ಕ್ಯಾಂಡಲಿಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಂಡಲಿಮ್ ಉತ್ತರ ಗೋವಾದಲ್ಲಿರುವ ಒಂದು ಗಣತಿ ಪಟ್ಟಣವಾಗಿದ್ದು ಗೋವಾ ರಾಜ್ಯದ ಬಾರ್ಡೇಜ಼್ ತಾಲ್ಲೂಕಿನಲ್ಲಿ ಸ್ಥಿತವಾಗಿದೆ. ಇದು ಕಲಂಗೂಟ್ ಬೀ‍ಚ್‍ನ ಸ್ವಲ್ಪ ದಕ್ಷಿಣಕ್ಕೆ ಸ್ಥಿತವಾಗಿದ್ದು ಪ್ರವಾಸಿ ಸ್ಥಳವಾಗಿದೆ. ಇದು ಗೋವಾದ ಇತರ ಬೀಚ್‍ಗಳಿಗಿಂತ ಕಡಿಮೆ ಕಿಕ್ಕಿರಿದಿದ್ದು ಹೆಚ್ಚು ಉತ್ತಮವಾಗಿ ಯೋಜಿತಗೊಂಡಿದೆ.

ಕ್ಯಾಂಡಲಿಮ್ ಬೀಚ್[ಬದಲಾಯಿಸಿ]

ಕ್ಯಾಂಡಲಿಮ್ ಬೀ‍ಚ್‍ನಲ್ಲಿ ಒಂದು ಸಾಮಾನ್ಯ ದಿನ

ಕ್ಯಾಂಡಲಿಮ್ ಗೋವಾದ ರಾಜಧಾನಿ ಪಣಜಿಯಿಂದ ೧೫ ಕಿ.ಮೀ ದೂರದಲ್ಲಿದೆ. ಅಗುವಾಡಾ ಕೋಟೆಯಿಂದ ಆರಂಭವಾಗಿ ಅಂತ್ಯದಲ್ಲಿ ಕಲಂಗೂಟ್ ಬೀ‍ಚ್‍ನೊಂದಿಗೆ ವಿಲೀನಗೊಳ್ಳುವ ಇದು ರಾಜ್ಯದಲ್ಲಿನ ಅತ್ಯಂತ ಉದ್ದದ ಬೀಚ್‍ಗಳಲ್ಲಿ ಒಂದಾಗಿದೆ. ಬೀಚ್ ಸ್ವತಃ ಬಹಳ ಶಾಂತವಾಗಿದೆ. ಕೆಲವೊಮ್ಮೆ ವಿರಾಮ ಪಡೆಯಲು ಪುಣೆಯ ರಜನೀಶ್ ಆಶ್ರಮದಿಂದ ಪ್ರವಾಸಿಗಳು ಇಲ್ಲಿ ಬರುತ್ತಾರೆ.

A panoramic view of sunset at Candolim Beach in 2018.
A panoramic view of sunset at Candolim Beach in 2018.

ಮುಖ್ಯ ಕ್ಯಾಂಡಲಿಮ್-ಕಲಂಗೂಟ್ ರಸ್ತೆಯು ಅಂಗಡಿಗಳು ಮತ್ತು ಹೊಟೇಲುಗಳಿಂದ ತುಂಬಿದೆ. ಆದರೆ ಬೀಚ್ ಎದುರಿನ ಪ್ರದೇಶವು ಕೆಲವು ಜಲ ಚಟುವಟಿಕೆಗಳ ಹೊರತಾಗಿ ಯಾವುದೇ ವಾಣಿಜ್ಯ ಚಟುವಟಿಕೆಯಿಂದ ಮುಕ್ತವಾಗಿದೆ. ಬೀಚ್ ಸುತ್ತಲಿನ ಪ್ರದೇಶವನ್ನು ರೆಸಾರ್ಟ್ ಮುಕ್ತವೆಂದು ಕರೆಯಬಹುದು ಏಕೆಂದರೆ ಇಲ್ಲಿ ಯಾವುದೇ ರೆಸಾರ್ಟ್‌ಗಳಿಲ್ಲ. ಆದರೆ, ಬೀಚ್‍ನಲ್ಲಿ ಸಾಕಷ್ಟು ಸಂಖ್ಯೆಯ ತಂಗುದಾಣಗಳಿವೆ.

ಉಲ್ಲೇಖಗಳು[ಬದಲಾಯಿಸಿ]

 

  • da Cunha Rivara, Joaquim Heliodoró; Borges, Charles; da Cunha Soares, Renato (1996). da Cunha Rivara, Joaquim Heliodoró; Borges, Charles; da Cunha Soares, Renato (eds.). Goa and the revolt of 1787. Concept Publishing Company. ISBN 978-81-7835-363-0. Retrieved 2011-04-05. {{cite book}}: Invalid |ref=harv (help)
  • de Mendonça, Délio (2002). Conversions and citizenry: Goa under Portugal 1510–1610. Concept Publishing Company. ISBN 978-81-7022-960-5. Retrieved 2011-04-05. {{cite book}}: Invalid |ref=harv (help)
  • de Souza, Teotonio R. (1989). Essays in Goan history. Concept Publishing Company. ISBN 978-81-7022-263-7. Retrieved 2011-11-05. {{cite book}}: Invalid |ref=harv (help)
  • Prabhu, Alan Machado (1999). Sarasvati's Children: A History of the Mangalorean Christians. I.J.A. Publications. ISBN 978-81-86778-25-8. {{cite book}}: Invalid |ref=harv (help).

ಹೊರಗಿನ ಕೊಂಡಿಗಳು[ಬದಲಾಯಿಸಿ]