ದಿ ಡಾ ವಿನ್ಸಿ ಕೋಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Da Vinci Code
ಲೇಖಕರುDan Brown
ದೇಶUnited States
United Kingdom
ಪ್ರಕಾಶಕರುDoubleday Group (United States)
Transworld Publishers, UK Bantam Books (United Kingdom)
ಪುಟಗಳು454 (U.S. hardback)
489(U.S. paperback)
359 (U.K. hardback)
583 (U.K. paperback)
ಐಎಸ್‍ಬಿಎನ್0-385-50420-9 (US) / 9780552159715 (UK)
OCLC50920659
813/.54 21
LC ClassPS3552.R685434 D3 2003
ಮುಂಚಿನDeception Point
ನಂತರದThe Lost Symbol

ದಿ ಡಾ ವಿನ್ಸಿ ಕೋಡ್‌ 2003ರಲ್ಲಿ ಅಮೆರಿಕಾದ ಲೇಖಕ ಡಾನ್‌ ಬ್ರೌನ್‌ ಬರೆದ ನಿಗೂಢ-ಪತ್ತೇದಾರಿ ಕಾಲ್ಪನಿಕ ಕಾದಂಬರಿ. ಪ್ಯಾರಿಸ್‌ಲೂವರ್ ವಸ್ತುಸಂಗ್ರಹಾಲಯದಲ್ಲಿ ನಡೆದ ಹತ್ಯೆಯೊಂದನ್ನು ಕುರಿತು ಸಂಕೇತಶಾಸ್ತ್ರಜ್ಞ ರಾಬರ್ಟ್‌ ಲ್ಯಾಂಗ್ಡನ್‌ ಮತ್ತು ಸೋಫಿ ನೆವಿ ತನಿಖೆ ನಡೆಸುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ನಂತರ ನಜರಥ್‌ಏಸು‌ ಕ್ರಿಸ್ತ ಮೇರಿ ಮಗ್ಡಾಲೇನ್‌ಳನ್ನು ಮದುವೆಯಾಗಿ,ಮಗುವಿನ ತಂದೆಯಾಗಿರುವ ಸಾಧ್ಯತೆ ಬಗ್ಗೆ ಪ್ರಯರಿ ಆಫ್ ಸಿಯೊನ್ ಮತ್ತು ಒಪಸ್‌ ಡಾಯಿ ನಡುವೆ ನಡೆದ ಕಾಳಗವನ್ನು ಅವರು ಪತ್ತೆಹಚ್ಚುತ್ತಾರೆ.

ಲೂವರ್ ಡೆನನ್‌ ವಿಂಗ್‌ನಲ್ಲಿ ಹತ್ಯೆಯಾದ ವ್ಯಕ್ತಿಯ ದೇಹವು ಬೆತ್ತಲೆಯ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಲಿಯೊನಾರ್ಡೊ ಡಾ ವಿನ್ಸಿಯ ಪ್ರಸಿದ್ಧ ಕಲಾಕೃತಿ ವಿಟ್ರುವಿಯನ್ ಮ್ಯಾನ್ ಭಂಗಿಯಲ್ಲಿ ಕಂಡುಬಂದಿತು. ದೇಹದ ಬಳಿಯಲ್ಲಿ ರಹಸ್ಯ ಸಂದೇಶವೊಂದನ್ನು ಬರೆಯಲಾಗಿದ್ದು, ಅವನದೇ ರಕ್ತದಲ್ಲಿ ಹೊಟ್ಟೆಯ ಮೇಲೆ ಪಂಚಕೋನಿಯ ಆಕೃತಿ ಚಿತ್ರವನ್ನು ಬಿಡಿಸಲಾಗಿತ್ತು.

ಕಾದಂಬರಿಯು ಪವಿತ್ರ ಪಾನೀಯ ಪಾತ್ರೆಯ ಐತಿಹ್ಯ ಕುರಿತ ಊಹಾಪೋಹ ಮತ್ತು ಕ್ರೈಸ್ತ ಧರ್ಮಇತಿಹಾಸದಲ್ಲಿ ಮಗ್ಡಾಲೇನ್‌ಳ ಪಾತ್ರವನ್ನು ಕುರಿತು ಜನರ ಆಸಕ್ತಿಯನ್ನು ಕೆರಳಿಸಿತು. ಈ ಪುಸ್ತಕವು ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಮೇಲೆ ದಾಳಿ ಎಂದು ಹಲವು ಕ್ರೈಸ್ತ ಪಂಗಡಗಳಿಂದ ವ್ಯಾಪಕ ಖಂಡನೆಗೆ ಗುರಿಯಾಯಿತು. ಪುಸ್ತಕದಲ್ಲಿ ಚಾರಿತ್ರಿಕ ಮತ್ತು ವೈಜ್ಞಾನಿಕ ಅಸ್ಪಷ್ಟತೆಯ ಬಗ್ಗೆ ಸಹ ಟೀಕೆಗೆ ಗುರಿಯಾಯಿತು.

ಈ ಪುಸ್ತಕವು ವಿಶ್ವದಾದ್ಯಂತ 80 ದಶಲಕ್ಷ ಪ್ರತಿಗಳು ಮಾರಾಟವಾಗಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದಾಗಿದೆas of 2009[೧] ಮತ್ತು ಇದು 44 ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಪತ್ತೇದಾರಿ, ರೋಮಾಂಚಕಾರಿ ಮತ್ತು ಪಿತೂರಿಯನ್ನೊಳಗೊಂಡ ಕಾಲ್ಪನಿಕ ಶೈಲಿಗಳಿಂದ ಕೂಡಿದ್ದು, ಇದು ಬ್ರೌನ್‌ರ ಎರಡನೇ ಕಾದಂಬರಿಯಾಗಿದೆ. ಇದು ರಾಬರ್ಟ್ ಲ್ಯಾಂಗ್ಡನ್ ಪಾತ್ರವು ಸೇರ್ಪಡೆಯಾದ ಬ್ರೌನ್ ಅವರ ಎರಡನೇ ಕಾದಂಬರಿಯಾಗಿದ್ದು, ಲ್ಯಾಂಗ್ಡನ್ ಪಾತ್ರವಿದ್ದ ಅವರ ಮೊದಲ ಕಾದಂಬರಿ 2000ರಲ್ಲಿ ಬರೆದ ಎಂಜೆಲ್ಸ್‌ & ಡಿಮೊನ್ಸ್‌ ಆಗಿತ್ತು. 2004ರ ನವೆಂಬರ್‌ನಲ್ಲಿ ರ‌್ಯಾಂಡಮ್‌ ಹೌಸ್‌ 160 ಸ್ಪಷ್ಟನೆಗಳೊಂದಿಗೆ ವಿಶೇಷ ವಿವರಣಾತ್ಮಕ ಆವೃತ್ತಿಯನ್ನು ಪ್ರಕಟಿಸಿತು. 2006ರಲ್ಲಿ ಈ ಕಾದಂಬರಿಯ ಚಲನಚಿತ್ರ ರೂಪಾಂತರವನ್ನು ಸೋನಿಕೊಲಂಬಿಯಾ ಪಿಕ್ಚರ್ಸ್‌ ಬಿಡುಗಡೆ ಮಾಡಿತು.

ಕಥಾ ಸಾರಾಂಶ[ಬದಲಾಯಿಸಿ]

ಈ ಕಾದಂಬರಿಯು ಪ್ಯಾರಿಸ್‌ನಲ್ಲಿರುವ ಲೂವರ್ ವಸ್ತುಸಂಗ್ರಹಾಲಯದ ಹೆಸರುವಾಸಿ ನಿರ್ವಾಹಕ ಜಾಕ್ವೆಸ್ ಸೊಯೆಂಜರ್‌ ಕೊಲೆಯ ರಹಸ್ಯವನ್ನು ಬಿಡಿಸಲು ಹಾರ್ವರ್ಡ್‌ ವಿಶ್ವವಿದ್ಯಾಲಯದ ಧಾರ್ಮಿಕ ಸಂಕೇತಶಾಸ್ತ್ರ ಪ್ರಾಧ್ಯಾಪಕ ರಾಬರ್ಟ್‌ ಲ್ಯಾಂಗ್ಡನ್‌ರ ಪ್ರಯತ್ನವನ್ನು ವಿವರಿಸುತ್ತದೆ. ಸೊಯೆಂಜರ್‌ನ ಮೃತದೇಹದ ಪಕ್ಕದಲ್ಲಿ ಅಚ್ಚರಿ ಮೂಡಿಸುವ ಗೂಢಲಿಪಿಯೊಂದು ದೊರೆಯಿತು. ಸೊಯೆಂಜರ್‌ನ ಮೊಮ್ಮಗಳಾದ ಸೋಫಿ ನೆವಿ ಮತ್ತು ಲ್ಯಾಂಗ್ಡನ್‌ ಈ ಗೂಢಲಿಪಿಯ ಒಗಟುಗಳನ್ನು ಬಿಡಿಸಲು ಪ್ರಯತ್ನಿಸುವರು. ಅವರು ಲಿಯೊನಾರ್ಡೊ ಡಾ ವಿನ್ಸಿ ಕಲಾಕೃತಿಗಳಲ್ಲಿ ಅಡಗಿದ ಸುಳಿವುಗಳ ಜಾಡನ್ನು ಪತ್ತೆಹಚ್ಚಿದಾಗ ಅಚ್ಚರಿಗೊಂಡರು.

ಈ ನಿಗೂಢತೆಯ ರಹಸ್ಯವನ್ನು ಭೇದಿಸಲು ಅಕ್ಷರಪಲ್ಲಟಗಳು ಮತ್ತು ಒಗಟುಗಳಂತಹ ಬುದ್ಧಿ ಕಸರತ್ತುಗಳ ಸರಣಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿತ್ತು. ಅಂತಿಮ ಪರಿಹಾರವು ಪವಿತ್ರ ಪಾನೀಯ ಪಾತ್ರೆಯ ಸಂಭಾವ್ಯ ಸ್ಥಳ ಮತ್ತು ಸೈಯನ್‌ನ ಪ್ರಿಯರಿ ಎನ್ನುವ ನಿಗೂಢ ಸಮಾಜ, ಹಾಗೆಯೇ ಧರ್ಮ ಸೈನಿಕರೊಂದಿಗೆ ನಿಕಟ ಸಂಪರ್ಕ ಹೊಂದಿರುವುದೆಂದು ಕಂಡುಬಂತು. ಈ ಕಥೆಯು ಒಪಸ್‌ ಡಾಯಿ ಎಂಬ ರೋಮನ್‌ ಕ್ಯಾಥೋಲಿಕ್‌ ಸಂಸ್ಥೆಯನ್ನು ಕೂಡ ಒಳಗೊಂಡಿದೆ.

ವಿವರಗಳು[ಬದಲಾಯಿಸಿ]

ಪವಿತ್ರ ಪಾನೀಯ ಪಾತ್ರೆ ಕಡೆಗೆ ಮುನ್ನಡೆಸುವ "ಕೀಸ್ಟೋನ್‌"ಯಿರುವ ಸ್ಥಳವನ್ನು ಪತ್ತೆಹಚ್ಚಲು ಸೈಲಾಸ್‌‌ನಿಂದ (ದಿ ಟೀಚರ್ ಎಂಬ ಹೆಸರಾದ ವ್ಯಕ್ತಿಯ ಪರವಾಗಿ ಕಾರ್ಯನಿರ್ವಹಿಸುವವನು) ಜಾಕ್ವೆಸ್ ಸೊಯಂಜರ್ (ಸೈಯನ್‌ನ ಪ್ರಿಯರಿಯ ನಾಯಕ, ಆದರೆ ಆ ಕಾಲದಲ್ಲಿ ಅಕ್ಷರಶಃ ಯಾರಿಗೂ ತಿಳಿದಿರಲಿಲ್ಲ) ಹತ್ಯೆಯೊಂದಿಗೆ ಕಥೆಯು ಪ್ರಾರಂಭವಾಗುತ್ತದೆ. ಸೊಯೆಂಜರ್‌ನ ಮೃತ ದೇಹದ ಎಡಗಡೆ ಅವರು ಬಿಟ್ಟಿದ್ದ ಸಂಕೇತಾಕ್ಷರದ ಅರ್ಥವನ್ನು ಬಿಡಿಸಲು ಸಹಾಯ ಕೇಳುವುದಕ್ಕಾಗಿ, ಕೊಲೆಯಾದ ಸ್ಥಳಕ್ಕೆ ಪೋಲಿಸರು ಪ್ಯಾರಿಸ್‌ನಲ್ಲಿ ಉಪನ್ಯಾಸ ಮಾಡುತ್ತಿದ್ದ ‌ರಾಬರ್ಟ್‌ ಲ್ಯಾಂಗ್ಡನ್ ಅವರನ್ನು ಕರೆಸಿದರು. ಲ್ಯಾಂಗ್ಡನ್‌ನನ್ನು ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಸಂಶಯಾಸ್ಪದ ವ್ಯಕ್ತಿಯೆಂದು ಮುಖ್ಯ ಪತ್ತೇದಾರ ಬೆಜು ಫ್ಯಾಚೆ ಅನುಮಾನಿಸಿದ್ದನು.

ಪೋಲಿಸ್‌ ಗೂಢಲಿಪಿಗಾರ್ತಿಯಂತೆ ಸೋಫಿ ನೆವಿ ಕೊಲೆಯಾದ ಜಾಗದಲ್ಲಿದ್ದು, ಇವಳು ಬಹಳ ಬೇಗ ಲ್ಯಾಂಗ್ಡನ್‌ನ ನಂಬಿಕೆಯನ್ನು ಗಳಿಸುವಳು. ಕೊಲೆಯಾದ ಜಾಕ್ವೆಸ್ ಸೊಯೆಂಜರ್‌ ನೆವಿಯ ತಾತನಾಗಿದ್ದು, ಒಮ್ಮೆ ನೆವಿ ರಜೆಯ ಅವಧಿಯಲ್ಲಿ ತನ್ನ ವಸತಿ ಶಾಲೆಯಿಂದ ನೋರ್ಮಂಡಿಯಲ್ಲಿರುವ ತಾತನ ಮನೆಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಅವನು ಧರ್ಮಬಾಹಿರ ಲೈಂಗಿಕ ಕ್ರಿಯಾವಿಧಿಯಲ್ಲಿ(ಹೀರೋಸ್‌ ಗೇಮೊಸ್‌) ತೊಡಗಿರುವುದನ್ನು ಪತ್ತೆಮಾಡುವವರೆಗೆ ಅವರಿಬ್ಬರು ಪರಸ್ಪರ ನಿಕಟ ಸಾಮೀಪ್ಯ ಹೊಂದಿದ್ದರು. (ಅವಳು ಕಥೆಯುದ್ದಕ್ಕೂ ಹಲವು ಬಾರಿ ತಾನು ಗಮನಿಸಿದ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿದೆ ಮತ್ತು ಅನೇಕ ಬಾರಿ ಸುಳಿವು ನೀಡಲಾಗಿದೆ. ಆದರೆ ಕೊನೆಯಲ್ಲಿ ಅದನ್ನು ರಾಬರ್ಟ್‌ಗೆ ಅವಳು ಹೇಳುವವರೆಗೂ ಓದುಗರನ್ನೊಳಗೊಂಡು ಯಾರಿಗೂ ಅವಳು ಕಂಡಿದ್ದು ಏನೆಂದು ಬಹಿರಂಗವಾಗುವುದಿಲ್ಲ).

ಲ್ಯಾಂಗ್ಡನ್‌ ಮತ್ತು ನೆವಿ, ಸೊಯೆಂಜರ್‌‌ನ ದೇಹದ ಬಳಿ ಒಂದು ಅಚ್ಚರಿಯ ಗೂಢಲಿಪಿಯನ್ನು ಕಾಣುವರು. ಈ ಸುಳಿವುಗಳು ಎರಡನೇ ಹಂತದ ಸುಳಿವುಗಳಿಗೆ ದಾರಿ ತೋರಿಸುವುದಾಗಿತ್ತು. ತನ್ನ ತಾತನ ಸುಳಿವುಗಳ ಅರ್ಥ ಭೇದಿಸಿದ ನೆವಿ ಕಲಾಕೃತಿಯನ್ನು ಪತ್ತೆಹಚ್ಚುತ್ತಾಳೆ. ಅದರ ಹಿಂದೆ ಕೀಲಿಕೈಯೊಂದನ್ನು ಅಡಗಿಸಿಡಲಾಗಿರುತ್ತದೆ. ಆ ಕೀಲಿಕೈಯಲ್ಲಿ ಸೈಯನ್‌ನ ಪ್ರಿಯರಿನ ವಿಳಾಸ ಮತ್ತು ಚಿಹ್ನೆಗಳನ್ನು ಬರೆಯಲಾಗಿತ್ತು. ಪೋಲಿಸರ ಕಣ್ತಪ್ಪಿಸಿ, ಲ್ಯಾಂಗ್ಡನ್‌ ಮತ್ತು ನೆವಿ ಒಟ್ಟಿಗೆ ಸ್ಥಳದಿಂದ ನಾಪತ್ತೆಯಾದರು. ನಂತರ ಅವರಿಬ್ಬರು ಕೀಲಿಕೈಯ ರಹಸ್ಯವನ್ನು ಭೇದಿಸಿದರು.

ಆ ಕೀಲಿಕೈ ಮೂಲಕ ಡೆಪೊಸಿಟರಿ ಬ್ಯಾಂಕ್ ಆಫ್‌ ಜುರಿಚ್‌ ಪ್ಯಾರಿಸ್‌ ಶಾಖೆಯ ಸುರಕ್ಷಿತ ಠೇವಣಿ ಪೆಟ್ಟಿಗೆಯನ್ನು ತೆರೆಯುತ್ತದೆ. ಬ್ಯಾಂಕ್‌ನಲ್ಲಿ ಸೊಯೆಂಜರ್‌‌ನ ಖಾತೆ ಸಂಖ್ಯೆಯು 10-ಅಂಕಿಗಳ ನಂಬರ್‌ನಲ್ಲಿ ಮೊದಲ ಎಂಟು ಫಿಬೋನಾಸಿ ಸಂಖ್ಯೆಗಳನ್ನು ಪಟ್ಟಿಮಾಡಿತ್ತು: 1 1 2 3 5 8 13 21.

ಅವರು ಸುರಕ್ಷಿತ ಠೇವಣಿ ಪೆಟ್ಟಿಗೆಯಲ್ಲಿ ಕೀಸ್ಟೋನ್‌ ಪತ್ತೆಹಚ್ಚಿದರು.ವಾಸ್ತವವಾಗಿ ಇದು ದೊಡ್ಡ ಕ್ರಿಪ್ಟೆಕ್ಸ್‌, ಬಹುಶಃ ಸಂದೇಶಗಳನ್ನು ಸುರಕ್ಷಿತವಾಗಿ ರವಾನಿಸುವುದಕ್ಕೆ ಲಿಯೊನಾರ್ಡೊ ಡಾ ವಿನ್ಸಿ ಶೋಧಿಸಿದ ಸಿಲಿಂಡರಿನಾಕಾರದ ಸಾಧನ. ಅದನ್ನು ತೆರೆಯಲು, ಅದರಲ್ಲಿರುವ ತಿರುಗಿಸಬಹುದಾದ ಭಾಗಗಳ ಸಂಯೋಜನೆಯನ್ನು ಸರಿಯಾದ ಕ್ರಮದಲ್ಲಿ ಜೋಡಿಸಬೇಕಾಗಿತ್ತು. ಕ್ರಿಪ್ಟೆಕ್ಸ್‌ ಬಲವಂತವಾಗಿ ತೆರೆಯಲು ಪ್ರಯತ್ನಿಸಿದರೆ, ಅದಕ್ಕೆ ಜೋಡಿಸಿಕೊಂಡಿದ್ದ ವಿನಿಗರ್‌ನ ಸೀಸೆಯು ಒಡೆದು, ಪ್ಯಾಪಿರಸ್‌ನಲ್ಲಿ ಬರೆದ ಸಂದೇಶವು ಕರಗುವ ಸಾಧ್ಯತೆಯಿತ್ತು. ದೊಡ್ಡ ಕ್ರಿಪ್ಟೆಕ್ಸ್‌ ಅನ್ನು ಒಳಗೊಂಡಿರುವ ಬೀಟೆಮರ ಪೆಟ್ಟಿಗೆಯು ಲಿಯೊನಾರ್ಡೊನ ದಿನಚರಿಗಳ ರೀತಿಯಲ್ಲೇ ಹಿಮ್ಮುಖದ ಲಿಪಿಯಲ್ಲಿ ಬರೆದ ಕ್ರಿಪ್ಟೆಕ್ಸ್‌ನ ಸಂಯೋಜನೆಯ ಸುಳಿವನ್ನು ಒಳಗೊಂಡಿತ್ತು.

ಸೈಲಾಸ್‌‌ಗೆ ಬಂದೂಕಿನ ಬೆದರಿಕೆಯೊಂದಿಗೆ ಸೊಯೆಂಜರ್‌‌ ಬಹಿರಂಗಮಾಡಿದ ಮಾಹಿತಿಗಳು ವಾಸ್ತವವಾಗಿ ಚೆನ್ನಾಗಿ ಪೂರ್ವಾಭ್ಯಾಸ ಮಾಡಿದ್ದ ಸುಳ್ಳಾಗಿತ್ತು. ಕೀಸ್ಟೋನ್‌ನನ್ನು ಸೇಂಟ್‌-ಸಲ್ಪೈಸ್‌ ಚರ್ಚ್‌ನಲ್ಲಿ ಪುರಾತನ "ಗುಲಾಬಿ ರೇಖೆ"ಯಲ್ಲಿ (ಮೊದಲು ಪ್ರಧಾನ ರೇಖಾಂಶವು ಪ್ಯಾರಿಸ್‌ ಮೂಲಕ ಹಾದುಹೋಗುತ್ತಿತ್ತು, ನಂತರ ಅದನ್ನು ಗ್ರೀನ್‌ವಿಚ್‌ ಮೇಲೆ ಹಾದುಹೋಗುವಂತೆ ಮರುವಿನ್ಯಾಸಗೊಳಿಸಲಾಯಿತು)ನಿಖರವಾಗಿ ಉಪಸ್ಥಿತವಿರುವ ಅಬಲಿಸ್ಕ್‌(ನಿಲುಗಂಬ) ಕೆಳಗೆ ಹೂಳಲಾಗಿದೆಯೆಂದು ಸೊಯೆಂಜರ್ ಬಹಿರಂಗ ಮಾಡಿದ್ದ. ಅಬಲಿಸ್ಕ್‌ನ ಕೆಳಗಿರುವ ಸಂದೇಶವು ಕೇವಲ ಬುಕ್ ಆಫ್ ಜಾಬ್‌ನಲ್ಲಿರುವ (38:11a) ಸಾಲನ್ನು ಉಲ್ಲೇಖಿಸುತ್ತಿತ್ತು. ಆ ಸಾಲಿನ ಪ್ರಕಾರ: "ಇಲ್ಲಿಯವರೆಗೆ ನೀನು ಹೋಗಬೇಕು. ಮುಂದೆ ದಾರಿ ಇಲ್ಲ." (KJV) ಇದನ್ನು ಸೈಲಾಸ್‌ ಓದುತ್ತಿದಂತೆ, ತಾನು ಮೋಸಹೋಗಿದ್ದೇನೆಂದು ಅರಿವಾಯಿತು.

ಪೋಲಿಸರು ಬೆನ್ನತ್ತಿರುವ ಲ್ಯಾಂಗ್ಡನ್‌ ಮತ್ತು ನೆವಿ ಕೀಸ್ಟೋನ್‌ ಅನ್ನು ಸರ್‌ ಲೀಘ್‌ ಟೀಬಿಂಗ್‌ (ಪವಿತ್ರ ಪಾನೀಯ ಪಾತ್ರೆಯಲ್ಲಿ ಪರಿಣಿತ ಮತ್ತು ಲ್ಯಾಂಗ್ಡನ್‌ನ ಸ್ನೇಹಿತ) ಬಳಿಗೆ ಕೊಂಡೊಯ್ದರು. ಟೀಬಿಂಗ್‌ನ ಖಾಸಗಿ ವಿಮಾನದಲ್ಲಿ ಮೂವರು ದೇಶದಿಂದ ಪಲಾಯನ ಮಾಡಿದರು. ಅವರು ವಿಮಾನದಲ್ಲಿ ಕ್ರಿಪ್ಟೆಕ್ಸ್ ಅನ್ನು ತೆಗೆಯುವ ವಿಧಾನವನ್ನು ಕಂಡುಕೊಂಡರು. ಆದರೆ ದೊಡ್ಡ ಕ್ರಿಪ್ಟೆಕ್ಸ್‌ ವಾಸ್ತವವಾಗಿ ಎರಡನೇ ಚಿಕ್ಕ ಕ್ರಿಪ್ಟೆಕ್ಸ್‌ ಹೊಂದಿದ್ದು, ಅದರ ಸಂಯೋಜನೆಯನ್ನು ಬಹಿರಂಗಪಡಿಸುವ ಎರಡನೇ ಒಗಟನ್ನು ಒಳಗೊಂಡಿತ್ತು. ಈ ಒಗಟಿನಲ್ಲಿ "ಪೋಪ್ ಇರಿಸಿದ ಧರ್ಮಸೈನಿಕನ ಸಮಾಧಿ"ಯ ಮೇಲಿನ ಮಂಡಲವನ್ನು ಹುಡುಕುವಂತೆ ಹೇಳಿತ್ತು. ಅದು ಮಧ್ಯಕಾಲೀನ ಯುಗದ ಸೈನಿಕನನ್ನು ಕುರಿತದ್ದಾಗಿರದೇ, ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಹೂಳಲಾಗಿರುವ ಮತ್ತು ಅಲೆಕ್ಸಾಂಡರ್ ಪೋಪ್(A.ಪೋಪ್) ಪ್ರಶಂಸಾ ಬರಹವಿರುವ ಸರ್ ಐಸಾಕ್ ನ್ಯೂಟನ್ ಸಮಾಧಿಯ ಉಲ್ಲೇಖವಾಗಿತ್ತು.

ಜಾಕ್ವೆಸ್ ಸೊಯೆಂಜರ್‌ನ ಹತ್ಯೆಗೆ ಸೈಲಾಸ್‌ನನ್ನು ನಿಯೋಜಿಸಿದ ಟೀಚರ್ ಟೀಬಿಂಗ್‌ ಎನ್ನುವುದು ತಿಳಿದುಬಂತು. ಅವನು ಸಿಯನ್‌ನ ಪ್ರಿಯರಿಯ ನಾಯಕರ ಗುರುತುಗಳ ಬಗ್ಗೆ ಮಾಹಿತಿಯನ್ನು ಹೊಂದಿದ್ದು, ನಂತರ ಅವರ ಕಛೇರಿಗಳಲ್ಲಿ ಕದ್ದಾಲಿಕೆ ಮಾಡಿ ಸೈಲಾಸ್‌‌ನಿಂದ ಅವರ ಹತ್ಯೆಗಳನ್ನು ಮಾಡಿಸಿದ. ಈ ಕೆಲಸಗಳಲ್ಲಿ ರೆಮಿ ಅವನೊಂದಿಗೆ ಸಹಯೋಗ ಹೊಂದಿದ್ದ. ನಂತರ ಟೀಬಿಂಗ್‌ ಬಿಷಪ್‌ ಅರಿಂಗರೋಸರನ್ನು ಸಂಪರ್ಕಿಸಿ, ಅವನ ಗುರುತನ್ನು ಮುಚ್ಚಿಟ್ಟು, ಪಾನೀಯ ಪಾತ್ರೆಯನ್ನು ಹುಡುಕುವ ಯೋಜನೆಗೆ ಧನಸಹಾಯ ಪಡೆಯುವ ಕುಯುಕ್ತಿ ರೂಪಿಸಿದ. ಅವನು ಅರಿಂಗರೋಸಗೆ ಪಾನೀಯ ಪಾತ್ರೆಯನ್ನು ಹಸ್ತಾಂತರಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ಇದನ್ನು ಹುಡುಕಲು ಒಪಸ್‌ ಡಾಯಿನ ಸಂಕಲ್ಪದ ಪ್ರಯೋಜನವನ್ನು ಪಡೆಯುವುದಾಗಿತ್ತು. ಪಾನೀಯ ಪಾತ್ರೆಯ ರಹಸ್ಯವನ್ನು ಗೊತ್ತಾದ ಸಮಯದಲ್ಲಿ ಬಹಿರಂಗಪಡಿಸುವ ಪ್ರತಿಜ್ಞೆಯನ್ನು ಸಿಯಾನ್‍‌ನ ಪ್ರಿಯರಿ ಮುರಿದಿದೆಯೆಂದು ಟೀಬಿಂಗ್ ನಂಬಿದ್ದ. ಟೀಬಿಂಗ್‌ ಪಾನೀಯ ಪಾತ್ರೆಯ ದಾಖಲೆಗಳನ್ನು ಕದ್ದು, ತಾನೇ ಅದನ್ನು ವಿಶ್ವಕ್ಕೆ ಬಹಿರಂಗ ಪಡಿಸಲು ಯೋಚಿಸಿದನು. ಅವನು ಸೈಲಾಸ್‌ಗೆ ಲ್ಯಾಂಗ್ಡನ್‌ ಮತ್ತು ಸೋಫಿ ನೆವಿ ತನ್ನ ಬಂಗಲೆಯಲ್ಲಿರುವ ಬಗ್ಗೆ ಮಾಹಿತಿಯನ್ನು ನೀಡಿದನು. ಟೀಬಿಂಗ್‌ ಸ್ವಯಂ ಅವರಿಂದ ಕೀಸ್ಟೋನ್‌ ಅನ್ನು ವಶಪಡಿಸಿಕೊಳ್ಳಲಿಲ್ಲ, ಏಕೆಂದರೆ ತನ್ನ ಗುರುತನ್ನು ಬಹಿರಂಗಪಡಿಸಲು ಅವನಿಗೆ ಇಷ್ಟವಿರಲಿಲ್ಲ. ಅವನು ಸೈಲಾಸ್‌ಗೆ ತನ್ನ ಮನೆಯಲ್ಲಿರುವ ಕೀಸ್ಟೋನ್‌ ಅನ್ನು ವಶಪಡಿಸಿಕೊಳ್ಳಲು ಕರೆಕಳುಹಿಸಿದ. ಸಂಕೇತಾಕ್ಷರ ಬಿಡಿಸುವುದಕ್ಕಾಗಿ ಲ್ಯಾಂಗ್ಡನ್‌ ಮತ್ತು ಸೋಫಿಳಿಂದ ಹೆಚ್ಚಿನ ಸಹಾಯವನ್ನು ಪಡೆಯುವುದಕ್ಕಾಗಿ ಸೈಲಾಸ್‌ಗೆ ಈ ಕೆಲಸ ಮಾಡದಂತೆ ಅವನೇ ಸ್ವತಃ ಅಡ್ಡಗಟ್ಟಿದ. ತರುವಾಯ, ಲ್ಯಾಂಗ್ಡನ್ ಬ್ಯಾಂಕ್‌ನಿಂದ ತಪ್ಪಿಸಿಕೊಳ್ಳುವಾಗ ಕದ್ದಿದ್ದ ಟ್ರಕ್‌ನಲ್ಲಿದ್ದ ಶೋಧಕ ಉಪಕರಣದ ಬೆನ್ನುಹತ್ತಿದ ಪೊಲೀಸರು ಮನೆಯ ಮೇಲೆ ದಾಳಿ ಮಾಡುತ್ತಾರೆ. ನೆವಿ ಮತ್ತು ಲ್ಯಾಂಗ್ಡನ್‌ಗೆ ಟೀಬಿಂಗ್‌ ಲಂಡನ್‌ನಲ್ಲಿರುವ ಟೆಂಪಲ್‌ ಚರ್ಚ್‌ ಕಡೆಗೆ ಕರೆದುಕೊಂಡು ಹೋದ.ಅದೊಂದು ಕೊನೆ ತುದಿಯೆಂದು ಅವನಿಗೆ ಪೂರ್ಣ ಅರಿವಿದ್ದು, ರೆಮಿ ಜತೆ ಒತ್ತೆಯಾಳು ನಾಟಕವಾಡಿ, ಲ್ಯಾಂಗ್‌ಡನ್ ಮತ್ತು ನೆವಿಗೆ ತನ್ನ ನಿಜ ಸಂಚನ್ನು ಬಯಲುಮಾಡದೇ ಕೀಸ್ಟೋನ್ ಸ್ವಾಧೀನಕ್ಕೆ ತೆಗೆದುಕೊಳ್ಳುವುದು ಅವನ ಯೋಜನೆಯಾಗಿತ್ತು.

ಟೀಬಿಂಗ್‌ ತಾನು ಮಾಡಿದ ಎಲ್ಲಾ ಕೆಲಸಗಳಿಗಿದ್ದ ಸಾಕ್ಷ್ಯಗಳನ್ನು ಅಳಿಸುವುದಕ್ಕಾಗಿ, ರೆಮಿಗೆ ಕಡಲೆಕಾಯಿಗಳು ಪ್ರಾಣಾಂತಿಕ ಅಲರ್ಜಿ ಎಂದು ತಿಳಿದು, ಅವನಿಗೆ ಕಡಲೆಕಾಯಿ ಹುಡಿ ಮಿಶ್ರಿತ ಕೊನ್ಯಾಕ್‌(ಬ್ರಾಂದಿ)ಯನ್ನು ನೀಡಿದ. ಹಾಗಾಗಿ, ರೆಮಿ ಅತಿ ಸಂವೇದನಾಶೀಲ ಆಘಾತದಿಂದ ಮರಣಹೊಂದಿದ. ಟೀಬಿಂಗ್‌ ಲಂಡನ್‌ನಲ್ಲಿರುವ ಒಪಸ್‌ ಡಾಯಿಯ ಕೇಂದ್ರ ಕಛೇರಿಯಲ್ಲಿ ಸೈಲಾಸ್‌ ಅಡಗಿದ್ದಾನೆಂದು ಕೂಡ ಪೋಲಿಸರಿಗೆ ಅಜ್ಞಾತ ಮಾಹಿತಿ ನೀಡುತ್ತಾನೆ.

ವೆಸ್ಟ್‌ಮಿನಿಸ್ಟರ್‌ ಅಬೆನಲ್ಲಿ ಟೀಬಿಂಗ್‌ನೊಂದಿಗೆ ಮುಖಾಮುಖಿಯಲ್ಲಿ, ಅವನ ಮುಂದೆ ಲ್ಯಾಂಗ್ಡನ್‌ ಎರಡನೇ ಕ್ರಿಪ್ಟೆಕ್ಸ್‌‌ನ್ನು ನಾಶ ಮಾಡುವ ಮುನ್ನ ರಹಸ್ಯವಾಗಿ ತೆರೆದು,ಅದರಲ್ಲಿದ್ದ ವಸ್ತುಗಳನ್ನು ತೆಗೆದಿರುತ್ತಾನೆ. ಪೋಲಿಸರು ಟೀಬಿಂಗ್‌ನನ್ನು ಬಂಧಿಸಿ, ಎಳೆದೊಯ್ಯುವಾಗ,ಟೀಬಿಂಗ್‌ ಎರಡನೇ ಕ್ರಿಪ್ಟೆಕ್ಸ್‌ನಲ್ಲಿದ್ದ ವಸ್ತುಗಳು ಮತ್ತು ಪಾನೀಯ ಪಾತ್ರೆಯ ರಹಸ್ಯ ಸ್ಥಾನವನ್ನು ಹೇಳುವಂತೆ ಲ್ಯಾಂಗ್ಡನ್‌ನಲ್ಲಿ ಬೇಡಿಕೊಂಡಾಗ, ಅದು ಫಲಪ್ರದವಾಗಲಿಲ್ಲ.

ಬಿಷಪ್‌ ಅರಿಂಗರೋಸ ಬೆಜು ಫ್ಯಾಚೆ ಅವರನ್ನು ಖಾಸಗಿ ಭೇಟಿ ಮಾಡಿ ತಪ್ಪೊಪ್ಪಿಕೊಂಡ ನಂತರ ಬೆಜು ಫ್ಯಾಚೆ ನೆವಿ ಮತ್ತು ಲ್ಯಾಂಗ್ಡನ್‌ ಅಮಾಯಕರು ಎನ್ನುವುದನ್ನು ಮನಗಂಡನು. ನಂತರ ಫ್ಯಾಚೆ ನೆವಿ ಮತ್ತು ಲ್ಯಾಂಗ್ಡನ್‌ರ ಬಂಧನ ವಾರೆಂಟನ್ನು ರದ್ದುಮಾಡಿದ.

ಒಪಸ್‌ ಡಾಯಿನ ಕೇಂದ್ರ ಕಛೇರಿಯ ಹೊರಗೆ ಪೊಲೀಸರಿಂದ ತಪ್ಪಿಸಿಕೊಂಡು ಓಡುವಾಗ ಸೈಲಾಸ್ ಆಕಸ್ಮಿಕವಾಗಿ ಅರಿಂಗಕೋಸಾ ಮೇಲೆ ಗುಂಡು ಹಾರಿಸುತ್ತಾನೆ. ಅರಿಂಗರೋಸಾ ತಾನು ಮಾಡಿದ ದೊಡ್ಡ ತಪ್ಪನ್ನು ಅರಿತು ಹತ್ಯೆಯಾದ ಸಿಯಾನ್ ಪ್ರಿಯರಿಯ ನಾಯಕರ ಕುಟುಂಬಕ್ಕೆ ತನ್ನ ಬ್ರೀಫ್‌ಕೇಸ್‌ನಲ್ಲಿದ್ದ ಬೇರರ್‌ ಬಾಂಡ್‌ಗಳನ್ನು ನೀಡಲು ಬೆಜು ಫ್ಯಾಚೆಗೆ ತಿಳಿಸಿದನು. ಅದಾದ ಮೇಲೆ ಸೈಲಾಸ್‌ ತನಗಾದ ಮಾರಕ ಗಾಯಗಳಿಂದಾಗಿ ಸಾಯುತ್ತಾನೆ.

ನಿಜವಾಗಲೂ ಎರಡನೇ ಕೀಸ್ಟೋನ್‌ನಲ್ಲಿರುವ ಅಂತಿಮ ಸಂದೇಶವು ರೋಸಲಿನ್‌ ಕ್ರೈಸ್ತಮಂದಿರ‌ವನ್ನು ಸೂಚಿಸದಿದ್ದರೂ ಸಹ, ನೆಲದ ಮೇಲೆ ಸ್ಟಾರ್‌ ಆಫ್‌ ಡೇವಿಡ್‌ನ ಕೆಳಗೆ ಪಾನೀಯ ಪಾತ್ರೆಯನ್ನು ಒಂದೊಮ್ಮೆ ಹೂಳಲಾಗಿತ್ತು. (ಎರಡು ಪರಸ್ಪರ ಬಂಧಿತವಾದ ತ್ರಿಭುಜಗಳು "ಬ್ಲೇಡ್" ಮತ್ತು "ಮದ್ಯಪಾತ್ರೆ"ಗಳು. ಅಂದರೆ ಅವುಗಳು ಪುರುಷ ಮತ್ತು ಮಹಿಳೆಯ ಸಂಕೇತಗಳಾಗಿವೆ).

ರೋಸಲಿನ್‌ ಕ್ರೈಸ್ತಮಂದಿರದ ಶಿಕ್ಷಕ ಬಹು ಹಿಂದೆ ಕಳೆದುಹೊಗಿದ್ದ ಸೋಫಿಯ ಸೋದರನಾಗಿದ್ದ. ಸೋಫಿ ಮಗುವಾಗಿದ್ದಾಗ ಅವಳ ಸೋದರ ತಂದೆತಾಯಿಯರು ಮತ್ತು ಅಜ್ಜಿಯೊಂದಿಗೆ ಕಾರು ಅಪಘಾತದಲ್ಲಿ ಸತ್ತಿದ್ದನೆಂದು ಹೇಳಲಾಗಿತ್ತು.

ರೋಸೆಲಿನ್ ಕ್ರೈಸ್ತಮಂದಿರದ ಪೋಷಕಿ ಮೇರಿ ಚಾವೆಲ್ ಬಹು ಹಿಂದೆ ಅಸುನೀಗಿದ್ದ ಸೋಫಿಯ ಅಜ್ಜಿಯಾಗಿದ್ದು, ಜಾಕ್ವೆಸ್ ಸೊಯೆಂಜರ್‌ ಪತ್ನಿಯಾಗಿದ್ದಳು. ಅವಳು ಜಾಕ್ವೆಸ್ ಸೊಯೆಂಜರ್‌ನೊಂದಿಗೆ ಲೈಂಗಿಕ ಕ್ರಿಯಾವಿಧಿಯಲ್ಲಿ ಭಾಗವಹಿಸುತ್ತಿದ್ದಳು. ಸೋಫಿ ಏಸು ಕ್ರಿಸ್ತ ಮತ್ತು ಮೇರಿ ಮಗ್ಡಾಲೇನ್‌ನ ವಂಶಸ್ಥಳಾಗಿದ್ದಳೆಂಬುದು ಬಯಲಾಗುತ್ತದೆ. ಅವಳ ಜೀವಕ್ಕೆ ಸಂಭವನೀಯ ಅಪಾಯಗಳಿಂದ ರಕ್ಷಿಸಲು ಸೈಯನ್‌ನ ಪ್ರಿಯರಿ ಅವಳ ಗುರುತನ್ನು ಅಡಗಿಸಿಟ್ಟಿತ್ತು.

ಸೈಯನ್‌ನ ಪ್ರಿಯರಿಯ ಎಲ್ಲಾ ನಾಲ್ಕು ನಾಯಕರನ್ನು ಹತ್ಯೆಮಾಡಲಾಗಿದ್ದರೂ ಕೂಡ, ಈ ರಹಸ್ಯ ಬಯಲಾಗಲಿಲ್ಲ, ಸಂಸ್ಥೆ ಮತ್ತು ರಹಸ್ಯವನ್ನು ಜೀವಂತವಾಗಿಡಲು ತುರ್ತು ಯೋಜನೆಯೊಂದಿತ್ತು.(ಎಂದಿಗೂ ಬಯಲಾಗಲಿಲ್ಲ)

ಕೊನೆಯ ಸಂದೇಶದ ನಿಜವಾದ ಅರ್ಥವು ಲೂವರ್ತಲೆಕೆಳಗೆ ಮಾಡಿದ ಗಾಜಿನ ಪಿರಮಿಡ್‌ನ ಕೆಳಗೆ ನೇರವಾಗಿ(ಅಂದರೆ, ಮಹಿಳೆಯ ಸಂಕೇತ ಸೂಚಿಸುವ "ಮದ್ಯಪಾತ್ರೆ," ಬೆಜು ಫ್ಯಾಚೆನಿಂದ ತಪ್ಪಿಸಿಕೊಳ್ಳುವಾಗ ಲ್ಯಾಂಗ್ಡನ್‌ ಮತ್ತು ಸೋಫಿ ಇದಕ್ಕೆ ಕಾಕತಾಳೀಯವಾಗಿ ಬಹುತೇಕ ಮುಖಾಮುಖಿಯಾಗಿದ್ದರು) ಚಿಕ್ಕ ಪಿರಮಿಡ್‌ನಲ್ಲಿ ಹೂಳಲಾದ ಪಾನೀಯ ಪಾತ್ರೆ ಆಗಿತ್ತು. (ಅಂದರೆ ಪುರುಷ ಸಂಕೇತವನ್ನು ಸೂಚಿಸುವ "ಬ್ಲೇಡ್" ). ಇದನ್ನು "ರೋಸಲಿನ್‌"ನ ರೀತಿಯಲ್ಲಿ "ಬೀಟೆ ಮರದ ಪಟ್ಟಿಯ" ಕೆಳಗಡೆ ಇರಿಸಲಾಗಿತ್ತು ಪುಸ್ತಕದ ಕೊನೆಯ ಪುಟಗಳಲ್ಲಿ ಲ್ಯಾಂಗ್ಡನ್‌ ಈ ಒಗಟಿನ ಕೊನೆಯ ಚೂರಿನ ರಹಸ್ಯವನ್ನು ಬಿಡಿಸುವನು, ಆದರೆ ಇದರ ಬಗ್ಗೆ ಯಾರಿಗೂ ಹೇಳಿದಂತೆ ಕಾಣಿಸುವುದಿಲ್ಲ. ಹೆಚ್ಚಿನ ಚರ್ಚೆಗಾಗಿ ಲಾ ಪಿರಾಮಿಡ್‌ ಇನ್ವರ್ಸಿ ನೋಡಿ.

ಪಾತ್ರಗಳು[ಬದಲಾಯಿಸಿ]

ಈ ಕೆಳಗಿನವುಗಳು ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳಾಗಿವೆ. ಕೆಲವು ಹೆಸರುಗಳಲ್ಲಿ ಪದ ಪ್ರಯೋಗ, ಅಕ್ಷರಪಲ್ಲಟಗಳು ಅಥವಾ ಅಡಗಿದ ಸುಳಿವುಗಳನ್ನು ಇರಿಸಲಾಗಿದೆ:

ಪವಿತ್ರ ಪಾನೀಯ ಪಾತ್ರೆ ರಹಸ್ಯ[ಬದಲಾಯಿಸಿ]

ಲಿಯೊನಾರ್ಡೊ ಡಾ ವಿನ್ಸಿಯ ದಿ ಲಾಸ್ಟ್‌ ಸಪ್ಪರ್‌ನ ವಿವರ

ಕಾದಂಬರಿಯಲ್ಲಿ, ಲಿಯೊನಾರ್ಡೊ ಡಾ ವಿನ್ಸಿನ "ದಿ ಲಾಸ್ಟ್‌ ಸಪ್ಪರ್‌" ಕಲಾಕೃತಿಯಲ್ಲಿ ಏಸು ಕ್ರಿಸ್ತನ ಬಲಗೈಯಲ್ಲಿರುವ ವ್ಯಕ್ತಿಯ ಚಿತ್ರ ದೇವದೂತ ಜಾನ್‌ ಅಲ್ಲ, ಅದು ನಿಜವಾಗಲೂ ಮೇರಿ ಮಗ್ಡಾಲೇನ್‌ ಎಂದು ಲೀಘ್‌ ಟೀಬಿಂಗ್‌ ಸೋಫಿ ನೆವಿಗೆ ವಿವರಿಸುತ್ತಾನೆ. ಕಾದಂಬರಿಯಲ್ಲಿ, ಮಗ್ಡಾಲೇನ್‌ ಏಸು ಕ್ರಿಸ್ತನ ಹೆಂಡತಿಯಾಗಿದ್ದು, ಏಸುಕ್ರಿಸ್ತನನ್ನು ಶಿಲುಬೆಗೇರಿಸುವ ಸಮಯದಲ್ಲಿ ಮಗ್ಡಾಲೇನ್‌ ಅವನ ಮಗುವಿಗೆ ಗರ್ಭಿಣಿಯಾಗಿದ್ದಳು. ಲಿಯೊನಾರ್ಡೊನ ಕಲಾಕೃತಿಯಲ್ಲಿ ಮಧ್ಯಪಾತ್ರೆ ಅನುಪಸ್ಥಿತಿಯಿಂದ ಮೇರಿ ಮಗ್ಡಾಲೇನ್‌ಳೇ ನಿಜವಾದ ಪವಿತ್ರ ಪಾನೀಯ ಪಾತ್ರೆ ಮತ್ತು ಅವಳು ಏಸು ಕ್ರಿಸ್ತನ ರಕ್ತವನ್ನು ಮಗುವಿನ ಸ್ವರೂಪದಲ್ಲಿ ಹಂಚಿಕೊಂಡಿದ್ದಾಳೆನ್ನುವ ವಿಷಯ ಲಿಯೊನಾರ್ಡೊಗೆ ತಿಳಿದಿತ್ತೆನ್ನುವುದನ್ನು ಸೂಚಿಸುತ್ತದೆಂದು ಲೇಘ್ ಟೀಬಿಂಗ್ ಹೇಳುತ್ತಾನೆ. ಲೀಘ್‌ ಟೀಬಿಂಗ್‌ ತನ್ನ ಕಲ್ಪನೆಗೆ ಬೆಂಬಲವಾಗಿ "V" ಅಕ್ಷರದ ಆಕಾರವನ್ನು ವಿವರಿಸುತ್ತಾನೆ. ಚಿತ್ರದಲ್ಲಿ ಏಸು ಕ್ರಿಸ್ತ ಮತ್ತು ಮೇರಿಯ ದೇಹದ ಭಂಗಿಗಳಿಂದ "V" ಅಕ್ಷರವು ರಚನೆಯಾಗಿರುವುದನ್ನು ವಿವರಿಸುತ್ತಾ, "V" ಅಕ್ಷರವು ಪವಿತ್ರ ಸ್ತ್ರೀಯ ಸಂಕೇತವೆಂದು ಹೇಳುತ್ತಾನೆ. ಕಲಾಕೃತಿಯಲ್ಲಿ ದೇವದೂತ ಜಾನ್ ಅನುಪಸ್ಥಿತಿಯನ್ನು ವಿವರಿಸುತ್ತಾ,ಮೇರಿ ಮ್ಯಾಗ್ಡಲೀನ್ ಸಂಕೇತವಾಗಿರುವ "ಏಸುಕ್ರಿಸ್ತ ಪ್ರೀತಿಸುವ ದೇವದೂತ"ನೆಂದು ಜಾನ್‌ಗೆ ಕೂಡ ಉಲ್ಲೇಖಿಸಲಾಗುತ್ತದೆಂದು ತಿಳಿಸುವ ಮ‌ೂಲಕ ವಿವರಿಸಲಾಗುತ್ತದೆ. ಅವರ ವಸ್ತ್ರಗಳ ವರ್ಣ ವಿನ್ಯಾಸವು ತಲೆಕೆಳಗಾಗಿರುವುದನ್ನು ಪುಸ್ತಕದಲ್ಲಿ ಸೂಚಿಸಲಾಗಿದೆ: ಏಸು ಕ್ರಿಸ್ತ ಕೆಂಪು ಕುಪ್ಪಸ ಮತ್ತು ಕಡು ನೀಲಿ ಮೇಲಂಗಿಯನ್ನು ಧರಿಸಿದ್ದನು; ಜಾನ್‌/ಮೇರಿ ಕಡುನೀಲಿ ಕುಪ್ಪಸ ಮತ್ತು ಕೆಂಪು ಮೇಲಂಗಿಯನ್ನು ಧರಿಸಿದ್ದರು. ಇದು ವಿವಾಹದ ಎರಡು ಬೆಸೆದ ಅರ್ಧಗಳನ್ನು ಬಹುಶಃ ಸಂಕೇತಿಸುತ್ತದೆ.

ಕಾದಂಬರಿಯ ಪ್ರಕಾರ, ಪವಿತ್ರ ಪಾನೀಯ ಪಾತ್ರೆಯ ರಹಸ್ಯಗಳನ್ನು ಸೈಯನ್‌ನ ಪ್ರಿಯರಿ ಈ ಕೆಳಗಿನಂತೆ ರಕ್ಷಿಸಿದರು:

ಕಾದಂಬರಿಯ ಪ್ರಕಾರ,ಪಾನೀಯ ಪಾತ್ರೆಯ ರಹಸ್ಯವು ಲಿಯೊನಾರ್ಡೊ ಡಾ ವಿನ್ಸಿಯ ಕಲಾಕೃತಿಗಳಿಗೆ ಕೆಳಗಿನಂತೆ ಸಂಬಂಧಿಸಿದೆ:

  • ಲಿಯೊನಾರ್ಡೊ ಸೈಯನ್‌ನ ಪ್ರಿಯರಿಯ ಸದಸ್ಯನಾಗಿರುವುದರಿಂದ, ಅವನಿಗೆ ಪಾನೀಯ ಪಾತ್ರೆಯ ರಹಸ್ಯ ತಿಳಿದಿತ್ತು. ಈ ರಹಸ್ಯವು ವಾಸ್ತವವಾಗಿ ದಿ ಲಾಸ್ಟ್‌ ಸಪ್ಪರ್ ಚಿತ್ರದಲ್ಲಿ ಬಹಿರಂಗಗೊಳ್ಳುವುದು‌. ಊಟದ ಮೇಜಿನ ಮೇಲೆ ಯಾವುದೇ ನಿಜವಾದ ಮದ್ಯಪಾತ್ರೆಯಿಲ್ಲದಿರುವುದನ್ನು ಕಾಣಬಹುದು. ಚಿತ್ರದಲ್ಲಿ ಕ್ರೈಸ್ತ‌ನ ಪಕ್ಕದಲ್ಲಿ ಕುಳಿತವರು ಪುರುಷರಲ್ಲ, ಆದರೆ ಮಹಿಳೆ, ಅದು ಅವನ ಹೆಂಡತಿ ಮೇರಿ ಮಗ್ಡಾಲೇನ್‌. ಅವರ ಕಲಾಕೃತಿಗಳ ಹೆಚ್ಚಿನ ನಕಲುಗಳು ನಂತರ ಬದಲಾವಣೆಯಿಂದ ಮೂಡಿಬಂದಿದ್ದು, ಮ್ಯಾಗ್ಡೆಲೀನ್‌ಳ ಮಹಿಳಾ ಲಕ್ಷಣಗಳನ್ನು ಅಸ್ಪಷ್ಟವಾಗಿಸಿದೆ.
  • ಮೋನಾ ಲಿಸಾಉಭಯಲಿಂಗತ್ವವು ಏಸುಕ್ರಿಸ್ತ ಮತ್ತು ಮೇರಿ ಮಗ್ಡಾಲೇನ್‌ಳ ಪವಿತ್ರ ಮಿಲನದಲ್ಲಿ ಗಂಡು ಮತ್ತು ಹೆಣ್ಣಿನ ಪವಿತ್ರ ಸಂಬಂಧವನ್ನು ಬಿಂಬಿಸುತ್ತದೆ. ಪುಲ್ಲಿಂಗ ಮತ್ತು ಸ್ತ್ರೀಲಿಂಗದ ಕಾಸ್ಮಿಕ್ ಶಕ್ತಿಗಳ ನಡುವಿನ ಇಂತಹ ಸಮಾನತೆಯು ಚರ್ಚ್‌ನ ಸ್ಥಿರ ಶಕ್ತಿಗೆ ತೀವ್ರ ಬೆದರಿಕೆ ಉಂಟುಮಾಡುವಂತಹದ್ದಾಗಿತ್ತು. "ಮೋನಾ ಲೀಸಾ ಹೆಸರು ವಾಸ್ತವವಾಗಿ "ಅಮೋನ್ ಲಿಸಾ"ಗೆ ಅಕ್ಷರಪಲ್ಲಟವಾಗಿದೆ. ಪ್ರಾಚೀನ ಈಜಿಪ್ಟ್ ಧರ್ಮದ ತಂದೆ ಮತ್ತು ತಾಯಿದೇವತೆಗಳನ್ನು ಉಲ್ಲೇಖಿಸುತ್ತದೆ(ಅಮುನ್ ಮತ್ತು ಇಸಿಸ್ ಎಂದು ಹೆಸರು).

ಏಸುಕ್ರಿಸ್ತ ತಂದೆಯಾಗಿರುವ ಸಾಧ್ಯತೆಯ ಬಗ್ಗೆ ಹಲವು ಲೇಖಕರು ಕೂಡ ಊಹಾಪೋಹ ಮಾಡಿದ್ದಾರೆ. ಏಸುಕ್ರಿಸ್ತ ಶಿಲುಬೆಗೇರಿಸುವ ಮೊದಲು ಜನಿಸಿದ ಮಗಳು ತಮರ್, ಮತ್ತು ಪುನರುತ್ಥಾನದ ನಂತರ ಜನಿಸಿದ ಜೀಸಸ್ (ನ್ಯೂಟೆಸ್ಟಮೆಂಟ್‌ಜೀಸಸ್ ಜಸ್ಟಸ್‌) ಮತ್ತು ಜೋಸೆಫ್ಸ್‌ ಹೆಸರಿನ ಇಬ್ಬರು ಗಂಡು ಮಕ್ಕಳು ಸೇರಿ, ಒಟ್ಟು ಕನಿಷ್ಠ ಮೂರು ಮಕ್ಕಳಿದ್ದರು ಎಂದು ಹೇಳಲಾಗಿದೆ. ಈ ಎಲ್ಲಾ ಹೆಸರುಗಳು ಕೂಟದ ಲೇಖಕರ ಸಮಾನ ಸಂಸ್ಕೃತಿಯ ಭಾಗವಾಗಿದ್ದರೂ ಸಹ, ಎರಡು ದಶಕಗಳ ಹಿಂದೆ ಬರೆಯಲಾದ ದಿ ಹೋಲಿ ಬ್ಲಡ್‌ ಆಂಡ್‌ ದಿ ಹೋಲಿ ಗ್ರೈಲ್‌ ನಲ್ಲಿ ಈ ಹೆಸರುಗಳನ್ನು ಪ್ರಸ್ತಾಪಿಸಲಾಗಿಲ್ಲ. ದಿ ಡಾ ವಿನ್ಸಿ ಕೋಡ್‌ ನಿಗಢೂತೆಯ ಹೃದಯಭಾಗದಲ್ಲಿರುವ ರಾಜಮನೆತನದ ಸಂತತಿ ಜೋಸೆಫ್ಸ್‌ ಕುಟುಂಬದ ಸುತ್ತ ಕೇಂದ್ರೀಕೃತವಾಗಿದೆ. ಜೋಸೆಫ್ಸ್‌ ಮೊದಲ "ಬೆಸ್ತರ ದೊರೆ"ಯಾದ ಅಮಿನಾದಾಬ್‌ ಡೆಲ್‌ ಗ್ರಾಲ್‌ ಅಜ್ಜನಾಗಿರಬಹುದೆಂದು ಊಹಿಸಲಾಗಿದೆ. ಆದಾಗ್ಯೂ ಪುರುಷರು ತಮ್ಮ 40ರ ವಯಸ್ಸಿನಲ್ಲೂ ಮಕ್ಕಳಿಗೆ ನಿಯಮಿತವಾಗಿ ಜನ್ಮ ನೀಡುವುದರೊಂದಿಗೆ, ಪಾನೀಯ ಪಾತ್ರೆಯಲ್ಲಿ ಉಲ್ಲೇಖಿಸಿರುವ ವಂಶಾನ್ವೇಷಣೆಶಾಸ್ತ್ರಗಳು ಕೆಲವೇ ಮನೆತನಗಳನ್ನು ದಾಖಲಿಸಿದಂತೆ ಕಂಡುಬಂದಿದೆ.

ಸ್ವಾಗತ[ಬದಲಾಯಿಸಿ]

2004ರಲ್ಲಿ ಬ್ರೌನ್‌ನ ಕಾದಂಬರಿಯು ಭಾರಿ ಯಶಸ್ಸನ್ನು ಗಳಿಸಿತು ಮತ್ತು ಇದಕ್ಕಿಂತ ಹೆಚ್ಚು ಮಾರಾಟವಾದ ಪುಸ್ತಕವೆಂದರೆ ಜೆ. ಕೆ. ರೋಲಿಂಗ್‌ಹ್ಯಾರ್ರಿ ಪಾಟರ್‌ ಆಂಡ್‌ ದಿ ಆರ್ಡರ್‌ ಆಫ್‌ ದಿ ಫೀನಿಕ್ಸ್‌ .[೨] ಬ್ರೌನ್‌ರ ಈ ಕಾದಂಬರಿಯು ವಯಸ್ಕರ ಕಾಲ್ಪನಿಕ ಕಥೆಯ ವರ್ಗದಲ್ಲಿ ಬುಕ್‌ ಸೆನ್ಸ್‌2004ರ ವರ್ಷದ ಪುಸ್ತಕ ಪ್ರಶಸ್ತಿ ಗೆದ್ದುಕೊಂಡಿತು. ಪುಸ್ತಕವು ಅನೇಕ ಕಾರ್ಯಚಟುವಟಿಕೆಗಳಿಗೆ ಪ್ರೇರಣೆಯಾಯಿತು ಮತ್ತು ದಿ ನ್ಯೂಯಾರ್ಕ್‌ ಟೈಮ್ಸ್‌ , ಪೀಪಲ್‌ ,[ಸೂಕ್ತ ಉಲ್ಲೇಖನ ಬೇಕು] ಮತ್ತು ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗಳಲ್ಲಿ ಇದರ ಬಗ್ಗೆ ಸಕಾರತ್ಮಕ ವಿಮರ್ಶೆಗಳನ್ನು ಬರೆಯಲಾಯಿತು.[ಸೂಕ್ತ ಉಲ್ಲೇಖನ ಬೇಕು] ಇದರ ಜತೆಗೆ, ದಿ ಡಾ ವಿನ್ಸಿ ಕೋಡ್‌ ಯು ರೇಮಂಡ್‌ ಕೌರಿದಿ ಲಾಸ್ಟ್‌ ಟೆಂಪ್ಲರ್‌ ಮತ್ತು ಸ್ಟೀವ್‌ ಬೆರ್ರಿದಿ ಟೆಂಪ್ಲರ್‌ ಲೆಗಸಿ ಸೇರಿದಂತೆ ಅದೇ ರೀತಿಯ ಹಲವಾರು ಕಾದಂಬರಿಗಳಿಗೆ ಸ್ಪೂರ್ತಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] 2008ರಲ್ಲಿ 15,000ಕ್ಕಿಂತ ಹೆಚ್ಚು ಆಸ್ಟ್ರೇಲಿಯಾದ ಓದುಗರೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ, ಹಿಂದೆಂದೂ ಬರೆದಿರದ ಅತ್ಯುತ್ತಮ 101 ಪುಸ್ತಕಗಳ ಪಟ್ಟಿಯಲ್ಲಿ ಈ ಪುಸ್ತಕವು ನಾಲ್ಕನೇ ಸ್ಥಾನವನ್ನು ಪಡೆಯಿತು.[೩]

ಪುಸ್ತಕವನ್ನು ವಿಮರ್ಶಕರು ಮುಕ್ತ ಹೃದಯದಿಂದ ಸ್ವಾಗತಿಸಲಿಲ್ಲ, ಆದಾಗ್ಯೂ, ತನ್ನ ಸಾಹಿತ್ಯಕ ಮೌಲ್ಯ ಮತ್ತು ತನ್ನ ಇತಿಹಾಸದ ವರ್ಣನೆಯ ರೀತಿಗೆ ಸಂಬಂಧಿಸಿದಂತೆ, ಇದು ಹಲವಾರು ಋಣಾತ್ಮಕ ಮೌಲ್ಯಗಳಿಗೆ ಒಳಪಟ್ಟಿತು. ಇದರಲ್ಲಿನ ಬರಹ ಮತ್ತು ಐತಿಹಾಸಿಕ ನಿಖರತೆಯನ್ನು ದಿ ನ್ಯೂಯಾರ್ಕರ್‌ ,[೪] ದಿ ನ್ಯೂಯಾರ್ಕ್‌ ಟೈಮ್ಸ್‌ ,[೫] ಮತ್ತು Salon.com,[೬] ಮತ್ತು ಇತರವುಗಳಲ್ಲಿ ಕಟು ಟೀಕೆ ಮಾಡಲಾಗಿದೆ.

ಟೀಕೆಗಳು[ಬದಲಾಯಿಸಿ]

ಚಾರಿತ್ರಿಕ ತಪ್ಪುಗಳು[ಬದಲಾಯಿಸಿ]

ಈ ಪುಸ್ತಕವು ಮೊದಲು ಪ್ರಕಟವಾದಾಗ, ಕ್ರೈಸ್ತ ಮತದ ಪ್ರಧಾನ ಅಂಶಗಳು ಕ್ಯಾಥೋಲಿಕ್‌ ಚರ್ಚ್‌ನ ಇತಿಹಾಸ ಹಾಗೂ ಯುರೋಪಿನ ಕಲೆ, ಇತಿಹಾಸ, ಮತ್ತು ವಾಸ್ತುಶಿಲ್ಪದ ಬಗ್ಗೆ ತಪ್ಪು ವಿವರಣೆಗಳಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಯಿತು. ಈ ಪುಸ್ತಕವು ಕ್ಯಾಥೋಲಿಕ್‌ ಮತ್ತು ಇತರ ಕ್ರೈಸ್ತ ಸಮುದಾಯಗಳಿಂದ ಬಹುತೇಕ ಋಣಾತ್ಮಕ ಪರಾಮರ್ಶೆಗಳಿಗೆ ಗುರಿಯಾಯಿತು.

ಬ್ರೌನ್‌ ಈ ಪುಸ್ತಕವನ್ನು ಪ್ರಕಟಿಸುವ ಮೊದಲು ಹೆಚ್ಚಿನ ಸಂಶೋಧನೆ ಮಾಡಬೇಕಿತ್ತೆಂದು ಹಲವು ಸಂಶೋಧಕರು ಹೇಳಿದ್ದಾರೆ. 2004ರ ಫೆಬ್ರುವರಿ 22ರಲ್ಲಿ ದಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ನ ಲಾರಾ ಮಿಲ್ಲರ್‌ ಬರೆದ "ದಿ ಲಾಸ್ಟ್‌ ವರ್ಡ್‌: ದಿ ಡಾ ವಿನ್ಸಿ ಕಾನ್‌" ಎಂಬ ಶೀರ್ಷಿಕೆಯುಳ್ಳ ಲೇಖನವು ಪ್ರಕಟವಾಯಿತು.[೫] ಈ ಕಾದಂಬರಿಯು "ಕುಖ್ಯಾತ ಹುಸಿ ವಿಷಯವಸ್ತು", "ಅಸಂಬದ್ಧತೆ" ಮತ್ತು "ನಕಲಿ" ಆಧಾರದಿಂದ ಕೂಡಿದೆ ಎಂದು ಮಿಲ್ಲರ್‌ ಹಲವು ಬಾರಿ ದಿ ಡಾ ವಿನ್ಸಿ ಕೋಡ್‌ ಕಾದಂಬರಿಯನ್ನು ಟೀಕಿಸಿದ್ದಾರೆ ಮತ್ತು 1953ರಲ್ಲಿ ಕೇವಲ ಇಂತಹ ವಂಚನೆಗಳಿಗಾಗಿ ಜೈಲುಶಿಕ್ಷೆಗೆ ಗುರಿಯಾಗಿರುವ ಪಿರ್ರೆ ಪ್ಲಾಂಟರ್ಡ್‌ನ (ಪ್ಲಾಂಟರ್ಡ್‌ ಆ ಪಾತ್ರವನ್ನು ರಚಿಸುವವರೆಗೆ ಸೈಯನ್‌ನ ಪ್ರಿಯರಿ ಪಾತ್ರ ಇರಲಿಲ್ಲ)ಕಟ್ಟುಕತೆಗಳ ಮೇಲೆ ವಿಪರೀತ ಅವಲಂಬಿತವಾಗಿದೆ ಎನ್ನುವುದರ ಬಗ್ಗೆ ಗಮನಸೆಳೆಯುತ್ತಾರೆ.

ಬ್ರೌನ್‌ ಇತಿಹಾಸವನ್ನು ತಿರುಚಿ ಕಟ್ಟು ಕಥೆ ಬರೆದರೆಂದು ವಿಮರ್ಶಕರು ಆರೋಪಿಸಿದರು. ಉದಾಹರಣೆಗೆ, ಮಾರ್ಸಿಯಾ ಫೋರ್ಡ್‌ರವರು ಕಾದಂಬರಿಯ ಬಗ್ಗೆ ಹೀಗೆ ಬರೆದಿದ್ದಾರೆ:

Regardless of whether you agree with Brown's conclusions, it's clear that his history is largely fanciful, which means he and his publisher have violated a long-held if unspoken agreement with the reader: Fiction that purports to present historical facts should be researched as carefully as a nonfiction book would be.[೭]

ರಿಚರ್ಡ್‌ ಅಬನೆಸ್‌ ಹೀಗೆ ಬರೆದಿದ್ದಾರೆ:

The most flagrant aspect … is not that Dan Brown disagrees with Christianity but that he utterly warps it in order to disagree with it … to the point of completely rewriting a vast number of historical events. And making the matter worse has been Brown's willingness to pass off his distortions as ‘facts' with which innumerable scholars and historians agree.[೭]

ಡಾನ್ ಬ್ರೌನ್ ಹೇಳಿಕೆಯೊಂದಿಗೆ ಪುಸ್ತಕವು ಪ್ರಾರಂಭವಾಗುತ್ತದೆ "ಸೈಯನ್‌ನ ಪ್ರಿಯರಿವು 1099ರಲ್ಲಿ ಸ್ಥಾಪನೆಯಾದ ಯುರೋಪಿನ ರಹಸ್ಯ ಸಮಾಜವಾಗಿದ್ದು, ಇದೊಂದು ನೈಜ ಸಂಘಟನೆಯಾಗಿದೆ". ಸೈಯನ್‌ನ ಪ್ರಿಯರಿವು 1956ರಲ್ಲಿ ವಾಸ್ತವವಾಗಿ ಪೀರೆ ಪ್ಲಾಂಟರ್ಡ್‌ ರಚಿಸಿದ ಹುಸಿ ಕಥೆಯಾಗಿದೆ. "ಕಾದಂಬರಿಯಲ್ಲಿ ಕಲೆಗೆ ಸಂಬಂಧಿಸಿದ ಎಲ್ಲಾ ವಿವರಣೆಗಳು, ವಾಸ್ತುಶಿಲ್ಪಗಳು, ದಾಖಲೆಗಳು ಮತ್ತು ರಹಸ್ಯ ಧಾರ್ಮಿಕ ವಿಧಿಗಳು ನಿಖರವಾಗಿದೆ" ಎಂದು ಲೇಖಕರು ಹೇಳಿದ್ದಾರೆ; ಆದರೆ ಪುಸ್ತಕದಲ್ಲಿ ಚರ್ಚಿಸಲಾದ ವಿವಿಧ ಕ್ಷೇತ್ರಗಳ ಶೈಕ್ಷಣಿಕ ವಿದ್ವಾಂಸರು ಈ ಹೇಳಿಕೆಯನ್ನು ವಿರೋಧಿಸಿದ್ದಾರೆ.[೮]

ಇದರ ಕುರಿತು ಹಲವಾರು ಪುಸ್ತಕಗಳು ಪ್ರಕಟವಾಗಿದ್ದು, ನಿಖರತೆಯ ಹೇಳಿಕೆಯನ್ನು ರುಜುವಾತು ಮಾಡುವುದು ಕಷ್ಟವೇಕೆಂದು ಅವುಗಳಲ್ಲಿ ವಿವರಣೆ ನೀಡಲಾಗಿದೆ. ದಿ ಡಾ ವಿನ್ಸಿ ಕೋಡ್‌ ನಲ್ಲಿ ಕೃತಿಚೌರ್ಯ ಆರೋಪಿಸಿ ಎರಡು ದಾವೆಗಳನ್ನು ದಾಖಲು ಮಾಡಲಾಗಿತ್ತು. 2006ರ ಫೆಬ್ರುವರಿಯಲ್ಲಿ ದಿ ಹೋಲಿ ಬ್ಲಡ್‌ ಮತ್ತು ದಿ ಹೋಲಿ ಗ್ರೈಲ್‌ ನ(ನಜರತ್‌ನ ಏಸುಕ್ರಿಸ್ತನ ಪತ್ನಿ ಮತ್ತು ಅವನ ಮಗುವಿನ ತಾಯಿಯಾಗಿ ಮೇರಿ ಮಗ್ಡಾಲೇನ್‌ಳ ಪಾತ್ರದ ಉದ್ದೇಶಪೂರ್ವಕ ಕಾಲ್ಪನಿಕವಲ್ಲದ ವಿವರಣೆ) ಲೇಖಕರು ಬ್ರೌನ್‌ರ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊದಲ ಮೊಕದ್ದಮೆಯನ್ನು ದಾಖಲಿಸಿದರು. ದಾವೆ ಡಾನ್‌ ಬ್ರೌನ್‌ರ ಪರವಾಗಿ ಬಂದಿತ್ತು. ಅದೇ ವರ್ಷ ಆಗಸ್ಟ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ದಿ ವ್ಯಾಟಿಕನ್‌ ಬಾಯ್ಸ್‌ ಪುಸ್ತಕದ ಲೇಖಕರಾದ ಜ್ಯಾಕ್‌ ಡನ್‌ ದಾಖಲಿಸಿದ ಎರಡನೇ ಮೊಕದ್ದಮೆಗೆ ಸಂಬಂಧಿಸಿದಂತೆ ಯಾವುದೇ ತೀರ್ಪು ಇನ್ನೂ ಬಂದಿಲ್ಲ.

ಬ್ರೌನ್‌ ತನ್ನ ಎರಡು ಕಾದಂಬರಿಗಳಾದ 1983ರಲ್ಲಿ ಮೊದಲಿಗೆ ಪ್ರಕಟವಾದ ದಿ ಡಾ ವಿನ್ಸಿ ಲೆಗಸಿ ಮತ್ತು 2000ರಲ್ಲಿ ಮೂಲತಃ ಪ್ರಕಟವಾದ ಡಾಟರ್‌ ಆಫ್‌ ಗಾಡ್‌ ನಿಂದ ಕೃತಿಚೌರ್ಯ ಮಾಡಿದ್ದಾರೆ ಎಂದು ಲೆವಿಸ್‌ ಪೆರ್ಡ್ಯು ಮೊಕದ್ದಮೆ ದಾಖಲಿಸಿದ್ದಾರೆ. ಅವರು ಪುಸ್ತಕ ಮತ್ತು ಚಿತ್ರದ ವಿತರಣೆಯನ್ನು ನಿಲ್ಲಿಸಲು ಕೋರಿದ್ದರು. ಆದರೆ, ನ್ಯೂಯಾರ್ಕ್‌ನಲ್ಲಿರುವ US ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ ಜಾರ್ಜ್‌ ಡೆನಿಯಲ್ಸ್‌ 2005ರಲ್ಲಿ ಪೆರ್ಡ್ಯು ವಿರುದ್ಧ ತೀರ್ಪನ್ನು ನೀಡಿದರು. ತೀರ್ಪಿನ ಪ್ರಕಾರ, "ವಿವೇಚನಾಶಕ್ತಿಯುಳ್ಳ ಸಾಮಾನ್ಯ ವೀಕ್ಷಕರು ದಿ ಡಾ ವಿನ್ಸಿ ಕೋಡ್‌ ನಿಜವಾಗಿ "ಡಾಟರ್‌ ಆಫ್‌ ಗಾಡ್‌"ಗೆ ಹೋಲಿಕೆಯಾಗುತ್ತದೆ ಎಂದು ತೀರ್ಮಾನಿಸುವುದಿಲ್ಲ ಮತ್ತು "ಸ್ವಲ್ಪ ಸಮಾನವಾಗಿರುವ ಅಂಶಗಳು ಸಾಮಾನ್ಯ ಅಥವಾ ಸಂರಕ್ಷಿಸಲಾಗದ ಕಲ್ಪನೆಗಳ ಮಟ್ಟದಲ್ಲಿವೆ."[೯] ಈ ತೀರ್ಪಿನ ವಿರುದ್ಧ ಪೆರ್ಡ್ಯು ಮೇಲ್ಮನವಿ ಸಲ್ಲಿಸಿದರೂ ಸಹ, 2ನೇ US ಸರ್ಕ್ಯುಟ್‌ ಕೋರ್ಟ್‌ ಆಫ್‌ ಅಪೀಲ್ಸ್‌ ಹಿಂದಿನ ತೀರ್ಪನ್ನು ಎತ್ತಿಹಿಡಿದು,ಪೆರ್ಡು ವಾದಗಳು ಯಾವುದೇ "ಅರ್ಹತೆಯಿಂದ ಕೂಡಿಲ್ಲ"ವೆಂದು ಹೇಳಿತು.[೧೦]

ಹೆಚ್ಚು ವಿವಾದಾತ್ಮಕವಾಗಿರುವ ಕೆಲವು ವಾಸ್ತವ ಅಂಶಗಳ ಬಗ್ಗೆ ಡಾನ್ ಬ್ರೌನ್ ತಮ್ಮ ವೆಬ್‌ಸೈಟ್‌ನಲ್ಲಿ ಸಲಹೆಗಳನ್ನು ನೀಡದೇ ಕೈಬಿಟ್ಟಿದ್ದಾರೆ. "ದಿ "FACT‌" ಪುಟದಲ್ಲಿ ಕಾಲ್ಪನಿಕ ಪಾತ್ರಗಳಿಂದ ಚರ್ಚಿಸಲಾದ ಯಾವುದೇ ಪ್ರಾಚೀನ ಸಿದ್ಧಾಂತಗಳ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಾಗಿಲ್ಲ. ಆ ಕಲ್ಪನೆಗಳನ್ನು ಅರ್ಥೈಸಿಕೊಳ್ಳುವುದನ್ನು ಓದುಗರಿಗೆ ಬಿಡಲಾಗಿತ್ತು".[೧೧] ಆದರೂ, "ಕಾಲ್ಪನಿಕ ಪಾತ್ರಗಳು ಈ ನೈಜ ಅಂಶಗಳನ್ನು ವ್ಯಾಖ್ಯಾನಿಸಿವೆ ಮತ್ತು ಚರ್ಚಿಸಿವೆ", "ಈ ಪಾತ್ರಗಳು ಚರ್ಚಿಸಿದ ಕೆಲವು ಸಿದ್ಧಾಂತಗಳು ಅರ್ಹತೆಯಿಂದ ಕೂಡಿದೆ ಎನ್ನುವುದು ನನ್ನ ನಂಬಿಕೆ." ಮತ್ತು "ದಿ ಡಾ ವಿನ್ಸಿ ಕೋಡ್‌ನ ಹಿಂದಿನ ರಹಸ್ಯವನ್ನು ಉತ್ತಮವಾಗಿ ದಾಖಲಿಸಲಾಗಿದೆ ಮತ್ತು ಇದನ್ನು ತಳ್ಳಿಹಾಕಲಾಗದಷ್ಟು ಮಹತ್ವ ಪಡೆದಿದೆ". ಆದ್ದರಿಂದ ಪುಸ್ತಕದ ನೈಜ ವಿಷಯವೇನು ಎಂಬ ಬಗ್ಗೆ ಗೊಂದಲ ಮುಂದುವರಿದಿರುವುದಕ್ಕೆ ಕಾರಣ ಸಂಪೂರ್ಣವಾಗಿ ಅರ್ಥವಾಗುವಂತಹದ್ದಾಗಿದೆ.

ಬ್ರೌನ್‌ ತಮ್ಮ ಪುಸ್ತಕದಲ್ಲಿರುವ ಚಾರಿತ್ರಿಕ ಮಾಹಿತಿಯ ನಿಖರತೆಯ ಬಗ್ಗೆ ನೀಡಿದ ಮುಂಚಿನ ಹೇಳಿಕೆಗಳಲ್ಲಿ ಗಟ್ಟಿಯಾದ ದನಿಯಿತ್ತು. 2003ರಲ್ಲಿ ತಮ್ಮ ಕಾದಂಬರಿಯ ಮಾರಾಟ ಪ್ರಚಾರದಲ್ಲಿ,ಅವರನ್ನು "ನಿಮ್ಮ ಕಾದಂಬರಿಯಲ್ಲಿರುವ ಇತಿಹಾಸದ ಯಾವ ಭಾಗಗಳು ನಿಜವಾಗಲೂ ಹಿಂದೆ ನಡೆದಿವೆ?" ಎಂದು ಸಂದರ್ಶನಗಳಲ್ಲಿ ಕೇಳಲಾಯಿತು. ಅದಕ್ಕೆ ಅವರು, "ಕಾದಂಬರಿಯಲ್ಲಿರುವ ಎಲ್ಲವು ಹಿಂದೆ ನಡೆದ ಘಟನೆಗಳಾಗಿವೆ" ಎಂದು ಉತ್ತರಿಸಿದರು. 2003ರಲ್ಲಿ CNNನ ಮಾರ್ಟಿನ್‌ ಸವಿಡ್ಜ್‌ರೊಂದಿಗಿನ ಸಂದರ್ಶನದಲ್ಲಿ, ಮಾರ್ಟಿನ್‌ ಬ್ರೌನ್‌ರನ್ನು, ನಿಮ್ಮ ಕಾದಂಬರಿಯಲ್ಲಿರುವ ಚಾರಿತ್ರಿಕ ಹಿನ್ನಲೆ ಎಷ್ಟರ ಮಟ್ಟಿಗೆ ಸತ್ಯ? ಎಂದು ಪ್ರಶ್ನಿಸಿದರು. ಅದಕ್ಕೆ ಅವರು, "99%ರಷ್ಟು ನಿಜವಾದುದು ... ಹಿನ್ನಲೆಗಳೆಲ್ಲವೂ ನಿಜವಾದುದು" ಎಂದು ಉತ್ತರಿಸಿದ್ದರು. ABC ನ್ಯೂಸ್‌ನಲ್ಲಿನ ವಿಶೇಷ ಸಂದರ್ಶನದಲ್ಲಿ ಎಲಿಜಬೆತ್‌ ವರ್ಗಾಸ್‌ ಬ್ರೌನ್‌ರನ್ನು ಒಂದುವೇಳೆ ಪುಸ್ತಕವನ್ನು ಕಾಲ್ಪನಿಕವಲ್ಲದ ಕೃತಿಯಂತೆ ಬರೆದಿದ್ದರೆ ಅದು ಭಿನ್ನವಾಗಿರುತ್ತಿರಲಿಲ್ಲವೇ ಎಂದು ಪ್ರಶ್ನಿಸಿದಾಗ, "ಹಾಗೆಂದು ತಮಗೆ ಅನಿಸುವುದಿಲ್ಲ" ಎಂದು ಅವರು ಉತ್ತರಿಸಿದ್ದರು.[೧೨] ಇತ್ತೀಚೆಗೆ ಬ್ರೌನ್‌ ಸಂದರ್ಶನಗಳಿಂದ ದೂರ ಸರಿದಿದ್ದು, ಹಾಗಾಗಿ ಅವರು ತಮ್ಮ ಕೆಲವು ಸಾರ್ವಜನಿಕ ಹೇಳಿಕೆಗಳಲ್ಲಿ ತಮ್ಮ ವಾದಗಳ ನಿಖರತೆಯ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಕಾದಂಬರಿಯ ಬಗ್ಗೆ ಹಲವು ಸೂಕ್ತ ಸಂದೇಹಾಸ್ಪದ ಟೀಕೆಗಳಿದ್ದರೂ ಸಹ, ಕಾದಂಬರಿಯಲ್ಲಿರುವ ಚಾರಿತ್ರಿಕ ಅಂಶಗಳು ನಿಖರವಾಗಿದೆ ಎಂಬ ಬ್ರೌನ್‌ ತಮ್ಮ ಹಿಂದಿನ ಸಮರ್ಥನೆಗಳಿಂದ ಹಿಂದೆ ಸರಿಯಲಿಲ್ಲ.

2005ರಲ್ಲಿ ಬ್ರಿಟಿಷ್‌ TV ಚ್ಯಾನಲ್‌ 4ನಲ್ಲಿ ಪ್ರಸಾರವಾದ "ದಿ ರಿಯಲ್‌ ಡಾ ವಿನ್ಸಿ ಕೋಡ್‌" ಎಂಬ ಡಾನ್‌ ಬ್ರೌನ್‌, ಬೈಜೆಂಟ್‌, ಲೈಹ್‌ ಮತ್ತು ಲಿಂಕನ್‌ರ ನಡುವಿನ ಮುಖ್ಯ ವಾದವಿವಾದಗಳ ವಿವರವಾದ ಕಾರ್ಯಕ್ರಮ ಬಿಡುಗಡೆಯಾಯಿತು. ಇದನ್ನು UK TV ಗಣ್ಯ ವ್ಯಕ್ತಿ ಟೋನಿ ರಾಬಿನ್ಸನ್‌ ಸಂಪಾದಿಸಿದ್ದಾರೆ ಮತ್ತು ನಿರೂಪಿಸಿದ್ದಾರೆ. ದಿ ಡಾ ವಿನ್ಸಿ ಕೋಡ್‌ ನಲ್ಲಿ "ಪೂರ್ಣ ಸತ್ಯ" ಎಂದು ಬ್ರೌನ್‌ರಿಂದ ಉಲ್ಲೇಖಿಸಿದ ಹಲವು ಮುಖ್ಯ ಪಾತ್ರಗಳೊಂದಿಗೆ ಸುದೀರ್ಘ ಸಂದರ್ಶನಗಳನ್ನು ಈ ಕಾರ್ಯಕ್ರಮವು ಒಳಗೊಂಡಿತ್ತು. ಜೆರಾರ್ಡ್‌ ಡೆ ಸೆಡೆನ ಪುತ್ರ ಅರ್ನೊಡ್‌ ಡೆ ಸೆಡೆ, ತನ್ನ ತಂದೆ ಮತ್ತು ಪ್ಲಾಂಟರ್ಡ್‌ ಏಸುಕ್ರಿಸ್ತ ವಂಶಜಸಿದ್ಧಾಂತದ ತಳಹದಿಯಾದ ಪ್ರಿಯಾರ್ ಡೆ ಸಿಯೊನ್‌ನ ಅಸ್ತಿತ್ವವನ್ನು ರಚಿಸಿದ್ದಾರೆ ಎಂದು ಹೇಳಿದ್ದಾರೆ.-ಉಲ್ಲೇಖಕ್ಕೆ "ಫ್ರಾಂಕ್ಲಿ, ಇಟ್‌ ವಾಸ್‌ ಪಿಫಲ್‌" ಕಾರ್ಯಕ್ರಮದಲ್ಲಿ ಅರ್ನೊಡ್‌ ಡೆ ಸೆಡೆ. ಮೇರಿ ಮಗ್ಡಾಲೇನ್‌ಫ್ರಾನ್ಸ್‌ಗೆ ತೆರಳಿದ್ದರೆಂಬ ವಾದ ಮುಂತಾದ ಸಂಬಂಧಿತ ಕಥೆಗಳು ಮತ್ತು ರೋಸಲಿನ್‌ ಕ್ರೈಸ್ತಮಂದಿರ ಪಾನೀಯ ಪಾತ್ರೆಯೊಂದಿಗೆ ಹೊಂದಿದ್ದ ಸಂಬಂಧದ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಲಾಗಿದೆ.

ಕ್ರೈಸ್ತ ಮತದ ಹಿಂದಿನ ಚಿತ್ರಣ[ಬದಲಾಯಿಸಿ]

ದಿ ಡಾ ವಿನ್ಸಿ ಕೋಡ್‌ ನ ಪ್ರಕಾರ, ರೋಮನ್‌ ಚರ್ಕವರ್ತಿ ಕಾಂಸ್ಟಾಂಟೈನ್‌ I ನಾಸ್ಟಿಕ್‌ವಾದವನ್ನು ಅಡಗಿಸಿದನು. ಏಕೆಂದರೆ ಏಸುಕ್ರಿಸ್ತನನ್ನು ಶುದ್ಧ ಮಾನವನಂತೆ ಬಿಂಬಿಸಲಾಗಿತ್ತು. ಕಾದಂಬರಿಯ ತರ್ಕಗಳು ಈ ಕೆಳಗಿನಂತಿದೆ.[೧೩] ಕಾಂಸ್ಟಾಂಟೈನ್‌ ರೋಮ್‌ ಸಾಮ್ರಾಜ್ಯದಲ್ಲಿ ಕ್ರೈಸ್ತಮತವನ್ನು ಏಕರೂಪದ ಧರ್ಮವಾಗಿ ಪಾತ್ರವಹಿಸಲು ಬಯಸುತ್ತಿದ್ದನು. ಪಾಗನ್‌ ನಾಯಕರಿಗೆ ಸಮಾನವಾದ ದೇವಮಾನವನ ಲಕ್ಷಣಗಳನ್ನು ಒಳಗೊಂಡಿದ್ದರೆ ಮಾತ್ರ, ಕ್ರೈಸ್ತಧರ್ಮವು ಪಾಗನ್‌ಗಳಿಗೆ ಪ್ರಿಯವಾಗುತ್ತದೆಂದು ಅವನು ಭಾವಿಸಿದ. ನಾಸ್ಟಿಕ್‌ ಪಂಥದ ತತ್ವಗಳ ಪ್ರಕಾರ, ಏಸುಕ್ರಿಸ್ತ ದೇವಮಾನವನಲ್ಲ, ಸಾಮಾನ್ಯ ಪ್ರವಾದಿಯಾಗಿದ್ದನು. ಹಾಗಾಗಿ, ಏಸುಕ್ರಿಸ್ತನ ಬಗ್ಗೆ ಜನರ ಅಭಿಪ್ರಾಯವನ್ನು ಬದಲಿಸಲು, ಕಾಂಸ್ಟಾಂಟೈನ್‌ ನಾಸ್ಟಿಕ್‌ ಪಂಥದ ತತ್ವಗಳನ್ನು ನಾಶಪಡಿಸಿದನು ಮತ್ತು ಮ್ಯಾಥೀವ್ಸ್‌, ಮಾರ್ಕ್‌, ಲ್ಯುಕ್‌, ಮತ್ತು ಜಾನ್‌ರ ತತ್ವಗಳನ್ನು ಪ್ರೋತ್ಸಾಹಿಸಿದನು. ಇದರಲ್ಲಿ ಏಸುಕ್ರಿಸ್ತನನ್ನು ದೇವರು ಅಥವಾ ಅರ್ಧ ದೇವರಂತೆ ಬಿಂಬಿಸಲಾಗಿತ್ತು.

ವಾಸ್ತವಿಕವಾಗಿ ನಾಸ್ಟಿಕ್‌ವಾದದಲ್ಲಿ ಏಸುಕ್ರಿಸ್ತನನ್ನು ಮಾನವನಂತೆ ವರ್ಣಿಸಲಿಲ್ಲ.[೧೪] ನಾಸ್ಟಿಕ್ ಪಂಡಗದ ಕೆಲವು ಬರಹಗಳಲ್ಲಿ ಏಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಸಂಪೂರ್ಣವಾಗಿ ಮಾನವನ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದನು ಎಂದು ಬಿಂಬಿಸಲಾಗಿದೆ. ಒಂದು ಉದಾಹರಣೆ, ಮೇರಿಯ ತತ್ವ.[ಸೂಕ್ತ ಉಲ್ಲೇಖನ ಬೇಕು] ಆದರೆ ಸಾಮಾನ್ಯವಾಗಿ ಏಸುಕ್ರಿಸ್ತನ ಬಗ್ಗೆ ನಾಸ್ಟಿಕ್ ಪಂಥದ ಚಿತ್ರಣ ಸ್ಪಷ್ಟವಾಗಿಲ್ಲ. ಹಲವು ನಾಸ್ಟಿಕ್ ಪಂಥದ ಬರಹಗಳಲ್ಲಿ ಕ್ರೈಸ್ತನನ್ನು ಶುದ್ಧ ದೇವರೆಂದು ಮತ್ತು ಅವನ ಶರೀರವು ಕೇವಲ ಭ್ರಮೆ ಎಂದು ವರ್ಣಿಸಲಾಗಿದೆ (ಡೊಸೀಟಿಸಮ್‌ ನೋಡಿ).[೧೫] ಕೆಲವು ನಾಸ್ಟಿಕ್‌ನ ಒಳಪಂಗಡಗಳು ಕ್ರೈಸ್ತನನ್ನು ದೇವರಂತೆ ಕಾಣುತ್ತಾರೆ. ಏಕೆಂದರೆ ಅವರು ದುಷ್ಟಶಕ್ತಿಯನ್ನು ಬೌತಿಕವಸ್ತುವಂತೆ ಪರಿಗಣಿಸಿದ್ದರು. ಹಾಗಾಗಿ ಭೌತಿಕ ಶರೀರದಲ್ಲಿ ದೈವಿಕ ಶಕ್ತಿ ನೆಲೆಸುವುದಿಲ್ಲವೆಂದು ನಂಬಿದ್ದರು.[೧೬] ಕ್ರೈಸ್ತನ ಪೂರ್ಣ ಮಾನವ ಮತ್ತು ದೈವತ್ವದ ಅಂಶಗಳನ್ನು ಗುರುತಿಸುವ ಕೌನ್ಸಿಲ್ ಆಫ್ ನಿಕಾಯಿಯ ನಿರ್ಧಾರವನ್ನು ಕೂಡ ಡಾ ವಿನ್ಸಿ ಕೋಡ್ ಸಮೀಪದ ಮತದಿಂದ ಬಿಂಬಿಸುತ್ತದೆ. ಆದರೆ ಕೆಲವು ಲೇಖಕರು ಇದನ್ನು ವಿರೋಧಿಸಿದ್ದಾರೆ.[೧೭][೧೮]

ಸಾಹಿತ್ಯ ವಿಮರ್ಶೆ[ಬದಲಾಯಿಸಿ]

ಕಲಾತ್ಮಕ ಅಥವಾ ಸಾಹಿತ್ಯಕ ಅರ್ಹತೆಯ ಕೊರತೆಯಿಂದ ಹಾಗೂ ಬ್ರಿಟಿಷ್‌ ಮತ್ತು ಫ್ರೆಂಚ್‌ ಪಾತ್ರಗಳಲ್ಲಿ ರೂಢಮಾದರಿಯ ವರ್ಣನೆಯಿಂದಾಗಿ ಸಾಹಿತ್ಯಕ ವಲಯಗಳಲ್ಲಿ ಕಾದಂಬರಿಯು ಹಲವು ಟೀಕೆಗಳಿಗೆ ಗುರಿಯಾಗಿದೆ.

ಸಲ್ಮಾನ್‌ ರಷ್ಡಿ ತಮ್ಮ ಉಪನ್ಯಾಸದ ಸಂದರ್ಭದಲ್ಲಿ, "'ದಿ ಡಾ ವಿನ್ಸಿ ಕೋಡ್‌' ಕಾದಂಬರಿಯಿಂದ ನಾನು ಪ್ರಾರಂಭಿಸುವುದಿಲ್ಲ. 'ಈ ಕಾದಂಬರಿ ತೀರಾ ಕೆಟ್ಟದಾಗಿದ್ದು ಕೆಟ್ಟ ಕಾದಂಬರಿಗಳಿಗೆ ಕೆಟ್ಟ ಹೆಸರನ್ನು ನೀಡಿದೆ" ಎಂದು ಟೀಕಿಸಿದ್ದಾರೆ.[೧೯]

ಸ್ಟೀಫನ್‌ ಫ್ರೈರು ಬ್ರೌನ್‌ನ ಬರಹಗಳನ್ನು ವಿವರಿಸುತ್ತ "ಸಂಪೂರ್ಣ ಅತಿಸಾರ" ಮತ್ತು "ತೀರಾ ಕೆಟ್ಟ ಸಗಣಿ " [೨೦] ಎಂದು ಉಲ್ಲೇಖಿಸಿದ್ದಾರೆ. 2006ರ ಜೂನ್‌ 14ರಲ್ಲಿ ನೇರ ಹರಟೆಯಲ್ಲಿ, "ಪವಿತ್ರ ಪಾನೀಯ ಪಾತ್ರೆ ಮತ್ತು ಮ್ಯಾಸನ್ಸ್ ಮತ್ತು ಕ್ಯಾಥೋಲಿಕ್‌ ಒಕ್ಕೂಟಗಳಿಗೆ ಸಂಬಂಧಿಸಿದ ಎಲ್ಲಾ ಪುಸ್ತಕಗಳನ್ನು ಮತ್ತು ಅವೆಲ್ಲ ಸೋರಿಕೆಯನ್ನು ನಾನು ಅಸಹ್ಯಪಡುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ಕಲೆ ಮತ್ತು ಇತಿಹಾಸದಲ್ಲಿ ಆಸಕ್ತಿ ಮತ್ತು ರೋಮಾಂಚನ ವಿಷಯಗಳು ಇನ್ನೂ ಹೆಚ್ಚಾಗಿವೆ ಎಂದರ್ಥವೆಂದು ಹೇಳಿದ್ದಾರೆ. ಹಿಂದಿನ ಕೆಟ್ಟ ವಿಷಯಗಳನ್ನು ಯೋಚಿಸುವ ಇಚ್ಛೆಯು ಮತ್ತು ಕಾಲ್ಪನಿಕ ರೀತಿಯಲ್ಲಿ ಬಲಾಢ್ಯರು ಎಂದು ಯೋಚಿಸುವುದರಿಂದ, ಮಾನವಪೀಳಿಗೆಯಲ್ಲಿ ಕೆಟ್ಟ ಮತ್ತು ಸೋಮಾರಿತನ ನಡವಳಿಕೆ" ಎಂದು ಸ್ಪಷ್ಟಪಡಿಸಿದ್ದಾರೆ.[೨೧]

2005ರಲ್ಲಿ ಯುನಿವರ್ಸಿಟಿ ಆಫ್‌ ಮೈನ್‌ನ ಉದ್ಘಾಟನಾ ಭಾಷಣದಲ್ಲಿ ಪ್ರಸಿದ್ಧ ಲೇಖಕ ಸ್ಟೀಫನ್‌ ಕಿಂಗ್‌, "ಅಂತಹ ಸಾಹಿತ್ಯಗಳು ಬೌದ್ಧಿಕವಾಗಿ ಕ್ರ್ಯಾಫ್ಟ್‌ ಮಕರೊನಿ ಆಂಡ್‌ ಚೀಸ್‌ಗೆ ಸಮನಾಗಿದೆ" ಎಂದು ಕರೆಯುವ ಮೂಲಕ ಡಾನ್‌ ಬ್ರೌನ್‌ರ ಬರಹ ಮತ್ತು "ಜೋಕ್ಸ್‌ ಫಾರ್‌ ದಿ ಜಾನ್‌" ಅನ್ನು ಒಂದೇ ಮಟ್ಟದಲ್ಲಿರಿಸಿದರು.[೨೨] "ಡಾನ್‌ ಬ್ರೌನ್‌ರ ಹೆಚ್ಚು ಮಾರಾಟವಾದ ಪುಸ್ತಕವು ಇಂಗ್ಲೀಷ್‌ ವಾಕ್ಯವನ್ನು ಹೇಗೆ ಬರೆಯಲಾಗುವುದಿಲ್ಲ ಎನ್ನುವುದರ ಪ್ರವೇಶಿಕೆಯಾಗಿದೆ" ಎಂದು ಕಾದಂಬರಿ ಆಧಾರಿತ ಚಲನಚಿತ್ರದ ವಿಮರ್ಶಿಸುವ ಸಂದರ್ಭದಲ್ಲಿ ದಿ ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿ ಕರೆಯಲಾಗಿದೆ.[೨೩] ದಿ ನ್ಯೂಯಾರ್ಕರ್‌ ವಿಮರ್ಶಕ ಅಂಥೋನಿ ಲೇನ್‌ ಇದನ್ನು "ಅಪ್ಪಟ ನಿರುಪಯುಕ್ತ" ಎಂದು ಟೀಕಿಸಿದ್ದಾರೆ ಮತ್ತು "ಉತ್ತಮ ಬರಹ ಶೈಲಿಯ ನಾಶವೆಂದು" ಹೀಯಾಳಿಸಿದ್ದಾರೆ.[೪] ಬ್ರೌನ್‌ ಒಬ್ಬ "ಸಾಹಿತ್ಯದ ಇತಿಹಾಸದಲ್ಲಿ ಅತಿ ಕಳಪೆ ಮಟ್ಟದ ಶೈಲಿಗಾರ" ಮತ್ತು ಬ್ರೌನ್‌ನ "ಬರಹವು ಕೇವಲ ಕೆಟ್ಟದಾಗಿದೆ ಮಾತ್ರವಲ್ಲ, ಅದು ತತ್ತರಗೊಳಿಸುವ, ಅಡ್ಡಾದಿಡ್ಡಿಯಾದ, ನಿರ್ಲಕ್ಷ್ಯದಿಂದ, ಹೆಚ್ಚಾಗಿ ರಚನೆ ಕೆಟ್ಟದಾಗಿದೆ" ಎಂದು ಲಾಂಗ್ವೇಜ್ ಲಾಗ್‌ನಲ್ಲಿ ಭಾಷಾತಜ್ಞ ಜಿಯೊಪ್ರೈ ಪುಲ್ಲಮ್‌ ಮತ್ತಿತರರು ಟೀಕೆಗಳನ್ನು ಮಾಡಿದ ಅನೇಕ ಪ್ರವೇಶಗಳನ್ನು ಕಳಿಸಿದ್ದಾರೆ.[೨೪] ರೋಜರ್‌ ಎಬರ್ಟ್‌ "ಸ್ವಲ್ಪ ಚೆಂದದ ಶೈಲಿಯನ್ನೊಳಗೊಂಡ ಕಳಪೆ ಗುಣಮಟ್ಟದ ಬರಹವಾಗಿದೆ." ಆದರೂ "ಆಸಕ್ತಿದಾಯಕ ಕಥಾವಸ್ತುವನ್ನು ಒದಗಿಸಿದೆ." ಎಂದು ವರ್ಣಿಸಿದ್ದಾರೆ[೨೫]

ವಿಡಂಬನ ಬರಹಗಳು[ಬದಲಾಯಿಸಿ]

2005.

ದಿ ವಾ ಡಿನ್ಸಿ ಕೋಡ್‌ ನೊಂದಿಗೆ ಆಡಮ್‌ ರಾಬರ್ಟ್ಸ್‌ ಮತ್ತು ದಿ ಆಸ್ಟಿ ಸ್ಪುಮಂಟೆ ಕೋಡ್‌ ನೊಂದಿಗೆ ಟೋಬಿ ಕ್ಲೆಮೆಂಟ್ಸ್‌ರು ಈ ಪುಸ್ತಕದ ಬಗ್ಗೆ ವಿಡಂಬನ ಬರಹಗಳನ್ನು ಬರೆದಿದ್ದಾರೆ.

2005ರ ಅಂತ್ಯದ ವೇಳೆಗೆ ಆಸ್ಟ್ರೇಲಿಯಾದ ಕಿರುತೆರೆ ಸರಣಿಗಳ ಟೆಲಿಮೂವಿ ಕ್ಯಾಥ್‌ ಆಂಡ್‌ ಕಿಮ್‌ ಚಿತ್ರದ ಆವೃತ್ತಿಯನ್ನು ಡಾ ಕ್ಯಾಥ್‌ ಆಂಡ್‌ ಕಿಮ್‌ ಕೋಡ್‌ ಎಂಬ ವಿಡಂಬನೆ ಮ‌ೂಲಕ ಪ್ರಸಾರ ಮಾಡಿತು.

2006

ದಿ BBCಡೆಡ್‌ ರಿಂಜರ್ಸ್‌ ಕಾರ್ಯಕ್ರಮದಲ್ಲಿ ದಿ ಡಾ ವಿನ್ಸಿ ಕೋಡ್‌ ಅನ್ನು ಡಾ ರೋಫ್‌ ಹ್ಯಾರಿಸ್‌ ಕೋಡ್‌ ಎಂದು ಕರೆಯುವ ಮೂಲಕ ವಿಡಂಬನೆ ಮಾಡಿತು.

ಜನಪ್ರಿಯ ದಕ್ಷಿಣ ಆಫ್ರಿಕಾದ ರಾಜಕೀಯ ವ್ಯಂಗ್ಯಚಿತ್ರಕಾರ ಜ್ಯಾಪಿರೊ ಮಾಜಿ ಉಪಾದ್ಯಕ್ಷ ಜಾಕೊಬ್‌ ಜುಮಾರನ್ನು ಅಣಕಿಸುವ ಚಿತ್ರಗಳನ್ನೊಳಗೊಂಡ ಡಾ ಜುಮಾ ಕೋಡ್‌ ಶೀರ್ಷಿಕೆಯ ಪುಸ್ತಕವನ್ನು ಪ್ರಕಟಿಸಿದರು.

2007

ಸೌತ್‌ ಪಾರ್ಕ್‌ ಪ್ರಸಂಗ "ಫಂಟ್ಯಾಸ್ಟಿಕ್ ಈಸ್ಟರ್‌ ಸ್ಪೆಶಲ್‌" ಮತ್ತು ರಾಬರ್ಟ್‌ ರ‌್ಯಾಂಕಿನ್‌ನ ಕಾದಂಬರಿ ದಿ ಡಾ-ಡಾ-ಡೆ-ಡಾ-ಡಾ ಕೋಡ್‌ ನಲ್ಲಿ ಈ ಪುಸ್ತಕವನ್ನು ವಿಡಂಬನೆ ಮಾಡಲಾಗಿದೆ.

ಲಸಿ ಮತ್ತು ಸೈಲಾಸ್‌ ಪಾತ್ರಗಳನ್ನು ಎಪಿಕ್‌ ಮೂವೀ ಚಲನಚಿತ್ರದಲ್ಲಿ ವಿಡಂಬನೆ ಮಾಡಲಾಗಿದೆ. ದಿ ಡಾ ವಿನ್ಸಿ ಕೋಡ್‌ನ ಪ್ರಾರಂಭದ ಕಥೆಗೆ ಸಮಾನವಾದ ದೃಶ್ಯದಿಂದ ಚಿತ್ರ ಪ್ರಾರಂಭವಾಗುವುದು. ಇದರಲ್ಲಿನ ವಸ್ತುಸಂಗ್ರಹಾಲವೊಂದರಲ್ಲಿ ಸೋಫಿ ನೆವಿಯ ಅಣಕವಾದ ತಬ್ಬಲಿ ಲೂಸಿಯನ್ನು ಸೈಲಾಸ್ ಬೆನ್ನಟ್ಟುತ್ತಾನೆ. ಚಲನಚಿತ್ರದುದ್ದಕ್ಕೂ,ಸೈಲಾಸ್‌ ಲ್ಯಾಟಿನ್‌ ಭಾಷೆಯನ್ನು ಮಾತನಾಡುವನು. ಆದರೂ, ಅವನ ಮಾತಿನ ಭಾಷಾಂತರಗಳು ವಿಡಂಬನೆ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ತಪ್ಪಾಗಿದೆ. (ಉದಾ. ಸೈಲಾಸ್‌ , "ಎಟ್‌ ಟು, ಬ್ರುಟ್‌?" ಆಸ್ಲೊಗೆ ಹೇಳಿದ್ದರೂ ಕೂಡ ಅದನ್ನು ಚಿತ್ರದಲ್ಲಿ"ನಾನು ರಿಕ್‌ ಜೇಮ್ಸ್‌, ಹೆಣ್ಣುನಾಯಿ!" ಎಂದು ಭಾಷಾಂತರಿಸಲಾಗಿದೆ.

ಜೈಫರ್‌ ಜಾನ ಮಟೆಜ್ಕಿ ನ (ಜಾನ್‌ ಮಟೆಜ್ಕೊ ಗೂಢಲಿಪಿ ) ಪಾತ್ರವು ಡೇರಿಯೊಸ್‌ ರೆಕೊಸ್‌ರ ಪೋಲಿಷ್ ವಿಡಂಬನೆಯಾಗಿದೆ. 2008ರಲ್ಲಿ ಸೆಕ್ವೆಲ್‌ ಕೋ(ಸ್‌)ಮಿಕ್ಸ್‌ನಾ ಪುಟ್ರಿನಾ: ಸ್ಜಿಫರ್‌ ಜಾನ ಮಟೆಜ್ಕಿ II (ಕೊ[ಸ್‌]ಮಿಕ್‌ ಡೋರ್‌-ಫ್ರೇಮ್‌: ಜಾನ್‌ ಮಟೆಜ್ಕೊರ ಗೂಢಲಿಪಿ II ) ಬಿಡುಗಡೆಯಾಯಿತು. ಇನ್‌ಸ್ಪೆಕ್ಟರ್‌ ಜೋಸೆಫ್‌ ಸ್ವೇಂಟಿಯು ಮುಖ್ಯ ಪಾತ್ರದಲ್ಲಿದ್ದು, ಅವನು ಮನುಕುಲಕ್ಕೆ ದೊಡ್ಡ ರಹಸ್ಯವಾದ (ನಜ್ವೀಕ್ಸಾ ತಜೆಮ್ನಿಕಾ ಲುಡ್ಜ್‌ಕೊಸ್ಕಿ ) ಪಿಯಾಸ್ಟ್‌ ರಾಜಸಂತತಿಯ ಹುಟ್ಟನ್ನು ಕಂಡುಹಿಡಿಯಲು ಪ್ರಯತ್ನಿಸುವನು.

ಅಮೆರಿಕನ್‌ ಡ್ಯಾಡ್‌ ಪ್ರಸಂಗ ಬ್ಲ್ಯಾಕ್‌ ಮಿಸ್ಟರಿ ಮಂಥ್‌ನಲ್ಲಿ ಈ ಕಾದಂಬರಿಯನ್ನು ವಿಡಂಬನೆ ಮಾಡಲಾಗಿದೆ. ಆದರೆ ಮೇರಿ ಟೋಡ್‌ ಲಿಂಕನ್‌ ಸೃಷ್ಟಿಸಿದ್ದು ಜಾರ್ಜ್‌ ವಾಶಿಂಗ್ಟನ್‌ ಕರ್ವರ್ ‌ಅಲ್ಲ, ಪೀನಟ್ ಬಟರ್ ಎನ್ನುವ ವಿವಾದಾತ್ಮಕ ಸತ್ಯಕ್ಕಾಗಿ ಸ್ಟಾನ್‌ ಶೋಧಿಸುತ್ತಾರೆ.

2008

2008ರಲ್ಲಿ ದ್ಯಾಟ್‌ ಮಿಚೆಲ್‌ ಆಂಡ್‌ ವೆಬ್‌ ಲುಕ್‌ನ ಎರಡನೇ ಸರಣಿಯಲ್ಲಿ ಇದನ್ನು ಪ್ರದರ್ಶನದಲ್ಲಿ ಮರುಕಳಿಸುವ ರೇಖಾಚಿತ್ರದ ಆಧಾರದ ಮೇಲೆ ಕಾಲ್ಪನಿಕ ಚಿತ್ರದ ತುಣುಕಾದ "ದಿ ನಂಬರ್‌ವಾಂಗ್‌ ಕೋಡ್‌"ನಂತೆ ವಿಡಂಬನ ಮಾಡಲಾಗಿತ್ತು.

2008ರ ಮಾರ್ಚ್‌ನಲ್ಲಿ ಸಹ ಐರ್ಲೆಂಡ್‌ನ ಬ್ಲಾಗ್‌ ಬರಹಗಾರ ಟ್ವೆಂಟಿ ಮೇಜರ್‌[೨೬] ತಮ್ಮ ಮೊದಲ ಪುಸ್ತಕ ದಿ ಆರ್ಡರ್‌ ಆಫ್‌ ದಿ ಫೀನಿಕ್ಸ್‌ ಪಾರ್ಕ್‌[೨೭] ನಲ್ಲಿ ಕೆಲವು ಅಂಶಗಳನ್ನು ಅಣಕಿಸಿದ್ದಾರೆ.

ಸ್ಫೂರ್ತಿ ಮತ್ತು ಪ್ರಭಾವಗಳು[ಬದಲಾಯಿಸಿ]

ಕಾದಂಬರಿಯು ಬದಲಿ ಧಾರ್ಮಿಕ ಇತಿಹಾಸದ ಶೋಧನೆಯ ಒಂದು ಭಾಗವಾಗಿದೆ. ನ್ಯಾಯಲಯದ ಪ್ರಕರಣದಲ್ಲಿ ಪಟ್ಟಿಯಾಗಿರುವಂತೆ,ಕಾದಂಬರಿಯ ಮುಖ್ಯ ಮೂಲ ಪುಸ್ತಕ ಲಿನ್‌ ಪಿಕ್ನೆಟ್‌ ಮತ್ತು ಕ್ಲೈವ್‌ ಪ್ರಿನ್ಸ್‌ರವರ ದಿ ಟೆಂಪ್ಲರ್‌ ರೆವೆಲೇಷನ್‌ ಮತ್ತು ಮಾರ್ಗರೇಟ್‌ ಸ್ಟಾರ್‌ಬರ್ಡ್‌ರವರು ಬರೆದ ಪುಸ್ತಕಗಳು. ಹಿಂದಿನ ಕಾದಂಬರಿ, ಅಂದರೆ 1980ರಲ್ಲಿ ಪ್ರಕಟಗೊಂಡ ದಿ ಡ್ರೀಮರ್‌ ಆಫ್‌ ದಿ ವೈನ್‍‌‌‌ನಲ್ಲಿ ಏಸುಕ್ರಿಸ್ತ ವಂಶದವರ ಕಥಾವಸ್ತುವನ್ನು ಬಿಂಬಿಸಲಾಗಿತ್ತು. ಇದನ್ನು ಲಿಜ್‌ ಗ್ರಿನ್‌ರವರು ಬರೆದಿದ್ದಾರೆ (ರಿಚರ್ಡ್‌ ಲೇಘ್ ಅವರ ಸಹೋದರಿ ಮತ್ತು ಆ ಸಂದರ್ಭದಲ್ಲಿ ಮೈಕಲ್‌ ಬೈಜೆಂಟ್‌ರ ಸ್ನೇಹಿತೆ). ದಿ ಹೋಲಿ ಬ್ಲಡ್‌ ಆಂಡ್‌ ದಿ ಹೋಲಿ ಗ್ರೈಲ್‌ (60ನೇ ಅಧ್ಯಾಯದ ಪ್ರಾರಂಭದಲ್ಲಿ ಇತರರ ಜತೆ ಸ್ಪಷ್ಟವಾಗಿ ಹೆಸರಿಸಲಾಗಿದೆ)ತಮ್ಮ ಪುಸ್ತಕಕ್ಕೆ ಮುಖ್ಯ ಸಂಶೋಧನಾ ವಸ್ತುವಿನಲ್ಲಿ ಸೇರಿಲ್ಲ ಎಂದು ಡಾನ್ ಬ್ರೌನ್ ಹೇಳಿದ್ದಾರೆ.

ಸ್ಪೂರ್ತಿಯ ಮೂಲಗಳೆಂದು ಮೇಲಿನ ಪುಸ್ತಕಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ,ಡಾನ್‌ ಬ್ರೌನ್‌ರ ದಿ ಡಾ ವಿನ್ಸಿ ಕೋಡ್‌ ಬಲಾಢ್ಯ ಮುಖ್ಯಾಂಶವನ್ನು ತನ್ನ ಕಥೆಯಲ್ಲಿ ಹೊಂದಿದೆ:ಮೆರೊವಿನ್‍‌ಜಿಯನ್‌ ಫ್ರಾನ್ಸ್‌ನ ರಾಜರು ಏಸುಕ್ರಿಸ್ತ ಮತ್ತು ಮೇರಿ ಮಗ್ಡಾಲೇನ್‌ ವಂಶಜನ ಸಂತತಿಯವರು ಎನ್ನುವುದು.

ರಿಚರ್ಡ್‌ ಲೇಹ್‌ ಮತ್ತು ಮೈಕಲ್‌ ಬೈಜೆಂಟ್‌ರವರನ್ನು (ದಿ ಹೋಲಿ ಬ್ಲಡ್‌ ಆಂಡ್‌ ದಿ ಹೋಲಿ ಗ್ರೈಲ್‌ ಪುಸ್ತಕದ ಇಬ್ಬರು ಲೇಖಕರು) ಉಲ್ಲೇಖಿಸಿ, ಬ್ರೌನ್‌ ತನ್ನ ಕಥೆಯಲ್ಲಿರುವ ಪ್ರಮುಖ ಪಾನೀಯ ಪಾತ್ರೆ ಪರಿಣಿತನ ಹೆಸರನ್ನು "ಲೀಘ್‌ ಟೀಬಿಂಗ್‌" ("ಬೈಜೆಂಟ್‌ ಲೈಹ್‌" ಪದದ ಅಕ್ಷರಪಲ್ಲಟವಾಗಿದೆ) ಎಂದು ಹೆಸರಿಸಿದ್ದಾನೆ. ಇದನ್ನು ಬ್ರೌನ್‌ ನ್ಯಾಯಾಲಯದ ಪ್ರಕರಣದ ವಿಚಾರಣೆಯ ವೇಳೆ ಖಚಿತಪಡಿಸಿದ್ದಾನೆ. ಲೀಘ್‌ ಟೀಬಿಂಗ್‌ನ ಪಾತ್ರದಂತೆ ಲಿಂಕನ್‌ ಸಹ ತೀವ್ರವಾಗಿ ಕಾಲು ಕುಂಟುವ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಲಿಂಕನ್‌ ಉಲ್ಲೇಖಿಸಿದಂತಾಗಿದೆ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಬ್ರೌನ್‌, ತನಗೆ ಲಿಂಕನ್‌ರ ಅನಾರೋಗ್ಯದ ಬಗ್ಗೆ ಅರಿವಿರಲಿಲ್ಲ ಮತ್ತು ಇದಕ್ಕೆ ಸಂಬಂಧ ಕಾಕತಾಳೀಯವಾಗಿದೆಯೆಂದು ಹೇಳಿದರು. 2006ರ ಜುಲೈ 12ರಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸೋಲನುಭವಿಸಿದ ನಂತರ, ಮೈಕಲ್‌ ಬೈಜೆಂಟ್‌ ಮತ್ತು ರಿಚರ್ಡ್‌ ಲೇಹ್‌‌ ಕೋರ್ಟ್‌ ಆಫ್‌ ಅಪೀಲ್‌ಗೆ ಮೇಲ್ಮನವಿ ಸಲ್ಲಿಸಿ, ವಿಫಲರಾದರು.[೨೮][೨೯]

ವಿಚಾರಣೆಯ ನಂತರ, ಪ್ರಚಾರದಿಂದಾಗಿ ದಿ ಹೋಲಿ ಬ್ಲಡ್‌ ಆಂಡ್‌ ದಿ ಹೋಲಿ ಗ್ರೈಲ್‌[೩೦] UK ಮಾರಾಟದಲ್ಲಿ ಪರಿಣಾಮಕಾರಿ ಚೇತರಿಕೆ ಕಂಡುಬಂತು.

1996ರಲ್ಲಿ ಬಿಡುಗಡೆಯಾದ ವೀಡಿಯೊ ಆಟ ಬ್ರೋಕನ್‌ ಸ್ವೋರ್ಡ್‌: ದಿ ಶ್ಯಾಡೊ ಆಫ್‌ ದಿ ಟೆಂಪ್ಲರ್ಸ್‌ನಲ್ಲಿಯೂ ಸಹ ಕೆಲವು ಸಮಾನ ಅಂಶಗಳು ಕಂಡುಬಂದಿದ್ದವು.

ಬಿಡುಗಡೆಯ ವಿವರಗಳು[ಬದಲಾಯಿಸಿ]

ಪುಸ್ತಕವು ಪ್ರಾಥಮಿಕವಾಗಿ ಸುಮಾರು 40 ಭಾಷೆಗಳಲ್ಲಿ ಮುಖ್ಯವಾಗಿ ದೃಢಹೊದಿಕೆಯಲ್ಲಿ ಭಾಷಾಂತರಗೊಂಡಿತು.[೩೧] ಧ್ವನಿಮುದ್ರಿತ ಕ್ಯಾಸೆಟ್ಟುಗಳು, CD, ಮತ್ತು ಇ-ಪುಸ್ತಕ ಸೇರಿದಂತೆ ಹಲವು ಬದಲಿ ಸ್ವರೂಪಗಳಲ್ಲಿ ಬಿಡುಗಡೆಯಾಯಿತು. 2006ರ ಮಾರ್ಚ್‌ನಲ್ಲಿ, ಈ ಕಥೆಯನ್ನಾಧರಿಸಿದ ಚಲನಚಿತ್ರ ಬಿಡುಗಡೆಗೆ ಹೊಂದಿಕೆಯಾಗಿ ಈ ಕಾದಂಬರಿಯ ವ್ಯಾಪಾರಿ ಕಾಗದದ ಹೊದಿಕೆ ಆವೃತ್ತಿ ಬಿಡುಗಡೆಯಾಯಿತು.

ಪ್ರಮುಖ ಇಂಗ್ಲೀಷ್ ಭಾಷೆಯ (ದೃಢಹೊದಿಕೆ) ಆವೃತ್ತಿಗಳು ಈ ಕೆಳಗಿನಂತಿವೆ:

  • (US) ದಿ ಡಾ ವಿನ್ಸಿ ಕೋಡ್‌ , ಎಪ್ರಿಲ್‌ 2003 (ಮೊದಲ ಆವೃತ್ತಿ), ಡಬಲ್‌ಡೇ, ISBN 0-385-50420-9.
  • ದಿ ಡಾ ವಿನ್ಸಿ ಕೋಡ್‌, ಸ್ಪೆಷಲ್‌ ಇಲ್ಯುಸ್ಟ್ರೇಟೆಡ್‌ ಎಡಿಷನ್ , ನವೆಂಬರ್‌ 2, 2004, ಡಬಲ್‌ಡೇ, ISBN 0-385-51375-5 (2006ರ ಜನವರಿಯ ಹೊತ್ತಿಗೆ, ಇದರ 576,000ರಷ್ಟು ಪ್ರತಿಗಳು ಮಾರಾಟವಾಗಿದ್ದವು).
  • (UK) ದಿ ಡಾ ವಿನ್ಸಿ ಕೋಡ್‌ , ಎಪ್ರಿಲ್‌ 2004, ಕೋರ್ಗಿ ಅಡಲ್ಟ್‌. ISBN 0-552-14951-9.
  • (UK) ದಿ ಡಾ ವಿನ್ಸಿ ಕೋಡ್‌: ದಿ ಇಲ್ಯುಸ್ಟ್ರೇಟೆಡ್‌ ಎಡಿಷನ್‌ , 2004ರ ಅಕ್ಟೋಬರ್‌ 2, ಬಂಟಾಮ್‌ ಪ್ರೆಸ್‌. ISBN 0-593-05425-3.
  • (US/ಕೆನಡಾ) ದಿ ಡಾ ವಿನ್ಸಿ ಕೋಡ್‌ (ವ್ಯಾಪಾರಿ ಕಾಗದದ ಹೊದಿಕೆಯ ಆವೃತ್ತಿ), ಮಾರ್ಚ್‌ 2006, ಆಂಕರ್ ಬುಕ್ಸ್‌.
  • 2006ರ ಮಾರ್ಚ್‌ 28ರಲ್ಲಿ ಆಂಕರ್ ಬುಕ್ಸ್‌ ಕಾಗದ ಹೊದಿಕೆಯ ಪುಸ್ತಕದ 5 ದಶಲಕ್ಷ ಪ್ರತಿಗಳನ್ನು ಬಿಡುಗಡೆ ಮಾಡಿತು ಮತ್ತು ಬ್ರಾಡ್‌ವೇ ಬುಕ್ಸ್‌ ಕಾಗದ ಹೊದಿಕೆಯ ದಿ ಡಾ ವಿನ್ಸಿ ಕೋಡ್‌ ಸ್ಪೇಷಲ್‌ ಇಲ್ಯುಸ್ಟ್ರೇಟೆಡ್‌ ಎಡಿಷನ್‌ ನ 200,000 ಪ್ರತಿಗಳನ್ನು ಬಿಡುಗಡೆ ಮಾಡಿತು.
  • ಅದೇ ವರ್ಷ ಮೇ 19ರಲ್ಲಿ ಚಲನಚಿತ್ರ ಬಿಡುಗಡೆಯಾಗುವ ದಿನದಂದು,ಡಬಲ್‌ಡೇ ಮತ್ತು ಬ್ರಾಡ್‌ವೇ ಬುಕ್ಸ್‌ ಚಿತ್ರಕಥೆಗಾರ ಅಕಿವಾ ಗೋಲ್ಡ್ಸ್‌ಮ್ಯಾನ್‌ರವರಿಂದ ರಾನ್‌ ಹಾವರ್ಡ್‌ ಮತ್ತು ಡಾನ್‌ ಬ್ರೌನ್‌ರ ಪರಿಚಯದೊಂದಿಗೆ ದಿ ಡಾ ವಿನ್ಸಿ ಕೋಡ್‌ ಇಲ್ಯುಸ್ಟ್ರೇಟೆಡ್‌ ಸ್ಕ್ರೀನ್‌ಪ್ಲೇ: ಬಿಹೈಂಡ್‌ ದಿ ಸೀನ್ಸ್‌ ಆಫ್‌ ದಿ ಮೇಜರ್‌ ಮೋಷನ್‌ ಪಿಕ್ಚರ್‌ ಬಿಡುಗಡೆ ಮಾಡಿತು. ಇದು ಚಲನಚಿತ್ರದ ಸ್ಥಿರಚಿತ್ರಗಳು, ದೃಶ್ಯದ ಹಿನ್ನೆಲೆಯ ಛಾಯಾಚಿತ್ರಗಳು ಮತ್ತು ಸಂಪೂರ್ಣ ಚಿತ್ರಕಥೆಯನ್ನು ಒಳಗೊಂಡಿತ್ತು. 25,000 ಪ್ರತಿಗಳಷ್ಟು ಗಟ್ಟಿರಟ್ಟಿನ ಹೊದಿಕೆ ಆವೃತ್ತಿ ಮತ್ತು 200,000 ಪ್ರತಿಗಳಷ್ಟು ಕಾಗದದ ಹೊದಿಕೆಯ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.[೩೨]

ಒಗಟುಗಳು[ಬದಲಾಯಿಸಿ]

ಪುಸ್ತಕದ ಹೊರಹೊದಿಕೆ[ಬದಲಾಯಿಸಿ]

ಕಾದಂಬರಿಯ ಜಾಹೀರಾತು ಆಂದೋಲನದ ಭಾಗವಾಗಿ, ಅಮೆರಿಕಾದ ಆವೃತ್ತಿಯ ಪುಸ್ತಕದ ಹೊರಹೊದಿಕೆಯ ಮೇಲೆ ವಿವಿಧ ಸಂಕೇತಗಳನ್ನು ಹೊಂದಿದ್ದು, ಲೇಖಕರ ವೆಬ್‌ಸೈಟ್ ಮ‌ೂಲಕ ಅವುಗಳನ್ನು ಬಿಡಿಸುವ ಓದುಗನಿಗೆ ಬಹುಮಾನ ನೀಡಲಾಗುತ್ತದೆ. ಸಾವಿರಾರು ಜನರು ಈ ಸಂಕೇತಗಳನ್ನು ವಾಸ್ತವವಾಗಿ ಬಿಡಿಸಿದ್ದರು. ಅವರಲ್ಲಿ ಒಬ್ಬರ ಹೆಸರನ್ನು ಯಾದೃಚ್ಛಿಕ ಆಯ್ಕೆ ಮಾಡಲಾಗುತ್ತದೆ. 2004ರ ಆರಂಭದಲ್ಲಿ ಗುಡ್‌‌ ಮಾರ್ನಿಂಗ್‌ ಅಮೆರಿಕಾ ಎಂಬ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ವಿಜೇತರ ಹೆಸರನ್ನು ಆಯ್ಕೆಮಾಡಲಾಯಿತು. ಬಹುಮಾನವು ಪ್ಯಾರಿಸ್‌ಗೆ ಪ್ರವಾಸವಾಗಿತ್ತು.

ಬಹಿರಂಗಗೊಂಡ ಐದು ರಹಸ್ಯ ಒಗಟುಗಳು:

  • ಪುಸ್ತಕದ ಹೊರಹೊದಿಕೆಯ ಹಿಂದೆ ಕಡುಕೆಂಪಿನ ಮೇಲೆ ತಿಳಿಗೆಂಪುನಲ್ಲಿ ಹಿಮ್ಮೊಗವಾಗಿ ಬರೆದಿರುವ ಅಕ್ಷಾಂಶ ಮತ್ತು ರೇಖಾಂಶ ನಿರ್ದೇಶಾಂಕಗಳನ್ನು ಅಡಗಿಸಿದೆ. ಅಕ್ಷಾಂಶಕ್ಕೆ ಒಂದು ಕೋನವನ್ನು (ಡಿಗ್ರಿ) ಸೇರಿಸಿದರೆ, ಅದು ಕ್ರಿಪ್ಟೊಸ್‌ ಎನ್ನುವ ರಹಸ್ಯಮಯ ಶಿಲ್ಪರಚನೆಯಿರುವ ಸ್ಥಳವಾದ ಉತ್ತರ ವಿರ್ಜಿನಿಯಕೇಂದ್ರ ಗುಪ್ತಚರ ಎಜೆನ್ಸಿಯ ಕೇಂದ್ರ ಕಛೇರಿಯ ನಿರ್ದೇಶಾಂಕಗಳನ್ನು ಸೂಚಿಸುತ್ತದೆ. ಶಿಲ್ಪಾಕೃತಿಯ 2ನೇ ಭಾಗದ ಅಸಂಕೇತಿಕರಿಸಿದ ಪಠ್ಯಭಾಗದಿಂದ ಈ ನಿರ್ದೇಶಾಂಕಗಳನ್ನು ತೆಗೆದುಕೊಳ್ಳಲಾಗಿದೆ (4ನೇ ಭಾಗವನ್ನು ಈವರೆಗೆ ಪರಿಹರಿಸಲಾಗಲಿಲ್ಲ). ಯಾಕೆ ಈ ನಿರ್ದೇಶಾಂಕಗಳು ಒಂದು ಡಿಗ್ರಿ ಕಡಿಮೆ ಇದೆ ಎಂದು ಬ್ರೌನ್‌ರನ್ನು ಕೇಳಿದಾಗ, ಅವರು, "ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ" ಎಂದು ಪ್ರತಿಕ್ರಿಯಿಸಿದರು.
  • ಪುಸ್ತಕದ ಹೊರಹೊದಿಕೆಯಲ್ಲಿ ದಪ್ಪಾಕ್ಷರಗಳಲ್ಲಿ ಮುದ್ರಿಸಲಾಗಿದೆ. ಪುಸ್ತಕದ ತೆಳು ಹೊದಿಕೆಯಲ್ಲಿ ರಹಸ್ಯ ಸಂದೇಶ ಅಡಗಿರುವುದನ್ನು ಕಾಣಬಹುದಾಗಿದೆ. ಸಂದೇಶ: ವಿಧವೆ ಮಗನಿಗೆ ಸಹಾಯ ಮಾಡಲು ಯಾರೂ ಇಲ್ಲವೆ (ಪ್ರೀಮ್ಯಾಸನ್ರಿಯನ್ನು ಉಲ್ಲೇಖಿಸಲಾಗಿದೆ).
  • "WWಗೆ ಮಾತ್ರ ತಿಳಿದಿದೆ" ಎಂಬ ಪದಗಳನ್ನು ಪುಸ್ತಕದ ಹಿಂದಿನ ಹೊದಿಕೆಯಲ್ಲಿ ಕಾಣಬಹುದಾಗಿದೆ. ಈ ಸಾಲನ್ನು ಪುಸ್ತಕದ ಹೊದಿಕೆಯ ಹರಿದ ಭಾಗದಲ್ಲಿ ತಲೆಕೆಳಗಾಗಿ ಮುದ್ರಿಸಲಾಗಿದೆ. ಇದು ಸಹ ಕ್ರಿಪ್ಟೊಸ್‌ ಶಿಲ್ಪಾಕೃತಿಯ ಎರಡನೇ ಭಾಗವನ್ನು ಉಲ್ಲೇಖಿಸುತ್ತದೆ.[೩೩]
  • ಡಬಲ್‌ಡೇ ಲಾಂಛನ ಮತ್ತು ಬಾರ್‌ಕೋಡ್‌ಗಳ ನಡುವಿನ ಸಂಖ್ಯೆಗಳನ್ನು ಒಳಗೊಂಡ ವೃತ್ತವು ರಹಸ್ಯ ಸಂದೇಶವನ್ನು ಬಹಿರಂಗ ಮಾಡುತ್ತದೆ. ಈ ಸಂಖ್ಯೆಗಳು ಸೀಸರ್‌ ಪೆಟ್ಟಿಗೆಯ ಸ್ವರೂಪದಲ್ಲಿ ಜೋಡಿಸಲಾದ ಬೋಧನಾ ಸಂಖ್ಯೆಗಳಾಗಿವೆ.
  • ಪುಸ್ತಕದ ಹೊದಿಕೆಯ ಮೇಲಿರುವ ಹಿಮ್ಮೊಗದ ಬರಹವು ಮೊದಲ ಕ್ರಿಪ್ಟೆಕ್ಸ್‌ನ ಒಗಟಾಗಿದೆ.

ಪುಸ್ತಕದ ಹೊರಹೊದಿಕೆಯಲ್ಲಿರುವ ಒಗಟುಗಳು ತನ್ನ ಮುಂದಿನ ಕಾದಂಬರಿ ದಿ ಲಾಸ್ಟ್‌ ಸಿಂಬಲ್‌ ನ ವಿಷಯದ ಬಗ್ಗೆ ಸುಳಿವುಗಳನ್ನು ನೀಡುವುದು ಎಂದು ಬ್ರೌನ್‌ ತನ್ನ ವೆಬ್‌ಸೈಟ್‌ನಲ್ಲಿ ಮತ್ತು ಖುದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಇದು ಅವರ ಹಿಂದಿನ ಕಾದಂಬರಿಗಳ ವಿಷಯ ವಸ್ತುವನ್ನು ಒಳಗೊಂಡಿರುವುದೆಂದು ತಿಳಿಸಿದ್ದಾರೆ. ಉದಾಹರಣೆಗೆ, ಡಿಸೆಪ್ಶನ್‌ ಪಾಯಿಂಟ್‌ ರಹಸ್ಯ ಸಂದೇಶವನ್ನು ಒಳಗೊಂಡಿತ್ತು. ಅದಕ್ಕೆ ಉತ್ತರವನ್ನು ಕಂಡುಹಿಡಿದಾಗ, "ದಿ ಡಾ ವಿನ್ಸಿ ಕೋಡ್‌ ವಿಲ್‌ ಸರ್ಫೆಸ್‌ " ಎಂದು ತಿಳಿಯುವುದು.

ದಿ ಡಾ ವಿನ್ಸಿ ಕೋಡ್‌ಸರಳೀಕೃತ ಚೀನಾ ಆವೃತ್ತಿಯ ಹೊದಿಕೆಯು ರಹಸ್ಯ ಪಠ್ಯವನ್ನೊಳಗೊಂಡಿದ್ದು; ಆದರೂ ಅವುಗಳನ್ನು ಸುಲಭವಾಗಿ ಕಾಣಬಹುದಾಗಿದೆ. ಅವುಗಳ ಹೀಗಿವೆ: "13-3-2-1-1-8-5 ಒ, ಡ್ರ್ಯಾಕೊನಿಯನ್ ಡೆವಿಲ್‌! ಓ, ಲೇಮ್‌ ಸೈಂಟ್‌! P.S. ಫೈಂಡ್‌ ರಾಬರ್ಟ್‌ ಲ್ಯಾಂಗ್ಡನ್‌." ಇದು ಇಡೀ ಕಾದಂಬರಿಯ ಮುಖ್ಯ ವಿಷಯ ವಸ್ತುವಾಗಿದ್ದು, ವಸ್ತುಸಂಗ್ರಹಾಲಯದಲ್ಲಿ ಬಿದ್ದಿದ್ದ ಮೃತದೇಹದ ಪಕ್ಕದಲ್ಲಿದ್ದ ಅಗೋಚರ ಶಾಯಿಯಲ್ಲಿ ಬರೆದ ಹಲವು ವಿಧವಾಗಿ ಗೂಢಲಿಪಿಕರಿಸಿದ ಸುಳಿವಾಗಿದೆ.

ಪುಟಗಳು[ಬದಲಾಯಿಸಿ]

ದಿ ಡಾ ವಿನ್ಸಿ ಕೋಡ್‌ ನ ಮಾಸ್ ಮಾರ್ಕೆಟ್‌ US ಕಾಗದಹೊದಿಕೆಯ ಆವೃತ್ತಿಯಲ್ಲಿ ಕೆಳಗೆ ಪಟ್ಟಿಮಾಡಲಾದ ಎಲ್ಲಾ ಒಗಟುಗಳನ್ನು ಪುಟದ ಶಿರೋಭಾಗಗಳಲ್ಲಿ ಕಾಣಬಹುದಾಗಿದೆ.

  • ಪುಟ 60: "ಡಾನ್‌ ಬ್ರೌನ್‌"ನ ಸ್ಥಳದಲ್ಲಿ "ಅಂಕ್ ಫೆಂಡಿಲೆ" ("ಚೂರಿ ಹಿಡಿಕೆ"ಯ ಅಕ್ಷರಪಲ್ಲಟ)
  • ಪುಟ 95: "ಡಾ ವಿನ್ಸಿ"ನ ಸ್ಥಳದಲ್ಲಿ "ಡೆ ಲಾಂಕ್ಸ್‌" ("ಮೇಣದಬತ್ತಿಗಳು" ಅಕ್ಷರಪಲ್ಲಟ)
  • ಪುಟ 138: "ಡಾನ್‌ ಬ್ರೌನ್‌"ನ ಸ್ಥಳದಲ್ಲಿ "ದಾಸ್‌ ಬ್ರಿಲ್ಲಿ" ("ಬಿಲಿಯಾರ್ಡ್ಸ್‌"ನ ಅಕ್ಷರಪಲ್ಲಟ)
  • ಪುಟ 141: "ಡಾ ವಿನ್ಸಿ"ನ ಸ್ಥಳದಲ್ಲಿ "ಲಾ ಸುಫ್ರೆಟ್‌" ("ಸತ್ಯ/ಸುಳ್ಳು"ನ ಅಕ್ಷರಪಲ್ಲಟ)
  • ಪುಟ 155: ಪುಟದ ಸಂಖ್ಯೆಯ ಸ್ಥಳದಲ್ಲಿ "ಸೊಸ್‌"
  • ಪುಟ 192: "ಡಾನ್‌ ಬ್ರೌನ್‌"ನ ಸ್ಥಳದಲ್ಲಿ "ರಿಯೊನ್‌ ಟಿಗಲ್ಡೊ" ("ಚಿನ್ನದ ಅನುಪಾತ"ದ ಅಕ್ಷರಪಲ್ಲಟ)
  • ಪುಟ 217: "ಡಾ ವಿನ್ಸಿ"ಯ ಸ್ಥಳದಲ್ಲಿ "ಡೆ ಯ್ಸೊಸಿ" ("ಒಡಿಸ್ಸಿ"ಯ ಅಕ್ಷರಪಲ್ಲಟ)
  • ಪುಟ 262: "ಡಾನ್‌ ಬ್ರೌನ್‌"ನ ಸ್ಥಳದಲ್ಲಿ "ಮೆರ್‌ ರೆವ್‌" ("ವೆರ್‌ಮೀರ್‌"ನ ಅಕ್ಷರಪಲ್ಲಟ)
  • ಪುಟ 322: ಪುಟಸಂಖ್ಯೆಯನ್ನು ಮೂರು ನಕ್ಷತ್ರಾಕಾರದ ಚುಕ್ಕೆಗಳಿಂದ ಬದಲಿಸಲಾಗಿದೆ.

ಪುಟ 138ರ ಅಧ್ಯಾಯದಲ್ಲಿ, "ಇದನ್ನು ಹರಿದು ತೆರೆದಾಗ, ಅವಳಿಗೆ ನಾಲ್ಕು ಪ್ಯಾರಿಸ್‌ ಪೋನ್‌ ಸಂಖ್ಯೆಗಳು ಲಭಿಸಿದವು" ಎಂಬ ವಾಕ್ಯದಲ್ಲಿರುವ "ಸಂಖ್ಯೆಗಳು" ಎಂಬ ಪದವನ್ನು ದಪ್ಪಾಕ್ಷರದ ಮಧ್ಯಯುಗದ ಅಕ್ಷರದಲ್ಲಿ ಮುದ್ರಿಸಲಾಗಿತ್ತು. ಆದರೆ ಪುಸ್ತಕದ ಉಳಿದೆಲ್ಲ ಕಡೆ ಸಾಂಕೇತಿಕ ಸೆರಿಫ್‌ಅಕ್ಷರವನ್ನು ಬಳಸಲಾಗಿತ್ತು.

ಚಲನಚಿತ್ರ[ಬದಲಾಯಿಸಿ]

ಕೊಲಂಬಿಯಾ ಪಿಕ್ಚರ್ಸ್‌ ಸಂಸ್ಥೆಯ ಕಾದಂಬರಿಯನ್ನು ಚಲನಚಿತ್ರಕ್ಕೆ ಅಳವಡಿಸಿಕೊಂಡಿತು. ಅದರ ಚಿತ್ರಕಥೆಯನ್ನು ಅಕಿವಾ ಗೋಲ್ಡ್ಸ್‌ಮ್ಯಾನ್‌ ಬರೆದರು ಮತ್ತು ಅಕಾಡಮಿ ಪ್ರಶಸ್ತಿ ವಿಜೇತರಾದ ರಾನ್‌ ಹಾವರ್ಡ್‌ ಚಿತ್ರವನ್ನು ನಿರ್ದೇಶಿಸಿದರು. ಚಲನಚಿತ್ರವು 2006ರ ಮೇ 19ರಂದು ಬಿಡುಗಡೆಯಾಯಿತು ಮತ್ತು ರಾಬರ್ಟ್‌ ಲ್ಯಾಂಗ್ಡನ್‌ ಪಾತ್ರದಲ್ಲಿ ಟಾಮ್‌ ಹಂಕ್ಸ್‌, ಸೋಫಿ ನೆವಿ ಪಾತ್ರದಲ್ಲಿ ಆಡ್ರೆ ಟಾಟೊ ಮತ್ತು ಲೇಘ್ ಟೀಬಿಂಗ್ ಪಾತ್ರದಲ್ಲಿ ಸರ್ ಐಯಾನ್ ಮೆಕೆಲನ್ ನಟಿಸಿದರು. ಚಿತ್ರವು ಪ್ರಥಮ ವಾರಾಂತ್ಯದಲ್ಲಿ ಒಟ್ಟು $77,073,388 ಆದಾಯವನ್ನು ಗಳಿಸಿತ್ತು ಮತ್ತು 2006ರಲ್ಲಿ ಒಟ್ಟು $217,536,138 ಆದಾಯವನ್ನು ಗಳಿಸುವ ಮೂಲಕ 2006ರ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರಗಳಲ್ಲಿ ಐದನೇ ಸ್ಥಾನವನ್ನು ಪಡೆಯಿತು. ಚಿತ್ರವು ವಿದೇಶಗಳಲ್ಲಿ ಉತ್ತಮವಾಗಿ ಪ್ರದರ್ಶನಗೊಂಡಿದ್ದು, ವಿಶ್ವದಾದ್ಯಂತ ಒಟ್ಟು $758,239,852 ಆದಾಯ ಗಳಿಸಿತು. 2006 ನವೆಂಬರ್‌ 14ರಲ್ಲಿ ಚಲನಚಿತ್ರವು DVD ರೂಪದಲ್ಲಿ ಬಿಡುಗಡೆಯಾಯಿತು.

ಇದನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. http://www.mercurynews.com/celebrities/ci_12530761?nclick_check=1
  2. "'Code' deciphers interest in religious history".
  3. "Aussie readers vote Pride and Prejudice best book". thewest.com.au. Archived from the original on 2008-05-29. Retrieved 2010-02-09.
  4. ೪.೦ ೪.೧ ನ್ಯೂಯಾರ್ಕರ್‌ ರಿವ್ಯೂ
  5. ೫.೦ ೫.೧ Miller, Laura (2004-02-22). "THE LAST WORD; The Da Vinci Con - New York Times". Query.nytimes.com. Retrieved 2009-02-03.
  6. ಮಿಲ್ಲರ್‌, ಲಾರಾ (2004ರ ಡಿಸೆಂಬರ್‌ 29)." Archived 2008-06-17 ವೇಬ್ಯಾಕ್ ಮೆಷಿನ್ ನಲ್ಲಿ.ದಿ ಡಾ ವಿನ್ಸಿ ಕ್ರೋಕ್‌" Archived 2008-06-17 ವೇಬ್ಯಾಕ್ ಮೆಷಿನ್ ನಲ್ಲಿ.. Salon.com ಮೇ 30, 2007ರಂದು ಪರಿಷ್ಕರಿಸಲಾಯಿತು.
  7. ೭.೦ ೭.೧ "DA VINCI DEBUNKERS: Spawns of Dan Brown's Bestseller by Marcia Ford". FaithfulReader.com. Archived from the original on 2004-05-27. Retrieved 2009-02-03.
  8. "History vs The Da Vinci Code". Historyversusthedavincicode.com. Archived from the original on 2020-12-06. Retrieved 2009-02-03.
  9. BBC ನ್ಯೂಸ್‌, 2005ರ ಆಗಸ್ಟ್‌ 6. ಆಥರ್‌ ಬ್ರೌನ್‌ 'ಡಿಡ್‌ ನಾಟ್‌ ಪ್ಲೆಜರೈಸ್‌'
  10. BBC ನ್ಯೂಸ್‌, 2006ರ ಎಪ್ರಿಲ್‌ 21. ಡಿಲೇಸ್‌ ಟು ಲೇಟೆಸ್ಟ್‌ ಡಾನ್‌ ಬ್ರೌನ್‌ ನೋವೆಲ್‌
  11. Ken and Carolyn Kelleher (2006-04-24). "The Da Vinci Code » FAQs » Official Website of Dan Brown". Danbrown.com. Archived from the original on 2006-12-03. Retrieved 2009-02-03.
  12. "History vs The Da Vinci Code". Historyversusthedavincicode.com. Archived from the original on 2009-01-30. Retrieved 2009-02-03.
  13. ಟಿಮ್‌ ಒ'ನೀಲ್‌. "ಅರ್ಲಿ ಕ್ರಿಸ್ಟಿಯಾನಿಟಿ ಆಂಡ್ ಪಾಲಿಟಿಕಲ್ ಪವರ್‌". ಹಿಸ್ಟರಿ ವರ್ಸಸ್‌ ದಿ ಡಾ ವಿನ್ಸಿ ಕೋಡ್‌ . 2006. 16 ಫೆಬ್ರುವರಿ 2009 < http://www.historyversusthedavincicode.com/chapterfiftyfive.htm#christpower Archived 2009-05-15 ವೇಬ್ಯಾಕ್ ಮೆಷಿನ್ ನಲ್ಲಿ.>
  14. ಟಿಮ್‌ ಒ'ನೀಲ್‌. "ನಾಗ್‌ ಹಮ್ಮಡಿ ಆಂಡ್‌ ದಿ ಡೆಡ್‌ ಸಿ ಸ್ಕ್ರೋಲ್ಸ್‌". ಹಿಸ್ಟರಿ ವರ್ಸಸ್‌ ದಿ ಡಾ ವಿನ್ಸಿ ಕೋಡ್‌ . 2006. 16 ಫೆಬ್ರುವರಿ 2009 < http://www.historyversusthedavincicode.com/chapterfiftyfive.htm#nagdss Archived 2009-05-15 ವೇಬ್ಯಾಕ್ ಮೆಷಿನ್ ನಲ್ಲಿ.>
  15.  Herbermann, Charles, ed. (1913). "Docetae" . Catholic Encyclopedia. New York: Robert Appleton Company. {{cite encyclopedia}}: Cite has empty unknown parameters: |HIDE_PARAMETER4=, |HIDE_PARAMETER2=, |HIDE_PARAMETERq=, |HIDE_PARAMETER20=, |HIDE_PARAMETER5=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, |HIDE_PARAMETER1=, and |HIDE_PARAMETER3= (help) ಲೇಖಕ ಜಾನ್‌ ಪೀಟರ್ ಅರೆಂಡ್ಜನ್‌ ಹೀಗೆ ಬರೆದಿದ್ದಾರೆ: "ಕ್ರಿಸ್ಟ್‌ನ ಮಾನವ ಸ್ವರೂಪದ ಅವಾಸ್ತವಿಕ ಕಲ್ಪನೆಯನ್ನು ಹಳೆಯ ನಾಸ್ಟಿಕ್ ‌ಪಂಥದ ಉಪಪಂಗಡಗಳು ಹೊಂದಿದ್ದವು[...] ಡಸೀಟಿಸಮ್‌ ಅಲ್ಲಿಯ ತನಕ ನಾಸ್ಟಿಕ್‌ ಪಂಥದೊಂದಿಗೆ ಸಂಬಂಧಿಸಿದೆ ಎಂದು ತಿಳಿಯಲಾಗಿತ್ತು ಅಥವಾ ನಂತರ ಅದು ಮ್ಯಾನಿಕೀಯಿಸಂಗೆ ಸಂಬಂಧಿಸಿದೆಂದು ತಿಳಿಯಿತು."
  16. ಟಿಮ್‌ ಒ'ನೀಲ್‌. "ನಾಗ್‌ ಹಮ್ಮಡಿ ಆಂಡ್‌ ದಿ ಡೆಡ್‌ ಸಿ ಸ್ಕ್ರೋಲ್ಸ್‌". ಹಿಸ್ಟರಿ ವರ್ಸಸ್‌ ದಿ ಡಾ ವಿನ್ಸಿ ಕೋಡ್‌ . 2006. 16 ಫೆಬ್ರುವರಿ 2009 < http://www.historyversusthedavincicode.com/chapterfiftyfive.htm#nagdss Archived 2009-05-15 ವೇಬ್ಯಾಕ್ ಮೆಷಿನ್ ನಲ್ಲಿ.>
  17. "http://www.envoymagazine.com/PlanetEnvoy/Review-DaVinci-part2-Full.htm#Full". Archived from the original on 2005-02-07. Retrieved 2010-02-09. {{cite web}}: External link in |title= (help)
  18. ಹಗಸ್‌, ಫಿಲಿಪ್‌. ದಿ ಚರ್ಚ್‌ ಇನ್ ಕ್ರೈಸಿಸ್‌: ಎ ಹಿಸ್ಟರಿ ಆಫ್‌ ದಿ ಜನರಲ್‌ ಕೌನ್ಸಿಲ್ಸ್, 325–1870 . 1964
  19. [೧]
  20. QIಎಪಿಸೋಡ್[ಶಾಶ್ವತವಾಗಿ ಮಡಿದ ಕೊಂಡಿ] ನಲ್ಲಿ ಮೂಲತಃ ಉಲ್ಲೇಖಿಸಲಾಗಿದೆ.
  21. "ಇಂಟರ್‌ವ್ಯೂ ವಿತ್ ಡೋಗ್ಲಸ್‌ ಆಡಮ್ಸ್‌ ಕೋಂಟಿನಮ್‌". Archived from the original on 2011-05-19. Retrieved 2010-02-09.
  22. Stephen King address, University of Maine
  23. ನ್ಯೂಯಾರ್ಕ್‌ ಟೈಮ್ಸ್‌ ರಿವ್ಯೂ
  24. ಲಾಂಗ್ವೇಜ್ ಲಾಗ್‌, ದಿ ಡಾನ್‌ ಬ್ರೌನ್‌ ಕೋಡ್‌ (ಆ ಪುಟದ ಕೆಳಗಿರುವ ಇತರ ಕೊಂಡಿಗಳನ್ನು ಸಹ ಅನುಸರಿಸಿ)
  25. "ರೋಜರ್‌ ಎಬರ್ಟ್‌ ರಿವ್ಯೂ". Archived from the original on 2012-10-10. Retrieved 2021-08-28.
  26. "ಆರ್ಕೈವ್ ನಕಲು". Archived from the original on 2007-10-10. Retrieved 2010-02-09.
  27. "Still smoking in Dublin bars » books". Twenty Major. 2008-03-14. Archived from the original on 2009-01-25. Retrieved 2009-02-03.
  28. "ಆಥರ್ಸ್‌ ವೂ ಲಾಸ್ಟ್‌ 'ಡಾ ವಿನ್ಸಿ ಕೋಡ್‌' ಕಾಪಿಂಗ್‌ ಕೇಸ್‌ ಟು ಮೌಂಟ್‌ ಲೀಗಲ್ ಅಪೀಲ್‌"[ಮಡಿದ ಕೊಂಡಿ], ಅಸೋಸಿಯೆಟೆಡ್‌ ಪ್ರೆಸ್‌, 2006ರ ಜುಲೈ 12
  29. "Judge rejects claims in 'Da Vinci' suit - BOOKS- msnbc.com". Msnbc.msn.com. 2006-04-07. Archived from the original on 2006-07-06. Retrieved 2009-02-03.
  30. [೨][ಮಡಿದ ಕೊಂಡಿ]
  31. ವಲ್ಡ್ ಎಡಿಷನ್ಸ್ ಆಫ್ ದಿ ಡಾ ವಿನ್ಸಿ ಕೋಡ್ Archived 2006-01-27 ವೇಬ್ಯಾಕ್ ಮೆಷಿನ್ ನಲ್ಲಿ., ಡಾನ್‌ ಬ್ರೌನ್‌ರ ಅಧಿಕೃತ ವೆಬ್‌ಸೈಟ್‌
  32. Harry Potter still magic for book sales, CBC Arts, 9 January 2006.
  33. "Frequently-Asked Questions About Kryptos". March 28, 2006. Retrieved 2006-05-19.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ದಿ ಡಾ ವಿನ್ಸಿ ಕೋಡ್‌]]


ಟೆಂಪ್ಲೇಟು:Robert Langdon's Novels

ಟೆಂಪ್ಲೇಟು:Dan Brown Books etc