ಗಿನಿ
Wikipedia ಇಂದ
| ಧ್ಯೇಯ: "ಉದ್ಯೋಗ, ನ್ಯಾಯ ಮತ್ತು ಐಕ್ಯಮತ" | |
| ರಾಷ್ಟ್ರಗೀತೆ: "ಸ್ವಾತಂತ್ರ್ಯ" | |
| ರಾಜಧಾನಿ | ಕೊನಾಕ್ರಿ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಗಣರಾಜ್ಯ |
| - ರಾಷ್ಟಾಧ್ಯಕ್ಷ | ಲನ್ಸಾನಾ ಕಾಂಟೆ |
| - ಪ್ರಧಾನಿ | ಲನ್ಸಾನಾ ಕೌಯಟೆ |
| ಸ್ವಾತಂತ್ರ್ಯ | |
| - ಫ್ರಾನ್ಸ್ ನಿಂದ | ಅಕ್ಟೋಬರ್ 2 1958 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 245,857 ಚದುರ ಕಿಮಿ ; (78ನೆಯದು) |
| 94,926 ಚದುರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - ಜುಲೈ 2005ರ ಅಂದಾಜು | 9,402,000 (83ನೆಯದು) |
| - 1996ರ ಜನಗಣತಿ | 7,156,406 |
| - ಸಾಂದ್ರತೆ | 38 /ಚದುರ ಕಿಮಿ ; (164ನೆಯದು) 98 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $18.879 ಬಿಲಿಯನ್ (111ನೆಯದು) |
| - ತಲಾ | $2,035 (142ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಗಿನಿಯ ಫ್ರಾಂಕ್ (GNF) |
| ಕಾಲಮಾನ | GMT (UTC) |
| ಅಂತರ್ಜಾಲ TLD | .gn |
| ದೂರವಾಣಿ ಕೋಡ್ | +224 |
ಗಿನಿ (ಅಧಿಕೃತವಾಗಿ ಗಿನಿ ಗಣರಾಜ್ಯ) ಪಶ್ಚಿಮ ಆಫ್ರಿಕಾದ ಒಂದು ರಾಷ್ಟ್ರ. ಈ ದೇಶವು ಹಿಂದೆ ಫ್ರಾನ್ಸ್‌ನ ವಸಾಹತಾಗಿದ್ದ ಕಾಲದಲ್ಲಿ ಫ್ರೆಂಚ್ ಗಿನಿ ಎಂಬುದಾಗಿ ಕರೆಯಲ್ಪಡುತ್ತಿತ್ತು. ಬಾಗಿದ ಕೊಂಬಿನ ಆಕಾರದಲ್ಲಿರುವ ಗಿನಿಯ ಉತ್ತರದಲ್ಲಿ ಗಿನಿ-ಬಿಸೌ ಮತ್ತು ಸೆನೆಗಾಲ್; ಉತ್ತರ ಮತ್ತು ಈಶಾನ್ಯದಲ್ಲಿ ಮಾಲಿ; ಆಗ್ನೇಯದಲ್ಲಿ ಕೋತ್ ದ ಐವರಿ; ದಕ್ಷಿಣದಲ್ಲಿ ಲೈಬೀರಿಯ; ನೈಋತ್ಯದ ಅಂಚಿನಲ್ಲಿ ಸಿಯೆರ್ರ ಲಿಯೋನ್ ದೇಶಗಳಿವೆ. ನಾಡಿನ ಬಹುಭಾಗ ಭೂಮಿಗೆ ನೈಜರ್, ಸೆನೆಗಾಲ್ ಮತ್ತು ಗ್ಯಾಂಬಿಯ ನದಿಗಳು ನೀರುಣಿಸುತ್ತವೆ.

