ಎಬಿ ಡೀ ವಿಲಿಯರ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಬಿ ಡೀ ವಿಲಿಯರ್ಸ್

ಅಬ್ರಹಮ್ ಬೆಂಜಮಿನ್ ಡಿ ವಿಲಿಯರ್ಸ್ (ಜನನ: ಫೆಬ್ರವರಿ ೧೭, ೧೯೮೪ ಪ್ರೆಟೋರಿಯಾ, ದಕ್ಷಿಣ ಆಫ್ರಿಕಾದಲ್ಲಿ) ದಕ್ಷಿಣ ಆಫ್ರಿಕಾದ ಆಟಗಾರ. ಎಬಿ ಡೀ ವಿಲಿಯರ್ಸ್ ಏಕದಿನ ಹಾಗೂ ಟ್ವೆಂಟಿ೨೦ ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಈತ ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಈತ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಈತ ವಿಶ್ವದ ಅತ್ತ್ಯುತ್ತಮ ಕ್ಷೇತ್ರ ರಕ್ಷಕರಲ್ಲಿ ಒಬ್ಬ. ಎಬಿ ಡೀ ವಿಲಿಯರ್ಸ್ ಐಸಿಸಿ ರಾಂಕಿಂಗ್‍ನ ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಏಕದಿನ ಪಂದ್ಯದ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.