ಜಿ. ಎಸ್. ಸಿದ್ದಲಿಂಗಯ್ಯ
ಜಿ. ಎಸ್. ಸಿದ್ಧಲಿಂಗಯ್ಯ | |
---|---|
ಜನನ | ೨೦ನೇ ಫೆಬ್ರವರಿ ೧೯೩೧ ಬೆಳ್ಳಾವೆ, ತುಮಕೂರು ಜಿಲ್ಲೆ |
ವೃತ್ತಿ | ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ |
ರಾಷ್ಟ್ರೀಯತೆ | ಭಾರತೀಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಕವಿತೆ, ವಿಮರ್ಶೆ, ಜೀವನ ಚರಿತ್ರೆ, ಅನುವಾದ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ |
ಖ್ಯಾತ ವಿಮರ್ಶಕ, ಕವಿ, ಸಾಹಿತಿ ಡಾ || ಜಿ .ಎಸ್. ಸಿದ್ದಲಿಂಗಯ್ಯನವರು ೧೯೮೯ ರಿಂದ ೧೯೯೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಸರಾಗಿ ಸೇವೆ ಸಲ್ಲಿಸಿ ತುಂಬಾ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅದರ ಚಟುವಟಿಕೆಗಳನ್ನು ತಾಲ್ಲೂಕು ಮಟ್ಟದವರೆಗೂ ಕೊಂಡೊಯ್ದ ಸಿದ್ಧಲಿಂಗಯ್ಯ ಅವರು ಪರಿಷತ್ತಿನ ಹಣಕಾಸಿನ ವ್ಯವಹಾರದ ಬಗ್ಗೆ ಕೈಗೊಂಡ ನಿರ್ಣಯಗಳು ಮಹತ್ವದ್ದು.
ಜನನ
[ಬದಲಾಯಿಸಿ]ಜಿ .ಎಸ್. ಸಿದ್ದಲಿಂಗಯ್ಯನವರು ದಿನಾಂಕ ೨೦ನೇ ಫೆಬ್ರವರಿ ೧೯೩೧ರಲ್ಲಿ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ತಾಯಿ ಸಂಗಮ್ಮ, ತಂದೆ ಜಿ.ಬಿ. ಶ್ರೀಕಂಠಯ್ಯನವರು.
ಶಿಕ್ಷಣ
[ಬದಲಾಯಿಸಿ]ಜಿ .ಎಸ್. ಸಿದ್ದಲಿಂಗಯ್ಯನವರು ಪ್ರಾಥಮಿಕ ಶಾಲೆಯಲ್ಲಿ ಗುರುಗಳಾಗಿದ್ದ ಜಗ್ಗು ಶಿಂಗ್ರಯ್ಯಂಗಾರ್, ಮಾಧ್ಯಮಿಕ ಶಾಲೆಯಲ್ಲಿ ವೆಂಕಟರಾಮಯ್ಯ, ಪ್ರೌಢಶಾಲೆಯಲ್ಲಿ ಎ. ರಾಮಚಂದ್ರರಾಯರಿಂದ ತಮಗೆ ಸಾಹಿತ್ಯದ ಗೀಳು ಹಿಡಿಯಿತು ಎಂದು ನೆನಪು ಮಾಡಿಕೊಳ್ಳುತ್ತಾರೆ. ಅವರು ೧೯೫೫ ರಲ್ಲಿ ಬಿ.ಎ.(ಆನರ್ಸ್)ಅನ್ನು ಮೊದಲಿಗರಾಗಿ ಮುಗಿಸಿದರು. ಕನ್ನಡ ಎಂ.ಎ. ಅನ್ನು ೧೯೬೧ರಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾದರು.
ವೃತ್ತಿಜೀವನ
[ಬದಲಾಯಿಸಿ]೧೯೫೫ ರಿಂದ ೧೯೬೮ ರವರೆಗೆ ಕನ್ನಡ ಅಧ್ಯಾಪಕರಾಗಿ,೧೯೬೮ ರಿಂದ ೧೯೭೩ ರವರೆಗೆ ಉಪ ಪ್ರಾಧ್ಯಾಪಕರಾಗಿ, ೧೯೭೩ ರಿಂದ ೧೯೭೮ರವರೆಗೆ ಚಿತ್ರದುರ್ಗದ ಸರಕಾರಿ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, ೧೯೭೮ ರಿಂದ ೧೯೮೧ ರವೆರೆಗೆ ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ೧೯೮೧ ರಿಂದ ೧೯೮೮ ರವರೆಗೆ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಆಯ್ಕೆ ಶ್ರೇಣಿ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಸವಾದಿ ಶರಣ ಸಾಹಿತ್ಯ ಕೇಂದ್ರದ ನಿರ್ದೇಶಕರಾಗಿ ಸೇವೆ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕರ್ನಾಟಕ, ಗುಲ್ಬರ್ಗಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದರು,
ಕೃತಿಗಳು
[ಬದಲಾಯಿಸಿ]ಕವನ ಸಂಕಲನಗಳು
[ಬದಲಾಯಿಸಿ]- ರಸಗಂಗೆ
- ಉತ್ತರ
- ಚಿತ್ರ-ವಿಚಿತ್ರ
- ಐವತ್ತರ ನೆರಳು
- ಋಷ್ಯಶೃಂಗ
- ಹೇಮಕೂಟ
- ಬಿಂದು
- ಮುಖಾಮುಖಿ
- ಮಣ್ಣಿಗಿಳಿದ ಆಕಾಶ
ಚಿಂತನ
[ಬದಲಾಯಿಸಿ]- ಬಿಂದುವಿನಿಂದ
ವಿಮರ್ಶೆ
[ಬದಲಾಯಿಸಿ]- ಶ್ರೀ ಕವಿ ಲಕ್ಷ್ಮೀಶ
- ರತ್ನಾಕರವರ್ಣಿ
- ಹೊಸಗನ್ನಡ ಕಾವ್ಯ
- ಪಂಚಮುಖ ಚಾಮರಸ
- ವಚನ ಸಾಹಿತ್ಯ-ಒಂದು ಇಣುಕು ನೋಟ
- ಹರಿದಾಸ ಸಾಹಿತ್ಯ ಪರಂಪರೆ
- ವಚನ ವಾಙ್ಮಯ ಮತ್ತು ಭಾಷೆ
- ಶೂನ್ಯ ಸಂಪಾದನೆಗಳು-ಒಂದು ಅವಲೋಕನ
- ಶೂನ್ಯ ಸಂಪಾದನೆ-ಒಂದು ಮರುಚಿಂತನೆ
- ಗೂಳೂರು ಸಿದ್ದವೀರಣ್ಣ
- ನವ್ಯಕಾವ್ಯ-ಒಂದು ಚಿಂತನೆ
- ಶ್ರೀನಿವಾಸ
- ನವರಾತ್ರಿ
- ಶೂನ್ಯ ಸಂಪಾದನೆ
- ಹೊಸ ತಿರುವು
- ಶೂನ್ಯ ಸಂಪಾದನೆ-ಕೆಲವು ಪ್ರಶ್ನೆಗಳು
- ಭಾಷೆ ಗೀಷೆ-ಬೇಂದ್ರೆ-ಕುವೆಂಪುರವರು
- ಅಲ್ಲಮ ಪ್ರಭು
- ಮೇದಾರ ಕೇತಯ್ಯ
- ನೆನಪಿನೋಣಿಯಲ್ಲಿ
- ಬಸವ-ಅಲ್ಲಮರ-ನೂರು ವಚನಗಳು
- ಶಬ್ದ ಸೋಪಾನ
- ಹರಿಹರ
- ಶೂನ್ಯ ಸಂಪಾದನೆಗಳು-ಪರಿಷ್ಕರಣಗಳು
- ಲಯವೂ ಅದರ ಪರಿವಾರವೂ
- ಯಶೋಧರ ಚರಿತೆ
- ವಚನ ಸಾಹಿತ್ಯ-ಹಕ್ಕಿನೋಟ
- ನೂರೊಂದರ ಸುತ್ತ
ಜೀವನ ಚರಿತ್ರೆ
[ಬದಲಾಯಿಸಿ]- ಮಹಾನುಭಾವ ಬುದ್ಧ
- ವಿರತಿಯ ಸಿರಿ ಸಪ್ಪಣ್ಣನವರು
- ಬಸವಣ್ಣ
- ವಚನ ಗುಮ್ಮಟ (ವಾಸ್ವಾನಿಯವರ ಕೃತಿಗಳು) ಡಾ|| ಸಿದ್ಧಯ್ಯ ಪುರಾಣಿಕ
- ಭಾಲ್ಕಿಯ ಪಟ್ಟದ್ದೇವರು
ಅನುವಾದಗಳು
[ಬದಲಾಯಿಸಿ]- ಸಜ್ಜನರಿಗೇಕೆ ಕಷ್ಟಗಳು ಬರುತ್ತವೆ?
- ಸ್ವಾಮಿ ನಿಗಮಾನಂದ
- ನೂರೊಂದು, ಕತೆಗಳು
- ದಾದಾ ಉತ್ತರಿಸುತ್ತಾರೆ
- ಕೋಪ ನಮ್ಮನ್ನು ಉರಿಸುವ ಮೊದಲು ಅದನ್ನು ಉರಿಸಿ ಬಿಡಬೇಕು
- ಯೋಗಿ ಗುರು
- ಸಾವಿನ ಮುಂದಿನ ಕತೆಗಳು
- ಪ್ರಕಟಿಸುವ ಸ್ಥೈರ್ಯ
ಸಂಪಾದನೆ
[ಬದಲಾಯಿಸಿ]- ಶತಾಬ್ದಿ ದೀಪ
- ಸಾಲು ದೀಪಗಳು
- ಅಣ್ಣನ ನೂರೊಂದು ವಚನಗಳು
- ಸಿದ್ಧಲಿಂಗೇಶ್ವರರ ೫೦ ವಚನಗಳು
- ಶರಣೆ ರಾಯಮ್ಮ
- ಗಣೇಶ ಮಸಣಯ್ಯ
- ಮುದನೂರು
- ಜಂಗಮ ಜ್ಯೋತಿ
- ಬಸವ ಸಂದೇಶ
- ಬಂದ ಸಂತಂಮಣ್ಣ
- ಜನ್ನ
- ಶರಣ ಆದಯ್ಯ
- ಅಂಬಿಗರ ಚೌಡಯ್ಯ
- ಮುರುಗೋಡು
- ಶರಣ ಬಸವೇಶ್ವರರು
- ನುಲಿಯ ಚಂದಯ್ಯ
- ಭಕ್ತಿ ಪರಂಪರೆ-ಸಮಾಜೋ ಧಾರ್ಮಿಕ ಕಾಳಜಿಗಳು
ಇತರೆ
[ಬದಲಾಯಿಸಿ]- ಪ್ರಾಗ್ಜೀವಶಾಸ್ತ್ರ
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಪ್ರಶಸ್ತಿಗಳು
[ಬದಲಾಯಿಸಿ]- ೧೯೯೬ ರಲ್ಲಿ ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ
- ೧೯೯೭ ರಲ್ಲಿ ಕಾವ್ಯಾನಂದ ಪ್ರಶಸ್ತಿ
- ೧೯೯೮ ರಲ್ಲಿ, ಮುರುಘಶ್ರೀ ಪ್ರಶಸ್ತಿ
- ೧೯೯೯ ರಲ್ಲಿ ಶಿವರಾತ್ರೀಶ್ವರ ಪ್ರಶಸ್ತಿ
- ೨೦೦೦ದಲ್ಲಿ, ರಾಜ್ಯೋತ್ಸವ ಪ್ರಶಸ್ತಿ
- ೨೦೦೩ ರಲ್ಲಿ ಸಾರಸ್ವತ ಪ್ರಶಸ್ತಿ
- ೨೦೦೪ ರಲ್ಲಿ ಬಾಪು ಪ್ರಶಸ್ತಿ
- ೨೦೦೬ ರಲ್ಲಿ ಮೂಜಗಂ ಪ್ರಶಸ್ತಿ
- ೨೦೦೭ ರಲ್ಲಿ ರಾಜ್ಯರತ್ನ
- ೨೦೦೮ ರಲ್ಲಿ ರಮಣಶ್ರೀ-ಶರಣ ಪ್ರಶಸ್ತಿ
- ೨೦೧೦ ರಲ್ಲಿ ವಚನ ಸಾಹಿತ್ಯಶ್ರೀ ಪ್ರಶಸ್ತಿ,
- ೨೦೧೦ ರಲ್ಲಿ ಕೆಂಪೇಗೌಡ ಪ್ರಶಸ್ತಿ
- ೨೦೧೧ ರಲ್ಲಿ ಬಸವಶ್ರೀ ಪ್ರಶಸ್ತಿ
- ೨೦೧೨ ರಲ್ಲಿ ಮಾಸ್ತಿ ಪ್ರಶಸ್ತಿ
ಅಧ್ಯಕ್ಷತೆ
[ಬದಲಾಯಿಸಿ]- ೧೯೭೧ರ ಮೈಸೂರು ದಸರಾ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
- ೧೯೯೩ರ ಕೊಪ್ಪಳ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
- ೧೯೯೯ ಮತ್ತು ೨೦೦೭ರ ಹಂಪಿ ಕವಿಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ್ದರು.
- ೨೦೧೪ರ ಬೆಳದಿಂಗಳ ಕವಿಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ್ದರು.
- ೧೯೯೬ರಲ್ಲಿ ತುಮಕೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಭಿನಂದನಾ ಗ್ರಂಥ
[ಬದಲಾಯಿಸಿ]- ನಿಸ್ಸೀಮ (2017)