ವಿಷಯಕ್ಕೆ ಹೋಗು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಸಮಗ್ರ ಸಾಹಿತ್ಯ ಕೊಡುಗೆ

ಉಲ್ಲೇಖಗಳು

[ಬದಲಾಯಿಸಿ]