ಕ್ಷ-ಕಿರಣ
Wikipedia ಇಂದ
ಕ್ಷ-ಕಿರಣ ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ೦.೦೧ ರಿಂದ ೧೦ ನ್ಯಾನೋಮೀಟರ್ ವರೆಗಿನ ತರಂಗಾಂತರವನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣಕ್ಕೆ ಕ್ಷ-ಕಿರಣಗಳೆಂದು ಕರೆಯಲಾಗುತ್ತದೆ. ಈ ಕಿರಣಗಳ ತರಂಗಾಂತರ ಗಾಮಾ ಕಿರಣಗಳಿಗಿಂತ ಹೆಚ್ಚು ಮತ್ತು ಅತಿನೇರಳೆ ಕಿರಣಗಳಿಗಿಂತ ಕಡಿಮೆ. ಕ್ಷ-ಕಿರಣಗಳನ್ನು ಕಂಡುಹಿಡಿದವರು ವಿಲಿಯಮ್ ರಾಂಟ್‍ಜೆನ್.
ಕ್ಷ-ಕಿರಣಗಳನ್ನು ಮೂಳೆಗಳ ಪರೀಕ್ಷೆಗಾಗಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಹರಳುಗಳ ರಚನೆಯ ಅಧ್ಯಯನ ಮೊದಲಾದ ವೈಜ್ಞಾನಿಕ ಸಂಶೋಧನೆಗಳಲ್ಲೂ ಕ್ಷ-ಕಿರಣಗಳ ಉಪಯೋಗ ನಡೆಯುತ್ತದೆ.