ಕೆ. ಸಿ. ಕಾರಿಯಪ್ಪ (ಕ್ರಿಕೆಟಿಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಂಗಂಡ ಚರಮಣ್ಣ ಕಾರಿಯಪ್ಪ (ಜನನ 13 ಏಪ್ರಿಲ್ 1994), ಕೆಸಿ ಕಾರಿಯಪ್ಪ ಎಂಬ ಜನಪ್ರಿಯ ಹೆಸರಿನಿಂದ ಕರೆಯಲಾಗುತ್ತದೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗಾಗಿ ಆಡುವ ಭಾರತೀಯ ವೃತ್ತಿಪರ ಕ್ರಿಕೆಟಿಗರಾಗಿದ್ದಾರೆ . ಇವರಿಗೆ ಗೌತಮ್ ಗಂಭೀರ್ ಆದರ್ಶ ಆಗಿದ್ದಾರೆ.

ಆಟದ ಶೈಲಿ[ಬದಲಾಯಿಸಿ]

ಕೆಸಿ ಕಾರಿಯಪ್ಪ ಅವರು ಲೆಗ್ ಸ್ಪಿನ್ ಬೌಲಿಂಗ್ ಮಾಡುವ ವಿಶಿಷ್ಟ ಸ್ಪಿನ್ನರ್ ಆಗಿದ್ದು, ಅವರ ಸ್ಟಾಕ್ ಎಸೆತವು ಲೆಗ್ ಬ್ರೇಕ್ ಆಗಿರುತ್ತದೆ. ಅವರು ಗೂಗ್ಲಿ, ಶೀಘ್ರ ಎಸೆತ ಬಾಲ್, ಕೇರಂ ಬಾಲ್ ಮತ್ತು ಹಿಡಿತವನ್ನು ಬದಲಾಯಿಸದೆ ಬೌಲ್ ಮಾಡುವ ಆಫ್ ಬ್ರೇಕ್‌ನಂತಹ ಮಾರ್ಪಾಡುಗಳನ್ನು ಹೊಂದಿದ್ದಾರೆ. [೧]

ವೃತ್ತಿ[ಬದಲಾಯಿಸಿ]

ಕಾರಿಯಪ್ಪ ಅವರು ೧೭ ನೇ ವಯಸ್ಸಿನಲ್ಲಿ ವೇಗದ ಬೌಲಿಂಗ್ ಆಲ್-ರೌಂಡರ್ ಆಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು, ಆದರೆ ನಂತರ ಸ್ಪಿನ್ ಬೌಲಿಂಗ್ಗೆ ಬದಲಾದರು. [೨]

೨೦೧೪ ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ೧೯-ರ ವಯಸ್ಸಿನ ತಂಡದಲ್ಲಿ ಮತ್ತು ಬಿಜಾಪುರ ಬುಲ್ಸ್ ಪರ ಕಾರಿಯಪ್ಪ ಅವರು ಆಡಿದ್ದರು. ಅವರು ಕೆಪಿಎಲ್ ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇವರು ಐಪಿಎಲ್ ಆಟದ ಸಮಯದಲ್ಲಿ ಎದುರಾಳಿಗಳಿಗೆ ಒತ್ತಡ ಹೇರುವ ಮೂಲಕ ಗಮನವನ್ನು ಸೆಳೆದಿದ್ದಾರೆ. ರಣಜಿ ಟ್ರೋಫಿಗಾಗಿ ಕರ್ನಾಟಕದ ೩೦ ಮಂದಿಯ ಸಂಭಾವ್ಯ ತಂಡದಲ್ಲಿ ಅವರನ್ನು ಸೇರ್ಪಡೆ ಮಾಡಲಾಗಿತ್ತು. ಆದರೆ ಇವರನ್ನು ಅಂತಿಮ ತಂಡದಲ್ಲಿ ಆಯ್ಕೆ ಮಾಡಲಿಲ್ಲ. ಆದರೂ ಸಹ ಸೆಪ್ಟೆಂಬರ್ ೨೦೧೪ ರಲ್ಲಿ, ೨೦೧೪ ರ ಚಾಂಪಿಯನ್ಸ್ ಲೀಗ್ ಟ್ವೆಂಟಿ-೨೦ ಪ್ರಾರಂಭವಾಗುವ ಮೊದಲು ಹೈದರಾಬಾದ್‌ನಲ್ಲಿ ತರಬೇತಿ ಶಿಬಿರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಾಗಿ ತರಬೇತಿಗಾಗಿ ಬೌಲಿಂಗ್ ಮಾಡಲು ಅವರನ್ನು ಕೇಳಲಾಯಿತು. ಕೆಕೆಆರ್ ನ ನಾಯಕ ಗೌತಮ್ ಗಂಭೀರ್ ಅಭ್ಯಾಸದ ಸಮಯದಲ್ಲಿ ಅವರ ಬೌಲಿಂಗ್ ಅನ್ನು ಗಮನಿಸಲು ವಿಫಲರಾದರು ಮತ್ತು ತಂಡದ ಆಡಳಿತವು ೨೦೧೫ ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿಕೊಳ್ಳಲು ಕಾರಿಯಪ್ಪ ಅವರನ್ನು ಕೇಳಿಕೊಂಡಿತ್ತು.

ಫೆಬ್ರವರಿ ೨೦೧೫ ರಲ್ಲಿ, ಕಾರಿಯಪ್ಪ ಅವರನ್ನು ಐಪಿಎಲ್ ಹರಾಜಿನಲ್ಲಿ ₹ ೨೪ ಲಕ್ಷ ರೂ.ಗಳಿಗೆ ಕೆಕೆಆರ್ ಗೆ ಖರೀದಿಸಲಾಯಿತು. ಕಾರಿಯಪ್ಪ ಅವರು ನೈಟ್ ರೈಡರ್ಸ್‌ಗೆ ಸಹಿ ಹಾಕುವ ಮೊದಲು ಯಾವುದೇ ರೀತಿಯ ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಆಡಿರಲಿಲ್ಲವಾದ್ದರಿಂದ ಇದು ಅವರ ಅಸಾಮಾನ್ಯವಾಗಿ ದೊಡ್ಡ ಮೊತ್ತವಾಗಿತ್ತು. ಹರಾಜಿನ ನಂತರ ಪ್ರತಿಕ್ರಿಯಿಸಿದ ಕೋಲ್ಕತ್ತಾ ನೈಟ್ ರೈಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೆಂಕಿ ಮೈಸೂರು, ಅದ್ಭತ ಆಟಗಾರ ಕಾಲಿಸ್ ಸೇರಿದಂತೆ ನಮ್ಮಲ್ಲಿರುವ ಕೆಲವು ಪ್ರಮುಖ ಆಟಗಾರರು ಅವರನ್ನು (ಕಾರಿಯಪ್ಪ) ಅತ್ಯಂತ ಅಸಾಮಾನ್ಯ ಮತ್ತು ಅತ್ಯಂತ ಉತ್ತಮ ಆಟಗಾರ ಎಂದು ಕಂಡುಕೊಂಡಿದ್ದೇವೆ ಮತ್ತು ನಾವು ಅವರಿಗೆ ಆಟ ಆಡಲು ನಿರ್ಧರಿಸಿದ್ದೇವೆ ಎಂದರು. ಅವರು ೧೧ ಏಪ್ರಿಲ್ 2೨೦೧೫ ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನೈಟ್ ರೈಡರ್ಸ್‌ಗಾಗಿ ಹಿರಿಯರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಾಡಿದ್ದು ಮತ್ತು ಎಬಿ ಡಿವಿಲಿಯರ್ಸ್ ಅವರ ವಿಕೆಟ್ ಪಡೆದರು. ಆ ಸಮಯದಲ್ಲಿ ಅವರು ಆಡಿದ್ದು ಇದೊಂದೇ ಬಾರಿ. ಮುಂದಿನ ಋತುವಿನಲ್ಲಿ ಅವರನ್ನು ಅವರ ತಂಡದಿಂದ ಬಿಡುಗಡೆ ಮಾಡಲಾಯಿತು. ಮುಂದಿನ ಹರಾಜಿನಲ್ಲಿ, ಅವರನ್ನು ಕಿಂಗ್ಸ್-XI ಪಂಜಾಬ್ ₹ ೮ ಮಿಲಿಯನ್ ಬೆಲೆಗೆ ತೆಗೆದುಕೊಂಡಿತು. [೩]

೨೦೧೯ ರಲ್ಲಿ, ಅವರು ಶಿವಂ ಮಾವಿ ಗಾಯಗೊಂಡಾಗ ಬದಲಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮರಳಿದರು. ೨೦೨೦ ರ ಐಪಿಎಲ್ ಹರಾಜಿನ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ಇವರನ್ನು ಬಿಡುಗಡೆ ಮಾಡಿತು. [೪] ಫೆಬ್ರವರಿ ೨೦೨೧ ರಲ್ಲಿ, ೨೦೨೧ ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುಂಚಿತವಾಗಿ ಐಪಿಎಲ್ ಹರಾಜಿನಲ್ಲಿ ಕಾರಿಯಪ್ಪ ಅವರನ್ನು ರಾಜಸ್ಥಾನ ರಾಯಲ್ಸ್ ಖರೀದಿಸಿತು. [೫]

ಅವರು ೨೦೨೧-೨೨ ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕಾಗಿ ೮ ಡಿಸೆಂಬರ್ ೨೦೨೧ ರಂದು ಎ-ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. [೬]

ಉಲ್ಲೇಖಗಳು[ಬದಲಾಯಿಸಿ]

  1. "KC Cariappa: KKR's new unknown spinner". ESPNcricinfo. Retrieved 11 April 2015.
  2. "From tennis ball cricket to IPL riches: Story of KC Cariappa". Deccan Herald. Retrieved 11 April 2015.
  3. "List of players sold and unsold at IPL auction 2016". ESPN Cricinfo. 6 February 2016.
  4. "Where do the eight franchises stand before the 2020 auction?". ESPN Cricinfo. Retrieved 15 November 2019.
  5. "IPL 2021 auction: The list of sold and unsold players". ESPN Cricinfo. Retrieved 18 February 2021.
  6. "Elite, Group B, Mangalapuram, Dec 8 2021, Vijay Hazare Trophy". ESPN Cricinfo. Retrieved 8 December 2021.