್ರಿಟಿಶ್ ಸ್ಥಾನಮಾನವನ್ನು ನಿಧಾನವಾಗಿ ಕುಂದಿಸಬೇಕೆಂದಿದ್ದ ಬಯಕೆಯನ್ನು ವ್ಯಕ್ತಪಡಿಸಿದನು, ಮತ್ತು ಯುನೈಟೆಡ್ ಸ್ಟೇಟ್ಸ್ ಒಂದೆರಡು ವರ್ಷಗಳ ಒಳಗಾಗಿ ಹಿಂದಕ್ಕೆ ಸರಿಯುವುದೆಂದೂ, ಸೋವಿಯೆತ್ ವಲಯದೊಳಗೆ ಕಮ್ಯುನಿಸ್ಟ್ ಹತೋಟಿಯಲ್ಲಿ ಏಕೀಕೃತ ಜರ್ಮನಿ ಬರುವ ಕಾಲ ದೂರವಿಲ್ಲವೆಂದು ಹೇಳಿದನು.[೫]
- ಸೋವಿಯೆತ್ ವಲಯದಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಪಕ್ಷದ ಮುಖ್ಯ ಜವಾಬ್ದಾರಿಯು ಸೋವಿಯೆತ್‌ನ ಆದೇಶಗಳನ್ನು ಆಡಳಿತ ವ್ಯವಸ್ಥೆ ಮತ್ತು ಬ್ಲಾಕ್‌ನ ಇತರ ಪಕ್ಷಗಳಿಗೆ ತಿಳಿಸುವುದು ಮತ್ತು ಈ ಉಪಕ್ರಮಗಳೆಲ್ಲ ತನ್ನವೇ ಎಂಬಂತೆ ನಟಿಸುವುದಾಗಿತ್ತು.[೬] ಸ್ವತ್ತುಗಳು ಮತ್ತು ಉದ್ಯಮಗಳನ್ನು ಪೂರ್ವ ಜರ್ಮನ್ ವಲಯದಲ್ಲಿ ರಾಷ್ಟ್ರೀಕೃತಗೊಳಿಸಲಾಯಿತು.[೭][೮]
- ಹೇಳಿಕೆಗಳು ಅಥವಾ ನಿರ್ಧಾರಗಳು ನೀಡಲಾದ ವಿವರಣೆಗಳಿಗಿಂತ ಬೇರೆ ದಾರಿ ಹಿಡಿದಲ್ಲಿ ಅಧಿಕೃತ ಛೀಮಾರಿಗಳು, ಮತ್ತು, ಸಾರ್ವಜನಿಕರ ಗಮನಕ್ಕೆ ಬೀಳದಂತಹ ವ್ಯಕ್ತಿಗಳಿಗೆ ಸೆರೆವಾಸ, ಚಿತ್ರಹಿಂಸೆ ಮತ್ತು ಸಾವುಗಳೇ ಮೊದಲಾದ ರೀತಿಯ ಶಿಕ್ಷೆಗಳನ್ನು ವಿಧಿಸಲಾಗುತ್ತಿದ್ದಿತು.[೬]
- ಮಾರ್ಕ್ಸಿಸಮ್-ಲೆನಿನಿಸಮ್ಗಳ ಸಿದ್ಧಾಂತಗಳನ್ನು ಬೋಧಿಸುವುದನ್ನು ಶಾಲಾಪಠ್ಯದಲ್ಲಿ ಕಡ್ಡಾಯಗೊಳಿಸಲಾಯಿತು, ಮತ್ತು ಇದು ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳು ಪಶ್ಚಿಮಕ್ಕೆ ಪಲಾಯನ ಮಾಡಲು ಕಾರಣವಾಯಿತು.ಪೂರ್ವ ಜರ್ಮನರು ಜನತೆಯ ಮೇಲೆ ಕಣ್ಣಿಡಲೋಸುಗ ರೂಪಿಸಿದ ವಿಸ್ತಾರವಾದ ರಾಜಕೀಯ ಪೊಲೀಸ್ ಸಲಕರಣೆಯು [೯] ಸೋವಿಯೆತ್ ರಹಸ್ಯ ಪೊಲೀಸ್ SMERSH ಅನ್ನು ಕೂಡ ಒಳಗೊಂಡಿತ್ತು.[೭]
- 1948ರಲ್ಲಿ, ಮರುನಿರ್ಮಾಣ ಮತ್ತು ಒಂದು ಹೊಸ ಜರ್ಮನ್ ಕರೆನ್ಸಿಯ ಬಗೆಗಿನ ವಿವಾದಗಳ ನಂತರ, ಸ್ಟಾಲಿನ್ ಬರ್ಲಿನ್ ದಿಗ್ಬಂಧವನ್ನು ಹಾಕುವುದರ ಮೂಲಕ ಪಶ್ಚಿಮ ಬರ್ಲಿನ್‌ನಲ್ಲಿ ಆಹಾರ, ಸಾಮಗ್ರಿಗಳು ಮತ್ತು ಸರಬರಾಜುಗಳು ಬಂದಿಳಿಯುವುದಕ್ಕೆ ತಡೆಹಾಕಿದನು.[೧೦] ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರ್ಯಾನ್ಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಇನ್ನೂ ಹಲವು ರಾಷ್ಟ್ರಗಳು ಮಹಾ "ಬರ್ಲಿನ್ ಏರ್‌ಲಿಫ್ಟ್"(ಬರ್ಲಿನ್ ವಾಯು ಕಾರ್ಯಾಚರಣೆ)ಯನ್ನು ಆರಂಭಿಸಿ ಪಶ್ಚಿಮ ಬರ್ಲಿನ್‌ಗೆ ಆಹಾರ ಮತ್ತಿತರ ಸಾಮಗ್ರಿಗಳನ್ನು ಸರಬರಾಜು ಮಾಡತೊಡಗಿದವು.[೧೧]
- ಸೋವಿಯೆತ್‌ನವರು ಪಶ್ಚಿಮದ ನೀತಿಯ ಬದಲಾವಣೆಯ ವಿರುದ್ಧ ಸಾರ್ವಜನಿಕ ಬಾಂಧವ್ಯ ಪ್ರಚಾರಕಾರ್ಯವನ್ನು ಆರಂಭಿಸಿದರು. 1948ರ ಚುನಾವಣೆಗಳನ್ನು ಕಮ್ಯುನಿಸ್ಟರು ಭಂಗಪಡಿಸಲು ಯತ್ನಿಸಿದರಾದರೂ ಇದರಿಂದ ಭಾರೀ ನಷ್ಟಗಳನ್ನನುಭವಿಸಬೇಕಾಯಿತು,[೧೨] ಮತ್ತು ಇದೇ ಹೊತ್ತಿಗೆ ಸುಮಾರು 300,000ದಷ್ಟು ಬರ್ಲಿನ್‌ನ ಜನರು ವಾಯು ಕಾರ್ಯಾಚರಣೆಯು ಮುಂದುವರೆಯಬೇಕೆಂದು ಆಗ್ರಹಿಸಿ ಪ್ರದರ್ಶನಗಳನ್ನು ನಡೆಸಿದರು.[೧೩]
- ಮೇ 1949ರಲ್ಲಿ ದಿಗ್ಬಂಧನವನ್ನು ನಿಲ್ಲಿಸಿದ ಸ್ಟಾಲಿನ್, ಬರ್ಲಿನ್‌ಗೆ ಪಾಶ್ಚಿಮಾತ್ಯ ನೌಕಾಸಾಗಾಣಿಕೆಗಳನ್ನು ಮತ್ತೆ ಆರಂಭಿಸಲು ಅನುಮತಿ ನೀಡಿದನು.[೧೪][೧೫] ಅಕ್ಟೋಬರ್ 7, 1949ರಂದು ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ (ಪೂರ್ವ ಜರ್ಮನಿ)ಯ ಅಸ್ತಿತ್ವವನ್ನು ಘೋಷಿಸಲಾಯಿತು. ರಹಸ್ಯ ಒಪ್ಪಂದವೊಂದರ ಮೂಲಕ ಸೋವಿಯೆತ್‌ನ ವಿದೇಶ ವ್ಯವಹಾರಗಳ ಮಂತ್ರಾಲಯವು ಪೂರ್ವ ಜರ್ಮನ್ ರಾಜ್ಯಕ್ಕೆ ಆಡಳಿತಾತ್ಮಕ ಅಧಿಕಾರವನ್ನು ಮಾತ್ರ ನೀಡಿತೇ ವಿನಾ ಸ್ವಾಯತ್ತತೆಯನ್ನಲ್ಲ. ಸೋವಿಯೆತ್‌ನವರಿಗೆ ಆಕ್ರಮಿತ ಪ್ರದೇಶದಲ್ಲಿ ಅಪರಿಮಿತ ಅಧಿಕಾರವಿದ್ದು, ಅವರು ಪೂರ್ವ ಜರ್ಮನಿಯ ಆಡಳಿತಾತ್ಮಕ, ಮಿಲಿಟರಿ ಮತ್ತು ರಹಸ್ಯ ಪೊಲೀಸ್ ವ್ಯವಸ್ಥೆಗಳನ್ನು ಭೇದಿಸಿದರು.[೧೬][೧೭]
- ಪೂರ್ವ ಜರ್ಮನಿಯು ಸಾಮಾಜಿಕ ಮಾರುಕಟ್ಟೆಯ ಆರ್ಥಿಕವ್ಯವಸ್ಥೆ ("Soziale Marktwirtschaft" ಜರ್ಮನ್)ಯನ್ನು ಹೊಂದಿದ ಪಾಶ್ಚಿಮಾತ್ಯ ಬಂಡವಾಳಶಾಹೀ ರಾಷ್ಟ್ರವಾಗಿ ಬೆಳೆದುನಿಂತಿದ್ದ ಮತ್ತು ಪ್ರಜಾತಂತ್ರ ಸಂಸತ್ತಿನ ಸರ್ಕಾರವನ್ನು ಹೊಂದಿದ್ದ ಪಶ್ಚಿಮ ಜರ್ಮನಿ (ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ)ಯಿಂದ ಬಹಳವೇ ಭಿನ್ನವಾಗಿತ್ತು.
- 1950ರ ದಶಕದಲ್ಲಿ ಆರಂಭವಾಗಿ ಮುಂದುವರೆಯುತ್ತಲೇ ಹೋದ ಆರ್ಥಿಕ ಬೆಳವಣಿಗೆಯು ಇಪ್ಪತ್ತು ವರ್ಷಗಳ "ಆರ್ಥಿಕ ಚಮತ್ಕಾರ"ಕ್ಕೆ ಎಡೆಮಾಡಿಕೊಟ್ಟಿತು. ("Wirtschaftswunder" ). ಪಶ್ಚಿಮ ಜರ್ಮನಿಯ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಾಗಿ ಅಲ್ಲಿನ ಜೀವನಮಟ್ಟವು ನಿರಂತರವಾಗಿ ಉತ್ತಮಗೊಳ್ಳುತ್ತಿದ್ದ ಹಾಗೇ ಬಹಳ ಮಂದಿ ಪೂರ್ವ ಜರ್ಮನರು ಪಶ್ಚಿಮ ಜರ್ಮನಿಗೆ ವಲಸೆಹೋಗಲು ಬಯಸತೊಡಗಿದರು.
1950ರ ದಶಕದ ಆರಂಭದಲ್ಲಿ ಪಶ್ಚಿಮದೆಡೆಗೆ ವಲಸೆ
[ಬದಲಾಯಿಸಿ]- ಎರಡನೇ ವಿಶ್ವಯುದ್ಧದ ನಂತರ ಸೋವಿಯೆತ್ ಪೂರ್ವ ಯುರೋಪನ್ನು ವಶಪಡಿಸಿಕೊಂಡ ನಂತರ, ಈಸ್ಟರ್ನ್ ಬ್ಲಾಕ್ನ ಹೊಸದಾಗಿ ವಶಪಡಿಸಿಕೊಂಡ ಸೀಮೆಗಳವರು ಸ್ವಾತಂತ್ರ್ಯವನ್ನು ಬಯಸಿದರಲ್ಲದೆ ಸೋವಿಯೆತ್‌ನವರು ಜಾಗ ಖಾಲಿಮಾಡಬೇಕೆಂದು ಅಭಿಪ್ರಾಯಪಟ್ಟರು.[೧೮] ಜರ್ಮನಿಯ ವಶಪಡಿಸಿಕೊಂಡ ವಲಯಗಳ ನಡುವಣ ಕ್ಷೇತ್ರೀಯ ಗಡಿಗಳ ಪ್ರಯೋಜನವನ್ನು ಪಡೆದುಕೊಂಡು ಪಶ್ಚಿಮ ಜರ್ಮನಿಗೆ ವಲಸೆ ಹೋಗುವ ನಾಗರಿಕರ ಸಂಖ್ಯೆಯು 1950ರಲ್ಲಿ 197,000; 1951ರಲ್ಲಿ 165,000 ಮತ್ತು 1953ರಲ್ಲಿ 331,000ರಷ್ಟಿತ್ತು.[೧೯][೨೦]
- 1953ರಲ್ಲಿ ಈ ಸಂಖ್ಯೆಯು ಇದ್ದಕ್ಕಿದ್ದಂತೆ ಹೆಚ್ಚಾಗಲು ಪ್ರಮುಖ ಕಾರಣ ಮುಂದೆ ಹೆಚ್ಚಬಹುದೆಂದು ಭಾವಿಸಲಾದ ಸೋವಿಯೆತೀಕರಣವಾಗಿದ್ದು, ಈ ಭಾವನೆಗೆ 1952ರ ಅಂತ್ಯ ಮತ್ತು 1953ರ ಆರಂಭದಲ್ಲಿ ಜೋಸೆಫ್ ಸ್ಟಾಲಿನ್ನ ಸಂಶಯಗ್ರಸ್ತ ಕ್ರಮಗಳು ಕಾರಣವಾಗಿದ್ದವು.[೨೧] 1953ರ ಮೊದಲ ಆರು ತಿಂಗಳುಗಳಲ್ಲಿಯೇ 226,೦೦೦ ಜನರು ಪಲಾಯನ ಮಾಡಿದರು.[೨೨]
ಜರ್ಮನ್ ಒಳ ಗಡಿಯ ನಿರ್ಮಾಣ
[ಬದಲಾಯಿಸಿ]- 1950ರ ದಶಕದ ಆರಂಭದ ವೇಳೆಗೆ, ಸೋವಿಯೆತ್‌ನ ರಾಷ್ಟ್ರೀಯ ಆಂದೋಲನಗಳನ್ನು ಮಟ್ಟಹಾಕುವ ಕ್ರಮಗಳು, ವಲಸೆಯ ನಿಯಂತ್ರಣವೇ ಮೊದಲಾದವನ್ನು ಪೂರ್ವ ಜರ್ಮನಿಯನ್ನೂ ಒಳಗೊಂಡಂತೆ ಈಸ್ಟರ್ನ್ ಬ್ಲಾಕ್ನ ಹೆಚ್ಚಿನ ರಾಷ್ಟ್ರಗಳೆಲ್ಲದರಲ್ಲಿಯೂ ಅನುಕರಿಸಲಾಯಿತು.[೨೩] ನಿಯಂತ್ರಣಗಳಿಂದ ಸೋವಿಯೆತ್ ಒಕ್ಕೂಟಕ್ಕಿಂತ ಆರ್ಥಿಕವಾಗಿ ಹೆಚ್ಚು ಮುಂದುವರಿದ ಮತ್ತು ಮುಕ್ತವಾಗಿದ್ದ ಕೆಲ ಈಸ್ಟರ್ನ್ ಬ್ಲಾಕ್ ದೇಶಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು,
- ಉದಾಹರಣೆಗೆ, ಈ ಹಿಂದೆ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ನಡುವೆ ಗಡಿಗಳೇ ಇಲ್ಲದಿದ್ದುದರಿಂದ ಗಡಿಗಳನ್ನು ದಾಟಿ ಅಲ್ಲಿಂದಿಲ್ಲ್ ಇಲ್ಲಿಂದಲ್ಲಿ ಹೋಗಿಬರುವುದು ಸ್ವಾಭಾವಿಕವಾಗಿತ್ತು.[೨೪] 1952ರವರೆಗೂ ಪೂರ್ವ ಜರ್ಮನಿ ಮತ್ತು ಪಶ್ಚಿಮದೆಡೆಯ ಆಕ್ರಮಿತ ವಲಯಗಳ ನಡುವಿನ ಸೀಮಾರೇಖೆಗಳನ್ನು ಹೆಚ್ಚಿನ ಸ್ಥಳಗಳಲ್ಲಿ ಸುಲಭವಾಗಿ ದಾಟಬಹುದಾಗಿತ್ತು.[೨೫]
- ಏಪ್ರಿಲ್ 1, 1952ರಂದು ಪೂರ್ವ ಜರ್ಮನ್ ನಾಯಕರು ಸೋವಿಯೆತ್ ನೇತಾರ ಜೋಸೆಫ್ ಸ್ಟಾಲಿನ್ನನ್ನು ಮಾಸ್ಕೋದಲ್ಲಿ ಭೇಟಿಯಾದರು; ಚರ್ಚೆಗಳ ವೇಳೆಯಲ್ಲಿ ಸ್ಟಾಲಿನ್ನನ ವಿದೇಶ ಮಂತ್ರಿಯಾಗಿದ್ದ ವ್ಯಾಶಿಸ್ಲಾವ್ ಮೊಲೊಟೋವ್, GDRನಲ್ಲಿ ಪಾಶ್ಚಿಮಾತ್ಯ ಏಜೆಂಟುಗಳ ಸ್ವತಂತ್ರ ಚಲನವಲನಗಳಿಗೆ ಕಡಿವಾಣ ಹಾಕುವ ಸಲುವಾಗಿ, ಪೂರ್ವ ಬರ್ಲಿನ್‌ಗೆ ಭೇಟಿ ನೀಡುವ ಪಶ್ಚಿಮ ಬರ್ಲಿನ್ ನಿವಾಸಿಗಳಿಗಾಗಿ ಪಾಸ್(ಅನುಮತಿಪತ್ರ)ಗಳ ವ್ಯವಸ್ಥೆಯನ್ನು ಆರಂಭಿಸಬೇಕೆಂಬ ಪ್ರಸ್ತಾವನೆಯನ್ನಿರಿಸಿದನು.
- ಇದಕ್ಕೆ ಸಮ್ಮತಿ ಸೂಚಿಸಿದ ಸ್ಟಾಲಿನ್ ಪರಿಸ್ಠಿತಿಯು "ಅಸಹನೀಯ"ವಾಗಿರುವುದೆಂದು ಹೇಳಿದನು. ಪೂರ್ವ ಜರ್ಮನಿರಿಗೆ ತಮ್ಮ ಗಡಿಯ ಭದ್ರತಾವ್ಯವಸ್ಥೆಗಳನ್ನು ಉತ್ತಮಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಆತನು, "ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಪ್ರತ್ಯೇಕಿಸುವ ರೇಖೆಯನ್ನು ಗಡಿರೇಖೆಯೆಂದು ಪರಿಗಣಿಸಬೇಕು - ಇದು ಬರೇ ಒಂದು ಗಡಿರೇಖ್ಹೆ ಮಾತ್ರವಲ್ಲ, ಅತ್ಯಂತ ಅಪಾಯಕಾರಿಯಾದ್ದು... ಜರ್ಮನರು ಭದ್ರತಾ ರೇಖೆಯನ್ನು ತಮ್ಮ ಪ್ರಾಣವನ್ನು ನೀಡಿಯಾದರೂ ಕಾಯುವರು."[೨೬]
- ಪರಿಣಾಮವಾಗಿ, ಎರಡೂ ಜರ್ಮನ್ ರಾಜ್ಯಗಳ ನಡುವಿನ ಜರ್ಮನ್ ಒಳ ಗಡಿಯನ್ನು ಮುಚ್ಚಲಾಯಿತು ಮತ್ತು ಮುಳ್ಳುತಂತಿಯ ಬೇಲಿಯನ್ನು ಗಡಿಯುದ್ದಕ್ಕೂ ನಿರ್ಮಿಸಲಾಯಿತು. ಆದರೆ, ಬರ್ಲಿನ್‌ನ ಪೂರ್ವ ಮತ್ತು ಪಶ್ಚಿಮ ವಲಯಗಳ ನಡುವಿನ ಗಡಿಯು ಸೋವಿಯೆತ್ ಮತ್ತು ಪಶ್ಚಿಮ ವಲಯಗಳ ನಡುವಿನ ವಾಹನಗಳ ಓಡಾಟವು ಕೆಲಮಟ್ಟಿಗೆ ನಿರ್ಬಂಧಿತವಾಗಿದ್ದರೂ ಕೂಡ ಇನ್ನೂ ತೆರೆದುಕೊಂಡಿದ್ದಿತು. * ಇದರಿಂದಾಗಿ ಬರ್ಲಿನ್ ಪೂರ್ವ ಜರ್ಮನರ ಪಾಲಿಗೆ GDRನಲ್ಲಿ ಜೀವಿಸುವುದರಿಂದ ತಪ್ಪಿಸಿಕೊಳ್ಳುವ ಹಾದಿಯಾಯಿತು ಮತ್ತು ಯುನೈಟೆಡ್ ಸ್ಟೇಟ್ಸ್ ಹಾಗೂ ಸೋವಿಯೆತ್ ಒಕ್ಕೂಟಗಳ ನಡುವಣ ಘರ್ಷಣೆಯ ಬಿಂದುವಾಯಿತು. 1955ರಲ್ಲಿ ಸೋವಿಯೆತ್‌ನವರು ಪೂರ್ವ ಜರ್ಮನಿಗೆ ಬರ್ಲಿನ್‌ನ ಪೌರ ಆಂದೋಲನದ ಮೇಲೆ ಅಧಿಕಾರ ನೀಡುವುದರ ಮೂಲಕ ಪಶ್ಚಿಮದಲ್ಲಿ ಅನುಮೋದನೆಯಿಲ್ಲದ ಆಡಳಿತವ್ಯವಸ್ಥೆಗೆ ನಿಯಂತ್ರಣವನ್ನು ನೀಡಿದರು.[೨೭] ಮೊದಮೊದಲು, ಪೂರ್ವ ಜರ್ಮನಿಯು ತನ್ನ ಕಡೆ ನೆಲೆಸಿರುವವರು ಪಶ್ಚಿಮ ಜರ್ಮನಿಗೆ ’ಭೇಟಿ’ ನೀಡಲು ಅನುಮತಿಗಳನ್ನು ನೀಡಿತು.
- ಆದರೆ, ಈ ಸರ್ಕಾರದಡಿಯಲ್ಲಿ ಅತಿ ಹೆಚ್ಚಿನಸಂಖ್ಯೆಯ ಪೂರ್ವ ಜರ್ಮನರು ದೇಶ ತೊರೆದು ಪಲಾಯನ ಮಾಡಿದ ಕಾರಣ, ಹೊಸ ಜರ್ಮನ್ ರಾಜ್ಯವು ಕಾನೂನುಪ್ರಕಾರ ಪಶ್ಚಿಮಕ್ಕೆ ಎಲ್ಲ ರೀತಿಯ ಭೇಟಿಗಳನ್ನೂ 1956ರಲ್ಲಿ ನಿರ್ಬಂಧಿಸಿತು.[೨೫] ಸೋವಿಯೆತ್ ಪೂರ್ವ ಜರ್ಮನ್ ರಾಯಭಾರಿಯಾಗಿದ್ದ ಮಿಖಾಯಿಲ್ ಪೆರ್‌ವುಖಿನ್ ಗಮನಿಸಿದಂತೆ, "ಬರ್ಲಿನ್‌ನಲ್ಲಿ ಸಮಾಜವಾದಿ ಮತ್ತು ಬಂಡವಾಳಶಾಹೀ ಪ್ರಪಂಚಗಳ ನಡುವೆ ತೆರೆದಿರುವ ಮತ್ತು ಮೂಲವಾಗಿ ಅನಿಯಂತ್ರಿತವಾಗಿರುವ ಗಡಿರೇಖೆಯಿಂದಾಗಿ ಜನತೆಯು ನಗರದ ಎರಡೂ ಭಾಗಗಳನ್ನು ತಮಗರಿವಿಲ್ಲದಂತೆಯೇ ಹೋಲಿಸಲು ಉತ್ತೇಜಿಸುತ್ತಿದ್ದು, ದುರದೃಷ್ಟವಶಾತ್, ಇದು ಗಣತಂತ್ರವಿರುವ (ಪೂರ್ವ)ಬರ್ಲಿನ್‌ನ ಪಕ್ಷದ ಕಡೆ ಎಲ್ಲ ಸಂದರ್ಭಗಳಲ್ಲಿಯೂ ವಾಲುವುದಿಲ್ಲ."[೨೮]
ಬರ್ಲಿನ್ ವಲಸೆಯ ಲೋಪದೋಷ
[ಬದಲಾಯಿಸಿ]- ಜರ್ಮನ್ ಒಳ ಗಡಿಯನ್ನು ಅಧಿಕೃತವಾಗಿ 1952ರಲ್ಲಿ ಮುಚ್ಚಲಾಯಿತಾದರೂ,[೨೮] ಬರ್ಲಿನ್‌ನ ಗಡಿಯು ಎಲ್ಲಾ ನಾಲ್ಕು ಆಕ್ರಮಿಸಿಕೊಂಡ ಬಲಗಳ ಆಡಳಿತದಲ್ಲಿದ್ದುದರಿಂದಾಗಿ ಸುಲಭವಾಗಿ ಪ್ರವೇಶಿಸುವಂತಿತ್ತು.[೨೫] ಇದರಿಂದಾಗಿ, ಪೂರ್ವ ಜರ್ಮನರು ಪಶ್ಚಿಮಕ್ಕೆ ವಲಸೆ ಹೋಗಲು ಬರ್ಲಿನ್ ಮುಖ್ಯ ಹಾದಿಯಾಯಿತು.[೨೯]
- ಡಿಸೆಂಬರ್ 11, 1957ರಂದು ಪೂರ್ವ ಜರ್ಮನಿಯು ಹೊಸ ಪಾಸ್‌ಪೋರ್ಟ್ ಕಾನೂನೊಂದನ್ನು ಜಾರಿಗೆ ತರುವುದರ ಮೂಲಕ ಪೂರ್ವ ಜರ್ಮನಿಯನ್ನು ತ್ಯಜಿಸುವ ನಿರಾಶ್ರಿತರ ಸಂಖ್ಯೆಯನ್ನು ಕಡಿತಗೊಳಿಸಿತು. ಇದರಿಂದಾಗಿ ಊಹಿಸಲಾಗದಂತಹ ವ್ಯತಿರಿಕ್ತ ಬೆಳವಣಿಗೆಯುಂಟಾಗಿ ಬರ್ಲಿನ್ ಅನ್ನು ಬಿಡುವವರ ಸಂಖ್ಯೆಯು ಶೇಕಡಾ 60ರಿಂದ ಹೆಚ್ಚಿ ಶೇಕಡಾ 90ರಷ್ಟಾಯಿತು.[೨೮] ಪೂರ್ಮ ಬರ್ಲಿನ್‌ನಿಂದ ಪಲಾಯನ ಮಾಡಲೆಳಸಿ ಸಿಕ್ಕಿಹಾಕಿಕೊಂಡವರಿಗೆ ಭಾರೀ ದಂಡವನ್ನು ವಿಧಿಸಲಾಯಿತಾದರೂ, ದೈಹಿಕ ಪ್ರತಿಬಂಧಗಳು ಇಲ್ಲದುದರಿಂದ ಹಾಗೂ ಪೂರ್ವ ಬರ್ಲಿನ್‌ಗೆ ಸಬ್‌ವೇ ಟ್ರೇನುಗಳು ಲಭ್ಯವಿದ್ದುದರಿಂದಾಗಿ ಈ ರೀತಿಯ ಕ್ರಮಗಳು ನಿಷ್ಫಲವಾದವು.[೩೦]
- ಬರ್ಲಿನ್ ವಲಯದ ಗಡಿಯು ಮೂಲಭೂತವಾಗಿ "ಪಾರುಗಂಡಿ"ಯಾಗಿದ್ದು, ಇದರ ಮೂಲಕ ಈಸ್ಟರ್ನ್ ಬ್ಲಾಕ್‌ನ ನಾಗರಿಕರು ಇನ್ನೂ ಪಲಾಯನ ಮಾಡುವಂತಿತ್ತು.[೨೮] 1961ರ ಹೊತ್ತಿಗೆ ತೆರಳಿದ್ದ 3.5 ಮಿಲಿಯನ್ ಪೂರ್ವ ಜರ್ಮನ್ ಸಂಖ್ಯೆಯು ಒಟ್ಟು ಪೂರ್ವ ಜರ್ಮನ್ ಜನಸಂಖ್ಯೆಯ ಹೆಚ್ಚೂಕಡಿಮೆ ಶೇಕಡಾ 20 ಇಪ್ಪತ್ತರಷ್ಟಿತ್ತು.[೩೦]
ಬುದ್ಧಿಮತ್ತೆಯ ಸೋರಿಕೆ
[ಬದಲಾಯಿಸಿ]- ವಲಸೆಗಾರರಲ್ಲಿ ಹೆಚ್ಚಿನವರು ಯುವವಯಸ್ಸಿನವರೂ ಸುಶಿಕ್ಷಿತರೂ ಆಗಿದ್ದು, ಇದು ಪೂರ್ವ ಜರ್ಮನಿಯ ಅಧಿಕಾರಿಗಳ ಅಶಂಕೆಯಂತೆ "ಪ್ರತಿಭಾ ಪಲಾಯನ"ಕ್ಕೆ ಎಡೆಮಾಡಿಕೊಟ್ಟಿತು.[೧೮] ಆಗಿನ CPSUನ Director on Relations with Communist and Workers Parties of Socialist Countries ಆಗಿದ್ದ ಯೂರಿ ಆಂದ್ರೊಪೊವ್, ಆಗಸ್ಟ್ 28, 1958ರಂದು ಕೇಂದ್ರ ಸಮಿತಿಗೆ ತುರ್ತಾದ ಪತ್ರವೊಂದನ್ನು ಬರೆದು ನಿರಾಶ್ರಿತರಲ್ಲಿ ಪೂರ್ವ ಜರ್ಮನ್ ಬುದ್ಧಿಜೀವಿಗಳ ಸಂಖ್ಯೆಯು 50%ನಷ್ಟು ಜಾಸ್ತಿಯಾಗಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದನು.[೩೧]
- ಆಂದ್ರೊಪೊವ್ ತನ್ನ ವರದಿಯಲ್ಲಿ ಪೂರ್ವ ಜರ್ಮನಿಯ ನಾಯಕರು ಆರ್ಥಿಕ ಕಾರಣಗಳಿಂದ ತಮ್ಮ ನೆಲವನ್ನು ತೊರೆಯುತ್ತಿರುವುದಾಗಿ ಕಾರಣ ನೀಡಿದರೂ ಕೂಡ ನಿರಾಶ್ರಿತರಿಂದ ದೊರಕಿದ ಸಾಕ್ಷ್ಯಾಧಾರಗಳು ಈ ಕಾರಣಗಳು ಹೆಚ್ಚಿನಮಟ್ಟಿಗೆ ರಾಜಕೀಯವಾಗಿರುವುದೆಂದು ಸೂಚಿಸುತ್ತದೆ ಎಂದು ತಿಳಿಸಿದನು.[೩೧] ಆತನು "ಬುದ್ಧಿಜೀವಿಗಳ ಪಲಾಯನವು ಬಹಳ ಕಳವಳಕಾರೀ ಪರಿಸ್ಥಿತಿಯನ್ನು ತ್the flight of the intelligentsia has reached a particularly critical phase."[೩೧]
- 1960ರ ಹೊತ್ತಿಗೆ ಎರಡನೇ ವಿಶ್ವಯುದ್ಧ ಮತ್ತು ಪಶ್ಚಿಮದೆಡೆ ಭಾರೀ ಸಂಖ್ಯೆಯ ವಲಸೆಗಳಿಂದಾಗಿ, ಪೂರ್ವ ಜರ್ಮನಿಯ ಕಾರ್ಯಕ್ಷಮತೆಯುಳ್ಳ ಜನಸಂಖ್ಯೆಯು ಕೇವಲ 61%ರಷ್ಟು ಉಳಿದುಕೊಂಡಿತು ಮತ್ತು ಯುದ್ದಕ್ಕೆ ಮುನ್ನ ಈ ಸಂಖ್ಯೆಯು 70.5%ನಷ್ಟಿದ್ದಿತು.[೩೦] ಈ ನಷ್ಟವು ಇಂಜಿನಿಯರುಗಳು, ತಂತ್ರಜ್ಞರು, ವೈದ್ಯರು, ಶಿಕ್ಷಕರು, ವಕೀಲರು ಮತ್ತು ಪರಿಣತರಂತಹ ವೃತ್ತಿಪರರಲ್ಲಿ ಅಸಹಜವಾಗಿ ಭಾರೀ ಪ್ರಮಾಣದಲ್ಲಿದ್ದಿತು.[೩೦] ಕೆಲಸಗಾರರನ್ನು ಕಳೆದುಕೊಂಡಿದ್ದರಿಂದ ಉಂಟಾದ ನಷ್ಟವನ್ನು ಸುಮಾರು $7 ಬಿಲಿಯನ್‌ನಿಂದ $9 ಬಿಲಿಯನ್ ಎಂದು ಅಂದಾಜು ಹಾಕಲಾಯಿತು, ಮತ್ತು ನಂತರದಲ್ಲಿ ಪೂರ್ವ ಜರ್ಮನ್ ಪಕ್ಷದ ನಾಯಕ ವಾಲ್ಟರ್ ಉಲ್‌ಬ್ರಿಖ್ಟ್ ಪಶ್ಚಿಮ ಜರ್ಮನಿಯು ಪರಿಹಾರ ಮತ್ತು ಕೆಲಸಗಾರರ ನಷ್ಟವನ್ನು ತುಂಬಿಕೊಡುವ ರೂಪದಲ್ಲಿ $17 ಬಿಲಿಯನ್‌ನಷ್ಟು ಹಣವನ್ನು ಕೊಡಬೇಕಾಗಿದೆಯೆಂದು ವಾದಿಸಿದನು.[೩೦]
- ಇದರ ಜತೆಗೇ ಪೂರ್ವ ಜರ್ಮನಿಯ ಯುವಜನತೆಯ ಪ್ರತಿಭಾ ಪಲಾಯನವು ಶೈಕ್ಷಣಿಕ ಬಂಡವಾಳ ಹೂಡಿಕೆಯಲ್ಲಿ ಸುಮಾರು 22.5 ಬಿಲಿಯನ್ ಮಾರ್ಕ್ಸ್‌ಗಳಷ್ಟು ನಷ್ಟವನ್ನುಂಟುಮಾಡಿತು.[೩೨] ವೃತ್ತಿಪರರ ಪ್ರತಿಭಾ ಪಲಾಯನವು ಪೂರ್ವ ಜರ್ಮನಿಯ ರಾಜಕೀಯ ವಿಶ್ವಾಸಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಗಳಿಗೆ ಎಷ್ಟೊಂದು ಹಾನಿಯನ್ನುಂಟುಮಾಡಿದವೆಂದರೆ, ಜರ್ಮನ್ ಕಮ್ಯುನಿಸ್ಟ್ ಸರಹದ್ದನ್ನು ಮತ್ತೆ ಭದ್ರಪಡಿಸುವುದು ಅನಿವಾರ್ಯವಾಯಿತು.[೩೩]
ನಿರ್ಮಾಣ ಆರಂಭ, 1961
[ಬದಲಾಯಿಸಿ]- ಜೂನ್ 15, 1961ರಂದು, ಸೋಶಿಯಲಿಸ್ಟ್ ಯೂನಿಟಿ ಪಾರ್ಟಿಯ ಫಸ್ಟ್ ಸೆಕ್ರೆಟರಿ ಮತ್ತು GDR ಸ್ಟೇಟ್ ಕೌನ್ಸಿಲ್ನ ಚೇರ್ಮನ್ ಆಗಿದ್ದ ವಾಲ್ಟರ್ ಉಲ್‌ಬ್ರಿಖ್ಟ್ ಅಂತರ್ರಾಷ್ಟ್ರೀಯ ಪ್ರೆಸ್ ಕೂಟ ವೊಂದರಲ್ಲಿ ಮಾತನಾಡುತ್ತ, "Niemand hat die Absicht, eine Mauer zu errichten!" (ಗೋಡೆಯೊಂದನ್ನು ಕಟ್ಟುವ ಉದ್ದೇಶ ಯಾರಿಗೂ ಇಲ್ಲ!) ಎಂದು ಹೇಳಿದನು. ಇದು ಮೊದಲನೆ ಬಾರಿಗೆ ಆಡುಮಾತಿನಲ್ಲಿ Mauer (ಗೋಡೆ)ಯನ್ನು ಉಲ್ಲೇಖಿಸಿದ ಸಂದರ್ಭವಾಗಿತ್ತು.
- ನಿಕಿಟಾ ಕ್ರುಶ್ಚೇವ್ ಮತ್ತು ಉಲ್‌ಬ್ರಿಖ್ಟ್‌ರ ನಡುವೆ ಅದೇ ವರ್ಷ ಆಗಸ್ಟ್ 1ರಂದು ನಡೆದ ದೂರವಾಣಿ ಸಂಭಾಷಣೆಯು ಗೋಡೆಯ ನಿರ್ಮಾಣದ ವಿಚಾರವಾಗಿ ಮೊದಲ ಪ್ರಯತ್ನವು ಕ್ರುಶ್ಚೇವ್‌ರ ಕಡೆಯಿಂದ ಬಂದಿತೆನ್ನುವುದನ್ನು ಸೂಚಿಸುತ್ತದೆ.[೩೪][೩೫] ಶನಿವಾರ, ಆಗಸ್ಟ್ 12, 1961ರಂದು GDRನ ನಾಯಕರು ಪೂರ್ವ ಬರ್ಲಿನ್‌ನ ಉತ್ತರಭಾಗದಲ್ಲಿದ್ದ ಕಾಡುಗಳಿಂದ ಆವೃತ ಪ್ರದೇಶವಾಗಿದ್ದ Döllnseeನ ಸರ್ಕಾರೀ ಅತಿಥಿಗೃಹವೊಂದರ ಉದ್ಯಾನವನಕೂಟವೊಂದರಲ್ಲಿ ಸೇರಿದರು. ಅಲ್ಲಿ Ulbricht ಗಡಿಯನ್ನು ಮುಚ್ಚುವ ಮತ್ತು ಗೋಡೆಯೊಂದನ್ನು ನಿರ್ಮಿಸುವ ಆದೇಶಕ್ಕೆ ಸಹಿ ಹಾಕಿದರು.
- ಮಧ್ಯರಾತ್ರಿಯ ಹೊತ್ತಿಗೆ, ಪೊಲೀಸರು ಮತ್ತು ಪೂರ್ವ ಜರ್ಮನ್ ಸೇನೆಯ ತುಕಡಿಗಳು ಗಡಿಯನ್ನು ಮುಚ್ಚಲು ಆರಂಭಿಸಿದವು; ಮತ್ತು ಆಗಸ್ಟ್ 13ರ ಭಾನುವಾರದ ಹೊತ್ತಿಗೆ, ಪಶ್ಚಿಮ ಜರ್ಮನಿಯೊಂದಿಗಿನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಪೂರ್ವ ಜರ್ಮನ್ ಸೇನಾತುಕಡಿಗಳು ಮತ್ತು ಕೆಲಸಗಾರರು ಗಡಿಯ ಪಕ್ಕದಲ್ಲಿ ಹಾದುಹೋಗುತ್ತಿದ್ದ ರಸ್ತೆಗಳನ್ನು ಹೆಚ್ಚಿನ ವಾಹನಗಳು ಹೋಗಲು ದುಸ್ಸಾಧ್ಯವಾಗುವಂತೆ ಹಾಳುಗೆಡವುವ ಮತ್ತು ಮೂರು ಪಶ್ಚಿಮ ವಲಯಗಳ 156 ಕಿಲೋಮೀಟರು(97 ಮೈಲಿ)ಗಳುದ್ದಕ್ಕೂ ಮತ್ತು ಪಶ್ಚಿಮ ಹಾಗೂ ಪೂರ್ವ ಬರ್ಲಿನ್‌ಗಳನ್ನು ಬೇರ್ಪಡಿಸುವ 43 ಕಿಲೋಮೀಟರು(27 ಮೈಲು)ಗಳುದ್ದಕ್ಕೂ ಮುಳ್ಳುತಂತಿಯ ತೊಡಕುಗಳು ಮತ್ತು ಬೇಲಿಗಳನ್ನು ಕಟ್ಟುವ ಕೆಲಸವನ್ನು ಆರಂಭಿಸಿದರು.
- ಈ ತಡೆಗಟ್ಟು ಎಲ್ಲೂ ಪಶ್ಚಿಮ ಜರ್ಮನಿಯ ನೆಲವನ್ನು ಒತ್ತುವರಿ ಮಾಡಬಾರದೆಂಬ ಕಾರಣದಿಂದಾಗಿ ಅದನ್ನು ಕೊಂಚ ಹಿಂದಕ್ಕೆ, ಪೂರ್ವ ಜರ್ಮನಿಯ ನೆಲದಲ್ಲಿಯೇ ಕಟ್ಟಲಾಯಿತು. ನಂತರ, ಸರಿಯಾದ ಗೋಡೆಯನ್ನು ಕಟ್ಟಲಾಯಿತು ಮತ್ತು ಇದರ ಮೊದಲ ಕಾಂಕ್ರೀಟ್ ಘಟಕಗಳು ಮತ್ತು ದೊಡ್ಡ ಭಾಗಗಳನ್ನು ಆಗಸ್ಟ್ 15ರಂದು ಸರಿಯಾದ ಜಾಗಗಳಲ್ಲಿ ಇರಿಸಲಾಯಿತು.
- ಗೋಡೆಯನ್ನು ಕಟ್ಟುವ ವೇಳೆಯಲ್ಲಿ, ನ್ಯಾಶನಲ್ ಪೀಪಲ್ಸ್ ಆರ್ಮಿ (NVA) ಮತ್ತು ಕಾಂಬ್ಯಾಟ್ ಗ್ರೂಪ್ಸ್ ಆಫ್ ದ ವರ್ಕಿಂಗ್ ಕ್ಲಾಸ್ (KdA)ನ ಸೈನಿಕರನ್ನು ಗೋಡೆಯ ಮುಂದೆ ಕಾವಲಾಗಿರಿಸಿ ಯಾರಾದರೂ ದಾಟಲು ಪ್ರಯತ್ನಿಸಿದರೆ ಗುಂಡಿಕ್ಕುವ ಆದೇಶವನ್ನು ನೀಡಲಾಗಿತ್ತು.
- ಇದರ ಜತೆಗೇ ಸರಪಳಿ ಬೇಲಿಗಳು, ಗೋಡೆಗಳು, ಮೈನ್‌ಫೀಲ್ಡ್‌ಗಳು ಮತ್ತು ಇತರ ಪ್ರತಿಬಂಧಗಳನ್ನು ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ನಡುವಣ ಜರ್ಮನ್ ಒಳಗಡಿಯುದ್ದಕ್ಕೂ ನೆಲೆಗೊಳಿಸಲಾಯಿತು. ಆಗಸ್ಟ್ 1961ರ ದಿನಗಳಲ್ಲಿ ಪಶ್ಚಿಮ ಬರ್ಲಿನ್‌ನಲ್ಲಿದ್ದ ಮಿತ್ರಪಕ್ಷದ ಸೇನೆಗಳನ್ನು ವಿಡಂಬನೆ ಮಾಡುತ್ತ, ಪೂರ್ವ ಜರ್ಮನಿಯ ಆಂಗ್ಲಭಾಷೆಯ ರೇಡಿಯೋ ಸ್ಟೇಶನ್ ಒಂದು ಆಗ ಜನಪ್ರಿಯವಾಗಿದ್ದ ಕೌಬಾಯ್ ಹಾಡಾಗಿದ್ದ "ಡೋಂಟ್ ಫೆನ್ಸ್ ಮಿ ಇನ್"(ನನ್ನನ್ನು ಬೇಲಿಕಟ್ಟಿ ಪ್ರತಿಬಂಧಿಸಬೇಡ) ಎಂಬುದನ್ನು ಪದೇ ಪದೇ ಪ್ರಸಾರ ಮಾಡಿತು.
ತಕ್ಷಣದ ಪರಿಣಾಮಗಳು
[ಬದಲಾಯಿಸಿ]- ಬರ್ಲಿನ್‌ನ ಪಶ್ಚಿಮ-ಪೂರ್ವ ವಲಯದ ಮುಚ್ಚುವಿಕೆಯೊಂದಿಗೆ, ಬೃಹತ್ ಸಂಖ್ಯೆಯ ಪೂರ್ವ ಜರ್ಮನರು ಪಶ್ಚಿಮ ಜರ್ಮನಿಗೆ ಪ್ರಯಾಣ ಮಾಡುವುದು ನಿಂತುಹೋಗುವಂತಾಯಿತು. ಹಲವಾರು ಕುಟುಂಬಗಳು ಛಿದ್ರವಾದವು, ಮತ್ತು ಪಶ್ಚಿಮ ಬರ್ಲಿನ್‌ನಲ್ಲಿ ಕೆಲಸ ಮಾಡುತ್ತಿದ್ದ ಪೂರ್ವ ಬರ್ಲಿನ್‌ನವರು ತಮ್ಮ ಕೆಲಸಗಳನ್ನು ಕಳೆದುಕೊಳ್ಳಬೇಕಾಯಿತು. ಪೂರ್ವ ಬರ್ಲಿನ್ ಶತ್ರು ವಲಯದ ಆವೃತ ವಲಯವಾಗುಳಿಯಿತು.
- ಪಶ್ಚಿಮ ಬರ್ಲಿನರು ಗೋಡೆಯ ವಿರುದ್ಧ ಪ್ರತಿಭಟಿಸುತ್ತ ತಮ್ಮ ಮೇಯರ್ (Oberbürgermeister) ಮೈಕೆಲ್ ಆಬೊಟ್‌ರ ನಾಯಕತ್ವದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಲು ವಿಫಲವಾಗಿದ್ದಕ್ಕೆ ಯುನೈಟೆಡ್ ಸ್ಟೇಟ್ಸ್ ಅನ್ನು ಕಟುವಾಗಿ ಟೀಕಿಸಿದರು. ಮಿತ್ರಪಕ್ಷದ ಗೂಢಚರ ಏಜೆನ್ಸಿಗಳು ನಿರಾಶ್ರಿತರ ಹರಿವನ್ನು ತಡೆಯಲು ಗೋಡೆಯೊಂದರ ನಿರ್ಮಾಣವಾಗಬಹುದೆಂದು ಊಹೆ ಮಾಡಿದ್ದವಾದರೂ ಈ ಗೋಡೆಯ ತಾಣವು ನಗರದ ಪರಿಧಿಗೆ ಮಾತ್ರ ಸೀಮಿತವಾಗಿರುವುದೆಂದು ಅಂದಾಜು ಮಾಡಲಾಗಿತ್ತು.
- ಜುಲೈ 25, 1961ರಂದು ಮಾಡಿದ ಭಾಷಣವೊಂದರಲ್ಲಿ, ಯು.ಎಸ್‌ನ ಅಧ್ಯಕ್ಷ ಜಾನ್ ಎಫ್. ಕೆನಡಿ ಯುನೈಟೆಡ್ ಸ್ಟೇಟ್ಸ್ ಪಶ್ಚಿಮ ಬರ್ಲಿನ್‌ನವರು ಮತ್ತು ಪಶ್ಚಿಮ ಜರ್ಮನರನ್ನು ಬೆಂಬಲಿಸುವುದೆಂಬ ಆಶಯವನ್ನು ಹೊಂದಿರುವುದೆಂದು ಅಂಗೀಕರಿಸಿದರು [೩೬]; ಪೂರ್ವ ಜರ್ಮನರನ್ನು ಬೆಂಬಲಿಸುವುದರಿಂದ ಅವಮಾನಕರ ಪತನವುಂಟಾಗುವುದು ಸುನಿಶ್ಚಿತವಾಗಿತ್ತು.
- ಇದಕ್ಕೆ ತಕ್ಕಂತೆ ಅವರ ಆಡಳಿತವರ್ಗವು ಈ ಬಗ್ಗೆ ವಿನೀತವಾಗಿ ಪ್ರತಿಭಟನೆಯನ್ನು ಮಾಡಿತಾದರೂ ಇದು ತೀವ್ರತೆಯನ್ನು ಹೊಂದಿರಲಿಲ್ಲ. ಈ ಗೋಡೆಯು ಸಂಪೂರ್ಣ ಬರ್ಲಿನ್‌ನ ಆಡಳಿತದ ಬಗ್ಗೆ ಯುನೈಟೆಡ್ ಕಿಂಗ್‌ಡಮ್, ಫ್ರ್ಯಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳಿಗೂ ಸಮಾನ ಅಧಿಕಾರ ನೀಡುವ ಯುದ್ಧಾನಂತರದ ಪಾಟ್ಸ್‌ಡ್ಯಾಮ್ ಒಪ್ಪಂದವನ್ನು ಉಲ್ಲಂಘಿಸಿತು.
- ಮುಳ್ಳುತಂತಿಯ ಬೇಲಿಯನ್ನು ನಿರ್ಮಿಸಿದ ಕೆಲವು ತಿಂಗಳುಗಳ ನಂತರ, ಯು.ಎಸ್. ಸರ್ಕಾರವು ಸೋವಿಯೆತ್ ಸರ್ಕಾರಕ್ಕೆ ತಾನು ಗೋಡೆಯನ್ನು "ಅಂತರ್ರಾಷ್ಟ್ರೀಯ ಜೀವನದ ಭಾಗ"ವಾಗಿ ಪರಿಗಣಿಸುವುದಾಗಿಯೂ, ಅದಕ್ಕೆ ಬಲಪ್ರಯೋಗ ಮಾಡಿ ಸವಾಲೊಡ್ಡುವುದಿಲ್ಲವೆಂದೂ ತಿಳಿಸಿತು.
- ಯು.ಎಸ್. ಮತ್ತು ಯುಕೆ ಮೂಲಗಳು ಸೋವಿಯೆತ್ ವಲಯವನ್ನು ಪಶ್ಚಿಮ ಬರ್ಲಿನ್‌ನಿಂದ ಪ್ರವೇಶಿಸಲಾಗದಂತೆ ಮುಚ್ಚಿಹಾಕಲಾಗುವುದೆಂದು ನಿರೀಕ್ಷಿಸಿದ್ದರಾದರೂ ಪೂರ್ವ ಜರ್ಮನರು ಈ ಕ್ರಮವನ್ನು ಕೈಗೊಳ್ಳಲು ತೆಗೆದುಕೊಂಡ ಕಾಲಾವಧಿಯ ಬಗ್ಗೆ ಅಚ್ಚರಿಗೊಂಡರು.
- ಅವರು ಗೋಡೆಯ ನಿರ್ಮಾಣದಿಂದಾಗಿ GDR/ಸೋವಿಯೆತ್ ಇದೀ ಬರ್ಲಿನ್ ಅನ್ನು ವಶಪಡಿಸಿಕೊಳ್ಳಬಹುದೆಂಬ ಆತಂಕಕ್ಕೆ ತೆರೆಬಿದ್ದಿತೆಂದು ಭಾವಿಸಿದರು; ಈ ರೀತಿಯ ಯೋಜನೆಗಳೇನಾದರೂ ಇದ್ದಲ್ಲಿ ಗೋಡೆಯ ನಿರ್ಮಾಣ ಬೇಕಾಗಿರಲಿಲ್ಲ ಎಂಬುದು ಅವರ ಯೋಚನೆಯಾಗಿತ್ತು. ಹೀಗಾಗಿ ಬರ್ಲಿನ್ ಬಗ್ಗೆ ಸೋವಿಯೆತ್ ಮಿಲಿಟರಿ ಘರ್ಷಣೆಯ ಸಾಧ್ಯತೆಗಳು ಕಡಿಮೆಯಾದವೆಂದು ಕಟ್ಟಕಡೆಯದಾಗಿ ಭಾವಿಸಲಾಯಿತು.[೩೭]
- ಪೂರ್ವ ಜರ್ಮನ್ ಸರ್ಕಾರವು ಈ ಗೋಡೆಯು ಒಂದು "ಫ್ಯಾಸಿಸ್ಟ್ ವಿರೋಧಿ ಸುರಕ್ಷಾ ಗೋಡೆ"ಯಾಗಿದ್ದು (German: ["antifaschistischer Schutzwall"] Error: {{Lang}}: text has italic markup (help)) ಪಶ್ಚಿಮದೆಡೆಯಿಂದ ಒದಗಬಹುದಾದ ದಾಳಿಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿತ್ತೆಂದು ವಾದಿಸಿತು.[೩೮] ಪೂರ್ವ ಯುರೋಪಿನಲ್ಲಿ ಪಶ್ಚಿಮದ ಏಜೆಂಟುಗಳ ಚಟುವಟಿಕೆಗಳು ಇನ್ನೊಂದು ಅಧಿಕೃತ ಕಾರಣವಾಗಿದ್ದಿತು.[೩೯]
- ನ ಪಶ್ಚಿಮ ಬರ್ಲಿನ್‌ನವರು ಪೂರ್ವ ಬರ್ಲಿನ್‌ನಲ್ಲಿ ಸರ್ಕಾರೀ ಸಹಾಯಧನದ ಮೂಲಕ ಒದಗಿಸಲಾಗುವ ವಸ್ತುಗಳನ್ನು ಕೊಳ್ಳುತ್ತಿರುವರೆಂಬುದು ಇನ್ನೊಂದು ಭಿನ್ನವಾದ ವಿವರಣೆಯಾಗಿತ್ತು. ಪೂರ್ವ ಜರ್ಮನರು ಮತ್ತು ಇತರರು ಈ ರೀತಿಯ ಹೇಳಿಕೆಗಳನ್ನು ಗುಮಾನಿಯಿಂದ ಕಾಣುತ್ತಿದ್ದರು, ಏಕೆಂದರೆ ಹೆಚ್ಚಿನ ಸಮಯ ಗಡಿಯನ್ನು ಪಶ್ಚಿಮದ ಕಡೆಗೆ ಪಯಣಿಸುವ ಪೂರ್ವ ಜರ್ಮನರಿಗೆ ಮುಚ್ಚಲಾಗುತ್ತಿತ್ತು, ಆದರೆ ಪೂರ್ವ ಜರ್ಮನಿಗೆ ಬರುವ ಪಶ್ಚಿಮ ಬರ್ಲಿನ್‌ನ ಜನರಿಗೆ ಯಾವುದೇ ತಡೆಗಳಿರಲಿಲ್ಲ.[೪೦]
- ಗೋಡೆಯ ನಿರ್ಮಾಣದಿಂದಾಗಿ ಬೇರಾದ ಕುಟುಂಬಗಳು ಬಹಳ ತೊಂದರೆಗೀಡಾಗುವಂತಾಗಿತ್ತು. ಗೋಡೆಯು ಮುಖ್ಯವಾಗಿ ಪೂರ್ವ ಜರ್ಮನಿಯ ನಾಗರಿಕರು ಪಶ್ಚಿಮ ಬರ್ಲಿನ್ ಅನ್ನು ಪ್ರವೇಶಿಸುವುದು ಅಥವಾ ಪಲಾಯನ ಮಾಡುವುದನ್ನು ತಡೆಗಟ್ಟುವ ಮಾರ್ಗವೆಂಬ ಭಾವನೆ ಎಲ್ಲೆಡೆ ವ್ಯಾಪಕವಾಗಿ ಅನುಮೋದನೆಯನ್ನು ಪಡೆಯಿತು. 1955ರಲ್ಲಿ ಪ್ರಕಟವಾದ ಪೂರ್ವ ಜರ್ಮನಿಯ SED ಪ್ರಚಾರಕಾರ್ಯದ ಕಿರುಪುಸ್ತಿಕೆಯೊಂದು 'ಗಣತಂತ್ರದಿಂದ ದೂರಹಾರುವಿಕೆ'ಯ ಗಂಭೀರತೆಯ ಬಗ್ಗೆ ತಿಳಿಸಿತು.:
Both from the moral standpoint as well as in terms of the interests of the whole German nation, leaving the GDR is an act of political and moral backwardness and depravity.
Those who let themselves be recruited objectively serve West German Reaction and militarism, whether they know it or not. Is it not despicable when for the sake of a few alluring job offers or other false promises about a "guaranteed future" one leaves a country in which the seed for a new and more beautiful life is sprouting, and is already showing the first fruits, for the place that favors a new war and destruction? Is it not an act of political depravity when citizens, whether young people, workers, or members of the intelligentsia, leave and betray what our people have created through common labor in our republic to offer themselves to the American or British secret services or work for the West German factory owners, Junkers, or militarists? Does not leaving the land of progress for the morass of an historically outdated social order demonstrate political backwardness and blindness? ... [W]orkers throughout Germany will demand punishment for those who today leave the German Democratic Republic, the strong bastion of the fight for peace, to serve the deadly enemy of the German people, the imperialists and militarists.[೪೧]
ಅನುಷಂಗಿಕ ಪ್ರತಿಕ್ರಿಯೆ
[ಬದಲಾಯಿಸಿ]- ಕೆನಡಿ ತನ್ನ ವಿಶೇಷ ಸಲಹೆಗಾರನ ಹುದ್ದೆಗೆ ಸೋವಿಯೆತರ ಬಗ್ಗೆ ದೃಢವಾದ ದೃಷ್ಟಿಕೋನವನ್ನು ಹೊಂದಿದ್ದ ಕಮ್ಯುನಿಸ್ಟ್ ವಿರೋಧಿ ಜನರಲ್ ಲೂಶಿಯಸ್ ಡಿ. ಕ್ಲೇ ಎಂಬಾತನನ್ನು ನಿಯಮಿಸಿ, ರಾಯಭಾರಿಯ ಪದವಿಯೊಂದಿಗೆ ಬರ್ಲಿನ್‌ಗೆ ಕಳುಹಿಸಿದರು.
- ಅವರು ಹಾಗೂ ಉಪಾಧ್ಯಕ್ಷ ಲಿಂಡನ್ ಬ್. ಜಾನ್ಸನ್ ಆಗಸ್ಟ್ 19, 1961ರ ಶನಿವಾರ ಮಧ್ಯಾಹ್ನ ಟೆಂಪೆಲ್‌ಹಾಫ್ ಏರ್‌ಪೋರ್ಟ್ಗೆ ಬಂದಿಳಿದರು. ಅವರು ಮೂರೂ ಮಿತ್ರಪಕ್ಷದ ಸೇನಾದಳದಿಂದ ರಕ್ಷಿಸಲ್ಪಟ್ಟ ನಗರವೊಂದಕ್ಕೆ ಬಂದರು — ಪ್ರತಿಯೊಂದೂ ಯುಕೆ, ಯುಎಸ್ ಮತ್ತು ಫ್ರ್ಯಾನ್ಸ್‌ಗಳಾಗಿದ್ದವು (Forces Françaises à Berlin).
- ಆಗಸ್ಟ್ 16ರಂದು ಕೆನಡಿಯು ಅವರೆಲ್ಲ ಮತ್ತೆ ಶಸ್ತ್ರಸಜ್ಜಿತರಾಗಬೇಕೆಂದು ಆದೇಶ ನೀಡಿದರು. ಆಗಸ್ಟ್ 19ರಷ್ಟರ ಹೊತ್ತಿಗೆಲ್ಲ, ಫಸ್ಟ್ ಬ್ಯಾಟ್‌ಲ್ ಗ್ರೂಪ್, 18ನೇ ಇನ್‌ಫೆಂಟ್ರಿ (ಕರ್ನಲ್ ಗ್ಲೋವರ್ ಎಸ್. ಜಾನ್ಸ್ ಜೂನಿಯರ್‌ನ ನೇತೃತ್ವದಲ್ಲಿ)ಯನ್ನು ಜಾಗರೂಕವಾಗಿರುವಂತೆ ಸೂಚನೆ ನೀಡಲಾಯಿತು.[೪೨]
- ಭಾನುವಾರ ಬೆಳಗ್ಗೆ ಯು.ಎಸ್.ನ ತುಕಡಿಗಳು ಪಶ್ಚಿಮ ಜರ್ಮನಿಯಿಂದ ಪೂರ್ವ ಜರ್ಮನಿಗೆ ಹಾಯ್ದು ಪಶ್ಚಿಮ ಬರ್ಲಿನ್‌ನೆಡೆಗೆ ಸಾಗಲಾರಂಭಿಸಿದವು. ಮುಂಚೂಣಿಯ ಅಂಶಗಳಾದ ಐದು ಪಥಸಂಚಲನ ವಿಭಾಗಗಳಾಗಿಸಿದ್ದ 1500 ಸೈನಿಕರನ್ನೊಳಗೊಂಡಿದ್ದ 491 ವಾಹನಗಳು ಮತ್ತು ಟ್ರೇಲರ್‌ಗಳು - 06:34ರ ಹೊತ್ತಿಗೆ ಹೆಲ್ಮ್‌ಸ್ಟೆಡ್-ಮರೀನ್‌ಬಾರ್ನ್ ಚೆಕ್‌ಪಾಯಿಂಟ್ ಅನ್ನು ಬಿಟ್ಟವು.
- ಮರೀನ್‌ಬಾರ್ನ್ ಎಂಬ ಹೆಲ್ಮ್‌ಸ್ಟೆಡ್ನ ನೆರೆಯ ಪಶ್ಚಿಮ ಜರ್ಮನಿ/ಪೂರ್ವ ಜರ್ಮನಿಯ ಗಡಿಯಲ್ಲಿ ಭದ್ರತಾದಳದ ಗಾರ್ಡುಗಳು ಯು.ಎಸ್.ನವರನ್ನು ಎಣಿಕೆಮಾಡಿಕೊಂಡರು. ಈ ಹಾದಿಯು 160 ಕಿಲೋಮೀಟರು(100 ಮೈಲಿ)ಗಳಷ್ಟು ದೀರ್ಘವಾಗಿದ್ದು, ಮರೀನ್‌ಬಾರ್ನ್‌ನಿಂದ ಬರ್ಲಿನ್‌ವರೆಗೆ ಶಸ್ತ್ರಸಜ್ಜಿತ ರೂಪದಲ್ಲಿ ಒಟ್ಟು 177 ಕಿಲೋಮೀಟರು(110 ಮೈಲಿ)ಗಳನ್ನು ಒಳಗೊಂಡಿತ್ತು. * ಪೂರ್ವ ಜರ್ಮನ್ ಪೊಲೀಸರು ದಾರಿಯುದ್ದಕ್ಕೂ ಆಟೋಬಾನ್ನ ಅಕ್ಕಪಕ್ಕದ ಮರಗಳೆಡೆಗಳಿಂದ ಇವರನ್ನು ಗಮನಿಸುತ್ತಲೇ ಇದ್ದರು. ರಕ್ಷಣಾದಳದ ಮೊದಲ ಭಾಗವು ಬರ್ಲಿನ್‌ನ ಹೊರಭಾಗದಲ್ಲಿ ಮಧ್ಯಾಹ್ನವಾಗುವುದಕ್ಕಿಂತ ಕೊಂಚ ಮೊದಲು ಬಂದಿಳಿದಾಗ ಅವರನ್ನು ಕ್ಲೇ ಮತ್ತು ಜಾನ್ಸನ್ ಎದುರುಗೊಂಡರು, ಮತ್ತು ನಂತರ ಬರ್ಲಿನ್‌ನ ಬೀದಿಗಳಲ್ಲಿ ಪಥಸಂಚಲನ ನಡೆಸುವಾಗ ಅಲ್ಲಿನ ಜನತೆಯು ಗೌರವಪೂರ್ವಕವಾಗಿ ನಡೆದುಕೊಂಡರು.
- ಆಗಸ್ಟ್ 21ರಂದು 04:00ರ ಹೊತ್ತಿಗೆ ಲಿಂಡನ್ ಜಾನ್ಸನ್‌ರವರು ತನ್ನ ಭೀತಿಯನ್ನು ಕಳೆದು ಮರು ಆಶ್ವಾಸನೆಯನ್ನು ಪಡೆದುಕೊಂಡಿದ್ದ ಪಶ್ಚಿಮ ಬರ್ಲಿನ್ ಅನ್ನು ಜನರಲ್ ಫ್ರೆಡರಿಕ್ ಓ. ಹಾರ್ಟೆಲ್ ಮತ್ತು 4,224 ಮಂದಿ ಸೇನಾಧಿಕಾರಿಗಳು ಮತ್ತು ಸೈನಿಕರ ಕೈಗೊಪ್ಪಿಸಿ ತೆರಳಿದರು.
- ಮುಂದಿನ ಮೂರೂವರೆ ವರ್ಷಗಳವರೆಗೂ, ಪ್ರತೀ ಮೂರು ತಿಂಗಳುಗಳಿಗೊಮ್ಮೆ ಪಶ್ಚಿಮ ಬರ್ಲಿನ್‌ಗೆ ಹೊಸ ತುಕಡಿಯೊಂದನ್ನು ನಿಯುಕ್ತಗೊಳಿಸಲಾಗುತ್ತಿತ್ತು; ಮತ್ತು ಪ್ರತಿ ತುಕಡಿಯೂ ಮಿತ್ರಪಕ್ಷದ ಹಕ್ಕನ್ನು ಜಾಹೀರುಗೊಳಿಸುವ ಸಲುವಾಗಿ ಆಟೋಬಾನ್ ಮೂಲಕವೇ ಪಯಣಿಸುತ್ತಿದ್ದಿತು.
- ಗೋಡೆಯ ನಿರ್ಮಾಣವು ಎರಡೂ ಜರ್ಮನ್ ರಾಜ್ಯಗಳ ಮೇಲೆ ಪ್ರಮುಖವಾದ ತೊಡಕುಗಳಿಂದ ಕೂಡಿದ ಪರಿಣಾಮಗಳನ್ನುಂಟುಮಾಡಿತು. ಪೂರ್ವ ಜರ್ಮನಿಯಿಂದ ಬೃಹತ್ ಸಂಖ್ಯೆಯಲ್ಲಿ ನಡೆಯುತ್ತಿದ್ದ ವಲಸೆಗೆ ತಡೆಗಾಲು ಹಾಕುವುದರ ಮೂಲಕ ಪೂರ್ವ ಜರ್ಮನ್ ಸರ್ಕಾರವು ದೇಶದ ಮೇಲಿನ ಹತೋಟಿಯನ್ನು ಮರಳಿ ಪಡೆದುಕೊಂಡಿತು:
- ಗೋಡೆಯ ಬಗ್ಗೆ ಅಸಹನೆಯಿದ್ದರೂ ಕೂಡ ಎರಡು ರೀತಿಯ ಕರೆನ್ಸಿಗಳಿಂದ ಮತ್ತು ಕಪ್ಪು ಮಾರುಕಟ್ಟೆಯಿಂದುಂಟಾದ ತೊಂದರೆಗಳು ಹೆಚ್ಚೂಕಡಿಮೆ ನಿವಾರಣೆಯಾದವು. GDRನ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾಣತೊಡಗಿತು. ಆದರೆ ಗೋಡೆಯಿಂದ ಇಡೀ ಕಮ್ಯುನಿಸ್ಟ್ ಬಣದ ಸಾರ್ವಜನಿಕ ಬಾಂಧವ್ಯಕ್ಕೆ ಅಪಾರ ಧಕ್ಕೆಯುಂಟಾಯಿತು.
- ಪಾಶ್ಚಿಮಾತ್ಯ ಬಲಗಳು ಅದನ್ನು ತಮ್ಮ ಪ್ರಚಾರಕಾರ್ಯದಲ್ಲಿ, ಅದರಲ್ಲಿಯೂ ಹೆಚ್ಚಾಗಿ ಪಲಾಯನ ಮಾಡುವರೆಂದು ಶಂಕಿಸಲಾದ ಕೆಲವರನ್ನು ಪೂರ್ವ ಜರ್ಮನ್ ಗಡಿಯ ಕಾವಲುಪಡೆಯವರು ಗುಂಡಿಕ್ಕಿ ಕೊಂದ ನಂತರ ಕಮ್ಯುನಿಸ್ಟ್ ದಬ್ಬಾಳಿಕೆಯ ಸಂಕೇತವಾಗಿ ಬಳಸತೊಡಗಿದವು. ಈ ರೀತಿಯ ಸಾವುಗಳನ್ನು ನಂತರ ಮತ್ತೆ ಏಕೀಕರಣಗೊಂಡ ಜರ್ಮನಿಯಲ್ಲಿ ಕೊಲೆಯ ಕೃತ್ಯಗಳೆಂದು ಪರಿಗಣಿಸಲಾಯಿತು.
ಸ್ವರೂಪ ಮತ್ತು ಹತ್ತಿರದ ಪ್ರದೇಶಗಳು
[ಬದಲಾಯಿಸಿ]ವಿನ್ಯಾಸ ಮತ್ತು ಪರಿಷ್ಕರಣೆಗಳು
[ಬದಲಾಯಿಸಿ]- ಬರ್ಲಿನ್ ಗೋಡೆಯು 140 kilometres (87 mi)ಗಿಂತ ಹೆಚ್ಚು ಉದ್ದವಾಗಿತ್ತು. ಜೂನ್ 1962ರಲ್ಲಿ ಒಂದು ಎರಡನೆಯ, ಸಮಾನಾಂತರವಾದ 100 metres (110 yd) ಬೇಲಿಯನ್ನು ಪೂರ್ವ ಜರ್ಮನ್ ಗಡಿಯೊಳಕ್ಕೆ ನಿರ್ಮಿಸಲಾಯಿತು. ಎರಡೂ ಬೇಲಿಗಳ ನಡುವೆ ಇದ್ದ ಮನೆಗಳನ್ನು ನೆಲಸಮ ಮಾಡಲಾಯಿತು ಮತ್ತು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಯಿತು, ಹಾಗೂ
- ಈ ರೀತಿಯಾಗಿ ಮನುಷ್ಯರದಲ್ಲದ ಭೂಮಿ(ನೋ ಮ್ಯಾನ್ಸ್ ಲ್ಯಾಂಡ್)ಯನ್ನು ಸ್ಥಾಪಿಸಲಾಗಿ, ದ ಡೆತ್ ಸ್ಟ್ರಿಪ್ ಎಂಬ ಹೆಸರನ್ನು ಪಡೆದುಕೊಂಡಿತು. ನೋ ಮ್ಯಾನ್ಸ್ ಲ್ಯಾಂಡ್‍ನಲ್ಲಿ ಕೆದಕಿದ ಗಾರೆಯನ್ನು ಹಾಸಲಾಯಿತು. ಇದರಿಂದ ಕಾಲ ಹೆಜ್ಜೆಗುರುತುಗಳು ನಿಚ್ಚಳವಾಗಿ ಕಂಡುಬರಲು ಮತ್ತು ಯಾವ ಕಾವಲಾಳುಗಳು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಿಲ್ಲವೆಂದು ಅಧಿಕಾರಿಗಳು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತಿತ್ತು;[೪೩]
- ಇಲ್ಲಿ ಅಡಗಿಕೊಳ್ಳಲು ಯಾವುದೇ ಜಾಗವಿರಲಿಲ್ಲ, ಮತ್ತು ಎಲ್ಲದ್ಕ್ಕಿಂತ ಮುಖ್ಯವಾಗಿ ಗೋಡೆಯ ಕಾವಲುಪಡೆಯವರು ಗುರಿಯಿಡಲು ಅಡ್ಡಿತಡೆಯಿಲ್ಲದ ಮುಕ್ತಪ್ರದೇಶವನ್ನು ಒದಗಿಸಿಕೊಡುತ್ತಿದ್ದಿತು.
ಹಲವಾರು ವರ್ಷಗಳ ಅವಧಿಯಲ್ಲಿ ಬರ್ಲಿನ್ ಗೋಡೆಯು ಈ ಕೆಳಗಿನ ನಾಲ್ಕು ರೀತಿಗಳಲ್ಲಿ ರೂಪಾಂತರ ಹೊಂದುವುದರ ಮೂಲಕ ಹಂತಹಂತವಾಗಿ ಬೆಳೆಯಿತು:
- ತಂತಿ ಬೇಲಿ (1961)
- ಸುಧಾರಿತ ತಂತಿ ಬೇಲಿ (1962–1965)
- ಕಾಂಕ್ರೀಟ್ ಗೋಡೆ (1965–1975)
- Grenzmauer 75 (ಗಡಿ ಗೋಡೆ 75) (1975–1989)
- The "ನಾಲ್ಕನೇ ಪೀಳಿಗೆಯ ಗೋಡೆ"ಯನ್ನು ಅಧಿಕೃತವಾಗಿ "Stützwandelement UL 12.11" (ಗೋಡೆಯ ಅಂಶವಾದ UL 12.11ನ್ನು ಉಳಿಸಿಕೊಂಡು) ಎಂದು ಕರೆಯಲಾಗುತ್ತಿದ್ದು, ಇದು ಗೋಡೆಯ ಕೊನೆಯ ಮತ್ತು ಅತ್ಯಂತ ಸಂಕೀರ್ಣವಾದ ಆವೃತ್ತಿಯಾಗಿದ್ದಿತು. Begun in 1975[೪೪] ರಲ್ಲಿ ಆರಂಭವಾಗಿ ಸುಮಾರು 1980ರ ಹೊತ್ತಿಗೆ ಮುಗಿದ ಈ ಗೋಡೆಯು[೪೫] ಬಲಪಡಿಸಿದ ಮತ್ತು 3.6 metres (12 ft) ಎತ್ತರ ಹಾಗೂ 1.2 metres (3.9 ft) ಅಗಲವಾಗಿದ್ದ ಕಾಂಕ್ರೀಟ್‌ನ 45,000 ಪ್ರತ್ಯೇಕ ಭಾಗಗಳಿಂದ ನಿರ್ಮಿತವಾಗಿದ್ದು, ಇದಕ್ಕೆ ತಗುಲಿದ ಒಟ್ಟು ಖರ್ಚು 16,155,000 ಪೂರ್ವ ಜರ್ಮನ್ ಮಾರ್ಕ್ಸ್ ಥವಾ ಸುಮಾರು 3,638,000 ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳು.[೪೬] * ಈ ಆವೃತ್ತಿಗೆ ಸೇರಿಸಲಾದ ಕಾಂಕ್ರೀಟ್ ಉಪಬಂಧಗಳನ್ನು ಪಲಾಯನ ಮಾಡುವವರು ತಮ್ಮ ಕಾರುಗಳನ್ನು ಬಳಸಿ ತಡೆಗೋಡೆಗಳನ್ನು ಹಾದುಹೋಗಬಾರದೆಂಬ ಕಾರಣದಿಂದ ಸೇರಿಸಲಾಯಿತು.[೪೭] ಆಯಕಟ್ಟಿನ ಜಾಗಗಳಲ್ಲಿ ಅಕಸ್ಮಾತ್ ಯುದ್ಧದ ಸಂದರ್ಭ ಒದಗಿದಲ್ಲಿ ಪೂರ್ವ ಜರ್ಮನ್ ಮತ್ತು ಸೋವಿಯೆತ್‌ನ ಶಸ್ತ್ರಸಜ್ಜಿತ ವಾಹನಗಳು ಸುಲಭವಾಗಿ ಒಡೆದುಕೊಂಡು ಹೋಗಲು ಅನುಕೂಲವಾಗುವಂತೆ ಗೋಡೆಯನ್ನು ಸುಮಾರುಮಟ್ಟಿಗೆ ದುರ್ಬಲವಾಗಿರುವಂತೆ ಕಟ್ಟಲಾಯಿತು.[೪೮]
- ಗೋಡೆಯ ಮೇಲ್ಭಾಗವನ್ನು ದಾಟಲು ಸಾಧ್ಯವಾಗದಿರುವಂತೆ ಅಲ್ಲಿ ನುಣುಪು ಮೇಲ್ಮೈಯುಳ್ಳ ಪೈಪುಗಳನ್ನು ಅಳವಡಿಸಲಾಯಿತು. ಇದನ್ನು ಭದ್ರಪಡಿಸುವ ಸಲುವಾಗಿ ಜಾಲರಿ ಬೇಲಿ, ಸಂಜ್ಞೆಗಳ ಬೇಲಿ, ವಾಹನ-ಮಾರಕ ಕಂದಕಗಳು, ಮುಳ್ಳುತಂತಿಗಳು, ಉದ್ದ ಸರಪಣಿಯ ನಾಯಿಗಳು, "ಡೆತ್ ಸ್ಟ್ರಿಪ್"ನ ಮೇಲೆ ಬಾಲ್ಕನಿಗಳಡಿಯಲ್ಲಿ ತೂಗಾಡುತ್ತಿದ್ದ "ಮೊಳೆಗಳ ಹಾಸಿಗೆಗಳು", 116ಕ್ಕೂ ಹೆಚ್ಚು ಕಾವಲುಗೋಪುರಗಳು,[೪೯] ಮತ್ತು 20 ಬಂಕರ್ಗಳು ಇದ್ದವು.
- ಗೋಡೆಯ ಈ ಆವೃತ್ತಿಯೇ ಛಾಯಾಚಿತ್ರಗಳಲ್ಲಿ ಹೆಚ್ಚಾಗಿ ಕಂಡುಬರುವು, ಮತ್ತು ಬರ್ಲಿನ್ ಮತ್ತು ಪ್ರಪಂಚೆದೆಲ್ಲೆಡೆ ಕಂಡುಬರುವ ಗೋಡೆಯ ಉಳಿದುಕೊಂಡ ಚೂರುಗಳು ಅವಶೇಷಗಳಾಗಿವೆ. ಇದರ ವಿನ್ಯಾಸವು ಹಲವಾರು ತಾಂತ್ರಿಕ ಅಂಶಗಳಲ್ಲಿ ಜರ್ಮನ್ ಒಳ ಗಡಿಯನ್ನು ಹೋಲುತ್ತಿತ್ತಾದರೂ ಬರ್ಲಿನ್ ಗೋಡೆಗೆ ಲ್ಯಾಂಡ್ ಮೈನ್‌ಗಳಾಗಲೀ ಸ್ಪ್ರಿಂಗ್ ಗನ್‌ಗಳಾಗಲೀ ಇರಲಿಲ್ಲ.[೪೩]
ಸುತ್ತಮುತ್ತಲಿನ ಮುನಿಸಿಪಾಲಿಟಿಗಳು
[ಬದಲಾಯಿಸಿ]- ಬರ್ಲಿನ್ನ ಒಳಗೇ ಇದ್ದ ವಲಯ-ವಲಯಗಳ ನಡುವಿನ ಸರಹದ್ದುಗಳಲ್ಲದೆ, ಗೋಡೆಯು ಪಶ್ಚಿಮ ಬರ್ಲಿನ್ ಅನ್ನು ಈಗಿನ ರಾಜ್ಯವಾದ ಬ್ರ್ಯಾಂಡೆನ್ಬರ್ಗ್ನಿಂದ ಪ್ರತ್ಯೇಕಿಸುತ್ತಿತ್ತು. ಗಡಿಯಾರದ ಮುಳ್ಳಿನ ಚಾಲನೆಗೆ ವಿರುದ್ಧವಾದ ದಿಕ್ಕಿನಂತೆ ಪಟ್ಟಿಮಾಡಲಾಗಿರುವ ಈ ಕೆಳಗಿನ ಇಂದಿನ ಮುನಿಸಿಪಾಲಿಟಿಗಳು ಹಿಂದಿನ ಪಶ್ಚಿಮ ಬರ್ಲಿನ್ನ ಗಡಿಗೆ ಹೊಂದಿಕೊಂಡಂತಿದ್ದವು:
- ಓಬರ್ಹೇವೆಲ್ : ಮುಹ್ಲೆನ್ಬೆಕರ್ ಲ್ಯಾಂಡ್ (ಕೆಲಭಾಗ ಮಾತ್ರ), ಗ್ಲೀನಿಕ್/ನಾರ್ಡ್ಬಾಹ್ನ್, ಹೋಹೆನ್ ನ್ಯೂಯೆಂಡಾರ್ಫ್, ಹೆನ್ನಿಗ್ಸ್ಡಾರ್ಫ್
- ಹೇವೆಲ್ಲ್ಯಾಂಡ್ : ಶಾನ್ವಾಲ್ಡ್-ಗ್ಲೇನ್, ಫಾಲ್ಕೆನ್ಸೀ, ಡಾಲ್ಗೋ-ಡೋಬೆರಿಟ್ಸ್
- ಪಾಟ್ಸ್‌ಡ್ಯಾಮ್ (ಅರ್ಬನ್ ಡಿಸ್ಟ್ರಿಕ್ಟ್)
- ಪಾಟ್ಸ್‌ಡ್ಯಾಮ್-ಮಿಟ್ಟೆಲ್ಮಾರ್ಕ್ : ಸ್ಟಾಹ್ನ್ಸ್ಡಾರ್ಫ್, ಕ್ಲೇನ್ಮ್ಯಾಶ್ನೋವ್, ಟೆಲ್ಟೋವ್
- ಟೆಲ್ಟೋವ್-ಫ್ಲ್ಯಾಮಿಂಗ್ : ಗ್ರೋಬೀರೆನ್, ಬ್ಲ್ಯಾಂಕೆನ್ಫೀಲ್ಡ್-ಮಾಹ್ಲೋವ್
- ಡಾಹ್ಮ್-ಸ್ಪ್ರೀವಾಲ್ಡ್ : ಶೋನ್ಫೆಲ್ಡ್ (ಕೆಲಭಾಗ)
ಅಧಿಕೃತ ದಾಟುವಿಕೆಗಳು ಮತ್ತು ಬಳಕೆ
[ಬದಲಾಯಿಸಿ]- ಪೂರ್ವ ಮತ್ತು ಪಶ್ಚಿಮ ಬರ್ಲಿನ್‌ಗಳ ನಡುವೆ ಒಂಬತ್ತು ಗಡಿದಾಟುವಿಕೆಗಳಿದ್ದು, ಇವು ಪಶ್ಚಿಮ ಬರ್ಲಿನರುಗಳು, ಪಶ್ಚಿಮ ಜರ್ಮನರು, ಪಾಶ್ಚಿಮಾತ್ಯ ವಿದೇಶೀಯರು ಮತ್ತು ಮಿತ್ರಪಕ್ಷದಿಂದ ನಿಯಮಿಸಲ್ಪಟ್ಟವರು ಪೂರ್ವ ಜರ್ಮನಿಗೆ ಭೇಟಿ ನೀಡಲು ಅನುಕೂಲವಾಗಿದ್ದವು.
- ಇದರ ಜತೆಗೇ ಅವಶ್ಯವಿದ್ದ ದಾಖಲೆಗಳನ್ನು ಹೊಂದಿದ್ದ GDR ನಾಗರಿಕರು ಮತ್ತು ಇತರ ಸಮಾಜವಾದೀ ದೇಶಗಳ ನಾಗರಿಕರೂ ಕೂಡ ಪಶ್ಚಿಮ ಬರ್ಲಿನ್‌ಗೆ ಹೇಟಿ ನೀಡಬಹುದಾಗಿತ್ತು. ಈ ದಾಟುವಿಕೆಗಳು ಅವುಗಳನ್ನು ಬಳಸಲು ಅನುಮತಿಯಿದ್ದ ರಾಷ್ಟ್ರೀಯತೆಗಳಿಗೆ ಅನುಸಾರವಾಗಿ ನಿರ್ಬಂಧಿಸಲ್ಪಟ್ಟಿದ್ದವು (ಪೂರ್ವ ಜರ್ಮನರು, ಪಶ್ಚಿಮ ಜರ್ಮನರು, ಪಶ್ಚಿಮ ಬರ್ಲಿನರುಗಳು,
- ಇತರ ದೇಶಗಳವರು). ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದೆಂದರೆ ಚೆಕ್‌ಪಾಯಿಂಟ್ ಚಾರ್ಲೀ ಎಂದು ಕರೆಯಲಾಗುತ್ತಿದ್ದ, ವಾಹನ ಮತ್ತು ಪಾದಚಾರಿಗಳ ತಪಾಸಣಾ ಕೇಂದ್ರವಾಗಿದ್ದ, ಮಿತ್ರಪಕ್ಷದ ಸಿಬ್ಬಂದಿವರ್ಗ ಮತ್ತು ವಿದೇಶೀಯರಿಗೆ ಮಾತ್ರ ಮೀಸಲಾಗಿದ್ದ ಫ್ರೀಡರಿಕ್‌ಸ್ಟ್ರೇಬ್ ಮತ್ತು ಜಿಮ್ಮರ್‌ಸ್ಟ್ರೇಬ್‌ನ ಮೂಲೆ.[೫೦]
- ಹಲವಾರು ಇತರ ಗಡಿದಾಟುಗಳು ಪಶ್ಚಿಮ ಬರ್ಲಿನ್ ಮತ್ತು ಅದನ್ನು ಸುತ್ತುವರಿದ ಪೂರ್ವ ಜರ್ಮನಿಗಳ ನಡುವೆ ಅಸ್ತಿತ್ವದಲ್ಲಿದ್ದವು. ಇವುಗಳನ್ನು ಪಶ್ಚಿಮ ಜರ್ಮನಿ ಮತ್ತು ಪಶ್ಚಿಮ ಬರ್ಲಿನ್‌ಗಳ ನಡುವೆ ಪ್ರಯಾಣಿಸುವುದಕ್ಕಾಗಿ, ಪಶ್ಚಿಮ ಬರ್ಲಿನ್‌ನವರು ಪೂರ್ವ ಜರ್ಮನಿಗೆ ಭೇಟಿ ನೀಡುವುದಕ್ಕಾಗಿ, ಪೂರ್ವ ಜರ್ಮನಿಯ ನೆರೆಯ ದೇಶಗಳಿಗೆ ಪ್ರಯಾಣಿಸುವುದಕ್ಕಾಗಿ (ಪೋಲಂಡ್, ಜೆಕೋಸ್ಲೊವಾಕಿಯಾ, ಡೆನ್ಮಾರ್ಕ್), ಮತ್ತು ಅನುಮತಿಪತ್ರಗಳನ್ನು ಹೊಂದಿದ ಪೂರ್ವ ಜರ್ಮನರು ಪಶ್ಚಿಮ ಬರ್ಲಿನ್‌ಗೆ ಭೇಟಿ ನೀಡುವುದಕ್ಕಾಗಿ ಬಳಸಲಾಗುತ್ತಿತ್ತು.
- After the 1972ರ ಒಪ್ಪಂದಗಳ ನಂತರ ಪಶ್ಚಿಮ ಬರ್ಲಿನ್‌ನ ತ್ಯಾಜ್ಯವನ್ನು ಪೂರ್ವ ಜರ್ಮನಿಯ ಕಸದ ಗುಂಡಿಗಳಿಗೆ ಸಾಗಿಸುವ ಸಲುವಾಗಿ ಹೊಸ ಗಡಿದಾಟುಗಳನ್ನು ತೆರೆಯಲಾಯಿತು, ಇದರ ಜತೆಗೇ ಪಶ್ಚಿಮ ಬರ್ಲಿನ್‌ನ ಎಕ್ಸ್‌ಕ್ಲೇವ್(ಇತರ ದೇಶಗಳಿಂದ ಸುತ್ತುವರಿಯಲ್ಪಟ್ಟು ಬೇರಾಗಿರುವ ದೇಶದ ಭಾಗ)ಗಳಿಗೆ ಪ್ರವೇಶ ಕಲ್ಪಿಸುವುದಕ್ಕಾಗಿ ಕೆಲವು ಗಡಿದಾಟುಗಳನ್ನು ತೆರೆಯಲಾಯಿತು(ನೋಡಿ ಸ್ಟೀನ್‌ಸ್ಟೂಕೆನ್ ).
- ನಾಲ್ಕು ಆಟೋಬಾನ್ಗಳು ಪಶ್ಚಿಮ ಬರ್ಲಿನ್ ಇಂದ ಪಶ್ಚಿಮ ಜರ್ಮನಿಗೆ ಸಂಪರ್ಕ ಕಲ್ಪಿಸುತ್ತಿದ್ದವು, ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದೆಂದರೆ ಪೂರ್ವ ಜರ್ಮನ್ ಪ್ರದೇಶವನ್ನು ಹೆಲ್ಮ್‌ಸ್ಟೆಡ್ ಮತ್ತು ಮರೀನ್‌ಬಾರ್ನ್ ಎಂಬ ಊರುಗಳ ನಡುವೆ ಪ್ರವೇಶಿಸುತ್ತಿದ್ದ (ಚೆಕ್‌ಪಾಯಿಂಟ್ ಆಲ್ಫಾ), ಮತ್ತು ಪಶ್ಚಿಮ ಬರ್ಲಿನ್ ಅನ್ನು ನೈರುತ್ಯ ಜರ್ಮನಿಯ ಡ್ರೇಲಿಂಡೆನ್ ಮೂಲಕ (ಮಿತ್ರಪಕ್ಷಗಳಿಗಾಗಿ ಚೆಕ್‌ಪಾಯಿಂಟ್ ಬ್ರಾವೋ) ಪ್ರವೇಶಿಸುತ್ತಿದ್ದ ಬರ್ಲಿನ್-ಹೆಲ್ಮ್‌ಸ್ಟೆಡ್ ಆಟೋಬಾನ್.
- ಪಶ್ಚಿಮ ಬರ್ಲಿನ್‌ಗೆ ರೇಲ್ವೇ ಮೂಲಕ(ನಾಲ್ಕು ದಾರಿಗಳು) ಹಾಗೂ ಕಾಲುವೆಗಳು ಮತ್ತು ನದಿಗಳ ಮೂಲಕ ವಾಣಿಜ್ಯ ನೌಕಾ ವ್ಯವಹಾರಗಳಿಗಾಗಿ ದೋಣಿಗಳ ಮೂಲಕ ಹೋಗಿಬರಬಹುದಾಗಿದ್ದಿತು.
ಜರ್ಮನರಲ್ಲದ ಪಾಶ್ಚಿಮಾತ್ಯರು ಗಡಿಯನ್ನು ಪೂರ್ವ ಬರ್ಲಿನ್‌ನ ಫ್ರೀಡರಿಕ್‌ಸ್ಟ್ರೇಬ್ ಸ್ಟೇಶನ್ ಮತ್ತು ಚೆಕ್‌ಪಾಯಿಂಟ್ ಚಾರ್ಲೀಗಳ ಮೂಲಕ ದಾಟಬಹುದಾಗಿತ್ತು.
- ಗೋಡೆಯ ನಿರ್ಮಾಣವಾದಾಗ, ಬರ್ಲಿನ್‍ನ ಸಂಕೀರ್ಣವಾದ ಸಾರ್ವಜನಿಕ ಸಾರಿಗೆ ಜಾಲಗಳಾದ ಎಸ್-ಬಾನ್ ಮತ್ತು ಯು-ಬಾನ್ಗಳು ಅದರೊಂದಿಗೆ ಪ್ರತ್ಯೇಕಿಸಲ್ಪಟ್ಟವು.[೪೫] ಕೆಲವು ದಾರಿಗಳು ಅರ್ಧಕ್ಕೇ ಭಾಗವಾದವು; ಹಲವಾರು ಸ್ಟೇಶನ್ನುಗಳನ್ನು ಮುಚ್ಚಲಾಯಿತು.
- ಮೂರು ಪಶ್ಚಿಮದ ರೇಲ್ವೇಲೈನುಗಳು ಪೂರ್ವ ಜರ್ಮನಿಯ ಪ್ರದೇಶದ ಕೆಲವೇ ಭಾಗಗಳ ಮೂಲಕ ಹಾದುಹೋಗುತ್ತಿದ್ದು, ಇಲ್ಲಿ ಟ್ರೇನುಗಳು ಪೂರ್ವದ ಸ್ಟೇಶನ್ನುಗಳ ( Geisterbahnhöfe, ಅಥವಾ ಘೋಸ್ಟ್ ಸ್ಟೇಶನ್‌ಗಳುs) ಮೂಲಕ ನಿಲ್ಲದೆಯೇ ಹಾದುಹೋಗುತ್ತಿದ್ದವು. ಪೂರ್ವ ಮತ್ತು ಪಶ್ಚಿಮದ ಜಾಲಗಳೆರಡೂ Friedrichstraßeನಲ್ಲಿ ಸಂಧಿಸುತ್ತಿದ್ದು ಇದು ಗಡಿದಾಟುವ ಅನುಮತಿ ಹೊಂದಿದ್ದವರಿಗೆ (ಹೆಚ್ಚಾಗಿ ಪಾಶ್ಚಿಮಾತ್ಯರು) ಪ್ರಮುಖ ಕೇಂದ್ರವಾಗಿದ್ದಿತು.
ಯಾರು ದಾಟಬಹುದಾಗಿತ್ತು
[ಬದಲಾಯಿಸಿ]- ಪಶ್ಚಿಮ ಜರ್ಮನರು ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ನಾಗರಿಕರು ಸಾಮಾನ್ಯವಾಗಿ ಪೂರ್ವ ಜರ್ಮನಿಗೆ ಭೇಟಿ ನೀಡಬಹುದಾಗಿತ್ತು. ಸಾಮಾನ್ಯವಾಗಿ ಇದಕ್ಕಾಗಿ ಹಲವು ವಾರಗಳ ಮುಂಚೆಯೇ ಪೂರ್ವ ಜರ್ಮನ್ ದೂತಾವಾಸಕ್ಕೆ ವೀಸಾ ಅರ್ಜಿಯೊಂದನ್ನು ಸಲ್ಲಿಸಬೇಕಾಗಿತ್ತು.
- ಪೂರ್ವ ಬರ್ಲಿನ್‌ಗೆ ಮಾತ್ರ ಸೀಮಿತವಾದ ಹಗಲುಭೇಟಿಗಳಿಗೆ ವಿಸಾವನ್ನು ಯಾವುದೇ ಅರ್ಜಿಯಿಲ್ಲದೇ ಸರಳ ವಿಧಾನವೊಂದರ ಮೂಲಕ ಗಡಿದಾಟುವಿಕೆಯ ಸ್ಥಳದಲ್ಲಿಯೇ ನೀಡಲಾಗುತ್ತಿತ್ತು. ಆದರೆ, ಪೂರ್ವ ಜರ್ಮನ್ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡದೆಯೇ ಪ್ರವೇಶಕ್ಕೆ ಅನುಮತಿಯನ್ನು ನಿರಾಕರಿಸಬಹುದಾಗಿತ್ತು.
- 1980ರ ದಶಕದಲ್ಲಿ ನಗರದ ಪೂರ್ವಭಾಗಕ್ಕೆ ಭೇಟಿನೀಡಲು ಬಯಸುವ ಪಶ್ಚಿಮಭಾಗದ ನಿವಾಸಿಗಳು ಕನಿಷ್ಠ DM 25ನ್ನಾದರೂ ಪೂರ್ವ ಜರ್ಮನ್ ಕರೆನ್ಸಿಗೆ 1:1ರಷ್ಟು ಕಡಿಮೆ ವಿನಿಮಯ ದರದಲ್ಲಿ ಬದಲಿ ಮಾಡುವುದು ಕಡ್ಡಾಯವಾಗಿದ್ದಿತು. ಪೂರ್ವದಿಂದ ಪೂರ್ವ ಜರ್ಮನ್ ಕರೆನ್ಸಿಯನ್ನು ರಫ್ತು ಮಾಡುವುದಕ್ಕೆ ನಿರ್ಬಂಧವಿದ್ದಿತಾದರೂ, ಕ್ವಾಪಾಸು ತೆರಳುವಾಗ ಖರ್ಚು ಮಾಡದೇ ಉಳಿದ ಹಣವನ್ನು ಭವಿಷ್ಯದ ಬಳಕೆಗಾಗಿ ಗಡಿಯಲ್ಲಿ ಬಿಟ್ಟುಹೋಗಬಹುದಾಗಿತ್ತು.
- ಪಶ್ಚಿಮದಿಂದ ಗಡಿಯನ್ನು ದಾಟುವ ಪ್ರವಾಸಿಗರು DM 5 ಬೆಲೆಯುಳ್ಳ ವೀಸಾವನ್ನು ಪಡೆಯಬೇಕಾಗಿತ್ತು; ಪಶ್ಚಿಮ ಬರ್ಲಿನ್‌ನವರು ಈ ಹಣವನ್ನು ತೆರಬೇಕಾಗಿರಲಿಲ್ಲ.ಮೊದಮೊದಲು ಪಶ್ಚಿಮ ಬರ್ಲಿನ್‌ನವರು ಪೂರ್ವ ಬರ್ಲಿನ್ ಅಥವಾ ಪೂರ್ವ ಜರ್ಮನಿಗೆ ಭೇಟಿ ನೀಡುವಂತೆಯೇ ಇರಲಿಲ್ಲ. ಅವರಿಗಾಗಿ ಇದ್ದ ಎಲ್ಲಾ ಗಡಿಪ್ರವೇಶಗಳನ್ನೂ 26 ಆಗಸ್ಟ್ 1961ರಿಂದ 17 ಡಿಸೆಂಬರ್ 1963ರವರೆಗೆ ಮುಚ್ಚಿಬಿಡಲಾಗಿತ್ತು.
- 1963ರಲ್ಲಿ ಪೂರ್ವ ಮತ್ತು ಪಶ್ಚಿಮದ ನಡುವೆ ಸಮಾಲೋಚನೆಗಳು ನಡೆದು, ಆ ವರ್ಷ ಕ್ರಿಸ್ಮಸ್ ವೇಳೆಯಲ್ಲಿ ಸೀಮಿತ ಭೇಟಿಗಳ ಸಾಧ್ಯತೆಗಳು ಉಂಟಾದವು(Passierscheinregelung ). ಇದೇ ರೀತಿಯ ಬಹಳ ಸೀಮಿತ ಏರ್ಪಾಟುಗಳನ್ನು 1964, 1965 ಮತ್ತು 1966ರಲ್ಲಿ ಮಾಡಲಾಯಿತು.
- 1971ರಲ್ಲಿ Four Power Agreement on Berlinನ ನಂತರ ನಡೆದ ಮಾಡಿಕೊಳ್ಳಲಾದ ಒಪ್ಪಂದಗಳ ಪ್ರಕಾರ ಪಶಿಮ ಬರ್ಲಿನ್‌ನವರು ಪೂರ್ವ ಬರ್ಲಿನ್ ಮತ್ತು ಪೂರ್ವ ಜರ್ಮನಿಗೆ ನಿಯಮಿತವಾಗಿ ಭೇಟಿ ನೀಡಲು ವೀಸಾಗಳಿಗೆ ಅರ್ಜಿ ನೀಡಬೇಕೆಂದೂ, ಇವನ್ನು ಈಗಾಗಲೇ ಪಶ್ಚಿಮ ಜರ್ಮನರ ಬಗ್ಗೆ ಜಾರಿಯಲ್ಲಿರುವ ನಿಯಮಗಳಿಗೆ ತಾಳೆಮಾಡಲಾಗುವುದೆಂದೂ ನಿಷ್ಕರ್ಷೆಯಾಯಿತು.
- ಆದರೆ ಪೂರ್ವ ಜರ್ಮನ್ ಅಧಿಕಾರಿಗಳು ಇದಾದ ನಂತರವೂ ಅನುಮತಿ ನೀಡಲು ನಿರಾಕರಿಸಬಹುದಾಗಿತ್ತು. ಮೊದಮೊದಲು ಪೂರ್ವ ಬರ್ಲಿನ್‌ನವರು ಮತ್ತು ಪೂರ್ವ ಜರ್ಮನರು ಪಶ್ಚಿಮ ಬರ್ಲಿನ್ ಮತ್ತು ಪಶ್ಚಿಮ ಜರ್ಮನಿಗಳಿಗೆ ಪ್ರಯಾಣಿಸುವಂತೆಯೇ ಇರಲಿಲ್ಲ. ಈ ನಿಯಮವು ಕಟ್ಟುನಿಟ್ಟಾಗಿ ಗೋಡೆಯ ಪತನವಾಗುವವರೆಗೂ ಜಾರಿಯಲ್ಲಿದ್ದಿತಾದರೂ, ನಂತರದ ವರ್ಷಗಳಲ್ಲಿ ಈ ನಿಯಮಗಳನ್ನು ಕೆಲವೆಡೆ ಸಡಿಲಿಸಲಾಯಿತು. ಅವುಗಳೆಂದರೆ:
- 1965ರ ಆರಂಭದಿಂದ ವಯಸ್ಸಾದ ಪೆನ್ಷನರುಗಳು ಪಶ್ಚಿಮಕ್ಕೆ ಪ್ರಯಾಣ ಮಾಡಬಹುದಾಗಿತ್ತು.
- ಮುಖ್ಯ ಕೌಟುಂಬಿಕ ವ್ಯವಹಾರಗಳಿಗಾಗಿ ಬಂಧುಬಳಗದವರು ಭೇಟಿ ನೀಡಬಹುದಾಗಿತ್ತು.
- ವೃತ್ತಿಪರ ಕಾರಣಗಳಿಗಾಗಿ ಪಶ್ಚಿಮಕ್ಕೆ ಪ್ರಯಾಣಿಸುವುದು ಅವಶ್ಯವಾಗಿದ್ದವರು ಭೇಟಿ ನೀಡಬಹುದಾಗಿತ್ತು (ಉದಾ. ಕಲಾವಿದರು, ಟ್ರಕ್ ಚಾಲಕರು, ಸಂಗೀತಗಾರರು, ಲೇಖಕರು ಇತ್ಯಾದಿ.)
- ಆದರೆ, ಪ್ರತಿ ಭೇಟಿಗಾಗಿಯೂ ವೈಯುಕ್ತಿಕವಾಗಿ ಅರ್ಜಿಸಲ್ಲಿಸಬೇಕಾಗಿದ್ದು, ಅನುಮತಿ ಸಿಗುವುದು ಖಾತ್ರಿಯಾಗಿರಲಿಲ್ಲ. ಇದರ ಜತೆಗೇ ಪ್ರಯಾಣಕ್ಕೆ ಅನುಮತಿ ದೊರಕಿದ್ದರೂ ಕೂಡ, GDR ಪ್ರಯಾಣಿಕರು ಸಣ್ಣ ಮೊತ್ತದ ಈಸ್ಟ್ ಜರ್ಮನ್ ಮಾರ್ಕ್ಸ್ಗಳನ್ನೂ ಕೂಡ ಡ್ಯೂಶ್ ಮಾರ್ಕ್ಗಳಿಗೆ (DM) ಬದಲಾಯಿಸುವಂತಿರಲಿಲ್ಲ, ಮತ್ತು
- ಇದರಿಂದ ಪಶ್ಚಿಮಕ್ಕೆ ಪ್ರಯಾಣ ಮಾಡುವವರಿಗೆ ಆರ್ಥಿಕ ತೊಡಕುಂಟಾಗುತ್ತಿತ್ತು. ಇದರಿಂದ ಈ ಪರಿಸ್ಥಿತಿಯನ್ನು ಉತ್ತಮಪಡಿಸುವ ಸಲುವಾಗಿ ಪಶ್ಚಿಮ ಜರ್ಮನಿಗೆ ಭೇಟಿ ನೀಡುವ GDR ನಿವಾಸಿಗಳಿಗೆ ವಾರ್ಷಿಕವಾಗಿ ಸಣ್ಣ DM ಮೊತ್ತವೊಂದನ್ನು ನೀಡುವ ಪಶ್ಚಿಮ ಜರ್ಮನ್ ಪದ್ಧತಿಯು (Begrüßungsgeld , ಅಥವಾ ಸ್ವಾಗತಧನ) ಆರಂಭವಾಯಿತು.
- ಪೂರ್ವ ಜರ್ಮನರಿಗಿದ್ದಂತೆಯೇ ಇತರ ಪೂರ್ವ ಯುರೋಪಿಯನ್ ರಾಷ್ಟ್ರಗಳಲ್ಲೂ ಕೂಡ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭೇಟಿ ನೀಡುವ ಬಗ್ಗೆ ನಿರ್ಬಂಧಗಳಿದ್ದವು, ಅದರೆ ಇಅದಕ್ಕೆ ಅನ್ವಯವಾಗುವಂತಹ ಅಪವಾದಗಳು (ಏನಾದರೂ ಇದ್ದಲ್ಲಿ) ಒಂದು ರಾಷ್ಟ್ರದಿಂದ ಇನ್ನೊಂದಕ್ಕೆ ಬದಲಾಗುತ್ತಿದ್ದವು.
- ಮಿತ್ರಪಕ್ಷಗಳ ಮಿಲಿಟರಿ ಸಿಬ್ಬಂದಿ ಮತ್ತು ಸಿವಿಲಿಯನ್ ಅಧಿಕಾರಿಗಳು ಪೂರ್ವ ಬರ್ಲಿನ್‌ಗೆ ಪೂರ್ವ ಜರ್ಮನ್ ಪಾಸ್‌ಪೋರ್ಟ್ ನಿಯಂತ್ರಣಗಳ ಅನುಮತಿಯಿಲ್ಲದೆ, ವೀಸಾ ಅಥವಾ ವಿನಿಮಯ ಮೊತ್ತದ ಅವಶ್ಯಕತೆಯಿಲ್ಲದೆಯೇ ಪ್ರವೇಶಿಸಿ ಹೊರಹೋಗಬಹುದಾಗಿತ್ತು. ಇದೇ ರೀತಿಯಾಗಿ ಸೋವಿಯೆತ್ ಮಿಲಿಟರಿ ಗಸ್ತಿನವರು ಪಶ್ಚಿಮ ಬರ್ಲಿನ್‌ಗೆ ಪ್ರವೇಶಿಸಿ ಹೊರಹೋಗಬಹುದಾಗಿತ್ತು.
- ಇದು ಯುದ್ಧಾನಂತರದ ಫೋರ್ ಪವರ್ಸ್ ಒಪ್ಪಂದಗಳಿಗನುಸಾರವಾಗಿತ್ತು. ಪಾಶ್ಚಿಮಾತ್ಯ ಮಿತ್ರಪಕ್ಷಗಳ ಕಾಳಜಿಗೆ ಅವರು ಗಡಿಯನ್ನು ದಾಟುವಾಗ ಪೂರ್ವ ಜರ್ಮನ್ ಅಧಿಕಾರಿಗಳೊಂದಿಗೆ ನಡೆಸಬೇಕಾಗಿದ್ದ ವ್ಯವಹಾರಗಳು ಕಾರಣವಾಗಿದ್ದವು, ಏಕೆಂದರೆ ಮಿತ್ರಪಕ್ಷಗಳ ನೀತಿಯು ಪಶ್ಚಿಮ ಬರ್ಲಿನ್‌ನಿಂದ ಅಥವಾ ಪಶ್ಚಿಮ ಬರ್ಲಿನ್‌ಗೆ ಮಿತ್ರಪಕ್ಷಗಳ ಮಿಲಿಟರಿ ಚಲನವಲನವನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಮತ್ತು ಪೂರ್ವ ಬರ್ಲಿನ್‌ಗೆ ಪ್ರವೇಶ, ಹೊರಹೋಗುವಿಕೆ ಅಥವಾ ಇರುವಿಕೆಯನ್ನು ಒಳಗೊಂಡಂತೆ ಗ್ರೇಟರ್ ಬರ್ಲಿನ್‌ನಲ್ಲಿ ಮಿತ್ರಪಕ್ಷಗಳ ಉಪಸ್ಥಿತಿಯ ವಿಚಾರವಾಗಿ GDRನ ಅಧಿಕಾರವನ್ನು ಮಾನ್ಯ ಮಾಡುತ್ತಿರಲಿಲ್ಲ;
- ಮಿತ್ರಪಕ್ಷದವರ ಪ್ರಕಾರ ಇಂತಹ ಸಂದರ್ಭಗಳಲ್ಲಿ ಸೋವಿಯೆತ್ ಒಕ್ಕೂಟಕ್ಕೆ ಮಾತ್ರ ಮಿತ್ರಪಕ್ಷದ ಸಿಬ್ಬಂದಿಯನ್ನು ನಿಯಂತ್ರಿಸುವ ಅಧಿಕಾರವಿತ್ತೇ ಹೊರತು GDRಗಲ್ಲ. ಈ ಕಾರಣದಿಂದಾಗಿ,ಪಾಟ್ಸ್‌ಡ್ಯಾಮ್ನಲ್ಲಿ ಸ್ಥಿತವಾಗಿದ್ದ ಪೂರ್ವ ಜರ್ಮನಿಯ ಸೋವಿಯೆತ್ ಪಡೆಗಳ ಕಮ್ಯಾಂಡರ್‌ನ ಅಧಿಕಾರದಲ್ಲಿದ್ದ Military Liaison Missionsನಲ್ಲಿ ಪಾಲ್ಗೊಳ್ಳಲು ನೇಮಿಸಲಾಗಿದ್ದ ಪಾಶ್ಚಿಮಾತ್ಯ ಮಿತ್ರಪಕ್ಷದ ಮಿಲಿಟರಿ ಸಿಬ್ಬಂದಿಗಳಿಗಾಗಿ ವಿಶೇಷ ಪ್ರಯಾಣ ನಿಯಮಗಳು ಅನ್ವಯಿಸುತ್ತಿದ್ದವು.
- ಮಿತ್ರಪಕ್ಷದ ಸಿಬ್ಬಂದಿಗಳು ರಸ್ತೆಯ ಮೂಲಕ ಪ್ರಯಾಣ ಮಾಡುವಾಗ ಈ ಕೆಳಗಿನ ಮಾರಗಗಳಲ್ಲಿ ನೀತಿಗಳ ಪ್ರಕಾರ ನಿರ್ಬಂಧಿಸಲ್ಪಡುತ್ತಿದ್ದರು:
- ಪಶ್ಚಿಮ ಜರ್ಮನಿ ಮತ್ತು ಪಶ್ಚಿಮ ಬರ್ಲಿನ್ ನಡುವಣ ರಹದಾರಿ
- ರಸ್ತೆಮಾರ್ಗ: ಹೆಲ್ಮ್‌ಸ್ಟೆಡ್-ಬರ್ಲಿನ್ ಆಟೋಬಾನ್ (A2) (ಚೆಕ್‌ಪಾಯಿಂಟ್ ಆಲ್ಫಾ ಮತ್ತು ಬ್ರಾವೋ, ಅನುಕ್ರಮವಾಗಿ). ಈ ಚೆಕ್‌ಪಾಯಿಂಟ್‌ಗಳನ್ನು ಸೋವಿಯೆತ್ ಮಿಲಿಟರಿ ಸಿಬ್ಬಂದಿಯು ನಿರ್ವಹಿಸುತ್ತಿದ್ದು ಎರಡೂ ಕೇಂದ್ರಗಳ ನಡುವಿನ ಮಿತ್ರಪಕ್ಷಗಳ ಸಿಬ್ಬಂದಿಯ ಪರಿಷ್ಕರಣೆಯನ್ನು ನಡೆಸುತ್ತಿತ್ತು. ಮಿಲಿಟರಿ ಸಿಬ್ಬಂದಿಯು ಈ ರೀತಿ ಪ್ರಯಾಣಿಸಬೇಕಾಗಿ ಬಂದಾಗ ತಮ್ಮ ಸಮವಸ್ತ್ರವನ್ನು ಧರಿಸಬೇಕಾಗಿತ್ತು.
- ರೈಲುಮಾರ್ಗ: ಪಾಶ್ಚಿಮಾತ್ಯ ಮಿತ್ರಪಕ್ಷೀಯ ಮಿಲಿಟರಿ ಸಿಬ್ಬಂದಿಗಳು ಮತ್ತು ಸಿವಿಲಿಯನ್ ಅಧಿಕಾರಿಗಳು ಪಶ್ಚಿಮ ಜರ್ಮನಿ ಮತ್ತು ಪಶ್ಚಿಮ ಬರ್ಲಿನ್ ನಡುವಿನ ವಾಣಿಜ್ಯ ಟ್ರೇನ್ ಸೇವೆಯನ್ನು ಉಪಯೋಗಿಸದಂತೆ ನಿರ್ಬಂಧ ಹೇರಲಾಗಿತ್ತು, ಏಕೆಂದರೆ ಅವನ್ನು GDRನ ಪಾಸ್‌ಪೋರ್ಟ್ ಮತ್ತು ಸೀಮಾಶುಲ್ಕ ವಿಭಾಗಗಳು ನಿಯಂತ್ರಿಸುತ್ತಿದ್ದವು. ಇದಕ್ಕೆ ಬದಲಾಗಿ, ಮಿತ್ರಪಕ್ಷದ ಪಡೆಗಳು ಪಶ್ಚಿಮ ಜರ್ಮನಿ ಮತ್ತು ಪಶ್ಚಿಮ ಬರ್ಲಿನ್‌ಗಳ ನಡುವೆ ತಮ್ಮ ಕರ್ತವ್ಯವಿದ್ದ ಸ್ಟೇಶನ್‌ಗಳ ನಡುವೆ ಅಧಿಕೃತ (ಕರ್ತವ್ಯ) ಟ್ರೇನುಗಳ ಸರಣಿಯನ್ನು ನಿರ್ವಹಿಸತೊಡಗಿದರು. GDRನ ಮೂಲಕ ಹಾದುಹೋಗುವಾಗ, ಈ ಟ್ರೇನುಗಳು ಬರ್ಲಿನ್‌ನ ಹೊರಗೇ ಇದ್ದ ಹೆಲ್ಮ್‌ಸ್ಟೆಡ್ ಮತ್ತು ಗ್ರೀಬ್ ನೀಟ್ಸೀಗಳ ನಡುವಿನ ಮಾರ್ಗವನ್ನು ಬಳಸುತ್ತಿದ್ದವು. ಅಧಿಕೃತ ವ್ಯವಹಾರಗಳ ಮೇರೆಗೆ ಪ್ರಯಾಣಿಸುತ್ತಿದ್ದ ಸಿಬ್ಬಂದಿ ಮಾತ್ರವಲ್ಲದೆ, ಅನುಮತಿ ಪಡೆದ ಸಿಬ್ಬಂದಿ ಕೂಡ ಸ್ಥಳಾವಕಾಶದ ಲಭ್ಯತೆಯಿದ್ದಾಗ ವೈಯುಕ್ತಿಕ ಪ್ರಯಾಣಕ್ಕಾಗಿ ಈ ಡ್ಯೂಟಿ ಟ್ರೇನುಗಳನ್ನು ಬಳಸಬಹುದಾಗಿತ್ತು. ಈ ಟ್ರೇನುಗಳು ರಾತ್ರಿಹೊತ್ತು ಮಾತ್ರ ಪ್ರಯಾಣಿಸುತ್ತಿದ್ದು, ಕಾರ್ ಪ್ರಯಾಣದಂತೆಯೇ ಡ್ಯೂಟಿ ಟ್ರೇನ್ ಪ್ರಯಾಣಿಕರ ಪರಿಷ್ಕರಣೆಯನ್ನು ಸೋವಿಯೆತ್ ಮಿಲಿಟರಿ ಸಿಬ್ಬಂದಿಯು ನಿರ್ವಹಿಸುತ್ತಿತ್ತು.
- ಪೂರ್ವ ಬರ್ಲಿನ್‌ಗೆ ಪ್ರವೇಶ ಮತ್ತು ನಿರ್ಗಮನ
- ಚೆಕ್‌ಪಾಯಿಂಟ್ ಚಾರ್ಲೀ (ಪಾದಚಾರಿಯಾಗಿ ಅಥವಾ ವಾಹನದಲ್ಲಿ ಪ್ರಯಾಣಿಸುತ್ತ)
ಮಿಲಿಟರಿ ಸಿಬ್ಬಂದಿಯಂತೆಯೆ GDRನ ತಮ್ಮ ದೂತಾವಾಸಗಳ ಜವಾಬ್ದಾರಿ ಹೊತ್ತಿದ್ದ ಪಾಶ್ಚಿಮಾತ್ಯ ಮಿತ್ರಪಕ್ಷಗಳ ರಾಜತಾಂತ್ರಿಕ ಸಿಬ್ಬಂದಿಗಳ ಪ್ರಯಾಣಕ್ಕೂ ವಿಶೇಷ ಕಾಯಿದೆಕ್ರಮಗಳು ಅನ್ವಯಿಸುತ್ತಿದ್ದವು. ಇದು ಪೂರ್ವ ಮತ್ತು ಪಶ್ಚಿಮಗಳ ನಡುವೆ ಪ್ರಯಾಣಿಸುವಾಗ ಪೂರ್ವ ಜರ್ಮನ್ ಅಧಿಕಾರವನ್ನು ಅಕಸ್ಮಾತ್ ಅನುಮೋದಿಸುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮವಾಗಿದ್ದು, ಇದು ಇಡೀ ಬರ್ಲಿನ್‌ನಲ್ಲಿ ಮಿತ್ರಪಕ್ಷದ ಪಡೆಗಳ ಸಿಬ್ಬಂದಿಯ ಅನಿಯಮಿತ ಓಡಾಟದ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿದ್ದ ಮಿತ್ರಪಕ್ಷದ ಸ್ಥಾನವನ್ನು ಇಕ್ಕಟ್ಟಿಗೆ ತಳ್ಳಬಹುದಾಗಿತ್ತು.
ಮಿತ್ರಪಕ್ಷಗಳ ಪಡೆಗಳೋಂದಿಗೆ ವಿಧ್ಯುಕ್ತವಾಗಿ ಸಂಯೋಜಿತರಾಗಿಲ್ಲದ ಪಾಶ್ಚಿಮಾತ್ಯ ಮಿತ್ರಪಕ್ಷ ಬಲಗಳ ಸಾಮಾನ್ಯ ಪ್ರಜೆಗಳು ಪೂರ್ವ ಜರ್ಮನಿಯ ಮೂಲಕ ಪಶ್ಚಿಮ ಬರ್ಲಿನ್‌ಗೆ ತೆರಳಲು ಅಥವಾ ಅಲ್ಲಿಂದ ಬರಲು ಎಲ್ಲಾ ನಿಯೋಜಿತ ಪ್ರಯಾಣಮಾರ್ಗಗಳನ್ನು ಬಳಸಬಹುದಾಗಿತ್ತು. ಪೂರ್ವ ಬರ್ಲಿನ್‌ಗೆ ಪ್ರಯಾಣಿಸುವುದಕ್ಕೆ ಸಂಬಂಧಿಸಿದಂತೆ, ಇಂತಹ ವ್ಯಕ್ತಿಗಳು ನಗರವನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಚೆಕ್‌ಪಾಯಿಂಟ್ ಚಾರ್ಲೀ ಮಾತ್ರವಲ್ಲದೆ ಫ್ರೀಡೆರಿಕ್‌ಸ್ಟ್ರೇಬ್ ಟ್ರೇನ್ ಸ್ಟೇಶನ್ ಅನ್ನು ಕೂಡ ಬಳಸಬಹುದಾಗಿತ್ತು. ಇಂತಹ ಸಂದರ್ಭಗಳಲ್ಲಿ, ಈ ಪ್ರಯಾಣಿಕರು ಮಿತ್ರಪಕ್ಷದ ಸಿಬ್ಬಂದಿಗಳಂತಲ್ಲದೆ, ಪೂರ್ವ ಜರ್ಮನ್ ಗಡಿ ನಿಯಂತ್ರಣಕ್ಕೆ ಅಧೀನವಾಗಿರಬೇಕಾಗಿತ್ತು.
ದಾಟುವ ಪ್ರಯತ್ನಗಳು
[ಬದಲಾಯಿಸಿ]ಗೋಡೆಯು ಅಸ್ತಿತ್ವದಲ್ಲಿದ್ದ ವರ್ಷಗಳಲ್ಲಿ, ಸುಮಾರು 5,000 ಮಂದಿ ಯಶಸ್ವಿಯಾಗಿ ಪಶ್ಚಿಮ ಬರ್ಲಿನ್‌ಗೆ ಪಲಾಯನ ಮಾಡಿದರು. ಗೋಡೆಯನ್ನು ದಾಟುವ ಪ್ರಯತ್ನದಲ್ಲಿ ಸಾವಿಗೀಡಾದ, ಅಥವಾ ಗೋಡೆಯ ಅಸ್ತಿತ್ವದ ದೆಸೆಯಿಂದ ಸತ್ತುಹೋದ ಜನರ ಸಂಖ್ಯೆಯು ವಿವಾದಾಸ್ಪದವಾಗಿದೆ. ಈ ವಿಷಯವಾಗಿ ಅತಿ ಹೆಚ್ಚಿನ ದನಿಯೆತ್ತಿರುವ ಚೆಕ್‌ಪಾಯಿಂಟ್ ಚಾರ್ಲೀ ಮ್ಯೂಸಿಯಮ್ನ ನಿರ್ದೇಶಕರೂ, ಮ್ಯೂಸಿಯಮ್‌ನ ಸ್ಥಾಪಕರ ವಿಧವೆಯೂ ಆಗಿರುವ ಅಲೆಕ್ಸಾಂಡ್ರಾ ಹಿಲ್ಡರ್‌ಬ್ರ್ಯಾಂಡ್ರ ಪ್ರಕಾರ ಅಂದಾಜು ಸಾವುಗಳ ಸಂಖ್ಯೆಯು 200ಕ್ಕೂ ಹೆಚ್ಚಿದೆ.[೫೧][೫೨] ಪಾಟ್ಸ್ಡ್ಯಾಮ್ನ Center for Contemporary Historical Research (ZZF)ನ ಐತಿಹಾಸಿಕ ಸಂಶೋಧನಾ ತಂಡವೊಂದು 136 ಸಾವುಗಳನ್ನು ಖಚಿತಪಡಿಸಿದೆ.[೫೩] ಇದಕ್ಕೆ ಹಿಂದಿನ ಅಧಿಕೃತ ಅಂಕಿಅಂಶಗಳು 98 ಮಂದಿಯನ್ನು ಕೊಲ್ಲಲಾಯಿತೆಂದು ಪಟ್ಟಿಮಾಡಿದ್ದವು.
ಪೂರ್ವ ಜರ್ಮನ್ ಸರ್ಕಾರವು ಗಡಿಯ ಕಾವಲುಪಡೆಯವರಿಗೆ ಪಲಾಯನ ಮಾಡುವವರ ಜತೆ ವ್ಯವಹರಿಸುವಾಗ ಗುಂಡಿಕ್ಕುವ ಆದೇಶಗಳನ್ನು ನೀಡಿದ್ದರೂ ಕೂಡ ಇವು "ಕೊಲ್ಲಲೆಂದು ಗುಂಡಿಕ್ಕು"ವ ಆದೇಶಗಳಲ್ಲ. GDR ಅಧಿಕಾರಿಗಳು ಈ ಎರಡನೆಯ ವಿಧದ ಆದೇಶಗಳನ್ನು ನೀಡಿರುವುದನ್ನು ನಿರಾಕರಿಸಿದರು. ಸಂಶೋಧಕರು ನಂತರದಲ್ಲಿ ಪತ್ತೆಹಚ್ಚಿದ ಅಕ್ಟೋಬರ್ 1973ರ ಆದೇಶವೊಂದರಲ್ಲಿ ಕಾವಲುಪಡೆಯವರಿಗೆ ಗೋಡೆಯನ್ನು ದಾಟಲು ಪ್ರಯತ್ನಿಸುವವರು ಅಪರಾಧಿಗಳೆಂದೂ ಅವರಿಗೆ ಗುಂಡಿಕ್ಕುವುದು ಅವಶ್ಯಕವೆಂದೂ ನಿರ್ದೇಶಿಸಲಾಗಿತ್ತು: "ನಿಮ್ಮ ಕೋವಿಯನ್ನು ಬಳಸಲು ಹಿಂಜರಿಯದಿರಿ, ಹೆಂಗಸರು ಮತ್ತು ಮಕ್ಕಳು ತಂಡಗಳು ಗಡಿಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದರೂ ಸರಿಯೆ, ಈ ಉಪಾಯವನ್ನು ಈ ದೇಶದ್ರೋಹಿಗಳು ಸದಾ ಬಳಸುತ್ತ ಬಂದಿರುವರು."[೫೪]
ಮೊದಮೊದಲ ಯಶಸ್ವೀ ಪ್ರಯತ್ನಗಳಲ್ಲಿ ಜನರು ಆರಂಭದಲ್ಲಿದ್ದ ಮುಳ್ಳುತಂತಿಯ ಬೇಲಿಯನ್ನು ಹಾರುವುದೋ ಅಥವಾ ಗಡಿರೇಖೆಯ ಅಪಾರ್ಟ್‌ಮೆಂಟುಗಳ ಕಿಟಕಿಗಳಿಂದ ಆಚೆ ಹಾರುವುದೋ ಮಾಡುತ್ತಿದ್ದರಾದರೂ, ಗೋಡೆಯನ್ನು ಬಲಪಡಿಸಿದ ನಂತರ ಇವೆಲ್ಲಾ ನಿಂತುಹೋದವು. ಪೂರ್ವ ಜರ್ಮನ್ ಅಧಿಕಾರಿಗಳು ಗೋಡೆಯ ಬಳಿಯ ಅಪಾರ್ಟ್‌ಮೆಂಟುಗಳಲ್ಲಿ ವಸತಿಹೂಡಲು ಅನುಮತಿ ನೀಡುತ್ತಿರಲಿಲ್ಲ, ಮತ್ತು ಗೋಡೆಯ ಬಳಿಯಿದ್ದ ಯಾವುದೇ ಕಟ್ಟಡದ ಕಿಟಕಿಗಳನ್ನು ಹಲಗೆಗಳನ್ನುಪಯೋಗಿಸಿ ಮೊಳೆಬಡಿದು ಮತ್ತು ನಂತರದಲ್ಲಿ ಇಟ್ಟಿಗಳನ್ನಿಟ್ಟು ಮುಚ್ಚಲಾಯಿತು. ಆಗಸ್ಟ್ 15, 1961ರಂದು ಕಾನ್ರಾಡ್ ಶೂಮನ್ ಎಂಬ ಪೂರ್ವ ಜರ್ಮನ್ ಗಡಿಯ ಕಾವಲು ಸೈನಿಕ ಪ್ರಥಮ ಬಾರಿಗೆ ಪಶ್ಚಿಮ ಬರ್ಲಿನ್‌ಗೆ ಮುಳ್ಳುತಂತಿಗಳನ್ನು ಹಾರಿ ಪರಾರಿಯಾದನು.[೫೫]
ಏಪ್ರಿಲ್ 1963ರಲ್ಲಿ ನಡೆದ ಇನ್ನೊಂದು ನಾಟಕೀಯವಾದ ಪರಾರಿಯನ್ನು ವುಲ್ಫ್‌ಗ್ಯಾಂಗ್ ಎಂಗೆಲ್ಸ್ ಎಂಬ 19 ವಯಸ್ಸಿನ Nationale Volksarmeeಯ ಸಿವಿಲಿಯನ್ ಕೆಲಸಗಾರನು ಕೈಗೊಂಡನು. ತಾನು ನಿಯುಕ್ತನಾಗಿದ್ದ ನೆಲೆಯಿಂದ ಸೋವಿಯೆತ್‌ನ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕವೊಂದನ್ನು ಅಪಹರಿಸಿದ ಎಂಗೆಲ್ಸ್ ಅದನ್ನು ಗೋಡೆಯನ್ನು ಮುರಿದುಕೊಂಡು ಹೋಗುವಂತೆ ಓಡಿಸಿದನು. ಆತನ ಮೇಲೆ ಗಡಿ ಭದ್ರತಾ ಪಡೆಯವರು ಗುಂಡುಹಾರಿಸಿದರು ಮತ್ತು ಆತ ತೀವ್ರವಾಗಿ ಗಾಯಗೊಂಡನು. ಆದರೆ ಪಶ್ಚಿಮ ಜರ್ಮನ್ ಪೊಲೀಸ್ ಸಿಬ್ಬಂದಿಯೊಬ್ಬನು ಮಧ್ಯ ಪ್ರವೇಶಿಸಿ ತನ್ನ ಬಂದೂಕಿನಿಂದ ಪೂರ್ವ ಜರ್ಮನ್ ಗಡಿಯ ಕಾವಲಿನವರ ಮೇಲೆ ಗುಂಡು ಹಾರಿಸಿದನು. ಈ ಪೊಲೀಸನು ಮುಳ್ಳುತಂತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವಾಹನದಿಂದ ಎಂಗೆಲ್ಸ್‌ನನ್ನು ಹೊರತೆಗೆದನು.[೫೬]
ಪೂರ್ವ ಜರ್ಮನರು ಹಲವಾರು ವಿಧಾನಗಳನ್ನುಪಯೋಗಿಸಿ ಯಶಸ್ವಿಯಾಗಿ ಪಲಾಯನ ಮಾಡುತ್ತಿದ್ದರು: ಗೋಡೆಯ ಕೆಳಗಡೆ ಉದ್ದನೆಯ ಸುರಂಗಗಳನ್ನು ಕೊರೆಯುವುದು, ಅನುಕೂಲಕರ ಹವಾಮಾನಕ್ಕಾಗಿ ಕಾದುಕೊಂಡು ಬಿಸಿಗಾಳಿಯ ಬಲೂನುಗಳನ್ನು ಉಪಯೋಗಿಸುವುದು, ಏರಿಯಲ್ ತಂತಿಗಳನ್ನು ಬಳಸಿಕೊಂಡು ಜಾರಿಕೊಂಡು ಹೋಗುವುದು, ಅತಿಹಗುರ ವಿಮಾನಗಳನ್ನು ಹಾರಿಸಿಕೊಂಡು ಹೋಗುವುದು, ಮತ್ತು ಒಂದು ಸಂದರ್ಭದಲ್ಲಿ ನಡೆದಂತೆ ಸ್ಪೋರ್ಟ್ಸ್ ಕಾರೊಂದನ್ನು ಪ್ರಾಥಮಿಕ, ಆರಂಭದ ಭದ್ರತಾವ್ಯವಸ್ಥೆಗಳ ಮೂಲಕ ಅತಿವೇಗದಲ್ಲಿ ಸಾಗಿಸಿಕೊಂಡು ಹೋಗುವುದು. ಈ ರೀತಿಯ ಪಲಾಯನಗಳನ್ನು ತಡೆಯುವ ಸಲುವಾಗಿ ಚೆಕ್‌ಪಾಯಿಂಟುಗಳಲ್ಲಿ ಲೋಹದ ಕಂಬಿಗಳನ್ನು ಇಡಿಸಿದಾಗ ಸುಮಾರು ನಾಲ್ಕು ಜನರು (ಮುಂದಿನ ಸೀಟುಗಳಲ್ಲಿ ಇಬ್ಬರು ಮತ್ತು ಬಹುಶಃ ಡಿಕ್ಕಿಯಲ್ಲಿ ಇನ್ನೀರ್ವರು) ಲೋಹದ ಕಂಬಿಯನ್ನು ತಾಕುತ್ತಿದ್ದಂತೆಯೆ ಮೇಲ್ಭಾಗ ಮತ್ತು ವಿಂಡ್‌ಸ್ಕ್ರೀನ್‌ಗಳು ಕಳಚಿಕೊಳ್ಳುವಂತೆ ನವೀಕರಿಸಲಾಗಿದ್ದ ಸ್ಪೋರ್ಟ್ಸ್‌ಕಾರೊಂದನ್ನು ಕಂಬಿಯಡಿ ನುಗ್ಗಿಸಿದರು. ಮಲಗಿಕೊಂಡೇ ಇದ್ದ ಅವರು ಕಾರನ್ನು ನಿಲ್ಲಿಸದೆ ಮುಂದಕ್ಕೆ ಚಲಿಸುತ್ತಲೇ ಇದ್ದರು. ಇದಾದ ನಂತರ ಪೂರ್ವ ಜರ್ಮನರು ಚೆಕ್‌ಪಾಯಿಂಟುಗಳಲ್ಲಿ ಅಡ್ಡಾದಿಡ್ಡಿಯಾದ ರಸ್ತೆಗಳನ್ನು ನಿರ್ಮಿಸಿದರು. ಒಳಚರಂಡಿ ವ್ಯವಸ್ಥೆಯು ಗೋಡೆಗಿಂತ ಹಳೆಯದಾಗಿದ್ದು, ಹಲವಾರು ಜನರು ಇವುಗಳನ್ನು ಬಳಸು ಪರಾರಿಯಾದರು, ಮತ್ತು ಇಂತಹ ಹಲವಾರು ಪಲಾಯನಗಳಿಗೆ ಗಿರ್‌ಮನ್ ವಿದ್ಯಾರ್ಥಿ ಸಂಘಟನೆ ಸಹಾಯ ಮಾಡಿತು.
ಥಾಮಸ್ ಕ್ರೂಗರ್ ಎಂಬಾತ ನಡೆಸಿದ ಉಡ್ಡಯನ ಪರಾರಿಯಲ್ಲಿ ಆತನು ಪೂರ್ವ ಜರ್ಮನ್ ಮಿಲಿಟರಿ ತರಬೇತಿ ಸಂಸ್ಥೆಯಾದ Gesellschaft für Sport und Technikನ ಹಗುರ ವಿಮಾನವಾದ Zlin Z 42M ಅನ್ನು RAF Gatowನಲ್ಲಿ ತಂದು ಇಳಿಸಿದನು. DDR-WOH ರಿಜಿಸ್ಟ್ರೇಶನ್ ಇದ್ದ ಆತನ ವಿಮಾನದ ಭಾಗಗಳನ್ನು ಕಳಚಿ ರಸ್ತೆಮಾರ್ಗದ ಮೂಲಕ ಪೂರ್ವ ಜರ್ಮನರಿಗೆ ಹಿಂದಿರುಗಿಸಲಾಯಿತು, ಮತ್ತು ಅದರ ಮೇಲೆ RAFನ ಸಿಬ್ಬಂದಿಗಳು ಹಾಸ್ಯಭರಿತವಾದ "ನೀವು ಇಲ್ಲಿರಬೇಕಾಗಿತ್ತು" ಮತ್ತು "ಬೇಗನೆ ಮರಳಿಬನ್ನಿ" ಮೊದಲಾದ ಘೋಷಣೆಗಳನ್ನು ಬಣ್ಣಗಳನ್ನು ಬಳಸಿ ಪೇಂಟ್ ಮಾಡಿದ್ದರು. DDR-WOH ಇಂದಿಗೂ ಹಾರುತ್ತಿದೆ, ಆದರೆ ಅದರ ರಿಜಿಸ್ಟ್ರೇಶನ್ D-EWOH ಎಂದು ಬದಲಾಗಿದೆ.
ದಾಟುವ ಪ್ರಯತ್ನದಲ್ಲಿ ಪಲಾಯನ ಮಾಡುವಾತ ಗಾಯಗೊಂಡು ಡೆತ್ ಸ್ಟ್ರಿಪ್‌ನಲ್ಲಿ ಬಿದ್ದಿದ್ದರೆ ಪಶ್ಚಿಮದ ಗೋಡೆಗೆ ಅವರು ಎಷ್ಟೇ ಹತ್ತಿರವಿರಲಿ, ಪಶ್ಚಿಮದವರು ಎಲ್ಲಿ ಪೂರ್ವ ಜರ್ಮನ್ ಗಡಿಭದ್ರತಾಪಡೆಯವರಾದ ’ಗ್ರೆಪೋ’ಗಳು ಗುಂಡಿಕ್ಕಲು ಆರಂಭಿಸಿಬಿಡುವರೋ ಎಂಬ ಭೀತಿಯಿಂದ ಮಧ್ಯಸ್ಥಿಕೆ ವಹಿಸುತ್ತಲೇ ಇರಲಿಲ್ಲ. ಗಾರ್ಡುಗಳು ಹೆಚ್ಚಿನಬಾರಿ ಇಂತಹ ದೇಶಭ್ರಷ್ಟರನ್ನು ಈ ಮೈದಾನದಲ್ಲಿ ರಕ್ತಹರಿದು ಸಾಯಲು ಬಿಟ್ಟುಬಿಡುತ್ತಿದ್ದರು, ಈ ರೀತಿಯ ಅತ್ಯಂತ ಕುಖ್ಯಾತ ಪ್ರಯತ್ನ ಮಾಡಿ ಸೋತವನು ಪೀಟರ್ ಫೆಖ್ಟರ್ (ವಯಸ್ಸು 18). ಆತನನ್ನು ಆಗಸ್ಟ್ 17, 1962ರಂದು ಪಾಶ್ಚಿಮಾತ್ಯ ಮಾಧ್ಯಮದ ಕೆಣ್ಣೆದುರೇ ಗುಂಡಿಕ್ಕಿ ರಕ್ತಸುರಿದು ಸಾಯಲು ಬಿಡಲಾಯಿತು. ಫೆಖ್ಟರ್‌ನ ಸಾವಿನಿಂದ ಉಂಟಾದ ಋಣಾತ್ಮಕ ಪ್ರಚಾರದ ಫಲವಾಗಿ ಪೂರ್ವ ಬರ್ಲಿನ್‌ನ ನಾಯಕರು ಸಾರ್ವಜನಿಕ ಸ್ಥಳಗಳಲ್ಲಿ ಗುಂಡಿಕ್ಕುವುದರ ವಿರುದ್ದ ನಿರ್ಬಂಧನೆಯನ್ನು ವಿಧಿಸಿ "ಪಲಾಯನ ಮಾಡಬಹುದಾದ"ವರಿಗೆ ವೈದ್ಯಕೀಯ ನೆರವು ದೊರಕಿಸುವ ವ್ಯವಸ್ಥೆಯನ್ನು ಮಾಡಿದರು.[೫೭] ಗಡಿಯನ್ನು ದಾಟಲು ಯತ್ನಿಸಿ ಗುಂಡಿಕ್ಕಲಾದ ಕೊನೆಯ ವ್ಯಕ್ತಿಯೆಂದರೆ ಫೆಬ್ರುವರಿ 6, 1989ರಂದು ಕ್ರಿಸ್ ಗ್ವೆಫ್ರಾಯ್ .
"ಶ್ರೀಯುತ ಗೋರ್ಬಚೇವ್, ಈ ಗೋಡೆಯನ್ನು ಕಿತ್ತುಹಾಕಿ!"
[ಬದಲಾಯಿಸಿ]ಜೂನ್ 12, 1987ರಂದು ಬರ್ಲಿನ್‌ನ 750ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ [೫೮], ಬ್ರ್ಯಾಂಡೆನ್‌ಬರ್ಗ್ ಗೇಟ್ನಲ್ಲಿ ಭಾಷಣ ಮಾಡುತ್ತ ರೊನಾಲ್ಡ್ ರೇಗನ್ ಆಗಿನ ಸೋವಿಯೆತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದ ಮಿಖಾಯಿಲ್ ಗೋರ್ಬಚೇವ್ರಿಗೆ ಈಸ್ಟರ್ನ್ ಬ್ಲಾಕ್ನ ಹೆಚ್ಚುತ್ತಿದ್ದ ಸ್ವಾತಂತ್ರ್ಯದ ಸಂಕೇತವಾಗಿ ಗೋಡೆಯನ್ನು ಕಿತ್ತುಹಾಕುವಂತೆ ಸವಾಲು ಹಾಕಿದರು:
We welcome change and openness; for we believe that freedom and security go together, that the advance of human liberty can only strengthen the cause of world peace. There is one sign the Soviets can make that would be unmistakable, that would advance dramatically the cause of freedom and peace. General Secretary Gorbachev, if you seek peace, if you seek prosperity for the Soviet Union and eastern Europe, if you seek liberalization, come here to this gate. Mr. Gorbachev, open this gate. Mr. Gorbachev, tear down this wall![೫೯]
ಪತನ
[ಬದಲಾಯಿಸಿ]ಆಗಸ್ಟ್ 23, 1989ರಂದು ಹಂಗರಿಯು ಆಸ್ಟ್ರಿಯಾದೊಂದಿಗಿನ ಗಡಿಯ ಭದ್ರತಾವ್ಯವಸ್ಥೆಗಳನ್ನು ತೆಗೆದುಹಾಕಿತು, ಮತ್ತು ಸೆಪ್ಟೆಂಬರ್‌ನಲ್ಲಿ 13,000ಕ್ಕೂ ಹೆಚ್ಚು ಪೂರ್ವ ಜರ್ಮನ್ ಪ್ರವಾಸಿಗರು ಆಸ್ಟ್ರಿಯಾಗೆ ಪಲಾಯನ ಮಾಡಿದರು.[೬೦] ಇದು ಘಟನಾಸರಣಿಯನ್ನೆ ಹುಟ್ಟುಹಾಕಿತು. ಹಂಗೇರಿಯನ್ನರು ಈನ್ನೂ ಹಲವಾರು ಪೂರ್ವ ಜರ್ಮನರನ್ನು ಗಡಿ ದಾಟುವುದರಿಂದ ತಡೆಹಿಡಿದು ಅವರನ್ನು ಬುಡಾಪೆಸ್ಟ್‌ಗೆ ಹಿಂದೆ ಕಳುಹಿಸಿದರು. ಈ ಈಸ್ಟ್ ಜರ್ಮನರು ಪಶ್ಚಿಮ ಜರ್ಮನ್ ದೂತಾವಾಸಕ್ಕೆ ಮುತ್ತಿಗೆ ಹಾಕಿ ಪೂರ್ವ ಜರ್ಮನಿಗೆ ಮರಳಲು ನಿರಾಕರಿಸಿದರು. ಇದಕ್ಕೆ ಪ್ರತಿಯಾಗಿ ಪೂರ್ವ ಜರ್ಮನ್ ಸರ್ಕಾರವು ಹಂಗರಿಗೆ ಯಾವುದೇ ಪ್ರವಾಸವನ್ನು ರದ್ದು ಮಾಡಿತು, ಆದರೆ ಅಲ್ಲಿ ಈಗಾಗಲೇ ಇರುವವರು ಮರಳಲು ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ನೆರೆಯ ಜೆಕೋಸ್ಲೊವಾಕಿಯಾದಲ್ಲಿ ಇಂತಹದೇ ಘಟನೆಯೊಂದು ನಡೆಯಿತು. ಈ ಸಂದರ್ಭದಲ್ಲಿ, ಪೂರ್ವ ಜರ್ಮನ್ ಅಧಿಕಾರಿಗಳು ಹೋಗಲು ಬಿಟ್ಟರಾದರೂ ಅವರು ದಾರಿಯಲ್ಲಿ ಪೂರ್ವ ಜರ್ಮನಿಯ ಮೂಲಕ ಹಾದುಹೋಗುವ ಟ್ರೇನೊಂದನ್ನು ಬಳಸಬೇಕೆಂದು ಕಡ್ಡಾಯ ಮಾಡಿದರು. ಇದಾದ ನಂತರ ಪೂರ್ವ ಜರ್ಮನಿಯ ಒಳಗೇ ಬೃಹತ್ ಪ್ರದರ್ಶನಗಳು ನಡೆದವು. (ನೋಡಿ ಪೂರ್ವ ಜರ್ಮನಿಯ ಸೋಮವಾರ ಪ್ರದರ್ಶನಗಳು .) ಬಹಳ ಕಾಲದಿಂದಲೂ ಪೂರ್ವ ಜರ್ಮನಿಯ ನೇತಾರನಾಗಿದ್ದ ಎರಿಚ್ ಹೊನೆಕರ್ ಅಕ್ಟೋಬರ್ 18, 1989ರಂದು ರಾಜೀನಾಮೆ ನೀಡಿದರು ಮತ್ತು ಅವರ ಸ್ಥಾನಕ್ಕೆ ಕೆಲವು ದಿನಗಳ ನಂತರ ಈಗನ್ ಕ್ರೆನ್‍ಜ್ ಬಂದರು. ಆ ವರ್ಷ ಜನವರಿಯಲ್ಲಿ ಹೊನೆಕರ್ ಗೋಡೆಯು ನಿರ್ಮಾಣವಾದ ಪರಿಸ್ಥಿತಿಗಳು ಬದಲಾಗದಿದ್ದಲ್ಲಿ ಗೋಡೆಯು "ಮುಂದಿನ ನೂರು ವರ್ಷ"ಗಳವರೆಗೂ ನಿಂತಿರುವುದೆಂದು ಭವಿಷ್ಯ ನುಡಿದಿದ್ದರು.
ಸೆಪ್ಟೆಂಬರ್ 1989ರಲ್ಲಿ ಪೂರ್ವ ಜರ್ಮನಿಯಲ್ಲಿ ಉದ್ದಗಲಕ್ಕೂ ಪ್ರತಿಭಟನಾ ಪ್ರದರ್ಶನಗಳು ಆರಂಭವಾದವು. ಮೊದಮೊದಲು ಅವರು ಪಶ್ಚಿಮಕ್ಕೆ ವಲಸೆಹೋಗಲು ಬಯಸುತ್ತಿದ್ದ ಜನರಾಗಿದ್ದರು ಮತ್ತು ಅವರು ["Wir wollen raus!"] Error: {{Lang}}: text has italic markup (help) ("ನಮಗೆ ಬಿಡುಗಡೆ ಬೇಕು!") ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ನಂತರದಲ್ಲಿ ಪ್ರತಿಭಟನಾಕಾರರು "Wir bleiben hier", ("ನಾವು ಇಲ್ಲಿಯೇ ಇರುವೆವು!") ಎಂದು ಘೋಷಣೆ ಕೂಗಲು ಆರಂಭಿಸಿದರು. ಇದು ಪೂರ್ವ ಜರ್ಮನರು ಸಾಮಾನ್ಯವಾಗಿ 1989ರ ಅಂತ್ಯದ "ಶಾಂತಿಯುತ ಕ್ರಾಂತಿ" ಎಂದು ಬಣ್ಣಿಸುವ ಆಂದೋಲನದ ಆರಂಭವಾಗಿತ್ತು.[೬೧] ನವೆಂಬರ್ 4ರ ಹೊತ್ತಿಗೆ ಪ್ರತಿಭಟನೆಗಳು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾಗಿ, ಅಂದು ಸುಮಾರು ಅರ್ಧ ಮಿಲಿಯನ್ ಜನರು ಪೂರ್ವ ಬರ್ಲಿನ್‌ನ (ಹೆನ್‌ಸ್ಲಿನ್, 07) ಅಲೆಕ್ಸಾಂಡರ್‌ಪ್ಲಾತ್ಸ್ ಪ್ರದರ್ಶನಕ್ಕಾಗಿ ಸೇರಿದರು.
ಇದೇ ವೇಳೆಗೆ ಪೂರ್ವ ಜರ್ಮನಿಯಿಂದ ಪಶ್ಚಿಮದೆಡೆಗೆ ತೆರಳುತ್ತಿದ್ದ ನಿರಾಶ್ರಿತರ ಸಂಖೆಯು ಜಾಸ್ತಿಯಾಗಿದ್ದು ಅವರು ಹೊಸ ಕ್ರೆನ್‌ಜ್ ಸರ್ಕಾರದ ಒಡಂಬಡಿಕೆ ಮತ್ತು ಕಮ್ಯುನಿಸ್ಟ್ ಜೆಕೋಸ್ಲೊವಾಕ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಜೆಕೋಸ್ಲೊವಾಕಿಯಾ ಮೂಲಕ ಹೊರಹೋಗಲಾರಂಭಿಸಿದರು. ತೊಡಕುಗಳನ್ನು ಸರಳವಾಗಿಸಲು, ನವೆಂಬರ್ 9ರಂದು ಕ್ರೆನ್‌ಜ್‌ನ ನೇತೃತ್ವದಲ್ಲಿ ಪಾಲಿಟ್‌ಬ್ಯೂರೋ ಪಶ್ಚಿಮ ಬರ್ಲಿನ್ ಅನ್ನೂ ಒಳಗೊಂಡಂತೆ ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಗಳ ನಡುವಿನ ಗಡಿರೇಖೆಗಳ ಮೂಲಕ ನಿರಾಶ್ರಿತರಿಗೆ ನೇರವಾಗಿ ಹೊರತೆರಳಲು ಅವಕಾಶ ಮಾಡಿಕೊಡಲು ತೀರ್ಮಾನಿಸಿದರು. ಅದೇ ದಿನ, ಮಂತ್ರಾಲಯ ಆಡಳಿತವು ಈ ಪ್ರಸ್ತಾವನೆಯನ್ನು ನವೀಕರಿಸಿ ಖಾಸಗೀ ಪ್ರಯಾಣವನ್ನೂ ಒಳಗೊಳ್ಳಲು ನಿರ್ಧರಿಸಿತು. ಹೊಸ ನಿಯಮಗಳನ್ನು ನವೆಂಬರ್ 17, 1989ರಂದು ಜಾರಿಗೆ ತರಬೇಕಾಗಿದ್ದಿತು.
ಪಾಲಿಟ್‌ಬ್ಯೂರೋನ ವಕ್ತಾರನಾಗಿದ್ದ ಗುಂಟರ್ ಶ್ಯಾಬೋವ್‌ಸ್ಕಿಗೆ ಇದನ್ನು ಘೋಷಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು; ಆದರೆ ಆತನು ಹೊಸ ನೀತಿಗಳ ಬಗೆಗಿನ ಚರ್ಚೆಗಳಲ್ಲಿ ಭಾಗಿಯಾಗಿರಲಿಲ್ಲ ಮತ್ತು ಆತನಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿರಲಿಲ್ಲ.[೬೨] ನವೆಂಬರ್ 9ರ ಪ್ರೆಸ್ ಕಾನ್‌ಫರೆನ್ಸಿಗೆ ಕೆಲವೇ ಸಮಯದ ಮೊದಲು ಆತನಿಗೆ ಪೂರ್ವ ಜರ್ಮನರು ಸರಿಯಾದ ಅನುಮತಿಯೊಡನೆ ಗಡಿಯನ್ನು ದಾಟಲು ಬಿಡಲಾಗುವುದೆಂದು ಬರೆದಿರುವ ಚೀಟಿಯೊಂದನ್ನು ನೀಡಲಾಯಿತಾದರೂ ಈ ಮಾಹಿತಿಯನ್ನು ಯಾವ ರೀತಿ ನಿರ್ವಹಿಸಬೇಕೆಂಬುದರ ಬಗ್ಗೆ ಯಾವುದೇ ಮುಂದಿನ ನಿರ್ದೇಶನಗಳನ್ನೂ ನೀಡಲಿಲ್ಲ. ಈ ನಿಯಮಗಳನ್ನು ಕೆಲವೇ ಘಂಟೆಗಳ ಮುನ್ನ ಪೂರ್ತಿಗೊಳಿಸಲಾಗಿದ್ದು, ಗಡಿಯ ಭದ್ರತಾಪಡೆಗೆ ಈ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಮಾರನೆಯ ದಿನದಿಂದ ಜಾರಿಗೊಳಿಸಬೇಕಾಗಿದ್ದಿತು - ಆದರೆ, ಯಾರೂ ಶ್ಯಾಬೋವ್‌ಸ್ಕಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಪ್ರೆಸ್‌ಭೇಟಿಯ ಕೊನೆಯಲ್ಲಿ ಆತನು ಈ ಚೀಟಿಯನ್ನು ಜೋರಾಗಿ ಓದಿದನು. ANSA ಸುದ್ದಿಏಜೆನ್ಸಿಯ ಬರ್ಲಿನ್ ಬಾತ್ಮೀದಾರನಾಗಿದ್ದ ಇಟಾಲಿಯನ್ ಪತ್ರಕರ್ತ ರಿಕಾರ್ಡೋ ಎಹ್‌ರ್‌ಮ್ಯಾನ್ ಆತನನ್ನು ಈ ನಿಯಮಗಳು ಎಂದಿನಿಂದ ಜಾರಿಗೆ ಬರುವವೆಂದು ಕೇಳಿದಾಗ ಶ್ಯಾಬೋವ್‌ಸ್ಕಿ ತನಗೆ ದೊರಕಿದ ನಿರ್ದೇಶನವನ್ನು ಆಧರಿಸಿ ಅಂದೇ ಇರಬೇಕೆಂದುಕೊಂಡು "ನನಗೆ ತಿಳಿದಿರುವ ಮಟ್ಟಿಗೆ ತಡವಿಲ್ಲದೆ, ಈಗಿಂದೀಗಲೆ ಜಾರಿಗೆ ಬರುತ್ತದೆ" ಎಂದು ಉತ್ತರಿಸಿದನು. ಪರ್ತಕರ್ತರು ಆತನನ್ನು ಮುಂದಕ್ಕೆ ಪ್ರಶ್ನಿಸಿದಾಗ ಆತನು ಈ ನಿಯಮಗಳು ಪಶ್ಚಿಮ ಜರ್ಮನಿಗೆ ಗಡಿದಾಟಿ ತೆರಳುವುದನ್ನು ಕೂಡ ಒಳಗೊಂಡಿರುವುದಾಗಿ ಅಲ್ಲಿಯತನಕ ಉಲ್ಲೇಖಿಸಿರದ ವಿಚಾರವನ್ನು ತಿಳಿಸಿದನು.[೬೩]
ಇದಾದ ಕೂಡಲೇ ARD ಎಂಬ ಪಶ್ಚಿಮ ಜರ್ಮನ್ ದೂರದರ್ಶನ ಚ್ಯಾನೆಲ್ ಶ್ಯಾಬೋವ್‌ಸ್ಕಿಯ ಕಾನ್‌ಫರೆನ್ಸಿನಿಂದ ತಿಳಿದುಬಂದ ಅಪೂರ್ಣ ಮಾಹಿತಿಯನ್ನು ಬಿತ್ತರಿಸಿತು. ಸುದ್ದಿಪ್ರಸಾರಕರೊಬ್ಬರು ಈ ರೀತಿ ಹೇಳಿಕೆ ನೀಡಿದರು: "ಈ ನವೆಂಬರ್ ಒಂಬತ್ತು ಒಂದು ಐತಿಹಾಸಿಕ ದಿನವಾಗಿದೆ." "ಪೂರ್ವ ಜರ್ಮನಿಯು ಈಗಿಂದೀಗಲೇ ತನ್ನ ಗಡಿಗಳು ಎಲ್ಲರಿಗೂ ತೆರೆದಿವೆ ಎಂದು ಘೋಷಿಸಿದೆ."[೬೨]
ಈ ಪ್ರಸಾರವನ್ನು ಕೇಳಿದ ನಂತರ, ಪೂರ್ವ ಜರ್ಮನರು ಗೋಡೆಯ ಬಳಿ ಸೇರಲು ಆರಂಭವಾದರು ಮತ್ತು ಗಡಿಯ ಭದ್ರತಾಪಡೆಯವರು ಆ ಕೂಡಲೇ ಬಾಗಿಲುಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.[೬೨] ಅಚ್ಚರಿಯಿಂದ ದಿಕ್ಕುತೋಚದಂತಾದ ಗಾರ್ಡುಗಳು ಈ ತೊಂದರೆಯ ಬಗ್ಗೆ ತಮ್ಮ ಮೇಲಧಿಕಾರಿಗಳಿಗೆ ಮೇಲಿಂದ ಮೇಲೆ ದೂರವಾಣಿ ಕರೆಗಳನ್ನು ಮಾಡಿದರು, ಆದರೆ ಪೂರ್ವ ಜರ್ಮನ್ ಅಧಿಕಾರಿಗಳ ಪೈಕಿ ಯಾರೂ ಮಾರಕ ಬಲಪ್ರಯೋಗ ಮಾಡಲು ಆದೇಶ ನೀಡಿ ಅದರ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿರಲಿಲ್ಲ ಎಂಬುವುದು ನಿಚ್ಚಳವಾಯಿತು, ಆದ್ದರಿಂದ ಬಹಳ ಕಡಿಮೆ ಸಂಖ್ಯೆಯಲ್ಲಿದ್ದ ಸೈನಿಕರಿಗೆ ಬಹಳ ಅಧಿಕಸಂಖ್ಯೆಯ ಪೂರ್ವ ಜರ್ಮನ್ ನಾಗರಿಕರನ್ನು ತಡೆಹಿಡಿಯುವುದು ಶಕ್ಯವಿರಲಿಲ್ಲ. ಬೆಳೆಯುತ್ತಿರುವ ಗುಂಪನ್ನು ನೋಡುತ್ತ ಇದ್ದ ಗಾರ್ಡುಗಳು ಕೊನೆಗೂ ಸೋತು ಚೆಕ್‌ಪಾಯಿಂಟ್‍ಗಳನ್ನು ತೆರೆದು ಅವುಗಳ ಮೂಲಕ ಜನರನ್ನು ಬಹಳ ಕಡಿಮೆ, ಅಥವಾ ಯಾವುದೇ ಗುರುತುಪತ್ರ ತಪಾಸಣೆಯಿಲ್ಲದೆಯೇ ಹೊರಬಿಟ್ಟರು. ಆನಂದತುಂದಿಲರಾದ ಪೂರ್ವ ಜರ್ಮನರನ್ನು ಕೆಲವೇ ಸಮಯದಲ್ಲಿ ಪಶ್ಚಿಮ ಬರ್ಲಿನ್‌ನ ಜನತೆಯು ಉತ್ಸವದ ವಾತಾವರಣದಲ್ಲಿ ಸ್ವಾಗತಿಸಿತು.
ನಿರ್ಮೂಲನ
[ಬದಲಾಯಿಸಿ]ನವೆಂಬರ್ 9ನ್ನು ಗೋಡೆ ಪತನವಾದ ದಿನವೆಂದು ಪರಿಗಣಿಸಲಾಗುತ್ತದೆಯಾದರೂ ಸಂಪೂರ್ಣ ಗೋಡೆಯನ್ನು ಆ ಕೂಡಲೇ ಕಿತ್ತುಹಾಕಲಾಗಲಿಲ್ಲ. ಅಂದು ಸಂಜೆಯಿಂದ ಆರಂಭವಾಗಿ, ಮುಂದಿನ ಹಲವಾರು ದಿನಗಳು ಮತ್ತು ವಾರಗಳವರೆಗೆ ಜನರು ದೊಡ್ಡ ಸುತ್ತಿಗೆಗಳು ಇಲ್ಲವೆ ಉಳಿ,ಚಾಣಗಳೊಂದಿಗೆ ಸ್ಮರಣಿಕೆಗಳನ್ನು ತೆಗೆದುಕೊಳ್ಳುವುದಕ್ಕಾಗಿ ಬಂದು ಗೋಡೆಯ ದೊಡ್ಡದೊಡ್ಡ ಭಾಗಗಳನ್ನು ನಾಶ ಮಾಡತೊಡಗಿ ಹಲವಾರು ಅನಧಿಕೃತ ಗಡಿದಾಟುಗಳು ಅಸ್ತಿತ್ವಕ್ಕೆ ಬಂದವು. ಇಂಥಾ ಜನರಿಗೆ "Mauerspechte" (ಗೋಡೆಯ ಮರಕುಟಿಗಗಳು) ಎಂಬ ಅಡ್ಡಹೆಸರಿಡಲಾಯಿತು..
ಪೂರ್ವ ಜರ್ಮನ್ ಸರ್ಕಾರವು ಮುಂದಿನ ವಾರಾಂತ್ಯದಲ್ಲಿ ಹತ್ತು ಹೊಸ ಗಡಿದಾಟುಗಳನ್ನು ಐತಿಹಾಸಿಕವಾಗಿ ಪ್ರಮುಖವಾದ ಜಾಗಗಳಲ್ಲಿ (ಫಾಟ್ಸ್‌ಡ್ಯಾಮೆರ್ ಪ್ಲಾಟ್ಸ್, ಗ್ಲೀನಿಕೆರ್ ಬ್ರಕ್, ಬರ್‌ನಾಯರ್ ಸ್ಟ್ರೇಬ್) ತೆರೆಯುವುದಾಗಿ ಘೋಷಿಸಿತು. ಆ ಜಾಗಗಳಲ್ಲಿ ಸೇರಿದ ಗುಂಪುಗಳು ಗಂಟೆಗಟ್ಟಲೆ ನಿಂತುಕೊಂಡು ಹಳೆಯ ರಸ್ತೆಗಳನ್ನು ಮತ್ತೆ ಕೂಡಿಸಲು ಗೋಡೆಯ ಭಾಗಗಳನ್ನು ಕಿತ್ತುಹಾಕುತ್ತಿದ್ದ ಬುಲ್‌ಡೋಜರ್‌ಗಳನ್ನು ಹರ್ಷೋದ್ಗಾರಗಳ ಮೂಲಕ ಉತ್ತೇಜಿಸುತ್ತಿದ್ದರು. ಈ ಸಂದರ್ಭದ ಚಿತ್ರಗಳು ಮತ್ತು ದೂರದರ್ಶನ ಫುಟೇಜುಗಳನ್ನು ಅನೇಕ ಬಾರಿ "ಗೋಡೆಯ ಕೆಳಗುರುಳಿಸುವಿಕೆ" ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ, ಆದರೆ ಇವು ನಿಜವಾಗಿ ಹೊಸ ಗಡಿದಾಟುಗಳ ನಿರ್ಮಾಣ ಮಾತ್ರವಾಗಿದೆ. 1990ರ ನಡುಭಾಗದವರೆಗೂ ಹೊಸ ಗಡಿದಾಟುಗಳನ್ನು ತೆರೆಯುವುದು ಮುಂದುವರೆಯಿತು, ಮತ್ತು ಇದರಲ್ಲಿ ಡಿಸೆಂಬರ್ 22, 1989ರಂದು ತೆರೆಯಲಾದ ಬ್ರ್ಯಾಂಡೆನ್‌ಬರ್ಗ್ ಗೇಟ್ ಕೂಡ ಶಾಮೀಲಾಗಿದ್ದಿತು.
ಪಶ್ಚಿಮ ಜರ್ಮನರು ಮತ್ತು ಪಶ್ಚಿಮ ಬರ್ಲಿನರುಗಳುಗಳಿಗೆ ಡಿಸೆಂಬರ್ 23ರಿಂದ ವಿಸಾ-ರಹಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಯಿತು. ಅಲ್ಲಿಯವರೆಗೂ ಅವರು ಪೂರ್ವ ಜರ್ಮನಿ ಮತ್ತು ಪೂರ್ವ ಬರ್ಲಿನ್‌ಗಳನ್ನು ಮಾತ್ರ ನಿರ್ಬಂಧಗಳಡಿಯಲ್ಲಿ ಹಲವಾರು ದಿನಗಳು ಅಥವಾ ವರಗಳ ಮುಂಚೆಯೇ ವೀಸಾ ಅರ್ಜಿ ಸಲ್ಲಿಸುವುದು ಮತ್ತು ಪ್ರತೀದಿನವೂ ಕನಿಷ್ಠ 25 DMರಂತೆ ತಾವು ಇರಬೇಕೆಂದಿರುವ ಎಲ್ಲಾ ದಿನಗಳ ಮೊತ್ತವನ್ನೂ ಜಮಾ ಮಾಡಬೇಕಾಗಿದ್ದರಿಂದ ಮನಬಂದಾಗ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ನವೆಂಬರ್ 9 ಮತ್ತು ಡಿಸೆಂಬರ್ 23ರವರೆಗಿನ ವಾರಗಳಲ್ಲಿ ಪೂರ್ವ ಜರ್ಮನರು ಪಾಶ್ಚಿಮಾತ್ಯರಿಗಿಂತ ಹೆಚ್ಚು ಸ್ವತಂತ್ರವಾಗಿ ಓಡಾಡುವುದು ಸಾಧ್ಯವಾಯಿತು.
ನವೆಂಬರ್ 9ರ ಸಂಜೆ ನಾಗರಿಕರು ಗೋಡೆಯ ಭಾಗಗಳನ್ನು ಧ್ವಂಸಮಾಡುತ್ತಿರುವ ದೂರದರ್ಶನ ಪ್ರಸಾರಗಳು, ಮತ್ತುಹಲವು ವಾರಗಳ ನಂತರ ತೆರೆಯಲಾದ ಹೊಸ ಗಡಿದಾಟುಗಳಿಂದ ಕೆಲವು ವಿದೇಶೀಯರು ಗೋಡೆಯನ್ನು ಬಹಳ ಬೇಗ ಕಿತ್ತುಹಾಕಲಾಯಿತೆಂಬ ಅಭಿಪ್ರಾಯಕ್ಕೆ ಬಂದರು. ತಾಂತ್ರಿಕವಾಗಿ ನವೆಂಬರ್ 9ರ ನಂತರ ಕೆಲಕಾಲದವರೆಗೂ ಗೋಡೆಯು ಮೇಲೆ ಕಾವಲು ಕಾಯಲಾಯಿತಾದರೂ ಇದರ ತೀವ್ರತೆ ಬಹಳ ಕಡಿಮೆಯಾಗುತ್ತಲಿತ್ತು. ಮೊದಲ ತಿಂಗಳುಗಳಲ್ಲಿ ಪೂರ್ವ ಜರ್ಮನ್ ಮಿಲಿಟರಿ "ಗೋಡೆ ಕುಟಿಗ"ರಿಂದಾದ ಹಾನಿಯನ್ನು ರಿಪೇರಿ ಮಾಡಲು ಕೂಡಾ ಪ್ರಯತ್ನಿಸಿತು. ಕ್ರಮೇಣ ಇಂತಹ ಪ್ರಯತ್ನಗಳು ಕಡೆಮೆಯಾದವು, ಕಾವಲುಪಡೆಯವರು ಹೆಚ್ಚು ಅಲಕ್ಷ್ಯ ತೋರತೊಡಗಿದರು, ಹೆಚ್ಚುತ್ತಿದ್ದ ಗೋಡೆಯ ಅವಸಾನಗಳ ಬಗ್ಗೆ ಮತ್ತು ಈ ಕಿಂಡಿಗಳ ಮೂಲಕ ನಡೆಯುತ್ತಿದ್ದ ಅನಧಿಕೃತ ಗಡಿದಾಟುವಿಕೆಗಳ ಬಗ್ಗೆ ಸಹನಶೀಲರಾಗಿದ್ದರು. ಜೂನ್ 13, 1990ರಂದು ಬರ್ನಾಯರ್ ಸ್ಟ್ರೇಬ್‌ನಲ್ಲಿ ಪೂರ್ವ ಜರ್ಮನ್ ಮಿಲಿಟರಿಯು ಅಧಿಕೃತವಾಗಿ ಗೋಡೆಯನ್ನು ಕಿತ್ತುಹಾಕುವ ಕೆಲಸವನ್ನು ಆರಂಭಿಸಿತು. ಜುಲೈ 1ರಂದು ಪಶ್ಚಿಮ ಜರ್ಮನ್ ಕರೆನ್ಸಿಯನ್ನು ಪೂರ್ವ ಜರ್ಮನಿಯು ಅಂಗೀಕರಿಸಿದ ದಿನ, ಎಲ್ಲಾ ಕಾನೂನುಬದ್ಧ ಗಡಿನಿಯಂತ್ರಣಗಳು ರದ್ದಾಗಿಹೋದವು, ಆದರೆ ಇದಕ್ಕೆ ಕೆಲಕಾಲ ಮುನ್ನವೇ ಜರ್ಮನ್ ಒಳ ಗಡಿಯ ಅಸ್ತಿತ್ವಕ್ಕೆ ಅರ್ಥವಿಲ್ಲದಂತಾಗಿತ್ತು. ಈ ಕಿತ್ತುಹಾಕುವಿಕೆಯನ್ನು ಮುಂದುವರೆಸಿದ ಮಿಲಿಟರಿ ಘಟಕಗಳು (Bundeswehrನಡಿಯಲ್ಲಿ ಏಕೀಕರಣವಾದ ನಂತರದಲ್ಲಿ) ನವೆಂಬರ್ 1991ರವರೆಗೂ ಈ ಕೆಲಸ ಮಾಡುತ್ತಿದ್ದವು. ಕೆಲವು ಸಣ್ಣ ಭಾಗಗಳು ಮತ್ತು ಕಾವಲುಗೋಪುರಗಳನ್ನು ಮಾತ್ರ ಸ್ಮಾರಕಗಳಾಗಿ ಉಳಿಸಲಾಯಿತು.
ಗೋಡೆಯ ಪತನವು ಜರ್ಮನ್ ಏಕೀಕರಣದ ಕಡೆಗಿನ ಮೊದಲ ಹೆಜ್ಜೆಯಾಗಿದ್ದು, ಇದನ್ನು ವಿಧ್ಯುಕ್ತವಾಗಿ ಅಕ್ಟೋಬರ್ 3, 1990ರಂದು ಸಂಪನ್ನಗೊಳಿಸಲಾಯಿತು.
ವಿರೋಧ
[ಬದಲಾಯಿಸಿ]ಅಂದಿನ ಯು.ಎಸ್ ಸರ್ಕಾರ ಮತ್ತು ಹೆಚ್ಚಿನ ಯುರೋಪಿಯನ್ ರಾಜಧಾನಿಗಳಲ್ಲಿ ಮರು-ಏಕೀಕೃತ ಜರ್ಮನಿಯ ಭವಿಷ್ಯದ ವಿಷಯವಾಗಿ ಆಳವಾದ ತಲ್ಲಣವಿದ್ದಿತು. ಸೆಪ್ಟೆಂಬರ್ 1989ರಲ್ಲಿ, ಬ್ರಿಟಿಶ್ ಪ್ರಧಾನಮಂತ್ರಿ ಮಾರ್ಗರೆಟ್ ಥ್ಯಾಚರ್ ಸೋವಿಯೆತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ರ ಬಳಿ ಬರ್ಲಿನ್ ಗೋಡೆಯನ್ನು ಬೀಳಗೊಡಬಾರದೆಂದೂ, ಅದನ್ನು ತಡೆಯಲು ಅವರಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಬೇಕೆಂದು ವಿನಂತಿ ಮಾಡಿಕೊಂಡರು.[೬೪][೬೫]
“ | We do not want a united Germany. This would lead to a change to postwar borders, and we cannot allow that because such a development would undermine the stability of the whole international situation and could endanger our security.[೬೪] | ” |
ಬರ್ಲಿನ್ ಗೋಡೆಯ ಪತನದ ನಂತರ, ಫ್ರೆಂಚ್ ಅಧ್ಯಕ್ಷ ಫ್ರಾನ್‌ಸ್ವಾ ಮಿಟೆರಾನ್ ಥ್ಯಾಚರ್‌ರವರಿಗೆ ಏಕೀಕೃತ ಜರ್ಮನಿಯು ಅಡಾಲ್ಫ್ಹ್ ಹಿಟ್ಲರ್ಗಿಂತಲೂ ಹೆಚ್ಚು ಬಲಶಾಲಿಯಾಗಿರುವುದೆಂದೂ, ಇದರ ಪರಿಣಾಮಗಳನ್ನು ಯುರೋಪ್ ಅನುಭವಿಸಬೇಕಾಗುವುದೆಂದೂ ಎಚ್ಚರಿಕೆ ನೀಡಿದರು.[೬೬]
ಉತ್ಸವಗಳು
[ಬದಲಾಯಿಸಿ]ಡಿಸೆಂಬರ್ 25, 1989ರಂದು, ಲಿಯೋನಾರ್ಡ್ ಬರ್ನ್‌ಸ್ಟೀನ್ ಗೋಡೆಯ ಪತನದ ಹರ್ಷಾಚರಣೆಯ ಪ್ರಯುಕ್ತ ಬರ್ಲಿನ್‌ನಲ್ಲಿ ಸಂಗೀತಗೋಷ್ಠಿಯನ್ನು ನಡೆಸಿಕೊಡುತ್ತ ಬೀಥೋವನ್ನನ 9ನೇ ಸಿಂಫನಿಯಲ್ಲಿ ಹಾಡಲಾದ ಸಾಹಿತ್ಯದಲ್ಲಿನ (ಓಡ್ ಟು ಜಾಯ್ ) "ಜಾಯ್" (Freude) ಎಂಬ ಪದದ ಬದಲಾಗಿ "ಫ್ರೀಡಮ್" (Freiheit) ಅನ್ನು ಉಪಯೋಗಿಸಿದನು. ಆರ್ಕೆಸ್ಟ್ರಾ ಮತ್ತು ಕ್ವಾಯರ್ ಅನ್ನು ಪೂರ್ವ ಮತ್ತು ಪಶ್ಚಿಮ ಜರ್ಮನಿಗಳೆರಡರಿಂದಲೂ, ಯುನೈಟೆಡ್ ಕಿಂಗ್‌ಡಮ್, ಫ್ರ್ಯಾನ್ಸ್, ಸೋವಿಯೆತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳಿಂದಲೂ ಆರಿಸಲಾಗಿದ್ದಿತು.[೬೭]
21 ಜುಲೈ 1990ರಂದು ಪಾಟ್ಸ್‌ಡ್ಯಾಮೆರ್ ಪ್ಲಾತ್ಸ್ನ ಉತ್ತರಭಾಗದಲ್ಲಿ ರೋಜರ್ ವಾಟರ್ಸ್ ಪಿಂಕ್ ಫ್ಲಾಯ್ಡ್ ಆಲ್ಬಂ ದ ವಾಲ್ ಅನ್ನು ಪ್ರದರ್ಶಿಸಿದರು, ಮತ್ತು ಪ್ರೇಕ್ಷಕವರ್ಗವು ಬಾನ್ ಜೋವಿ, ಸ್ಕಾರ್ಪಿಯನ್ಸ್, ಬ್ರಯಾನ್ ಆಡಮ್ಸ್, ಸೈನೇಡ್ ಓ’ ಕಾನರ್, ಥಾಮಸ್ ಡಾಲ್ಬೀ, ಜೋನೀ ಮಿಚೆಲ್, ಮೇರಿಯಾನ್ ಫೇತ್‌ಫುಲ್, ಲೆವಾನ್ ಹೆಲ್ಮ್, ರಿಕ್ ಡ್ಯಾಂಕೋ ಮತ್ತು ವ್ಯಾನ್ ಮಾರಿಸನ್ ಮುಂತಾದವರನ್ನೊಳಗೊಂಡಿತ್ತು. ಡೇವಿಡ್ ಹ್ಯಾಸೆಲ್‌ಹಾಫ್ ಬರ್ಲಿನ್ ಗೋಡೆಯ ಮೇಲೆ ನಿಂತುಕೊಂಡು ಆಗ ಜರ್ಮನಿಯಲ್ಲಿ ಬಹಳ ಜನಪ್ರಿಯವಾಗಿದ್ದ ತನ್ನ ಹಾಡು "ಲುಕಿಂಗ್ ಫಾರ್ ಫ್ರೀಡಮ್" ಅನ್ನು ಹಾಡಿದರು.
ಹಲವಾರು ವರುಷಗಳಿಂದಲೂ ವರ್ನರ್ ಶುಲ್ಜ್ ಮುಂತಾದ ಪೂರ್ವ ಜರ್ಮನಿಯ ಮಾಜೀ ರಾಜಕೀಯ ವಿರೋಧಪಕ್ಷದ ಸದಸ್ಯರು ನವೆಂಬರ್ 9 ಸರಿಯಾದ ರಾಷ್ಟ್ರೀಯ ಜರ್ಮನ್ ರಜಾದಿನವಾಗುವುದೆ ಎಂಬ ಬಗ್ಗೆ ಚರ್ಚೆಗಳನ್ನು ಆಗಿಂದಾಗ್ಗೆ ಆರಂಭಿಸುತ್ತಿದ್ದು ಇದು ಒಂದು ವಿವಾದಾಸ್ಪದ ಚರ್ಚಾವಿಷಯವಾಗಿ ಉಳಿದುಕೊಂಡಿದೆ.[೬೮] ಪೂರ್ವ ಜರ್ಮನಿಯ ಶಾಂತಿಯುತ ಕ್ರಾಂತಿಯ ಭಾವನಾತ್ಮಕ ಉತ್ತುಂಗವಾಗಿರುವುದಷ್ಟೇ ಅಲ್ಲ, ನವೆಂಬರ್ 9 1848ರ ಕ್ರಾಂತಿಯು ಕೊನೆಗೊಂಡ ದಿನಾಂಕವೂ, 1918ರಲ್ಲಿ ಕೈಸರ್ ವಿಲ್‍ಹೆಲ್ಮ್ II ಸಿಂಹಾಸನವನ್ನು ತ್ಯಜಿಸಿ ಪ್ರಥಮ ಜರ್ಮನ್ ಗಣರಾಜ್ಯವಾದ ವೀಮರ್ ರಿಪಬ್ಲಿಕ್ ಅನ್ನು ಘೋಷಿಸಿದ ದಿನವೂ ಆಗಿದೆ. ಆದರೆ ಇದರ ಜತೆಗೇ ನವೆಂಬರ್ 9 1923ರ ಬೀರ್ ಹಾಲ್ ವಿಪ್ಲವ ದ ವಾರ್ಷಿಕೋತ್ಸವವೂ, 1938ರಲ್ಲಿ ನಾಜಿಗಳು ಆರಂಭಿಸಿದ ಕುಖ್ಯಾತ ಕ್ರಿಸ್ಟಲ್‌ನಾಷ್ತ್ ಪೋಗ್ರೋಮ್ಗಳ ವಾರ್ಷಿಕ ದಿನಾಂಕವೂ ಆಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಎಲೀ ವೀಸೆಲ್ ಮೊದಲ ಸಂಭ್ರಮಾಚರಣೆಗಳನ್ನು ಖಂಡಿಸುತ್ತ "ಅವರು ನವೆಂಬರ್ 9 ಈಗಾಗಲೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ ಎಂದು ಮರೆತಿದ್ದಾರೆ - 51 ವರ್ಷಗಳ ಹಿಂದೆ ಇದೇ ದಿನವು ಕ್ರಿಸ್ಟಲ್‌ನಾಶ್ತ್‌ನ ಆರಂಭವನ್ನು ಸೂಚಿಸುತ್ತದೆ."[೬೯] ಏಕೀಕರಣವು ಅಕ್ಟೋಬರ್ 3ರವರೆಗೆ ಅಧಿಕೃತವಾಗಿ ಸಂಪನ್ನವಾಗಿರದುದ್ದರಿಂದ; ಅದೇ ದಿನವನ್ನು ಕೊನೆಯಲ್ಲಿ ಜರ್ಮನ್ ಯುನಿಟಿ ಡೇಯಾಗಿ ಆರಿಸಲಾಯಿತು.
20ನೇ ವಾರ್ಷಿಕೋತ್ಸವ ಆಚರಣೆ
[ಬದಲಾಯಿಸಿ]ನವೆಂಬರ್ 9, 2009ರಂದು ಬರ್ಲಿನ್ ಬ್ರ್ಯಾಂಡೆನ್‌ಬರ್ಗ್ ಗೇಟ್ನ ಸುತ್ತ ಉತ್ಸವದ ಸಂಜೆಯನ್ನಾಚರಿಸಲು ಪ್ರಪಂಚದೆಲ್ಲೆಡೆಯಿಂದ ಆಗಮಿಸಿದ್ದ ಗಣ್ಯರ ಉಪಸ್ಥಿತಿಯಲ್ಲಿ "ಫೆಸ್ಟಿವಲ್ ಆಫ್ ಫ್ರೀಡಮ್" ಅನ್ನು ಬರ್ಲಿನ್ ಗೋಡೆಯ ಪತನದ 20ನೇ ವಾರ್ಷಿಕೋತ್ಸವದ ರೂಪದಲ್ಲಿ ಆಚರಿಸಿತು. ಬಣ್ಣಬಣ್ಣದ ವಿನ್ಯಾಸಗಳುಳ್ಳ ಎಂಟು ಅಡಿ ಎತ್ತರದ 1000 ಫೋಮ್ ಡೊಮಿನೋ ಬಿಲ್ಲೆಗಳನ್ನು ಹಿಂದೆ ಗೋಡೆಯಿದ್ದ ಮಾರ್ಗದಲ್ಲಿ ಇರಿಸಲಾಗಿದ್ದು ನಗರದ ಕೇಂದ್ರಭಾಗದಿಂದ ಅವನ್ನು ಹಲವು ಹಂತಗಳಲ್ಲಿ ಉರುಳಿಸಲಾಗಿ ಅವು ಬ್ರಾಂಡನ್‌ಬರ್ಗ್ ಗೇಟಿನ ಮುಂದೆ ಬಂದು ಸೇರುವಂತೆ ಆಯೋಜಿಸಲಾಗಿದ್ದು, ಇದು ಕಾರ್ಯಕ್ರಮದ ಶಿಖರಭಾಗವಾಗಿತ್ತು.[೬೧]
ಇಪ್ಪತ್ತನೇ ವಾರ್ಷಿಕೋತ್ಸದ ಸ್ಮರಣೆಯನ್ನು Twitter ಬಳಕೆದಾರರು ಮಾಡಲು ಮತ್ತು ತಮ್ಮ ಸಂದೇಶಗಳನ್ನು ಪೋಸ್ಟ್ ಮಾಡಲು ಅನುಕೂಲವಾಗುವಂತೆ Berlin Twitter Wall ಅನ್ನು ಸಜ್ಜುಗೊಳಿಸಲಾಯಿತು. ಚೀನೀಯ ಬಳಕೆದಾರರ ಗುಂಪುಗಳು ಇದನ್ನು ಗ್ರೇಟ್ ಫೈರ್‌ವಾಲ್ ಆಫ್ ಚೈನಾದ ವಿರುದ್ಧ ಪ್ರತಿಭಟಿಸಲು ಬಳಸಿಕೊಂಡಿದ್ದಾರೆ. Berlin Twitter Wall ಅನ್ನು ಚೀನೀ ಅಧಿಕಾರಿಗಳು ಬಹಳ ಬೇಗನೆ ನಿರ್ಬಂಧಿಸಿದರು.[೭೦][೭೧][೭೨]
ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಜರ್ಮನ್ ದೂತಾವಾಸವು ಬರ್ಲಿನ್ ಗೋಡೆಯ ಇಪ್ಪತ್ತನೇ ವಾರ್ಷಿಕೋತ್ಸವದ ಸ್ಮರಣೆಯಲ್ಲಿ "ಗೋಡೆಗಳಿಲ್ಲದ ಸ್ವಾತಂತ್ರ್ಯ" ಎಂಬ ಧ್ಯೇಯವಾಕ್ಯವನ್ನುಳ್ಳ ಸಾರ್ವಜನಿಕ ರಾಜತಾಂತ್ರಿಕ ಪ್ರಚಾರಕಾರ್ಯವನ್ನು ಆರಂಭಿಸಿತು. ಈ ಪ್ರಚಾರಕಾರ್ಯವು ಇಂದಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಬರ್ಲಿನ್ ಗೋಡೆಯ ಪತನದ ಬಗ್ಗೆ ಅರಿವು ಮೂಡಿಸುವುದನ್ನು ಗುರಿಯಾಗಿಟ್ಟುಕೊಂಡಿದ್ದಿತು. 2009ರ ಅಂತ್ಯಭಾಗದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು "ಫ್ರೀಡಮ್ ವಿದೌಟ್ ವಾಲ್ಸ್" ಪ್ರಚಾರ ಆಂದೋಲನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.[೭೩]
ಹಲವಾರು ರಾಷ್ಟ್ರಗಳಲ್ಲಿ Mauerreise (ಗೋಡೆಯ ಪಯಣ) ಎಂಬ ಅಂತರ್ರಾಷ್ಟ್ರೀಯ ಯೋಜನೆಯೊಂದನ್ನು ಕೈಗೊಳ್ಳಲಾಯಿತು. ಮೇ 2009ರಲ್ಲ್ಲಿ ಆರಂಭಿಸಿ ಬರ್ಲಿನ್‌ನಿಂದ ಇಪ್ಪತ್ತು ಸಾಂಕೇತಿಕ ಇಟ್ಟಿಗೆಗಳನ್ನು ಕಳುಹಿಸಲಾಯಿತು. ಅವುಗಳ ಗಮ್ಯಸ್ಥಾನಗಳು: ಕೊರಿಯಾ, ಸೈಪ್ರೆಸ್, ಯೆಮೆನ್ ಮತ್ತು ದೈನಂದಿನ ಬದುಕು ಪ್ರತ್ಯೇಕತೆಯಿಂದ ಅಥವಾ ಗಡಿರೇಖೆಯ ಅನುಭವಗಳಿಂದಲೇ ರೂಪಿತವಾಗಿರುವ ಇನ್ನಿತರ ಸ್ಥಳಗಳಾಗಿದ್ದವು. ಈ ಜಾಗಗಳಲ್ಲಿ ಇಟ್ಟಿಗೆಗಳು ಕಲಾವಿದರು, ಬುದ್ಧಿಜೀವಿಗಳು ಮತ್ತು ಯುವಜನರಿಗೆ 「ಗೋಡೆ」ಯ ವಿದ್ಯಮಾನವನ್ನು ಎದುರಿಸಲು ಒಂದು ಬರಿದಾದ ಕ್ಯಾನ್‌ವಾಸ್ ಆಗಿಬಿಡುತ್ತವೆ.[೭೪]
ಬರ್ಲಿನ್ ಗೋಡೆಯ ಪತನದ ಇಪ್ಪತ್ತನೇ ವಾರ್ಷಿಕೋತ್ಸವದ ಸ್ಮರಣೆಯಲ್ಲಿ, Twinityಯು ವರ್ಚುಅಲ್ ಬರ್ಲಿನ್‌ನಲ್ಲಿ ಹಿಂದಿದ್ದ ಅಳತೆಯದೇ ಗೋಡೆಯೊಂದನ್ನು ನಿರ್ಮಿಸಿದರು.[೭೫] ನವೆಂಬರ್ 5ರಂದು ನಡೆದ MTV Europe Music Awardsನಲ್ಲಿ, U2 ಮತ್ತು Tokio Hotel ಬರ್ಲಿನ್ ಗೋಡೆಯ ಬಗೆಗಿನ ಅಥವಾ ಅದಕ್ಕೆ ಸಮರ್ಪಿಸಿದ ಹಾಡುಗಳನ್ನು ಪ್ರಸ್ತುತಪಡಿಸಿದರು. U2 ’ಎಟ್ ದ ಬ್ರಾಂಡೆನ್‌ಬರ್ಗ್ ಗೇಟ್’ ಮತ್ತು Tokio Hotel "ವರ್ಲ್ಡ್ ಬಿಹೈಂಡ್ ಮೈ ವಾಲ್" ಅನ್ನು ಪ್ರದರ್ಶಿಸಿದರು.
ವೆಸ್ಟ್ ಬ್ಯಾಂಕ್ನ ಪಟ್ಟಣವಾದ ಕಲಾಂಡಿಯಾದ ಪ್ಯಾಲೆಸ್ತೀನೀಯರು ಬರ್ಲಿನ್ ಗೋಡೆಯ ಪತನದ ಇಪ್ಪತ್ತನೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರದರ್ಶನವೊಂದನ್ನೇರ್ಪಡಿಸಿ ಇಸ್ರೇಲೀ ವೆಸ್ಟ್ ಬ್ಯಾಂಕ್ ತಡೆಗೋಡೆಯ ಕೆಲಭಾಗಗಳನ್ನು ಒಡೆದುಹಾಕಿದರು.[೭೬]
ಪರಂಪರೆ
[ಬದಲಾಯಿಸಿ]-
ಫ್ರೀಡರಿಕ್ಶೇನ್ನ ಆಸ್ಟ್ಬಾನ್ಹಾಫ್ನ ಬಳಿ ಉಳಿದುಕೊಂಡಿರುವ ಗೋಡೆಯ ಭಾಗ, ಆಗಸ್ಟ್ 2006
-
ಟಾಪಾಗ್ರಫಿ ಆಫ್ ಟೆರರ್ ಬಳಿಯ ಗೋಡೆಯ ಅವಶೇಷಗಳು, ಆಗಸ್ಟ್ 2007
-
ದಾಟಲು ಪ್ರಯತ್ನಿಸಿ ಸಾವಿಗೀಡಾದವರ ನೆನಪಿಗಾಗಿ ಸಾವಿರಕ್ಕೂ ಹೆಚ್ಚು ಶಿಲುಬೆಗಳು ಮತ್ತು ಗೋಡೆಯ ಒಂದು ಭಾಗ.ಈ ಸ್ಮಾರಕವು 2004ರಿಂದ 2005ರವರೆಗೆ ಇದ್ದು ನಂತರ ಅದನ್ನು ತೆಗೆದುಹಾಕಲಾಯಿತು.
-
ಗೋಡೆಯಿದ್ದ ಕಡೆ ಈಗಿರುವ ನುಣುಪುಗಲ್ಲಿನ ಸರಣಿಗೊಂದು ಉದಾಹರಣೆ.ಫಲಕದ ಮೇಲೆ "BERLINER MAUER 1961–1989" ಎಂದು ಬರೆದಿದೆ
-
ಚೆಕ್‌ಪಾಯಿಂಟ್ ಚಾರ್ಲೀಯ "BERLINER MAUER 1961–1989" ಫಲಕವು ಗೋಡೆಯಿದ್ದ ಜಾಗವನ್ನು ಸೂಚಿಸುತ್ತದೆ.
-
ಬರಹವಿಲ್ಲದ ಒಂದು ಗುರುತಿನ ನುಣುಪುಗಲ್ಲು
ಗೋಡೆಯನ್ನು ಹೆಚ್ಚೂಕಡಿಮೆ ಎಲ್ಲಾ ಕಡೆ ನಾಶ ಮಾಡಿದ್ದರಿಂದ ಅದಿದ್ದ ಮೂಲ ಜಾಗದಲ್ಲಿ ಇಂದು ಅವಶೇಷಗಳು ಉಳಿದುಕೊಂಡಿರುವುದು ಅಪರೂಪ. ಮೂರು ಉದ್ದವಾದ ಭಾಗಗಳು ಇನ್ನೂ ನಿಂತುಕೊಂಡಿವೆ: ಚೆಕ್‌ಪಾಯಿಂಟ್ ಚಾರ್ಲೀ ಮತ್ತು ಪಾಟ್ಸ್‌ಡ್ಯಾಮೆರ್ ಪ್ಲಾತ್ಸ್ಗಳ ನಡುದಾರಿಯಲ್ಲಿರುವ, ಮಾಜೀ Gestapo ಕೆಂದ್ರಕಚೇರಿಯ ನೆಲೆಯಾಗಿದ್ದ ಟಾಪಾಗ್ರಫಿ ಆಫ್ ಟೆರರ್ನ ಮೊದಲನೆಯ (ಪಶ್ಚಿಮದೆಡೆಗಿನ) 80-ಮೀಟರುಗಳ (263 ಅಡಿ) ಗೋಡೆಯ ಭಾಗ ; ಓಬರ್‌ಬಾಂಬ್ರಕ್ನ ಬಳಿಯ ಸ್ಪ್ರೀ ನದಿಯುದ್ದಕ್ಕೂ ಇರುವ ಈಸ್ಟ್ ಸೈಡ್ ಗ್ಯಾಲರಿ ಎಂಬ ಅಡ್ಡಹೆಸರಿರುವ ಎರಡನೇ ಗೋಡೆಯ (ಪೂರ್ವಾಭಿಮುಖವಾದ) ಹೆಚ್ಚು ಉದ್ದನೆಯ ಭಾಗ; ಮತ್ತು ಮೂರನೇ ಭಾಗವು ಕೆಲಮಟ್ಟಿಗೆ ಮರುನಿರ್ಮಾಣಗೊಂಡ ಉತ್ತರದೆಡೆಗೆ ಬರ್ನಾಯರ್ ಸ್ಟ್ರೇಬ್ನಲ್ಲಿರುವ ಭಾಗವಾಗಿದ್ದು, ಇದನ್ನು 1999ರಲ್ಲಿ ಸ್ಮಾರಕವನ್ನಾಗಿ ಪರಿವರ್ತಿಸಲಾಯಿತು. ಕೆಲವು ಒಂಟಿ ಭಾಗಗಳು ಮತ್ತು ಕೆಲವು ಕಾವಲುಗೋಪುರಗಳು ಕೂಡ ನಗರದ ಹಲವಾರು ಭಾಗಗಳಲ್ಲಿ ಉಳಿದುಕೊಂಡಿವೆ.
ಇವಾವುದೂ ಗೋಡೆಯ ಮೂಲ ನೋಟವನ್ನು ಪ್ರತಿನಿಧಿಸುವುದಿಲ್ಲ. ಅವು ಸ್ಮರಣಿಕೆಗಳನ್ನು ಬಯಸಿ ಬರುವವರಿಂದ ತೀವ್ರ ಹಾನಿಗೊಳಗಾಗಿವೆ. ಗೋಡೆಯ ಕೆಲಭಾಗಗಳನ್ನು ಒಯ್ದು ಅವುಗಳಲ್ಲಿ ಕೆಲವನ್ನು ಪ್ರಪಂಚದೆಲ್ಲೆಡೆ ಮಾರಾಟ ಮಾಡಲಾಯಿತು. ಅಧಿಕೃತ ಪ್ರಮಾಣಪತ್ರಗಳ ಜತೆ ಮತ್ತು ಹೊರತಾಗಿ ಕಾಣಿಸಿಕೊಂಡ ಈ ಭಾಗಗಳು ಇಂದು ಆನ್‌ಲೈನ್ ಹರಾಜು ಸೇವೆಯಾದ eBay ಮತ್ತು ಜರ್ಮನ್ ಸ್ಮರ್ಣಿಕೆಗಳ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತವೆ. ಪೂರ್ವ ಜರ್ಮನಿಯ ಶಸ್ತ್ರಸಜ್ಜಿತ ಸೈನಿಕರು ಕಾಯುವಾಗ ಕಂಡುಬರದಿದ್ದ ಗೋಡೆಗೀಚುಗಳು ಇಂದು ಪೂರ್ವಭಾಗದ ಗೋಡೆಯ ಮೇಲೆ ತುಂಬಿಹೋಗಿವೆ. ಹಿಂದೆ ಗೋಡೆಗೀಚುಗಳು ಬರೇ ಪಶ್ಚಿಮಭಾಗದಲ್ಲಿ ಮಾತ್ರ ಕಂಡುಬರುತ್ತಿದ್ದಿತು. ಸಿಟಿ ಸೆಂಟರ್‌ನ ಪ್ರವಾಸೀ ಜಾಗಗಳ ಜತೆಗೇ ನಗರದ ಸರ್ಕಾರವು ರಸ್ತೆಯಲ್ಲಿ ಹಿಂದೆ ಗೋಡೆಯಿದ್ದ ಜಾಗಗಳನ್ನು ನುಣುಪಾದ ಕಲ್ಲುತುಂಡುಗಳ ಸಾಲುಗಳನ್ನು ಬಳಸಿ ಗುರುತಿಸಿದ್ದಾರೆ. ಹೆಚ್ಚಿನ ಕಡೆ "ಮೊದಲ" ಗೊಡೆಯನ್ನು ಮಾತ್ರ ಗುರುತಿಸಲಾಗಿದ್ದು, ಪಾಟ್ಸ್‌ಡ್ಯಾಮೆರ್ ಪ್ಲಾತ್ಸ್ ಬಳಿ ಮಾತ್ರ ಎರಡೂ ಗೋಡೆಗಳನ್ನು ಗುರುತಿಸಿರುವುದರಿಂದ ಭೇಟಿ ನೀಡುವವರಿಗೆ ತಡೆಗೋಡೆ ವ್ಯವಸ್ಥೆಯ ವಿಸ್ತೀರ್ಣದ ಅರಿವುಂಟಾಗುತ್ತದೆ.
ವಸ್ತು ಸಂಗ್ರಹಾಲಯಗಳು
[ಬದಲಾಯಿಸಿ]ಪತನದ ಹದಿನೈದು ವರ್ಷಗಳ ನಂತರ ಖಾಸಗೀ ಮ್ಯೂಸಿಯಮ್ ಒಂದು ಚೆಕ್‌ಪಾಯಿಂಟ್ ಚಾರ್ಲೀ ಬಳಿಯಲ್ಲಿದ್ದ ಗೋಡೆಯೊಂದರ 200-ಮೀಟರ್ (656 ಅಡಿ) ಉದ್ದದ ಭಾಗವನ್ನು ಮರುನಿರ್ಮಾಣ ಮಾಡಿತಾದರೂ ಅದು ಮೂಲ ಗೋಡೆಯ ಜಾಗದಲ್ಲಿರಲಿಲ್ಲ. ಅವರು ತಾತ್ಕಾಲಿಕವಾಗಿ 1,000ಕ್ಕೂ ಹೆಚ್ಚು ಶಿಲುಬೆಗಳನ್ನು ಪಶ್ಚಿಮಕ್ಕೆ ಪಲಾಯನ ಮಾಡಲೆಳಸಿ ಸತ್ತವರ ಗೌರವಾರ್ಥ ಸ್ಥಾಪಿಸಿದರು. ಈ ಸ್ಮಾರಕವನ್ನು ಅಕ್ಟೋಬರ್ 2004ರಲ್ಲಿ ಅಳವಡಿಸಲಾಗಿ ಜುಲೈ 2005ರಲ್ಲಿ ಕಿತ್ತುಹಾಕಲಾಯಿತು.[೭೭]
ಸಾಂಸ್ಕೃತಿಕ ಭಿನ್ನತೆಗಳು
[ಬದಲಾಯಿಸಿ]ಏಕೀಕರಣದ ನಂತರದ ಹಲವಾರು ವರ್ಷಗಳವರೆಗೂ ಜರ್ಮನಿಯ ಜನರು ಪೂರ್ವ ಮತ್ತುಪಶ್ಚಿಮ ಜರ್ಮನಿಯ ಜನರ ನಡುವಿನ ಸಾಂಸ್ಕೃತಿಕ ಭಿನ್ನತೆಗಳ ಬಗ್ಗೆ ಮಾತನಾಡುತ್ತಿದ್ದರು, (ಆಡುಮಾತಿನಲ್ಲಿ ಓಸ್ಸಿಸ್ ಮತ್ತು ವೆಸ್ಸಿಸ್ ), ಕೆಲವೊಮ್ಮೆ ಇದನ್ನು Mauer im Kopf (ತಲೆಯೊಳಗಿರುವ ಗೋಡೆ) ಎಂದು ಬಣ್ಣಿಸಲಾಗುತ್ತಿತ್ತು. ಸೆಪ್ಟೆಂಬರ್ 2004ರಲ್ಲಿ ನಡೆಸಿದ ಸಮೀಕ್ಷೆಯೊಂದು ಶೇಕಡಾ 25 ಪಶ್ಚಿಮ ಜರ್ಮನರು ಮತ್ತು ಶೇಕಡಾ 12 ಪೂರ್ವ ಜರ್ಮನರು ಪೂರ್ವ ಮತ್ತು ಪಶ್ಚಿಮಗಳು ಮತ್ತೆ "ಗೋಡೆ"ಯೊಂದರ ಮೂಲಕ ಬೇರಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು.[೭೮] ಗೋಡೆಯ ಪತನದ ಇಪ್ಪತ್ತನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಕ್ಟೋಬರ್ 2009ರಲ್ಲಿ ನಡೆಸಿದ ಸಮೀಕ್ಷೆಯೊಂದು ಹತ್ತನೇ ಒಂದರಷ್ಟು ಭಾಗ ಜನತೆ ಮಾತ್ರ ಏಕೀಕರಣದಿಂದ ಸಂತಸಗೊಂಡಿಲ್ಲ (ಪೂರ್ವದಲ್ಲಿ ಶೇಕಡಾ 8; ಪಶ್ಚಿಮದಲ್ಲಿ ಶೇಕಡಾ 12) ಎಂಬ ಸೂಚನೆಗಳು ದೊರಕಿದವು. ಪೂರ್ವ, ಪಶ್ಚಿಮಗಳ ನಡುವೆ ಭಿನ್ನತೆಗಳನ್ನು ಇನ್ನುವರೆಗೂ ಕಂಡುಹಿಡಿಯಲಾಗುತ್ತದೆಯಾದರೂ ಜರ್ಮನರು ಇದೇ ರೀತಿ ತಮ್ಮದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಬಗೆಗೂ ಇದೇ ರೀತಿಯ ಭಾವನೆಯನ್ನು ಹೊಂದಿದ್ದಾರೆ.[೭೯]
ರಷ್ಯಾದ VTsIOM ನಡೆಸಿದ ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ರಷ್ಯನ್ನರಿಗೆ ಬರ್ಲಿನ್ ಗೋಡೆಯನ್ನು ನಿರ್ಮಿಸಿದವರಾರೆಂದು ತಿಳಿದಿಲ್ಲವೆಂಬುದು ಬೆಳಕಿಗೆ ಬಂದಿದೆ. ಸಮೀಕ್ಷೆಗೆ ಒಳಗಾದ ಶೇಕಡಾ ಹತ್ತರಷ್ಟು ಜನರು ಬರ್ಲಿನ್ ನಿವಾಸಿಗಳೇ ಅದನ್ನು ಕಟ್ಟಿದ್ದರೆಂದು ಭಾವಿಸಿದ್ದರು. ಶೇಕಡಾ ಆರರಷ್ಟು ಜನರು ಅದನ್ನು ಪಾಶ್ಚಿಮಾತ್ಯ ಬಲಗಳು ಕಟ್ಟಿದ್ದೆಂದು ತಿಳಿದಿದ್ದರು ಮತ್ತು ಶೇಕಡಾ ನಾಲ್ಕು ಜನರು ಇದು ಸೋವಿಯೆತ್ ಒಕ್ಕೂಟ ಮತ್ತು ಪಶ್ಚಿಮದ "ದ್ವಿಪಕ್ಷೀಯ ಹೆಜ್ಜೆ"ಯಾಗಿತ್ತೆಂದು ಭಾವಿಸಿದ್ದರು. ಶೇಕಡಾ ಐವತ್ತೆಂಟು ಜನರು ಗೋಡೆಯನ್ನು ಕಟ್ಟಿದವರಾರೆಂದು ತಮಗೆ ಗೊತ್ತಿಲ್ಲವೆಂಬ ಉತ್ತರ ನೀಡಿದರೆ, ಶೇಕಡಾ 24ರಷ್ಟು ಜನ ಮಾತ್ರ ಸರಿಯಾಗಿ ಸೋವಿಯತ್ ಒಕ್ಕೂಟ ಮತ್ತು ಅದರ ಆಗಿನ ಕಮ್ಯುನಿಸ್ಟ್ ಮಿತ್ರಪಕ್ಷವಾಗಿದ್ದ ಪೂರ್ವ ಜರ್ಮನಿ ಎಂಬ ಉತ್ತರವನ್ನು ನೀಡಿದರು.[೮೦]
ಪ್ರಪಂಚದಾದ್ಯಂತ ಗೋಡೆಯ ಭಾಗಗಳು
[ಬದಲಾಯಿಸಿ]ಗೋಡೆಯನ್ನು ಉರುಳಿಸುತ್ತಿದ್ದಂತೆ ಅದರ ಎಲ್ಲಾ ಭಾಗಗಳನ್ನೂ ಅರೆಯಲಾಗಲಿಲ್ಲ. ಹಲವಾರು ಭಾಗಗಳನ್ನು ಪ್ರಪಂಚದಾದ್ಯಂತ ಹಲವಾರು ಸಂಸ್ಥೆಗಳಿಗೆ ನೀಡಲಾಯಿತು. ಇಂದಿಗೂ ಇಂಥ ಭಾಗಗಳನ್ನು ಅಧ್ಯಕ್ಷೀಯ ಮತ್ತು ಐತಿಹಾಸಿಕ ಸಂಗ್ರಹಾಲಯಗಳಲ್ಲಿ, ಹೊಟೆಲ್ ಮತ್ತು ಕಾರ್ಪೊರೇಶನ್‌ಗಳ ಲಾಬಿಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ವಾಶಿಂಗ್‌ಟನ್, ಡಿಸಿ ಬಳಿಯ ಪೆಂಟಗನ್ ಅನ್ನೂ ಒಳಗೊಂಡಂತೆ ಹಲವಾರು ಸರ್ಕಾರೀ ಕಟ್ಟಡಗಳಲ್ಲಿ ಕಾಣಬಹುದು.
ಇವನ್ನೂ ಗಮನಿಸಿ
[ಬದಲಾಯಿಸಿ]- ಬರ್ಲಿನ್ ಗಡಿಯ ದಾಟುವಿಕೆಗಳು
- ಬ್ರ್ಯಾಂಡೆನ್‌ಬರ್ಗ್ ಗೇಟ್
- ಶೀತಲ ಸಮರ
- ಸೋವಿಯೆತ್ ಒಕ್ಕೂಟದ ಕುಸಿತ, 1991
- ಪೌರ್ವಾತ್ಯ ಬಣ
- ಬರ್ಲಿನ್ ಗೋಡೆಯ ಬಗೆಗಿನ ಚಲನಚಿತ್ರಗಳು: "ದ ಬಾಯ್ ಎಂಡ್ ದ ವಾಲ್" ಸ್ಪ್ಯಾನಿಶ್-ಮೆಕ್ಸಿಕನ್ ಸಹ-ನಿರ್ಮಾಣ, 1965[೮೧]
- ಡರ್ ಟನೆಲ್ , ಸುರಂಗವೊಂದರ ಮೂಲಕ ಪೂರ್ವ ಬರ್ಲಿನ್‌ಗೆ ಸಾಮೂಹಿಕ ಸ್ಥಳಾಂತರಣ
- ಬರ್ಲಿನ್ ಟನೆಲ್ 21 , ನಿರ್ದಿಷ್ಟವಾದ ತಪ್ಪಿಸಿಕೊಳ್ಳುವಿಕೆಗಾಗಿ ರೂಪಿಸಲಾದ ಸುರಂಗವೊಂದರ ಬಗ್ಗೆ ದೂರದರ್ಶನಕ್ಕಾಗಿ ನಿರ್ಮಿಸಲಾದ ರಿಚರ್ಡ್ ಥಾಮಸ್ ನಾಯಕನಟನಾಗಿರುವ ಚಲನಚಿತ್ರ.
- ದ ಲೈವ್ಸ್ ಆಫ್ ಅದರ್ಸ್ , ಪೂರ್ವ ಜರ್ಮನ್ ಸ್ತಾಸಿಯ ಬಗೆಗಿನ ಪ್ರಶಸ್ತಿವಿಜೇತ ಜರ್ಮನ್ ಚಲನಚಿತ್ರ, 2006
- ದ ಟನೆಲ್ , ಡಿಸೆಂಬರ್ 1962ರಲ್ಲಿ ಪ್ರಸಾರವಾದ NBC News Specialನ ಸಾಕ್ಷ್ಯಚಿತ್ರ.
- ಕಬ್ಬಿಣದ ತೆರೆ
- ಬರ್ಲಿನ್ ಗೋಡೆಯ ಭಾಗಗಳ ಪಟ್ಟಿ
- ಗೋಡೆಗಳ ಪಟ್ಟಿ
- ಆಪರೇಶನ್ ಗೋಲ್ಡ್
- ಆಸ್ಟಾಲ್ಜೀ
- ಕೊರಿಯನ್ ಭಾಷೆಯಲ್ಲಿ ಗೋಡೆ ಎಂಬ ಪದಕ್ಕೆ ಸಮಾನಾರ್ಥಕ ಪದವಾದ Panmunjeom, ಮತ್ತು ಶೀತಲ ಸಮರದ ಕೊನೆಯ ಪ್ರತಿಭಟನೆ
- ಮಾದರಿ ಸ್ಠಳಾಂತರೀಕರಣ
- ಆಧುನೀಕೋತ್ತರ
- ಹಂಗರಿಯ ಗಡಿಭಾಗದ ಬೇಲಿಯನ್ನು ತೆಗೆದುಹಾಕುತ್ತಿರುವುದು
- ಶೈßಬೆಫೆಲ್
- ಐಕಮತ್ಯ ಆಂದೋಲನ
- ಯು.ಎಸ್ ಮತ್ತು ಸೋವಿಯೆತ್ ಟ್ಯಾಂಕುಗಳ ನಡುವೆ ವೈಷಮ್ಯ, ಅಕ್ಟೋಬರ್ 1961
- ದ ಬರ್ಲಿನ್ ವಾಲ್l (ಆರ್ಕೇಡ್ ಗೇಮ್)
- ದ ವಾಲ್ - ಲೈವ್ ಇನ್ ಬರ್ಲಿನ್,ರೋಜರ್ ವಾಟರ್ಸ್ರವರ ಒಂದು ರಾಕ್ ಒಪೆರಾ/ಗಾನಗೋಷ್ಠಿ.
ಟಿಪ್ಪಣಿಗಳು
[ಬದಲಾಯಿಸಿ]- ↑ Monday, Nov. 20, 1989 (1989-11-20). "Freedom! - TIME". TIME<!. Archived from the original on 2013-08-25. Retrieved 2009-11-09.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ Miller 2000, p. 4-5
- ↑ Miller 2000, p. 16
- ↑ Miller 2000, p. 10
- ↑ Miller 2000, p. 13
- ↑ ೬.೦ ೬.೧ Wettig 2008, p. 95-5
- ↑ ೭.೦ ೭.೧ Wettig 2008, p. 96
- ↑ ರಾಜಕೀಯ ಕ್ರಮವಿಧಿಗಳು ಸ್ವತಂತ್ರವಾಗಿ ಸಂಸತ್ತಿನ ಅಸೆಂಬ್ಲಿಗಳಿಗೆ ಆಯ್ಕೆಯಾದವರು ಮಂತ್ರಿಗಳು-ಅಧ್ಯಕ್ಷರನ್ನು ನೇಮಿಸುವ ಬ್ರಿಟನ್, ಫ್ರ್ಯಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಕ್ರಮಿತ ಪಶ್ಚಿಮ ವಲಯಕ್ಕಿಂತ ಬಹಳ ಭಿನ್ನವಾಗಿದ್ದಿತು. (ಟರ್ನರ್, ಹೆನ್ರಿ ಆಶ್‌ಬೀ. The Two Germanies Since 1945: East and West , Yale University Press, 1987, ISBN 0-300-03865-8, ಪುಟ 20)
- ↑ Turner 1987, p. 47
- ↑ Gaddis 2005, p. 33
- ↑ Miller 2000, p. 65-70
- ↑ Turner 1987, p. 29
- ↑ ಫ್ರಿಶ್-ಬೌರ್ನಜೆಲ್, ರೆನಾಟಾ, Confronting the German Question: Germans on the East-West Divide , Berg Publishers, 1990, ISBN 0-85496-684-6, ಪುಟ 143
- ↑ Gaddis 2005, p. 34
- ↑ Miller 2000, p. 180-81
- ↑ Wettig 2008, p. 179
- ↑ ಅಭಿನಂದನಾ ತಂತಿಸಂದೇಶವೊಂದರಲ್ಲಿ ಸ್ಟಾಲಿನ್ ಪೂರ್ವ ಜರ್ಮನಿಯ ರಚನೆಯೊಂದಿಗೆ "ಜಾಗತಿಕ ಸಾಮ್ರಾಜ್ಯವಾದಿಗಳು ಯುರೋಪಿಯನ್ ರಾಷ್ಟ್ರಗಳನ್ನು ಗುಲಾಮಗಿರಿಗೆ ತೊಡಗಿಸುವುದು ಅಸಾಧ್ಯವಾಗಿದೆ." ಎಂದು ಒತ್ತಿಹೇಳಿದ್ದಾನೆ. (Wettig, Gerhard, Stalin and the Cold War in Europe , Rowman & Littlefield, 2008, ISBN 0-7425-5542-9, page 179)
- ↑ ೧೮.೦ ೧೮.೧ Thackeray 2004, p. 188
- ↑ [Bayerisches Staatsministerium für Arbeit und Sozialordnung, Familie und Frauen, Statistik Spätaussiedler Dezember 2007] Error: {{Lang}}: text has italic markup (help), p.3 (in German)
- ↑ Loescher 2001, p. 60
- ↑ Loescher 2001, p. 68
- ↑ Dale 2005, p. 17
- ↑ Dowty 1989, p. 114
- ↑ Dowty 1989, p. 116
- ↑ ೨೫.೦ ೨೫.೧ ೨೫.೨ Dowty 1989, p. 121
- ↑ Harrison 2003, p. 240-fn
- ↑ Harrison 2003, p. 98
- ↑ ೨೮.೦ ೨೮.೧ ೨೮.೨ ೨೮.೩ Harrison 2003, p. 99
- ↑ ಪಾಲ್ ಮ್ಯಾಡ್ರೆಲ್, Spying on Science: Western Intelligence in Divided Germany 1945–1961 , p. 56. Oxford University Press, 2006
- ↑ ೩೦.೦ ೩೦.೧ ೩೦.೨ ೩೦.೩ ೩೦.೪ Dowty 1989, p. 122
- ↑ ೩೧.೦ ೩೧.೧ ೩೧.೨ Harrison 2003, p. 100
- ↑ ವೋಕರ್ ರೋಲ್ಫ್ ಬರ್ಗ್‌ಹಾನ್, Modern Germany: Society, Economy and Politics in the Twentieth Century , p. 227. Cambridge University Press, 1987
- ↑ Pearson 1998, p. 75
- ↑ Wiegrefe, Klaus. "Wir lassen euch jetzt ein, zwei Wochen Zeit", [Spiegel Online - einestages] Error: {{Lang}}: text has italic markup (help), May 2009
- ↑ Record of the conversation
- ↑ US Politics Guide Archived 2010-03-06 ವೇಬ್ಯಾಕ್ ಮೆಷಿನ್ ನಲ್ಲಿ. - speech transcript
- ↑ ಟೇಲರ್, ಫ್ರೆಡರಿಕ್. The Berlin Wall: 13 August 1961 - 9 November 1989 . Bloomsbury 2006
- ↑ Goethe-Institut - Topics - German-German History Goethe-Institut
- ↑ "Die Regierungen der Warschauer Vertragsstaaten wenden sich an die Volkskammer und an die Regierung der DDR mit dem Vorschlag, an der Westberliner Grenze eine solche Ordnung einzuführen, durch die der Wühltätigkeit gegen die Länder des sozialistischen Lagers zuverlässig der Weg verlegt und ringsum das ganze Gebiet West-Berlins eine verlässliche Bewachung gewährleistet wird." Die Welt: Berlin wird geteilt
- ↑ ["(German)[[ವರ್ಗ:Articles with German-language external links]] Neues Deutschland: Normales Leben in Berlin, August 14, 1961". Archived from the original on 2011-07-18. Retrieved 2010-05-14.
{{cite web}}
: URL–wikilink conflict (help) (German) Neues Deutschland: Normales Leben in Berlin, August 14, 1961] - ↑ English translation of "Wer die Deutsche Demokratische Republik verläßt, stellt sich auf die Seite der Kriegstreiber" ("He Who Leaves the German Democratic Republic Joins the Warmongers", Notizbuch des Agitators ("Agitator's Notebook"), Berlin: Socialist Unity Party's Agitation Department, November 1955.
- ↑ See also Hackworth, About Face
- ↑ ೪೩.೦ ೪೩.೧ According to Hagen Koch, former Stasi-officer, in Geert Mak's documentary In Europa, episode 1961 - DDR Archived 2021-02-09 ವೇಬ್ಯಾಕ್ ಮೆಷಿನ್ ನಲ್ಲಿ., ಜನವರಿ 25, 2009
- ↑ Heiko Burkhardt. "Facts of Berlin Wall - History of Berlin Wall". Dailysoft.com. Retrieved 2009-11-09.
- ↑ ೪೫.೦ ೪೫.೧ P. Dousset; A. Souquet; S. Lelarge. "Berlin Wall". Web.archive.org. Archived from the original on 2006-09-13. Retrieved 2009-11-09.
{{cite web}}
: CS1 maint: bot: original URL status unknown (link) CS1 maint: multiple names: authors list (link) - ↑ Heiko Burkhardt. "Fourth Generation of Berlin Wall - History of Berlin Wall". Dailysoft.com. Retrieved 2009-11-09.
- ↑ Rise and Fall of the Berlin Wall. History Channel, 2009. DVD-ROM.
- ↑ "Rise and Fall of the Berlin Wall". History Channel , 2009. DVD-ROM.
- ↑ Popiolek. "The Berlin wall : History of Berlin Wall : Facts". Die-berliner-mauer.de. Archived from the original on 2007-10-12. Retrieved 2009-11-09.
- ↑ Harrison 2003, p. 206-14
- ↑ Chronik der Mauer: Todesopfer an der Berliner Mauer (in German)
- ↑ Forschungsprojekt „Die Todesopfer an der Berliner Mauer, 1961-1989“: BILANZ (Stand: 7. August 2008) (in German)
- ↑ Center for Contemporary Historical Research (Zentrum für Zeithistorische Forschung Potsdam e.V) in German
- ↑ "E German 'licence to kill' found". BBC. 2007-08-12. Retrieved 2007-08-12.
A newly discovered order is the firmest evidence yet that the communist regime gave explicit shoot-to-kill orders, says Germany's director of Stasi files.
- ↑ "Conrad Schumann, 56, Symbol of E. Berlin escapes"; North Sports Final Edition Associated Press. Chicago Tribune , Chicago, Ill.: Jun 23, 1998. pg. 8
- ↑ Hertle, Hans-Hermann (2008). The Berlin Wall: Monument of the Cold War . Ch. Links Verlag, p. 72. ISBN 1-58648-683-7
- ↑ ಟೇಲರ್, ಫ್ರೆಡರಿಕ್. The Berlin Wall: A World Divided 1961-1989 , London: Harper Perennial, 2006.
- ↑ "Reagan's 'tear down this wall' speech turns 20 - USATODAY.com". Retrieved 2008-02-19.
- ↑ "Remarks at the Brandenberg Gate". Ronald Reagan Presidential Foundation. Archived from the original on 2008-06-22. Retrieved 2008-02-09.
- ↑ ಮೈಕೆಲ್ ಮಯರ್ "The picnic that brought down the Berlin Wall" LAtimes.com Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೬೧.೦ ೬೧.೧ unknown (2009). "20 Jahre Mauerfall[[Category:Articles containing German-language text]]". Kulturprojekte Berlin GmbH. Retrieved 2009-04-09.
{{cite web}}
: URL–wikilink conflict (help) - ↑ ೬೨.೦ ೬೨.೧ ೬೨.೨ Sarotte, Mary Elise (Nov 1, 2009) "How it went down: The little accident that toppled history" Washington Post. ಮರುಪಡೆದದ್ದು 2007-09-02.
- ↑ ವಾಕರ್, ಮಾರ್ಕಸ್ (Oct 21, 2009) "Did Brinkmannship Fell Berlin's Wall? Brinkmann Says It Did" The Wall Street Journal.
- ↑ ೬೪.೦ ೬೪.೧ "How Margaret Thatcher pleaded with Gorbachev not to let the Berlin Wall fall out of london". Hasan Suroor. Hindu. September 15, 2009. Archived from the original on 2013-07-19. Retrieved 2009-11-08.
- ↑ "Thatcher told Gorbachev Britain did not want German reunification". Michael Binyon. Times. September 11, 2009. Archived from the original on 2011-07-16. Retrieved 2009-11-08.
- ↑ "United Germany might allow another Hitler, Mitterrand told Thatcher". Helen Nugent. Times. September 10, 2009. Archived from the original on 2011-05-12. Retrieved 2009-11-09.
- ↑ Naxos (2006). "Ode To Freedom - Beethoven: Symphony No. 9 (NTSC)". Naxos.com Classical Music Catalogue. Retrieved 2006-11-26. This is the publisher's catalogue entry for a DVD of Bernstein's Christmas 1989 "Ode to Freedom" concert. David Hasselhoff sang during the fall of the Berlin wall.
- ↑ Jörg Aberger (2004-09-07). "Debatte: Thierse fordert neuen Nationalfeiertag". Spiegel Online. Retrieved 2009-02-22.
- ↑ New York Times, 1989-11-17 - ಎಲೀ ವೀಸೆಲ್, "Op-Ed in response to the fall of the wall"
- ↑ "RSF.org". Archived from the original on 2009-11-08. Retrieved 2021-08-10.
- ↑ TheGlobeAndMail.com
- ↑ MontrealGazette.com[permanent dead link]
- ↑ unknown (2009). "Freedom Without Walls". Embassy of the Federal Republic of Germany, Washington, DC. Archived from the original on 2010-12-28. Retrieved 2009-04-09.
- ↑ "The Wall in the World 2009 - 20th anniversary of the Fall of the Wall - Goethe-Institut". Goethe.de. Retrieved 2009-11-09.
- ↑ "The Berlin Wall in Twinity". Twinity. 2009. Archived from the original on 2009-10-26. Retrieved 2009-11-09.
- ↑ Aljazeera.net
- ↑ Furlong, Ray (July 5, 2005). "Berlin Wall memorial is torn down". BBC News. Retrieved 2006-02-23.
- ↑ Reuters (September 8, 2004). "One in 5 Germans wants Berlin Wall rebuilt". MSNBC. Archived from the original on 2006-06-13. Retrieved 2006-02-23.
{{cite web}}
:|author=
has generic name (help) - ↑ ZDF "Wochenjournal" (November 5, 2009). "Große Zustimmung zur Wiedervereinigung". ZDF. Archived from the original on 2009-12-14. Retrieved 2006-11-06.
- ↑ "Reuters.com". Archived from the original on 2010-01-16. Retrieved 2024-09-15.
- ↑ IMDb.com
ಆಕರಗಳು
[ಬದಲಾಯಿಸಿ]- Böcker, Anita (1998), Regulation of Migration: International Experiences, Het Spinhuis, ISBN 9055890952
- Buckley, William F., Jr. (2004). The Fall of the Berlin Wall. Hoboken, New Jersey: John Wiley and Sons. ISBN 0-471-26736-8.
{{cite book}}
: CS1 maint: multiple names: authors list (link) - Cate, Curtis (1978). The Ides of August: The Berlin Wall Crisis—1961. New York City: M. Evans.
- ಚೈಲ್ಡ್ಸ್, ಡೇವಿಡ್ ಎಚ್, (2001) The Fall of the GDR: Germany's Road To Unity , Longman,Pearsoned.co.uk 2001. ISBN13:9780582315693, ISBN10: 0582315697
- ಚೈಲ್ಡ್ಸ್, ಡೇವಿಡ್, The GDR: Moscow's German Ally , (Second Edition 1988, First Edition 1983, George Allen & Unwin, London) ISBN 0-04-354029-5, 9780043540299.
- ಚೈಲ್ಡ್ಸ್, ಡೇವಿಡ್, (2001) The Fall of the GDR , Longman. ISBN 0-582-31569-7 Amazon.co.uk
- ಚೈಲ್ಡ್ಸ್, ಡೇವಿಡ್, (2000) The Two Red Flags: European Social Democracy & Soviet Communism Since 1945 , Routledge. Informaworld.com
- ಚೈಲ್ಡ್ಸ್, ಡೇವಿಡ್, (1991) Germany in the Twentieth Century , (From pre-1918 to the restoration of German unity), Batsford, Third edition. ISBN 0 713467959
- ಚೈಲ್ಡ್ಸ್, ಡೇವಿಡ್, (1987) East Germany to the 1990s Can It Resist Glasnost? ,[೧] The Economist Intelligence Unit. ISBN 0-85058-245-8, 9780850582451. Worldcat.org
- Dale, Gareth (2005), Popular Protest in East Germany, 1945-1989: Judgements on the Street, Routledge, ISBN 071465408
{{citation}}
: Check|isbn=
value: length (help) - Dowty, Alan (1989), Closed Borders: The Contemporary Assault on Freedom of Movement, Yale University Press, ISBN 0300044984
- Gaddis, John Lewis (2005), The Cold War: A New History, Penguin Press, ISBN 1594200629
- Harrison, Hope Millard (2003), Driving the Soviets Up the Wall: Soviet-East German Relations, 1953-1961, Princeton University Press, ISBN 0691096783
- Catudal, Honoré M. (1980). Kennedy and the Berlin Wall Crisis. West Berlin: Berlin Verlag.
- Hertle, Hans-Hermann (2007). The Berlin Wall. Bonn: Federal Centre for Political Education.
- Kennedy, John F. "July 25, 1961 speech". Archived from the original on 2009-04-29. Retrieved 2009-10-20.
- Loescher, Gil (2001), The UNHCR and World Politics: A Perilous Path, Oxford University Press, ISBN 0198297165
- Maclean, Rory (1992). Stalin's Nose: Across the Face of Europe. London: HarperCollins.
- Miller, Roger Gene (2000), To Save a City: The Berlin Airlift, 1948-1949, Texas A&M University Press, ISBN 0890969671
- Mynz, Rainer (1995), Where Did They All Come From? Typology and Geography of European Mass Migration In the Twentieth Century; European Population Conference Congress European de Démographie, United Nations Population Division
- Pearson, Raymond (1998), The Rise and Fall of the Soviet Empire, Macmillan, ISBN 0312174071
- Schneider, Peter (2005). The Wall Jumper. London: Penguin Classics.
- ಟೇಲರ್, ಫ್ರೆಡರಿಕ್. The Berlin Wall: 13 August 1961 - 9 November 1989. Bloomsbury 2006
- Thackeray, Frank W. (2004), Events that changed Germany, Greenwood Publishing Group, ISBN 0313328145
- Friedrich, Thomas (writer),and Harry Hampel (photos) (1996). Wo die Mauer War/Where was the Wall?. Berlin: Nicolai. ISBN 3875846958.
{{cite book}}
: CS1 maint: multiple names: authors list (link) - Turner, Henry Ashby (1987), The Two Germanies Since 1945: East and West, Yale University Press, ISBN 0300038658
- Wettig, Gerhard (2008), Stalin and the Cold War in Europe, Rowman & Littlefield, ISBN 0742555429
- Luftbildatlas. Entlang der Berliner Mauer. Karten, Pläne und Fotos. Hans Wolfgang Hoffmann / Philipp Meuser (eds.) Berlin 2009. ISBN 978-3-938666-84-5
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Scholars Reflect on the 20th Anniversary of the Fall of the Berlin Wall Archived 2011-10-18 ವೇಬ್ಯಾಕ್ ಮೆಷಿನ್ ನಲ್ಲಿ.
- Explore the former inner German border with DW's animated video Archived 2011-11-27 ವೇಬ್ಯಾಕ್ ಮೆಷಿನ್ ನಲ್ಲಿ.
- Berlin Wall: 20 years on video series from The Guardian
- The CWIHP Collection on the Rise and Fall of the Berlin Wall Archived 2011-06-05 ವೇಬ್ಯಾಕ್ ಮೆಷಿನ್ ನಲ್ಲಿ.
- (English) Freedom Without Walls: German Missions in the United States Looking Back at the Fall of the Berlin Wall - official homepage
- Chronicle of the Wall ಈ ವಿಷಯದಲ್ಲಿನ ಅತ್ಯಂತ ವಿಸ್ತಾರವಾದ ಮಲ್ಟಿ-ಮೀಡಿಯಾ ಮೂಲ
- The Berlin Wall Archived 2011-09-03 ವೇಬ್ಯಾಕ್ ಮೆಷಿನ್ ನಲ್ಲಿ. Original reports and pictures from The Times
- The Berlin Wall Official Website Berlin.de
- (German) Chronik der Mauer Chronicle of the Wall
- (German) (English) Information Berlin Wall and East-Berlin Archived 2011-11-12 ವೇಬ್ಯಾಕ್ ಮೆಷಿನ್ ನಲ್ಲಿ.
- Retracing the Berlin Wall Archived 2007-04-10 ವೇಬ್ಯಾಕ್ ಮೆಷಿನ್ ನಲ್ಲಿ.
- Bernauer Straße Memorial website
- (German) Information on the East German border system Archived 2007-04-29 ವೇಬ್ಯಾಕ್ ಮೆಷಿನ್ ನಲ್ಲಿ.
- Escape from GDR, a five-part documentary on YouTube on tunnelling under the Berlin
- Allied Forces in Berlin (FR, UK & US Berlin Brigade)
- Photographs of time of the Fall as well as updates on the current situation in Germany[permanent dead link]
- Reports on reinforcements to Berlin Brigade
- JFK speech clarifying limits of American protection
- "Berlin 1969" includes sections on Helmstedt-Berlin rail operations.
- Includes articles on rail transport for Berlin during the Cold War. (large files)
- Berlin Life: A concise but thorough history of the wall
- Berlin Wall: Past and Present Archived 2011-04-15 ವೇಬ್ಯಾಕ್ ಮೆಷಿನ್ ನಲ್ಲಿ.
- The Lives of Others official website
- Important Berlin Wall Dates Archived 2010-09-05 ವೇಬ್ಯಾಕ್ ಮೆಷಿನ್ ನಲ್ಲಿ.
- The Lost Border: Photographs of the Iron Curtain
- Dossier: The Fall of the Wall – New Perspectives on 1989
- Freedom Without Walls, 20th Anniversary Public Diplomacy Campaign by the German Embassy Washington Archived 2010-12-28 ವೇಬ್ಯಾಕ್ ಮೆಷಿನ್ ನಲ್ಲಿ.
ಚಿತ್ರಗಳು ಮತ್ತು ವೈಯುಕ್ತಿಕ ಅನುಭವಗಳು
[ಬದಲಾಯಿಸಿ]- Berlin Wall newsreel archives Archived 2012-01-14 ವೇಬ್ಯಾಕ್ ಮೆಷಿನ್ ನಲ್ಲಿ. at British Pathe Adobe Flash video)
- Moments in Time 1989/1990 Internet Archive presenting personal films and photos of the time of the Fall of the Berlin Wall and the German reunification, mostly licenced under CC
- Berlin, Cyber City[permanent dead link] Mixed Reality Installation realized by media artists M. Fleischmann & W. Strauss. Video on YouTube
- (German) Comprehensive Gallery (1961 to 1990) from the website Chronicle of the Wall
- Gallery of annotated photographs of the Berlin Wall
- Virtual e-Tours "The Wall" Archived 2015-09-23 ವೇಬ್ಯಾಕ್ ಮೆಷಿನ್ ನಲ್ಲಿ. Shockwave Player required
- (French) Photos of the Berlin Wall by Georges Rosset
- Photos of the Berlin Wall 1989 to 1999 Archived 2007-06-14 ವೇಬ್ಯಾಕ್ ಮೆಷಿನ್ ನಲ್ಲಿ.
- Gallery at berlin-wall.net
- Berlin Wall Panorama of the East Side Gallery
- One Day In Berlin: Tracing The Wall
- Berlin Wall Online, Chronicle of the Berlin Wall history includes an archive of photographs and texts
- Personal Account of the Fall of the Berlin Wall
- Berlin Wall, Past and Present Archived 2011-04-15 ವೇಬ್ಯಾಕ್ ಮೆಷಿನ್ ನಲ್ಲಿ., ಬರ್ಲಿನ್ ಗೋಡೆಯ ವಿವರಗಳು, ವಿಡಿಯೋಗಳು ಮತ್ತು ಚಿತ್ರಗಳು.
- Personal Accounts of November 9, 1989[permanent dead link]
- (German) Photos of the Berlin Wall 1962-1990
- Large collection of images in Berlin Wall group at Flickr
- Pages using the JsonConfig extension
- CS1 maint: multiple names: authors list
- CS1 maint: numeric names: authors list
- Lang and lang-xx template errors
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles containing German-language text
- CS1 errors: URL–wikilink conflict
- Articles with German-language external links
- CS1 maint: bot: original URL status unknown
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- CS1 errors: generic name
- Pages using ISBN magic links
- Pages using gadget WikiMiniAtlas
- Articles with hAudio microformats
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- CS1 errors: ISBN
- Commons link is on Wikidata
- Articles with dead external links from ಸೆಪ್ಟೆಂಬರ್ 2021
- Articles with French-language external links
- Articles with unsourced statements from November 2012
- Coordinates on Wikidata
- ಶೀತಲ ಸಮರ
- ಪೂರ್ವ ಜರ್ಮನಿಯ ಇತಿಹಾಸ