ಪ್ಯಾಲೆಸ್ಟೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಯಾಲೆಸ್ಟೈನ್ 1947 ರಲ್ಲಿ ಯುಎನ್ ವಿಭಜನಾ ಯೋಜನೆ

ಪ್ಯಾಲೆಸ್ಟೈನ್ ಮೆಡಿಟೇರಿಯನ್ ಸಮುದ್ರದದಿಂದ ಜೋರ್ಡಾನ್ ನದಿಯ ಮಧ್ಯದಲ್ಲಿರುವ ಪ್ರದೇಶಕ್ಕಿರುವ ಪುರಾತನ ಹೆಸರುಗಳಲ್ಲಿ ಒಂದು. ಇಲ್ಲಿನ ಅತಿ ಹಳೆಯ ನಿವಾಸಿಗಳಾದ (ಕ್ರಿ.ಪೂ. ೧೦ನೆ ಶತಮಾನಕ್ಕಿಂತ ಹಿಂದೆ) ಫಿಲಿಸ್ತೀನ್ ಎಂಬ ಜನಾಂಗದಿಂದ ಈ ಹೆಸರು ಪ್ರಚಲಿತಕ್ಕೆ ಬಂದಿತು.

ಪ್ಯಾಲಸ್ತೀನ್ ಮೆಡಿಟರೇನಿಯನ್ ಸಮುದ್ರಕ್ಕೆ ಆಗ್ನೇಯದಲ್ಲಿ ಬೈಬಲ್ಲಿನ ನಾಡೆಂದು ಪ್ರಸಿದ್ಧವಾಗಿ, ಬೈಬಲ್ಲಿನಲ್ಲಿ ಹಾಲು ಮತ್ತು ಜೇನುತುಪ್ಪ ಹರಿಯುವ ಭೂಮಿಯೆಂದು ಉಕ್ತವಾಗಿರುವ ಪ್ರದೇಶ. ಕ್ಯನಾನ್ ಅಥವಾ ಇಸ್ರೇಲ್ ಎಂದೂ ಕರೆಯಲ್ಪಡುತ್ತಿತ್ತು. ಬೈಬಲ್ಲಿನ ಕಾಲದಲ್ಲಿ ಇಲ್ಲಿಯ ಸಮುದ್ರ ತೀರದಲ್ಲಿ ವಾಸಿಸುತ್ತಿದ್ದ ಫಿಲಿಸ್ತೀನ್ ಜನರಿಂದ ಇದರ ಹೆಸರು ಪ್ಯಾಲಸ್ತೀನ್ ಎಂದಾಗಿದೆ.

ಸಿರಿಯನ್ ಮರುಭೂಮಿಯ ಅಂಚಿನಲ್ಲಿ ಪ್ಯಾಲಿಸ್ತೀನ್‍ಗೆ ಉತ್ತರದಲ್ಲಿ ಲೆಬನಾನ್ ಪರ್ವತ ಪ್ರದೇಶ ಮತ್ತು ದಕ್ಷಿಣದಲ್ಲಿ ಸೆನಾಯ್ ಮರುಭೂಮಿ ಇದೆ. ಮಧ್ಯಪ್ರಾಚ್ಯದ ದೇಶವಾಗಿ 1923 ರಿಂದ 1928 ರ ವರೆಗೆ ಆದೇಶಿತ ಪ್ರದೇಶವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟು ಈಗ ಇಸ್ರೇಲ್, [ಫ್ರಾನ್ಸ್]], ಜೋರ್ಡನ್ ಮತ್ತು ಈಜಿಪ್ಟ್ ದೇಶಗಳ ನಡುವೆ ವಿಭಾಗಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್‍ನ ಭೂ ವಿಸ್ತೀರ್ಣ 5860 ಚ.ಕಿ.ಮೀ. ಜನಸಂಖ್ಯೆ 23,85,615 (2005) ಇದಕ್ಕೆ ಸೇರಿದದ ಗಾಜಸ್ಟ್ರಿಪ್‍ನ ವಿಸ್ತಾರ 360 ಚ.ಕಿ.ಮೀ. ಜನಸಂಖ್ಯೆ 13,76,289 (2005).

ಆಗಸ್ಟ್ 2005ರಲ್ಲಿ ಗಾಜಸ್ಟ್ರಿಪ್‍ನಲ್ಲಿದ್ದ ಇಸ್ರೇಲಿಗಳನ್ನು ಇಸ್ರೇಲ್ ಸರ್ಕಾರವೇ ತೆರವುಗೊಳಿಸಲು ಕೇಳಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಂಡಿದೆ. ಅರಬ್, ಇಸ್ರೇಲ್, ಪ್ಯಾಲಸ್ತೀನ್ ಇವುಗಳ ಮಧ್ಯೆಯ ಶಾಂತಿ ಸಹಬಾಳ್ವೆಗೆ ಇದೊಂದು ಕ್ರಮವೆಂದು ಶಾಂತಿಪ್ರಿಯ ದೇಶಗಳು ಭಾವಿಸಿವೆ. ಈ ಪ್ರದೇಶ ಉ.ಅ. 310-330 ಮತ್ತು ಪೂ.ರೇ. 340-370 ನಡುವೆ ಪ್ರಸರಿಸಿದೆ. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳ ಪ್ಯಾಲಸ್ತೀನ್. ಇದು ನೈಲ್ ನದಿ ಕಣಿವೆಯನ್ನು ಯಮಳ ನದಿಗಳ ಕಣಿವೆಯಿಂದ ಬೇರ್ಪಡಿಸುತ್ತದೆ. ಇದರ ವಾಯುಗುಣ ಹಿತಕರವಾಗಿದೆ. ಪುಟ್ಟ ದೇಶವಾದರೂ ಪ್ಯಾಲಸ್ತೀನ್‍ನಲ್ಲಿ ವಿವಿಧ ರೀತಿಯ ಭೂಪ್ರದೇಶಗಳೂ ವಾಯುಗುಣಗಳೂ ಇವೆ. ಪರ್ವತಗಳು, ಮೈದಾನ, ಮರುಭೂಮಿ, ಫಲವತ್ತಾದ ಮತ್ತು ಮನೋಹರವಾದ ಕಣಿವೆಗಳು, ಸರೋವರಗಳು, ಸಮುದ್ರ ತೀರ ಇವೆ. ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಪ್ಯಾಲಸ್ತೀನ್‍ನಲ್ಲಿ ನಾಲ್ಕು ವಿಭಾಗಗಳಿವೆ. 1. ಫಲವತ್ತಾದ ಮತ್ತು ಜನಸಾಂದ್ರತೆ ಅಧಿಕವಾಗಿರುವ ಮೆಡಿಟರೇನಿಯನ್ ತೀರ ಪ್ರದೇಶ ಇಲ್ಲಿ ಟೆಲ್ ಅವೀವ್, ಹೈಫ, ಮತ್ತು ಜಾಫ ರೇವು ಪಟ್ಟಣಗಳಿವೆ. 2. ಗೆಲಿಲಿ ಮತ್ತು ಜುಡಿಯಾಗಳನ್ನೊಳಗೊಂಡ ಪ್ರಸ್ಥ ಭೂಮಿಯಲ್ಲಿ ಪುರಾತನ ಪ್ರಸಿದ್ಧವಾದ ಜೆರೂಸಲೆಮ್ ನಗರವಿದೆ. ಪ್ರಸಿದ್ಧವಾದ ಜಾಫ ಕಿತ್ತಲೆಹಣ್ಣು ದ್ರಾಕ್ಷಿ ಮತ್ತು ಬನಾನ ಇವು ತೀರಪ್ರದೇಶದ ಬೆಳೆಗಳು. ಮೀನು ಹಿಡಿಯುವುದು ಒಂದು ಮುಖ್ಯ ಕಸುಬು. ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿರುವ ಪ್ಯಾಲಸ್ತೀನ್, ಉತ್ತರ ಆಫ್ರಿಕದೊಡನೆಯೂ ಪಶ್ಚಿಮ ಏಷ್ಯದೊಡನೆಯೂ ಸಂಪರ್ಕ ಹೊಂದಿದೆ. ಲಿಡ್ಡ ನಾಗರಿಕ ವಿಮಾನ ನೆಲೆ, ಹಲವಾರು ಸೈನಿಕ ವಿಮಾನ ನಿಲ್ದಾಣಗಳೂ ಇವೆ. ಇವುಗಳನ್ನು 2 ನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ವಿಮಾನ ದಳಗಳಿಗಾಗಿ ನಿರ್ಮಿಸಲಾಗಿತ್ತು.

ಅಲಕ್ಸ ಮಸೀದಿ

ಇತಿಹಾಸ[ಬದಲಾಯಿಸಿ]

PALESTINE
ಇಸ್ರೇಲ್‍ನ ನಕ್ಷೆ, ನೆರೆಯವರು ಮತ್ತು ಆಕ್ರಮಿತ ಪ್ರದೇಶಗಳು
  • ಸಾವಿರಾರು ವರ್ಷಗಳಿಂದಲೂ ಏಷ್ಯ ಮತ್ತು ಆಫ್ರಿಕ ಖಂಡಗಳ ನಡುವೆ ಸಂಚರಿಸುವ ಜನರಿಗೂ ಸೈನ್ಯಗಳಿಗೂ ಪ್ಯಾಲಸ್ತೀನ್ ಹೆದ್ದಾರಿಯಾಗಿದೆ ; ಈಜಿಪ್ಟಿನವರು ಹಿಟ್ಟೈಟರು, ಅಸ್ಸೀರಿಯನ್ನರು ಮತ್ತು ಬಾಬಿಲೋನಿಯರು, ಫಿನಿಷಿಯನ್ನರು ಮತ್ತು ಫಿಲಿಸ್ಥೈನರು, ಗ್ರೀಕರು ಮತ್ತು ರೋಮನ್ನರು, ಫ್ರಾಂಕ್ ವೀರರು ಮತ್ತು ಸಾರಸನ್ನರು ಇಲ್ಲಿ ಹೋರಾಡಿ ತಮ್ಮ ಹೆಜ್ಜೆಯ ಗುರುತನ್ನು ಬಿಟ್ಟಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಯಹೂದ್ಯರು ಮತ್ತು ಅರಬರು ಈ ನಾಡಿನಲ್ಲಿದ್ದು ಇಲ್ಲಿಯ ಆಗುಹೋಗುಗಳಲ್ಲಿ ಭಾಗವಹಿಸಿದ್ದಾರೆ.
  • ಪ್ಯಾಲಿಸ್ತೀನಿನ ಒಂದು ಭಾಗವಾದ ಜುಡಿಯ ಹೀಬ್ರ್ಯೂ ಅಥವಾ ಯಹೂದ್ಯರ ನಾಡು. ಪ್ರಾಗೈತಿಹಾಸಿಕ ಕಾಲದಿಂದಲೂ ಪ್ಯಾಲಸ್ತೀನಿನಲ್ಲಿ ಜನವಸತಿ ಇತ್ತು. ಪೂರ್ವ ಶಿಲಾಯುಗ, ಮಧ್ಯ ಶಿಲಾಯುಗ ಹಾಗೂ ನವಶಿಲಾಯುಗಗಳ ಅವಶೇಷಗಳು ದೊರೆತಿವೆ. ಪೂರ್ವದ ಹಲವು ಸಾಮ್ರಾಜ್ಯಗಳು ಇಲ್ಲಿ ಆಳಿದ್ದುಂಟು. ಇವುಗಳ ಪೈಕಿ ಪ್ರಾಚೀನ ಈಜಿಪ್ಟ್ ಅಸೀರಿಯ, ಬೆಬಿಲೋನಿಯಾ, ಪರ್ಷಿಯ ಇವು ಮುಖ್ಯವಾದವು. ಟಾಲೆಮಿ, ಸೆಲ್ಯೂಸಿಡ್, ರೋಮನ್ಸ್, ಬಿಜಾóಂಟೀನ್, ಉಮ್ಮಯ್ಯದ್, ಅಬ್ಬಸಿಡ್, ಘಾಟಿಮಿಡ್, ಕ್ರುಸೇಡರ್ಸ್, ಅಯ್ಯಬಿಡ್, ಮಮ್ಲೂಕ್ ಮತ್ತು ಆಟೊಮನ್ ತುರ್ಕ್ ಪ್ರಮುಖರು ಇಲ್ಲಿ ಆಳಿದರು. ಸುಮಾರು 3,500 ವರ್ಷಗಳಿಂದಲೂ ಯಹೂದ್ಯರು ಅಲ್ಲಿಯ ಚರಿತ್ತೆಯಲ್ಲಿ ಕಂಡುಬರುತ್ತಾರೆ. ಇತ್ತಿಚಿನ ವರೆಗೆ ಅವರು ಬೇರೆ ಬೇರೆ ದೇಶಗಳ ಜನರೊಡನೆ ಬೆರೆತು ವಾಸಿಸುತ್ತಾ ಅಂತರ ರಾಷ್ಟ್ರೀಯ ಜನರೆನಿಸಿದ್ದರು. ಅವರನ್ನು ಇಸ್ರೇಲ್ ಶಿಶುಗಳೆಂದು ಕರೆದಿದೆ. ಬೈಬಲ್. ಅವರಿಗೆ ತಮ್ಮ ದೈವ ಜೀಹೋವನಲ್ಲಿ ಬಹಳ ಭಕ್ತಿ ಮತ್ತು ನಂಬಿಕೆ. ಅವರ ಮತ ಸರಳವಾದುದು. ಆದರೆ, ಜುಟಿಯ ರೋಮನ್ ಚಕ್ರಾಧಿಪತ್ಯದ ಭಾಗವಾದ ಮೇಲೆ ಯಹೋದ್ಯರ ಮತದಲ್ಲಿ ಬದಲಾವಣೆಗಳಾದವು. ಯಹೂದ್ಯರನ್ನು ಪರಕೀಯರ ದಾಸ್ಯದಿಂದ ವಿಮೋಚನೆ ಮಾಡಲು ಏಸುಕ್ರಿಸ್ತ ಜನಿಸಿದ. ಪ್ಯಾಲಸ್ತೀನಿನಲ್ಲಿರು ಜೆರೂಸಲೇಮ್ ನಗರದಲ್ಲಿ ಮಹಮದ್ ಪೈಗಂಬರ್ ಸ್ವರ್ಗಕ್ಕೇರಿದನೆಂದೆ ಅವನ ಅನುಯಾಯಿಗಳು ನಂಬುತ್ತಾರೆ. ಈ ರೀತಿ ಪ್ಯಾಲಸ್ತೀನ್ ಯಹೂದಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ನಾಡಾಗಿದೆ.
  • ಕ್ರಿ. ಪೂ. ಸುಮಾರು 15 ನೆಯ ಶತಮಾನದಲ್ಲೇ ಹೀಬ್ರೂ ಬಣಗಳು ಈಜಿಪ್ಟಿನಿಂದ ಪ್ಯಾಲಸ್ತೀನಿಗೆ ಬಂದು ಅಲ್ಲಿಯ ನಿವಾಸಿಗಳೊಡನೆ ಬೆರೆತವು. ಇಲ್ಲಿಂದ ಮುಂದೆ 70 ರ ವರೆಗೆ ಪ್ಯಾಲಸ್ತೀನಿನ ಚರಿತ್ರೆ ಇಸ್ರೇಲ್ ಮತ್ತು ಜೂಡಿಗಳ ಚರಿತ್ರೆಯೇ ಆಗಿದೆ. 636 ರಲ್ಲಿ ಕಲೀಫ್ ಓಮರ್ ಜೆರೂಸಲೇಮ್ ನಗರವನ್ನು ಹಿಡಿದುಕೊಂಡ ಮೇಲೆ ಯಹೂದ್ಯರ ಮತ್ತು ಕ್ರೈಸ್ತರನ್ನೊಳಗೊಂಡ ಈ ನಾಡನ್ನು ಮುಂದೆ 400 ವರ್ಷಗಳ ಕಾಲ ಮುಸ್ಲಿಮರು ಆಳಿದ ಮೇಲೆ 1065 ರಲ್ಲಿ ಈ ನಾಡು ಸೆಲ್‍ಜುಕ್ ತುರುಕರ ವಶವಾಯಿತು, ಅವರಿಂದ ಕ್ರೈಸ್ತ ಯಾತ್ರೀಕರಿಗುಂಟಾದ ಕಿರುಕುಳಗಳ ದೆಸೆಯಿಂದ 7 ಶಿಲುಬೆ ಯುದ್ಧಗಳು ನಡೆದು 1099 ರಲ್ಲಿ ಲ್ಯಾಟಿನ್ ರಾಜ್ಯವೆನಿಸಿದ ಜೆರೊಸಲೇಮ್ ಸ್ಥಾಪಿತವಾಯಿತು. ಇಂಗ್ಲೆಂಡಿನ 1 ನೆಯ ರಿಚರ್ಡನು ಶಿಲುಬೆ ಯುದ್ದದಲ್ಲಿ ಭಾಗವಹಿಸಿದ್ದನು, ಮುಂದೆ ಪ್ಯಾಲೆಸ್ತೀನ್ ತುರ್ಕಿ ಚಕ್ರಾಧಿಪತ್ಯದ ಭಾಗವಾಯಿತು. ನೆಪೋಲಿಯನ್ 1799 ರಲ್ಲಿ ಎಕ್ರೆಗೆ ಮುತ್ತಿಗೆ ಹಾಕಿ ವಿಫಲನಾದ. 1832 ರೀಂ 1840 ರ ವರೆಗೆ ಪ್ಯಾಲೆಸ್ತೀನ್ ಈಜಿಪ್ಟಿನ ಆಳ್ವಿಕೆಗೆ ಬಂದು ಇಂಗ್ಲೆಂಡ್ ಆಸ್ಟ್ರಿಯಾಗಳ ಸಹಾಯದಿಂದ ಮತ್ತೆ ತುರ್ಕಿಯ ವóಶವಾಯಿತು. ಪ್ರಥಮ ಮಹಾಯುದ್ಧದ ಕಾಲದಲ್ಲಿ (1917 ಡಿಸೆಂಬರ್ 11) ಬ್ರಟಿಪ್ ಸೈನ್ಯ ಜನರಲ್ ಅಲೆನಬಿ ನೇತೃತ್ವದಲ್ಲಿ ಜರೂ¸ಲೆಮ್ ನಗರವನ್ನು ಪ್ರವೇಶಿಸಿ ಶತಮಾನಗಳ ತುರ್ಕಿ ಅಡಳಿತವನ್ನು ಕೊನೆಗಾಣಿಸಿತು. 1923ರಲ್ಲಿ ಪ್ಯಾಲೆಸ್ತೀನ್ ಬ್ರಿಟಿಷ್ ಅದೇಶಿಕÀ ಅಳ್ವಕೆಗೆ ಒಳಪಟ್ಟಿತು. 1917ರಲ್ಲಿ ಪ್ಯಾಲಸ್ತೀನ್‍ನಲ್ಲಿರುವ ಯಹೂದ್ಯರ ಜನಾಂಗಗಳ ನಾಗರಿಕ ಮತ್ತು ಮತೀಯ ಹಕ್ಯು ಬಾಧ್ಯತೆಗಳಿಗೆ ಧಕ್ಕೆ ಬರದಂತೆ ಪ್ಕಾಲಸ್ತೀನಿನಲ್ಲಿ ಯಹೂದ್ಯ ಜನಾಂಗಕ್ಕೆ ತೌರು ರಾಷ್ಟ್ರವನ್ನು ಸ್ಥಾಪಿಸುವುದು. ಅರಬರು ಇದನ್ನು ವಿರೋಧಿಸಿದರು. ಆಗ ಪ್ಯಾಲಸ್ತೀನನಲ್ಲಿ ಬ್ರಿಟಿಷ್ ಹೈಕಮಿಷನರ್ ಆಗಿದ್ದ ಸರ್ ಹರ್ಬರ್ಟ್ ಸ್ಯಾಮ್ಯೂಯಲ್ (ಯಹೂದ್ಯ) ಅರಬರನ್ನು ಸಮಾಧಾನ ಪಡಿಸಿ ಒಪ್ಪಿಸಿದ. ಪ್ಯಾಲಸ್ತೀನಿಗೆ ಸಾವಿರಗಟ್ಟಲೆ ಯಹೂದ್ಯರು ಬಂದು ನೆಲಸತೊಡಗಿದರು. ಯೆಹೂದ್ಯರು ಕೈಗಾರಿಕೆ ಮತ್ತು ವ್ಯವಸಾಯಗಳನ್ನು ಬೆಳೆಸಿದರು. ಅರಬ್ ಯಹೂದಿ ಕಲಹ : ಯಹೂದ್ಯರ ಸಂಖ್ಯೆ ಹೆಚ್ಚಿ ಅವರು ರಾಜಕೀಯ ಮೇಲುಗೈ ಪಡೆದು ಅಧಿಕಾರ ನಡೆಸುವರೆಂಬುದನ್ನೂ, ಪ್ಯಾಲಸ್ತೀನ್ ದೇಶವನ್ನು ಅರಬ್ ರಾಜ್ಯದಲ್ಲಿ ಸಂಯೋಜನಗೊಳಿಸುವುದಕ್ಕೆ ವಿರೋಧವಾಗುತ್ತಿರುವುದನ್ನೂ ಕಂಡು ಅಸಮಾಧಾನಗೊಂಡ ಅರಬರಿಗೂ ಯಹೂದ್ಯರಿಗೂ ವೈಮನಸ್ಯ ಉಂಟಾಗಿ ತಿಕ್ಕಾಟ ಆರಂಭವಾಯಿತು. 1929 ರಲ್ಲಿ ಮತೀಯ ಗಲಭೆಗಳು ನಡೆದು ಎರಡು ಪಂಗಡಗಳಲ್ಲೂ ಅನೇಕರು ಸತ್ತರು. ಯಹೂದ್ಯರು ವಲಸೆ ಬರುವುದರ ವಿರುದ್ಧ 1933 ಮತ್ತು 1934 ರಲ್ಲಿ ಅರಬರು ಪ್ರದರ್ಶನ ನಡೆಸಿದರು. ಯಹೂದ್ಯರು ವಲಸೆ ಬರುವುದನ್ನು ತಡೆಗಟ್ಟಿದ್ದಕ್ಕಾಗಿ ಬ್ರಿಟಿಷರ ವಿರುದ್ಧ ಯಹೂದ್ಯರು ಪ್ರದರ್ಶನ ನಡೆಸಿದರು. 1937ರ ರಾಯಲ್ ಕಮಿಷನ್ ವರದಿಯ ಪ್ರಕಾರ ಪ್ಯಾಲಸ್ತೀನ್ ದೇಶವನ್ನು ಯಹೂದ್ಯರು ಮತ್ತು ಅರಬರ ನಡುವೆ ವಿಭಾಗ ಮಾಡುವುದಕ್ಕೆ ತೀವ್ರ ವಿರೋಧಗಳು ತಲೆದೋರಿದವು. 1938 ರ ಜುಲೈ - ಅಕ್ಟೋಬರ್ ಅವಧಿಯಲ್ಲಿ ಗಲಭೆಗಳ ಸಂದರ್ಭದಲ್ಲಿ ಬ್ರಿಟಿಷರು ಸೈನ್ಯ ಕರೆಸಿಕೊಳ್ಳಬೇಕಾಯಿತು. ಅನೇಕ ಯಹೂದ್ಯರು ಮತ್ತು ಅರಬರು ಸತ್ತರು. 1939 ರಲ್ಲಿ ಪರಸ್ಪರ ರಾಜೀ ಮಾಡಿಸುವ ಪ್ರಯತ್ನಗಳು ವಿಫಲವಾದುವು. ಇದೇ ವೇಳೆಗೆ 2 ನೆಯ ಮಹಾಯುದ್ಧ ಪ್ರಾರಂಭವಾದ್ದರಿಂದ ಪ್ಯಾಲಸ್ತೀನ್ ಗಲಭೆಗಳು ಅಡಗಿದುವು. ನಾಟ್ಸಿಗಳಿಗೆ ಅಂಜಿದ ಯಹೂದ್ಯರು ಸಂಯುಕ್ತ ರಾಷ್ಟ್ರಗಳಿಗೆ ಬೆಂಬಲ ಕೊಟ್ಟರು.
  • ಎರಡನೆಯ ಮಹಾಯುದ್ಧ ಮುಗಿಯುತ್ತಿದ್ದಂತೆಯೇ ಮತ್ತೆ ಸಮಸ್ಯೆಗಳು ತಲೆದೋರಿದುವು. ಯಹೂದ್ಯರ ಉದ್ದೇಶಗಳನ್ನು ಪ್ರತಿಭಟಿಸಲು ಅರಬ್ ಲೀಗ್ ವ್ಯವಸ್ಥೆಗೊಂಡಿತ್ತು. 1945 ರ ಆಗಸ್ಟ್‍ನಲ್ಲಿ ಲಂಡನ್ನಿನಲ್ಲಿ ಸಭೆ ಸೇರಿದ್ದ ವಿಶ್ವ ಯಹೂದ್ಯ ಕಾಂಗ್ರೆಸ್ ಪ್ಯಾಲಸ್ತಿನ್‍ನಲ್ಲಿ ತಕ್ಷಣ ಯಹೂದ್ಯ ರಾಷ್ಟ್ರ ಸ್ಥಾಪನೆಗೆ ಒತ್ತಾಯಪಡಿಸಿತು. 1946 ರಲ್ಲಿ, ಗ್ರ್ಯಾಂಡ್ ಮಫ್ಟಿ ಆಫ್ ಜೆರೂಸಲೆಮ್‍ನ ಗ್ರ್ಯಾಂಡ್ ಮಫ್ತಿ ಹಾಜ್ ಅಮೀನ್ ಎಲ್ ಹುಸೇನಿ ಅರಬರ ನಾಯಕನಾದ. ಯಹೂದ್ಯರು ವಲಸೆ ಬರುವುದರ ವಿರುದ್ಧ ಅನೇಕ ಪ್ರದರ್ಶನಗಳೂ ವಿನಾಶಕಾರಿ ಕೃತ್ಯಗಳೂ ನಡೆದುವು. ಬ್ರಿಟಿಷ್ ಅಧಿಕಾರಿಗಳನ್ನು ಸೈನಿಕರನ್ನೂ ಯಹೂದ್ಯರು ಕೊಲೆ ಮಾಡಿದರು. ಪ್ಯಾಲಸ್ತೀನ್ ವಿಭಾಗವಾಗಬೇಕೆಂದು 1945 ರ ಕೊನೆಯಲ್ಲಿ ಆಂಗ್ಲೋ ಅಮೆರಿಕನ್ ಸಮಿತಿಯೊಂದು ಸಲಹೆ ಮಾಡಿತು. ಇದನ್ನು ದೇಶದ ಎಲ್ಲ ರಾಜಕೀಯ ಪಕ್ಷಗಳು ವಿರೋಧಿಸಿದುವು. 1947 ರ ನವೆಂಬರ್ 29 ರಂದು ವಿಶ್ವರಾಷ್ಟ್ರ ಸಂಸ್ಥೆಯ ಸಾಮಾನ್ಯ ಸಭೆಯು ಪ್ಯಾಲಸ್ತೀನಿನ ವಿಭಜನೆಗೆ ಮತ ನೀಡಿದ್ದನ್ನು ತಿಳಿದು ಮತ್ತೆ ಪ್ಯಾಲಸ್ತೀನಿನಲ್ಲಿ ಗಲಭೆಗಳು ನಡೆದು ಎರಡು ಪಕ್ಷಗಳಲ್ಲೂ ನೂರಾರು ಜನರು ಹತರಾದರು. ಹಿಂಸಾಕೃತ್ಯಗಳು ಮುಂದುವರಿಯುತ್ತಿದ್ದಾಗಲೇ ಯಹೂದ್ಯರ ಸಂಘವು ತಾತ್ಕಾಲಿಕ ಸರ್ಕಾರವನ್ನು ರಚಿಸುವ ವ್ಯವಸ್ಥೆಗೆ ಕೈಹಾಕಿತು. ವಿಶ್ವಸಂಸ್ಥೆ ಪ್ಯಾಲಸ್ತೀನ್ ವಿಭಜನೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿತು. ಆದರೆ, ಮುಂದೇನು ಎಂಬುದನ್ನು ನಿರ್ಧರಿಸಲು ಸಮರ್ಥವಾಗಲಿಲ್ಲ. 1948 ರ ಮೇ 15 ರಂದು ಮುಕ್ತಾಯಗೊಳ್ಳಲಿದ್ದ ತನ್ನ ಆದೇಶಿತ ಅಧಿಕಾರದ ಆಳ್ವಿಕೆಯನ್ನು ಮುಂದುವರಿಸಲು ಬ್ರಿಟನ್ ಒಪ್ಪಲಿಲ್ಲ. ಅದು ಅಲ್ಲಿಂದ ವಾಪಸಾಗಲು ನಿರ್ಧರಿಸಿತು. ಮೇ 14 ರ ಮಧ್ಯರಾತ್ರಿಗೆ ಸ್ವಲ್ಪ ಮುಂಚೆ ಯಹೂದ್ಯ ರಾಷ್ಟ್ರೀಯ ಮಂಡಲಿ ಇಸ್ರೇಲ್ ರಾಷ್ಟ್ರ ಉದಯವಾಯಿತೆಂದು ಪ್ರಕಟಿಸಿತು. ಮೇ 15 ರಂದು ಬ್ರಿಟಿಷ್ ಆಳ್ವಿಕೆ ಅಂತ್ಯಗೊಂಡಾಗ ಅರಬ್ ಲೀಗಿನ ವಿವಿಧ ರಾಜ್ಯಗಳು ಪ್ಯಾಲಸ್ತೀನನ್ನು ಮುತ್ತಿದುವು. ಒಂಬತ್ತು ತಿಂಗಳ ಕಾಲ ಪದೇಪದೇ ಹೋರಾಟ ನಡೆಯಿತು. ಪ್ಯಾಲಸ್ತೀನಿನಲ್ಲಿದ್ದ ಸಂಸ್ಥೆಯ ಮಧ್ಯಸ್ಥಿಕೆಗಾರ ಸ್ವೀಡನ್ನಿನ ಕೌಂಟ್‍ಫೋಕ್ ಬೆರ್ನಾರ್‍ಡಟ್ ಸೆಪ್ಟಂಬರ್ 17 ರಂದು ಕೊಲೆಯಾದ. ಅನಂತರ ಬಂದವನು ರಾಲ್ಫ್ ಬುಂಚ್ ಎಂಬ ಅಮೆರಿಕನ್. ಈತ ಇಸ್ರೇಲಿಗೂ ಅರಬ್ ರಾಷ್ಟ್ರಗಳಾದ ಈಜಿಪ್ಟ್, ಲೆಬನಾನ್, ಸಿರಿಯ ಮತ್ತು ಟ್ರಾನ್ಸ್ ಜಾರ್ಡನ್‍ಗಳಿಗೂ ನಡುವೆ ಯುದ್ಧ ವಿರಾಮ ಏರ್ಪಡಿಸಿದ. ಒಪ್ಪಂದದ ಪ್ರಕಾರ ಗಾಜಾ ತೀರಪ್ರದೇಶವನ್ನು ಮತ್ತು ದಕ್ಷಿಣ ಪ್ಯಾಲಸ್ತೀನಿನ ಎಲ್ ಅಜ್ ó ಪ್ರದೇಶವನ್ನು ಈಜಿಪ್ಟ್ ಪಡೆಯಿತು. 1950 ನೆಯ ಏಪ್ರಿಲ್ 24 ರಂದು ಅರಬ್ ಪ್ಯಾಲಸ್ತೀನ ಮತ್ತು ಟ್ರಾನ್ಸ್ ಜಾರ್ಡನ್‍ಗಳು ಒಂದುಗೂಡಿ ಹ್ಯಾರ್ಷೆಮೈಟ್ ಜಾರ್ಡನ್ ಎಂಬ ಒಂದೇ ರಾಜ್ಯವಾಯಿತು. ಈ ರೀತಿಯಾಗಿ ಪ್ಯಾಲಸ್ತೀನ್ ವಿಭಜನೆಯಾಗಿ ಇಸ್ರೇಲ್, ಈಜಿಪ್ಟ್ ಮತ್ತು ಜಾರ್ಡನ್‍ಗಳಲ್ಲಿ ಸೇರಿ ಹೋಯಿತು. ಪ್ಯಾಲಸ್ತೀನನ್ನು ಪವಿತ್ರ ಭೂಮಿ ಎಂದು ಕರೆಯಲಾಗಿದೆ. ಜುಡಾಯಿಸಂ, ಕ್ರೈಸ್ತ ಮತ ಹಾಗೂ ಇಸ್ಲಾಂ ಮತದವರಿಗೆ ಇದೊಂದು ಪುಣ್ಯಕ್ಷೇತ್ರ. ಜುಡಾಯಿಸಂ ಮತೀಯರು ಇದನ್ನು ದೇವರೇ ವರವಾಗಿ ನೀಡಿದನೆಂದು ಸಾಂಪ್ರದಾಯಿಕವಾಗಿ ನಂಬುತ್ತಾರೆ. ಕ್ರೈಸ್ತರಿಗೆ ಇದು ಧಾರ್ಮಿಕ ಚಟುವಟಿಕೆಗಳ ನೆಲೆ : ಪವಿತ್ರ ಕೇಂದ್ರ. ಈ ಪ್ರದೇಶದ ತುಂಬ ಅವರ ಅನೇಕ ಪುಣ್ಯಕ್ಷೇತ್ರಗಳಿವೆ. ಮುಸ್ಲಿಮರಿಗೆ ಪ್ಯಾಲಸ್ತೀನಿನ ಕೆಲವು ಸ್ಥಳಗಳು ಪ್ರವಾದಿ ಮಹಮ್ಮದ್ ಜೀವನದೊಂದಿಗೆ ಸಂಬಂಧವುಳ್ಳವಂಥವು.
  • ಪ್ಯಾಲಸ್ತೀನ್ ಪ್ರದೇಶದ ಗುಹೆಯೊಂದರಲ್ಲಿ ಪ್ರಾಚೀನತಮ ಹಸ್ತಪ್ರತಿ ದೊರೆತಿದೆ. ಇದುವರೆಗೆ ಗೊತ್ತಿರುವಂತೆ ಇದು ಅತ್ಯಂತ ಪ್ರಾಚೀನ ಹಸ್ತಪ್ರತಿಗಳಲ್ಲೊಂದು. ಹಳೆಯ ಒಡಂಬಡಿಕೆಯ ಈ ಹಸ್ತಪ್ರತಿಯನ್ನು ದಿ ಡೆಡ್ ಸೀ ಸ್ಕ್ರಾಲ್ಸ್ ಎಂದು ಕರೆಯುತ್ತಾರೆ. ಇದು ಪುರಾತತ್ತ್ವಜ್ಞರ ಗಮನ ಸೆಳೆದಿದೆ. ಈ ಪ್ರದೇಶದ ಹಲವೆಡೆಗಳಲ್ಲಿ ಉತ್ಖನನಗಳನ್ನು ನಡೆಸಲಾಗಿದೆ.
  • 1967 ರ ಜೂನ್ ತಿಂಗಳಲ್ಲಿ ನಡೆದ ಆರು ದಿನದ ಯುದ್ಧದಲ್ಲಿ ಇಸ್ರೇಲು ನೆರೆಯ ಸೈನ್ಯ, ಸಿರಿಯದ ಗೋಲಾನ್ ಹೈಟ್ಸ್ ಇವನ್ನು ಆಕ್ರಮಿಸಿಕೊಂಡಿತು. ಕ್ಯಾಂಪ್‍ಡೇವಿಡ್ ಒಪ್ಪಂದದ ಪ್ರಕಾರ ಸೈನ್ಯ ಪ್ರದೇಶವನ್ನು ಇಸ್ರೇಲ್ ಈಜಿಪ್ಟಿಗೆ ಹಿಂದಿರುಗಿಸಿದೆ. ಇಸ್ರೇಲ್ ರಾಜ್ಯದ ಉದಯ ಹಾಗೂ ಅದರ ಆಕ್ರಮಣ ಯುದ್ಧಗಳಿಂದ ಪ್ಯಾಲಸ್ತೀನ್ ಪ್ರದೇಶದ ಅರಬರು ಪ್ರತಿಭಟಿಸಿದ್ದುಂಟು. ಪ್ಯಾಲಸ್ತೀನ್‍ನ ದೊಡ್ಡ ನಗರಗಳೆಂದರೆ (2003) ಗಾಜಾ ಮಹಾನಗರ (1,331,600), ಹೆಬ್ರಾನ್ (1,37,000) ಮತ್ತು ನಬ್ಲಸ್ (1,15,400) ಇಲ್ಲಿನವರು ಅರಾಬಿಕ್, ಹೀಬ್ರೂ ಮತ್ತು ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸುತ್ತಾರೆ. ವೆಸ್ಟ್ ಬ್ಯಾಂಕ್‍ನಲ್ಲಿ 2700 ಕಿ.ಮೀ. ಉತ್ತಮ ರಸ್ತೆಯೂ 1800 ಕಿ.ಮೀ ಸಾಮಾನ್ಯ ರಸ್ತೆಯೂ ಇದೆ. (1997) ಎರಡು ವಿಮಾನ ನಿಲ್ದಾಣಗಳೂ, ಬಂದರುಗಳೂ ಇವೆ.

[೧][೨]

ಪೂರಕ ಓದಿಗೆ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ಯಾಲಸ್ತೀನ್
  2. Palestine